Monday, April 13, 2026
Monday, April 13, 2026
Home Blog Page 699

Narendra Modi ಅಬ್ ಕಿ ಬಾರ್,ಮೈತ್ರಿ ಸರ್ಕಾರ್- ಕರ್ನಾಟಕದ ಐವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ

0

Narendra Modi ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಸಚಿವ ಸಂಪುಟದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಬಹು ಪಾಲು ದೊರೆತಿದೆ. ಕರ್ನಾಟಕದಿಂದ ಐವರು, ತಮಿಳುನಾಡಿನಿಂದ ಒಬ್ಬರಿಗೆ, ಆಂಧ್ರಪ್ರದೇಶದಿಂದ ಮೂವರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ.
ಈ ಬಾರಿ ಮಂತ್ರಿ ಮಂಡಲದಲ್ಲಿ 13 ಸಚಿವರಿಗೆ ಅವಕಾಶ ಕಲ್ಪಿಸಲಾಗಿದೆ.

ದಕ್ಷಿಣದ ಐದು ರಾಜ್ಯಗಳಿಂದ 30 ಲೋಕಸಭೆ ಕ್ಷೇತ್ರಗಳನ್ನ ಜಯಿಸಿದ್ದ ಬಿಜೆಪಿ ನೇತೃತ್ವದ ಎನ್.ಡಿ.ಎ ಕೂಟ ಮೋದಿ 3.0 ಸಂಪುಟದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ್, ತೆಲಂಗಾಣ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯ ಲಭಿಸಿದ್ದು ಒಟ್ಟು 13 ಸಚಿವರು ಸ್ಥಾನ ಪಡೆದಿದ್ದಾರೆ.

ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್‌ ಹಾಗೂ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ.

Narendra Modi ಕೇರಳದ 20 ಲೋಕಸಭಾ ಕ್ಷೇತ್ರಗಳ ಪೈಕಿ 16 ರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಈ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಬಿಜೆಪಿ ಮತ ಪ್ರಮಾಣ 2019ರ ಚುನಾವಣೆಗಿಂತ ಹೆಚ್ಚಿದೆ. ಹೀಗಾಗಿ 2026ರ ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಿಗೆ ಪಕ್ಷವನ್ನ ಬಲಿಷ್ಠ ಗೊಳಿಸುವುದು ಬಿಜೆಪಿ ವರಿಷ್ಠರ ಗುರಿಯನ್ನು ವಿಶ್ಲೇಷಿಸಲಾಗಿದೆ.

PM Kisan Nidhi ಪ್ರಧಾನಿಯಾದ ಮೊದಲ ಕಡತಕ್ಕೆ ಸಹಿ. ಪಿಎಂ ಕಿಸಾನ್ ನಿಧಿ 17 ನೇ ಕಂತು ಮಂಜೂರು

0

PM Kisan Nidhi ಪ್ರಧಾನಿಯಾದ ಮೊದಲ ಕಡತಕ್ಕೆ ಸಹಿ. ಪಿಎಂ ಕಿಸಾನ್ ನಿಧಿ 17 ನೇ ಕಂತು ಮಂಜೂರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಪಿಎಂ ಕಿಸಾನ್ ನಿಧಿಯ 17 ನೇ ಕಂತು ಬಿಡುಗಡೆಗೆ ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು.
PM Kisan Nidhi ಪ್ರಧಾನಿಯಾದ ಮೊದಲ ಕಡತಕ್ಕೆ ಸಹಿ. ಪಿಎಂ ಕಿಸಾನ್ ನಿಧಿ 17 ನೇ ಕಂತು ಮಂಜೂರು ಇದರಿಂದ ದೇಶಾದ್ಯಂತ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ.

