Drinking Water Supplier Shivamogga ಮೆಸ್ಕಾಂ ಇಲಾಖೆಯ ನಗರ ಉಪ-ವಿಭಾಗ-2 ರ ವ್ಯಾಪ್ತಿಯಲ್ಲಿರುವ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಕಾರಣದಿಂದಾಗಿ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಜೂನ್ 7 ರಂದು ಮೆಸ್ಕಾಂ ವತಿಯಿಂದ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ.
Drinking Water Supplier Shivamogga ಪರಿಣಾಮವಾಗಿ, ಜೂನ್ 7 ಮತ್ತು ಜೂನ್ 8 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಈ ಪರಿಸ್ಥಿತಿಯನ್ನು ಅರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ಶಿವಮೊಗ್ಗದ ಕನನೀಸ ಮತ್ತು ಒಳ ಮಂಡಳಿ ನಿರ್ವಹಣೆ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Drinking Water Supplier Shivamogga ಜೂನ್ 7&8 ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ. ಕನನೀಸ & ಒಳಚರಂಡಿ ಮಂಡಳಿ ಪ್ರಕಟಣೆ.
World Environment Day ಹೆಚ್ಚು ಮರಗಳನ್ನ ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕು -ರಿತೇಶ್ ಜೋಷಿ.
World Environment Day ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಿನಾಂಕ 05-06-2026 ರಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಕಾರ್ಖಾನೆಯ ಆವರಣದಲ್ಲಿ ವಿವಿಧ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಬೆಳಿಗ್ಗೆಯೇ ಚಾಲನೆ ದೊರೆತಿದ್ದು, ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಶ್ರೀವತ್ಸನ್, ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಶ್ರೀ ಎಂ.ಜಿ. ನಾಗರಾಜ್, ಕಾರ್ಪೊರೇಟ್ ಹೆಡ್ ಆಫೀಸ್‌ನ ಮಾನವ ಸಂಪನ್ಮೂಲ ವಿಭಾಗದ ಸಿ.ಎಚ್.ಆರ್.ಓ ಶ್ರೀ ರಿತೇಶ್ ಜೋಶಿ, ಕಾರ್ಮಿಕ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಒಟ್ಟಾಗಿ ಸೇರಿ ಕಾರ್ಖಾನೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಪರಿಸರದ ಸಮತೋಲನ ಕಾಪಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸಾಯಂಕಾಲ 4.00 ಗಂಟೆಗೆ ಕಾರ್ಖಾನೆಯ ಆಡಿಟೋರಿಯಂನಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಪ್ಪಳ ಪರಿಸರ ಇಲಾಖೆಯ ಹಿರಿಯ ಸಹಾಯಕ ಪರಿಸರ ಅಧಿಕಾರಿಗಳಾದ ಶ್ರೀ ಮುರುಳೀಧರ್ ಅವರು ಭಾಗವಹಿಸಿ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಹವಾಮಾನ ಬದಲಾವಣೆಯ ಸವಾಲುಗಳ ಕುರಿತು ಸಮಗ್ರವಾಗಿ ಮಾತನಾಡಿದರು. ಕೈಗಾರಿಕೆಗಳು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಶ್ರೀ ಎಂ.ಜಿ. ನಾಗರಾಜ್, ಹೆಚ್ ಆರ್ ಎಂ ವಿಭಾಗದ ಉಪಾಧ್ಯಕ್ಷರು ಶ್ರೀ ಶಿವಯ್ಯ ಸ್ವಾಮಿ ಹಾಗೂ ಮುಖ್ಯ ಅತಿಥಿ ಶ್ರೀ ಮುರುಳೀಧರ್ ಉಪಸ್ಥಿತರಿದ್ದು ಪರಿಸರದ ಉನ್ನತಿ, ಕೈಗಾರಿಕಾ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪರಿಸರ ಸಂರಕ್ಷಣೆಯು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ ಪ್ರತಿಯೊಬ್ಬರ ಜೀವನ ಶೈಲಿಯ ಭಾಗವಾಗಬೇಕು ಎಂದು ಅವರು ಕರೆ ನೀಡಿದರು.
World Environment Day ಪರಿಸರ ದಿನಾಚರಣೆಯ ಅಂಗವಾಗಿ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲೆ, ಪ್ರಬಂಧ, ಘೋಷಣೆ ಮತ್ತು ಪೋಟೋಗ್ರಾಫಿ ಸ್ಪರ್ಧೆಯ ವಿಜೇತರಾದವರಿಗೆ ವೇದಿಕೆಯಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೋಪ್ಪಳ ತಾಲ್ಲೂಕಿನ ಅತ್ಯಧಿಕ ಅಂಕ ಗಳಿಸಿದ ಎಂಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಸನ್ಮಾನಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಪ್ರೋತ್ಸಾಹ ನೀಡಿತು.
ಕಾರ್ಯಕ್ರಮದಲ್ಲಿ ಕಾರ್ಮಿಕರು ಮುಖಂಡರು, ಕಾರ್ಮಿಕರು, ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಹಸಿರು ಪರಿಸರ ನಿರ್ಮಾಣ, ಮಾಲಿನ್ಯ ನಿಯಂತ್ರಣ ಮತ್ತು ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನಾಚರಣೆ-2026 ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಮುರುಳೀಧರ್ ನಾಡಿಗೇರ್
ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸೌಧದಲ್ಲಿ ವಿಧಾನ ಸಭೆಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಉಪಸ್ಥಿತರಿದ್ದರು.
