ಬಿಜೆಪಿ ಶಿವಮೊಗ್ಗ ಜಿಲ್ಲೆ ವತಿಯಿಂದ ನಗರದ ಶುಭಶ್ರೀ ಕಲ್ಯಾಣ ಮಂದಿರದಲ್ಲಿ ಇಂದಿನಿಂದ ಹಮ್ಮಿಕೊಳ್ಳಲಾಗಿರುವ “ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ರ ಜಿಲ್ಲಾ ಮಟ್ಟದ ಮಹತ್ವದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಗಣ್ಯತಿ ಗಣ್ಯರು ಜಂಟಿಯಾಗಿ ಜ್ಯೋತಿ ಬೆಳಗುವ ಮೂಲಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಪಕ್ಷದ ಸದ್ಧಾಂತಿಕ ಹಿನ್ನೆಲೆ, ಸಂಘಟನಾತ್ಮಕ ಮೌಲ್ಯಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ತಳಮಟ್ಟದ ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಈ ಪ್ರಶಿಕ್ಷಣ ವರ್ಗಗಳು ದಿಕ್ಸೂಚಿಯಾಗಿವೆ. ಏಕಾತ್ಮ ಮಾನವತಾವಾದದ ಪ್ರಣೇತೃ ಪಂ. ದೀನದಯಾಳ್ ಉಪಾಧ್ಯಾಯ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇದು ಸಹಕಾರಿಯಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಕೆ ಜಗದೀಶ್, ಸಂಸದರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಬಿ ವೈ ರಾಘವೇಂದ್ರ, ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪ, ಶಾಸಕರಾದ ಶ್ರೀ ಎಸ್.ಎನ್ ಚನ್ನಬಸಪ್ಪ, ವಿಧಾನಪರಿಷತ್ ಮುಖ್ಯ ಸಚೇತಕರಾದ ಶ್ರೀ ಎನ್.ರವಿಕುಮಾರ್, ವಿಧಾನ ಪರಿಷತ್ ಶಾಸಕರಾದ ಶ್ರೀ ಅಮರನಾಥ ಪಾಟೀಲ್, ಶ್ರೀ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಶ್ರೀ ಕೆ ಬಿ ಅಶೋಕ್ ನಾಯ್ಕ್, ಶ್ರೀ ಕೆ. ಜಿ ಕುಮಾರಸ್ವಾಮಿ, ರಾಜ್ಯ ಪ್ರಕೋಷ್ಟಗಳ ಸಂಚಾಲಕರಾದ ಶ್ರೀ ಎಸ್. ದತ್ತಾತ್ರಿ, ದಾವಣಗೆರೆ ವಿಭಾಗ ಪ್ರಭಾರಿ ಶ್ರೀ ಟಿ.ಡಿ ಮೇಘರಾಜ್, ಶ್ರೀ ಆರ್ ಡಿ ಹೆಗ್ಡೆ ಪಕ್ಷದ ಹಾಗೂ ವಿವಿಧ ಸ್ಥರದ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಆಗಮಿಸಿರುವ ಪಕ್ಷದ ಪ್ರಮುಖ ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಈ ಎರಡು ದಿನಗಳ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
