Thursday, August 6, 2026
Thursday, August 6, 2026
Home Blog Page 88

B.Y. Raghavendra ಬೇಸೂರು ಅಣು ವಿದ್ಯುತ್ ಸ್ಥಾವರ : ಜನರು ಆತಂಕಪಡುವ ಅವಶ್ಯಕತೆಯಿಲ್ಲ- ಬಿ.ವೈ.ರಾಘವೇಂದ್ರ.

0

B.Y. Raghavendra “ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ; ಜನರು ಆತಂಕ ಪಡುವ ಅವಶ್ಯಕತೆಯಿಲ್ಲ”- ‘ಜನರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುವ ಯೋಜನೆ ಜಾರಿಗೆ ನಮ್ಮ ವಿರೋಧವಿದೆ’
ಎಂದು ಸಂಸದ ಬಿ.ವೈ‌‌.ರಾಘವೇಂದ್ರ ಘಂಟಾಘೋಷವಾಗಿ ಹೇಳಿದ್ದಾರೆ.

ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸಂಬಂಧ ಗ್ರಾಮೀಣ ಭಾಗದ ಜನರು ಆತಂಕದಲ್ಲಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಕೆಳಕಂಡ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ.

ಕೇಂದ್ರ ಸರ್ಕಾರ ಅಧೀನದ ಎನ್.ಟಿ.ಪಿ.ಸಿ (National Thermal Power Corporation) ಸಂಸ್ಥೆಯಿಂದ ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ವಿಜಯಪುರ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳ ಆಯ್ಕೆಗಾಗಿ ಪ್ರಾಥಮಿಕ ಅಧ್ಯಯನಗಳು ಹಾಗೂ ಭೂ-ವೈಜ್ಞಾನಿಕ ಪರಿಶೀಲನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

ವಿಷಯ ಗಮನಕ್ಕೆ ಬರುತ್ತಿದ್ದಂತೆ, ಶಿವಮೊಗ್ಗ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲವೆಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

B.Y. Raghavendra ಶರಾವತಿ ಸಂತ್ರಸ್ತರಿಗೆ ಇಂದಿಗೂ ಸಮರ್ಪಕ ಭೂಪರಿಹಾರ ಒದಗಿಸಲಾಗಿಲ್ಲ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಆಸಕ್ತರು ಮತ್ತು ಬುದ್ಧಿ ಜೀವಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿರುತ್ತಾರೆ. ಈ ಸಂಬಂಧ ಕೇಂದ್ರ ಸಚಿವರಿಗೆ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸದಂತೆ ಪ್ರಸ್ತಾವನೆಯನ್ನು ಕೈಬಿಡಲು ಮನವರಿಕೆ ಮಾಡಿಕೊಡಲಾಗುವುದು.

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಪರಿಸರ ಹಾನಿ ಉಂಟಾಗುವ ಯಾವುದೇ ಯೋಜನೆಗೂ ತಮ್ಮ ಸ್ಪಷ್ಟ ವಿರೋಧವಿದ್ದು, ಜನರ ಹಿತಾಸಕ್ತಿ ಕಾಪಾಡಲು ಬದ್ಧರಾಗಿರುತ್ತೇನೆ ಎಂದು ಬಿ.ವೈ‌.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

0

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರಸ್ತುತ ಖಾಲಿಯಿರುವ ಶಿಕ್ಷಕರುಗಳ ಹುದ್ದೆಗಳಿಗೆದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 51,000 (ಪ್ರಾಥಮಿಕ ಶಾಲೆಗಳಿಗೆ 40,000 ಮತ್ತು ಪ್ರೌಢ ಶಾಲೆಗಳಿಗೆ 11,000) ಅತಿಥಿ ಶಿಕ್ಷಕರುಗಳನ್ನು ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ಖಾಯಂ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರವು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

0

ವಿಶೇಷ ವರದಿ: ಪ್ರಭಾಕರ ಕಾರಂತ

Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ನೇಪಾಳದ ಪುಣ್ಯ ಭೂಮಿಯಲ್ಲಿ ಪಾದಸ್ಪರ್ಶಿಸಿದಾಗ ಕಟ್ಮಂಡುವಿನ ವಿಮಾನ ನಿಲ್ದಾಣದಲ್ಲಿ ಅವರನ್ನು ನೇಪಾಳದ ಸರ್ಕಾರ ಭಕ್ತಿಪೂರ್ವಕವಾಗಿ ಬರಮಾಡಿಕೊಂಡಿತು.ನೇಪಾಳದ ಪೋಲೀಸ್ ಮುಖ್ಯಸ್ಥರು,ಸೇನಾ ನಾಯಕರು,ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಮತ್ತಿತರ ರಾಯಭಾರ ಕಚೇರಿ ಅಧಿಕಾರಿಗಳು,ವಿಮಾನ ಸೇವಾ ಅಧಿಕಾರಿಗಳು,ಗಣ್ಯ ಅಧಿಕಾರಿಗಳ ಕುಟುಂಬ ವರ್ಗ,ಮುಂತಾದ ಗಣ್ಯರು ಎರಡು ಸಾಲಿನಲ್ಲಿ ನಿಂತು ಜಗದ್ಗುರುಗಳು ಸಾಗುವುದನ್ನು ನೋಡುತ್ತಾ ಅವರ ಅಭಯಹಸ್ತದ ಆಶೀರ್ವಾದ ಪಡೆದು ಕೃತಾರ್ಥರಾದರು.