Department of Kannada and Culture ಅಮೂಲ್ಯವೆನಿಸಿದ ಕನ್ನಡ ಕೃತಿಗಳ ಮರುಮುದ್ರಣಕ್ಕೆ ಸಾಹಿತ್ಯಾಸಕ್ತರು ಸಲಹೆ ನೀಡಲು ಇಲಾಖೆ ಪ್ರಕಟಣೆ
Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಹಿಂದೆ ಪ್ರಕಟಿಸಿರುವ ಅಮೂಲ್ಯ ಕೃತಿಗಳ ಮರು ಮುದ್ರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಕೋರಿಕೆಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಯು ಪ್ರಕಟಿಸಿರುವ ಕೃತಿಗಳಲ್ಲಿ ಯಾವ ಕೃತಿಗಳನ್ನು ಮರು ಮುದ್ರಣ ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕರು ಮತ್ತು ಸಾಹಿತ್ಯ ವಲಯದ ತಜ್ಞರ ಅನಿಸಿಕೆಗಳನ್ನು ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಆಸಕ್ತರು ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ kannadasiri.karnataka.gov.in ಮೂಲಕ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಕುವೆಂಪು ರಂಗಮಂದಿರ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ
ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ತಿಳಿಸಿದ್ದಾರೆ.
ಖಾತೆ ಬಗ್ಗೆ ಅತೃಪ್ತಿ:ಸಚಿವ ರಾಮಲಿಂಗಾರೆಡ್ಡಿ ರಾಜಿನಾಮೆ!
ಇನ್ನೂ ನೂತನ ಸಚಿವ ಸಂಪುಟ ರೂಪುಗೊಂಡು ಕಾರ್ಯಶೀಲವಾಗುವ ಮುನ್ನವೇ ಸಚಿವರೊಬ್ಬರ ರಾಜೀನಾಮೆ ಕಾಂಗ್ರೆಸ್ ಪಕ್ಷದಲ್ಲಿನ ಪರಸ್ಪರ ತಪ್ಪುಗ್ರಹಿಕೆಗಳಿಗೆ ಉದಾಹರಣೆಯಾಗಿದೆ.
ಹಿರಯರಾದ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಾಗಲೆಲ್ಲ ಬಹುತೇಕ ಸಂಪುಟ ಸಚಿವರಾಗಿ ಅಧಿಕಾರದ ಸವಿಯುಂಡಿದ್ದಾರೆ.
ಈಗ ಜಲಸಂಪನ್ಮೂಲಖಾತೆ ಬೇಡವೇ ಬೇಡ. ಬೆಂಗಳೂರು ಅಭಿವೃದ್ಧಿ ಖಾತೆ ನೀಡಿ ಎಂದು ವರಾತ ಹಚ್ಚಿರುವುದು ಸುದ್ದಿಯಾಗಿದೆ. ಅಷ್ಟೇ ಅಲ್ಲ “ಆತ್ಮಸಾಕ್ಷಿ ವಿರುದ್ಧ ಕಾರ್ಯಶೀಲನಾಗಲು ಸಾಧ್ಯವಿಲ್ಲ ” ಎಂಬ ಕಾರಣ ನೀಡಿ ರಾಜೀನಾಮೆ ಪತ್ರವನ್ನೂ ರವಾನಿಸದ್ದಾರೆ .
ಮುಖ್ಯಮಂತ್ರಿ ಬದಲಾವಣೆಯಂತಹ ಸನ್ನಿವೇಶ ಬಹಳ ಸೂಕ್ಷ್ಮವಾಗಿದ್ದು ಇಡೀ ಕಾಂಗ್ರೆಸ್ ಪಕ್ಷ ಇದೀಗ ಹೌಹಾರುವಂತಾಗಿದೆ. ಏಕೆಂದರೆ ಹಿರಿಯ ರಾಜಕಾರಣಿ ಮತ್ತು ಸದಾ ಗೆಲ್ಲುತ್ತಲೇ ಬಂದ
ರಾಮಲಿಂಗಾರೆಡ್ಡಿ, ಉತ್ತಮ ಸಚಿವರಾಗಿಯೂ ಹೆಸರುಗಳಿಸಿದವರು.
ಆದರೆ ಈಗಿನ
ಪರಿಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಕೂಡ ಕೊಂಚ ಗಡುಸಾಗಿಯೇ ಇದೆ.
ಮನವೊಲಿಸಿ.ಇಲ್ಲದಿದ್ದರೆ ರಾಜಿನಾಮೆ ಅಂಗೀಕರಿಸಿ ಎಂದು ಸೂಚನೆ ನೀಡಿರುವುದು ವರದಿಯಾಗಿದೆ.
ಇತ್ತ ಇನ್ನೋರ್ವ ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ತಮ್ಮ ಖಾತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ವಿಪಕ್ಷಗಳಿಗೆ ಟೀಕಿಸಲು ಇದೊಂದು ಸಂದರ್ಭ ಒದಗಿಬಂದಿದೆ.
ರಾಹುಲ್ ಗಾಂಧಿ ಬೆಂಗಳೂರು ಭೇಟಿಗ ದಿನವೇ ರಾಜಿನಾಮೆ ಪ್ರಕರಣ ನಡೆದಿದೆ. ಕಡಕ್ ಆಗಿ ರಾಹುಲ್ ಏನು ನಿರ್ಣಯ ನೀಡುತ್ತಾರೋ ಕಾದು ನೋಡಬೇಕಿದೆ.
