Tuesday, April 14, 2026
Tuesday, April 14, 2026
Home Blog Page 714

Devaraj Arasu ಎಲ್ ಬಿ ಎಸ್ ಕಾಲೇಜಿನ ಹಿರಿಮೆಯ ರಕ್ಷಣೆ ಎಲ್ಲರ ಮೇಲಿದೆ- ಎಂ.ಹರನಾಥರಾವ್

0

Devaraj Arasu ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಲ್ಪಿಸಿಕೊಟ್ಟ ಲಾಲ್ ಬಹದ್ದೂರ್ ಕಾಲೇಜಿನ ಹಿರಿಮೆಯನ್ನು, ಶ್ರೇಷ್ಠತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾಲೇಜು ಆಡಳಿತ ಮಂಡಳಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥರಾವ್ ಹೇಳಿದರು.
ಸಾಗರ ಪಟ್ಟಣದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಕಾಲೇಜಿನ 1989-90 ರ ಸಾಲಿನ ಬಿ.ಕಾಂ. ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನೆರವಿಲ್ಲದೆ ಇತ್ತೀಚೆಗೆ ಸಂಸ್ಥೆಗೆ ಆರ್ಥಿಕವಾಗಿ ಹಿನ್ನಡೆಯಾಗಿದೆ. ಕಾಲೇಜಿನ ಒಟ್ಟೂ159 ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯೇ ವೇತನ ಪಾವತಿಸಬೇಕು. ಹಣಕಾಸಿನ ಶಕ್ತಿ ಇರುವವರು ಈ ಶೈಕ್ಷಣಿಕ ಸಂಸ್ಥೆಗೆ ನೆರವು ನೀಡಬೇಕು. ೨೫ ಕೋಟಿ ರೂ. ನಿಧಿಯೊಂದನ್ನು ಸ್ಥಾಪಿಸಿ ಅದರ ಬಡ್ಡಿ ಹಣದಲ್ಲಿ ವೆಚ್ಚವನ್ನು ನಿರ್ವಹಣೆ ಮಾಡುವ ಯೋಜನೆಯಿದೆ. ಇದರ ಜೊತೆಗೇ ಕಾಲೇಜಿನಲ್ಲಿ ಬಿ.ಬಿ.ಎಂ., ಎಂ.ಸಿ.ಎ. ಹಾಗೂ ಕಾನೂನು ಕಾಲೇಜು ಆರಂಭಿಸುವ ಯೋಚನೆಯಿದೆ. ಇದಕ್ಕೆ ಎಲ್ಲ ಹಂತದಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕ ವೃಂದ ಸಹಕರಿಸಬೇಕು. ಕಾಲೇಜು ಮರಳಿ ತನ್ನ ಗತವೈಭವಕ್ಕೆ ಮರಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
Devaraj Arasu ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿದರು.
ವಜ್ರಮಹೋತ್ಸವಕ್ಕಾಗಿ ಕಾಲೇಜು ಯೋಜನೆ ರೂಪಿಸುತ್ತಿದೆ. ಹೊಸದಾಗಿ ಕೆಲವು ಕೋರ್ಸುಗಳನ್ನು ಆರಂಭಿಸಬೇಕಿದೆ. ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಹಳೆ ವಿದ್ಯಾರ್ಥಿಗಳು ಕಾಲೇಜು ನಡೆಯುವಾಗ ಬಂದು ವೃತ್ತಿ ಮಾರ್ಗದರ್ಶನ ಮಾಡಬೇಕು. ತಾವು ಕೆಲಸ ಮಾಡುವ ಕಂಪನಿಯಿಂದ ಸಿಎಸ್‌ಆರ್ ಫಂಡ್ ಇದ್ದರೆ ಕಾಲೇಜಿನ ಅಭಿವೃದ್ಧಿಗೆ ನೆರವಾಗಬೇಕು ಎಂದು ವಿನಂತಿಸಿದರು.

