Wednesday, August 5, 2026
Wednesday, August 5, 2026
Home Blog Page 74

Klive Special Article ಪರಿಸರ ದಿನ: ನಮ್ಮೊಳಗೇ ಹಲವು ಬದಲಾವಣೆ ಬೇಕು. ಲೇಖನ:ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

0

Klive Special Article ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಪರಿಸರ ಪ್ರಕೃತಿದತ್ತವಾದದ್ದು,ಅದನ್ನು ಸರಿಯಾಗಿಟ್ಟುಕೊಳ್ಳುವುದು ಪರಿಸರದ ಜೊತೆಗಿರುವ ನಮ್ಮ ಆದ್ಯ ಕರ್ತವ್ಯವಾಗಿದೆ.
ಈ ವರ್ಷ ಮೇ ತಿಂಗಳನಲ್ಲಿ ಅತೀ ಹೆಚ್ಙು ಬಿಸಿಲಿನ
ತಾಪಮಾನವಿತ್ತು.ಮನೆಯೊಳಗಿದ್ದರೂ ಬಿಸಿ,ಹೊರಗೆ ಹೋದರಂತೂ ಮತ್ತೂ ತಲೆ ಬಿಸಿಯ ವಾತಾವರಣವಿತ್ತು.ಇದಕ್ಕೆ ಕಾರಣವೆಂದರೆ ಮರಗಿಡಗಳನ್ನು ಸರಿಯಾಗಿ ಪೋಷಿಸಧೇ ಇರುವುದು,ಮತ್ತು ಹೊಸ ಗಿಡಗಳನ್ನು ನೆಡದೇ ಇರುವುದು .ಮತ್ತು ದಿನ ನಿತ್ಯ ಮನೆಯ ತ್ಯಾಜ್ಯವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆಯಾ ಊರಿನ ನಗರಸಭೆ,ಪುರಸಭೆಯವರು ಏರ್ಪಾಡುಮಾಡಿದ್ದಾರೆ.
ಅಂದರೆ ಕಸವನ್ನು ಎಲ್ಲೆಂದರಲ್ಲಿ ಹಾಕಿ ಪರಿಸರ ನೈರ್ಮಲ್ಯ ಕೆಡಬಾರದೆಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಪರಿಸರ ನಿರ್ಮಲವಾಗಿತ್ತೆಂದರೆ,ಒಳ್ಳೆಯ ಗಾಳಿ ಸಿಗುತ್ತದೆ.ಇದರಿಂದ ಆರೋಗ್ಯ ಸುಧಾರಣೆಗೂ ಅನುಕೂಲವಾಗುತ್ತದೆ.ಒಳ್ಳೆಯ ಗಾಳಿ ಸೇವನೆ,ಒಳ್ಳೆಯ ಆರೋಗ್ಯಕ್ಕೆ ಕಾರಣವಾಗುತ್ತದೆ.
ವಾಹನಗಳಿಂದಲೂ ಪರಿಸರ ನೈರ್ಮಲ್ಯ ಕೆಡಲು ಕಾರಣವಾಗುತ್ತದೆ.
Klive Special Article ಇನ್ನು ನಾವಾಡುವ ಮಾತು ಇದರಿಂದ ಪರಿಸರಕ್ಕಿಂತ
ಸಂಬಂಧಗಳು ಹಾಳಾಗುವ ಸಾಧ್ಯತೆ ಇದೆ.ಆದ್ದರಿಂದ
ಪರಿಸರದ ನೈರ್ಮಲ್ಯ ಕೆಡದಂತೆ ನೋಡಿಕೊಳ್ಳುವುದು
ಎಲ್ಲರ ಜವಾಬ್ದಾರಿಯಾಗಿರುತ್ತೆ.ಮತ್ತು ಒಳ್ಳೆಯ ಮಾತುಗಳಿಂದ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಪಡೋಣ.
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

ಜುಲೈ ತಿಂಗಳಿನಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರ. ಆಸಕ್ತರಿಂದ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜುಲೈ 2026ರ ಮಾಹೆಯಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ನಾಗರಿಕರು ಅರ್ಜಿ ನಮೂನೆಯನ್ನು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಹಾಗೂ ಜಿಲ್ಲಾ ಸಶಸ್ತç ಮೀಸಲು ಪೊಲೀಸ್ ಪಡೆ, ಸಾಗರ ರಸ್ತೆ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಇತ್ತೀಚಿನ 2 ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ನಕಲು ಪ್ರತಿಯೊಂದಿಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