JCI Shivamogga Malnad “ನನ್ನ ಆಯ್ಕೆ- ಪ್ಲಾಸ್ಟಿಕ್ ಮುಕ್ತ ಭವಿಷ್ಯ ” ಪರಿಸರ ದಿನದ ವಿಶೇಷಜೆಸಿಐ ಸಂಸ್ಥೆಯಿಂದ” ಸಸ್ಟೈನಬಲ್ ಸಿಪ್ಪಿಂಗ್” ಕಾರ್ಯಕ್ರಮ.
JCI Shivamogga Malnad ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜೇಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ “ಸಸ್ಟೇನಬಲ್ ಸಿಪ್ಪಿಂಗ್” ಅಭಿಯಾನದಡಿ ಜಾಗೃತಿ ಹಾಗೂ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಸುಮಾರು 50ಕ್ಕೂ ಹೆಚ್ಚು ಆಟೋ ಚಾಲಕರು ಭಾಗವಹಿಸಿದ್ದು, ಅವರ ಉಪಸ್ಥಿತಿಯಲ್ಲಿ ಈ ಯೋಜನೆಗೆ ಸಾಂಕೇತಿಕ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ
ಶ್ರೀ ಡಿ. ಎಸ್. ಅರುಣ್, ಮಾನ್ಯ ಶಾಸಕ, ವಿಧಾನ ಪರಿಷತ್ತು, ಶಿವಮೊಗ್ಗ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ
, ಶ್ರೀ ದೇವರಾಜ್ ಟಿ.ವಿ., ವೃತ್ತ ನಿರೀಕ್ಷಕರು, ಸಂಚಾರಿ ಪೊಲೀಸ್, ಶಿವಮೊಗ್ಗ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತುಂಬಿದರು.
ಶ್ರೀಯುತ ಪ್ರಭಾಕರ್ H. S ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ )ಶಿವಮೊಗ್ಗ ಮಹಾನಗರ ಪಾಲಿಕೆ.
ಶ್ರೀ ವಿಕಾಸ ಆರ್
ಹಿರಿಯ ಆರೋಗ್ಯ ನಿರೀಕ್ಷಕರು ಶಿವಮೊಗ್ಗ ಮಹಾನಗರ ಪಾಲಿಕೆ.
ಪ್ರಭುರಾಜ್
ಹಿರಿಯ ಆರೋಗ್ಯ ನಿರೀಕ್ಷಕರು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ
ಗೌರವಾನ್ವಿತ ಅತಿಥಿಗಳಾಗಿ
ಜೆಎಫ್‌ಎಸ್ ಗೌರೀಶ್ ಭಗವತ್ ಕೆ.ವಿ., ನಿಕಟಪೂರ್ವ ವಲಯಾಧ್ಯಕ್ಷರು, ವಲಯ 24, ಜೆಸಿಐ ಭಾರತ
ಜೆಎಫ್‌ಎಸ್ ಆದರ್ಶ ಸರಾಫ್, ವಲಯ ಉಪಾಧ್ಯಾಧ್ಯಕ್ಷರು, ವಲಯ 24, ಜೆಸಿಐ ಭಾರತ,
ಜೆಸಿ ರೇಖಾ ರಂಗನಾಥ್, ವಲಯಾಧಿಕಾರಿ, ವಲಯ 24, ಜೆಸಿಐ ಭಾರತ ಉಪಸ್ಥಿತರಿದ್ದರು.
ಜೆಸಿ ಘನಶ್ಯಾಮ ಜಿ. ಗಿರಿಮಾಜಿ, ಅಧ್ಯಕ್ಷರು
ಜೆಸಿ ಸುಮಂತ್ ಸಿ.ವಿ., ಕಾರ್ಯದರ್ಶಿ
ಜೆಸಿ ಸುಮಾ ಒಡೆಯರ್, ಲೇಡಿ ಜೆಸಿ ಅಧ್ಯಕ್ಷರು
ಜೆಸಿ ಗಿರೀಶ್ ಒಡೆಯರ್, ಉಪಾಧ್ಯಕ್ಷರು, ಸಾಮಾಜಿಕ ಅಭಿವೃದ್ಧಿ
ಜೆಸಿ ವಿಶ್ವಾಸ ಎಸ್.ಡಿ., ಉಪಾಧ್ಯಕ್ಷರು, ಪಿಆರ್ & ಮಾರ್ಕೆಟಿಂಗ್
ಜೆಸಿ ಶರತ್ ಶಾಸ್ತ್ರಿ, ಯೋಜನಾ ನಿರ್ದೇಶಕರು
ಇವರುಗಳೊಂದಿಗೆ ಎಲ್ಲಾ ಜೆಸಿಐ ಶಿವಮೊಗ್ಗ ಮಲ್ನಾಡ್ ಸದಸ್ಯರು, ಪದಾಧಿಕಾರಿಗಳು ಹಾಗೂ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

JCI Shivamogga Malnad ಪ್ಲಾಸ್ಟಿಕ್ ಬಳಕೆ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವುದರ ಜೊತೆಗೆ ಪರಿಸರಕ್ಕೂ ಅಪಾಯಕಾರಿಯಾಗಿದೆ. ಬಿಸಿಲಿನ ಸಮಯದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಿಂದ ವಿಷಕಾರಿ ಅಂಶಗಳು ನೀರಿಗೆ ಸೇರುವ ಸಂಭವ ಇರುವುದರಿಂದ ಜನರ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂಬುದನ್ನು ಗಣ್ಯರು ತಮ್ಮ ಭಾಷಣಗಳಲ್ಲಿ ತಿಳಿಸಿದರು.