Vijay Technocrats ತಂತ್ರಜ್ಞಾನ ಮುಂದುವರೆದಂತೆ ಸಂಸ್ಕೃತಿ ಆಸಕ್ತಿ ಕಡಿಮೆಯಾಗುತ್ತಿದೆ- ಹೆಚ್.ಕೆ.ಲೋಕೇಶ್

0

Vijay Technocrats ದೇಶದ ಆರ್ಥಿಕತೆಗೆ ಫೌಂಡ್ರಿ ಉದ್ಯಮದ ಕೊಡುಗೆ ಅಪಾರ ಎಂದು ಎಯುಎಂಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಸಪ್ಲೆ ಚೈನ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಸೌರೆನ್ ಪಾಲ್ ಹೇಳಿದರು.
ಮಲ್ನಾಡ್ ಶೈರ್ ಇಕೋ ರೆಸಾರ್ಟ್ ನಲ್ಲಿ ಆಯೋಜಿಸಿದ್ದ 63ನೇ ಐಐಎಫ್ ದಕ್ಷಿಣ ವಲಯದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಭಾರತ ಸರ್ಕಾರದ ಮುಂದಿನ ಅಭಿವೃದ್ಧಿ ಯೋಜನೆಗಳಿಂದ ಕೈಗಾರಿಕಾ ಉತ್ಪಾದನಾ ವಲಯಕ್ಕೆ ಉತ್ತಮ ಬೇಡಿಕೆ ಸೃಷ್ಟಿಯಾಗಲಿ ಎಂದು ತಿಳಿಸಿದರು.
ಕೈಗಾರಿಕಾ ಕ್ಷೇತ್ರದ ತಯಾರಿಕಾ ವಲಯದ ಸ್ಪರ್ಧಾತ್ಮಕತೆ, ಪರಿಣಾಮಕಾರಿ ವೆಚ್ಚದಲ್ಲಿ ಉತ್ಪಾದನೆ, ಉತ್ತಮ ಗುಣಮಟ್ಟದ ಕ್ಯಾಸ್ಟಿಂಗ್ ತಯಾರಿಕೆ ಹಾಗೂ ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುವ ಬದ್ಧತೆ ಬಗ್ಗೆ ಉದ್ಯಮಿಗಳು ಗಮನ ವಹಿಸಬೇಕು ಎಂದರು.
ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಮಾತನಾಡಿ, ದೇಶದ ಕೈಗಾರಿಕಾ ವಲಯದ ಬೆಳವಣಿಗೆಯಲ್ಲಿ ಐಐಎಫ್ ಮಹತ್ತರ ಪಾತ್ರ ವಹಿಸಿದ್ದು, ಐಐಎಫ್ ದಕ್ಷಿಣ ವಲಯದ ಹೊಸ ತಂಡ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐಐಎಫ್ ದಕ್ಷಿಣ ವಲಯದ 2024-25ನೇ ಸಾಲಿನ ಅಧ್ಯಕ್ಷರಾಗಿ ಶಿವಮೊಗ್ಗದ ವಿಜಯ್ ಟೆಕ್ನೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಜಿ.ಬೆನಕಪ್ಪ ಅಧಿಕಾರ ಸ್ವೀಕರಿಸಿದರು.
