Monday, April 13, 2026
Monday, April 13, 2026
Home Blog Page 700

Rahul Gandhi ರಾಹುಲ್ ಗಾಂಧಿ” ಮ್ಯಾನ್ ಆಫ್ ದ ಮ್ಯಾಚ್” ಸಂಸದ‌ ಶಶಿ ತರೂರ್ ಬಣ್ಣನೆ

0

Rahul Gandhi ರಾಹುಲ್ ಗಾಂಧಿ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದಾರೆ. ಅವರು ಸದನದಲ್ಲಿ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್ ಆಗ್ರಹಿಸಿದ್ದು, ಇದೇ ರೀತಿಯ ಬೇಡಿಕೆಯನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ಮುಂದಿಟ್ಟಿದ್ದಾರೆ.

ಇದಲ್ಲದೆ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಬೇಕು ಎಂದು ಸಿಡಬ್ಲ್ಯುಸಿ ಸದಸ್ಯರು ನಿರ್ಣಯ ಅಂಗೀಕರಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಶಿ ತರೂರ್, ಈ ಜನಾದೇಶವು ಬಿಜೆಪಿಯ ದುರಹಂಕಾರ ಮತ್ತು ವರ್ತನೆಗೆ ಮತದಾರರು ನೀಡಿರುವ ಜನಾದೇಶದ ಸಂದೇಶವಾಗಿದೆ. ಸರ್ಕಾರವನ್ನು ನಡೆಸುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಮೋದಿ ಮತ್ತು ಅಮಿತ್ ಶಾ ಅವರಿಗೆ ಇದು ಒಂದು ಸವಾಲಾಗಿದೆ ಮತ್ತು ಇದು ಅವರ ಕಾರ್ಯಚಟುವಟಿಕೆಯನ್ನು ಬದಲಾಯಿಸುವ ಮತ್ತು ಹೆಚ್ಚು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಾರಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಕೆಲವು ವಿಷಯಗಳಲ್ಲಿ ‘ಮಜ್ಬೂರ್ ಸರ್ಕಾರ’ (ಅಸಹಾಯಕ ಸರ್ಕಾರ) ಎಂದು ಸಾಬೀತುಪಡಿಸಬಹುದು, ಏಕೆಂದರೆ ಎನ್‌ಡಿಎ ಭಾಗವಾಗಿರುವ ಎಲ್ಲಾ ಪಕ್ಷಗಳು ಎಲ್ಲವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಹೇಳಿದ್ದಾರೆ.

ಈಗಾಗಲೇ ಅಗ್ನಿವೀರ್ ಯೋಜನೆಯ ಬಗ್ಗೆ ಒಂದು ಪಕ್ಷವು ಪ್ರಶ್ನೆಗಳನ್ನು ಎತ್ತಿದೆ, ಅದನ್ನು ಪರಿಶೀಲಿಸಬೇಕಾಗಿದೆ. ಆಂದ್ರಕ್ಕೆ ಬಿಜೆಪಿ ಸರ್ಕಾರವು ಈವರೆಗೆ ನೀಡಲು ನಿರಾಕರಿಸಿದ್ದ ವಿಶೇಷ ವರ್ಗದ ಸ್ಥಾನಮಾನಕ್ಕೆ ಬೇಡಿಕೆ ಕೇಳಿ ಬಂದಿದೆ, ಅದನ್ನು ಮರುಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು.

Rahul Gandhi ಮೋದಿ ಸರಕಾರವು ಕಳೆದ 10 ವರ್ಷಗಳಲ್ಲಿ ಸಂಸತ್ತನ್ನು ಸೂಚನಾ ಫಲಕದಂತೆ ಪರಿಗಣಿಸಿದೆ. ಈಗ 230ಕ್ಕೂ ಹೆಚ್ಚು ಸಂಸದರ ಪ್ರಬಲ ವಿರೋಧವಿರುವ ಕಾರಣ ಈಗ ಅದು ಸಾಧ್ಯವಿಲ್ಲ. ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ದೇಶದಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹುದ್ದೆ ವಹಿಸುವುದು ಸೂಕ್ತವೆನಿಸಲಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಬಳಿಕ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ ಆಡಳಿತ ಪಕ್ಷವನ್ನು ಎದುರಿಸಲು ಹೆಚ್ಚಿನ ಸಂಖ್ಯಾ ಬಲ ಹೊಂದಿರುವ ಪಕ್ಷದ ಜನಪ್ರಿಯ ನಾಯಕ ವಿಪಕ್ಷದ ಸ್ಥಾನ ವಹಿಸುವುದು ಹೆಚ್ಚು ಸೂಕ್ತವೆನಿಸಲಿದೆ ಎಂದು ಶಶಿ ತರೂರ್‌ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲವನ್ನೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ರಾಹುಲ್ ಗಾಂಧಿ ಅವರು ಪ್ರತಿಪಕ್ಷದ ಪ್ರಮುಖ ನಾಯಕರಾಗಿ ಹೊರಹೊಮ್ಮಬೇಕು ಎಂದು ಇಡೀ ದೇಶ ಒತ್ತಾಯಿಸುತ್ತದೆ. ಈ ಸ್ಥಾನವು ಅವರಿಗೆ ಸೂಕ್ತವಾಗಿದೆ ಎಂದು ಪ್ರತಾಪ್ ಸಿಂಗ್ ಬಾಜ್ವಾ ಹೇಳಿದ್ದಾರೆ.