World Environment Day ಪರಿಸರ ಮಾಲಿನ್ಯದಿಂದ ಮನುಷ್ಯನ ಜೀವಿತ ಅವಧಿ ಕಡಿಮೆಯಾಗುತ್ತಿದೆ- ಪ್ರೊ.ಎ.ಎಸ್.ಚಂದ್ರಶೇಖರ್

0

World Environment Day ತಂತ್ರಜ್ಞಾನ ಮುಂದುವರಿಯುತ್ತಿರುವ ಜೊತೆಯಲ್ಲಿ ಪ್ರತಿನಿತ್ಯ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಹಾಗೂ ಜಲ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಹಾಗೂ ಬಯೋ ಡೈವರ್ಸಿಟಿ ಪಾರ್ಕ್ ಚೇರ್ಮನ್ ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು.

ಶಿವಮೊಗ್ಗ ನಗರದ ಹೊರವಲಯದಲ್ಲಿ ಇರುವ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ನಲ್ಲಿ ಶಿವಮೊಗ್ಗ ನಗರದ ಎಲ್ಲ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಿಸರ ಮಾಲಿನ್ಯ ಹೆಚ್ಚುತ್ತಿರುವುದರಿಂದ ಮನುಷ್ಯನ ಜೀವಿತ ಅವಧಿ ಕಡಿಮೆಯಾಗುತ್ತಿದೆ. ಪರಿಸರವನ್ನು ಸರಿಯಾಗಿ ಸಂರಕ್ಷಿಸದಿದ್ದರೆ ಮನುಕುಲಕ್ಕೆ ತುಂಬಾ ಪರಿಣಾಮಕಾರಿಯಾದ ಅನಾಹುತವಾಗುತ್ತದೆ ಎಂದು ತಿಳಿಸಿದರು.

ಪ್ರತಿ ನಿತ್ಯ ಅತಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅರಣ್ಯ ನಾಶ ಮತ್ತು ನೀರಿನ ದುರ್ಬಳಕೆ ಹೆಚ್ಚಿದೆ. ಹವಾಮಾನ ಬದಲಾವಣೆ ಮತ್ತು ಪ್ರಕೃತಿಯ ಸಮತೋಲನವನ್ನು ಹಾಳು ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಮಾನವನ ಜೀವನ, ಪ್ರಾಣಿ ಪಕ್ಷಿಗಳು ಹಾಗೂ ಭೂಮಿಯ ಭವಿಷ್ಯದ ಮೇಲೂ ಆಪತ್ತು ಉಂಟಾಗುತ್ತದೆ ಆದ್ದರಿಂದ ನಾವು ಪ್ರತಿಯೊಬ್ಬರೂ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಮಾಜಿ ಸಹಾಯಕ ಗವರ್ನರ್ ಎಂ.ಪಿ.ಆನಂದ ಮೂರ್ತಿ ಮಾತನಾಡಿ, ಅತಿಯಾದ ಕಸದ ಉತ್ಪಾದನೆ ಮತ್ತು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ ಎಂದರು.

ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಆಶಯ. ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಇರುವುದು ಪರಿಸರ ಮಾಲಿನ್ಯಕ್ಕೆ ಅತಿ ಮುಖ್ಯವಾದ ಕಾರಣವಾಗಿದೆ ಎಂದು ಹೇಳಿದರು.

ಮಾಜಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್, ಸರ್ಜಾ ಜಗದೀಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ನಾಗರಾಜ್, ನನ್ನ ಕನಸಿನ ಶಿವಮೊಗ್ಗದ ಎನ್.ಗೋಪಿನಾಥ್, ಬಯೋ ಡೈವರ್ಸಿಟಿ ಪಾರ್ಕಿನ ನಿರ್ದೇಶಕರು, ಎಂಟು ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು. ಇನ್ನರ್ ವೀಲ್ ಮಾಜಿ ಜಿಲ್ಲಾ ಚೇರ್ಮನ್ ವಾರಿಜಾ ಜಗದೀಶ್, ಕಿರಣ್ ಕುಮಾರ್ ಇತರರಿದ್ದರು.