ಐಐಎಫ್ ದಕ್ಷಿಣ ವಲಯ ನೂತನ ಅಧ್ಯಕ್ಷ ಡಿ.ಜಿ.ಬೆನಕಪ್ಪ ಮಾತನಾಡಿ, ಸೇವೆ ಹಾಗೂ ಭವಿಷ್ಯದ ತಂತ್ರಜ್ಞಾನ, ಉತ್ಪಾದನೆಯಲ್ಲಿ ಹೊಸ ಪರಿಕಲ್ಪನೆ, ಫೌಂಡ್ರಿ ಉದ್ಯಮದ ಸದಸ್ಯರಿಗೆ ಸಹಕಾರಿಯಾಗುವ ತಾಂತ್ರಿಕ ಕಾರ್ಯಕ್ರಮಗಳು, ಹಸರೀಕರಣ, ಕಾರ್ಯಪದ್ಧತಿಯ ಸುಧಾರಣೆ, ರಫ್ತು ತರಬೇತಿ, ಯುವ ಉದ್ಯಮಿಗಳು/ವಿದ್ಯಾರ್ಥಿಗಳಿಗೆ ತಯಾರಿಕಾ ವಲಯಕ್ಕೆ ಆಕರ್ಷಿಸಲು ಪ್ರೇರಣೆ ನೀಡುವುದು, ಉದ್ಯೋಗಿಗಳಿಗೆ ಪ್ರತಿಭೆ, ಕಾರ್ಯತತ್ಪರತೆ ಹಾಗೂ ಸೃಜನಶೀಲತೆ ಹೆಚ್ಚಿಸಲು ಶಿಕ್ಷಣ ಮತ್ತು ತರಬೇತಿ, ಪ್ರಮಾಣಪತ್ರ ನೀಡುವುದು ಹಾಗೂ ಇನ್ನಿತರೆ ಉಪಯೋಗಿ ಕಾರ್ಯಕ್ರಮಗಳ ಮುಖಾಂತರ ಸದಸ್ಯರ ಸೇವೆಗೆ ಹಾಗೂ ಐಐಎಫ್ ಬೆಳವಣಿಗೆಗೆ ಪ್ರಯತ್ನ ಮಾಡಲು ಬದ್ಧ ಎಂದು ತಿಳಿಸಿದರು.
Vijay Technocrats ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಹೈದ್ರಾಬಾದ್ ಹಾಗೂ ಕೇರಳದ ರಾಜ್ಯಗಳಿಂದ 250ಕ್ಕೂ ಹೆಚ್ಚು ಕೈಗಾರಿಕಾ ಪ್ರತಿನಿಧಿಗಳು, ದಕ್ಷಿಣ ವಲಯದ ಹಾಗೂ ಶಾಖೆಗಳ ಮಾಜಿ ಅಧ್ಯಕ್ಷರು, ಶಿವಮೊಗ್ಗದ ಮಾಚೇನಹಳ್ಳಿ, ಸಾಗರ ರಸ್ತೆ ಮತ್ತು ಕಲ್ಲೂರು ಮಂಡ್ಲಿ ಕೈಗಾರಿಕಾ ವಸಹಾತುವಿನ ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷಎನ್‌.ಗೋಪಿನಾಥ್‌, ವಸಂತ ಹೋಬಳಿದಾರ್‌, ಜಿ.ವಿಜಯಕುಮಾರ್‌, ಬಿ.ಗೋಪಿನಾಥ್‌, ರಮೇಶ್‌ ಹೆಗಡೆ, ಎಂ.ರಾಜು, ಡಿ.ಎಂ.ಶಂಕರಪ್ಪ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ, ದಾಮೋದರ ಬಾಳಿಗ, ಎಂ.ರಾಜು, ಎಂ.ಹಾಲಪ್ಪ, ಡಿ.ಬಿ.ಅಶೋಕ್, ಡಿ.ಜಿ.ಬೆನಕಪ್ಪ, ಡಿ.ಜಿ.ಶಾಂತನಗೌಡ, ಮಹಾವೀರ ಜೈನ್, ರೋಟರಿ ಶಿವಮೊಗ್ಗ ಸದ್ಯಸರು ಹಾಜರಿದ್ದರು.

