Monday, April 13, 2026
Monday, April 13, 2026
Home Blog Page 713

Farmers Association ರಾಜ್ಯ ರೈತ ಸಂಘ ಶಿವಮೊಗ್ಗ ಜಿಲ್ಲಾ ಸಮಿತಿ ಪುನಾರಚನೆ, ಅಧ್ಯಕ್ಷರಾಗಿ ಮಂಜುನಾಥ್ ಅರೇಕೊಪ್ಪ

0

Farmers Association ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಸಂಘವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಹಾಗೂ ಹಲವು ಚಳುವಳಿಗಳನ್ನು ಮಾಡುವ ಉದ್ದೇಶದಿಂದ ಜಿಲ್ಲಾ ಸಮಿತಿಯನ್ನು ಪುನರ್ ರಚನೆ ಮಾಡಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೂತನ ಜಿಲ್ಲಾ ಕಾರ್ಯಾಧ್ಯಕ್ಷ ಅಮೃತ್‌ರಾಜ್, ನೂತನ ಜಿಲ್ಲಾಧ್ಯಕ್ಷರಾಗಿ ಮಂಜುನಾಥ್ ಅರೇಕೊಪ್ಪ, ಜಿಲ್ಲಾ ಗೌರವ ಅಧ್ಯಕ್ಷರಾಗಿ ಸೈಯದ್ ಶಫೀಉಲ್ಲಾ ಹಿರೇಕಸವಿ, ಮತ್ತು ವೀರಭದ್ರೇಗೌಡರು, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅಮೃತ್‌ರಾಜ್, ಹಿರೇಬಿಲಗುಂಜಿ, ಉಪಾಧ್ಯಕ್ಷರಾಗಿ ಬಸವರಾಜ್ ಬನ್ನೂ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಹೆಚ್.ಪಿ. ಬೇಡರ ಹೊಸಹಳ್ಳಿ, ಕಾರ್ಯದರ್ಶಿಯಾಗಿ ನಾಗರಾಜ್ ನಾಡಕಲಸಿ, ಸಂಚಾಲಕರಾಗಿ ಯೋಗೇಶ್ ಕುಂದಗಸವಿ, ಧನಂಜಯ ಬನ್ನೂರ್, ಸೋಮಶೇಖರ್ ಶಿಗ್ಗ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ಅರೇಕೊಪ್ಪ ಹಾಗೂ ಮಹಿಳಾ ಸಂಚಾಲಕಿ ಸುಮಿತ್ರ ರವರನ್ನು ನೇಮಕ ಮಾಡಿದ್ದಾರೆ
ಕರ್ನಾಟಕದ ರೈತರ ಪರ ಹೋರಾಟ ಮಾಡಿ, ರೈತರ ಸಂಘಟನೆ ಮಾಡಿ, ಸಂಘಟನಾ ಅರಿವು ಮೂಡಿಸಿ ರೈತ ಸಂಘದ ಅಭಿವೃದ್ಧಿ ಶ್ರಮಿಸಿದ ರೈತ ಹೋರಾಟಗಾರ ಹೆಚ್.ಎಸ್. ರುದ್ರಪ್ಪ, ಸಂಸ್ಥಾಪನಾ ಅಧ್ಯಕ್ಷರವರ ನೆನಪು ಕಾರ್ಯಕ್ರಮವನ್ನು ಜುಲೈ ೧೯ ರಂದು ಶಿವಮೊಗ್ಗದ ಮತ್ತೂರು ರಸ್ತೆಯ ತೀರ್ಥಪ್ಪ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ರೈತ ವರ್ಗದವರು ಆಗಮಿಸಬೇಕೆಂದು ವಿನಂತಿಸಿದರು.
Farmers Association ರೈತರ ಬೆಳೆಗೆ ಬೆಂಬಲ ಬೆಲೆ, ಸಕಾಲದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ, ರಸಗೊಬ್ಬರ ಸಿಗುವಂತಾಗಬೇಕು. ಈಗ ಮಳೆ ಬಿದ್ದ ಕಾರಣ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಹೆಚ್ಚಿನ ದರದಲ್ಲಿ ಇದನ್ನು ಮಾರುತ್ತಿರುವ ಆರೋಪ ಇದೆ. ಸರಕಾರ ಇದನ್ನು ತಡೆಗಟ್ಟಬೇಕು. ಅಧಿಕಾರಿಗಳು ಗಮನಿಸಬೇಕೆಂದ ಅವರು, ರೈತ ವಿರೋಧಿ ಮೂರ ಕಾಯ್ದೆಗಳನ್ನು ರಾಜ್ಯ ಸರಕಾರ ವಾಪಸ್ ಪಡೆಯಬೇಕು. ಬರಪರಿಹಾರವನ್ನು ವಿತರಿಸಬೇಕೆಂದು ಒತ್ತಾಯಿಸಿದರು.
ಸೈಯದ್ ಶಫೀಉಲ್ಲಾ ಹಿರೇಕಸವಿ, ಸತೀಶ್ ಹೆಚ್.ಪಿ. ಬೇಡರ ಹೊಸಹಳ್ಳಿ, ವೀರಭದ್ರೇಗೌಡರು, ಮಂಜುನಾಥ್ ಅರೇಕೊಪ್ಪ ಮೊದಲಾದವರು ಹಾಜರಿದ್ದರು