ಲುಧಿಯಾನದಿಂದ ಆಯ್ಕೆಯಾಗಿರುವ ಸಂಸದ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಅಂತಿಮ ನಿರ್ಧಾರವು ಪಕ್ಷದ ನಾಯಕತ್ವದ ಮೇಲಿದೆ ಮತ್ತು ಈ ಪಾತ್ರವನ್ನು ವಹಿಸಬೇಕೇ ಎಂಬುದನ್ನು ನಿರ್ಧರಿಸುವುದು ರಾಹುಲ್ ಗಾಂಧಿ ಅವರದ್ದಾಗಿದೆ. ರಾಹುಲ್ ಗಾಂಧಿ ಮುಂದೆ ಬಂದು ಎಲ್ಲವನ್ನೂ ನಿಭಾಯಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಆದರೆ ನಾಯಕತ್ವದ ಅಂತಿಮ ನಿರ್ಧಾರ ರಾಹುಲ್ ಗಾಂಧಿ ಅವರೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಬೇಕು. ರಾಹುಲ್ ಗಾಂಧಿ ಮಹಿಳೆಯರು ಮತ್ತು ನಿರುದ್ಯೋಗಿಗಳ ಪರ ಹೋರಾಟ ನಡೆಸುತ್ತಿದ್ದಾರೆ. ಇದು 140 ಕೋಟಿ ಭಾರತೀಯರ ಬೇಡಿಕೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.

ಗುರುದಾಸ್‌ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಸಂಸದ ಸುಖ್‌ಜಿಂದರ್ ಸಿಂಗ್ ರಾಂಧವಾ ಈ ಬಗ್ಗೆ ಮಾತನಾಡಿದ್ದು, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿಗೆ ಪ್ರತ್ಯುತ್ತರ ನೀಡಬಲ್ಲವರು ಮತ್ತು ಆದ್ದರಿಂದ ಅವರು ವಿಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Lakshadweep ಲಕ್ಷದ್ವೀಪದಲ್ಲಿ ಎನ್ ಡಿ ಎ ಬೆಂಬಲಿಸದ ಮತದಾರ

0

Lakshadweep ಲಕ್ಷದ್ವೀಪ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಹೀನಾಯವಾಗಿ ಸೋಲನ್ನು ಕಂಡಿದ್ದು, ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಕಂಡು ಬರುತ್ತಿದೆ.

ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ ಲಕ್ಷದ್ವೀಪ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ವಿದ್ವಾಂಸರನ್ನು ಕಣಕ್ಕಿಳಿಸಿದ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮತಬ್ಯಾಂಕ್‌ಗಳನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದರು, ಆದರೆ ಎನ್‌ಡಿಎ ಅಭ್ಯರ್ಥಿ ಕೇವಲ 201 ಮತಗಳನ್ನು ಪಡೆಯುವ ಮೂಲಕ ಲಕ್ಷದ್ವೀಪ ದ್ವೀಪಸಮೂಹದಲ್ಲಿ ಎನ್‌ಡಿಎಗೆ ಮುಖಭಂಗವಾಗಿದೆ.