Mankuthimmana kagga ಗರಿಗೆದರಿದ ನೆನಪು ಪುಸ್ತಕ ಲೋಕಾರ್ಪಣೆ

0

Mankuthimmana kagga ಶಿವಮೊಗ್ಗ ನಗರದ ಲೇಖಕಿ ಸಾವಿತ್ರಿ ರಂಗನಾಥ್‌ರವರ ಪ್ರವಾಸ ಕಥನಗಳ ಗುಚ್ಚ ಗರಿಗೆದರಿದ ನೆನಪು ಕೃತಿಯನ್ನು ಮಂಕುತಿಮ್ಮನ ಕಗ್ಗ ಖ್ಯಾತಿಯ ಜಿ. ಎಸ್. ನಟೇಶ್ ಬಿಡುಗಡೆಗೊಳಿಸಿ ಮಾತನಾಡಿದರು.
ವಿನಾಯಕ ನಗರ ಬಡಾವಣೆಯ ನವ್ಯಶ್ರೀ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಆರ್ಯವೈಶ್ಯ ಮಹಾಜನ ಸಮಿತಿಯ ಅಧ್ಯಕ್ಷ ಶಶಿಧರ ಭೂಪಾಳಂ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಎಸ್. ಸಿ. ಗೌರಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
Mankuthimmana kagga ಇದೇ ಸಂದರ್ಭದಲ್ಲಿ ಸಾವಿತ್ರಿ ರಂಗನಾಥ್‌ರವರ ಪತಿ ಆರ್. ರಂಗನಾಥ್ ಶೆಟ್ಟಿಯವರ ೭೫ನೇ ವಸಂತೋತ್ಸದ ಅಂಗವಾಗಿ, ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರುತಿಶ್ರೀ ದಿನೇಶ್, ದೀಪ್ತಿಶ್ರೀ ತರುಣ್, ಧ್ರುತಿ, ನಕ್ಷ, ಧ್ರುವ್, ದೀಕ್ಷ, ಸಾವಿತ್ರಿ ರಂಗನಾಥ್ ಪಾಲ್ಗೊಂಡಿದ್ದರು

Sagara Police ತೇರಿನ ಸಮಯದಲ್ಲಿ ಡಾನ್ಸ್. ಪೊಲೀಸ್ ಠಾಣೆ ತಲುಪಿದ ಹಗರಣ

0

Sagara Police ರಥೋತ್ಸವದಲ್ಲಿ ತೇರು ಎಳೆಯುವ ವೇಳೆ ಡ್ಯಾನ್ಸ್ ಮಾಡಿದ್ದನ್ನು ಪ್ರಶ್ನಿಸಿ ಹಲ್ಲೆ ಮಾಡಿದ ಘಟನೆ ಸಾಗರ ತಾಲೂಕು ಶಿರವಂತೆಯಲ್ಲಿ ನಡೆದಿದೆ.

ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.ದೇವರ ತೇರು ಎಳೆಯುವ ಸಂದರ್ಭದಲ್ಲಿ ಕೆಲವು ಹುಡುಗರು ಡ್ಯಾನ್ಸ್ ಮಾಡುತ್ತಿದ್ದು, ಆ ವೇಳೆ ಅಲ್ಲಿಗೆ ಬಂದ ಆರೋಪಿಗಳು ಡ್ಯಾನ್ಸ್ ಮಾಡುತ್ತಿದ್ದವರ ಬಳಿ ಇಲ್ಲೇಕೆ ಡ್ಯಾನ್ಸ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ದೂಡಿದ್ದರು.

ಈ ವೇಳೆ ತಂತಿ ಬೇಲಿ ಮೇಲೆ ಬಿದ್ದು ಓರ್ವರಿಗೆ ಗಾಯವಾಗಿದೆ ಎನ್ನಲಾಗಿದೆ. ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಬೆದರಿಕೆ ಹಾಕಿದ ಆರೋಪವನ್ನು ಸಹ ಮಾಡಲಾಗಿದೆ.

Sagara Police ಸ್ಥಳದಲ್ಲಿದ್ದ ಸಾರ್ವಜನಿಕರು ಪ್ರಕರಣವನ್ನು ಬಗೆಹರಿಸಿ ಕಳಿಸಿದ್ದರು. ಆದರೆ ನಂತರ ಮತ್ತೆ ಠಾಣೆ ಮೆಟ್ಟಿಲೇರಿದೆ. ಪ್ರಕರಣ ದಾಖಲಿಸಿರುವ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Soraba Police ಸೊರಬ ತಾಲ್ಲೂಕಿನ ತಲಕಾಲಕೊಪ್ಪದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ದುರ್ಮರಣ

