Thursday, August 6, 2026
Thursday, August 6, 2026
Home Blog Page 81

ಜೂನ್ 2. ಇರುವಕ್ಕಿಯಲ್ಲಿ “ಅಡಿಕೆ ಕೃಷಿ: ಸಮಗ್ರ ನಿರ್ವಹಣೆ”. ಒಂದು ದಿನದ ಕಾರ್ಯಾಗಾರ

0

University of Agricultural ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಶಿವಮೊಗ್ಗ), ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆಯು “ಅಡಿಕೆ ಕೃಷಿಯ ಸಮಗ್ರ ಬೇಸಾಯ”
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ “ರೈತರ ತರಬೇತಿ ಸಂಸ್ಥೆ, ವರದಾ ಬ್ಲಾಕ್, ನೆಲ ಮಹಡಿ, ಇರುವಕ್ಕಿ” ಯಲ್ಲಿ ದಿನಾಂಕ: 02.06.2026 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.

ಈ ತರಬೇತಿ ಕಾರ್ಯಕ್ರಮವು ಉಚಿತವಾಗಿದ್ದು, ಮೊದಲು ನೋಂದಾಯಿಸಿದ 50 ರೈತರಿಗೆ ಆದ್ಯತೆ ನೀಡಲಾಗುವುದು. ಆದುದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

University of Agricultural ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9958324261/ 8618715599 / 9448312978

ಮೇ 31. ಶಿವಮೊಗ್ಗದ ಆಲ್ಕೊಳ, ಎಸ್.ಎಲ್.ವಿ. ಬಡಾವಣೆ, ಗಜಾನನ ಲೇ ಔಟ್ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12 ಮತ್ತು 13ರ ವ್ಯಾಪ್ತಿಯಲ್ಲಿ ಮೇ 31 ರಂದು ಬೆಳಗ್ಗೆ 09.00 ರಿಂದ ಮಧ್ಯಾಹ್ನ 1.00 ರವರೆಗೆ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಆಲ್ಕೋಳ, ಎಸ್.ಎಲ್.ವಿ. ಬಡಾವಣೆ, ಗಜಾನನ ಲೇಔಟ್, ಐಶ್ವರ್ಯ ಬಡಾವಣೆ, ಜೆ.ಹೆಚ್. ಪಟೇಲ್ ಬಡಾವಣೆ ಎ ರಿಂದ ಎಫ್ ಬ್ಲಾಕ್, ಮುನಿಯಪ್ಪ ಲೇಔಟ್, ಸಂಗೋಳ್ಳಿ ರಾಯಣ್ಣ ಬಡಾವಣೆ, ಆದರ್ಶ ನಗರ, ಸಹ್ಯಾದ್ರಿನಗರ, ಸೋಮಿನಕೊಪ್ಪ, ವಿಜಯಲಕ್ಷ್ಮೀ ಲೇಔಟ್, ಸೋಮನಾಥ ಬಡಾವಣೆ, ನಿಸರ್ಗ ಲೇಔಟ್, ಹೊಂಗಿರಣ ಬಡಾವಣೆ, ಸೋಮಿನಕೊಪ್ಪ ಗೆಜ್ಜೆನಹಳ್ಳಿ, ಅಂಬೇಡ್ಕರ್ ಕಾಲೋನಿ, ಹನುಮಂತನಗರ, ಜಕಾತಿಕೊಪ್ಪ, ಭೈರವಕೊಪ್ಪ, ದೇವಕಾತಿಕೊಪ್ಪ ಹಾಗೂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಚಾರಣದಿಂದ ದೇಶದ ವಿವಿಧ ಜನರನಾಡಿ ಮಿಡಿತದ ಅರಿವು- ವೇಣುಗೋಪಾಲ್

