Wednesday, September 9, 2026
Wednesday, September 9, 2026

ಖಾತೆ ಬಗ್ಗೆ ಅತೃಪ್ತಿ:ಸಚಿವ ರಾಮಲಿಂಗಾರೆಡ್ಡಿ ರಾಜಿನಾಮೆ!

Date:

ಇನ್ನೂ ನೂತನ ಸಚಿವ ಸಂಪುಟ ರೂಪುಗೊಂಡು ಕಾರ್ಯಶೀಲವಾಗುವ ಮುನ್ನವೇ ಸಚಿವರೊಬ್ಬರ ರಾಜೀನಾಮೆ ಕಾಂಗ್ರೆಸ್ ಪಕ್ಷದಲ್ಲಿನ ಪರಸ್ಪರ ತಪ್ಪುಗ್ರಹಿಕೆಗಳಿಗೆ ಉದಾಹರಣೆಯಾಗಿದೆ.
ಹಿರಯರಾದ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಾಗಲೆಲ್ಲ ಬಹುತೇಕ ಸಂಪುಟ ಸಚಿವರಾಗಿ ಅಧಿಕಾರದ ಸವಿಯುಂಡಿದ್ದಾರೆ.
ಈಗ ಜಲಸಂಪನ್ಮೂಲ‌ಖಾತೆ ಬೇಡವೇ ಬೇಡ. ಬೆಂಗಳೂರು ಅಭಿವೃದ್ಧಿ ಖಾತೆ ನೀಡಿ ಎಂದು ವರಾತ ಹಚ್ಚಿರುವುದು ಸುದ್ದಿಯಾಗಿದೆ. ಅಷ್ಟೇ ಅಲ್ಲ “ಆತ್ಮಸಾಕ್ಷಿ ವಿರುದ್ಧ ಕಾರ್ಯಶೀಲನಾಗಲು ಸಾಧ್ಯವಿಲ್ಲ ” ಎಂಬ ಕಾರಣ ನೀಡಿ ರಾಜೀನಾಮೆ ಪತ್ರವನ್ನೂ ರವಾನಿಸದ್ದಾರೆ .

ಮುಖ್ಯಮಂತ್ರಿ ಬದಲಾವಣೆಯಂತಹ ಸನ್ನಿವೇಶ ಬಹಳ ಸೂಕ್ಷ್ಮವಾಗಿದ್ದು ಇಡೀ ಕಾಂಗ್ರೆಸ್ ಪಕ್ಷ ಇದೀಗ ಹೌಹಾರುವಂತಾಗಿದೆ. ಏಕೆಂದರೆ ಹಿರಿಯ ರಾಜಕಾರಣಿ ಮತ್ತು ಸದಾ ಗೆಲ್ಲುತ್ತಲೇ ಬಂದ
ರಾಮಲಿಂಗಾರೆಡ್ಡಿ, ಉತ್ತಮ ಸಚಿವರಾಗಿಯೂ ಹೆಸರುಗಳಿಸಿದವರು.
ಆದರೆ ಈಗಿನ
ಪರಿಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಕೂಡ ಕೊಂಚ ಗಡುಸಾಗಿಯೇ ಇದೆ.
ಮನವೊಲಿಸಿ.ಇಲ್ಲದಿದ್ದರೆ ರಾಜಿನಾಮೆ ಅಂಗೀಕರಿಸಿ ಎಂದು ಸೂಚನೆ ನೀಡಿರುವುದು ವರದಿಯಾಗಿದೆ.
ಇತ್ತ ಇನ್ನೋರ್ವ ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಕೂಡ ತಮ್ಮ ಖಾತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ವಿಪಕ್ಷಗಳಿಗೆ ಟೀಕಿಸಲು ಇದೊಂದು ಸಂದರ್ಭ ಒದಗಿಬಂದಿದೆ.
ರಾಹುಲ್ ಗಾಂಧಿ ಬೆಂಗಳೂರು ಭೇಟಿಗ ದಿನವೇ ರಾಜಿನಾಮೆ ಪ್ರಕರಣ ನಡೆದಿದೆ. ಕಡಕ್ ಆಗಿ ರಾಹುಲ್ ಏನು ನಿರ್ಣಯ ನೀಡುತ್ತಾರೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...