0

Soraba Police ಜಾನುವಾರು ಮೇಯಿಸಲು ತೆರಳಿದ ಬಾಲಕನೋರ್ವ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕ್ಯಾಸನೂರು ತಲಕಾಲಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸೊರಬ ಗ್ರಾಮದ ಸಾತ್ವಿಕ್(14) ಮೃತ ದುರ್ದೈವಿ. ಗ್ರಾಮದ ಸುರೇಶ್ ಎಂಬುವರ ಪುತ್ರ ಸಾತ್ವಿಕ್ ಶಾಲೆ ರಜೆ ಇರುವ ಹಿನ್ನೆಲೆ ಜಾನುವಾರು ಮೇಯಿಸಲು ತೆರಳಿದಾಗ ಗ್ರಾಮದ ಫಾತೀಮ ಎಂಬುವರ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ.

Soraba Police ಮಗನ ಸಾವಿಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಶವ ಮೇಲೆತ್ತಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

B.S. Yediyurappa ಬಿಎಸ್ ವೈ ಮೇಲೆ ಆರೋಪ‌ ಮಾಡಿ ಸುದ್ದಿಯಲ್ಲಿದ್ದ ಮಹಿಳೆ ನಿಧನ

0

B.S. Yediyurappa ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ, “ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿ, ದೂರು ದಾಖಲಿಸಿದ್ದ ಮಹಿಳೆಯು (ಮೇ 26) ಬೆಂಗಳೂರಿನ ಹುಳಿಮಾವು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ, 53 ವರ್ಷದ ಮಹಿಳೆ ಮೇ 26 ರಂದು ರಾತ್ರಿ ಉಸಿರಾಟದ ತೊಂದರೆ ಅನುಭವಿಸಿದ ನಂತರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ. ‘ಮಹಿಳೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮೃತ ಮಹಿಳೆಯ ಮಗಳು, ಆಕೆಯೊಂದಿಗೆ ಆಸ್ಪತ್ರೆಗೆ ಬಂದಿದ್ದಳು. ರಾತ್ರಿ 9.21ರ ಸುಮಾರಿಗೆ ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾರೆ ಎಂದು 17 ವರ್ಷದ ಬಾಲಕಿ ಪೋಕ್ಸೊ ಪ್ರಕರಣದ ಸಾಕ್ಷಿಯೊಬ್ಬರಿಗೆ ಸಂದೇಶ ಕಳುಹಿಸಿದ್ದಳು. ನಂತರ ಆಕೆ ತನ್ನ ತಾಯಿ ಇನ್ನಿಲ್ಲ ಎಂದು ಸಂದೇಶ ಕಳುಹಿಸಿದ್ದಳು.

ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಜಿ ಸಿಎಂ ಯಡಿಯೂರಪ್ಪ ನಿರಾಕರಿಸಿದ್ದರು. “ತಾಯಿ-ಮಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.

B.S. Yediyurappa ಪ್ರಕರಣದ ಬೆನ್ನತ್ತಿದ ಮಹಿಳೆಗೆ ಸಹಾಯ ಮಾಡುತ್ತಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಬಿಜೆಎಂಎಸ್) ಕಾರ್ಯಕರ್ತರು ಶವದ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಪೊಲೀಸರು ಇದನ್ನು ಸಹಜ ಸಾವು ಎಂದು ವೈದ್ಯರು ಉಲ್ಲೇಖಿಸಿದ್ದಾರೆ. ಕಾನೂನು ಮಾರ್ಗದರ್ಶನ ಪಡೆಯಲು ದೂರುದಾರರು ಇಂದು (ಮೇ 27 ರಂದು) ವಕೀಲರನ್ನು ಭೇಟಿಯಾಗಬೇಕಿತ್ತು.

