Thursday, August 6, 2026
Thursday, August 6, 2026
Home Blog Page 89

B.Y. Raghavendra ಶಾಸಕ ಗುರುರಾಜ್ ಗಂಟಿಹೊಳಿ ಜೊತೆಗೆ ಬೈಂದೂರು ಮೀನುಗಾರರ ಸಮಸ್ಯೆಗಳನ್ನ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಸಂಸದ ಬಿ.ವೈ.ರಾಘವೇಂದ್ರ.

0

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೋಳೆ ಅವರೊಂದಿಗೆ ಮೀನುಗಾರರ ಸಮುದಾಯದ ಪ್ರತಿನಿಧಿಗಳನ್ನು ಭೇಟಿ ಮಾಡಿ, ಮೀನುಗಾರರ ಜೀವನೋಪಾಯಕ್ಕೆ ಅತ್ಯಂತ ಪ್ರಮುಖವಾದ ಸಬ್ಸಿಡಿ ಸೀಮೆಎಣ್ಣೆ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಈ ಹಿಂದೆಲೂ ಮೀನುಗಾರರ ಹಿತದೃಷ್ಟಿಯಿಂದ ಸೀಮೆಎಣ್ಣೆ ಪೂರೈಕೆಯ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ಕೇಂದ್ರ ಸರ್ಕಾರವು ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಸೀಮೆಎಣ್ಣೆ ಬಿಡುಗಡೆಗೆ ಕ್ರಮ ಕೈಗೊಂಡಿತ್ತು. ಕರಾವಳಿ ಭಾಗದ ಸಾವಿರಾರು ಮೀನುಗಾರ ಕುಟುಂಬಗಳ ಜೀವನೋಪಾಯಕ್ಕೆ ಸೀಮೆಎಣ್ಣೆ ಅತ್ಯಗತ್ಯವಾಗಿರುವುದರಿಂದ, ಅವರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು.

B.Y. Raghavendra ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಜೀವನೋಪಾಯ ಬಲಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ನಿರಂತರವಾಗಿ ಶ್ರಮಿಸಲಾಗುವುದು.

Araga jyanendra ಉಪಲೋಕಾಯುಕ್ತರ ಅನಿಸಿಕೆ ಸರಿ. ರಾಜ್ಯದಲ್ಲಿ ಭ್ರಷ್ಠಾಚಾರದ ತಾಂಡವ- ಆರಗ ಜ್ಞಾನೇಂದ್ರ

0

Araga jyanendra ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಉಪ ಲೋಕಾಯುಕ್ತ ಬಿ ಬೀರಪ್ಪ ಹೇಳಿಕೆ
ನೀಡಿರುವ ವಿಚಾರ ಸರಿಯಾಗಿದೆ ಎಂದು
ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಏಕೆಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವ ಮಾಡುತ್ತಿದೆ
ಹಾಗಾಗಿಯೇ ಉಪಲೋಕಾಯುಕ್ತರು ಸ್ವತಃ ರಿವಾಲ್ವರ್ ಇಟ್ಟುಕೊಂಡು ಓಡಾಡುತ್ತಿದ್ದೇನೆ ಎಂದು ಶಾಸಕ ಆರಗ ಜ್ಞಾನೇಂದ್ರ
ಪ್ರತಿಕ್ರಿಯಿಸಿದ್ದಾರೆ

ಬೇಸೂರು ಅಣು ಸ್ಥಾವರ ಆತಂಕ ಬೇಡ.ಅಂತಹ ಸ್ಥಿತಿ ಬಂದರೆ ರಾಜೀನಾಮೆ ಕೊಟ್ಟು ಹೊರಬರುತ್ತೇನೆ- ಬೇಳೂರು ಗೋಪಾಲಕೃಷ್ಣ

0

ಬೇಸೂರು ಅಣು ವಿದ್ಯುತ್ ಸ್ಥಾವರ ಹೋರಾಟ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ‌ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು.

ನಮ್ಮ ಭಾಗದಲ್ಲಿ ರೈತರು 2-3 ಸರಿ ಹೋರಾಟ ಮಾಡಿದ್ದಾರೆ.
ಯಾರು ಗಾಬರಿಯಾಗುವ ಪ್ರಶ್ನೆ ಇಲ್ಲ.

ಯೋಜನೆ ಸಂಬಂಧ ಯಾವುದೇ ಆದೇಶ ಆಗಿಲ್ಲ.
5 ಜಿಲ್ಲೆಯಂತೆ ನಮ್ಮ ಜಿಲ್ಲೆಯಲ್ಲಿ ಮಾಹಿತಿ ಕೇಳಿದ್ದಾರೆ
ವಿಮಾನ ಸರ್ವೆ ಮಾಡಿದ್ದು, ಖನಿಜಗಳ ಶೋಧಕ್ಕಾಗಿ.. ಇದಕ್ಕೆ ಹೆದರುವ ಅಗತ್ಯವಿಲ್ಲ.
ನಾನು, ಸಚಿವರು ಎಲ್ಲರೂ ಇದ್ದೇವೆ. ಭಯ ಪಡುವ ಅಗತ್ಯವಿಲ್ಲ.
ಅಣು ಸ್ಥಾವರ ಅನ್ನೋ ಕಾರಣಕ್ಕೆ ಭಯ ಪಡ್ತಿದ್ದಾರೆ
ಯಾರು ಹೆದರುವ ಅವಶ್ಯಕತೆ ಇಲ್ಲ. ಯೋಜನೆ ಮಾಡಲು ಬಿಡಲ್ಲ.
ಅಂತಹ ಸ್ಥಿತಿ ಬಂದ್ರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬರ್ತೆನೆ.
ರಾಜೀನಾಮೆ ಕೊಟ್ಟು ಹೋರಾಟ ಮಾಡ್ತೇನೆ ಎಂದ ಬೇಳೂರು.