0

ಜೀವನ ಎಂದರೆ ನಮ್ಮ ಕುಟುಂಬ ಮಾತ್ರವಲ್ಲ, ದೇಶದ ಎಲ್ಲಾ ಪ್ರದೇಶದ ಅರಿವು ಮೂಡಿಸಿಕೊಳ್ಳಲು ಪ್ರವಾಸದಿಂದ ಮಾತ್ರ ಸಾದ್ಯ ಎಂದು ವೇಣುಗೋಪಾಲ್ ರವರು ರೋಟರಿ ಜ್ಯೂಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅತ್ಯಂತ ಕಡಿಮೆ ಖರ್ಚಿನಲ್ಲಿ ಯೂತ್ ಹಾಸ್ಟೆಲ್ಸ್ ಮೂಲಕ ಚಾರಣ ಮಾಡಿ, ದೇಶದ ಎಲ್ಲಾ ಮೂಲೆಗಳನ್ನು ಸುತ್ತಿ ಅಲ್ಲಿಯ ಜನರ ನಾಡಿ ಮಿಡಿತ ಅರಿತುಕೊಳ್ಳಲು ಸಾದ್ಯವಾಗಿದೆ.
ನಾವು ನಮ್ಮ ಕುಟುಂಬ ಎಂದು ಇದ್ದರೆ ಸಾಲದು, ಜೀವನದಲ್ಲಿ ಎಲ್ಲಾತರಹದ ಜನರ ಸಂಪರ್ಕಹೊಂದಿ, ಅವರ ಬವಣೆ, ಅಲ್ಲಿಯ ಪರಿವರ್ಣ ಆಸ್ವಾದಿಸಿ, ಅನುಭವಿಸಿದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ. ಪ್ರವಾಸದಲ್ಲಿ ಎಲ್ಲಾ ವಿದದ್ದಲ್ಲಿ ಪರಿವೀಕ್ಷಿಸಬೇಕು, ಈಶಾನ್ಯ ರಾಜ್ಯದ ಜನ ಜೀವನ ಅತ್ಯಂತ ಕಷ್ಟಕರ, ಆರ್ಥಿಕ ಮುಗ್ಗಟ್ಟು ಆದರೂ ಅವರು ಜೀವನದಲ್ಲಿ ಉತ್ತಮ ನಡುವಳಿಕೆ, ನಿಯತ್ತು, ನ್ಯಾಯ, ಕಾನೂನು ಪಾರಿಪಾಲನೆಗಳನ್ನು ನೋಡಿ ನಾವು ಕಲಿಯಬೇಕು.
ಛತ್ತಿಸ್ ಘಡದಲ್ಲಿ ಪ್ರವಾಸದಲ್ಲಿ ನೋಡಿದ ದೃಷ್ಯ, ಕಾಡಿನಲಗಲಿ ಮರದಿಂದ ಹೂ ಬೀಳುತ್ತಿದ್ದವು, ಅವುಗಳನ್ನು ಆರಿಸಿ ಕೊಳ್ಳಲು ಹಲವರಿ ಇದ್ದರು. ಟ್ಯಾಕ್ಸಿ ಚಾಲಕ ಈ ಹೂವಿನಲ್ಲಿ ಸಿಹಿ ಇರುತ್ತದೆ, ಅದರಿಂದ ಸ್ಥಳಿಯ ಸಿಹಿ ಪದಾರ್ಥ ತಯಾರು ಮಾಡುತ್ತಾರೆ ಎಂದರು. ನಾನು ಅದರ ರುಚಿ ನೋಡಿದೆ, ಜೇನಿಗಿಂತ ಸಿಹಿ. ಅದರ ಸವಿ ಸವಿಯಲು ಕಾಡಿನಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳು ಬರುವುದನ್ನು ನೋಡುವುದೇ ಒಂದು ಸುಂದರ ಅನುಭವ ಎಂದು ವರ್ಣಿಸಿದರು.
ಚಾರಣದಲ್ಲಿ ಹೊಸಬರ ಪರಿಚಯ ವಾಗುತ್ತದೆ, ಇದರಿಂದ ವ್ಯಾಪಾರ ವ್ಯವಹಾರ ವೃದ್ಧಿಮಾಡಿಕೊಳ್ಳಬಹುದು ಹಾಗೂ ಎಲ್ಲಾ ತರಹದ ಉದ್ಯೋಗಿಗಳ ಪರಿಚಯವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ ಇದರಿಂದ ಹಲವಾರು ವಿಸ್ಮಯ ಪ್ರದೇಶ ನೋಡ ಬಹುದು. ಕೇರಳದಲ್ಲಿ ಸಮುದ್ರ ಮಟ್ಟಕ್ಕಿಂತ ಕೆಳಗಿನ ಪ್ರದೇಶದಲ್ಲಿ ತಾವರೆ ಹೂವಿನ ವಿಶೇಷತೆ ಅರಿಯಲ್ಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಹಿಮಾಲಯದ ಬೆಟ್ಟ ಗುಡ್ಡದಲ್ಲಿ ನಡೆದಾಡುವುದರಿಂದ ಎಲ್ಲರಲ್ಲಿಯೂ ಆತ್ಮ ಸ್ಥರ್ಯಹೊರಹೊಮ್ಮುತ್ತದೆ ಹಾಗೂ ದೃಡ ಸಂಕಲ್ಪ, ಮನಃಶಾಂತಿ ಹುಮ್ಮಸ್ಸು ಸದಾ ತಮ್ಮೊಂದಿಗೆ ಇರುತ್ತದೆ ಎಂದರು.
ಅಧ್ಯಕ್ಷ ಬಿ.ಎಸ್‌.ಅಶ್ವಥ್ ಸ್ವಾಗತಿಸಿದರು, ಎಸ್.ಎಸ್.ವಾಗೇಶ್ ಪ್ರಾಸ್ಥಾವಿಕ ನುಡಿ ನುಡಿದರು, ವಿನಯ್ ವಂದಿಸಿದರು. ಪ್ರವೀಣ್, ಲಕ್ಷ್ಮೀನಾರಾಯಣ್, ಉಮಾದೇವಿ, ವೆಂಕಟೇಶ್ ನಾಯ್ಕ್, ಉಮೇಶ್, ರಾಜಶೇಖರ್ ಮುಂತಾದವರು ಇದ್ದರು.

ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣಾ ಮಹಾ ಅಭಿಯಾನಕ್ಕೆ ಸಕ್ರಿಯ ಚಾಲನೆ

0

ಬಿಜೆಪಿ ಶಿವಮೊಗ್ಗ ಜಿಲ್ಲೆ ವತಿಯಿಂದ ನಗರದ ಶುಭಶ್ರೀ ಕಲ್ಯಾಣ ಮಂದಿರದಲ್ಲಿ ಇಂದಿನಿಂದ ಹಮ್ಮಿಕೊಳ್ಳಲಾಗಿರುವ “ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ರ ಜಿಲ್ಲಾ ಮಟ್ಟದ ಮಹತ್ವದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಗಣ್ಯತಿ ಗಣ್ಯರು ಜಂಟಿಯಾಗಿ ಜ್ಯೋತಿ ಬೆಳಗುವ ಮೂಲಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಪಕ್ಷದ ಸದ್ಧಾಂತಿಕ ಹಿನ್ನೆಲೆ, ಸಂಘಟನಾತ್ಮಕ ಮೌಲ್ಯಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ತಳಮಟ್ಟದ ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಈ ಪ್ರಶಿಕ್ಷಣ ವರ್ಗಗಳು ದಿಕ್ಸೂಚಿಯಾಗಿವೆ. ಏಕಾತ್ಮ ಮಾನವತಾವಾದದ ಪ್ರಣೇತೃ ಪಂ. ದೀನದಯಾಳ್ ಉಪಾಧ್ಯಾಯ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇದು ಸಹಕಾರಿಯಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಕೆ ಜಗದೀಶ್, ಸಂಸದರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಬಿ ವೈ ರಾಘವೇಂದ್ರ, ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪ, ಶಾಸಕರಾದ ಶ್ರೀ ಎಸ್.ಎನ್ ಚನ್ನಬಸಪ್ಪ, ವಿಧಾನಪರಿಷತ್ ಮುಖ್ಯ ಸಚೇತಕರಾದ ಶ್ರೀ ಎನ್.ರವಿಕುಮಾರ್, ವಿಧಾನ ಪರಿಷತ್ ಶಾಸಕರಾದ ಶ್ರೀ ಅಮರನಾಥ ಪಾಟೀಲ್, ಶ್ರೀ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಶ್ರೀ ಕೆ ಬಿ ಅಶೋಕ್ ನಾಯ್ಕ್, ಶ್ರೀ ಕೆ. ಜಿ ಕುಮಾರಸ್ವಾಮಿ, ರಾಜ್ಯ ಪ್ರಕೋಷ್ಟಗಳ ಸಂಚಾಲಕರಾದ ಶ್ರೀ ಎಸ್. ದತ್ತಾತ್ರಿ, ದಾವಣಗೆರೆ ವಿಭಾಗ ಪ್ರಭಾರಿ ಶ್ರೀ ಟಿ.ಡಿ ಮೇಘರಾಜ್, ಶ್ರೀ ಆರ್ ಡಿ ಹೆಗ್ಡೆ ಪಕ್ಷದ ಹಾಗೂ ವಿವಿಧ ಸ್ಥರದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಆಗಮಿಸಿರುವ ಪಕ್ಷದ ಪ್ರಮುಖ ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಈ ಎರಡು ದಿನಗಳ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

Klive Special Article ಶೈವ ಭಕ್ತಿ ಪರಂಪರೆಯ ಶಿಲ್ಪ: ಯಲವಳ್ಳಿ ಸನಿಹ ಪಾಳು ಶಿವ ದೇಗುಲ ಪತ್ತೆ- ದಿಲೀಪ್ ನಾಡಿಗ್