ಜೂನ್ 7.,ಶಿವಮೊಗ್ಗದ ‌ಹೊಸಳ್ಳಿ ,ರಾಮಿನಕೊಪ್ಪ. ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

ಶಿವಮೊಗ್ಗ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.07 ರಂದು ಬೆಳಿಗ್ಗೆ 9.00 ರಿಂದ ಸಂಜೆ 5.00 ಗಂಟೆವರೆಗೆ ಹೊಸಳ್ಳಿ, ರಾಮಿನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ಈಚಲವಾಡಿ, ಹಾಯ್ ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಗಮನವಿಟ್ಟು ಓದಿ.ಜೂನ್ 7ರಂದು ಶಿವಮೊಗ್ಗದ ಪಿಯರ್ ಲೈಟ್, ಗಾಜನೂರು ರೂರಲ್, ಸುತ್ತಮುತ್ತ ಕರೆಂಟ್ ಕಡಿತ, ಮೆಸ್ಕಾಂ ಪ್ರಕಟಣೆ

0

ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಜೂ. 07 ರಂದು ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಪಿಯರ್‌ಲೈಟ್, ಗಾಜನೂರು ರೂರಲ್, ಊರುಗಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸ್ ನಗರ, ಕೆ.ಹೆಚ್.ಬಿ. ಕಾಲೋನಿ, ಸಿದ್ದೇಶ್ವರ ಸರ್ಕಲ್ 100ಅಡಿ ರಸ್ತೆ, ಮಂಡ್ಲಿ, ಎನ್.ಟಿ.ರಸ್ತೆ, ಮರ‍್ನಾಮಿ ಬೈಲು, ಬಿ.ಹೆಚ್.ರಸ್ತೆ, ಹಳೆ ಮಂಡ್ಲಿ, ವಾದಿಹುದ, ಸೂಳೆಬೈಲು, ಮದಾರಿಪಾಳ್ಯ, ಕಲ್ಲೂರಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್. ನೀರು ಶುದ್ಧೀಕರಣ ಘಟಕ, ಕುರುಬರ ಪಾಳ್ಯ, ಸವಾಯಿಪಾಳ್ಯ, ಮುರಾದ್‌ನಗರ, ಓ.ಟಿ.ರಸ್ತೆ, ಬಿ.ಬಿ.ರಸ್ತೆ, ಕುಂಬಾರಕೇರಿ, ವಂದನ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆ.ಸಿ.ನಗರ, ಎಲ್.ಎಲ್.ಬಿ.ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಎಡಭಾಗ, ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್ ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯರಸ್ತೆ, ಗಾಂಧಿಬಜಾರ್, ಕುಂಬರಗುAಡಿ, ಉಪ್ಪಾರ್ ಕೇರಿ, ಸುತ್ತಮುತ್ತ ಹಾಗೂ ಅಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಎಂ.ಎಫ್ -4, 9,14, 16 ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಪೇಪರ್ ಪ್ಯಾಕೇಜ್, ಕಲ್ಲೂರು ಮಂಡ್ಲಿ ಇಂಡಸ್ಟಿçÃಯಲ್ ಏರಿಯಾ, ಶಂಕರ ಕಣ್ಣಿನ ಆಸ್ಪತ್ರೆ, ಎನ್.ಹೆಚ್.ಆಸ್ಪತ್ರೆ, ಶಾರದನಗರ, ಅನ್ನಪೂರ್ಣೆಶ್ವರಿ ಬಡಾವಣೆ, ಮಲ್ನಾಡ್ ಕೋಕ್, ಗಂದರ್ವನಗರ, ಹಳೆ ಮಂಡ್ಲಿ 1ನೇ ಕ್ರಾಸ್, ಇಲಿಯಾಜ್ ನಗರ, ಹರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ತಿಳಿಸಿದೆ.

ಹವಾಮಾನ ಬದಲಾವಣೆ ಸಂದರ್ಭದಲ್ಲಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು- ವಿ.ಅಭಿಷೇಕ್