Sagara Police ಪತ್ನಿಯ ಕತ್ತು ಸೀಳಿ ಕೊಲೆಮಾಡಿದ ಆರೋಪದ ಮೇಲೆ ಪತಿರಾಯನ ಬಂಧನ

0

Sagara Police ಸಾಗರ ತಾಲ್ಲೂಕಿನ ಪುಷ್ಪಾ ಎಂಬವರನ್ನು, ಆಕೆಯ ಪತಿಯೇ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕು ಹುಲಿಯೂರು ದುರ್ಗದಲ್ಲಿ ನಡೆದಿದೆ. ಪತಿ ಶಿವರಾಮ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಸುಗ್ಗನಹಳ್ಳಿ ಶಿವರಾಮ್‌ ಎಂಬುವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮೂಲದ ಪುಷ್ಪಾ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ 8 ವರ್ಷದ ಮಗುವಿದೆ.

Sagara Police ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ಧಾರೆ. ನಿನ್ನೆಯು ಇಬ್ಬರ ನಡುವೆ ಗಲಾಟೆ ನಡೆದಿದ್ದು ಪತ್ನಿ ಪುಷ್ಪಾ ಅರಚಾಡುತ್ತಿರುವುದನ್ನು ಕೇಳಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಅಷ್ಟರಲ್ಲಿ ಪತಿ ಶಿವರಾಮ್‌ ಪತ್ನಿಯ ಕತ್ತು ಸೀಳಿದ್ದಲ್ಲದೆ ಆಕೆಯ ಅಂಗಾಂಗವನ್ನು ಕತ್ತರಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಪ್ರಕರಣದಲ್ಲಿ ಪೊಲೀಸರು ಶಿವರಾಮ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Ravindra Kala Kshetra Bangalore ಚಿ.ಗೌರಿ ಮನೋಹರಿ ಭರತನಾಟ್ಯ ರಂಗಪ್ರವೇಶ