Shivamogga Weather Forecast ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆ & ಜಲಾಶಯಗಳ ನೀರಿನ ಮಟ್ಟ- ಮಾಹಿತಿ

0

Shivamogga Weather Forecast ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 79.70 ಮಿಮಿ ಮಳೆಯಾಗಿದ್ದು, ಸರಾಸರಿ 11.39 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 336.69 ಮಿಮಿ ಇದ್ದು, ಇದುವರೆಗೆ ಸರಾಸರಿ 76.84 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 02.80 ಮಿಮಿ., ಭದ್ರಾವತಿ 05.00 ಮಿಮಿ., ತೀರ್ಥಹಳ್ಳಿ 27.80 ಮಿಮಿ., ಸಾಗರ 18.40 ಮಿಮಿ., ಶಿಕಾರಿಪುರ 02.80 ಮಿಮಿ., ಸೊರಬ 05.10 ಮಿಮಿ. ಹಾಗೂ ಹೊಸನಗರ 17.80 ಮಿಮಿ. ಮಳೆಯಾಗಿದೆ.ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1745.00 (ಇಂದಿನ ಮಟ್ಟ), 5585.00 (ಒಳಹರಿವು), 1053.12 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1744.60. ಭದ್ರಾ: 186 (ಗರಿಷ್ಠ), 117.50 (ಇಂದಿನ ಮಟ್ಟ), 642.00 (ಒಳಹರಿವು), 341.00 (ಹೊರಹರಿವು),

ಕಳೆದ ವರ್ಷ ನೀರಿನ ಮಟ್ಟ 137.40. ತುಂಗಾ: 588.24 (ಗರಿಷ್ಠ), 587.54 (ಇಂದಿನ ಮಟ್ಟ), 1789.00 (ಒಳಹರಿವು), 65.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.25. ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 572.12 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1301 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 569.87 (ಎಂಎಸ್‍ಎಲ್‍ಗಳಲ್ಲಿ). ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 562.09 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 856 (ಒಳಹರಿವು), 830.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ),

Shivamogga Weather Forecast ಕಳೆದ ವರ್ಷ ನೀರಿನ ಮಟ್ಟ 562.66 (ಎಂಎಸ್‍ಎಲ್‍ಗಳಲ್ಲಿ). ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 0.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.32 (ಎಂಎಸ್‍ಎಲ್‍ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 0.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.20 (ಎಂಎಸ್‍ಎಲ್‍ಗಳಲ್ಲಿ).

T.20 World Cup Cricket ಟಿ.20 ವಿಶ್ವಕಪ್ ಕ್ರಿಕೆಟ್, ಪಾಕ್ ತಂಡಕ್ಕೆ ಮಣ್ಣುಮುಕ್ಕಿಸಿದ ಭಾರತ. ಆರು ರನ್ ಗಳ “ಜಯಭಾರತ”

0

T.20 World Cup Cricket ಮೊದಲಬಾರಿಗೆ ಅಮೆರಿದಲ್ಲಿ ಆಯೋಜಿಸಿರುವ ವಿಶ್ವಕಪ್ ಟಿ- 20 ಕ್ರಿಕೆಟ್
ಪಂದ್ಯಾವಳಿ ಕುತೂಹಲ ಹುಟ್ಟಿಸಿದೆ.
ಯುಎಸ್ಎ ತಂಡ ಆರಂಭದಿಂದಲೂ ಜಯಗಳಿಸಿ ಗೂಳಿಯಂತೆ ಮುನ್ನುಗ್ಗುತ್ತಿದೆ.
ಬಲಶಾಲಿ ಪಾಕಿಸ್ತಾನ್ ತಂಡವನ್ನೂ ಬಗ್ಗು ಬಡಿದಿದೆ.

ಭಾರತ ಐರ್ಲೆಂಡ್ ವಿರುದ್ಧ ಸುಲಭ ಜಯಗಳಿಸಿದೆ. ಈಗ ಪಾಕಿಸ್ತಾನ್ ತಂಡವನ್ನ ರೋಚಕವಾಗಿ ಮಣ್ಣುಮುಕ್ಕುವಂತೆ ಮಾಡಿದೆ.
ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು.
T.20 World Cup Cricket 119 ರನ್‌ಗಳ ಗುರಿಯನ್ನು ಬೆನ್ನುಹತ್ತಿದ ಪಾಕಿಸ್ತಾನ ಪಾಂಡ್ಯ, ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ನಲುಗಿತು.
20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸುವ ಮೂಲಕ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಈಗಾಗಲೇ ಭಾರತ ಎರಡು ವಿಜಯಗಳಿಂದ ನಾಲ್ಕು ಅಂಕ ಪಡೆದು ಎ ಗುಂಪಿನ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿದೆ.
ಪಾಕ್ ಎರಡು ಸೋಲುಗಳನ್ನಂಡು ಪಾಯಿಂಟ್ ಗಳಿಸಬೇಕಿದೆ. ಪಾಕ್ ತಂಡ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಆಡಬೇಕು.ಆ ಎರಡೂ ಪಂದ್ಯ ಗೆಲ್ಲಬೇಕಿದೆ.
ಯುಎಸ್ಎ ನಾಲ್ಕು ಪಾಯಿಂಟ್ ಪಡೆದಿದೆ.
ಭಾರತ ಮತ್ತು ಯುಎಸ್ ಎ ಪಂದ್ಯ ನಡೆಯಬೇಕಿದೆ.