ಹಸಿರಮಕ್ಕಿ ಸೇತುವೆ ಆದಷ್ಟು ಬೇಗ ಆಗುತ್ತೇ..
ಅದರ ಬಗ್ಗೆ ಮಾತನಾಡುವ ಯೋಗ್ಯತೆ ಹರತಾಳು ಹಾಲಪ್ಪನವರಿಗಿಲ್ಲ…
ಅವರು 5 ವರ್ಷ ಏನು ಮಾಡಿಲ್ಲ. ಸೇತುವೆಯನ್ನೂ ನೋಡಿಲ್ಲ.
ಆದಷ್ಟು ಬೇಗ ಸಿಎಂ ಕರೆಸಿ, ಉದ್ಘಾಟನೆ ಮಾಡ್ತೇವೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

Backward Classes Welfare Department ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿನ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 3ಎ, 3ಬಿ, ಪ.ಜಾ./ಪ.ವರ್ಗಕ್ಕೆ ಸೇರಿದ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿಯನ್ನು https://shp.karnataka.gov.in/bcwd ಮೂಲಕ ಜೂ . 15 ರೊಳಗಾಗಿ ಸಲ್ಲಿಸುವುದು.
ಅರ್ಜಿಯನ್ನು ಸಲ್ಲಿಸಲು ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ. ಸೇರಿದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ರೂ.2.50 ಲಕ್ಷಕ್ಕಿಂತ ಮೀರಿರಬಾರದು. ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ರೂ.1.00 ಲಕ್ಷ ಮೀರಬರದು.
Backward Classes Welfare Department ತಾಲೂಕುವಾರು ವಿದ್ಯಾರ್ಥಿನಿಲಯದ ವಿವರ ಹಾಗೂ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರಿ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ ವಿಳಾಸ https://bcwd.karnataka.gov.in ನ್ನು ಸಂಪರ್ಕಿಸುವುದು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ ಇ-ಮೇಲ್ bcwdhelpline@.karnataka.gmail.com ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.8050770004 ನ್ನು ಸಂಪರ್ಕಿಸುವುದು.

ಮೇ 24. ಶಿವಮೊಗ್ಗದ ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಮೇ 24 ರಂದು ಬೆಳಿಗ್ಗೆ 10.00 ರಿಂದ ಮದ್ಯಾಹ್ನ 2.00 ಘಂಟೆವರೆಗೆ ವಿದ್ಯುತ್ ಕಂಬ ತೆರುವುಗೊಳಿಸುವ ಕಾಮಗಾರಿ ಇರುವುದರಿಂದ ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ, ಸೀತಾರಾಮ ಕಲ್ಯಾಣ ಮಂದಿರ ಅಡ್ಡ ರಸ್ತೆ, ರಾಘವೇಂದ್ರ ಸ್ವಾಮಿ ಮಠ ರಸ್ತೆ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶನಿ ಮಹಾತ್ಮ ದೇವಸ್ಥಾನ ರಸ್ತೆ ಮತ್ತು ವಿದ್ಯುತ್ ಪರಿವೀಕ್ಷಕರ ಕಛೇರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Nidhi Apke Nikat ಮೇ 27 .ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಿಧಿ ಆಪ್ ಕೆ ನಿಕಟ್ 2.0 ಕಾರ್ಯಕ್ರಮ

0

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮೇ 27 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ತಾಲೂಕು ಹೊಸನಗರದ ಗಂಗನಕೊಪ್ಪ ಹೋಲಿ ರಿಡೀಮರ್ ಕಾಂಪೋಸಿಟ್ ಕಾಲೇಜ್ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಎಕೆಪಿ ಹೆಲ್ತ್ ಕೇರ್ ಪ್ರೈ, ಲಿ., ಹದಡಿ ರಸ್ತೆ, ತರಳಬಾಳು ಶಾಲೆ ಎದುರು, ದಾವಣಗೆರೆ ಇಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ. Nidhi Apke Nikat ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳು ಮತ್ತು ಪಿಂಚಣಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

Shivamogga Police ಅನಾಮಧೇಯ ಶವದ ವಾರಸುದಾರರ ಪತ್ತೆಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

Shivamogga Police ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ವರಾಂಡದ ಕಟ್ಟೆಯ ಮೇಲೆ ಮಲಗಿದ್ದಲ್ಲೆ ಮೃತಪಟ್ಟಿದ್ದ 50-55 ವರ್ಷ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ವ್ಯಕ್ತಿ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.
Shivamogga Police ಮೃತ ವ್ಯಕ್ತಿಯ ಚಹರೆ; 5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಲಗೈ ಒಳಭಾಗದಲ್ಲಿ ಮರೀನ ಎಂಬ ಹೆಸರು ಹಾಗೂ 3 ನಕ್ಷತ್ರದ ಹಚ್ಚೆ ಇರುತ್ತದೆ. ಮೈಮೇಲೆ ಗುಲಾಬಿ ಬಣ್ಣದ ಬಿಳಿ ಪಟ್ಟೆಗಳಿರುವ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಶವವು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/9480749464 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Madhu Bangarappa ಬೇಸೂರಿನಲ್ಲಿ ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ- ಮಧು ಬಂಗಾರಪ್ಪ