0

Klive Special Article ಲಿಂಗ ರೂಪಿ ಮಹಾಶಿವ.
(ಯಲವಳ್ಳಿ) ಕೋಹಳ್ಳಿ,‌ಆಯನೂರಿನಲ್ಲಿ ದೊರೆತಿರುವ ಲಿಂಗವು ಕ್ರಿ.ಶ. 8ನೇ–12ನೇ ಶತಮಾನಗಳ ಮಧ್ಯಕಾಲೀನ ಅವಧಿ
ವಿಶೇಷವಾಗಿ ಕದಂಬ / ಗಂಗ / ಆರಂಭಿಕ ಹೊಯ್ಸಳ ಶೈಲಿಯಲಿಂಗವಾಗಿದ್ದು ಗ್ರಾಮೀಣಭಾಗದ ಶೈವಾಗಮದ ಆಚರಣೆಯ ಭಾಗವಾಗಿರುವ ಲಿಂಗವಾಗಿರುವ ಸಾಧ್ಯತೆ ಇದೆ. ಕಾರಣ ಲಿಂಗದ ಆಕಾರ ತುಂಬಾ ಸರಳ ಮತ್ತು ಅಲಂಕಾರರಹಿತವಾಗಿದೆ.
ಮೇಲ್ಭಾಗವು ವೃತ್ತಾಕಾರ ಮತ್ತು ದೇಹ ಭಾಗವು ದಪ್ಪವಾಗಿದೆ.
ಯೋನಿಪೀಠ ಸರಳ ಕಲ್ಲಿನ ರೂಪದಲ್ಲಿದೆ.
ದೇವಾಲಯದ ಗರ್ಭಗುಡಿಯೊಳಗೆ ಅಲ್ಲದೆ ಹೊರಭಾಗದಲ್ಲಿ ಉಳಿದಿರುವುದು ಪುರಾತನ ಗ್ರಾಮ ದೇವಾಲಯ ಅವಶೇಷದ ಲಕ್ಷಣವಾಗಿದೆ.
ಇದರ ವಿಶೇಷತೆಗಳು
ಏಕಶಿಲಾ ನಿರ್ಮಿತಿ
ಲಿಂಗ ಮತ್ತು ಪೀಠ ಒಂದೇ ಕಲ್ಲಿನಲ್ಲಿ ರೂಪಿಸಿರುವ ಸಾಧ್ಯತೆ ಇದ್ದು
ಇದು ಹಳೆಯ ಶೈವ ಪರಂಪರೆಯಲ್ಲಿ ಸಾಮಾನ್ಯವಾಗಿ ಕಡಣಬಹರುವ
ಗ್ರಾಮೀಣ ಶೈವ ಆರಾಧನೆಯ ಲಿಂಗವಾಗಿದೆ. ಇಂತಹ ಲಿಂಗಗಳು ಸಾಮಾನ್ಯವಾಗಿ:
ಕೃಷಿ ಪ್ರದೇಶಗಳಲ್ಲಿ
ಕೆರೆ ಅಥವಾ ಹೊಳೆ,
ಪುರಾತನ ಹಳ್ಳಿ ಕೇಂದ್ರಗಳಲ್ಲಿ ಕಾಣಿಸುತ್ತವೆ. ಇಂತಹದ್ದೇ ಇಂದು ಪುರಾತನ ಕಾಲದ ಹಳ್ಳಿ ಯಲವಳ್ಳಿ, ಶಿವಮೊಗ್ಗದಿಂದ ಕೇವಲ ಹದಿನೈದು ಕಿ.ಮಿ.‌ದೂರದಲ್ಲಿರುವ ಯಲವಳ್ಳಿ, ಕೋ ಹಳ್ಳಿ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ. ಈ ಯಲವಳ್ಳಿಯು ಪುರಾತನ ಗ್ರಾಮ ವಾಗಿದ್ದು ಇಂದು ಈ ಶಿವನ ದೇವಾಲಯದ ಕುರುಹು ಒಂದನ್ನು ಬಿಟ್ಟು ಜನವಸತಿಯ ಕುರುಹುಗಳು ನಾಮಾವಶೇಷವಾಗಿದೆ. ಇದನ್ನು ಈಗ ಹಾಳೂರು ಏಂದೇ ಕರೆಯಲಾಗುತ್ತಿದೆ. ಈ ಲಿಂಗವು
ಮಾನವ ನಿರ್ಮಿತ ಲಿಂಗವಾಗಿದ್ದು
ಇದರ (ಸಿಲಿಂಡರ್) ಆಕಾರ ಸಮತಟ್ಟಾಗಿ ಕತ್ತರಿಸಿರುವಂತೆ ಕಾಣುತ್ತದೆ.
ಪಕ್ಕದಲ್ಲಿರುವ ನಂದಿ ಅವಶೇಷ
ಹಿಂಭಾಗದಲ್ಲಿರುವ ಸಣ್ಣ ಕಲ್ಲು ನಂದಿಯ ತುಂಡಾಗಿದ್ದು
ಇದರಿಂದ ಇದು ಪೂರ್ಣ ಶಿವಾಲಯದ ಭಾಗವಾಗಿದ್ದಿರಬಹುದು ಎಂದು
ಸಂಶೋಧನಾ ದೃಷ್ಟಿಯಿಂದ ಗಮನಿಸಬೇಕು.