Narendra Modi ನರೇಂದ್ರ ಮೋದಿ ಅವರದು “ತ್ರಿ” ವಿಕ್ರಮ ಸಾಧನೆ. ಮೂರನೇ ಬಾರಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ

0

Narendra Modi ನರೇಂದ್ರ ಮೋದಿ ಅವರು 71 ಸದಸ್ಯರ ಸಚಿವ ಸಂಪುಟದಲ್ಲಿ ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಪರಿಷತ್ತಿನಲ್ಲಿ 30 ಕ್ಯಾಬಿನೆಟ್ ದರ್ಜೆಯ ಸಚಿವರು, 33 ರಾಜ್ಯ ಸಚಿವರು ಮತ್ತು ಐದು ರಾಜ್ಯ ಸಚಿವರು ಸ್ವತಂತ್ರ ಉಸ್ತುವಾರಿ ಹೊಂದಿದ್ದಾರೆ.

Narendra Modi ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಾಲುದಾರರು ಸೇರಿದಂತೆ ಹಲವಾರು ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Manappuram Finance Ltd ಕದ್ದ ಚಿನ್ನ ಅಡವಿಟ್ಟು ಸಾಲ ಪಡೆದ ಮಹಿಳೆ ವಿರುದ್ಧ ದೂರು ದಾಖಲು

0

Manappuram Finance Ltd ಕದ್ದ ಚಿನ್ನದ ಆಭರಣವನ್ನ ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ ವಿರುದ್ಧ ಮಣಪ್ಪುರಂ ಫೈನಾನ್ಸ್‌ ಸಂಸ್ಥೆ ದೂರು ನೀಡಿದೆ.

ಪೂಜಾ ಎಂಬಾಕೆ 2022ರಲ್ಲಿ 25.6 ಗ್ರಾಂ ಚಿನ್ನದ ಆಭರಣವನ್ನು ಮಣಪ್ಪುರಂ ಫೈನಾನ್ಸ್‌ ಸಂಸ್ಥೆಯಲ್ಲಿ ಅಡವಿಟ್ಟಿದ್ದಳು. 84 ಸಾವಿರ ರೂ. ಸಾಲದ ಹಣ ಪಡೆದಿದ್ದಳು ಎಂದು ಆರೋಪಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಠಾಣೆ ಪೊಲೀಸರು, ಪೂಜಾ ಅಡವಿಟ್ಟ ಚಿನ್ನ ಕಳ್ಳತನದ್ದು ಎಂದು ಆರೋಪಿಸಿ ವಶಕ್ಕೆ ಪಡೆದಿದ್ದರು. ಕಳ್ಳತನದ ಚಿನ್ನವನ್ನು ತನ್ನದೆಂದು ನಂಬಿಸಿ ತಮ್ಮ ಸಂಸ್ಥೆಗೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ, ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಣಪ್ಪುರಂ ಫೈನಾನ್ಸ್‌ ಸಂಸ್ಥೆ ಶಿವಮೊಗ್ಗ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.