ಲಕ್ಷದ್ವೀಪದಲ್ಲಿ 2019ರಲ್ಲಿ ಬಿಜೆಪಿ ಅಭ್ಯರ್ಥಿ 125 ಮತಗಳಿಸಿದ್ದರು. ಆದರೆ ಈ ಬಾರಿ ಪ್ರಧಾನಿ ಭೇಟಿ ನೀಡಿದ್ದರಿಂದ ಎನ್‌ಡಿಎ ಅಭ್ಯರ್ಥಿಗೆ ಹೆಚ್ಚಿನ ಮತ ಸಿಗುವ ಭರವಸೆ ಬಿಜೆಪಿ ಪಾಲಳಯದಲ್ಲಿತ್ತು. ಆದರೆ ಇದು ಸುಳ್ಳಾಗಿದೆ.
ಹಾಲಿ ಸಂಸದ ಎನ್‌ಸಿಪಿ (ಎಸ್‌ಪಿ)ಯ ಮೊಹಮ್ಮದ್ ಫೈಜಲ್ ವಿರುದ್ಧ 2,647 ಮತಗಳ ಮುನ್ನಡೆಯೊಂದಿಗೆ ಕಾಂಗ್ರೆಸ್‌ನ ಮಾಜಿ ಸಂಸದ ಮುಹಮ್ಮದ್ ಹಮ್ದುಲ್ಲಾ ಸಯೀದ್ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ಸುಮಾರು 49,000 ಮತದಾರರನ್ನು ಹೊಂದಿರುವ ದ್ವೀಪಸಮೂಹದಲ್ಲಿ ಎನ್‌ಡಿಎ ಅಭ್ಯರ್ಥಿ ಎನ್‌ಸಿಪಿ(ಎಪಿ)ಯ ಯೂಸುಫ್ ಟಿ ಪಿ 201 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಲಕ್ಷದ್ವೀಪದಲ್ಲಿ ಲೆಪ್ಟಿನೆಂಟ್‌ ಗವರ್ನರ್‌ ಪ್ರಫುಲ್ ಖೋಡಾ ಪಟೇಲ್ ತಂದಿದ್ದ ಆಡಳಿತದ ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆದಿತ್ತು.

2021ರಲ್ಲಿ ‘ಲಕ್ಷದ್ವೀಪ ಉಳಿಸಿ’ ಅಭಿಯಾನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನೂತನ ಸುಧಾರಣೆಗಳು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಜನರು ಭಯಪಟ್ಟಿದ್ದರು ಮತ್ತು ದ್ವೀಪಸಮೂಹವನ್ನು ಕೇಸರಿಮಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

Lakshadweep ಜನವರಿಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಜನರೊಂದಿಗೆ ಸಂವಹನ ನಡೆಸಿದ್ದರು. ಲಕ್ಷದ್ವೀಪದ ಮುಸ್ಲಿಂ ಮಹಿಳೆಯರೊಂದಿಗೆ ಮೋದಿ ಸಂವಾದ ನಡೆಸಿದ ವಿಡಿಯೋ ತುಣುಕನ್ನು ಬಿಜೆಪಿ ಪಾಳಯಗಳು ವ್ಯಾಪಕವಾಗಿ ವೈರಲ್‌ ಮಾಡಿದ್ದವು.

ಎನ್‌ಸಿಪಿಯ ವಿಭಜನೆ ಮತ್ತು ಎನ್‌ಸಿಪಿ(ಎಪಿ) ಬಣ ಎನ್‌ಡಿಎಗೆ ಸೇರ್ಪಡೆಗೊಂಡ ನಂತರ, ಲಕ್ಷದ್ವೀಪ ಸ್ಥಾನವನ್ನು ಎನ್‌ಸಿಪಿ (ಎಪಿ) ಬಣಕ್ಕೆ ನೀಡಲಾಯಿತು. ಪಕ್ಷವು ಮುಸ್ಲಿಂ ವಿದ್ವಾಂಸ ಯೂಸುಫ್ ಟಿ ಪಿ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿತ್ತು.

ಆದರೆ ಈ ಪ್ರಯತ್ನಗಳು ಮುಸ್ಲಿಂ ಮತದಾರರನ್ನು ಎನ್‌ಡಿಎಗೆ ಸೆಳೆಯಲು ಸಹಾಯ ಮಾಡಲಿಲ್ಲ.
ಲಕ್ಷದ್ವೀಪವು ಎನ್‌ಸಿಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತದೆ. ಈ ಬಾರಿ ಗೆದ್ದಿರುವ ಮುಹಮ್ಮದ್ ಹಮ್ದುಲ್ಲಾ ಸಯೀದ್ ಅವರು ಲಕ್ಷದ್ವೀಪದಲ್ಲಿ ಸುದೀರ್ಘ ಅವಧಿಯ ಸಂಸದರಾಗಿರುವ ಕಾಂಗ್ರೆಸ್ ನಾಯಕ ಪಿ ಎಂ ಸಯೀದ್ ಅವರ ಪುತ್ರರಾಗಿದ್ದಾರೆ.

ಪಿ ಎಂ ಸಯೀದ್ 2004ರ ಚುನಾವಣೆಯಲ್ಲಿ ಸೋತಿದ್ದರು ಮತ್ತು 2005ರಲ್ಲಿ ನಿಧನರಾಗಿದ್ದಾರೆ. 2009ರ ಚುನಾವಣೆಯಲ್ಲಿ ಅವರ ಮಗ ಸ್ಥಾನವನ್ನು ಗೆದ್ದರು. ಆದರೆ 2014 ಮತ್ತು 2019ರ ಚುನಾವಣೆಯಲ್ಲಿ ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಈ ಸ್ಥಾನವನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷ ಕೊಲೆ ಯತ್ನ ಪ್ರಕರಣದಲ್ಲಿ ಫೈಝಲ್ ಅವರನ್ನು ಅನರ್ಹಗೊಳಿಸಿದ್ದರಿಂದ ಸುದ್ದಿಯಾಗಿದ್ದರು.