ನೇಪಾಳದ ಅನೇಕ ಸನ್ಯಾಸಿಗಳೂ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದರು.ಸನಾತನ ಧರ್ಮದ ಮೂಲ ಸ್ಥಂಭವಾದ ಶೃಂಗೇರಿಯ ಶಂಕರಾಚಾರ್ಯರ ಕುರಿತು ಸಹಸ್ರಾರು ಮೈಲಿ ದೂರವಿರುವ ವಿದೇಶದಲ್ಲಿ ಅದೆಷ್ಟು ಶ್ರದ್ಧೆ ಗೌರವ ಮನೆ ಮಾಡಿದೆ ಎಂಬುದು ಲೋಕಕ್ಕೆ ಪ್ರಕಟವಾದ ಸನ್ನಿವೇಶ ಅದು.ಜಗದ್ಗುರುಗಳು ತಮ್ಮ ವಾಹನ ಏರುವವರೆಗೂ ಉಭಯ ಕಡೆಯಲ್ಲೂ ಮಕ್ಕಳಾದಿಯಾಗಿ ಜನಸಮೂಹ ಅವರ ದರ್ಶನ ಭಾಗ್ಯ ಪಡೆದರು.

ನೇಪಾಳದ ರಕ್ಷಣಾ ಪಡೆ, ಸೈನ್ಯ,ಭಾರತೀಯ ರಾಯಭಾರಿ ಕಚೇರಿ ರಕ್ಷಣಾ ಸಿಬ್ಬಂದಿ ವಾಹನಗಳಲ್ಲಿ ಜಗದ್ಗುರುಗಳನ್ನು ಹಿಂಬಾಲಿಸಿ ಜಗದ್ಗುರುಗಳನ್ನು ಶ್ರೀ ಪಶುಪತಿನಾಥ ದೇವಾಲಯದ ವರೆಗೆ ಕರೆದೊಯ್ಯಲಾಯಿತು.ಅಲ್ಲಿನ ಜನಸಾಗರ. ಜಯಗೋಷಗಳೊಂದಿಗೆ ಜಗದ್ಗುರುಗಳನ್ನು ಬರಮಾಡಿಕೊಂಡಿತು.ದೂಳೀ ಪಾದಪೂಜೆ ನಂತರ ನೇಪಾಳಕ್ಕೆ ಆರು ದಶಕಗಳ ನಂತರ ಶಂಕರಾಚಾರ್ಯರ ಆಗಮನ ಆಗಿದ್ದನ್ನು ಸ್ವಾಗತ ಮಾಡುವವರು ತಿಳಿಸಿ ಈ ಪವಿತ್ರ ಭೂಮಿ ಪಾವನವಾಯಿತು ಎಂದರು.

ಜಗದ್ಗುರುಗಳು‌ತಮ್ಮ ಅನುಗ್ರಹ ಭಾಷಣದಲ್ಲಿ ಪರಶಿವನ ಅವತಾರವಾದ ಶಂಕರ ಭಗವತ್ಪಾದರು ಇಲ್ಲಿ ಜಗದೊಡೆಯ ಪಶುಪತಿನಾಥನ ಪೂಜೆ ಮಾಡಿದ್ದನ್ನೂ,ನಂತರ ತಮ್ಮ ಪರಮ ಗುರುಗಳು ಪಶುಪತಿನಾಥನ ಪೂಜೆ ನಡೆಸಿದ್ದನ್ನೂ ಸ್ಮರಿಸಿ ಇದು ಪುಣ್ಯ ಭೂಮಿ ಎಂದರು.ನೇಪಾಳ ಸರ್ಕಾರ, ಸೈನ್ಯ, ಪಶುಪತಿನಾಥನ ಸೇವೆಯಲ್ಲಿ ತೊಡಗಿರುವ ಆರ್ಚಕರು ಮತ್ತು ಸರ್ವ ಸದ್ಭಕ್ತರಿಗೂ ಶುಭಾಶೀರ್ವಾದ ಮಾಡಿದರು.

Klive Special Article ನಂತರ ಶಂಕರಾಚಾರ್ಯ ಮಠ ತಲುಪಿ ಸ್ನಾನಾದಿ ನಿತ್ಯ ನೈಮಿತ್ತಿಕ ಕರ್ಮ ಪೂರೈಸಿ ಭಿಕ್ಷೆಗೆ ತೆರಳುವಾಗ ಗಂಟೆ ನಾಲ್ಕು ಸಮೀಪಿಸಿತ್ತು.