ಈ ಯೋಜನೆಯಡಿ ಹಂತ ಹಂತವಾಗಿ 500ಕ್ಕೂ ಹೆಚ್ಚು ಸ್ಟೀಲ್ ನೀರಿನ ಬಾಟಲ್‌ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ. ಈ ಮಹತ್ವದ ಯೋಜನೆಗೆ ಸುಮಾರು ₹1 ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ವಿವಿಧ ದಾನಿಗಳ ಸಹಕಾರದಿಂದ ನಿಧಿ ಸಂಗ್ರಹಿಸಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಜೇಸಿಐ ಸಂಸ್ಥೆ ಸದಾ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, “ಸಸ್ಟೇನಬಲ್ ಸಿಪ್ಪಿಂಗ್” ಮೂಲಕ ಆರೋಗ್ಯ, ಹಣದ ಉಳಿವು ಹಾಗೂ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಸಂದರ್ಭದಲ್ಲಿ “ಒಂದು ನಗರ, ಒಂದು ಗುರಿ, ಒಂದು ಒಳ್ಳೆಯ ಅಭ್ಯಾಸ” ಎಂಬ ಸಂದೇಶದೊಂದಿಗೆ ಜನರಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಲಾಯಿತು.
“ನನ್ನ ಆಯ್ಕೆ – ಪ್ಲಾಸ್ಟಿಕ್ ಮುಕ್ತ ಭವಿಷ್ಯ” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಜೂನ್ 5. ವೈಮಾನಿಕ ದಾಳಿ ಸೈರನ್ ಕೇಳಿಬರಲಿದೆ.ಆ ಸಂದರ್ಭ ಸುರಕ್ಷಾ ಕ್ರಮಗಳನ್ನ ಹೇಗೆ ಅನುಸರಿಸಬೇಕು? ಅಣಕು ಪ್ರದರ್ಶನವಿದೆ, ಆತಂಕ ಪಡಬೇಡಿ
ದೇಶದ ರಕ್ಷಣಾ ಸಿದ್ದತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಿದ್ಧತೆಯ ಭಾಗವಾಗಿ, ಶಿವಮೊಗ್ಗ ನಗರದಲ್ಲಿ ವೈಮಾನಿಕ ದಾಳಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಇಲಾಖೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಜೂ.5 ರ ಸಂಜೆ 5 ಗಂಟೆಗೆ ‘ಮಾಕ್ ಡ್ರಿಲ್’ (ಅಣಕು ಪ್ರದರ್ಶನ) ಆಯೋಜಿಸಲಾಗಿದೆ. ಇದು ಕೇವಲ ಮುನ್ನೆಚ್ಚರಿಕೆ ಮತ್ತು ತರಬೇತಿಯ ಪ್ರದರ್ಶನವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೊಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ತಿಳಿಸಿದ್ದಾರೆ.
ಗುರುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಕುರಿತು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಅಣಕು ಪ್ರದರ್ಶನದ ಪೂರ್ವಭಾವಿ ಸಿದ್ದತೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತನಾಡಿ, 2026 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ನಾಗರೀಕ ರಕ್ಷಣೆ, ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನ ನಡೆಸಲು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದ್ದು ಈ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿಯೂ ಶುಕ್ರವಾರ ಸಂಜೆ 5 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್ ಏರ್ಪಡಿಸಲಾಗಿದೆ.
ಆಕಸ್ಮಿಕ ವಾಯುದಾಳಿ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಸಾರ್ವಜನಿಕರನ್ನು ಹೇಗೆ ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು, ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ಹೇಗೆ ಒದಗಿಸಬೇಕು ಮತ್ತು ವಿವಿಧ ಇಲಾಖೆಗಳು ಹೇಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ.
ಈ ಅಣಕು ಪ್ರದರ್ಶನವು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹರಕ್ಷಕದಳ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ನಾಗರೀಕ ರಕ್ಷಣಾ ಸ್ವಯಂ ಸೇವಕರು, ಗೃಹರಕ್ಷಕರು, ಎನ್‌ಸಿಸಿ ಹಾಗೂ ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಡೆಯಲಿದೆ.
ಸೈರನ್ ಮೊಳಗಿಸುವಿಕೆ : ಸಾರ್ವಜನಿಕರು ಗಾಬರಿಯಾಗಬೇಡಿ
ವೈಮಾನಿಕ ದಾಳಿಯ ಮುನ್ಸೂಚನೆ ನೀಡುವ 2 ನಿಮಿಷಗಳ ಸೈರನ್ ಮೊಳಗಿಸಲಾಗುವುದು. ಸೈರನ್ ಸದ್ದು ಕೇಳಿದ ತಕ್ಷಣ ನಾಗರಿಕರು ಗಾಬರಿಯಾಗಬಾರದು.ಇದು ಕೇವಲ ತರಬೇತಿಯ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಮ್ಮಿಕೊಳ್ಳಲಾಗಿದೆ.
ತಾಲೀಮಿನ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳು ಹಾಗೂ ಆಂಬ್ಯುಲೆನ್ಸ್ಗಳ ಸಂಚಾರ ಇರಲಿದೆ, ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುವುದು, ಹುಡುಕಾಟ ಮತ್ತು ರಕ್ಷಣೆ ಹಾಗೂ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸಾಗಿಸುವ ಪ್ರದರ್ಶನವಿರುತ್ತದೆ ಎಂದರು.