Bharat Scouts and Guides Shivamogga ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳಿ-ಕೆ.ಪಿ.ಬಿಂದುಕುಮಾರ್

0

Bharat Scouts and Guides Shivamogga ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ ಇಂದು ಪುಸ್ತಕ ಭಂಡಾರವನ್ನು ಉದ್ಘಾಟನೆ ಮಾಡಿ ಸ್ಕೌಟಿಂಗ್ ಗೈಡಿಂಗಿನ ಜ್ಞಾನವನ್ನು ಪಡೆದುಕೊಳ್ಳಲು ಕಬ್, ಬುಲ್ ಬುಲ್, ಸ್ಕೌಟ್ಸ್-ಗೈಡ್ಸ್, ರೋವರ‍್ಸ್ ರೇಂಜರ‍್ಸ್ ಗಳು ಶಿಕ್ಷಕ ಶಿಕ್ಷಕಿಯರುಗಳು ಈ ಪುಸ್ತಕ ಭಂಡಾರದಲ್ಲಿ ಇರುವ ಪುಸ್ತಕಗಳನ್ನು ಪಡೆದುಕೊಂಡು ಓದಿ ಮತ್ತೆ ಬೆರೆಯವರಿಗೆ ಉಪಯೋಗವಾಗುವಂತೆ ಸುಸಜ್ಜಿತವಾಗಿ ಇಟ್ಟು ಅದರ ಪ್ರಯೋಜನ ಪಡೆದುಕೊಳ್ಳಿ ಇನ್ನು ಬೆಕಾಗಿರುವ ಪುಸ್ತಕಗಳನ್ನು ರಾಜ್ಯ ಸಂಸ್ಥೆಯಿಂದಲೂ ಹಾಗೂ ರಾಷ್ಟ್ರ ಸಂಸ್ಥೆಯಿಂದಲೂ ತರಿಸುತ್ತಿದ್ದೇವೆ ಎಂದು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ ರವರು ಮಾತನಾಡಿದರು.

ಇದರೊಂದಿಗೆ ಹಳೆ ಆಲ್ಬೊಮ್ ಗಳು ಸಹ ಇಟ್ಟಿದ್ದೇವೆ ಅದನ್ನು ಸಹ ನೋಡಿಕೊಂಡು ಯಾವುದೆ ನಷ್ಟ ಮಾಡದೆ ಅದೆ ಸ್ಥಿತಿಯಲ್ಲಿ ಇಟ್ಟು ಹೋಗುವುದು ತಮ್ಮ ತಮ್ಮಗಳ ಜವಾಬ್ದಾರಿ ಎಂದು ತಿಳಿಸಿದರು.

Bharat Scouts and Guides Shivamogga ಈ ಕಾರ್ಯಕ್ರಮಕ್ಕೆ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್. ಪರಮೇಶ್ವರ್, ಜಿಲ್ಲಾ ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷ್ಮೀ ರವಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭಾರತಿ ಡಾಯಸ, ಕೇಂದ್ರ ಸ್ಥಾನಿಕ ಆಯುಕ್ತರುಗಳಾದ ಶ್ರೀ ವಿಜಯ ಕುಮಾರ, ಕೆ.ರವಿ, ಎಡಿಸಿಗಳಾದ ಶ್ರೀ ವೇಣುಗೋಪಾಲ, ನಾರಾಯಣ, ಮಲ್ಲಿಕಾರ್ಜುನ ಕಾನೂರು, ಆನಂದ, ವೆಂಕಟಾಚಲ ಶಾಸ್ತಿç, ಡಿಟಿಸಿ ಶ್ರೀ ಹೆಚ್. ಶಿವಶಂಕರ್, ಎಲ್.ಎ ಕಾರ್ಯಾದರ್ಶಿಗಳಾದ ಶ್ರೀ ರಾಜೇಶ ಅವಲಕ್ಕಿ, ಶೇಖರಪ್ಪ, ಹರೀಶ, ವೇಂಕಟೇಶ ರವರು ಹಾಗೂ ಜಿಲ್ಲೆಯ ಪ್ರೀ-ಎ.ಎಲ್.ಟಿಗಳು, ಹಿಮಾಲಯ ವೃಕ್ಷಮಣಿಧಾರಕರು ಉಪಸ್ಥಿತರಿದ್ದರು.