ಸಂಜೆ ಜಗದ್ಗುರುಗಳು ಪಶುಪತಿನಾಥ ಮಂದಿರದ ಪರಿಕ್ರಮ ಮಾಡಿದರು.ಪರಿವಾರ ದೇವತೆಗಳ ದರ್ಶನದ ನಂತರ ಪಶುಪತಿನಾಥ ಸ್ವಾಮಿ ಗರ್ಭಗುಡಿಯನ್ನು ಪ್ರವೇಶಿಸಿದರು.ಮುಖ್ಯ ಅರ್ಚಕರೂ ಸೇರಿದಂತೆ ದೇವಾಲಯದ ಸಿಬ್ಬಂದಿ ತಮ್ಮ ಬದುಕಿನ ಭಾಗ್ಯವೆಂದು ಜಗದ್ಗುರುಗಳನ್ನು ದರ್ಶನ ಮಾಡಿ ಆಶೀರ್ವಾದ ಪಡೆದರು.ನಂತರ ಆಂಜನೇಯ ಸ್ವಾಮಿಯ ದರ್ಶನ ಪಡೆದ ಜಗದ್ಗುರುಗಳು ಸೀತಾಸಮೇತ ಶ್ರೀರಾಮಚಂದ್ರ ಸ್ವಾಮಿ ಗುಡಿಗೆ ತೆರಳಿ ದರ್ಶನ ಪಡೆದರು.ಈ ಶಾಲಿಗ್ರಾಮದ ಪಟ್ಟಾಭಿರಾಮ ವಿಗ್ರಹದಲ್ಲಿದ್ದ ಶ್ರೀರಾಮಚಂದ್ರ ಸ್ವಾಮಿ ಜಗದ್ಗುರುಗಳಿಗೆ ದರ್ಶನವಿತ್ತು ಆಶೀರ್ವಾದ ಮಾಡಿದಂತಿತ್ತು.

ನಂತರ ಅನುಗ್ರಹ ಭಾಷಣ ಮಾಡಿದ ಜಗದ್ಗುರುಗಳು ತಾವು ಬೇರೊಂದು ದೇಶಕ್ಕೆ ಬಂದಿರುವೆ ಅಂದುಕೊಂಡಿಲ್ಲ. ಸನಾತನ ಧರ್ಮ ಪರಿಪಾಲಿಸುವ ಭಾರತ ನೇಪಾಳದಲ್ಲಿ ಯಾವುದೇ ಬೇಧ ಇಲ್ಲ.ಧರ್ಮ, ಸಂಸ್ಕೃತಿ ಪರಂಪರೆ ಎಲ್ಲದರಲ್ಲೂ ನಾವು ಒಂದೇ ಆಗಿದ್ದೇವೆ ಎಂದರು.
ರಾತ್ರಿ ಜಗದ್ಗುರುಗಳು ನೆರವೇರಿಸಿದ ಚಂದ್ರಮೌಳೀಶ್ವರ ಪೂಜೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕೃತಾರ್ಥರಾದರು.

ಜಗದ್ಗುರುಗಳ ನೇಪಾಳದ ಧರ್ಮ ವಿಜಯ ಯಾತ್ರೆಯ ಪ್ರಥಮ ದಿನವೇ ಅಭೂತಪೂರ್ವ ಪ್ರತಿಕ್ರಿಯೆ ಸೃಷ್ಟಿಸಿತು.

Shimoga News ನಲವತ್ತು ವರ್ಷ ವಯಸ್ಸು ದಾಟಿದ ಪ್ರತೀಯೊಬ್ಬರೂ ಪ್ರತೀ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು- ಡಾ.ಚಂದ್ರಶೇಖರ್.

0

Shimoga News ನಗರದ ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಇಲ್ಲಿನ ಹೋಂ ಗಾರ್ಡ್ ಅವರಿಗಾಗಿ ಆಯೋಜಿಸಿದ್ದ ಉಚಿತ ಮೂತ್ರ ರೋಗ, ಮೂತ್ರ ಕೋಶ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಆಸ್ಪತ್ರೆ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂತ್ರ ರೋಗದ ತಜ್ಞ ಡಾ| ಚಂದ್ರಶೇಖರ್ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯವಿಲ್ಲ ದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಆರೋ ಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಜೊತೆಗೆ ಪ್ರತಿ ೪೦ವರ್ಷ ದಾಟಿದವರು ಪ್ರತಿ ತಿಂಗಳಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

Shimoga News ಶಿವಮೊಗ್ಗದ ದುರ್ಗೀಗುಡಿ ಯಲ್ಲಿರುವ ನಮ್ಮ ಸೆಂಟರ್‌ನಲ್ಲಿ ಆರ್ಥಿಕವಾಗಿ ಸಂಕಷ್ಠದಲ್ಲಿರುವವರಿಗೆ ಉಚಿತವಾಗಿ ಮೂತ್ರ ರೋಗ, ಬಿ.ಪಿ. ಕಿಡ್ನಿ, ಮಧುಮೇಹ ಮತ್ತಿತರ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ರೋಗಿಗಳು ಇದರ ಸದುಪಯೋಗ ಪಡೆಯಲು ತಿಳಿಸಿದರು.