ನಗರದಲ್ಲಿ ನಡೆಯಲಿರುವ ಈ ತಾಲೀಮು ಕೇವಲ ನಾಗರಿಕರ ಸುರಕ್ಷತೆ ಮತ್ತು ಜಾಗೃತಿಗಾಗಿ ಹಮ್ಮಿಕೊಂಡಿರುವ ಸಾಂಪ್ರದಾಯಿಕ ಸಿದ್ಧತೆಯಾಗಿದ್ದು ಸಾರ್ವಜನಿಕರು ಸಹ ವೀಕ್ಷಿಸಲು ಭಾಗವಹಿಸಬಹುದು ಎಂದು ತಿಳಿಸಿದರು.
ಎಎಸ್‌ಪಿ ಕಾರಿಯಪ್ಪ ಮಾತನಾಡಿ, ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ಸಂಬಂಧಿಸಿದವರು ನಿರ್ವಹಿಸಬೇಕು. ಅಣಕು ಪ್ರದರ್ಶನ ವೇಳೆ ಯಾರಿಗೂ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ಅಣಕು ಪ್ರದರ್ಶನದಲ್ಲಿ ವೈಮಾನಿಕ ದಾಳಿ, ದಾಳಿಯಿಂದ ಹಾನಿಗೊಳಗಾದ ಗುಡಿಸಲು, ರಕ್ಷಣೆಗೆ ಅಗತ್ಯವಾದ ಅಗ್ನಿ ಶಾಮಕ ದಳ, ರಕ್ಷಣಾ ಪಡೆ, ಆಂಬುಲೆನ್ಸ್ , ಆಸ್ಪತ್ರೆ, ಕೇಂದ್ರ ಮಾಹಿತಿ ಕೇಂದ್ರ ಹೀಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಮತ್ತು ಡ್ರೋನ್ ವಿಡಿಯೋಕರಣ ಸಹ ಮಾಡಲಾಗುವುದು. ಇದು ಕೇವಲ ರಕ್ಷಣಾ ಸಿದ್ದತೆಯ ಪರಿಶೀಲನೆಗಾಗಿ ನಡೆಸುವ ಕೃತಕ ಅಣಕು ಪ್ರದರ್ಶನವಾದ್ದರಿಂದ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡವಾಗಿದ್ದು ಸಾರ್ವಜನಿಕರು ವೀಕ್ಷಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಡಿಹೆಚ್‌ಓ ಡಾ.ನಟರಾಜ್ ಕೆ ಎಸ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಗೀತಾ, ಡಿಎಸ್‌ಪಿ ಡಿಆರ್ ದಿಲೀಪ್ ಕುಮಾರ್, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪಾಲಿಕೆ, ಕೆಎಸ್‌ಆರ್‌ಟಿಸಿ, ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಾವು ಪಾರ್ಕಿನಲ್ಲಿ ನೆಟ್ಟ ಪ್ರತೀ ಗಿಡವೂ ಭವಿಷ್ಯದ ಜೊತೆ ನಾವು ಮಾಡಿಕೊಂಡ ಒಪ್ಪಂದ- ಕಲಗೋಡು ರತ್ನಾಕರ್
ಗೋಪಾಲಗೌಡ ಬಡಾವಣೆ ಯಲ್ಲಿರುವ ಚಂದನ ಆರೋಗ್ಯ ಪಾರ್ಕ್ ನಲ್ಲಿ ಇಂದು ಸಡಗರ ಸಂಭ್ರಮದಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಮುಂಜಾನೆ ಯಿಂದಲೇ ಸದಸ್ಯರು ಇಡೀ ಪಾರ್ಕನ್ನು ಸ್ವಚ್ಚಗೊಳಿಸಿದರು…ಪ್ಲಾಸ್ಟಿಕ್ ಮುಕ್ತ ಮಾಡಿದರು…ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಪಾರ್ಕ್ ನ ಗೌರವ ಅದ್ಯಕ್ಷ ಕಲಗೋಡು ರತ್ನಾಕರ್
ಚಂದನವನ ಪಾರ್ಕ್ – ಹೆಸರೇ ಒಂದು ವಾಗ್ದಾನ. ನಗರೀಕರಣದ ರಭಸದಲ್ಲಿ ಕಳೆದು ಹೋಗ್ತಿರುವ ಹಸಿರಿಗೆ ನಾವು ಕಟ್ಟಿದ ಸಣ್ಣ ಆಶ್ರಯ ಇದು. ಇಲ್ಲಿ ನೆಟ್ಟ ಪ್ರತೀ ಗಿಡವೂ ಭವಿಷ್ಯದ ಜೊತೆ ನಾವು ಮಾಡಿಕೊಂಡ ಒಪ್ಪಂದ ಎಂದರು.