0

ಹವಾಮಾನ ಬದಲಾವಣೆಯು ಪ್ರಸ್ತುತ ಇಡೀ ಜಗತ್ತನ್ನು ಕಾಡುತ್ತಿರುವ ಅತ್ಯಂತ ಗಂಭೀರವಾದ ಪರಿಸರ ಸಮಸ್ಯೆಯಾಗಿದ್ದು ಈ ಹವಾಮಾನ ಬದಲಾವಣೆಯು ನಮ್ಮ ಪರಿಸರ, ಆರೋಗ್ಯ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರಮುಖ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಶುಕ್ರವಾರದಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದೊಂದಿಗೆ ಹವಾಮಾನ ಬದಲಾವಣೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ಸಮತೋಲನ ತಪ್ಪುತ್ತಿದೆ. ಇದರಿಂದ ಅನಿಶ್ಚಿತ ಮಳೆ, ಇಳುವರಿಯಲ್ಲಿ ಕುಸಿತ, ಪ್ರವಾಹ, ಭೂ ಕುಸಿತ, ಬಿಸಿಗಾಳಿ, ಆರೋಗ್ಯದಲ್ಲಿ ವೈಪರೀತ್ಯಗಳನ್ನು ಎದುರಿಸುತ್ತಿದ್ದೇವೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಧ್ರುವ ಪ್ರದೇಶಗಳಲ್ಲಿನ ಹಿಮನದಿಗಳು ಹಾಗೂ ಹಿಮಾಲಯದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ.
ಇದರಿಂದಾಗಿ ಸಮುದ್ರದ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಕರಾವಳಿ ತೀರದ ನಗರಗಳು ಮತ್ತು ದ್ವೀಪಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿವೆ. ಮಂಗಳೂರು, ಮುಂಬೈನAತಹ ನಗರಗಳು ಸಹ ಮುಳುಗುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗೂ ಹವಾಮಾನ ಬದಲಾವಣೆಯಿಂದ ಮಲೆನಾಡು ಬಯಲುಸೀಮೆಯಾಗಿ, ಮರಳುಗಾಡು ಮಳೆ ಪಡೆಯುವ ನಾಡಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಹವಾಮಾನ ಬದಲಾವಣೆಯಿಂದ ತುಂಬಾ ತೊಂದರೆಗೀಡಾಗುವವರು ರೈತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗವಾಗಿದೆ.
ಆದ್ದರಿಂದ ಹವಾಮಾನ ಬದಲಾವಣೆ, ವೈಪರೀತ್ಯ ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದಾಗಿದೆ.
ಹಾಗೂ ಮುಖ್ಯವಾಗಿ ಯಾವುದೇ ಒಂದು ಉತ್ತಮ ಹಾಗೂ ಗುಣಮಟ್ಟದ ಕ್ರಿಯಾ ಯೋಜನೆಯನ್ನು ತಯಾರಿಸಲು ನಿಖರವಾದ ದತ್ತಾಂಶವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆಯಾದ್ದರಿಂದ ಎಂಪ್ರಿ (ಇಎಂಪಿಆರ್ ಐ)ಸಂಸ್ಥೆ ನೀಡುವ ಇನ್‌ಪುಟ್ಸ್ ಹಾಗೂ ತರಬೇತಿಯು ಇಲಾಖಾ ಮಟ್ಟದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಕ್ರಿಯಾ ಯೋಜನೆಗಳನ್ನು ತಯಾರಿಸಲು ಸಹಕಾರಿಯಾಗಲಿದ್ದು ಅಧಿಕಾರಿ/ನೌಕರರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಜಿ.ಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎAಪ್ರಿ) ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ಕಾರ್ಯಾಗಾರವನ್ನು ಗ್ರಾಮ ಪಂಚಾಯ್ತಿ ಹಂತದಲ್ಲೂ ಮಾಡಿದರೆ ಇನ್ನೂ ಸಹಕಾರಿಯಾಗುತ್ತದೆ.
ಸಂಯುಕ್ತ ರಾಷ್ಟçಗಳು ಸುಮಾರು 17 ಗುರಿಗಳನ್ನು ಇಟ್ಟುಕೊಂಡು 2030 ರ ಹೊತ್ತಿಗೆ ಗುರಿ ಸಾಧಿಸಲು ಕಾಲ ನಿಗದಿಪಡಿಸಿಕೊಂಡಿದ್ದು, ಸುಸ್ಥಿರ ಹವಾಮಾನ ಸಮತೋಲನೆ ಸಹ ಒಂದು ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಂಪ್ರಿ ಸಂಸ್ಥೆ ಶ್ರಮಿಸುತ್ತಿದ್ದು ಎಲ್ಲ ಇಲಾಖೆಗಳು ಸಹಕರಿಸಬೇಕೆಂದರು.
ಕಾರ್ಯಾಗಾರದಲ್ಲಿ ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ. ಪವಿತ್ರಾ ಪಿ. ನಾಯಕ್ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002 ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಅನ್ವಯಿಕ ಮತ್ತು ನೀತಿ ಸಂಶೋಧನೆ ನಡೆಸುತ್ತದೆ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ-ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದ ಅವರು ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆ ಕಾರಣಗಳು, ಜಾಗತಿಕ ಮತ್ತು ಭಾರತೀಯ ಉಪ ಕ್ರಮಗಳು ಸೇರಿದಂತೆ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ನೀರು, ಇಂಧನ, ಆರೋಗ್ಯ, ಸಾರಿಗೆ, ಕೈಗಾರಿಕೆಗಳು, ಕಂದಾಯ, ಸ್ಥಳೀಯ ಸಂಸ್ಥೆಗಳು(ತ್ಯಾಜ್ಯ ನಿರ್ವಹಣೆ)ಸೇರಿದಂತೆ ವಿವಿಧ ಇಲಾಖೆಗಳು ಹೇಗೆ ಸುಸ್ಥಿರ ಕ್ರಿಯಾ ಯೋಜನೆ ರೂಪಿಸಬೇಕೆಂಬ ಬಗ್ಗೆ ವಿವರಿಸಿದರು.
ಬೆಂಗಳೂರಿನ ಎಸಿಡಬ್ಲ್ಯೂಆರ್‌ಎಂ ಜಲ ಸಂಪನ್ಮೂಲ ತಜ್ಞರಾದ ಡಾ. ಉಷಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿವಮೊಗ್ಗದ ಎನ್ ಆರ್ ಡಿ ಎಂ ಎಸ್ ಅಧಿಕಾರಿ ಶಂಕರ್ ಪಿ. ಹಾಗೂ ಎಂಪ್ರಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರುಗಳಾದ ಕುಮಾರಿ ರುಚಿತಾ ಶ್ರೀ ಮತ್ತು ರಾಘವೇಂದ್ರ ಎನ್ ಉಪಸ್ಥಿತರಿದ್ದರು.

