D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣದ ಅಮೃತ ದೊರಕಬೇಕು ಎಂಬುದೇ ನಮ್ಮ ಸರ್ಕಾರದ ಅಚಲ ಸಂಕಲ್ಪ ಎಂದು ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾವು ಕಟ್ಟುತ್ತಿರುವುದು ಕೇವಲ ಇಟ್ಟಿಗೆ-ಸಿಮೆಂಟ್ನ ಗೋಡೆಗಳನ್ನಲ್ಲ, ನಾಳಿನ ದೃಢ ಕರ್ನಾಟಕದ ಬುನಾದಿಯನ್ನು! ಇದೇ ನಿಟ್ಟಿನಲ್ಲಿ, ಬರೋಬ್ಬರಿ ₹2,500 ಕೋಟಿ ವೆಚ್ಚದಲ್ಲಿ 500 ಕೆಪಿಎಸ್ ಶಾಲೆಗಳನ್ನು ಸಮಗ್ರವಾಗಿ ಉನ್ನತೀಕರಿಸುವ ‘ಶಿಕ್ಷಣ ಕ್ರಾಂತಿ 2030’ ಯೋಜನೆಗೆ ಹೆಜ್ಜೆ ಇಟ್ಟಿದ್ದೇವೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಏಷಿಯನ್ ಡೆವಲೆಪ್ಮೆಂಟ್
ಬ್ಯಾಂಕ್ ನ ಆರ್ಥಿಕ ನೆರವು ಪಡೆದ ಉನ್ನತ ಸಭೆಯಲ್ಲಿ ಭಾಗವಹಿಸಿದ ನಂತರ ಈ ವಿಷಯ ತಿಳಿಸಿದರು.
D.K. Shivakumar ಎಲ್ಕೆಜಿಯ ಅಕ್ಷರಾಭ್ಯಾಸದಿಂದ 12ನೇ ತರಗತಿಯವರೆಗೆ, ಆಧುನಿಕ AI ತಂತ್ರಜ್ಞಾನದಿಂದ ಹಿಡಿದು ಬದುಕನ್ನು ಬೆಳಗುವ ಕೌಶಲ್ಯಾಭಿವೃದ್ಧಿಯವರೆಗೆ, ಎಲ್ಲವೂ ಒಂದೇ ಸೂರಿನಡಿ, ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದೆ.
ಇದು ಕೇವಲ ಶಾಲೆಗಳ ಅಭಿವೃದ್ಧಿಯಲ್ಲ, ಮುಂದಿನ 50 ವರ್ಷಗಳ ಕಾಲ ಕನ್ನಡಿಗರನ್ನು ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತೆ ಮಾಡುವ ದಿವ್ಯ ಯಜ್ಞ.
ಜ್ಞಾನದ ಹಾದಿಯಲ್ಲಿ ಒಟ್ಟಾಗಿ ಸಾಗೋಣ,
ಭವ್ಯ ಭವಿಷ್ಯದತ್ತ ಹೆಜ್ಜೆ ಹಾಕುತ್ತಾ, ಬಲಿಷ್ಠ ಕರ್ನಾಟಕವನ್ನು ಕಟ್ಟೋಣ! ಎಂದು ಡಿ.ಕೆ.ಶಿವಕುಮಾರ್ ಕರೆಕೊಟ್ಟಿದ್ದಾರೆ.