0

Madhu Bangarappa ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ‌ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರದಂದು ಜಿ.ಪಂ. ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡು ಡ್ಯಾಂ ಸೂಕ್ಷ್ಮ ಪ್ರದೇಶದಲ್ಲಿ ಮುಳುಗಡೆಯಾಗಿ ಎರಡು ಬಾರಿ ಜನರುವನಿರಾಶ್ರಿತರಾಗಿ ಈಗಾಗಲೇ ಬೇಸತ್ತಿದ್ದು ಇದೀಗ ಬೇಸೂರು ಅಣುಸ್ಥಾವರ ಪ್ರಸ್ತಾಪದ ಬಗ್ಗೆ ರೈತರು ಬಹಳ ಭಯದಲ್ಲಿದ್ದಾರೆ. ಬೇಸೂರು ಅಣು ಸ್ಥಾವರ ಮಾಡಲು ಸಚಿವರು, ಶಾಸಕರು ಬಿಡುವುದಿಲ್ಲ ಎಂದರು.
ಶಾಸಕರು ಮಾತನಾಡಿ, ಇಲ್ಲಿ ೯೦ ಲಕ್ಷ ಪ್ರಕರಣ ಬಾಕಿ ಇದ್ದು, ಶಿವಮೊಗ್ಗ ದಲ್ಲಿ ಪೀಠ ಸ್ಥಾಪನೆಯಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದ್ದು ಸರ್ವಾನುಮತದಿಂದ ಪೀಠ ಸ್ಥಾಪನೆಗೆ ಒತ್ತಾಯಿಸುತ್ತೇವೆಂದರು.
ಸಚಿವರು ಪ್ರತಿಕ್ರಿಯಿಸಿ ಇಂದು ಕೆಡಿಪಿ ಸಭೆಯಲ್ಕಿ‌ಎರಡು ಮುಖ್ಯ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಬೇಸೂರು ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ.
ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆಗಬೇಕೆಂದು ವಕೀಲರ ಸಂಘ ಸೇರಿದಂತೆ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹೋರಾಟ ಮಾಡುತ್ತಿದ್ದು ಪಕ್ಷಾತೀತವಾಗಿ ಈ‌ ನಿರ್ಣಯ ಕುರಿತಾದ ಸಹಿ ಹೊಂದಿದ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಹ ಸಲ್ಲಿಸಿ ಒತ್ತಡ ತರೋಣ ವೆಂದರು.
ಡಿಹೆಚ್ ಓ ಡಾ. ನಟರಾಜ್ ಮಾತನಾಡಿ, ೧೮ ಪಿಹೆಚ್ ಸಿ ಗಳಲ್ಲಿ ೧೮ ಹುದ್ದೆ ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ.
ಡಾ.ಧನಂಜಯ ಸರ್ಜಿ ಮಾತನಾಡಿ, ಪಿಜಿ ಔಟ್ ಪುಟ್ ಸಾಕಷ್ಟಿದ್ದು, ಪಿಜಿ ವಿದ್ಯಾರ್ಥಿಗಳ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪಡೆಯಬೇಕು. ಆಗ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಾಧ್ಯವಾಗುತ್ತದೆ. ಅವರು ಸೇವೆ ಸಲ್ಲಿಸದಿದ್ದರೆ ರೂ.೧೫ ರಿಂದ ರೂ. ೫೦ ಲ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ಮಂಜೂರಾದ ಸಾರ್ವಜನಿಕರಿಗೆ ಶೌಚಾಶಯ, ವಿಶ್ರಾಂತಿ ಭವನ ನಿರ್ಮಾಣ ಕಾರ್ಯ ಇನ್ನೂ ಆಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದರು.
ಶಾಸಕರಾದ ಬಲ್ಕೀಶ್ ಬಾನು‌ ಮೆಡಿಕಲ್ ಕಾಲೇಜುಗಳ ನೋಟಿಸ್ ಬೋರ್ಡ್ ಗಳಲ್ಲಿ ಖಾಲಿ ಹುದ್ದೆಗಳ ಬಗ್ಗೆ ತಿಳಿಸಿರಿ ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದಲ್ಲಿ ವೈದ್ಯರ ಕೊರತೆ ತುಂಬಾ ಇದೆ. ವೈದ್ಯರ ನೇಮಕ ಆಗಿದ್ದರೂ ರೋಗಿಗಳು ಬಂದಾಗ ವೈದ್ಯರು ಲಭ್ಯ ಇರುವುದಿಲ್ಲ. ಹಾಗೂ ಈ ಭಾಗದಲ್ಲಿ ಆಂಬುಲೆನ್ಸ್ ಇಲ್ಲವೆಂದು ತಿಳಿಸಿದರು. ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ರಾತ್ರಿ ವೇಳೆ ಹಿರಿಯ ವೈದ್ಯರೇ ಇರುವುದಿಲ್ಲ. ಇಲ್ಲಿ ಆಡಳಿತ ವೈಫಲ್ಯ ಆಗಿದೆ ಎಂದು ದೂರಿದರು.