Klive Special Article ಹಳೆಯ ಇಟ್ಟಿಗೆ/ಕಲ್ಲಿನ ಅಡಿಪಾಯವಿದ್ದು ಯಾವುದೇ ಶಾಸನವು ಇರುವುದಿಲ್ಲ.
ಅನತಿ ದೂರದಲ್ಲಿ
ಕೆರೆ ಇದ್ದು ಪುರಾತನ ದಾರಿ ಇರುವುದರಿಂದ ಇದು ಒಂದು ಸಣ್ಣ ಮಧ್ಯಕಾಲೀನ ಶಿವಕ್ಷೇತ್ರವಾಗಿರಬಹು ದು ಎಂದು ಅಂದಾಜಿಸಬಹುದು. ಲಿಂಗದ ಮೂಲ ರೂಪವಿನ್ಯಾಸ
ದಲ್ಲಿ ಕಾಣುವ ಪ್ರಮುಖ ಭಾಗಗಳು:
ಬ್ರಹ್ಮಭಾಗ (ಕೆಳಭಾಗ) – ಸಾಮಾನ್ಯವಾಗಿ ಚೌಕಾಕಾರವಾಗಿರುತ್ತದೆ, ಆದರೆ ಇಲ್ಲಿ ಮಣ್ಣಿನೊಳಗೆ ಭಾಗಶಃ ಮುಚ್ಚಿದೆ.
ವಿಷ್ಣುಭಾಗ (ಮಧ್ಯಭಾಗ) – ಅಷ್ಟಭುಜ ಅಥವಾ ಮೃದುವಾದ ವೃತ್ತಾಕಾರ ರೂಪ.
ರುದ್ರಭಾಗ (ಮೇಲ್ಭಾಗ) ಗೋಚರಿಸುವ (ಸಿಲಿಂಡರ್) ಆಕಾರದ
ಲಿಂಗವು ಹೆಚ್ಚು ಎತ್ತರಕ್ಕಿಂತ ದಪ್ಪದ ಅನುಪಾತ ಹೊಂದಿದೆ. ಇದು ಆರಂಭಿಕ ಮಧ್ಯಕಾಲೀನ ಲಿಂಗಗಳ ಪ್ರಮುಖ ಲಕ್ಷಣವಾಗಿದೆ. ಶಿಲ್ಪಶೈಲಿ ಲಕ್ಷಣಗಳು
ಅಲಂಕಾರರಹಿತ ಸರಳತೆಯನ್ನು ಹೊಂದಿದೆ.
ಶಾಸ್ತ್ರೀಯ ಮಾಪನ ಅಲಂಕಾರ ಕಡಿಮೆಇದ್ದು
ಇವುಗಳಿಂದ
ಗ್ರಾಮೀಣ ಭಾಗದ ಶೈವ ಭಕ್ತಿ ಪರಂಪರೆಯ ಶಿಲ್ಪ ಎಂಬುದು ಗೋಚರಿಸುತ್ತದೆ.

ದಿಲೀಪ್ ನಾಡಿಗ್
ಪರಂಪರಾ, ವೇದ, ವಿಜ್ಞಾನ, ಇತಿಹಾಸ.
6361124316
9448148710

Department of Horticulture ತೋಟಗಾರಿಕೆ ಇಲಾಖೆ ಅಂಗಾಶ ಕೃಷಿ ಬಾಳೆ ಬೇಸಾಯಕ್ಕೆ ಕೃಷಿಕರು ಮುಂದಾಗಬೇಕು. ತೋಟಗಾರಿಕಾ ಇಲಾಖೆಯಿಂದ ಮಹತ್ವದ ಮಾಹಿತಿ

0

Department of Horticulture ಬಾಳೆ ಹಣ್ಣು ದೇಶದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಇದರ ಉತ್ಪಾದಕತೆಯನ್ನು ಹೆಚ್ಚಿಸಲು ಸಾಂಪ್ರದಾಯಿಕ ಬಾಳೆ ಕಂದುಗಳ ಬದಲಿಗೆ ವೈಜ್ಞಾನಿಕ ತಂತ್ರಜ್ಞಾನದ ಅಂಗಾಂಶ ಕೃಷಿ (Tissue Culture) ಬಾಳೆ ಸಸಿಗಳನ್ನು ಬಳಸುವಂತೆ ತೋಟಗಾರಿಕೆ ಇಲಾಖೆ ರೈತರಲ್ಲಿ ವಿನಂತಿಸಿದೆ.

​ಭಾರತದಲ್ಲಿ ವಾರ್ಷಿಕವಾಗಿ 9.00 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 383.00 ಲಕ್ಷ ಮೆಟ್ರಿಕ್ ಟನ್ ಬಾಳೆ ಉತ್ಪಾದನೆಯಾಗುತ್ತಿದ್ದು, ಪ್ರತಿ ಹೆಕ್ಟೇರ್‌ಗೆ 42.00 ಮೆಟ್ರಿಕ್ ಟನ್ ಉತ್ಪಾದಕತೆ ಇದೆ. ಆದರೆ, ಕರ್ನಾಟಕದಲ್ಲಿ 46.00 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೇವಲ 12.00 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದ್ದು, ಪ್ರತಿ ಹೆಕ್ಟೇರ್‌ಗೆ ಉತ್ಪಾದಕತೆ ಕೇವಲ 26.00 ಮೆಟ್ರಿಕ್ ಟನ್‌ಗಳಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ರೈತರಲ್ಲಿ ಸಮರ್ಪಕ ಮಾಹಿತಿಯ ಕೊರತೆಯಿಂದಾಗಿ ಇಂದಿಗೂ ಹಳೆಯ ಹಾಗೂ ಸಾಂಪ್ರದಾಯಿಕ ಬಾಳೆ ಕಂದುಗಳನ್ನು ನಾಟಿ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ರಾಜ್ಯದಲ್ಲಿ ಬಾಳೆ ಇಳುವರಿಯನ್ನು ಹೆಚ್ಚಿಸಲು ತೋಟಗಾರಿಕೆ ಇಲಾಖೆಯು ರೈತರಿಗೆ ಸುಧಾರಿತ ತಂತ್ರಜ್ಞಾನದ ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಬಾಳೆ ಸಸಿಗಳನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ. ರೈತರು ಸಾಮಾನ್ಯವಾಗಿ ಬಳಸುವ ಸಾಂಪ್ರದಾಯಿಕ ಬಾಳೆ ಕಂದುಗಳಿಗೂ ಮತ್ತು ವೈಜ್ಞಾನಿಕವಾಗಿ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗುವ ಅಂಗಾಂಶ ಕೃಷಿ ಸಸಿಗಳಿಗೂ ಇರುವ ಪ್ರಮುಖ ಹದಿಮೂರು (13) ವ್ಯತ್ಯಾಸಗಳನ್ನು ಇಲಾಖೆಯು ರೈತರ ಮಾಹಿತಿಗಾಗಿ ಬಿಡುಗಡೆ ಮಾಡಿದೆ.

​ಗಿಡಗಳ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ:

ಸಾಂಪ್ರದಾಯಿಕ ಬಾಳೆ ಕಂದುಗಳನ್ನು ಬಳಸಿದಾಗ ತೋಟದಲ್ಲಿ ರೋಗ ಮತ್ತು ಕೀಟಗಳು ಅತಿ ಶೀಘ್ರವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಅಂಗಾಂಶ ಕೃಷಿ ಸಸಿಗಳು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಬೆಳೆಯುವುದರಿಂದ ಅವು ಸಂಪೂರ್ಣವಾಗಿ ರೋಗರಹಿತ ಮತ್ತು ಆರೋಗ್ಯಕರವಾಗಿರುತ್ತವೆ. ಗಿಡಗಳ ಜೀವಂತಿಕೆಯ ಪ್ರಮಾಣವೂ ಅಂಗಾಂಶ ಕೃಷಿಯಲ್ಲಿ ಹೆಚ್ಚಾಗಿದ್ದು, ಸಾಂಪ್ರದಾಯಿಕ ಕಂದುಗಳಲ್ಲಿ ಗಿಡಗಳು ಬದುಕುಳಿಯುವ ಪ್ರಮಾಣ ಕಡಿಮೆಯಿರುತ್ತದೆ.