ಪಾರ್ಕ್ ನ ಕಾರ್ಯದರ್ಶಿ
ಗುರುರಾಜ್ ಎಲ್ ಮಾತಾನಾಡಿ, ಪರಿಸರ ರಕ್ಷಣೆ ಅಂದರೆ ಸೆಲ್ಫಿ ತಗೊಂಡು ಗಿಡ ನೆಡೋದು ಅಲ್ಲ. ಅದು ದೈನಂದಿನ ಬದುಕಿನ ಅಭ್ಯಾಸ. ಪ್ಲಾಸ್ಟಿಕ್ ಕಡಿಮೆ ಮಾಡೋದು, ನೀರನ್ನು ಗೌರವಿಸೋದು, ಮಣ್ಣಿನ ಫಲವತ್ತತೆ ಕಾಪಾಡೋದು. ನಮ್ಮ ಕರ್ತವ್ಯ ಎಂದರು
ಅಭಿವೃದ್ಧಿ ಅಂದರೆ ಕಾಂಕ್ರೀಟ್ ಮಾತ್ರ ಅಲ್ಲ. ಅಭಿವೃದ್ಧಿ ಅಂದರೆ ಸಮತೋಲನ. ನಾವು ಕಟ್ಟಿದ ಕಟ್ಟಡಕ್ಕಿಂತ ಹೆಚ್ಚು ಗಿಡ ಬೆಳೆಸಿದ್ದೇವೆಯೇ? ನಾವು ಬಳಸಿದ ನೀರಿಗಿಂತ ಹೆಚ್ಚು ನೀರು ಉಳಿಸಿದ್ದೇವೆಯೇ? ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾಗ ಮಾತ್ರ ನಮ್ಮ ಅಭಿವೃದ್ಧಿ ಸುಸ್ಥಿರವಾಗುತ್ತೆ. ಎಂದರು.
ಕ್ರೀಡಾ ಕಾರ್ಯದರ್ಶಿ ಜಿ ಎಸ್ ಶಿವಕುಮಾರ್ ಮಾತಾನಾಡಿ
ನಮ್ಮ ಪಾರ್ಕ್‌ನ ಪ್ರತೀ ಮರವೂ ಒಂದು ಪಾಠ ಹೇಳುತ್ತೆ – ಬೆಳೆಯಲು ಬೇರು ಬೇಕು, ಬದುಕಲು ಮಣ್ಣು ಬೇಕು. ಮಣ್ಣು ಸತ್ತರೆ ಸಂಸ್ಕೃತಿಯೂ ಬದುಕಲ್ಲ ಎಂದರು.
ಪಾರ್ಕ್ ನ ಹಲವು ಸದಸ್ಯರು ಮಾತಾಡಿ
ಇವತ್ತು ನಾವು ಇಲ್ಲಿ ಸೇರಿದ್ದು ಪ್ರತಿಜ್ಞೆಗಾಗಿ. “ನನ್ನಿಂದ ಒಂದು ಗಿಡ, ನನ್ನ ಮನೆಯಿಂದ ಒಂದು ಪ್ಲಾಸ್ಟಿಕ್ ಕಡಿಮೆ” – ಈ ಸಣ್ಣ ನಿರ್ಧಾರವೇ ದೊಡ್ಡ ಬದಲಾವಣೆಯ ಮೊದಲ ಹೆಜ್ಜೆ.
ಬನ್ನಿ, ಚಂದನವನವನ್ನು ಕೇವಲ ಪಾರ್ಕ್ ಆಗಿ ಉಳಿಸದೆ, ಪರಿಸರ ಪ್ರಜ್ಞೆಯ ಪಾಠಶಾಲೆಯನ್ನಾಗಿ ಮಾಡೋಣ. ಎಂದು ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಪಾರ್ಕಿನ ಸಂಘಟನಾ ಕಾರ್ಯದರ್ಶಿ ಅಶೋಕ್, ಸದಸ್ಯರುಗಳಾದ,ಚಂದ್ರು,ಬಸವರಾಜ್ ಎಚ್ .ಕೆ.
ರಂಗೇಗೌಡ್ರು,ಡಾ.ಗೌತಮ್,ಮಾಲತೇಶ್,ಎ. ಹಾಲೇಶಪ್ಪ,ಜಿ .ಕೆಂಚಪ್ಪ,ಪ್ರಕಾಶ್, ಮಂಜುನಾಥ್, ಸತೀಶ್, ಪಾಂಡುರಂಗ, ಬೋರೇಗೌಡರು,ದೇವರಾಜ್,ಚಂದ್ರನಾಯ್ಕ್,ಶಶಿಧರ್,ನವಿಲಪ್ಪ,ರಘು,ರೋಹಿತ್,ಸತೀಶ್,ಶಿವಪ್ಪ,ಚಂದ್ರಪ್ಪ,ರಾಜು,ವಿಜಯಕುಮಾರ್,ಸ್ವರ್ಣ,ರವಿ,ರಾಮಲಿಂಗ ಪ್ಪ,ಪ್ರಭಾಕರ್,ನಿರ್ಮಲ,ಲಕ್ಷೀದೇವಿ,ಸೇರಿದಂತೆ ಹಲವರು ಹಾಜರಿದ್ದರು.