Agriculture University ಇರುವಕ್ಕಿಯಲ್ಲಿ ಕೃಷಿ ವಿವಿ ಆಶ್ರಯದಲ್ಲಿ ಸಾಂಬಾರು ಬೆಳೆಗಳ ಕೃಷಿ: ಕಾಳು ಮೆಣಸು & ಏಲಕ್ಕಿ” ತರಬೇತಿ ಕಾರ್ಯಕ್ರಮ

0

Agriculture University ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಶಿವಮೊಗ್ಗ), ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆಯು “ಸಾಂಬಾರು ಬೆಳೆಗಳ ಕೃಷಿ: ಕಾಳುಮೆಣಸು ಮತ್ತು ಏಲಕ್ಕಿ”
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ “ರೈತರ ತರಬೇತಿ ಸಂಸ್ಥೆ, ವರದಾ ಬ್ಲಾಕ್, ನೆಲ ಮಹಡಿ, ಇರುವಕ್ಕಿ” ಯಲ್ಲಿ ದಿನಾಂಕ: 09.06.2026 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.

Agriculture University ಈ ತರಬೇತಿ ಕಾರ್ಯಕ್ರಮವು ಉಚಿತವಾಗಿದ್ದು, ಮೊದಲು ನೋಂದಾಯಿಸಿದ 50 ರೈತರಿಗೆ ಆದ್ಯತೆ ನೀಡಲಾಗುವುದು. ಈ ತರಬೇತಿ ಕಾರ್ಯಕ್ರಮಕ್ಕೆ ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿದ ರೈತರಿಗೆ ಮಾತ್ರ ಅವಕಾಶ ನೀಡಲಾಗುವುದು. ರೈತರ ತರಬೇತಿ ಸಂಸ್ಥೆ ಇರುವಕ್ಕಿಯ ವಾಟ್ಸಪ್ ಗ್ರೂಪಿನಲ್ಲಿರುವ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ತಮ್ಮ ಹೆಸರನ್ನು ಇದೆ ಗ್ರೂಪಿನಲ್ಲಿ ನೋಂದಾಯಿಸಿರಿ . ಇತರೆ ರೈತರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ವ್ಯಾಟ್ಸಪ್ ಸಂದೇಶದ ಮೂಲಕ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9483162891 /9958324261/ 8618715599 / 9448312978

Klive Special Article ಭವ್ಯ ಇತಿಹಾಸದ ಬೆಡಗು..ಸೊರಬದ ” ಉದ್ರಿ”-ಕಣ್ಣಿಗೆ ಕಂಡಷ್ಟು… ಲೇ: ದಿಲೀಪ್ ನಾಡಿಗ್

0

Klive Special Article ಸೊರಬ(ಸುರಭಿಪುರದ) ಉದ್ದರೆ(ಉದ್ರಿ)ಯೊಳಗೆ
ಭವ್ಯ ಇತಿಹಾಸವಡಗಿದೆ ಕಲ್ಲು, ಕಲ್ಲಿನಲಿ.