ಆದರೆ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ಅವರ ಅಮಾನತು ರದ್ದುಗೊಳಿಸಲಾಗಿತ್ತು.

K.C. Tyagi ಮುಸ್ಲೀಂ & ಇತರೆ ಅಲ್ಪ ಸಂಖ್ಯಾತರ ವಿರುದ್ಧ ನಿಲುವು ತಾಳಲು ಮೈತ್ರಿ ಸರ್ಕಾರಕ್ಕೆ ಬೆಂಬಲಿಸುವುದಿಲ್ಲ- ಕೆ.ಸಿ.ತ್ಯಾಗಿ.

0

K.C. Tyagi “ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಎನ್‌ಡಿಎ ಮೈತ್ರಿ ಸರ್ಕಾರ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ದ ನಿಲುವು ತಾಳಲು ಜೆಡಿಯು ಅವಕಾಶ ನೀಡುವುದಿಲ್ಲ” ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಕೆಸಿ ತ್ಯಾಗಿ ಶುಕ್ರವಾರ ಡಿಜಿಟಲ್ ಸುದ್ದಿ ವಾಹಿನಿ ರೆಡ್ ಮೈಕ್‌ಗೆ ತಿಳಿಸಿದ್ದಾರೆ.

ಜೆಡಿಯು ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿದೆ. ಮೋದಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರ ರಚನೆಯಾಗಬೇಕಾದರೆ ಬಿಜೆಪಿಗೆ ಜೆಡಿಯು ಬೆಂಬಲ ಅತ್ಯಗತ್ಯವಾಗಿದೆ.

“ನಾವು ಬಿಜೆಪಿಯೊಂದಿಗೆ ಅಧಿಕಾರಕ್ಕೇರಿದರೂ, ಮುಸ್ಲಿಮರು ಸೇರಿದಂತೆ ಇತರ ಅಲ್ಪಸಂಖ್ಯಾತರ ವಿರೋಧಿ ನಿಲುವನ್ನು ಒಪ್ಪುದಿಲ್ಲ” ಎಂದು ತ್ಯಾಗಿ ಹೇಳಿದ್ದು, “ಮುಸ್ಲಿಮರು ನಮ್ಮ ಪಕ್ಷದ ಮೇಲೆ ವಿಶ್ವಾಸ ಇಟ್ಟಿರುವುದರ ಬಗ್ಗೆ ಹೆಮ್ಮೆಪಡುತ್ತೇವೆ” ಎಂದಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿರುವುದನ್ನು ಉಲ್ಲೇಖಿಸಿ, “ಜೆಡಿಯು ಈ ಸರ್ಕಾರದಲ್ಲಿ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ತ್ಯಾಗಿ, “ಚುನಾವಣೆಯಲ್ಲಿ ಕೆಸರೆರಚಲು ಬಳಸಿದ ವಿಷಯಗಳನ್ನು ಮರೆತುಬಿಡಬೇಕು” ಎಂದಿದ್ದಾರೆ.

“ನಮ್ಮ ಪಕ್ಷದ ಅಭ್ಯರ್ಥಿ ಮುಜಾಹಿದ್ ಆಲಂ ಅವರು ಬಿಹಾರದ ಮುಸ್ಲಿಂ ಬಾಹುಳ್ಯದ ಕಿಶನ್‌ಗಂಜ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

K.C. Tyagi ಈ ಕ್ಷೇತ್ರದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿಗಿಂತ ಹೆಚ್ಚು ಮತ ಗಳಿಸಿದ್ದಾರೆ” ಎಂದು ಕೆಸಿ ತ್ಯಾಗಿ ಹೇಳಿದ್ದು, ಮುಸ್ಲಿಮರು ಓವೈಸಿ ಪಕ್ಷಕ್ಕಿಂತ ಜೆಡಿಯು ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕಿಶನ್‌ಗಂಜ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಜಾವೇದ್ ಗೆಲುವು ದಾಖಲಿಸಿದ್ದಾರೆ.
“ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಮುನ್ನಡೆಸಲು ಭಯಸುತ್ತದೆ. ಜನರ ಮೇಲೆ ನೀತಿಗಳನ್ನು ಹೇರುವ ಮೊದಲು ಅವುಗಳ ಕುರಿತು ವಿಸ್ಕೃತವಾದ ಚರ್ಚೆ ನಡೆಸಲು ನಮ್ಮ ಪಕ್ಷ ಸಲಹೆ ನೀಡುತ್ತದೆ” ಎಂದು ಕೆಸಿ ತ್ಯಾಗಿ ಹೇಳಿದ್ದಾರೆ.