ಹವಾಮಾನ ಬದಲಾವಣೆ ಸಂದರ್ಭದಲ್ಲಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು- ವಿ.ಅಭಿಷೇಕ್
ಹವಾಮಾನ ಬದಲಾವಣೆಯು ಪ್ರಸ್ತುತ ಇಡೀ ಜಗತ್ತನ್ನು ಕಾಡುತ್ತಿರುವ ಅತ್ಯಂತ ಗಂಭೀರವಾದ ಪರಿಸರ ಸಮಸ್ಯೆಯಾಗಿದ್ದು ಈ ಹವಾಮಾನ ಬದಲಾವಣೆಯು ನಮ್ಮ ಪರಿಸರ, ಆರೋಗ್ಯ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರಮುಖ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಸುಸ್ಥಿರ ಜೀವನ ಶೈಲಿ ಮತ್ತು ವೈಜ್ಞಾನಿಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಶುಕ್ರವಾರದಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದೊಂದಿಗೆ ಹವಾಮಾನ ಬದಲಾವಣೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ಸಮತೋಲನ ತಪ್ಪುತ್ತಿದೆ. ಇದರಿಂದ ಅನಿಶ್ಚಿತ ಮಳೆ, ಇಳುವರಿಯಲ್ಲಿ ಕುಸಿತ, ಪ್ರವಾಹ, ಭೂ ಕುಸಿತ, ಬಿಸಿಗಾಳಿ, ಆರೋಗ್ಯದಲ್ಲಿ ವೈಪರೀತ್ಯಗಳನ್ನು ಎದುರಿಸುತ್ತಿದ್ದೇವೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಧ್ರುವ ಪ್ರದೇಶಗಳಲ್ಲಿನ ಹಿಮನದಿಗಳು ಹಾಗೂ ಹಿಮಾಲಯದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ.
ಇದರಿಂದಾಗಿ ಸಮುದ್ರದ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಕರಾವಳಿ ತೀರದ ನಗರಗಳು ಮತ್ತು ದ್ವೀಪಗಳು ಮುಳುಗಡೆಯಾಗುವ ಭೀತಿ ಎದುರಿಸುತ್ತಿವೆ. ಮಂಗಳೂರು, ಮುಂಬೈನAತಹ ನಗರಗಳು ಸಹ ಮುಳುಗುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗೂ ಹವಾಮಾನ ಬದಲಾವಣೆಯಿಂದ ಮಲೆನಾಡು ಬಯಲುಸೀಮೆಯಾಗಿ, ಮರಳುಗಾಡು ಮಳೆ ಪಡೆಯುವ ನಾಡಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಹವಾಮಾನ ಬದಲಾವಣೆಯಿಂದ ತುಂಬಾ ತೊಂದರೆಗೀಡಾಗುವವರು ರೈತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗವಾಗಿದೆ.
ಆದ್ದರಿಂದ ಹವಾಮಾನ ಬದಲಾವಣೆ, ವೈಪರೀತ್ಯ ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದಾಗಿದೆ.
ಹಾಗೂ ಮುಖ್ಯವಾಗಿ ಯಾವುದೇ ಒಂದು ಉತ್ತಮ ಹಾಗೂ ಗುಣಮಟ್ಟದ ಕ್ರಿಯಾ ಯೋಜನೆಯನ್ನು ತಯಾರಿಸಲು ನಿಖರವಾದ ದತ್ತಾಂಶವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆಯಾದ್ದರಿಂದ ಎಂಪ್ರಿ (ಇಎಂಪಿಆರ್ ಐ)ಸಂಸ್ಥೆ ನೀಡುವ ಇನ್‌ಪುಟ್ಸ್ ಹಾಗೂ ತರಬೇತಿಯು ಇಲಾಖಾ ಮಟ್ಟದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಕ್ರಿಯಾ ಯೋಜನೆಗಳನ್ನು ತಯಾರಿಸಲು ಸಹಕಾರಿಯಾಗಲಿದ್ದು ಅಧಿಕಾರಿ/ನೌಕರರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎAಪ್ರಿ) ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ಕಾರ್ಯಾಗಾರವನ್ನು ಗ್ರಾಮ ಪಂಚಾಯ್ತಿ ಹಂತದಲ್ಲೂ ಮಾಡಿದರೆ ಇನ್ನೂ ಸಹಕಾರಿಯಾಗುತ್ತದೆ.
ಸಂಯುಕ್ತ ರಾಷ್ಟçಗಳು ಸುಮಾರು 17 ಗುರಿಗಳನ್ನು ಇಟ್ಟುಕೊಂಡು 2030 ರ ಹೊತ್ತಿಗೆ ಗುರಿ ಸಾಧಿಸಲು ಕಾಲ ನಿಗದಿಪಡಿಸಿಕೊಂಡಿದ್ದು, ಸುಸ್ಥಿರ ಹವಾಮಾನ ಸಮತೋಲನೆ ಸಹ ಒಂದು ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಂಪ್ರಿ ಸಂಸ್ಥೆ ಶ್ರಮಿಸುತ್ತಿದ್ದು ಎಲ್ಲ ಇಲಾಖೆಗಳು ಸಹಕರಿಸಬೇಕೆಂದರು.
ಕಾರ್ಯಾಗಾರದಲ್ಲಿ ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ. ಪವಿತ್ರಾ ಪಿ. ನಾಯಕ್ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002 ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಅನ್ವಯಿಕ ಮತ್ತು ನೀತಿ ಸಂಶೋಧನೆ ನಡೆಸುತ್ತದೆ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ-ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದ ಅವರು ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆ ಕಾರಣಗಳು, ಜಾಗತಿಕ ಮತ್ತು ಭಾರತೀಯ ಉಪ ಕ್ರಮಗಳು ಸೇರಿದಂತೆ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ನೀರು, ಇಂಧನ, ಆರೋಗ್ಯ, ಸಾರಿಗೆ, ಕೈಗಾರಿಕೆಗಳು, ಕಂದಾಯ, ಸ್ಥಳೀಯ ಸಂಸ್ಥೆಗಳು(ತ್ಯಾಜ್ಯ ನಿರ್ವಹಣೆ)ಸೇರಿದಂತೆ ವಿವಿಧ ಇಲಾಖೆಗಳು ಹೇಗೆ ಸುಸ್ಥಿರ ಕ್ರಿಯಾ ಯೋಜನೆ ರೂಪಿಸಬೇಕೆಂಬ ಬಗ್ಗೆ ವಿವರಿಸಿದರು.