0

Ravindra Kala Kshetra Bangalore ಭದ್ರಾವತಿ ನಗರದ ಹೊಸಮನೆ ಮುಖ್ಯ ರಸ್ತೆಯ ಶ್ರೀ ಮುರುಳೀಧರ ಸಂಗೀತ ವಿದ್ಯಾಲಯ ಮತ್ತು ಬೆಂಗಳೂರಿನ ಉಲ್ಲಾಳ ಉಪ ನಗರದ ಮುರುಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯದ ಸಂಗೀತ ವಿದ್ವಾಂಸರ ಕುಟುಂಬದ ಕುಡಿ ೬ ನೇ ತರಗತಿಯ ೧೧ ವರ್ಷದ ಬಾಲಕಿ ಗೌರಿ ಮನೋಹರಿ ಭರತ ನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.
ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಮುಂಭಾಗದ ಜೆ.ಸಿ ರಸ್ತೆಯ ಎಡಿಎ ರಂಗ ಮಂದಿರದಲ್ಲಿ ಮೇ: ೩೦ ರಂದು ಗುರುವಾರ ಸಂಜೆ ೬ ಗಂಟೆಗೆ ನಡೆಯಲಿದೆ. ಈ ಬಾಲಕಿಯು ಬೆಂಗಳೂರಿನ ಪ್ರಸಿದ್ದ ಸಂಗೀತ ವಿದ್ವಾನ್ ಗುರು ಪ್ರವೀಣ್‌ಕುಮಾರ್ ಅವರ ಶಿಷ್ಯೆಯಾಗಿದ್ದಾರೆ. ಬಾಲಕಿಯ ತಂದೆ ಇಂಜಿನಿಯರ್ ಹೆಚ್.ಎಸ್.ಕಿರಣ್ ಮತ್ತು ತಾಯಿ ಸಂಗೀತ ಕಲಾವಿದೆ ಡಾ: ವಿದ್ಯಾಲಕ್ಷ್ಮಿ ಅವರ ಪುತ್ರಿಯಾಗಿದ್ದಾಳೆ.
Ravindra Kala Kshetra Bangalore ವಿಶೇಷವೆಂದರೆ ಬಾಲಕಿಯ ಇಡೀ ಕುಟುಂಬದಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಮಂದಿ ಸಂಗೀತ ವಿದ್ವಾಂಸರಾಗಿದ್ದಾರೆ. ಬಾಲಕಿಯ ತಾಯಿ ಡಾ: ವಿದ್ಯಾಲಕ್ಷ್ಮಿ ಅವರ ತಂದೆ (ಬಾಲಕಿಯ ಅಜ್ಜ) ಮುರುಳೀಧರ ಸಂಗೀತ ವಿದ್ಯಾಲಯದ ವಿದ್ವಾನ್ ಕೆ.ಎಸ್.ಮೋಹನ್ ಕುಮಾರ್ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ತಂದೆ (ಬಾಲಕಿಯ ಮುತ್ತಜ್ಜ) ದಿವಂಗತ ಕೆ.ಮಂಜಪ್ಪ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.

Accident News ಮೂಗ್ತಿಹಳ್ಳಿಯಲ್ಲಿ ಬೈಕ್ ಅಪಘಾತ ಸವಾರ ಸ್ಥಳ್ಳದಲ್ಲೇ ಸಾವು

0

Accident News ಬೈಕ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಇದ್ದ ಯುವತಿಯ ನಾಲಗೆ ತುಂಡಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ.

ಶಿವರಾಜ್ (26) ಮೃತ ದುರ್ದೈವಿ, ಲಾವಣ್ಯ (20) ನಾಲಿಗೆ ಕಳೆದುಕೊಂಡ ಯುವತಿ. ಲಾವಣ್ಯ ಹಾಗೂ ಶಿವರಾಜ್ ಬೈಕಿನಲ್ಲಿ ಹೋಗುತ್ತಿರುವಾಗ ಎದುರು ಕಡೆಯಿಂದ ಬಂದ ಕ್ಯಾಂಟರ್ ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ. ಶಿವರಾಜ್ ಮತ್ತು ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರು.

Accident News ಲಾವಣ್ಯ ಚಿಕ್ಕಮಗಳೂರಿನ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಾರೆ.
ಈ ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Supreme Court ಸಚಿವ ಜಮೀರ್ ವಿರುದ್ಧ “ಗ್ಯಾರಂಟಿ” ಕೇಸ್. ಅರ್ಜಿದಾರರ ಮೇಲ್ಮನವಿ ವಜಾ ಗೈದ ಕೋರ್ಟ್