Ramalinga Reddy ಶಕ್ತಿ ಯೋಜನೆ ಯಾವ ಕಾರಣಕ್ಕೂ ನಿಲ್ಲಿಸಲ್ಲ- ಸಚಿವ ರಾಮಲಿಂಗಾರೆಡ್ಡಿ

0

Ramalinga Reddy ಗ್ಯಾರಂಟಿಗಳನ್ನು ಮತ ಪಡೆಯಲು ನೀಡಿಲ್ಲ. ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ಮೈಸೂರು-ಕೊಡಗು ಲೋಕಸಭಾ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ್‌ ಅವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಗ್ಯಾರಂಟಿಗಳನ್ನು ಮತ ಪಡೆಯಲು ನೀಡಿಲ್ಲ. ಮೋದಿಯವರ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಸಹಾಯವಾಗಲು, ಬಡ ಹಾಗೂ ಮಧ್ಯಮ ವರ್ಗದವರಿಗೆ ಸಹಾಯವಾಗಲು ಗ್ಯಾರಂಟಿ ತಂದಿದ್ದೇವೆ. ಗ್ಯಾರಂಟಿಗೂ ಮತಕ್ಕೂ ಸಂಬಂಧವಿಲ್ಲ. ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬಜೆಟ್‌ನಲ್ಲಿ‌ 5,500 ಕೋಟಿಯನ್ನು ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ.

Ramalinga Reddy ಯಾವುದೇ ಸಮಸ್ಯೆ ಇಲ್ಲ. ನಮ್ಮ ಸರ್ಕಾರ ಇರೋವರೆಗೂ ಶಕ್ತಿ ಯೋಜನೆ ಇರುತ್ತದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಆಗಲೂ ಶಕ್ತಿ ಯೋಜನೆ ಇರುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಸ್‌ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿ, ಮಾದರಿ ನೀತಿ ಸಂಹಿತೆ ಇರುವುದರಿಂದ ಈ ಬಗ್ಗೆ ಚರ್ಚೆಯಾಗಿಲ್ಲ. ಬಸ್ ನಿಗಮಗಳಿಂದ ಇದುವರೆಗೂ ಸರ್ಕಾರಕ್ಕೆ ಪ್ರಸ್ತಾವನೆ ಬಂದಿಲ್ಲ. ಇಂಧನ ಮತ್ತು ಬಿಡಿಭಾಗಗಳ ಬೆಲೆ ಹೆಚ್ಚಾಗಿದೆ. ಮೊದಲು ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿ. ನಂತರದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸತ್ತೇವೆ ಎಂದು ಹೇಳಿದರು.

E. Tukaram ಸಂಸದರಾಗಿ ಆಯ್ಕೆಯಾದ ತುಕಾರಾಂ ತಮ್ಮ ಶಾಸಕ ಸ್ಥಾನಕ್ಕೆ ಮಗಳಿಗೆ ಟಿಕೆಟ್ ಬೇಡಿಕೆ

0

E. Tukaram ನೂತನ ಸಂಸದರಾಗಿ ಆಯ್ಕೆಯಾಗಿರುವ ಇ ತುಕಾರಾಂ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದರೆ ಉಪಚುನಾವಣೆಗೆ ಮಗಳಿಗೆ ಟಿಕೆಟ್ ಕೊಡಬೇಕೆಂದು ಮನವಿ ಮಾಡಿದ್ದಾರೆ .

ತುಕಾರಾಮ್ ಅವರ ಅನುಯಾಯಿಗಳು ಮತ್ತು ಬೆಂಬಲಿಗರು ಕೆಲವು ದಿನಗಳ ಹಿಂದೆ ನಾಗೇಂದ್ರ ಅವರ ರಾಜೀನಾಮೆಯ ಸೂಚನೆಯನ್ನು ಪಡೆದ ನಂತರ, ಸಭೆ ನಡೆಸಿ ತಮ್ಮ ನಾಯಕನನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ತುಕಾರಾಂ ಅವರು ಬಳ್ಳಾರಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ. ತುಕಾರಾಂ ಅವರು ಇದೀಗ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

E. Tukaram ಒಂದು ವೇಳೆ ಕಾಂಗ್ರೆಸ್‌ ಹೈಕಮಾಂಡ್‌ ಸಚಿವ ಸಂಪುಟದ ಬೇಡಿಕೆಯನ್ನು ಈಡೇರಿಸಿದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ರಿ ಸೌಪರ್ಣಿಕಾಗೆ ಬಳ್ಳಾರಿ ಲೋಕಸಭೆ ಟಿಕೆಟ್‌ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತುಕಾರಾಂ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಆದರೆ ನಾಗೇಂದ್ರ ಅವರ ಮನವೊಲಿಸಿ, ಶ್ರೀರಾಮುಲು ವಿರುದ್ಧ ಗೆಲ್ಲಿಸುವುದಾಗಿ ಭರವಸೆ ನೀಡಿದರು.