​ಬೆಳವಣಿಗೆ ಮತ್ತು ಕೊಯ್ಲಿನ ಅವಧಿ:

ಸಾಮಾನ್ಯ ಬಾಳೆ ಕಂದುಗಳನ್ನು ನಾಟಿ ಮಾಡಿದಾಗ ತೋಟದಲ್ಲಿ ಗಿಡಗಳ ಬೆಳವಣಿಗೆ ಏಕರೂಪವಾಗಿರದೆ ಅಸಮಾನವಾಗಿರುತ್ತದೆ ಮತ್ತು ಕೊಯ್ಲು ಕೂಡ ಬೇರೆ ಬೇರೆ ಸಮಯದಲ್ಲಿ ಬರುತ್ತದೆ. ಇದರಿಂದ ವ್ಯವಸ್ಥಿತವಾಗಿ ಮಾರುಕಟ್ಟೆ ಮಾಡುವುದು ಕಷ್ಟವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಅಂಗಾಂಶ ಕೃಷಿ ಗಿಡಗಳು ಒಂದೇ ಸಮನಾಗಿ ಮತ್ತು ಏಕರೂಪವಾಗಿ ಬೆಳೆಯುವುದರಿಂದ, ಇಡೀ ತೋಟದ ಬೆಳೆ ಒಂದೇ ಸಮಯದಲ್ಲಿ ಕೊಯ್ಲಿಗೆ ಬರುತ್ತದೆ. ಇದು ರೈತರಿಗೆ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಒಟ್ಟಿಗೆ ಕೊಯ್ಲು ಮಾಡಲು ನೆರವಾಗುತ್ತದೆ.

ಇಳುವರಿ ಮತ್ತು ಹಣ್ಣಿನ ಗುಣಮಟ್ಟ:

ಅಂಗಾಂಶ ಕೃಷಿ ತಂತ್ರಜ್ಞಾನದ ಅತಿ ದೊಡ್ಡ ಲಾಭವೇನೆಂದರೆ, ಇದರಲ್ಲಿ ಅತ್ಯಂತ ಹೆಚ್ಚಿನ ಹಾಗೂ ಸ್ಥಿರವಾದ ಇಳುವರಿ ಸಿಗುತ್ತದೆ. ಇವುಗಳ ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಒಂದೇ ಸಮನಾದ ಆಕಾರ ಮತ್ತು ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುತ್ತವೆ. ಆದರೆ ಸಾಂಪ್ರದಾಯಿಕ ಕಂದುಗಳಲ್ಲಿ ಇಳುವರಿ ಕಡಿಮೆಯಾಗುವುದರ ಜೊತೆಗೆ ಅಸ್ಥಿರವಾಗಿರುತ್ತದೆ ಹಾಗೂ ಹಣ್ಣಿನ ಗಾತ್ರ ಮತ್ತು ಗುಣಮಟ್ಟದಲ್ಲೂ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ.

​ನೀರು, ಗೊಬ್ಬರ ಮತ್ತು ರೋಗ ನಿರ್ವಹಣೆ:

ಸಾಂಪ್ರದಾಯಿಕ ಬೇಸಾಯದಲ್ಲಿ ನೀರು ಮತ್ತು ಗೊಬ್ಬರವು ಹೆಚ್ಚಾಗಿ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ ಹಾಗೂ ರೋಗ ಹರಡುವಿಕೆ ಹೆಚ್ಚಿರುವುದರಿಂದ ನಿರ್ವಹಣೆ ಕಷ್ಟವಾಗುತ್ತದೆ. ಅದೇ ಅಂಗಾಂಶ ಕೃಷಿ ಸಸಿಗಳಿಗೆ ನೀಡುವ ನೀರು ಮತ್ತು ಗೊಬ್ಬರವು ಅತ್ಯಂತ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ. ಇದರಲ್ಲಿ ರೋಗದ ಪ್ರಮಾಣ ತೀರಾ ಕಡಿಮೆ ಇರುವುದರಿಂದ ರೋಗ ನಿರ್ವಹಣೆಯೂ ಸುಲಭ.

​ಬೇಸಾಯದ ವೆಚ್ಚ ಮತ್ತು ಒಟ್ಟು ಲಾಭ:

Department of Horticulture ಆರಂಭಿಕ ವೆಚ್ಚವನ್ನು ಗಮನಿಸಿದರೆ, ಸಾಂಪ್ರದಾಯಿಕ ಬಾಳೆ ಕಂದುಗಳ ಖರೀದಿ ವೆಚ್ಚ ಕಡಿಮೆಯಿರುತ್ತದೆ ಮತ್ತು ಅಂಗಾಂಶ ಕೃಷಿ ಸಸಿಗಳ ಆರಂಭಿಕ ವೆಚ್ಚ ಕೊಂಚ ಹೆಚ್ಚಿರುತ್ತದೆ. ಆದರೆ, ದೀರ್ಘಕಾಲಿಕ ಸುಸ್ಥಿರ ಕೃಷಿಯ ದೃಷ್ಟಿಯಿಂದ ನೋಡಿದಾಗ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಣ್ಣಿನಲ್ಲಿ ರೋಗ ಸಂಗ್ರಹವಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಕಾರ್ಮಿಕ ನಿರ್ವಹಣಾ ವೆಚ್ಚ ಹೆಚ್ಚಾಗಿ ಲಾಭ ಅಸ್ಥಿರವಾಗಿರುತ್ತದೆ. ಆದರೆ ಅಂಗಾಂಶ ಕೃಷಿಯಲ್ಲಿ ಸುಲಭ ನಿರ್ವಹಣೆಯಿಂದಾಗಿ ಕಾರ್ಮಿಕ ವೆಚ್ಚ ಕಡಿಮೆಯಾಗುವುದಲ್ಲದೆ, ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ಉತ್ತಮ ಬೆಲೆ ಸಿಗುವುದರಿಂದ ದೀರ್ಘಾವಧಿಯಲ್ಲಿ ರೈತರಿಗೆ ಅತ್ಯಧಿಕ ಲಾಭ ದೊರೆಯುತ್ತದೆ.