0

Supreme Court 2023ರ ವಿಧಾನಸಭೆ ಚುನಾವಣೆಯ ವೇಳೆ ಕರ್ನಾಟಕ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಕುರಿತು ಕುರಿತು ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಝಡ್‌ ಝಮೀರ್‌ ಅಹ್ಮದ್ ಖಾನ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಕೆವಿ ವಿಶ್ವನಾಥನ್‌ ಅವರಿದ್ದ ಪೀಠ, “ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳು ಭ್ರಷ್ಟ ವ್ಯವಹಾರಕ್ಕೆ ಸಮವಲ್ಲ” ಎಂದು ಹೇಳಿದ್ದು, ಮೇಲ್ಮನವಿಯನ್ನು ವಜಾಗೊಳಿಸಿದೆ.
Supreme Court ಕರ್ನಾಟಕ ವಿಧಾನಸಭಾ ಚುನಾವಣೆಯ 2023ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ ಆಶ್ವಾಸನೆಗಳು ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಅಭ್ಯರ್ಥಿಯ ಭ್ರಷ್ಟ ವ್ಯವಹಾರಕ್ಕೆ ಕಾರಣವಾಗುತ್ತದೆ ಎಂಬ ವಕೀಲರ ವಾದ ನಂಬಲರ್ಹವಲ್ಲ ಹಾಗೂ ಅದನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಝಮೀರ್ ಅಹ್ಮದ್ ಖಾನ್ ಅವರ ಆಯ್ಕೆ ಪ್ರಶ್ನಿಸಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತದಾರರೊಬ್ಬರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.
2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳು ಸಾರ್ವಜನಿಕರಿಗೆ ನೇರ ಮತ್ತು ಪರೋಕ್ಷ ಆರ್ಥಿಕ ಸಹಾಯ ಕಲ್ಪಿಸಿದ್ದು, ಇದು ಭ್ರಷ್ಟ ಚುನಾವಣಾ ವ್ಯವಹಾರ ಎಂದು ದೂರುದಾರರು ವಾದಿಸಿದ್ದರು.
ವಾದ ಆಲಿಸಿದ್ದ ಕರ್ನಾಟ ಹೈಕೋರ್ಟ್‌ ಇದು ತಪ್ಪು ನೀತಿಗೆ ಉದಾಹರಣೆಯಾಗಿರಬಹುದಾದರೂ, ಜನ ಪ್ರತಿನಿಧಿ ಕಾಯ್ದೆಯಡಿ ಭ್ರಷ್ಟ ವ್ಯವಹಾರ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತು.

Bharat Scouts and Guides ಭಾರತ್ ಸ್ಕೌಟ್ಸ್& ಗೈಡ್ಸ್ ಜಿಲ್ಲೆ ಮತ್ತು ಸ್ಥಳೀಯ ಸಮಿತಿ ಪದಾಧಿಕಾರಿಗಳ ಸಭೆ

0

Bharat Scouts and Guide ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ ಇಂದು ಪದಾಧಿಕಾರಿಗಳ, ಜಿಲ್ಲಾ ಸಹಾಯಕ ಆಯುಕ್ತರುಗಳ, ತರಬೇತಿ ನಾಯಕರುಗಳ ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳ ವಿಶೇಷ ಸಭೆಯನ್ನು ಜಿಲ್ಲಾ ಸ್ಕೌಟ್ ಭವನ ಶಿವಮೊಗ್ಗದಲ್ಲಿ ಹಮ್ಮೀಕೊಳ್ಳಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ನೂತನ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಕೆ.ಪಿ.ಬಿಂದುಕುಮಾರ ರವರು ವಹಿಸಿ ೨೦೨೪-೨೫ನೇ ಸಾಲಿನ ಮೊದಲ ಸಭೆ ಇದಾಗಿದ್ದು ಅಲ್ಲದೆ ನಾನು ಜಿಲ್ಲಾ ಮುಖ್ಯ ಆಯುಕ್ತರನ್ನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಸಭೆ ಆಗಿದ್ದು ತಾವೆಲ್ಲರೂ ಬಂದಿದ್ದಿರಾ ಇಲ್ಲಿಯವರೆಗೆ ತಾವೆಲ್ಲರೂ ಸಹಾಯ ಸಹಕಾರಿ ನೀಡಿದ್ದಿರಿ ಅದೆ ರೀತಿ ನನ್ನ ಅಧಿಕಾರಾವಧಿಯಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ಬೇಕಾಗಿದೆ ಮಕ್ಕಳ ಹಾಗೂ ವಯಸ್ಕನಾಯಕರ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸೋಣ ಅಲ್ಲದೆ ಪ್ರತಿಯೊಂದು ಶಾಲೆಯಲ್ಲಿ ಸ್ಕೌಟ್ ಗೈಡ್ ಮಕ್ಕಳು ಇರುವಂತೆ ಶ್ರಮವಹಿಸುವ ಎಂದು ಮಾತನಾಡಿದರು.