ತುಕಾರಾಂ ಅವರು ನಾಲ್ಕು ಬಾರಿ ಶಾಸಕರಾಗಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ (2018-19) ಸಚಿವರಾಗಿದ್ದರು.

Government Urdu School Sagara ಸಾಗರದ ಸರ್ಕಾರಿ ಉರ್ದು ಶಾಲೆಗೆ ಕಾಂಪೌಂಡ್ ಇಲ್ಲ

0

Government Urdu School Sagara ಸಾಗರ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಉರ್ದು ಶಾಲೆಗೆ ಕಾಂಪೌಂಡ್ ಕೊರತೆಯಿದೆ ಇದನ್ನು ಶಾಲಾ ಶಿಕ್ಷಕರು ಶಾಲಾ ಎಸ್.ಡಿ.ಎಮ್.ಸಿ.ಯವರು ಕ್ಷೇತ್ರದ ಶಾಸಕರ ಹಾಗೂ ನಗರಸಭೆ ‌ಸಾಗರ ಉಪವಿಭಾಗ ಅಧಿಕಾರಿಗಳ ಗಮನಕ್ಕೆ ತಂದರು ಇದರ ಸಮಸ್ಯೆ ಬಗೆಹರಿಯುತ್ತಿಲ್ಲ ಕಾರಣ ಎನೆಂಬುದು ತಿಳಿಯುತ್ತಿಲ್ಲ .ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸಮೀಪದಲ್ಲಿ ಇರುವ ಶಾಲೆಯು ಸತತ ಎಂಟು ಭಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಾ ಬಂದಿದ್ದು ಈ ಶಾಲೆಯ ಪಕ್ಕದಲ್ಲಿ ತರಕಾರಿ ಮಿನಿ ಮಾರುಕಟ್ಟೆ ಸೃಷ್ಟಿಯಾಗಿದೆ.ಇತರಹದ ಮಾರುಕಟ್ಟೆ ಇದ್ದರೆ ಮಕ್ಕಳು ಪಾಠಗಳನ್ನು ಹೇಗೆ ಆಲಿಸುತ್ತಾರೆ ಅಲ್ಲವೇ.ಅದು ಅಲ್ಲದೆ ಶಾಲೆಯ ಹೆಣ್ಣು ಮಕ್ಕಳ ಶೌಚಾಲಯ ಕೂಡಾ ಇದ್ದು ಕಾಂಪೌಂಡ್ ತೀರಾ Government Urdu School Sagara ಅನಿವಾರ್ಯವಾಗಿದೆ ಹೆಣ್ಣು ಮಕ್ಕಳಿಗೆ ಶೌಚಾಲಯಕ್ಕೆ ಹೋಗಲು ಮುಜುಗರವಾಗಿದ್ದು ಇದನ್ನ ತಪ್ಪಿಸಲು ಕನಿಷ್ಟಪಕ್ಷ ಎಳು ಅಡಿಗಳ ಕಾಂಪೌಂಡ್ ಅವಶ್ಯಕತೆ ಇದೆ ಇದರ ಬಗ್ಗೆ ಉಪವಿಭಾಗ ಅಧಿಕಾರಿಗಳ ಗಮನಕ್ಕೆ ತಂದು ಸದ್ಯಕ್ಕೆ ಎನಾದರು ವ್ಯವಸ್ಥೆ ಮಾಡಿಕೂಡುವಾದಗಿ ಹೇಳಿದ್ದರು ಇನ್ನು ಕಾರ್ಯಕ್ಕೆ ಬಂದಿಲ್ಲ ಇ ಕೂಡಲೇ ಸಾಗರದ ಶಾಸಕರು. ನಗರಸಭೆಯ ಅಧಿಕಾರಿಗಳು .ಕ್ಷೇತ್ರ ಶಿಕ್ಷಣಾಧಿಕಾರಿಗಳು .ಇಲ್ಲಾ ಸಾಗರ ಉಪವಿಭಾಗ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಮಕ್ಕಳಿಗೆ ಶೌಚಾಲಯಕ್ಕೆ ಹಾಗೂ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ಅಡೆತಡೆಗಳು ಬರದ ಹಾಗೆ ನೋಡಿಕೊಳ್ಳಬೇಕಾಗಿದೆ.