Madhu Bangarappa ಶಾಸಕರಾದ ಎಸ್ ಎನ್ ಚನ್ನಬಸಪ್ಪ‌ ಮಾತನಾಡಿ, ವೈದ್ಯರ ಕೊರತೆ ನೀಗಿಸಿ, ನೇಮಕಾತಿ ಕುರಿತುಉಸ್ತುವಾರಿ ಸಮಿತಿ ಸಹ ರಚನೆ ಆಗಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ಪ್ರತಿನಿತ್ಯ ಸಂಕಷ್ಟಗಳಿವೆ.
ಸಚಿವರು, ನಾನೇ ವೈಯಕ್ತಿಕ ಕೆಲವು ಪಿಹೆಚ್ ಸಿ ಗಳಿಗೆ ಭೇಟಿ ನೀಡಿದ್ದೇನೆ.ವೈದ್ಯರ ಕೊರತೆ, ಹುದ್ದೆ ಭರ್ತಿ ಬಗ್ಗೆ ಚರ್ಚಿಸಿ ಕ್ರಮ‌ ವಹಿಸಲಾಗುವುದು. ೧೦ ರಿಂದ ೧೫ ಒಳಗೆ ಸಮಿತಿ ರಚಿಸಿ ಚರ್ಚಿಸೋಣ ಎಂದರು.
ಮೆಗ್ಗಾನ್ ಬೋಧನಾ ಆಸ್ಪತ್ರೆ ಒತ್ತಡ ಹೆಚ್ಚುತ್ತಿರುವ ಕಾರಣ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಮಂಜೂರಾತಿ ಬಗ್ಗೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದರು.
ಸಚಿವರು, ವೈದ್ಯರ ಕೊರತೆ, ಮೆಗ್ಗಾನ್ ಆಸ್ಪತ್ರೆ ಸಮಸ್ಯೆಗಳು ಕುರಿತು ಚರ್ಚಿಸಲು ೧೦ ರಿಂದ ೧೫ ದಿನಗಳ ಒಳಗೆ ಉಸ್ತುವಾರಿ ಸಮಿತಿ ರಚಿಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಸರಿಯಾದ ಚಿಕಿತ್ಸೆ ಕೊಡದ ಕಾರಣ ಬೇರೆಡೆ ಬರೆದುಕೊಡಿ ಎಂದು‌ಕೇಳುತ್ತಾರೆ. ಆಸ್ಪತ್ರೆಯಲ್ಲಿ ಯಾವುದೇ ಪ್ರಗತಿ ಇಲ್ಲವೆಂದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮುಳುಗಡೆ ಸಂತ್ರಸ್ತರು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಫಾರೆಸ್ಟರ್ ಗಳು ಜನರು ಗಾಬರಿಯಾಗುವ ರೀತಿಯಲ್ಲಿ ಈ ಭಾಗದಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗಾಬರಿಯಲ್ಲಿದ್ದಾರೆ. ಗಮನಕ್ಕೆ ಬಾರದೆ ಡೀಮ್ಡ್ ಅರಣ್ಯ ಸಭೆ ನಡೆಸಿ ಕ್ರಮ‌ ಕೈಗೊಳ್ಳುತ್ತಿದ್ದೀರಿ.
ರೈತರ ಗಿಡಗಳನ್ನು ಏಕೆ ಕೀಳುತ್ತೀರಿ. ನಮ್ಮ ಗಮನಕ್ಕೆ ಏಕೆ ತರುತ್ತಿಲ್ಲ.
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನ ತಿರುಗಿಬೀಳುತ್ತಾರೆ.
ಅರಣ್ಯ ಕಾಯ್ದೆಯಂತೆ ನಡೆದುಕೊಳ್ಳಿರಿ.ಸಮಸ್ಯೆಯನ್ನು ಎಲ್ಲರೂ ಕೂತು ಬಗೆಹರಿಸಬೇಕು. ಇಂತಹ ಕ್ರಮ ವಹಿಸುವ ಮುನ್ನ ಅರಣ್ಯ ಇಲಾಖೆಯವರು ಸಭೆ ಕರೆಯಬೇಕು ಎಂದರು.
ಎಂಎಡಿಬಿ ಅಧ್ಯಕ್ಷರಾದ ಮಂಜುನಾಥ ಗೌಡ ಮಾತನಾಡಿ ಎಸ್ ಟಿ ಜನಾಂಗದವರ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಗಾರ್ಡ್ ಗಳೇ ಕ್ರಮ‌ ಕೈಗೊಳ್ಳುತ್ತಿದ್ದಾರೆ. ಅರಣ್ಯ ಭೂಮಿ ಅಲ್ಲವೆಂದರೂ ಕಂದಾಯ ಇಲಾಖೆ ಕ್ಲಿಯರೆನ್ಸ್ ನೀಡುತ್ತಿಲ್ಲವೆಂದರು.
ಶಾರದಾ ಪೂರ್ಯಾನಾಯ್ಕ ಗ್ರಾಮ ಠಾಣಾ ವ್ಯಾಪ್ತಿಯ ತುಪ್ಪೂರು ಅಂಬೇಡ್ಕರ್ ಶಾಲೆಯಲ್ಲಿನ ಮರಗಳು ಕಟಾವಾಗಿ ಹಾಗೇ ಬಿದ್ದಿವೆ. ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದರು.
ಶಾಸಕರು, ಮಳೆ ಗಾಳಿಗೆ ಬಿದ್ದ ಸಾಗುವಾನಿ‌ ಮರಗಳನ್ನು ಅರಣ್ಯ ಇಲಾಖೆಯವರು ರೈತರಿಗೆ ತೊಂದರೆ ಕೊಡದೇ, ವಹಿಸಬೇಕಾದ ಕ್ರಮದ ಬಗ್ಗೆ ತಿಳಿಸಬೇಕೆಂದು ಆಗ್ರಹಿಸಿದರು.