ತಪಾಸಣೆಯಲ್ಲಿ ಸಾಕಷ್ಟು ಜನ ಪ್ರಯೋಜನ ಪಡೆದರು. ಹೆಲ್ತ್ ಕೇರ್‌ನ ಸುಶ್ಮಾ, ರಕ್ಷಿತಾ ಮತ್ತು ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಸುನಿಲ್ ಉಪಸ್ಥಿತರಿದ್ದರು.

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

0

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ ಜೀವ ವೈವಿದ್ಯ ಪ್ರಶಸ್ತಿಗೆ ಶ್ರೀಮತಿ ಶ್ರಾವ್ಯಾ ಸಾಗರ್ ಅವರು ಭಾಜನರಾಗಿದ್ದಾರೆ. ಶ್ರಾವ್ಯಾ ಸಾಗರ್ ನಿರ್ಮಿಸಿದ ವರದಾನದಿ ಜೀವವೈವಿದ್ಯ ಸಾಕ್ಷ್ಯಚಿತ್ರವನ್ನು ೨೦೨೫-೨೬ನೇ ಸಾಲಿನ ರಾಜ್ಯಮಟ್ಟದ ಉತ್ತಮ ಜೀವವೈವಿದ್ಯ ಸಾಕ್ಷ್ಯ ಚಿತ್ರವೆಂದು ಪರಿಗಣಿಸಿ ದಿನಾಂಕ: 22-05-2026ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅಂತಾರಾಷ್ಟ್ರೀಯ ಜೀವವೈವಿದ್ಯ ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ, ಜೀವಪರಿಸರ ಮತ್ತು ಪರಿಸರ ಮಂತ್ರಿಗಳಾದ ಶ್ರೀ ಈಶ್ವರ ಖಂಡ್ರೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Eshwara Khandre ಸಾಗರ ತಾ ಚಿಪ್ಪಳ್ಳಿ ಗ್ರಾಮದ ಪ್ರಗತಿಪರ ಕೃಷಿಕರಾದ ನಾಗೇಂದ್ರ ಸಾಗರ್ ಮತ್ತು ವಾಣಿಶ್ರೀ ದಂಪತಿಗಳ ಪುತ್ರಿ ಶ್ರಾವ್ಯಾ ವೃತ್ತಿಯಲ್ಲಿ ವಕೀಲರು. ಗ್ರಾಮಾಂತರ ಸಮುದಾಯ ವಿಜ್ಞಾನಕೇಂದ್ರ ಶೆಡ್ತಿಕೆರೆ ಇವರ ಸಹಕಾರ, ಮತ್ತು ಕೆ. ವೆಂಕಟೇಶ್ ಕವಲಕೋಡು ಇವರ ಮಾರ್ಗದರ್ಶನದಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ವೃಕ್ಷ ಲಕ್ಷ ಆಂದೋಲನ-ಕರ್ನಾಟಕ ಮತ್ತು
ಶಡ್ತಿಕೆರೆ ಸಮುದಾಯ ವಿಜ್ಞಾನ ಕೇಂದ್ರದ ಅಧ್ಯಕ್ಷ, ಸದಸ್ಯರುಗಳು ಶ್ರೀಮತಿ ಶ್ರಾವ್ಯಾ ಅವರನ್ನು ಅಭಿನಂದಿಸಿದ್ದಾರೆ.

Institute of International Finance ಐಐಎಫ್ ಶಿವಮೊಗ್ಗ ಚಾಪ್ಟರ್ ನ ನೂತನ ಪದಾಧಿಕಾರಿಳ ಆಯ್ಕೆ.