​ವಿವಿಧ ಹಂತದ ಬಾಳೆ ಸಸಿಗಳ ದರ ಇಂತಿದೆ:

​ಎಕ್ಸ್ ಅಗಾರ್ ಹಂತದ ಸಸಿ: ಪ್ರತಿ ಸಸಿಗೆ ಕೇವಲ ರೂ. 6/-

​98 ಕ್ಯಾವಿಟಿವುಳ್ಳ ಪ್ರೋಟ್ರೇ ಸಸಿ: ಪ್ರತಿ ಸಸಿಗೆ ಕೇವಲ ರೂ. 7/-

​4″x6″ ಪಾಲಿಬ್ಯಾಗ್ ಸಸಿ: ಪ್ರತಿ ಸಸಿಗೆ ಕೇವಲ ರೂ. 12/-

​ರೈತರು ಯಾವುದೇ ಖಾಸಗಿ ವ್ಯಕ್ತಿಗಳಿಂದ ವಂಚನೆಗೊಳಗಾಗದೆ, ಇಲಾಖೆಯ ಅಧಿಕೃತ ಹಾಗೂ ವಿಶ್ವಾಸಾರ್ಹ ಮೂಲದಿಂದಲೇ ಸಸಿಗಳನ್ನು ಖರೀದಿಸಿ ಆರ್ಥಿಕ ಪ್ರಗತಿ ಹೊಂದಬಹುದಾಗಿದೆ.

ಉತ್ತಮ ಗುಣಮಟ್ಟದ ರೋಗರಹಿತ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ರಾಯಲ್ ಮೀನಾಕ್ಷಿ ಮಾಲ್ ಎದುರಿಗಿರುವ ಬೆಂಗಳೂರಿನ ಜೈವಿಕ ಕೇಂದ್ರ, ಹುಳಿಮಾವು ಇಲ್ಲಿಂದ ರೈತರು ನ್ಯಾಯೋಚಿತ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕಾರಿಗಳನ್ನು 7975736459 ಅಥವಾ 9880234281 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

B.Y. Raghavendra ಸಿದ್ದಾಪುರ ಏತ ನೀರಾವರಿ ಯೋಜನೆ: ರೈತರ ಹಿತವೇ ನಮಗೆ ಮುಖ್ಯ! : ಬಿ.ವೈ.ರಾಘವೇಂದ್ರ

0

B.Y. Raghavendra ಸಿದ್ದಾಪುರ ಏತ ನೀರಾವರಿ ಯೋಜನೆಯ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಗತಿ ಪರಿಶೀಲನೆ ನಡೆಸಿದರು.

B.Y. Raghavendra ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಿದ್ದಾಪುರದ ಏತ ನೀರಾವರಿ ಯೋಜನೆಯ ಮುಖಾಂತರ ರೈತರ ಹಿತವೇ ನಮಗೆ ಮುಖ್ಯವಾಗಿದೆ. ಪ್ರಸ್ತುತ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸಂಸದ ರಾಘವೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದರು.

Klive Special Article ಗಂಡಕಿ ನದಿ: ಜೋಮ್ಸೋಂ ನಲ್ಲಿ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಂದ ವಿಷ್ಣು ಸಾಲಿಗ್ರಾಮ ಪೂಜೆ

0

ವಿಶೇಷ ವರದಿ: ಪ್ರಭಾಕರ ಕಾರಂತ.

Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ತಮ್ಮ ನೇಪಾಳದ ಧರ್ಮ ವಿಜಯ ಯಾತ್ರೆಯಲ್ಲಿ ಗಂಡಕೀ ನದಿಗೆ ತೆರಳಿ ಆ ಪುಣ್ಯ ಜಲವನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಮೂಲಕ ಆ ನದಿಯ ಪಾವಿತ್ರ್ಯತೆಯನ್ನು ಸ್ಮರಣೆಗೆ ತಂದರು.ಪವಿತ್ರ ನದಿ ತಟದ ಜೋಮ್ಸೊಂ ನಲ್ಲಿ ಅವರಿಗಾಗಿ ಒಂದು ಕಾರ್ಯಕ್ರಮ ಕಾಯುತ್ತಿತ್ತು.ಅದೇನು ಪೂರ್ವ ನಿಗದಿತ ಕಾರ್ಯಕ್ರಮ ಆಗಿರಲಿಲ್ಲ.ಜಗದ್ಗುರುಗಳು ಈ ಮಾರ್ಗದಲ್ಲಿ ಸಾಗಲಿದ್ದಾರೆ ಎಂದು ಅರಿತುಕೊಂಡ ಸ್ಥಳೀಯ ಗ್ರಾಮ ಪಾಲಿಕೆ ಅದನ್ನು ಸ್ಮರಣೀಯವಾಗಿಸಲು ಸಂಕಲ್ಪಿಸಿತು.ಈ ನದಿ ಸಾಲಿಗ್ರಾಮದ ಮೂಲ ಆವಾಸ ಸ್ಥಾನವಾಗಿದೆ.ಮಹಾವಿಷ್ಣು ಈ ಸಾಲಿಗ್ರಾಮಗಳಲ್ಲಿ ಸ್ವಯಂ ಪ್ರತಿಷ್ಠಾಪನೆಯಾಗಿರುತ್ತಾನೆ. ದೇವರ ಮೂರ್ತಿ ಕೆತ್ತಿ ಅದನ್ನು ಪ್ರತಿಷ್ಠಾಪನೆ ಮಾಡಿ ಸಾನಿಧ್ಯ ಉಂಟುಮಾಡುವ ಯಾವ ಪ್ರಕ್ರಿಯೆಯೂ ಸಾಲಿಗ್ರಾಮದ ವಿಷಯದಲ್ಲಿ ಬೇಕಿಲ್ಲ.ಇಲ್ಲಿ ದೇವರೇ ಸಾನಿಧ್ಯ ಹೊಂದಿದ್ದಾನೆ.ಹೀಗೆಂದೇ ಮನುಷ್ಯ ಪ್ರತಿಷ್ಠೆಗಿಂತ ದೇವರ ಈ ಸ್ವಯಂ ಪ್ರತಿಷ್ಠೆ ಶ್ರೇಷ್ಠ.ಇಂತಹ ಪವಿತ್ರ ಶಿಲೆಗಳ ಆವಾಸಸ್ಥಾನವಾದ ಜೋಮ್ಸಂ ನಲ್ಲಿ ನದೀ ತಟದಲ್ಲಿದ್ದ ಬೃಹತ್ ಶಿಲೆಯೊಂದರಲ್ಲಿ ಸಾಲಿಗ್ರಾಮ ಶಿಲೆಯ ಒಳಗೆ ಅಡಗಿರುವ ವಿಷ್ಣು ಚಕ್ರವನ್ನು ಕೆತ್ತನೆ ಮಾಡಿಸಿದ ಸ್ಥಳೀಯ ಆಡಳಿತ ಅದನ್ನು ಶೃಂಗೇರಿಯ ಶಂಕರಾಚಾರ್ಯರಿಂದ ಉದ್ಘಾಟಿಸಬೇಕೆಂದು ಇಚ್ಛಿಸಿ ಪ್ರಾರ್ಥಿಸಿತ್ತು.ಇದು ಸಾಕ್ಷಾತ್ ಪರಶಿವ ವಿಷ್ಣುವನ್ನು ಪ್ರತಿಷ್ಠಾಪನೆ ಮಾಡಿದಂತದೇ ಘಟನೆ.ಈ ಪ್ರದೇಶಕ್ಕೆ ಈವರೆಗೆ ಅದೆಷ್ಟು ಭಕ್ತರು ಬಂದಿಲ್ಲ. ಆವರಲ್ಲಿ ಅದೆಷ್ಟು ಸಾಧುಸಂತರು, ಮಠಾಧೀಶರು ಇದ್ದಿರಬಹುದು.ಆದರೆ ಮಹಾವಿಷ್ಣುವಿಗೆ ಇಲ್ಲಿ ತನ್ನ ಸಾಲಿಗ್ರಾಮವನ್ನು ಶೃಂಗೇರಿಯ ಜಗದ್ಗುರುಗಳೇ ಪೂಜಿಸಬೇಕು ಎಂಬ ಇಚ್ಛೆ ಉಂಟಾಗಿದ್ದು ಕಾಕತಾಳೀಯವಲ್ಲ.ಈಶ್ವರ ಸಂಕಲ್ಪ.ಆದರ ಪ್ರತಿಕೃತಿಯೊಂದನ್ನು ಸ್ಥಳೀಯ ಸಂಘಟಕರು ಭಕ್ತಿಪೂರ್ವಕವಾಗಿ ಜಗದ್ಗುರುಗಳಿಗೆ ಸಮರ್ಪಿಸಿದರು. ಕಾಟ್ಮಂಡುವಿನಲ್ಲಿ ಪೊಲೀಸ್ ಮುಖ್ಯಾಲಯದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿ ಜಗದ್ಗುರುಗಳಿಗೆ ಸಮರ್ಪಿಸಲಾಗಿತ್ತು.ಇದನ್ನು ಗುರುಭವನದಲ್ಲಿ ಸದಾ ತಮ್ಮ ಜೊತೆಗೆ ಇಟ್ಟುಕೊಳ್ಳುವುದಾಗಿ ಜಗದ್ಗುರುಗಳು ಭರವಸೆ ನೀಡಿದ್ದರು.ಈಗ ಪಶುಪತಿನಾಥನ ಜೊತೆಗೆ ಇರಲು ಮಹಾವಿಷ್ಣು ಸಹ ನೇಪಾಳದಿಂದ ಜಗದ್ಗುರುಗಳ ಜೊತೆಗೆ ಆಗಮಿಸುತ್ತಿದ್ದಾನೆ.ಶಿವಕೇಶವ ಅಭೇದ ತತ್ವವನ್ನು ಜಗದ್ಗುರುಗಳು ನೇಪಾಳದ ಯಾತ್ರೆ ಅನುಗ್ರಹ ಭಾಷಣದಲ್ಲಿ ಹೇಳಿದ್ದರು.ಅದರ ಸಾಕ್ಷಾತ್ಕಾರ ಹೀಗೆ ಆಯಿತು.
Klive Special Article ಜಗದ್ಗುರುಗಳು ಗಾಲೇಶ್ವರ ತಲುಪುವಾಗ ನಡು ರಾತ್ರಿ ಸಮೀಪಿಸುತ್ತಿತ್ತು.ಅಲ್ಲೇ ಆ ದಿನದ ಚಂದ್ರಮೌಳೀಶ್ವರ ಪೂಜೆ.ಭಕ್ತರು ಈ ಪೂಜೆ ಕಣ್ತುಂಬಿಕೊಂಡು ಭಾವಪರವಶರಾದರು. ಸಾವಿರಾರು ಮೈಲು ದೂರದ ಭಾರತದ ಸಂತ ಶ್ರೇಷ್ಠ ತಮ್ಮ ಪುಣ್ಯ ಭೂಮಿಗೆ ಆಗಮಿಸುತ್ತಿದ್ದಾರೆ ಎಂಬ ನಿರೀಕ್ಷೆಯಲ್ಲಿ ಆ ತಡರಾತ್ರಿ ಕಾದು ನಿಂತ ಭಕ್ತರ ಭಕ್ತಿ ಶ್ರದ್ಧೆಗೆ ಸಾಟಿ ಇಲ್ಲ.ಗಾಲೇಶ್ವರನನ್ನು ಮರುದಿನ ಜಗದ್ಗುರುಗಳು ಪೂಜಿಸುವಾಗಲೂ ಆ ಜನಕ್ಕೆ ಅದೇ ಶ್ರದ್ಧೆ.ಪೂಜೆಯ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಅವರು ಜಗದ್ಗುರುಗಳನ್ನು ಬೀಳ್ಕೊಟ್ಟರು.ಜಗದ್ಗುರುಗಳು ಸಮೀಪದ ಸಾಲಿಗ್ರಾಮ ಸಂಗ್ರಹಾಲಯಕ್ಕೆ ಚಿತ್ತೈಸಿ ಅಲ್ಲಿ ಕಾಷ್ಟ ನಾರಾಯಣ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.ಇಲ್ಲಿ ಗಂಡಕೀ ನದಿಯ ಪಥ ದರ್ಶನದ ಪ್ರತಿಕೃತಿ ಸಹ ಇದೆ.ಪವಿತ್ರ ಗಂಗಾನದಿಯಲ್ಲಿ ಪಾಟ್ಣಾದಲ್ಲಿ ಸೇರಲೀರುವ ಈ ಪವಿತ್ರ ನದಿ ಎರಡು ದೇಶದ ಪವಿತ್ರ ಸಂಬಂಧಗಳನ್ನು ಸಾರಿ ಹೇಳುತ್ತಿದೆ.
ಜಗದ್ಗುರುಗಳು ಮಾರ್ಗದಲ್ಲಿ ಮಹಾಯೋಗಿ ಜಡಭರತನ ಗುಹೆ ದರ್ಶನ ಮಾಡಿದರು.ನಮ್ಮೀ ಪುಣ್ಯ ಭೂಮಿಗೆ ಭಾರತ ಎಂದು ನಾಮಕರಣ ಆಗಲು ಕಾರಣನಾದ ಭರತ ಮಹಾರಾಜ ತನ್ನ ಮುಂದಿನ ಜನ್ಮದಲ್ಲಿ ಜಡಭರತನಾಗಿ ಜನಿಸಿದ.ಆತ ಆತ್ಮ ಸಾಕ್ಷಾತ್ಕಾರ ಪಡೆದ ಮಹಾ ತಪಸ್ವಿ.ಆತ್ಮವೇ ಶಾಶ್ವತ ಸತ್ಯ ಎಂದು ಪ್ರತಿಪಾದಿಸಿದ ಮಹಾತ್ಮ.
ಜಡಭರತನ ಬದುಕೇ ಅದ್ವೈತದ ದೃಷ್ಟಾಂತ.ಆ ವೈರಾಗ್ಯದ ಪರಮ ಮೂರ್ತಿಯ ಸಾಧನೆಯ ಸ್ಥಳವನ್ನು ಆತ್ಮತತ್ವದ ಅದ್ವೈತದ ಶಂಕರ ಭಗವತ್ಪಾದರ ಪ್ರತಿನಿಧಿ ದರ್ಶಿಸಿದ್ದು ಮತ್ತೆ ಭಾರತ ನೇಪಾಳದ ಆನನ್ಯತೆಯ ದ್ಯೋತಕವೇ ಸರಿ.
ಈ ಗುಹೆಯು ಭೇಟಿ ಕುರಿತು ವಿಂಗ್ ಕಮಾಂಡರ್ ಸುದರ್ಶನ್ ಲೇಖನ ಬರೆದಿದ್ದು “ಇದು ಕೇವಲ ಗುಹೆಯ ದರ್ಶನ ಘಟನೆಯಲ್ಲ.ಇದು ಭರತ ಮಹಾರಾಜನ ವೈರಾಗ್ಯದಿಂದ ಆರಂಭವಾಗಿ ಜಡಭರತನ ಆತ್ಮಜ್ಞಾನ,ಆದಿ ಶಂಕರಾಚಾರ್ಯರ ಅದ್ವೈತ ತತ್ವ,ಮತ್ತು ಇಂದಿನ ಜಗದ್ಗುರುಗಳ‌ ಮೂಲಕ ಮುಂದುವರೆಯುತ್ತಿರುವ ಸನಾತನ ಧರ್ಮದ ಅವಿಚ್ಛಿನ್ನ ಜ್ಯೋತಿಯ ಪ್ರತೀಕವಾಗಿದೆ” ಎಂದು ಬಣ್ಣಿಸಿದ್ದಾರೆ.