Ganapati Urban Co-operative Bank ಗಣೇಶ ಅರ್ಬನ್ ಕೊ- ಅಪ್ ಬ್ಯಾಂಕ ನಲ್ಲಿ ಗ್ರಾಹಕರಿಗೆ ಯುಪಿಐ ಸೌಲಭ್ಯ

0

Ganapati Urban Co-operative Bank ಸಾಗರದ ಹೆಸರಾಂತ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಇಂದಿನ ಗ್ರಾಹಕರ ಅಗತ್ಯತೆ ಅರಿತು ಅದಕ್ಕೆ ತಕ್ಕಂತೆ ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೇವೆ ಎನ್ನುವ ಮಾತಿನಂತೆ ಯುಪಿಐ ಸೇವೆಯನ್ನು ಒದಗಿಸುತ್ತಿದ್ದೇವೆ ಹಾಗೂ ಈ ಸೇವೆಯನ್ನು ನಮ್ಮ ಎಲ್ಲಾ ಗ್ರಾಹಕರಿಗೆ ಷೇರುದಾರರಿಗೆ ನೀಡುತ್ತಿರುವುದು ನಮ್ಮ ಬ್ಯಾಂಕಿಗೆ ಹಮ್ಮೆಯ ಸಂಗತಿಯಾಗಿದೆ. ಎಂದು ಶ್ರೀ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಲಲಿತಾಂಬಿಕೆ ಹೇಳಿದರು.

ಪಟ್ಟಣದಲ್ಲಿರುವ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ಶುಕ್ರವಾರ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ UPI (ಜಿಪೆ, ಫೋನ್ ಪೆ, ಪೇಟಿಎಂ, ವಾಟ್ಸ್ಆ್ಯಪ್ ಪೆ) ಸೌಲಭ್ಯ ಲೋಕಾರ್ಪಣೆ ಮಾಡಿದ ಬ್ಯಾಂಕ್ ನ ಅಧ್ಯಕ್ಷರಾದ ನಾರಾಯಣ್ ಮಾತನಾಡಿದರು.
ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಗಣಪತಿ ಅರ್ಬನ್ ಬ್ಯಾಂಕ್ ಯಾವತ್ತಿಗೂ ಗ್ರಾಹಕರ ಅಗತ್ಯತೆಯನ್ನು ಅರಿತು ಕೆಲಸ ಮಾಡುತ್ತದೆ. ನಮ್ಮಲ್ಲಿರುವ ಹಲವು ಸೇವೆಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಗ್ರಾಹಕರಿಗೆ ಸದಾ ಹೆಚ್ಚಿನ ಸೇವೆ ಕಲ್ಪಿಸಿಕೊಡಬೇಕೆನ್ನುವುದು ಆಡಳಿತ ಮಂಡಳಿ ಹಾಗೂ ಎಲ್ಲ ಸಿಬ್ಬಂದಿಗಳ ಅಭಿಲಾಷೆಯಾಗಿದೆ. ಅದಕ್ಕೆ ಪೂರಕವಾಗಿ ಪ್ರಸ್ತುತದಲ್ಲಿ ಲಭ್ಯವಿರುವ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಅದಕ್ಕೆ ತಕ್ಕಂತೆ ಬ್ಯಾಂಕಿನ ಹಿತ ಕಾಪಾಡುವ ಮತ್ತು ಅಭಿವೃದ್ಧಿಯತ್ತ ಮುನ್ನಡೆಸುವ ನಿರ್ದೇಶಕರು ಅಂದು, ಇಂದೂ ನಮ್ಮೊಂದಿಗಿದ್ದಾರೆ ಎಂದರು, ಸಹಕಾರಿ ಕ್ಷೇತ್ರದಲ್ಲಿರುವ ನಮ್ಮ ಬ್ಯಾಂಕ್ ಕೇವಲ ಹಣಕಾಸಿನ ವ್ಯವಹಾರಕ್ಕಷ್ಟೇ ಸೀಮಿತವಾಗಿಲ್ಲ. ಜತೆಯಲ್ಲಿ ಹಲವು ಸಾಮಾಜಿಕ ಕಳಕಳಿಯ ಕೆಲಸಗಳಲ್ಲೂ ಸಕ್ರಿಯವಾಗಿ ಸಾಮಾಜಿಕ . ಶೈಕ್ಷಣಿಕ.ಆರೋಗ್ಯಕ್ಕೆ ಹೆಚ್ಚು ಸೇವೆಯನ್ನು ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ಜತೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ನಮ್ಮ ಗ್ರಾಹಕರಿಗೆ ಒದಗಿಸಲು ಉತ್ಸುಕವಾಗಿದೆ. ಅಂತೆಯೇ ಪ್ರಸ್ತುತ ಗ್ರಾಹಕರು ಬಯಸುವ ಯುಪಿಐ ಸೇವೆಯನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದರು.