0

Institute of International Finance ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (IIF) ಶಿವಮೊಗ್ಗ ಚಾಪ್ಟರ್‌ನ 2026 ರಿಂದ 2028ರ ದ್ವೈವಾರ್ಷಿಕ ಅವಧಿಗೆ ನೂತನ ಕೌನ್ಸಿಲ್ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮಲ್ನಾಡ್ ಅಲಾಯ್ ಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಶ್ರೀ ಮಹಾವೀರ್ ಜೈನ್ ಅವರು ನೂತನ ಕೌನ್ಸಿಲ್‌ನ ಅಧ್ಯಕ್ಷರಾಗಿ (Chairman) ಮತ್ತು ಸ್ಮಿತಾ ಎಂಟರ್‌ಪ್ರೈಸಸ್‌ನ ಮಾಲೀಕರಾದ ಶ್ರೀ ಎಂ. ಎಸ್. ಅರುಣ್ ಅವರು ಉಪಾಧ್ಯಕ್ಷರಾಗಿ (Vice Chairman) ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ದೀಪ್ ಇಂಡಸ್ಟ್ರೀಸ್‌ನ ಪಾಲುದಾರರಾದ ಶ್ರೀ ಪ್ರದೀಪ್ ಆರ್. ಅವರು ಗೌರವಾನ್ವಿತ ಕಾರ್ಯದರ್ಶಿಯಾಗಿ ಹಾಗೂ ರಾಗ್ ಎಂಟರ್‌ಪ್ರೈಸಸ್‌ನ ಮಾಲೀಕರಾದ ಶ್ರೀ ಆನಂದ್ ಕೋಟಿ ಎಚ್. ಆರ್. ಅವರು ಗೌರವಾನ್ವಿತ ಖಜಾಂಚಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Institute of International Finance ನೂತನ ಕೌನ್ಸಿಲ್‌ನ ಸದಸ್ಯರಾಗಿ ಶಿವಮೊಗ್ಗದ ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ತಜ್ಞರು ಆಯ್ಕೆಯಾಗಿದ್ದಾರೆ. ಶಾಂತಲಾ ಸ್ಫೆರೋಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಹೆಚ್.ಆರ್. ವ್ಯವಸ್ಥಾಪಕರಾದ ಶ್ರೀ ನಂಜುಂಡೇಶ್ವರ ಹೆಚ್. ಬಿ., ಎಸ್‌ಎನ್‌ಎಸ್ ಅಲಾಯ್ ಕಾಸ್ಟಿಂಗ್ಸ್‌ನ ಪಾಲುದಾರರಾದ ಶ್ರೀ ಚಂದನ್ ಎನ್. ಹೊಳ್ಳ, ಶ್ರೀ ವಾಸವಿ ಫೌಂಡ್ರಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಶ್ರೀ ಸುರೇಶ್ ಎಂ. ಹಾಗೂ ಟೆಕ್ನೋ ರಿಂಗ್ಸ್‌ನ ಪಾಲುದಾರರಾದ ಶ್ರೀ ಭೂಪಾಳಂ ಸತ್ಯನಾರಾಯಣ ಭಾರತ್ ಅವರು ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.ಇವರೊಂದಿಗೆ ಪರ್ಲೈಟ್ ಲೈನರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕರಾದ ಶ್ರೀ ಅಕ್ಷಯ್ ದತ್ ಜೆ., ಬಸವಶ್ರೀ ಎಂಟರ್‌ಪ್ರೈಸಸ್‌ನ ಪಾಲುದಾರರಾದ ಶ್ರೀ ಮಂಜಪ್ಪ ಎಚ್. ಎಸ್., ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶಾಂತಿ ಕಿರಣ್ ಎಂ. ಮತ್ತು ಸಿತಾಸ್ -ಎನ್‌ಡಿಟಿ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಆದ ಶ್ರೀ ಲೋಕೇಶ್ ಎಚ್. ಎಸ್. ಅವರು ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Madhu Bangarappa ಹೊಳೆಹೊನ್ನೂರು ವ್ಯಾಪ್ತಿಯಲ್ಲಿ ಮಳೆಗಾಳಿ ಹಾನಿಗೀಡಾದ ಅಡಿಕೆ ತೋಟಗಳ ಪರಿಹಾರಕ್ಕೆ ಪ್ಯಾಕೇಜ್ ಘೋಷಿಸಲು ನಿರ್ಣಯ- ಮಧು ಬಂಗಾರಪ್ಪ.