ಶಾಸಕರಾದ ಚನ್ನಬಸಪ್ಪ ಮಳೆಗಾಲಕ್ಕೂ ಮುನ್ನ ಆತಂಕದ ಮರಗಳನ್ನು ತೆಗೆದು ಹಾಕಬೇಕು. ಈಗಾಗಲೇ ಸಾಕಷ್ಟು ಪ್ರಾಣ ಹಾನಿ‌ ಆಗಿದೆ. ತಂಡ ರಚನೆ ಮಾಡಬೇಕು
ಸಚಿವರು ಪ್ರತಿಕ್ರಿಯಿಸಿ ಶಾಲಾ ಆವರಣದಲ್ಲಿ ಕಟಾವು ಮಾಡಿದ ಮರಗಳನ್ನು ವಿಲೇ ಮಾಡಲು ಡಿಎಫ್ ಓ ರವರು ಕಾನೂನಾತ್ಮಕವಾಗಿ, ತ್ವರಿತವಾಗಿ ಕೆಲಸ ಆಗಬೇಕು. ಯಾವುದೇ ನೆಪ ಹೇಳಬಾರದು. ಸ್ವಚ್ಛಗೊಳಿಸುವುದಕ್ಕೂ ಶಾಸಕರು ಹೇಳಬೇಕಾ? ಡಿಸಿ ಯವರು ಸೂಕ್ತ ಕ್ರಮ‌ವಹಿಸಬೇಕೆಂದು ತಾಕೀತು‌‌ ಮಾಡಿದರು. ಹಾಗೂ ಆತಂಕದ ಮರಗಳು, ಮೆಸ್ಕಾಂ ಲೈನ್ ಗಳು, ತಂತಿಗಳ ಬಗ್ಗೆ ಎಚ್ಚರಿಕೆ ವಹಿಸಿ ತ್ವರಿತವಾಗಿ ತೆಗೆಸಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು : ಆರಗ ಜ್ಞಾನೇಂದ್ರ ಮಾತನಾಡಿ, ಅಧಿಕಾರಿಗಳು ಜೆಜೆಎಂ ಯೋಜನೆ ಬಹಳ ಉತ್ತಮ‌ ಯೋಜನೆ. ಆದರೆ ಸಂಪೂರ್ಣ ವಿಫಲಗೊಳಿಸಿದ್ದಾರೆ.
ಜಿ.ಪಂ. ಸಿಇಓ ಪ್ರತಿಕ್ರಿಯಿಸಿ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಅಂದಾಜು‌ ಮೊತ್ತ ಸಾಕಾಗದೇ ಕೆಲವು ಮನೆಗಳಿಗೆ ಸಂಪರ್ಕ ಸಾಧ್ಯವಾಗಿಲ್ಲ. ಇದೀಗ
ಯೋಜನೆಯು ೨೦೨೮ ವರೆಗೆ ವಿಸ್ತರಣೆಯಾಗಿದ್ದು, ೪೬೪ ಸಂಪರ್ಕಕ್ಕೆ ಹೊಸದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು , ಜೆಜೆಎಂ ಯೋಜನೆಯಡಿ ಪೈಪ್ ಲೈನ್ , ಟ್ಯಾಂಕ್ ಕಾಮಗಾರಿ‌ ಪೂರ್ಣಗೊಳ್ಳಬೇಕು ಎಂದರು.
ಗ್ರಾಮಾಂತರು ಶಾಸಕರು, ಅರಣ್ಯ ಭಾಗದ ಟ್ಯಾಂಕರ್ ನ್ನು ಕೆಡವಲು ಅನುಮತಿ ನೀಡಬೇಕು. ದಾಖಲಾತಿ ಇಲ್ಲವೆಂದು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದರು.
ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕೂಡ್ಲಿಗೆರೆ ಕೆರೆಯಿಂದ ನೀರು ನೀಡಿರೆಂದು ಭದ್ರಾ ಮನವಿ ಮಾಡಿದರು. ಭದ್ರಾವತಿ ಶಾಸಕರು ಪ್ರತಿಕ್ರಿಯಿಸಿ, ಸಿಇಓ ಜೊತೆ ಭೇಟಿ ಮಾಡಿ ಪರಿಶೀಲಿಸುವುದಾಗಿ ತಿಳಿಸಿದರು.
ಸಿಇಓ ಉತ್ತರಿಸಿ, ಪಿಡಿಓರವರಿಂದ ೧೯೮೦ ಕ್ಕಿಂತ ಮೊದಲಿನ ಟ್ಯಾಂಕರ್ ಎಂದು ದೃಢೀಕರಣ ಹಾಗೂ ದಾಖಲಾತಿ‌ ಪಡೆದು ಕೆಡವಲು ಅನುಮತಿ ನೀಡಲಾಗುವುದು ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ ಸೇರಿದಂತೆ ಶಾಸಕರು, ಮಾತನಾಡಿ ಮದ್ಯ ಮಾರಾಟ ಅವ್ಯಾಹತವಾಗಿದೆ. 24 ಗಂಟೆ ಸಾರಾಯಿ ಮಾರಾಟ ಮಾಡುವ ಕೆಲಸ ಆಗುತ್ತಿದೆ.ಇದರಿಂದಾಗಿ ದುಡಿಯುವ ಕೈಗಳು ಬಹು ಬೇಗ ಜೀವ ಕಳೆದುಕೊಳ್ಳುತ್ತಿವೆ. ಇಂತಹ ಸಾರಾಯಿ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಬೇಕು.
ಅಬಕಾರಿ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ೮೧೧ ಅಬಕಾರಿ ಪ್ರಕರಣ ದಾಖಲಾಗಿದ್ದು ರೂ. ೧೧೮೪೦ ಲಕ್ಷ ದಂಡ ವಸೂಲಾತಿ ಆಗಿದೆ ಎಂದ ಅವರು ಕಾನೂನು ಉಲ್ಲಂಘನೆ ಮಾಡಿದ ಅಂಗಡಿಗಳ ಪರವಾನಗಿ ರದ್ದು ಪಡಿಸಿ‌ ಕ್ರಮ‌ ವಹಿಸಲಾಗುವುದು ಎಂದರು.