ಕಳೆದ ವರ್ಷ, 2025 ರ ಆಗಸ್ಟ್ ನಲ್ಲಿ ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ, ಶಿವಮೊಗ್ಗ (ರಿ) ಇದರ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರೂ ಐತಿಹಾಸಿಕ ಸ್ಥಳಗಳ ಛಾಯಾಗ್ರಾಹಕರೂ ಆದ ಆದಿತ್ಯಪ್ರಸಾದರು ಹುಡುಕಲು ಹೊರಟಿದ್ದು ಕಣ್ಮರೆಯಾಗಿರುವ 14 ಶಾಸನಗಳನ್ನು, ಗಮ್ಯಸ್ಥಾನವನ್ನೇನೋ ತಲುಪಿದ್ದರು. ಆದರೆ ಅದನ್ನು ಕಾಣುವ ಅವಕಾಶವಿಲ್ಲದೆ ಸುಮಾರು ಮೂವತ್ತು ಅಡಿಗಳಷ್ಟು ಆಳದ ನೀರಿರುವ ಕಂದಕದ ಮೇಲ್ಭಾಗದಲ್ಲಿರುವ ಬಗ್ಗೆ ಮಾಹಿತಿ ದೊರಕಿತು. Klive Special Article ಮುಂದಿನ ಮಾರ್ಚಿ, ಏಪ್ರಿಲ್ ವರೆಗೂ ಸಾಧ್ಯವಿಲ್ಲ ಎಂದು ಸ್ಥಳೀಯರು ತಿಳಿಸಿದ ಕಾರಣ ಮುಂದಿನ ವರ್ಷ ಅದನ್ನು ಅಧ್ಯಯನ ಮಾಡುವ ಭರವಸೆಯ ಬೆಳಕಿನೊಂದಿಗೆ ಹಿಂತಿರುಗಬೇಕಾಯಿತು. ಸೊರಬ ತಾಲ್ಲೂಕಿನ ಉದ್ರಿಯ ವೀರಭದ್ರೇಶ್ವರ‌ ದೇವಾಲಯದ ಎದುರು ಭಾಗದ, ಬನಶಂಕರಿ‌ ಅಮ್ಮನವರ‌ದೇವಾಲಯದ ಹಿಂಭಾಗದಲ್ಲಿರುವ ಹೊಂಡದ ತೂಬಿನ ಮೇಲೆ ಕಂಡಿದ್ದು ಬರೋಬ್ಬರಿ ಹದಿನಾಲ್ಕು ಶಾಸನಗಳು. ಹೊಂಡದ ತೂಬಿನ ಮೇಲೆಹದಿನಾಲ್ಕು ಶಾಸನಗಳನ್ನು ಹಾಕಿ ಕಾಲ್ಸಂಕ ಮಾಡಿಕೊಂಡು ಭವ್ಯ ಇತಿಹಾಸವನ್ನು ಸುಮಾರು ಹತ್ತು ಅಡಿ ಮಣ್ಣಿನಡಿಯಲ್ಲಿ ಹಾಕಲಾಗಿದೆ. ಆ ತೂಬಿನೊಳಗೆ ಬೆಳಕು ಬಿಟ್ಟು ಇಣುಕಿದಾಗ ಕಂಡಿದ್ದು ಹದಿನಾಲ್ಕು ಶಾಸನದ ಕಲ್ಲುಗಳು ಬೋರಲಾಗಿ‌ಮಲಗಿ ತಮ್ಮ ಗತವೈಭವದ ಜೊತೆಗೆ, ತ್ಯಾಗ, ಬಲಿದಾನವನ್ನು ಸಾರುತ್ತಿವೆ, ಸುಮಾರು ಮೂವತ್ತು ಅಡಿ ಉದ್ದದ್ದ ತೂಬಿನೊಳಗೆ ನಾಗಲೋಕವೇ ಸೃಷ್ಟಿ ಯಾದಂತೆ‌ಕಾಣುತ್ತಿತ್ತು.‌ ಅಂತೂ ಹೊಸ ಸಾಹಸ, ಉತ್ಸಾಹದೊಂದಿಗೆ ಹಲವು ಚಿತ್ರ ಗಳೊಂದಿಗೆ ಮುಂದಿನ ದಿನಗಳಲ್ಲಿ ‌ಈ‌ ಶಾಸನಗಳನ್ನು ಜಿಲ್ಲಾಢಳಿತದ ನೆರವಿನೊಂದಿಗೆ ಹೊರತೆಗೆಸಿ ಅಧ್ಯಯನ‌ನಡೆಸುವ ತೀರ್ಮಾನದೊಂದಿಗೆ ನಾಗದೇವತೆಗಳ ದರ್ಶನದಿಂದ ಬೆವರುತ್ತಿದ್ದ ಮುಖವನ್ನು ಒರೆಸಿಕೊಂಡು ವಾಪಾಸು ಬರಲಾಯಿತು.

