B.Y. Raghavendra ಐತಿಹಾಸಿಕ ಸಿಗಂದೂರು ಚೌಡೇಶ್ವರಿ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ.
ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣಗೊಂಡ ಈ ಮಹತ್ವಾಕಾಂಕ್ಷಿ ಸೇತುವೆ ಕೇವಲ ಎರಡು ದಡಗಳನ್ನು ಸಂಪರ್ಕಿಸಿಲ್ಲ; ಬದಲಾಗಿ ದಶಕಗಳ ಕನಸನ್ನು ನನಸಾಗಿಸಿ, ಸಾಗರ, ಹೊಸನಗರ ಸೇರಿದಂತೆ ಮಲೆನಾಡಿನ ಜನರ ಬದುಕಿಗೆ ಹೊಸ ಚೈತನ್ಯ ತುಂಬಿದೆ. ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ ಹಾಗೂ ತುರ್ತು ಸೇವೆಗಳಿಗೂ ಈ ಸೇತುವೆ ಹೊಸ ದಿಕ್ಕು ನೀಡಿದೆ.
ಈ ಕನಸಿನ ಯೋಜನೆಗೆ ದೂರದೃಷ್ಟಿಯ ನಾಯಕತ್ವ ನೀಡಿ ಸಾಕಾರಗೊಳಿಸಿದ ಮಾನ್ಯ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಜಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ ಹೃದಯತುಂಬಿ ಧನ್ಯತೆ ಅರ್ಪಿಸಿದ್ದಾರೆ.
ಈ ಯೋಜನೆಯನ್ನು ನಿರಂತರವಾಗಿ ಮುಂದಿಟ್ಟುಕೊಂಡು, ಜನರ ದಶಕಗಳ ಬೇಡಿಕೆಗೆ ಧ್ವನಿಯಾಗಿ ನಿಂತು, ಇದರ ಸಾಕಾರಕ್ಕೆ ಅಪಾರ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳು ಎಂದು ಸ್ಮರಿಸಿದ್ದಾರೆ.
B.Y. Raghavendra ಈ ಸೇತುವೆಯ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲ ಇಂಜಿನಿಯರ್‌ಗಳು, ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರು ಹಾಗೂ ನೇರ-ಪರೋಕ್ಷವಾಗಿ ಕೈಜೋಡಿಸಿದ ಪ್ರತಿಯೊಬ್ಬರನ್ನೂ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸುತ್ತೇನೆ ಎಂದು ಕಾರಣರಾದ ಎಲ್ಲರಿಗೂ
ಆಭಾರಿಯಾಗಿದ್ದಾರೆ.
ಸಿಗಂದೂರು ಸೇತುವೆ ಮಲೆನಾಡಿನ ಅಭಿವೃದ್ಧಿಯ ಹೊಸ ಅಧ್ಯಾಯ. ಈ ಅಭಿವೃದ್ಧಿಯ ಪಯಣ ಇದೇ ಉತ್ಸಾಹದೊಂದಿಗೆ ಮುಂದುವರಿಯಲಿ ಎಂಬುದು ನಮ್ಮ ಸಂಕಲ್ಪ ಎಂದು ಮನದಾಳದ ಸಂತಸವನ್ನ ಸಂಸದ ರಾಘವೇಂದ್ರ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡಿದ್ದಾರೆ