Manappuram Finance Ltd ನ್ಯಾಯಾಲಯದ ಸೂಚನೆ ಮೇರೆಗೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Bharat Scouts and Guides ಸಾರ್ವಜನಿಕರಿಗೆ ಸಂಕಷ್ಟದಲ್ಲಿ ನೆರವಾಗಲು ಸ್ಕೌಟ್ ತರಬೇತಿ ನೀಡುತ್ತದೆ-ಜಿ.ವಿಜಯ್ ಕುಮಾರ್

0

Bharat Scouts and Guides ಮಕ್ಕಳು ವಿದ್ಯಾಭ್ಯಾಸದೊಂದಿಗೆ ಸಾಹಸ ಪ್ರವೃತಿಯನ್ನು ಬೆಳೆಸಿಕೊಳ್ಳಬೇಕು. ಸ್ನೇಹ, ಸೇವೆ, ಸಾಹಸ, ಸಂಪರ್ಕ ವಿದ್ಯಾರ್ಥಿಗಳಿಗೆ ಉತ್ತಮ ಪ್ರಜೆಯನ್ನಾಗಿ ಮಾಡಲು ಸಹಕಾರಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ ಅಂಡ್ ಗೈಡ್ಸ್, ರೋವರ್ಸ್ ಮತ್ತು ರೆಂಜರ್ಸ್ ವಿದ್ಯಾರ್ಥಿಗಳ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಸಂಕಷ್ಟದಲ್ಲಿ ಇದ್ದಾಗ ಸಹಕರಿಸಲು ಅನುಕೂಲ ವಾಗುವಂತಹ ಹಲವು ಸಹಾಯಗಳನ್ನು ಹೇಳಿಕೊಡಲಾಗುತ್ತದೆ ಎಂದು ತಿಳಿಸಿದರು.
ಯೂತ್ ಹಾಸ್ಟೆಲ್ ಚೇರ್ಮನ್ ವಾಗೇಶ್ ಮಾತನಾಡಿ, ಸಾರ್ವಜನಿಕರಿಗೆ ನಮ್ಮ ಸಹ್ಯಾದ್ರಿ ಶ್ರೇಣಿಯಲ್ಲಿ ಆಗಾಗ ಚಾರಣ ಹಾಗೂ ಈಗಾಗಲೇ ಸಾವಿರಾರು ಸದಸ್ಯರಿಗೆ ಹಿಮಾಲಯ ಚಾರಣ ಏರ್ಪಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸಾಹಸ ಪ್ರವೃತ್ತಿ ಮೈಗೂಡಿಸಿಕೊಳ್ಳಲು ಚಾರಣ ಏರ್ಪಡಿಸಲಾಗಿದೆ ಎಂದರು.
Bharat Scouts and Guides ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಸೇವಾ ವೇಷಧಾರಿಗಳಾದ ತಮ್ಮ ಮೇಲೆ ಸಾರ್ವಜನಿಕರ ಗಮನವಿರುತ್ತದೆ. ಎಲ್ಲರೂ ಶಿಸ್ತಿನಿಂದ ನಡೆದುಕೊಳ್ಳಬೇಕು. ಸಾಹಸ ಪ್ರವೃತ್ತಿಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಇದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ತಿಳಿಸಿದರು.
ಪೂರ್ಣಿಮಾ ಅವರು ಪ್ರಾರ್ಥಿಸಿದರು. ಪವಿತ್ರಾ ಸ್ವಾಗತಿಸಿದರು. ಜಯಕಿರ್ತಿ ವಂದನಾರ್ಪಣೆ ನಡೆಸಿಕೊಟ್ಟರು. ಮಲ್ಲಿಕಾರ್ಜುನ್ ಕಾನೂರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಚನ್ನೇಶ್, ಡಾ. ಚಂದ್ರಶೇಖರ್, ಗಂಧರ್ವ, ಸುರೇಶ, ಗಿರೀಶ್ ಕಾಮತ್, ಹರೀಶ್ ಪಾಟೀಲ್ ಮುಂತಾದವರು ಇದ್ದರು.