ದಿಲೀಪ್ ನಾಡಿಗ್,
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯನ ವೇದಿಕೆ, ಶಿವಮೊಗ್ಗ.

ಚಿತ್ರಕೃಪೆ:

ಶ್ರೀ ಆದಿತ್ಯ ಪ್ರಸಾದ್, ಸದಸ್ಯರು,
ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯನ ವೇದಿಕೆ, ಶಿವಮೊಗ್ಗ.
ರಾಯಲ್ ಕಾಫೀ ವರ್ಕ್ಸ್.

ವಿಶೇಷ ಧನ್ಯವಾದಗಳು:
ಡಾ. ಎಸ್.ಜಿ ಸಾಮಕ್,
ಹಿರಿಯ ಇತಿಹಾಸ ಸಂಶೋಧಕರು ಹಾಗೂ
ಅಧ್ಯಕ್ಷರು, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯನ ವೇದಿಕೆ, ಶಿವಮೊಗ್ಗ.

Breaking News ಜೂನ್ 5. ವೈಮಾನಿಕ ದಾಳಿ ಸೈರನ್ ಕೇಳಿಬರಲಿದೆ. ಆ ಸಂದರ್ಭ ಸುರಕ್ಷಾ ಕ್ರಮಗಳನ್ನ ಹೇಗೆ ಅನುಸರಿಸಬೇಕು? ಅಣಕು ಪ್ರದರ್ಶನವಿದೆ ಆತಂಕ ಪಡಬೇಡಿ.