0

Madhu Bangarappa ಜಿಲ್ಲೆಯ ಹೊಳೆಹೊನ್ನೂರು ವ್ಯಾಪ್ತಿಯ ಮತ್ತು ಇತರೆ ಕೆಲವೆಡೆ ಇತ್ತೀಚೆಗೆ ಬಿರುಗಾಳಿ‌ ಮತ್ತು ಮಳೆಯಿಂದಾಗಿ ಅನೇಕ ರೈತರ ಅಡಿಕೆ ಮರಗಳು ಧರೆಗುರುಳಿ ಸಂಭವಿಸಿದ ಹಾನಿಗೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರದಂದು ಜಿ.ಪಂ. ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಮಾತನಾಡಿ, ಮಳೆಗಾಳಿ ಹಾನಿಗೆ ಎಕರೆಗೆ ರೂ. ೯೦೦೦ ನಿಗದಿಯಿಂದ ರೈತರಿಗೆ ಏನೂ ಉಪಯೋಗವಿಲ್ಲ. ಅಡಿಕೆ ಮರಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ, ಈ ಬೆಳೆ ನಷ್ಟಕ್ಕೆ ವಿಮೆ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಸೇರ್ಪಡೆಗೊಳಿಸಲು ಸಹ ಕ್ರಮ ಕೈಗೊಳ್ಳಬೇಕೆಂದರು.
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಗಾಳಿ‌ಮಳೆ ಯಿಂದ ರೈತರಿಗೆ ಪರಿಹಾರ ನೀಡಲು ಪರಿಹಾರ ಪೋರ್ಟಲ್ ಲ್ಲಿ ವರದಿ ದಾಖಲಿಸಿದ್ದು ಇನ್ನು ೧೫ ರಿಂದ ೨೦ ದಿನಗಳಲ್ಲಿ ಪರಿಹಾರ ಮಂಜೂರಾಗಲಿದೆ ಎಂದರು .
ಸಚಿವರು ಪ್ರತಿಕ್ರಿಯಿಸಿ, ಅಡಿಕೆ ಬೆಳೆ ಹಾನಿ‌ ಕುರಿತು ಈಗಾಗಲೇ ಮೌಲ್ಯ ಮಾಪನ‌ ಮಾಡಲಾಗಿದೆ. ಈ ಹಾನಿ ವಿಷಯ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕಿದೆ. ನಾನು ಮತ್ತು ಸಾಗರ ಶಾಸಕರು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಮನವಿ ಮಾಡಿದ್ದೇವೆ ಎಂದ ಅವರು ಕೇಂದ್ರ ಸರ್ಕಾರವೂ ಈ ಕುರಿತು ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸೋಣವೆಂದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ,ಮಲೆನಾಡು ಭಾಗದಲ್ಲಿ ಎಲೆಚುಕ್ಕಿ ರೋಗದಿಂದಾಗಿ ಸುಮಾರು ೪೦ ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ರೈತರು ೪-೫ ಕ್ವಿಂಟಾಲ್ ಬೆಳೆಯುವಂತಾಗಿದೆ. ಆದ್ದರಿಂದ ಎಲೆಚುಕ್ಕಿ ರೋಗ ನಿರ್ಮೂಲನೆಗೆ ಕ್ರಮ‌ವಹಿಸಬೇಕೆಂದು ಒತ್ತಾಯಿಸಿದರು.
Madhu Bangarappa ಸಚಿವರು ಪ್ರತಿಕ್ರಿಯಿಸಿ, ಎಲೆಚುಕ್ಕಿ ರೋಗ ನಿಯಂತ್ರಣ, ನಿರ್ಮೂಲನೆಗೆ ಸಂಶೋಧನೆಗಳು ನಡೆಯುತ್ತಿದ್ದು ಮುಂಬರುವ ವರ್ಷ ಎಲೆಚುಕ್ಕಿ ರೋಗಕ್ಕೆ ಔಷಧಿ ಬರಲಿದೆ ಎಂಬ ವಿಶ್ವಾಸ ಇದೆ ಎಂದರು.
ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು‌, ರಾಜ್ಯ ಸರ್ಕಾರ ಎಲೆಚುಕ್ಕಿ ರೋಗ ನಿಯಂತ್ರಣ ಕುರಿತು ಸಂಶೋಧನೆ, ಇತರೆ ಕ್ರಮಗಳ‌ ಮೂಲಕ ಪ್ರಯತ್ನಿಸುತ್ತಿದ್ದು ಶೀಘ್ರದಲ್ಲೇ ಪರಿಹಾರೋಪಾಯಕ್ಕೆ ಸರ್ಕಾರ ಬದ್ದವಾಗಿದೆ ಎಂದರು.
ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಗೆಸ್ಟ್ ಶಿಕ್ಷಕರನ್ನು ನೇಮಕವಮಾಡಲು ಆದೇಶಿಸಲಾಗುತ್ತಿದೆ ಪಿಯು ಗೆ ನೆನ್ನೆ ಆದೇಶ ಆಗಿದ್ದು, ಎಸ್ ಎಸ್ ಎಲ್ ಸಿ ಗೆ ಇಂದೇ ಆದೇಶ ಆಗಲಿದೆ ಎಂದರು.
ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದಕ್ಕೆ ಶಾಲಾ ಶಿಕ್ಷಣ ಸಚಿವರಿಗೆ ಹಾಗೂ ಜಿ.ಪಂ‌ ಸಿಇಓ ಅವರ ಕಾರ್ಯವೈಖರಿಗೆ ಶಾಸಕರು ಸಭೆಯಲ್ಕಿ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷರಾದ ಆರ್ ಎಂ‌ ಮಂಜುನಾಥ್ ಗೌಡ, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಮಟ್ಟದ ಅಧಿಕಾರಿಗಳು,
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ‌ ಸಿಇಓ‌ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಎಸ್ ಪಿ ಕಾರಿಯಪ್ಪ, ಜಿ.ಪಂ ಉಪ ಕಾರ್ಯದರ್ಶಿಗಳು, ಸಿಪಿಓ, ಇತರೆ ಅಧಿಕಾರಿಗಳು ಹಾಜರಿದ್ದರು.

MESCOM ಮೇ 26 & 27 ರಂದು ಶಿವಮೊಗ್ಗದ ಎ.ಎನ್.ಕೆ ರಸ್ತೆ,ಜೈಲ್ ರಸ್ತೆ, ಚನ್ನಪ್ಪ ಲೇಔಟ್ ಸುತ್ತಮುತ್ತ ವಿದ್ಯುತ್‌ ಸರಬರಾಜು ವ್ಯತ್ಯಯ.

0

MESCOM ಶಿವಮೊಗ್ಗ ನಗರ ಉಪವಿಭಾಗ-1 ಘಟಕ-2ರ ವ್ಯಾಪ್ತಿಯಲ್ಲಿ ಮೇ 26 ಮತ್ತು 27 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಎ.ಎನ್.ಕೆ ಮುಖ್ಯ ರಸ್ತೆ, ಜೈಲ್ ರಸ್ತೆ, ಚನ್ನಪ್ಪ ಲೇಔಟ್, ಅಚ್ಯುತ್‌ರಾವ್ ಲೇಔಟ್, ವೆಂಕಟೇಶ ನಗರ, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

JCI Shimoga Malnadವಸ್ತು ಪ್ರದರ್ಶನ ಮತ್ತು ಫೆಸ್ಟಿವಲ್ ಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಮಹಿಳಾ ಸಬಲೀಕರಣ- ರೇಖಾ ರಂಗನಾಥ್.