Congress Shivamogga ಶಿವಮೊಗ್ಗ ಕಾಂಗ್ರೆಸ್ ಪಕ್ಷದಿಂದ ನೆಹರು ಪುಣ್ಯ ಸ್ಮರಣೆ

0

Congress Shivamogga ಪಂಡಿತ್ ಜವಾರಲಾಲ್ ನೆಹರೂರವರ ಪುಣ್ಯಸ್ಮರಣೆ
ಇಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿವಂಗತ ನೆಹರೂ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು.
Congress Shivamogga ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸಿ ಎಸ್ ಚಂದ್ರಭೂಪಾಲ್, ಭೋವಿ ನಿಗಮದ ರಾಜ್ಯಾಧ್ಯಕ್ಷ ರವಿಕುಮಾರ್, ಕಚೇರಿ ಆಡಳಿತ ಮುಖ್ಯಸ್ಥ ಎಸ್ ಟಿ ಹಾಲಪ್ಪ, ಎಸ್ ಟಿ ವಿಭಾಗದ ಅಧ್ಯಕ್ಷ ಶಿವಣ್ಣ, ಪ್ರಮುಖರಾದ ಚಿನ್ನಪ್ಪ, ಸ್ಟೆಲ್ಲಾ ಮಾರ್ಟಿನ್, ಶಮೀಮ್ ಬಾನು, ಕುಮಾರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Rotaty Shivamogga ಸಮಾಜಮುಖಿ ಸಾಧಕ ಮಹಾಬಲೇಶ್ವರ ಹೆಗಡೆಗೆ ಸನ್ಮಾನ

0

Rotaty Shivamogga ಸಮಾಜ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಧಕರಿಗೆ ಸಂಸ್ಥೆಯಿಂದ ಗೌರವಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಮಲೆನಾಡು ಅಧ್ಯಕ್ಷ ಸಿ.ರಾಜು ಹೇಳಿದರು.

ರೋಟರಿ ಕ್ಲಬ್ ಮಲೆನಾಡು ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸನ್ಮಾನ ಗೌರವಗಳು ಜವಾಬ್ದಾರಿ ವೃದ್ಧಿಸುವ ಜತೆಯಲ್ಲಿ ಸಮಾಜದ ನೂರಾರು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.

ಮಹಾಬಲೇಶ್ವರ ಹೆಗಡೆ ಅವರು ಶಾಲಾ ಶಿಕ್ಷಕರ ಸೇವೆಗೆ ಸದಾ ಸಿದ್ಧರಾಗಿರುತ್ತಾರೆ. ಶಿಕ್ಷಕರ ಸಮಸ್ಯೆಗಳಿಗೆ ಎಲ್ಲ ಹಂತಗಳಲ್ಲೂ ಸ್ಪಂದಿಸುತ್ತಾರೆ. ಸಹಕಾರ ಸಂಸ್ಥೆಯನ್ನು ಸದೃಢವಾಗಿ ಬೆಳೆಸಿ ಮುನ್ನಡೆಯುತ್ತಿದ್ದು, ವಾರ್ಷಿಕವಾಗಿ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. ಸಾವಿರಾರು ಶಿಕ್ಷಕರಿಗೆ ನಿವೇಶನ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಶಿಕ್ಷಕ ಸೌಹಾರ್ದ ಸಹಕಾರಿ ಸಂಘಕ್ಕೆ ತೀರ್ಥಹಳ್ಳಿಯಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಸಂಘದ ಕಚೇರಿ, ಚೌಟ್ರಿ, ಹೈಪರ್ ಮಾರ್ಟ್, ಹೊಟೇಲ್, ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿದೆ. 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಹೇಳಿದರು.

Rotaty Shivamogga ಮಹಾಬಲೇಶ್ವರ ಹೆಗಡೆ ಅವರು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ, ವೈದ್ಯಕೀಯ ಸಹಕಾರ, ಹೀಗೆ ವಿವಿಧ ರೀತಿ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಆರಂಭಿಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರನ್ನು ಅಭಿನಂದಿಸಲಾಯಿತು. ರೋಟರಿ ಮಂಜುಳಾ ರಾಜು, ಪಿಡಿಜಿ ರವಿ, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.