ಕೃಷಿ ಜಂಟಿ ನಿರ್ದೇಶಕರಾದ ಕಿರಣ್ ಕುಮಾರ್ ಮಾತನಾಡಿ,
ಮುಂಗಾರು ಬೆಳೆಗೆ ಸಾಕಾಗುವಷ್ಟು ರಾಸಾಯನಿಕ ಗೊಬ್ಬರ ದಾಸ್ತಾನಿದೆ. ೪೫ ಸಾವಿರ ಮೆ. ಟನ್ ದಾಸ್ತಾನಿದೆ. ಜೂನ್ ಅಂತ್ಯ ದವರೆಗೆ ಆಗುವಷ್ಟು ಯೂರಿಯಾ ಡಿಐಪಿ ದಾಸ್ತಾನುನಿದೆ ಎಂದರು.
ಸಚಿವರು, ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ನಗರದ ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ೦.೨೭ ಗುಂಟೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲೇ ಆದೇಶ ಆಗಲಿದೆ ಎಂದರು.
ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿರುವ ತಮಿಳು ಶಾಲೆಯನ್ನು ಬೇರೆಡೆ ವರ್ಗಾವಣೆ ಮಾಡಿ, ಮಕ್ಕಳ ಹಿತದೃಷ್ಟಿಯಿಂದ
ಸಿಎಸ್ ಆರ್ ನಿಧಿಯಲ್ಲಿ ಶಾಲೆಯನ್ನು ಉನ್ನತೀಕರಿಸಲಾಗುವುದು ಎಂದರು.
ಶಾಸಕರಾದ ಚನ್ನಬಸಪ್ಪ, ೪೫ ಬಿಲ್ ಕಲೆಕ್ಡರ್ ಇರುವೆಡೆ ಒಬ್ಬರೇ ಮಾಡುತ್ತಿದ್ದಾರೆ ಹಾಗೂ ೧೬೧೦ ಹುದ್ದೆ ಖಾಲಿ
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಿಂದ ಒಂದು ಕ್ವಾರಿಯಿಂದ ಅಂದಾಜು ರೂ. ೧.೨೦ ಕೋಟಿ ಯಂತೆ ಸುಮಾರು ರೂ. 25 ಕೋಟಿ ನಷ್ಟ ಆಗುತ್ತಿದೆ. ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು.
ಆರಗ ಜ್ಞಾನನೇಂದ್ರ ಅಧಿಕಾರಿಗಳೇ ದಂಧೆಯಲ್ಲಿ ಶಾಮೀಲಾಗಿದ್ದು ಕೊಳ್ಳುವವರಿಗೂ ಮರಳಿಲ್ಲ, ಸರ್ಕಾರಕ್ಕೂ ಆದಾಯ ಸಿಗುತ್ತಿಲ್ಲ. ಏನೆಜ್ಸಿಯವರ ಜಿಎಸ್ ಟಿ ರಿಜಿಸ್ಟ್ರಷನ್ನೇ ಇಲ್ಲ. ಬೇಕಾದಷ್ಟು ಮರುಳಿದ್ದರೂ, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.
ಸಚಿವರು, ಅಕ್ರಮ ಮರಳು ಸಾಗಾಣಿಕೆ ತಡೆದು
ಕಾನೂನಾತ್ಮಕವಾಗಿ ಕ್ರಮ ವಹಿಸಬೇಕು. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಜಿಲ್ಲಾಧಿಕಾರಿಗಳು ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ೨೦ ಮರಳು ಕ್ವಾರಿಗಳಿಗೆ ಎನ್ ಓ ಸಿ ಆಗಿ ಕ್ಲಿಯರ್ ಆಗಿದ್ದು ರಾಜ್ಯ ಸಮಿತಿಗೆ ಅನುಮೋದನೆಗೆ ಇಡಲಾಗಿದೆ. ಸರ್ಕಾರದ ೮ ಬ್ಲಾಕ್ ಇದ್ದು, ೧ ಜೆಜೆಎಂ ಮತ್ತು ೧ ಕೆಆರ್ ಐಡಿ ಎಲ್ ಕಾಮಗಾರಿಗೆ ನೀಡಲಾಗಿದೆ ಎಂದರು.
ಹಾಗೂ ಜಿಲ್ಲೆಯಲ್ಲಿ ಸಂಚಾರಿ
ಹುಲಿಕಲ್ ಘಾಟ್ ರಸ್ತೆ ನಿರ್ಮಾಣ ವೇಳೆ ಮರಣ ಹೊಂದಿದ ಸಂಬಂಧಿಕರಿಗೆ ತಲಾ ರೂ. 5 ಲಕ್ಷ ಪರಿಹಾರದ ಚೆಕ್ ನ್ನು ಸಚಿವರು ಇದೇ ವೇಳೆ ವಿತರಣೆ ಮಾಡಿದರು.
ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷರಾದ ಆರ್ ಎಂ‌ ಮಂಜುನಾಥ್ ಗೌಡ, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಮಟ್ಟದ ಅಧಿಕಾರಿಗಳು,
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ‌ ಸಿಇಓ‌ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಎಸ್ ಪಿ ಕಾರಿಯಪ್ಪ, ಜಿ.ಪಂ ಉಪ ಕಾರ್ಯದರ್ಶಿಗಳು, ಸಿಪಿಓ, ಇತರೆ ಅಧಿಕಾರಿಗಳು ಹಾಜರಿದ್ದರು.