ಬೆಂಗಳೂರಿನ ಎಸಿಡಬ್ಲ್ಯೂಆರ್‌ಎಂ ಜಲ ಸಂಪನ್ಮೂಲ ತಜ್ಞರಾದ ಡಾ. ಉಷಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿವಮೊಗ್ಗದ ಎನ್ ಆರ್ ಡಿ ಎಂ ಎಸ್ ಅಧಿಕಾರಿ ಶಂಕರ್ ಪಿ. ಹಾಗೂ ಎಂಪ್ರಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರುಗಳಾದ ಕುಮಾರಿ ರುಚಿತಾ ಶ್ರೀ ಮತ್ತು ರಾಘವೇಂದ್ರ ಎನ್ ಉಪಸ್ಥಿತರಿದ್ದರು.
JCI Shivamogga ಮಕ್ಕಳಿಗೆ ಹಣ್ಣುಗಳ ಸೇವನೆ ಬಗ್ಗೆ ಅರಿವು ಮೂಡಿಸಿ- ಉದಯ್ ಕಡಂಬ
JCI Shivamogga ಮಕ್ಕಳಿಗೆ ಹಣ್ಣುಗಳ ಸೇವನೆಯ ಮಹತ್ವವನ್ನು ಪರಿಚಯಿಸಬೇಕು ಎಂದು ಉದ್ಯಮಿ ಉದಯ್ ಕಡಂಬ ಹೇಳಿದರು.
ಜೆಸಿಐ ಶಿವಮೊಗ್ಗ ವಿವೇಕ್ ಮತ್ತು ಭಾವಸಾರ ವಿಷನ್ ಇಂಡಿಯಾ ಸಹಯೋಗದಲ್ಲಿ ಶುಭಂ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮಾವಿನ ವೈವಿಧ್ಯಮಯ ಹಣ್ಣಿನ ಖಾದ್ಯಗಳ ಸ್ಪರ್ಧೆಯಲ್ಲಿ ಮಾತನಾಡಿದರು.
ಬಾಲ್ಯದಲ್ಲಿ ಮಾವಿನ ಹಣ್ಣನ್ನು ಅತ್ಯಂತ ಸಡಗರ ಹಾಗೂ ಖುಷಿಯಿಂದ ಸವಿಯುತ್ತಿದ್ದೆವು. ಆದರೆ ಇಂದಿನ ತಲೆಮಾರಿನ ಮಕ್ಕಳಿಗೆ ಹಣ್ಣುಗಳ ನೈಸರ್ಗಿಕ ಸವಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಕೇವಲ ಮಾವು ಮಾತ್ರವಲ್ಲದೆ, ಆಯಾ ಸೀಸನ್‌ನಲ್ಲಿ ಸಿಗುವ ಎಲ್ಲಾ ಸ್ಥಳೀಯ ಹಣ್ಣುಗಳ ವಿಶೇಷತೆಯನ್ನು ಪೋಷಕರು ಮಕ್ಕಳಿಗೆ ತಿಳಿಸಬೇಕು ಎಂದರು.
ಮಾವಿನ ಹಣ್ಣಿನಿಂದ ತಯಾರಿಸಿದ ವೈವಿಧ್ಯಮಯ ಖಾದ್ಯಗಳು ಹಾಗೂ ಡೆಸರ್ಟ್ಗಳ ಸ್ಪರ್ಧೆಗೆ ರಾಯಲ್ ಆರ್ಕಿಡ್‌ನ ಮುಖ್ಯ ಬಾಣಸಿಗ ಕೆ.ವಿ.ಪ್ರಭು ತೀರ್ಪುಗಾರರಾಗಿ ಆಗಮಿಸಿದ್ದರು.
JCI Shivamogga ಪ್ರಥಮ ಬಹುಮಾನ: ಅನಿಶಾ ಸತೀಶ್, ದ್ವಿತೀಯ ಬಹುಮಾನ: ಸ್ಮಿತಾ ಸಾತ್ವಿಕ್, ತೃತೀಯ ಬಹುಮಾನ: ಶಿಲ್ಪ ಸಾಕ್ರೆ, ನಾಲ್ಕು ಮತ್ತು ಐದನೇ ಬಹುಮಾನ: ನಿವೇದಿತಾ ನಟರಾಜ್, ಸ್ವಪ್ನ ಹರೀಶ್ ಪಡೆದುಕೊಂಡರು.
ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ರ ಸಾಲಿನ ಅಧ್ಯಕ್ಷೆ ವಿಜಯಲಕ್ಷ್ಮೀ ಉದಯ್ ಕಡಂಬ, ಉದ್ಯಮಿ ಸೆಂಥಿಲ್ ವೇಲನ್, ಭಾವಸಾರ ವಿಷನ್ ಇಂಡಿಯಾ ಅಧ್ಯಕ್ಷ ಡಿ.ಪಿ. ಕಮಲಾಕರ್, ಕಾರ್ಯದರ್ಶಿ ಚೇತನ್, ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಾಲರಾಜ್, ಪೂರ್ವಾಧ್ಯಕ್ಷ ಚಂದ್ರಹಾಸ್ ಹಾಗೂ ಕಾರ್ಯದರ್ಶಿ ಶ್ವೇತಾ ಸಚಿನ್ ಉಪಸ್ಥಿತರಿದ್ದರು.