Actor Chetan ಹಮಾರೆ ಬಾರಾಹ್” ಸಿನಿಮಾ ನಿಷೇಧ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ- ನಟ ಚೇತನ್ ಅಹಿಂಸಾ

0

Actor Chetan ಹಮ್ ದೋ ಹಮಾರೆ ಬಾರಹ ಸಿನಿಮಾ ನಿಷೇಧ ಸರಿಯಲ್ಲ. ಈ ಸಿನಿಮಾದ ಟೈಟಲ್ ಬದಲಾವಣೆ ಆಗಬೇಕಿತ್ತು. ಕೆಲವರು ಟ್ರೈಲರ್ ನೋಡಿ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಹಮಾರೆ ಬಾರಹ ಸಿನಿಮಾ ಬ್ಯಾನ್ ಮಾಡುವ ಮೂಲಕ ವಾಕ್ ಸ್ವ್ವಾತಂತ್ರ‍್ಯ ಉಲ್ಲಂಘನೆಯಾಗಿದೆ ಎಂದು ನಟ ಮತ್ತು ಚಿಂತಕ ಅಹಿಂಸಾ ಚೇತನ್ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸಿನಿಮಾದ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ೧೧ ಬಾರಿ ಕಟ್ ಮಾಡಿದೆ. ಟ್ರೈಲರ್ ನೋಡಿ ಸಿನಿಮಾ ನಿಷೇಧಿಸಬೇಕೆಂದರೆ ಇತ್ತೀಚೆಗೆ ಬರುವ ಎಲ್ಲಾ ಸಿನಿಮಾಗಳನ್ನು ನಿಷೇಧಿಸಬೇಕಾಗುತ್ತದೆ. ಸಿನಿಮಾಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಮುಂತಾದ ದೃಶ್ಯಗಳು ಇದ್ದೇ ಇರುತ್ತವೆ. ಊಹೆ ಮಾಡಿ ಸಿನಿಮಾ ನಿಷೇಧಿಸುವುದು ತರವಲ್ಲ. ಈ ಸಿನಿಮಾಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

ಹಾಗಿದ್ದರೂ ಕರ್ನಾಟಕ ಸರಕಾರ ನಿಷೇಧಿಸಿರುವುದು ಸರಿಯಲ್ಲ ಎಂದರು.

ಹಮಾರೆ ಬಾರಹ ಸಿನಿಮಾ ನೋಡದೆ ರಾಜ್ಯ ಸರ್ಕಾರ ಟ್ರೈಲರ್ ನೋಡಿ ಬ್ಯಾನ್ ಮಾಡಿರುವುದು ಎಷ್ಟು ಸರಿ. ಬ್ಯಾನ್ ಮಾಡಿದ ಸರ್ಕಾರವೂ ಸಹ ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡಿ ಬ್ಯಾನ್ ಮಾಡಿದರೆ ಹೇಗಿರುತ್ತದೆ. ಹಾಗಾಗಿ ಚಾಕ್ ಸ್ವತಂತ್ರ‍್ಯ ಹತ್ತಿಕ್ಕಬಾರದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಶ್ಮೀರ ಫೈಲ್ ಸಿನಿಮಾ ಬ್ಯಾನ್ ಮಾಡಿದ್ದರು. ಇದು ಸರಿಯಲ್ಲ. ನನಗೆ ಹಲವು ಮುಸ್ಲೀಂ ಸಿನಿಮಾಗಳಲ್ಲಿ ಪಾತ್ರ ವಹಿಸಲು ಬಂದಿತ್ತು. ನಾನು ನಟಿಸಿರಲಿಲ್ಲ. ಹಾಗಂತ ಅದನ್ನು ತಿರಸ್ಕರಿಸಲಾಗದು ಎಂದರು.

ಹೈಕೋರ್ಟ್ ಏನಾದರೂ ಆಕ್ಷೇಪಣೆ ಇದ್ದರೆ ಸೆನ್ಸಾರ್ ಬೋರ್ಡ್ಗೆ ಸಲ್ಲಿಸಬಹುದಿತ್ತು. ಸಿನಿಮಾ ನೋಂದಣಿಯನ್ನು ಮಾತ್ರ ಎರಡು ವಾರಕ್ಕೆ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ ಎಂದರು.

ಕರ್ನಾಟಕದಲ್ಲಿ ಮಾಡಲಾದ ಜಾತಿ ಜನಗಣತಿ ಬಿಡುಗಡೆ ಮಾಡದೆ ಇರುವುದು ಅನ್ಯಾಯ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯ ಇದನ್ನು ವಿರೋಧಿಸಿದಾಗ ಅಹಿಂದ ಪರ ನಿಂತಿಲ್ಲ. ಹಾಗಾಗಿ ಅಹಿಂದ ಪರ ನಿಲ್ಲಲು ಸಿದ್ದರಾಮಯ್ಯರಿಗೆ ನೈತಿಕ ಹಕ್ಕಿಲ್ಲ. ಚುನಾವಣೆ ಮುಗಿದರೂ ಜಾತಿಗಣತಿ ಜಾರಿಯಾಗಬೇಕು. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಮಾತು ಕೊಟ್ಟಿತ್ತು.