Belur Gopala Krishna ದೆಹಲಿ‌ಗೆ ನಮ್ಮ ತಂಡ ಹೋಗಲಿದೆ. ನಮ್ಮದು ಸಂಪುಟಕ್ಕೆ ಸೇರಲು ಮಾಡು ಇಲ್ಲವೆ ಮಡಿ ಹೋರಾಟ – ಬೇಳೂರು ಗೋಪಾಲ ಕೃಷ್ಣ

0

Belur Gopala Krishna ಕಾಂಗ್ರೆಸ್ ಶಾಸಕರ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕೇರಳ ಮುಖ್ಯಮಂತ್ರಿ ಆಯ್ಕೆ ನಂತರವೇ ದೆಹಲಿಗೆ ತೆರಳುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹೇಳಿದರು. ಈಗ ಕೇರಳ ಸಿಎಂ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಮುಂದಿನ 2 ರಿಂದ 3 ದಿನಗಳಲ್ಲಿ ಸಭೆ ನಡೆಸಿ ಸುಮಾರು 30 ರಿಂದ 35 ಮಂದಿ ಶಾಸಕರು ದೆಹಲಿಗೆ ತೆರಳಲಿದ್ದಾರೆ ಎಂದರು.

ಈ ಬಾರಿ “ಮಾಡು ಇಲ್ಲವೇ ಮಡಿ” ಹೋರಾಟದ ರೀತಿಯಲ್ಲಿ ನಮ್ಮ ಹೋರಾಟ ಇರಲಿದೆ ಎಂದು ಸ್ಪಷ್ಟಪಡಿಸಿದ ಅವರು, ಮೂರು ವರ್ಷಗಳಿಂದ ಕೆಲವರು ಅಧಿಕಾರ ಅನುಭವಿಸಿದ್ದಾರೆ. ಈಗ ಪಕ್ಷವನ್ನು ಇನ್ನಷ್ಟು ಶಕ್ತಿಯುತಗೊಳಿಸಲು ಸಂಪುಟ ಪುನಾರಚನೆ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಈಗಾಗಲೇ 15 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಹೇಳಿದ್ದಾರೆ. ಆದರೆ ನಾವು 20ಕ್ಕೂ ಹೆಚ್ಚು ಮಂದಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದೇವೆ ಎಂದು ಹೇಳಿದರು.


Belur Gopala Krishna “ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಂದಿ ದೆಹಲಿಗೆ ಹೋಗ್ತೀವಿ. ಖಂಡಿತವಾಗಿಯೂ ಸಂಪುಟ ಪುನಾರಚನೆ ಆಗಬೇಕು. ಬಹಳಷ್ಟು ಜನ ಕಾಯುತ್ತಿದ್ದಾರೆ. ಅವರೇ ಇರಬೇಕು ಅಂತಿಲ್ಲ. ಆರು ತಿಂಗಳು ಹೆಚ್ಚುವರಿಯಾಗಿ ಇದ್ದಾರೆ. ಪಕ್ಷ ಶಕ್ತಿಯುತವಾಗಬೇಕಾದರೆ ಬದಲಾವಣೆ ಅಗತ್ಯ,” ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು. ಮೇ 28 ಮತ್ತು 29ರೊಳಗೆ ದೆಹಲಿ ಭೇಟಿ ನಿಶ್ಚಯವಾಗಿದ್ದು, 15 ದಿನಗಳೊಳಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ರಾಷ್ಟ್ರೀಯ ನಾಯಕರ ಕೈಯಲ್ಲಿರುವ ವಿಷಯ. ಅದಕ್ಕೆ ಸಂಬಂಧಿಸಿದಂತೆ ನಾವು ಏನೂ ಹೇಳುವುದಿಲ್ಲ ಎಂದರು.

Adichunchanagiri Education Trust ವೃತ್ತಿಗೆ ಗೌರವಕೊಡಿ, ಅದರಿಂದ ವ್ಯಕ್ತಿಯ ಬದುಕು ಹಸನಾಗುತ್ತದೆ : ಶ್ರೀಪ್ರಸನ್ನನಾಥಶ್ರೀ