Bharat Scouts and Guides ಶಿಕಾರಿಪುರ ಎಡಿಸಿ ವೇಣುಗೋಪಾಲ ರವರು ನೂತನ ಜಿಲ್ಲಾ ಮುಖ್ಯ ಆಯುಕ್ತರಿಗೆ ಶಾಲು ಹೊದಿಸಿ ಹೂಗುಚ್ಚ ಕೊಟ್ಟು ಸನ್ಮಾನಿಸಿದರು. ಸಭೆಗೆ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ ರವರು ನೇರವೇರಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ಹಾಗೂ ನಡೆಸಬೇಕಾಗಿರುವ ಕಾರ್ಯಕ್ರಮದ ಬಗ್ಗೆ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ್ ರವರು ವಿವರಿಸಿ ಸಭೆಯ ನಿರೂಪಣೆಯನ್ನು ನಿರ್ವಹಿಸಿದರು. ವಂದನೆಯನ್ನು ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ(ಸಾರ್ವಜನಿಕ ಸಂಪರ್ಕ) ಶ್ರೀ ವಿಜಯಕುಮಾರ ರವರು ನೇರವೇರಿಸಿದರು.ಈ ಕಾರ್ಯಕ್ರಮಕ್ಕೆ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಲಕ್ಷಿ ರವಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭಾರತಿ ಡಾಯಸ, ಕೇಂದ್ರ ಸ್ಥಾನಿಕ ಆಯುಕ್ತರುಗಳಾದ ಕೆ.ರವಿ, ಎಡಿಸಿಗಳಾದ ನಾರಾಯಣ, ಮಲ್ಲಿಕಾರ್ಜುನ ಕಾನೂರು, ಆನಂದ, ವೆಂಕಟಾಚಲ ಶಾಸ್ತಿç, ಡಿಟಿಸಿ ಶ್ರೀ ಹೆಚ್. ಶಿವಶಂಕರ್, ಎಲ್.ಟಿ ಗಣಪತಿ, ಎಲ್.ಎ ಕಾರ್ಯಾದರ್ಶಿಗಳಾದ ಶ್ರೀ ರಾಜೇಶ ಅವಲಕ್ಕಿ, ಶೇಖರಪ್ಪ, ಹರೀಶ, ವೇಂಕಟೇಶ ರವರು ಹಾಗೂ ಜಿಲ್ಲೆಯ ಪ್ರೀ-ಎ.ಎಲ್.ಟಿಗಳು, ಹಿಮಾಲಯ ವೃಕ್ಷಮಣಿಧಾರಕರು ಉಪಸ್ಥಿತರಿದ್ದರು.

Social Democratic Party of India ನಗರದಲ್ಲಿ ಮಳೆ ಹಾನಿ ಪ್ರದೇಶ ಸರ್ವೆಮಾಡಿ ಪರಿಹಾರ ನೀಡಲು ಎಸ್ ಡಿ ಪಿ ಐ ಮನವಿ

0

Social Democratic Party of India ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಚರಂಡಿ ನೀರು ನುಗ್ಗಿ ಹಾನಿಯಾಗಿರುವ ಬಡಾವಣೆಗಳ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿಐ) ಮಹಾನಗರ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದೆ.