Actor Chetan ಈ ಗಣತಿಗಾಗಿ ೨೦೦ ಕೋಟಿ ರೂ. ವ್ಯಯಿಸಲಾಗಿದೆ ಎಂದರು.
ಹೀಗಾದರೆ ದಲಿತರಿಗೆ ಶೋಷಿತರಿಗೆ ಆದಿವಾಸಿಗಳಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ. ಸರ್ಕಾರಕ್ಕೆ ಬಿಡುಗಡೆ ಮಾಡಲು ಮನಸ್ಸಿಲ್ಲವೇ ಎಂದು ಪ್ರಶ್ನಿಸಿದ ಅವರು,
ಕೇಂದ್ರದಲ್ಲಿಯೂ ಒತ್ತಡ ಹಾಕಿ ದೇಶದಾದ್ಯತಂತ ಜಾತಿ ಗಣತಿ ಮಾಡಲು ನಿತಿಶ್‌ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಒತ್ತಡ ಹಾಕಬೇಕು ಎಂದರು.
ಹಿಂದುತ್ವದ ಯುಸಿಸಿ ಅಲ್ಲ ಸಂವಿಧಾನ ಪರವಾದ ಯುಸಿಸಿ ಪರವಾಗಿ ನಾನು ಇದ್ದೇನೆ. ಜೊತೆಗೆ ಒನ್ ನೇಷನ್ ಒನ್ ಎಲೆಕ್ಷನ್ ಪರವಾಗಿಯೂ ನಾನಿಲ್ಲ. ವಿವಿಧ ಪಕ್ಷಗಳ ನಾಯಕರಿಗೆ ಇದು ಗೊತ್ತಿದೆ.

ಆದರೆ ಎನ್‌ಡಿಎನಲ್ಲಿ ಸೇರಿಕೊಂಡಿರುವುದರಿಂದ ಈ ಬಗ್ಗೆ ಮಾತನಾಡುತ್ತಿಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಜನರ ಪರ ನಿಲ್ಲುವರೆಂಬ ನಂಬಿಕೆ ಇದೆ ಎಂದರು.

Bhadravati Police ಅಡಿಕೆ ತಟ್ಟೆ ತಯಾರಿಕಾ ಘಟಕದಲ್ಲಿ ಲಕ್ಷಾಂತರ ಮೌಲ್ಯದ ಸಾಮಗ್ರಿ ಕಳವು

0

Bhadravati Police ಮಾಲೀಕ ಕಾರ್ಖಾನೆಯಿಂದ ಹೊರ ಹೋಗಿದ್ದ ಸಂದರ್ಭ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ನೌಕರರು ಪರಾರಿಯಾಗಿದ್ದಾರೆ.

ನೇಪಾಳದ ಕಾರ್ಮಿಕರು
ಚಿದಾನಂದ ಎಂಬುವವರು ಭದ್ರಾವತಿ ತಾಲೂಕು ಗೌಡರಹಳ್ಳಿಯ ತೋಟವೊಂದರಲ್ಲಿ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ 40 ಸಾವಿರ ರೂ. ಹಣ ನೀಡುವಂತೆ ಕಾರ್ಮಿಕರು ಚಿದಾನಂದ ಬಳಿ ಕೇಳಿದ್ದರು. ಹಣಕಾಸು ಸಮಸ್ಯೆಯಿಂದ ಚಿದಾನಂದ ಹಣ ನೀಡಿರಲಿಲ್ಲ. ಇನ್ನೊಂದೆಡೆ ಕರೆಂಟ್‌ ಬಿಲ್‌ ಪಾವತಿಸದ ಹಿನ್ನೆಲೆ ಜೂ.5ರಂದು ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ ಕಡಿತಗೊಳಿಸಿದ್ದರು.

