Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಚರಿಸಲಿರುವ ಡಾ. ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಮತ್ತು ಇಂಜಿನಿಯರ್ಸ್ ಡೇ ಪ್ರಯುಕ್ತ 29-08-2026ರಂದು ಮಧ್ಯಾಹ್ನ 12.15ಕ್ಕೆ ಸಂಘದ ಸಭಾಂಗಣದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
ನಗರದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಾ. ಸರ್ ಎಂ.ವಿಶ್ವೇಶ್ವರಯ್ಯ ಕುರಿತು ಕ್ವಿಜ್/ರಸಪ್ರಶ್ನೆ ಏರ್ಪಡಿಸಿದ್ದು, ಆಸಕ್ತ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ದೃಢೀಕರಣ ಪತ್ರದ ಮೂಲಕ ಭಾಗವಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 6,000 ರೂ. ದ್ವಿತೀಯ ಬಹುಮಾನ 4,000 ರೂ. ಹಾಗೂ ತೃತೀಯ ಬಹುಮಾನ 2,000 ರೂ. ನೀಡಲಾಗುತ್ತದೆ.
Shivamogga District Chamber of Commerce and Industry ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದು, ಒಂದು ಶಾಲೆಯಿಂದ ಎರಡು ತಂಡಗಳನ್ನು ಕಳುಹಿಸಿಕೊಡಬಹುದು. ಕ್ವಿಜ್ ಸ್ಪರ್ಧೆಯು ಎರಡು ಹಂತದಲ್ಲಿ ನಡೆಯುತ್ತದೆ. ಮೊದಲ ಹಂತ ಲಿಖಿತ ಸ್ಪರ್ಧೆ ಆಗಿರುತ್ತದೆ. ಎರಡನೇ ಹಂತ ಮೌಖಿಕ ಆಗಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನದ ಜತೆ ಆಕರ್ಷಕ ಪಾರಿತೋಷಕ ನೀಡಲಾಗುವುದು. ಮಾಹಿತಿಗೆ 7019663300, 9632351163, 9353966546 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದ್ದಾರೆ.