ಆಯುಕ್ತ ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿರುವ ಪಕ್ಷದ ಮುಖಂಡರು, ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅನೇಕ ಬಡಾವಣೆಗಳಲ್ಲಿ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿದೆ. ಕೋಟ್ಯಂತರ ಮೌಲ್ಯದ ಮನೆ ಸಾಮಗ್ರಿಗಳು ಮತ್ತು ವಸ್ತುಗಳು ಹಾಳಾಗಿದ್ದು, ಬಹಳಷ್ಟು ವಾಹನಗಳು ಈ ನೀರಿನಲ್ಲಿ ಮುಳುಗಿ ಹಾಳಾಗಿವೆ. ಹಲವು ಮನೆಗಳ ಮನೆ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋಗಿವೆ. ಎಲೆಕ್ಟ್ರಾನಿಕ್ ಸಾಮಗ್ರಿಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಇಂತಹ ಬಹಳಷ್ಟು ಅನಾಹುತಗಳು ನಡೆದಿದ್ದರೂ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಹೇಳಿದರು.
Social Democratic Party of India ಪಾಲಿಕೆಯ ವಾರ್ಡ್ ಇಂಜಿನಿಯರ್ ಮತ್ತು ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಪರಿಸ್ಥಿತಿಗೆ ಶಿವಮೊಗ್ಗದ ಜನತೆ ತುತ್ತಾಗಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಬಡ ಕುಟುಂಬ ವಾಸಿಸುವ ಕಚ್ಚಾ ಮನೆಗಳು ಬೀಳುವ ಸ್ಥಿತಿ ಇದೆ. ವಾರ್ಡ್ ನಂ.೨೭ರ ಆನಂದರಾಮ್ ಬಡಾವಣೆ ಮತ್ತು ಅಣ್ಣಾನಗರ ಮುಖ್ಯ ರಸ್ತೆ, ಲಕ್ಷ್ಮಿ ಕ್ಯಾಂಟೀನ್, ವಾರ್ಡ್ ನಂ.೧೨ ಟ್ಯಾಂಕ್ ಮೊಹಲ್ಲಾ ಮತ್ತು ಬಾಪೂಜಿನಗರ. ವಾರ್ಡ್ ನಂ.೩೩ ನ್ಯೂಮಂಡ್ಲಿ, ಎನ್.ಟಿ ರಸ್ತೆ, ಹಳೆಮಂಡ್ಲಿ, ಸುಲ್ತಾನ್ ಮೊಹಲ್ಲಾ ಮತ್ತು ಇಮಾಮ್ ಬಾಡಾ. ಮೆಹಬೂಬ್ ನಗರ, ವಾರ್ಡ್ ನಂ.೩೪ ವಾದಿ ಹುದಾ ಬಡಾವಣೆ, ವಾರ್ಡ್ ನಂ.೨೮ ಆರ್.ಎಮ್.ಎಲ್ ನಗರ, ವಾರ್ಡ್ ನಂ.೩೨ ಟಿಪ್ಪು ನಗರ ಕೆರೆ ಅಂಗಳ, ವಾರ್ಡ್ ನಂ.೨೫ ಜೆ ಪಿ ನಗರದಲ್ಲಿಅ ನೇಕ ತೊಂದರೆಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿಯಾಗಿದೆ ಆದರೆ, ಮಳೆಗಾಲದಲ್ಲಿ ಇದು ಎಷ್ಟು ಸ್ಮಾರ್ಟ್ ಆಗಿದೆ ಎಂದು ಗೊತ್ತಾಗುತ್ತಿದೆ. ಒಳಚರಂಡಿಯ ಕಳಪೆ ಕಾಮಗಾರಿ, ಸ್ಮಾರ್ಟ್ ಸಿಟಿ ವರ್ಕ್ ಎಂದು ಗುಂಡಿಗಳು ಅಗೆದು ಬಿಟ್ಟಿರುವುದು, ಮಳೆಗಾಲದ ಮುಂಚೆ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳ ಸಂಪೂರ್ಣ ಕ್ಲೀನಿಂಗ್, ಚರಂಡಿಗಳ ಸ್ವಚ್ಛ ಕಾರ್ಯ ನಡೆಯದೇ ಇರುವುದು ಇದಕ್ಕೆ ಮುಖ್ಯ ಕಾರಣವಾದರೆ, ಕಳೆದ ೧೦ವರ್ಷಗಳಿಂದ ಜನರ ಪರದಾಟವನ್ನು ನೋಡಿಯೂ ಕೂಡ ಅದಕ್ಕೆ ಸರಿಯಾದ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು ಇದಕ್ಕೆ ನೇರ ಕಾರಣ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ಪ್ರಮುಖರಾದ ಇಸಾಕ್, ಜಿಲಾನಿ ಮೊದಲಾದವರಿದ್ದರು.

BSNL ನೆಟ್ ವರ್ಕ್ ಸಮಸ್ಯೆ: ಹೊಸನಗರ ತಾಲ್ಲೂಕು ಮತ್ತಿಮನೆಯಲ್ಲಿ ಟವರ್ ಏರಿ ಗ್ರಾಮಸ್ಥರ ಪ್ರತಿಭಟನೆ