ಕರೆಂಟ್‌ ಬಿಲ್‌ ಪಾವತಿಸಲು ಹಣ ಹೊಂದಿಸಿಕೊಂಡು ಭದ್ರಾವತಿಗೆ ಜೂ.5 ರಂದು ತೆರಳಿದ್ದರು. ರಾತ್ರಿ 10 ಗಂಟೆಗೆ ಹಿಂತಿರುಗಿದಾಗ, ಯಾವುದೋ ವಾಹನ ಫ್ಯಾಕ್ಟರಿ ಬಳಿ ಬಂದು ಹೋಗಿರುವುದು ಚಿದಾನಂದಗೆ ಗೊತ್ತಾಗಿದೆ. ಫ್ಯಾಕರಿಗೆ ತೆರಳಿ ಮೊಬೈಲ್‌ ಟಾರ್ಚ್‌ನಲ್ಲಿ ಪರಿಶೀಲಿಸಿದಾಗ ಒಂದು ಲ್ಯಾಪ್‌ಟಾಪ್‌, 10 ಬ್ಯಾಗ್‌ ಅಡಿಕೆ ತಟ್ಟೆ, ಅಡಿಕೆ ಹಾಳೆ ತಯಾರಿಸುವ 12 ಅಚ್ಚುಗಳು ನಾಪತ್ತೆಯಾಗಿದ್ದವು.

Bhadravati Police ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ದಿನೇಶ, ಆತನ ಪತ್ನಿ ನಿರ್ಮಲಾ, ಪ್ರಕಾಶ್‌, ಆತನ ಪತ್ನಿ ಮನ್ಸೂರ ಕಾಣೆಯಾಗಿದ್ದರು.

ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Klive Special Article ತಿಂಗಳ ಕವಿತೆ ಕವಿ: ಜಿ. ಧರ್ಮರಾಜ್ ಸಾಗರ

0

Klive Special Article ಪರಿಸರ ಉಳಿಸಿ

ಪರಿಪರಿಯಾಗಿ ಹೇಳುವೆ ಪರಿಸರ ಉಳಿಸಿ ಎಂದು
ಪರಿಸರವೆಂದರೆ ನೀನಿರುವ ತಾಣ ಅದು ಸುಂದರವಿದ್ದರೆ ನೀಡುವುದು ಪ್ರಾಣ

ಪರಿಸರವೆಂದರೆ ಕಾಡು ಮೇಡು
ಉಳಿಸದಿದ್ದರೆ ಪರಿತಪಿಸುವ ಪಾಡು

ಪರಿಸರ ಹಸಿರಾಗಿದ್ದರೆ ಇರುವುದು ಪ್ರಾಣವಾಯು
ಗುಟುಕಿಸಲು ಇರುವುದು ಜೀವಜಲವು

ಪ್ರಕೃತಿಯು ಕೊಟ್ಟಿದೆ ಮಾನವನಿಗೆ ಬದುಕುವ ದಾರಿ ಅದು ಸಾಲದೆಂದು ಕಡಿಯಲು ಹೊರಡುವನು ಕಾಡುದಾರಿ

ಕಾನಹನನ ಮಾಡಿ ಮಾಡುವನು ಜಣಜಣ
ಗಿಡ ಮರ ಬಳ್ಳಿಗಳ ಶಾಪ ತಟ್ಟಿ ಕೊನೆಗೂ ಎಲ್ಲಾ ಬಣ ಬಣ

ಕಾಡ ಕಡಿಯದಿರು ಮೂಡ
ಕಾಡಿದ್ದರೆ ಹರಿದು ಬರುವುದು ಮೋಡ
ಮೋಡವಿದ್ದರೆ ಮಳೆಯು ಮಳೆ ಬಿದ್ದರೆ ಹಸಿರಾಗುವುದು ಇಳೆಯು

Klive Special Article ದಿನಕ್ಕೊಂದು ಗಿಡ ನೆಡು ಹಸಿರಾಗಲಿ ಈ ನೆಲದಲ್ಲ ಸುಂದರ ನಾಡು
ಹರಸಲಿ ಭೂತಾಯಿ ನಿನ್ನ ಕನಸಿನ ಹಸಿರ ಸುಮಧುರ ಬೀಡು

ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು, ಸಾಗರ