0

Breaking News ದೇಶದ ರಕ್ಷಣಾ ಸಿದ್ದತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ, ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಜೂ.5 ರ ಸಂಜೆ 5 ಗಂಟೆಗೆ ‘ಮಾಕ್ ಡ್ರಿಲ್’ (ಅಣಕು ಪ್ರದರ್ಶನ) ಆಯೋಜಿಸಲಾಗಿದೆ. ಇದು ಕೇವಲ ಮುನ್ನೆಚ್ಚರಿಕೆ ಮತ್ತು ತರಬೇತಿಯ ಪ್ರದರ್ಶನವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ತಿಳಿಸಿದ್ದಾರೆ.
ಗುರುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಕುರಿತು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಅಣಕು ಪ್ರದರ್ಶನದ ಪೂರ್ವಭಾವಿ ಸಿದ್ದತೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತನಾಡಿ, 2026 ನೇ ಸಾಲಿನಲ್ಲಿ ರಾಷ್ಟçಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದ್ದು ಈ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿಯೂ ಶುಕ್ರವಾರ ಸಂಜೆ 5 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್ ಏರ್ಪಡಿಸಲಾಗಿದೆ.
ಆಕಸ್ಮಿಕ ವಾಯುದಾಳಿ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರನ್ನು ಹೇಗೆ ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು, ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಹೇಗೆ ಒದಗಿಸಬೇಕು ಮತ್ತು ವಿವಿಧ ಇಲಾಖೆಗಳು ಹೇಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ.
ಈ ಅಣಕು ಪ್ರದರ್ಶನವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕದಳ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ನಾಗರೀಕ ರಕ್ಷಣಾ ಸ್ವಯಂ ಸೇವಕರು, ಗೃಹರಕ್ಷಕರು, ಎನ್‌ಸಿಸಿ ಹಾಗೂ ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಯಲಿದೆ.
ಸೈರನ್ ಮೊಳಗಿಸುವಿಕೆ : ಸಾರ್ವಜನಿಕರು ಗಾಬರಿಯಾಗಬೇಡಿ
Breaking News ವೈಮಾನಿಕ ದಾಳಿಯ ಮುನ್ಸೂಚನೆ ನೀಡುವ 2 ನಿಮಿಷಗಳ ಸೈರನ್ ಮೊಳಗಿಸಲಾಗುವುದು. ಸೈರನ್ ಸದ್ದು ಕೇಳಿದ ತಕ್ಷಣ ನಾಗರಿಕರು ಗಾಬರಿಯಾಗಬಾರದು.ಇದು ಕೇವಲ ತರಬೇತಿಯ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಮ್ಮಿಕೊಳ್ಳಲಾಗಿದೆ.
ತಾಲೀಮಿನ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳು ಹಾಗೂ ಆಂಬ್ಯುಲೆನ್ಸ್ಗಳ ಸಂಚಾರ ಇರಲಿದೆ, ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುವುದು, ಹುಡುಕಾಟ ಮತ್ತು ರಕ್ಷಣೆ ಹಾಗೂ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸಾಗಿಸುವ ಪ್ರದರ್ಶನವಿರುತ್ತದೆ ಎಂದರು.
ನಗರದಲ್ಲಿ ನಡೆಯಲಿರುವ ಈ ತಾಲೀಮು ಕೇವಲ ನಾಗರಿಕರ ಸುರಕ್ಷತೆ ಮತ್ತು ಜಾಗೃತಿಗಾಗಿ ಹಮ್ಮಿಕೊಂಡಿರುವ ಸಾಂಪ್ರದಾಯಿಕ ಸಿದ್ಧತೆಯಾಗಿದ್ದು ಸಾರ್ವಜನಿಕರು ಸಹ ವೀಕ್ಷಿಸಲು ಭಾಗವಹಿಸಬಹುದು ಎಂದು ತಿಳಿಸಿದರು.
ಎಎಸ್‌ಪಿ ಕಾರಿಯಪ್ಪ ಮಾತನಾಡಿ, ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ಸಂಬಂಧಿಸಿದವರು ನಿರ್ವಹಿಸಬೇಕು. ಅಣಕು ಪ್ರದರ್ಶನ ವೇಳೆ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ಅಣಕು ಪ್ರದರ್ಶನದಲ್ಲಿ ವೈಮಾನಿಕ ದಾಳಿ, ದಾಳಿಯಿಂದ ಹಾನಿಗೊಳಗಾದ ಗುಡಿಸಲು, ರಕ್ಷಣೆಗೆ ಅಗತ್ಯವಾದ ಅಗ್ನಿ ಶಾಮಕ ದಳ, ರಕ್ಷಣಾ ಪಡೆ, ಆಂಬುಲೆನ್ಸ್ , ಆಸ್ಪತ್ರೆ, ಕೇಂದ್ರ ಮಾಹಿತಿ ಕೇಂದ್ರ ಹೀಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಮತ್ತು ಡ್ರೋನ್ ವಿಡಿಯೋಕರಣ ಸಹ ಮಾಡಲಾಗುವುದು. ಇದು ಕೇವಲ ರಕ್ಷಣಾ ಸಿದ್ದತೆಯ ಪರಿಶೀಲನೆಗಾಗಿ ನಡೆಸುವ ಕೃತಕ ಅಣಕು ಪ್ರದರ್ಶನವಾದ್ದರಿಂದ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡವಾಗಿದ್ದು ಸಾರ್ವಜನಿಕರು ವೀಕ್ಷಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಡಿಹೆಚ್‌ಓ ಡಾ.ನಟರಾಜ್ ಕೆ ಎಸ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಗೀತಾ, ಡಿಎಸ್‌ಪಿ ಡಿಆರ್ ದಿಲೀಪ್ ಕುಮಾರ್, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪಾಲಿಕೆ, ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

DK Shivakumar ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಜನಗಳ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ- ಡಿ.ಕೆ.ಶಿವಕುಮಾರ್.

0

DK Shivakumar ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು..

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ, ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಿ. ಅಭಿವೃದ್ಧಿಯ ಹಾದಿಗೆ ಮೆಟ್ಟಿಲಾಗಿ. ಜನ ಮೆಚ್ಚುವ ಹಾಗೇ ಕೆಲಸ ಮಾಡಿ. ಸರ್ಕಾರಕ್ಕೂ ಒಳ್ಳೆಯ ಹೆಸರು ತನ್ನಿ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.

DK Shivakumar ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್‌, ಸಚಿವರಾದ ರಾಮಲಿಂಗಾ ರೆಡ್ಡಿ, ಈಶ್ವರ್‌ ಖಂಡ್ರೆ, ಯು.ಟಿ. ಖಾದರ್, ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.