0

BSNL ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಆಕ್ರೋಶಗೊಂಡ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಪಂ ಹಿಂಭಾಗದ ಬಿಎಸ್‌ಎನ್‌ಎಲ್ ಟವರ್ ಸಮೀಪದಲ್ಲಿ ಜಮಾಯಿಸಿದ ಗ್ರಾಮಸ್ಥರು ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ, ಬ್ಲಾಕ್ ಕಾರ್ಯದರ್ಶಿ ಕುಮಾರ್ ಹಿಲ್ಕುಂಜಿ, ಅಡಗೋಡಿ ಸ್ವಾಮಿ, ತರುವೆ ಕೃಷ್ಣ ಮತ್ತು ಇತರರು ಟವರ್ ಏರಿ ಅಲ್ಲೇ ಕುಳಿತು ಪ್ರತಿಭಟಿಸಿದರು. ಸಮಸ್ಯೆ ಬಗೆಹರಿಯುವ ತನಕ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟುಹಿಡಿದ ಘಟನೆ ನಡೆದಿದೆ.

ಸಾಕಷ್ಟು ವರ್ಷಗಳಿಂದ ಮೊಬೈಲ್ ಟವರ್ ಇದ್ದರೂ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆ. ವಿದ್ಯುತ್ ಹೋಗುತ್ತಿದ್ದಂತೆ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಜನರೇಟರ್ ಕೆಟ್ಟು ಹೋಗಿದ್ದರು ದುರಸ್ತಿ ಇಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಉಪಯೋಗವಿಲ್ಲ. ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ಆದರೆ ಅವರು ಟವರ್ ಹತ್ತಿರ ಬರೋದೇ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವಿಷಯ ತಿಳಿದ ಬಿಎಸ್‌ಎನ್‌ಎಲ್ ಜೆಟಿಒ ಹರೀಶ್, ಸಂತೋಷ್, ಶರತ್, ನಗರ ಠಾಣೆ ಪಿಎಸ್‌ಐ ರಮೇಶ್ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರು ಆರೋಪಗಳ ಸುರಿಮಳೆಗೈದರು. ನಗರ ಠಾಣೆ ಪಿಎಸ್‌ಐ ರಮೇಶ್ ಗ್ರಾಮಸ್ಥರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

BSNL ಮೊಬೈಲ್ ನೆಟ್‌ವರ್ಕ್ 24 ಗಂಟೆಯೂ ಸಿಗಬೇಕು. ವಿದ್ಯುತ್ ಇಲ್ಲದಿದ್ದರೂ ಜನರೇಟರ್ ಮೂಲಕ ನೆಟ್‌ವರ್ಕ್ ಇರುವಂತೆ ಕ್ರಮ ಕೈಗೊಳ್ಳಲು ಪಟ್ಟುಹಿಡಿದರು. ಇದಕ್ಕೆ ಅಧಿಕಾರಿಗಳು ೬ ದಿನದ ಕಾಲಾವಕಾಶ ಕೋರಿದರು. ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು ಟವರ್‌ನಿಂದ ಕೆಳಗಿಳಿದು, ಒಂದು ವೇಳೆ ಮಾತು ತಪ್ಪಿದರೆ ಮತ್ತೆ ಪ್ರತಿಭಟನಾ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅರಮನೆಕೊಪ್ಪ ಗೋಪಾಲ್, ಕೊಡಸೆ ಚಂದ್ರಪ್ಪ, ಅಪ್ಪುಭಟ್, ಹಿಲ್ಕುಂಜಿ ಕುಮಾರ್, ಕಿಶೋರ್, ಸುಕೇಶ್ ಮತ್ತಿಕೈ, ಟಿ.ಡಿ ಗಣಪತಿ, ತರುವೆ ಕೃಷ್ಣ, ಸ್ವಾಮಿ ಅಡಗೋಡಿ, ರವೀಂದ್ರ ಮತ್ತಿಮನೆ, ಪ್ರಶಾಂತ ಸಂಪೇಕಟ್ಟೆ, ವೆಂಕಟರಮಣ ಭಟ್, ಶ್ರೀನಿವಾಸ ಎಸ್, ಆಧಿತ್ಯ, ಇತರರು ಇದ್ದರು.

