Friday, March 6, 2026
Friday, March 6, 2026

Kumsi Police ಕೃಷಿ ಹೊಂಡದಲ್ಲಿ ಬಿದ್ದವನೂ ಪ್ರಾಣಬಿಟ್ಟ.ಉಳಿಸಲು ಹೋದವನೂ ಜೀವತೆತ್ತ

Date:

Kumsi Police ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನಳ್ಳಿ ಗ್ರಾಮದಲ್ಲಿ ಇಬ್ಬರು ಕೃಷಿ ಹೊಂಡಕ್ಕೆ ಬಿದ್ದು ಸಾವು ಕಂಡಿರುವ ಘಟನೆ ನಡೆದಿದೆ.

ಚೆನ್ನಳ್ಳಿಯಲ್ಲಿ ಕಾಲು ತೊಳೆಯಲು ಹೋದ ಒಬ್ಬ ಬಾಲಕನನ್ನ ರಕ್ಷಿಸಲು ಹೋದ ಯುವನೋರ್ವನು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಾಲತೇಶ್(28) ಹಾಗೂ ಮಹೇಶ್ ಪುತ್ರ ಅಭಯ್ (16) ಸಾವಿಗೀಡಾದ ದುರ್ಧೈವಿಗಳಾಗಿದ್ದಾರೆ.

ಅಶೋಕ್ ಎಂಬುವರ ಜಮೀನಿನಲ್ಲಿದ್ದ 10 ಅಡಿ ಆಳದ ಕೃಷಿ ಹೊಂಡದಲ್ಲಿ ಕಾಲು ತೊಳೆಯಲು ಹೋದಾಗ ಘಟನೆ ಸಂಭವಿಸಿದೆ. ಮೃತ ಅಭಯ್ ಅವರ ಜಮೀನಿನಲ್ಲಿ ಟ್ರಾಕ್ಟರ್ ನಿಂದ ನೆಗಿಲು ಹೊಡೆಯಲು ಮಾಲ್ತೇಶ್ ಜೊತೆ ಹೋಗಿದ್ದನು.
ಮಾಲ್ತೇಶ್ ಟ್ರಾಕ್ಟರ್ ಮಾಲೀಕ ಮತ್ತು ಡ್ರೈವರ್ ಆಗಿದ್ದಾರೆ. ಜಮೀನು ಹೂಡುವ ಜಾಗ ತೋರಿಸಲು ಅಭಯ್ ಜೊತೆಗೆ ತೆರಳಿದ್ದನು. ಅಭಯ್ ಶಿವಮೊಗ್ಗದ ಗಿರಿದೀಪಂ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಕಾಲು ತೊಳೆಯಲು ಹೋದ ಅಭಯ್ ನ ಕಾಲು ಜಾರಿದೆ.

Kumsi Police ಟ್ರ್ಯಾಕ್ಟರ್ ಮೇಲಿದ್ದ ಮಾಲ್ತೇಶ್ ಅಭಯ್ ನನ್ನ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಕೃಷಿ ಹೊಂಡದಿಂದ ಮೇಲೆ ಬರಲು ಆಗದೇ ಹೊಂಡದಲ್ಲೇ ಇಬ್ವರೂ ಕೊನೆ ಉಸಿರು ಎಳೆದಿದ್ದಾರೆ.

ಮಾಲತೇಶ್ ಗೆ ಮದುವೆ ಆಗಿ ಕೇವಲ ಎಂಟು ತಿಂಗಳುಗಳು ಕಳೆದಿತ್ತು.
ಸಾರ್ವಜನಿಕರ ಸಹಾಯದಿಂದ ಇಬ್ಬರ ಮೃತದೇಹವನ್ನ ಪೊಲೀಸರು ಹೊರತೆಗೆದಿದ್ದಾರೆ. ಮೃತದೇಹದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ರಾವಾನಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Sanga ಮಾರ್ಚ್ 09 ಕರ್ನಾಟಕ ಸಂಘದಲ್ಲಿ ಸಾಹಿತಿ ರಂಜನಿ ರಾಘವನ್ ತಿಂಗಳ ಅತಿಥಿ

Karnataka Sanga ದಿನಾಂಕ 09ನೇ ಮಾರ್ಚ್ 2026ರ ಸೋಮವಾರ, ಸಂಜೆ 5:30ಕ್ಕೆ...

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ

CM Siddharamaiah ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ...

Klive Special Article ನಿಮ್ಮೂರು ನಮ್ಮ ಮಾಹಿತಿ ಸ್ಥಳ: ಸುಣ್ಣದಹಳ್ಳಿ ಲೇ: ದಿಲೀಪ್ ನಾಡಿಗ್

Klive Special Article ಸುವರ್ಣ ಹಳ್ಳಿ ಕಾಲಕ್ರಮೇಣ ಸುಣ್ಣದ ಹಳ್ಳಿಯಾಯಿತು. ಇಲ್ಲಿದ್ದಾನೆ...

Department of Tourism ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Department of Tourism ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ರಾಜ್ಯದ...