Klive Special Article ಜಗದ್ಗುರುಗಳು ದೇವಘಾಟ್ ತಲ್ಪುವಾಗ ಮತ್ತೆ ತಡರಾತ್ರಿ ಆಗಿತ್ತು.ಇಡೀ ಪ್ರದೇಶ ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು.ಮಾರ್ಗದ ಇಕ್ಕೆಲಗಳಲ್ಲೂ ಕಾದುನಿಂತ ಭಕ್ತರು.ಅವರ ಸಂಭ್ರಮ ಶ್ರದ್ಧೆ ವರ್ಣಿಸಲಸದಳ.ಈ ಕ್ಷೇತ್ರದಲ್ಲಿ ಮೂರು ವೇದಪಾಠ ಶಾಲೆಗಳಿವೆ.ಒಟ್ಟು ಮೂರೂ ಶಾಲೆಗಳಲ್ಲಿ ಒಂಬೈನೂರು ವಿದ್ಯಾರ್ಥಿಗಳು ಇದ್ದಾರೆ.ಜಗದ್ಗುರುಗಳು ಹರಿಹರ ಸನ್ಯಾಸಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ.ಇಲ್ಲಿನ ಸ್ವಾಮಿ ಶ್ರೀ ದಯಾನಂದ ಸರಸ್ವತಿ ಶೃಂಗೇರಿಯ ಭಕ್ತರು.ಅವರ ಶಿಷ್ಯ ಶ್ರೀ ವಿಮಲಾನಂದ ಸರಸ್ವತಿ ದೂಳೀ ಪಾದಪೂಜೆ ನೆರವೇರಿಸಿದರು.ನಂತರ ವೇದ ವಿದ್ಯಾರ್ಥಿಗಳ ಮಂತ್ರ ಪಠಣ ದೊಂದಿಗೆ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಿತು.ಮತ್ತೆ ಭಕ್ತರೊಂದಿಗೆ ಶ್ರೀ ದಯಾನಂದ ಸರಸ್ವತಿಯವರೊಂದಿಗೆ ಅವರ ಶಿಷ್ಯರೊಂದಿಗೆ ಮಾತುಕತೆ.ಜಗದ್ಗುರುಗಳಿಗೆ ದಣೀವೇ ಇಲ್ಲ ಅದಕ್ಕೇ ವಿಶ್ರಾಂತಿಯೂ ಬೇಡ.

ವಿಶೇಷ ಬರಹ: ಪ್ರಭಾಕರ ಕಾರಂತ

ಮೇ 31. ಶಿವಮೊಗ್ಗದ ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

ಶಿವಮೊಗ್ಗ ನಗರ ಉಪವಿಭಾಗ-1, ಘಟಕ -2 ರ ವ್ಯಾಪ್ತಿಯಲ್ಲಿ ಮೇ 31 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ವಿದ್ಯುತ್ ಕಂಬ ತೆರವು ಕಾಮಗಾರಿ ಹಮ್ಮಿಕೊಂಡಿದ್ದು, ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ, ಸೀತಾರಾಮ ಕಲ್ಯಾಣ ಮಂದಿರ ಅಡ್ಡರಸ್ತೆ, ರಾಘವೇಂದ್ರ ಸ್ವಾಮಿ ಮಠ ರಸ್ತೆ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶನಿ ಮಹಾತ್ಮ ದೇವಸ್ಥಾನ ರಸ್ತೆ, ವಿದ್ಯುತ್ ಪರಿವೀಕ್ಷಕರ ಕಚೇರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಅರ್ಜಿ‌ ಆಹ್ವಾನ

0

Backward Classes Welfare Department 2026-27ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮತ್ತು ಪ.ಜಾ/ಪ.ವರ್ಗಕ್ಕೆ ಸೇರಿದ ಪಿ.ಯು.ಸಿ., ಸಮಾನಾಂತರ ಡಿಪ್ಲೊಮಾ, ಐ.ಟಿ.ಐ. ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1, ಎಸ್‌ಸಿ/ಎಸ್‌ಟಿಯವರಿಗೆ ರೂ. 2.50 ಲಕ್ಷ ಹಾಗೂ ಪ್ರವರ್ಗ-2ಎ,2ಬಿ,3ಎ,3ಬಿ ವಿದ್ಯಾರ್ಥಿಗಳಿಗೆ ರೂ. 1.00 ಲಕ್ಷದೊಳಗಿರಬೇಕು.
ಆಸಕ್ತರು ವೆಬ್‌ಸೈಟ್ https://shp.karnataka.gov.in/bcwd ರಲ್ಲಿ ಜೂ.15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿರುತ್ತಾರೆ.
Backward Classes Welfare Department ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://bcwd.karnataka.gov.in ಪಡೆಯುವುದು ಮತ್ತು ತಾಂತ್ರಿಕ ತೊಂದರೆಗಳಾದಲ್ಲಿ bcwdhelpline@gmail.com ಇಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲೂಕು ಅಧಿಕಾರಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು ಹಾಗೂ ಮೊ.ಸಂ.: 8050770004 ನ್ನು ಸಂಪರ್ಕಿಸುವುದು.