D.K. Shivakumar ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಮಾಹಿತಿ

0

D.K. Shivakumar ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಲು ನಾನು, ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಚಿವರು ತಿಂಗಳಲ್ಲಿ ಅರ್ಧ ದಿನವನ್ನು ಸಂಪೂರ್ಣವಾಗಿ ಮೀಸಲಿಡುತ್ತಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಪಕ್ಷದ ಇಬ್ಬರು ಅಥವಾ ಮೂವರು ಪದಾಧಿಕಾರಿಗಳಿಗೆ ಈ ಜವಾಬ್ದಾರಿವಹಿಸಲಾಗುವುದು. ಪಕ್ಷದ ಕಾರ್ಯಕರ್ತರು ಒಂದು ವಾರ ಮುಂಚಿತವಾಗಿ ತಮ್ಮ ಸದಸ್ಯತ್ವ ಪ್ರಮಾಣಪತ್ರವನ್ನು ನೀಡಿ D.K. Shivakumar ಯಾವ ಸಚಿವರನ್ನು ಭೇಟಿಯಾಗಬೇಕೆಂದು ಲಿಖಿತ, SMS ಅಥವಾ ಇಮೇಲ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಇದು ರಾಜ್ಯಮಟ್ಟದಿಂದ ಬ್ಲಾಕ್‌ಮಟ್ಟದವರೆಗಿನ ಕಾರ್ಯಕರ್ತರಿಗೆ ಮಾತ್ರ ನೀಡಿರುವ ಅವಕಾಶವಾಗಿದೆ. ಮಾಜಿ ಸಚಿವರಿಗೆ, ಶಾಸಕರಿಗೆ ಈ ಭೇಟಿಯ ಅವಕಾಶ ಇರುವುದಿಲ್ಲ. ಕಾರ್ಯಕರ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ X ಖಾತೆ ಸಂದೇಶದಲ್ಲಿ ತಿಳಿಸಿದ್ದಾರೆ.

The Institute of Indian Foundrymen ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೌಂಡ್ರಿಮೆನ್ ಅಧ್ಯಕ್ಷರಾಗಿ ಡಿ.ಜಿ.ಬೆನಕಪ್ಪ ಪದಗ್ರಹಣ

0

The Institute of Indian Foundrymen ದಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್, ದಕ್ಷಿಣ ಭಾರತದ ೨೦೨೩-೨೪ನೇ ಸಾಲಿನ 63ನೇ ವಾರ್ಷಿಕ ಸಭೆ ರ‍್ಪೋರ್ಟ್ ರಸ್ತೆಯ ಮಲ್ನಾಡ್ ಶೈರ್‌ನಲ್ಲಿ ನಡೆಯಿತು. ಕೈಗಾರಿಕೋದ್ಯಮಿ ಶ್ರೀ ಡಿ.ಜಿ ಬೆನಕಪ್ಪರವರು ದಕ್ಷಿಣ ಭಾರತದ ದಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪೌಂಡ್ರಿಮೆನ್‌ನ ಛೆರ್ಮೆನ್ ರಾಗಿ 2024-25ನೇ ಸಾಲಿಗೆ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶ್ರೀಯುತ ಸೌರೆನ್‌ಪಾಲ್ ಎಸ್‌ಸಿಎಂ-ಹೆಡ್, ಮೆ. ಔಮಾ ಇಂಡಿಯಾ ಪ್ರೈ.ಲಿ ಬೆಂಗಳೂರು ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಉದ್ಯಮಿ ಶ್ರೀಯುತ ಡಿ.ಎಸ್. ಚಂದ್ರಶೇಖರ್ ರಾಷ್ಟ್ರೀಯ ಅಧ್ಯಕ್ಷರು, ದಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಪೌಂಡ್ರಿಮೆನ್ ಮತ್ತು ವೈಸ್ ಛೆರ್ಮೆನ್ ಮೆ. ಶಾಂತಲಾ ಸ್ಪೇರೋಕ್ಯಾಸ್ಟ್ ಪ್ರೈ. ಲಿ ಮಾಚೇನಹಳ್ಳಿ ಇವರು ಉಪಸ್ಥಿತರಿದ್ದರು.

The Institute of Indian Foundrymen ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್‌ರವರು ಶ್ರೀಯುತರಿಗೆ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಎಂ. ರಾಜು, ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್ ವಾಸುದೇವ, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪ, ನಿರ್ದೇಶಕರಾದ ರಮೇಶ್ ಹೆಗಡೆ, ಉದ್ಯಮಿ ಗಿರಿಮಾಜಿ ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.