0

Adichunchanagiri Education Trust ವೃತ್ತಿಗೆ ಗೌರವ ಕೊಡಿ, ಯಾವ ವ್ಯಕ್ತಿ ವೃತ್ತಿಗೆ ಗೌರವ ಕೊಡುತ್ತಾನೋ ಆ ವ್ಯಕ್ತಿಯ ಬದುಕು ಹಸನಾಗುವುದು, ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜೊತೆ ಉತ್ತಮ ಒಡನಾಟದಿಂದ ಇರಬೇಕು, ಅವರಿಗೆ ಬೇಕು-ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಶಿಕ್ಷಕರ ಕಾರ್ಯಗಾರದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ, ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಬಿಜಿಎಸ್ ಸಭಾ ಭವನದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಹಾಗೂ ಕಾಲೇಜಿನ ಉಪನ್ಯಾಸಕರಿಗೆ ಎರಡು ದಿನ ನಡೆಯುವ ಕಾರ್ಯಗಾರದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ,
ಒಂದು ಶಾಲೆಯಲ್ಲಿ ಮಕ್ಕಳಲ್ಲಿ ಶಿಸ್ತು, ಸಂಯಮ, ಇದೆ ಅಂದರೆ ಅದಕ್ಕೆ ಶಿಕ್ಷಕರ ಪಾತ್ರ ದೊಡ್ಡದು, ಪೋಷಕರ ಜೊತೆಗೆ ಆತ್ಮೀಯತೆಯಿಂದ ಇರಬೇಕು ಎಂದರು. ಈಗಾಗಲೇ ರಾಜ್ಯದ ನುರಿತ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಿಂದ ತಮಗೆ ಕಾರ್ಯಾಗಾರ ನಡೆಸುತ್ತಿದ್ದು,ಇದರ ಸದುಪಯೋಗ ಪಡೆದುಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಂದ ತಾವು ಉತ್ತಮ ಸಾಧನೆ ಮಾಡಿಸಬೇಕಾಗಿದೆ ಎಂದು ಶಿಕ್ಷಕರಿಗೆ ಕಿವಿ ಮಾತು ತಿಳಿಸಿದರು.
ಈ ಕಾರ್ಯಗಾರದಲ್ಲಿ ಸಂಸ್ಥೆಯ ವಿವಿಧ ಶಾಲೆಗಳಿಂದ ಸುಮಾರು 600 ಕ್ಕೂ ಹೆಚ್ಚು ವಿವಿಧ ವಿಷಯಗಳ ಶಿಕ್ಷಕರು,ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯುತ್ತಿರುವುದು ಮತ್ತೊಂದು ವಿಶೇಷ.
Adichunchanagiri Education Trust ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಸಂವಿಧಾನನಂದನಾಥ ಸ್ವಾಮೀಜಿಯವರು,ಪೂಜ್ಯ ಶ್ರೀ ರಾಜಯೋಗಾನಂದನಾಥ ಸ್ವಾಮೀಜಿಯವರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು. ನಿವೃತ್ತ ಜಂಟಿ ನಿರ್ದೇಶಕರಾದ ಪಾಂಡುರಂಗಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಮೌಲ್ಯ ಮಾಪನಗಳ ಬಗ್ಗೆ, ಪರೀಕ್ಷೆ, ಶೈಕ್ಷಣಿಕ ಚಟುವಟಿಗಳ ಬಗ್ಗೆ ಕುರಿತು ಶಿಕ್ಷಕರಿಗೆ ತಿಳಿಸಿದರು. ಪ್ರಗತಿಯಲ್ಲಿ ಹಿಂದೆ ಉಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನೀಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ಕೊಡಬೇಕು ಎಂದರು.ಮಕ್ಕಳಿಗೆ ತರಬೇತಿ, ಉತ್ತಮ ಕೌಶಲ್ಯಗಳನ್ನು ಗುರುತಿಸಿ ಆಯ್ಕೆ ಮಾಡುವುದು, ನಿರಂತರ ಅಭ್ಯಾಸ ಮಾಡುವುದರ ಮೂಲಕ ಅವರ ಸಾಧನೆಗೆ ಶಕ್ತಿ ತುಂಬುವುದು, ಮಕ್ಕಳಲ್ಲಿ ಅನೇಕ ನ್ಯೂನ್ಯತೆಗಳಿರುತ್ತವೆ, ಅವುಗಳನ್ನು ತಿದ್ದಿ-ತೀಡಿ ಉತ್ತಮ ರೀತಿಯಲ್ಲಿ ಒಬ್ಬ ಪ್ರಜ್ಞಾವಂತರಾಗಿ ಸಜ್ಜುಗೊಳಿಸುವುದರಲ್ಲಿ ತಮ್ಮಗಳ ಪಾತ್ರ ದೊಡ್ಡದು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪರಾಜ್, ವೆಂಕಟೇಶ್, ಗುರುಮೂರ್ತಿ, ಆಂಜನೇಯ,ಎಂ. ಕರಿಬಸಪ್ಪ, ಮೋತಿನಾಯ್ಕ, ಪ್ರದೀಪ್, ರುದ್ರಸ್ವಾಮಿ,ದಿವಾಕರ್, ಬಸವರಾಜ್, ರಂಗರಾಜು, ವಸಂತಕುಮಾರ್ ಪೈ, ನಂಜರಾಜ, ಬಸವಣ್ಣ, ಸುಧಾ ಹೆಗಡೆ, ಶ್ರೀ ಕಾಂತ್, ಪ್ರಜ್ವಲ್, ಕಾಂತರಾಜು, ಸತೀಶ್, ನಾಗರಾಜು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶಿಕ್ಷಕರಿಗೆ ಎರಡು ದಿನ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಕೊಳಿಗೆ ವಾಸಪ್ಪಗೌಡ,ಸಂಸ್ಥೆಯ ಪ್ರಾಂಶುಪಾಲರುಗಳು, ಮುಖ್ಯ ಶಿಕ್ಷಕರು, ಉಪನ್ಯಾಸಕರು, ಶಿಕ್ಷಕರು ಇನ್ನು ಮುಂತಾದವರು ಉಪಸ್ಥಿತರಿದ್ದರು.