0

JCI Shimoga Malnad ಮ್ಯಾಂಗೋ ಫುಡ್ ಫೆಸ್ಟಿವಲ್ ಉದ್ಘಾಟನೆ- ಮಹಿಳಾ ಸಬಲೀಕರಣಕ್ಕೆ ವಸ್ತು ಪ್ರದರ್ಶನಗಳು ಅತ್ಯವಶ್ಯಕ- ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್

ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಮೂರು ದಿನಗಳ ಕಾಲ ಜೆಸಿಐ ಶಿವಮೊಗ್ಗ ಭಾವನಾ ಹಾಗೂ ಶ್ರೀ ಸಾಯಿ ಇವೆಂಟ್ಸ್ ರವರು ಆಯೋಜಿಸಿರುವ ಮ್ಯಾಂಗೋ ಫುಡ್ ಫೆಸ್ಟಿವಲ್ ಮತ್ತು ಜೀವನಶೈಲಿ ವಸ್ತು ಪ್ರದರ್ಶನವನ್ನು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ಉದ್ಘಾಟಿಸಿದರು

JCI Shimoga Malnad ನಂತರ ಮಾತನಾಡಿದ ಅವರು ವಸ್ತುಪ್ರದರ್ಶನಗಳಿಂದ ಮಹಿಳೆಯರ ಸಬಲೀಕರಣ ಉನ್ನತಿ ಕಾಣುವುದರೊಂದಿಗೆ ಮಹಿಳೆಯರು ಸಕ್ರಿಯವಾಗಿ ಇಂತಹ ವಸ್ತು ಪ್ರದರ್ಶನ ಮತ್ತು ಫೆಸ್ಟಿವಲ್ ಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢತೆ ಹೆಚ್ಚಾಗಿ ಯಶಸ್ಸಿನ ಸಾಧನೆ ಮಾಡಲು ಅನುಕೂಲಕರವಾಗಿದೆ. ಮೂರು ದಿನಗಳ ಕಾಲ ಆಯೋಜಿಸಿರುವ ಮ್ಯಾಂಗೋ ಫುಡ್ ಫೆಸ್ಟಿವಲ್ ನಲ್ಲಿ ರುಚಿಕರವಾದ ಖಾದ್ಯಗಳು ,ತಿಂಡಿ ತಿನಿಸುಗಳು ಮನೆಯಿಂದಲೇ ಗೃಹಿಣಿಯರು ತಯಾರು ಮಾಡಿದ ಆಹಾರ ಪದಾರ್ಥಗಳನ್ನು ಶಿವಮೊಗ್ಗ ನಗರದ ನಾಗರಿಕ ಬಂಧುಗಳು ಸವಿದು, ಗೃಹ ಉಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ವಿಶೇಷ ಕಲಾಕೃತಿಗಳ ವಸ್ತು ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡು ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲಿಸಬೇಕು ಎಂದರು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಸಂಸ್ಥೆಯ ಪೂರ್ವ ವಲಯ ಅಧ್ಯಕ್ಷರಾದ ಗೌರೀಶ್ ಭಾರ್ಗವ್, ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷರಾದ ಕರಿಬಸಮ್ಮ ಆನಂದ್, ಶ್ರೀ ಸಾಯಿ ಇವೆಂಟ್ಸ್ನ ಸೋಮೇಶ್, ರಾಜೇಶ್ವರಿ, ರುದ್ರೇಶ್, ಪ್ರಮುಖರಾದ ಗಣೇಶ್ ಪೈ, ಸುಶೀಲ ಷಣ್ಮುಗಂ ಹಾಗೂ ಇತರರು ಇದ್ದರು

Shimoga News ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಬ್ರಹ್ಮಾಂಡದ ಮೂಲಶಕ್ತಿಯನ್ನಾಗಿ ಸ್ತ್ರೀ ಆರಾಧನೆಯಿದೆ- ಡಾ.ಆಕಾಶ್ ಹೊಸತೋಟ.

0

Shimoga News ಭಾರತೀಯ ಸಂಸ್ಕೃತಿಯಲ್ಲಿ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ, ಲಯಗಳಿಗೆ ಸ್ತ್ರೀ ಶಕ್ತಿಯೇ ಆಧಾರ ಎಂಬ ನಂಬಿಕೆ ಇದೆ. ನಮ್ಮ ಸಂಸ್ಕೃತಿ ಮಾತ್ರ ಬ್ರಹ್ಮಾಂಡದ ಮೂಲಶಕ್ತಿಯನ್ನು ಸ್ತ್ರೀಶಕ್ತಿಯನ್ನಾಗಿ ಆರಾಧಿಸುವ ಮೂಲಕ ಆದಿಶಕ್ತಿಗೆ ಮಹತ್ವದ ಸ್ಥಾನ ನೀಡಿದೆ ಎಂದು ಸನ್ ಸ್ಪೆಷಲಿಟಿ ಹಾಸ್ಪಿಟಲ್ ವೈದ್ಯಕೀಯ ನಿರ್ದೇಶಕ, ಬೆನ್ನು ಹುರಿ ಮತ್ತು ಮೂಳೆತಜ್ಞ ಡಾ. ಆಕಾಶ್ ಹೊಸತೋಟ ಹೇಳಿದರು

ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ಶ್ರೀದುರ್ಗಾ ಶಕ್ತಿ, ಸಪ್ತಶತಿ, ಋಷಿ ಪ್ರಜ್ಞಾ ಆಂದೋಲನ ಭಾಗವಾಗಿ ಇಲ್ಲಿನ ತಿಲಕ್ ನಗರದಲ್ಲಿರುವ ಸನ್ ಸ್ಪೆಷಾಲಿಟಿ ಹಾಸ್ಪಿಟಲ್‌ನ ಧನ್ವಂತರಿ ಸಭಾಂಗಣದಲ್ಲಿ ಇಂದು ಶುಕ್ರವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ದುರ್ಗಾ ಸಪ್ತಶತೀ ಪೂರ್ಣ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಕಲ ದೇವತೆಗಳ ಮೂಲವಾದ ಆದಿಶಕ್ತಿಯು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೂ ಶಕ್ತಿಯನ್ನು ನೀಡುವ ಮೂಲ ಶಕ್ತಿದಾಹಿಯಾಗಿದ್ದಾಳೆ. ದೇವೀ ಮಹಾತ್ಮದ ಪ್ರಕಾರ ಮಹಾಕಾಳಿಯು ಶಕ್ತಿ- ಧೈರ್ಯ, ಮಹಾಲಕ್ಷಿö್ಮಯು ಸಂಪತ್ತು- ಸಮೃದ್ಧಿ ಮತ್ತು ಸರಸ್ವತಿಯು ಜ್ಞಾನ- ಬುದ್ಧಿ ಎಂಬ ಮೂರು ರೂಪಗಳಲ್ಲಿ ಜಗತ್ತನ್ನು ಪಾಲಿಸುತ್ತಾಳೆ ಎಂದು ತಿಳಿಸಿದರು.

Shimoga News ಮಾತೃಶಕ್ತಿ ಜಾಗೃತಿಯಾಗಲು ಮನಸ್ಸು ಮತ್ತು ಬುದ್ಧಿಯನ್ನು ಬೆಳಗುತ್ತಿರುವ ದೇವಿಯನ್ನು ಪೂಜಿಸಬೇಕು. ಮಾತೃಶಕ್ತಿ ಜಾಗೃತಿಯಾದರೆ ಮಾತ್ರ ಭಾರತದ ಸಂಸ್ಕೃತಿ ಉಳಿಯುತ್ತದೆ. ಹೀಗಾಗಿ ಮಾತೃಶಕ್ತಿ ಉದ್ದೀಪನಕ್ಕಾಗಿ ಶ್ರೀ ದುರ್ಗಾ ಸಪ್ತಶತೀ ಪೂರ್ಣ ಪಾರಾಯಣ ನಡೆಸಲಾಗುತ್ತಿದೆ ಎಂದು ನುಡಿದರು.

ನಮ್ಮ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆ ಜೀವಂತವಾಗಿದೆ. ಮಾತೃಶಕ್ತಿ ಜಾಗೃತವಾಗದೆ ಮೌಲ್ಯಯುತ ಒಳ್ಳೆಯ ಕುಟುಂಬ ವ್ಯವಸ್ಥೆ ಸಾಧ್ಯವಿಲ್ಲ. ಕುಟುಂಬದ ಸದಸದ್ಯರ ನಡುವೆ ಪ್ರೀತಿ- ಬಾಂಧವ್ಯ ಮುಖ್ಯ. ಮೊಬೈಲ್ ಮೂಲಕ ಭಾವನೆಗಳನ್ನು ಹಂಚಿಕೊಳ್ಳುವ ಬದಲು ಕುಟುಂಬದವರೊAದಿಗೆ ಕುಳಿತು ಭಾವನೆಯನ್ನು ಹಂಚಿಕೊಳ್ಳುವAತಾಗಬೇಕು ಎಂದು ಆಶಿಸಿದರು

ಖ್ಯಾತ ಉದ್ಯಮಿ ಹೊಸತೋಟ ಸೂರ್ಯನಾರಾಯಣ್, ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ಶ್ರೀದುರ್ಗಾ ಶಕ್ತಿ, ಸಪ್ತಶತಿ, ಋಷಿ ಪ್ರಜ್ಞಾ ಆಂದೋಲನದ ಪ್ರಮುಖರಾದ ನರೇಂದ್ರ ಕುಮಾರ್ ಶರ್ಮಾ, ಸಹ ಪ್ರಮುಖ್ ದುರ್ಗಾ ಪ್ರಸಾದ್, ಪ್ರಕಾಶ್ ಗುಬ್ಬಿ, ಎಸ್.ಎನ್. ಕಲಾ ಸೇರಿದಂತೆ ಪಾರಾಯಣ ಬಂಧುಗಳು ಭಾಗವಹಿಸಿದ್ದರು.