Ganapati Urban Co-operative Bank ಉಪಾಧ್ಯಕ್ಷ ರಮೇಶ್ ಚಂದ್ರಗುತ್ತಿ ಮಾತನಾಡಿದರು. ತೇಜಸ್ವಿಯವರು ಯುಪಿಐ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಸಾಗರ ಶಾಖೆಯ ವ್ಯವಸ್ಥಾಪಕಿ ಸುಧಾರವರು ಪ್ರಾರ್ಥಿಸಿದರು. ವಿ. ಶಂಕರ್ ನಿರೂಪಿಸಿದರು.
ನಿರ್ದೇಶಕರಾದ ಗಜಾನನ ಜೋಯಿಸ್, ಡಿಶ್ ಗುರು, ಶ್ರೀನಿವಾಸ ಮೇಸ್ತ್ರಿ, ದೇವೇಂದ್ರಪ್ಪ, ಕೃಷ್ಣಮೂರ್ತಿ ಭಂಡಾರಿ, ವಿನಾಯಕ ರಾಮ್ ಗೌಡ್ರು, ಶೋಭಾ ಲಂಬೋದರ, ಸರಸ್ವತಿ ನಾಗರಾಜ್, ಹೆರಾಲ್ಡ್ ರೋಡ್ರಿಗಸ್, ಹಾಗೂ ಪ್ರಮುಖರಾದ ಮೇಜರ್ ನಾಗರಾಜ್, ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.

Narendra Modi ಎನ್ ಡಿಎ ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ

0

Narendra Modi ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹೊಸದಾಗಿ ಚುನಾಯಿತರಾದ ಸಂಸದರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಂಪುಟ ರಚನೆ ಕುರಿತು ಇಂದು ಹಳೆ ಸಂಸತ್ ಭವನದಲ್ಲಿ ಸಭೆ ನಡೆಸಿದರು.
ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ನಿರ್ಣಯವನ್ನು ಎನ್‌ಡಿಎಯ ಪಕ್ಷಗಳು ಇಂದು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದವು.
ಮೂಲಗಳ ಪ್ರಕಾರ ಮಹಾಮೈತ್ರಿಕೂಟದಿಂದ ಸರ್ಕಾರ ರಚನೆ ಕುರಿತು ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಗಳಿಸುವ ಮೂಲಕ ಬಹುಮತದ ಗಡಿ ದಾಟಿದೆ. ಆದರೆ, ಬಿಜೆಪಿ ಕೇವಲ 240 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ, ಇದು 2019 ರ ಲೆಕ್ಕಾಚಾರಕ್ಕಿಂತ ಕಡಿಮೆಯಾಗಿದೆ.
ಎನ್‌ಡಿಎ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಸಭಾಂಗಣದಲ್ಲಿ ಉಪಸ್ಥಿತರಿರುವ ಎಲ್ಲ ಪಕ್ಷಗಳ ನಾಯಕರು, ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರು ಮತ್ತು ನಮ್ಮ ರಾಜ್ಯಸಭಾ ಸಂಸದರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂದು ಇಲ್ಲಿ ಇಷ್ಟು ದೊಡ್ಡ ಗುಂಪನ್ನು ಸ್ವಾಗತಿಸುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ. ಗೆಲುವು ಸಾಧಿಸಿದ ಎಲ್ಲ ನಾಯಕರು ಅಭಿನಂದನೆಗೆ ಅರ್ಹರು” ಎಂದರು.
Narendra Modi ‘ಹಗಲಿರುಳು ದುಡಿದ ಲಕ್ಷಾಂತರ ಕಾರ್ಯಕರ್ತರಿಗೆ ಇಂದು ಈ ಸೆಂಟ್ರಲ್ ಹಾಲ್‌ನಿಂದ ನಮಸ್ಕರಿಸಿ ನಮಸ್ಕರಿಸುತ್ತೇನೆ. ಕೆಲವೇ ಜನರು ಇದನ್ನು ಚರ್ಚಿಸುತ್ತಾರೆ, ಬಹುಶಃ ಇದು ಅವರಿಗೆ ಸರಿಹೊಂದುವುದಿಲ್ಲ.
ಆದರೆ, ಭಾರತದ ಮಹಾನ್ ಪ್ರಜಾಪ್ರಭುತ್ವದ ಶಕ್ತಿಯನ್ನು ನೋಡಿ, ಜನರು ಎನ್‌ಡಿಎಗೆ ಸರ್ಕಾರ ರಚಿಸಲು ಮತ್ತು 22 ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದ್ದಾರೆ’ ಎಂದರು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕರನ್ನಾಗಿ ಹೆಸರಿಸುವ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ಅಪ್ನಾ ದಳ (ಎಸ್) ಅಧ್ಯಕ್ಷೆ ಅನುಪ್ರಿಯಾ ಪಟೇಲ್, ಜಿತನ್ ರಾಮ್ ಮಾಂಝಿ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅವರು ನರೇಂದ್ರ ಮೋದಿ ಅವರ ಹೆಸರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಸ್ತಾಪಿಸಿದರು.

JNN Engineering College ಜೀವ ಉಳಿಸುವ ಕಾಯಕದಲ್ಲಿ ಕೈಜೋಡಿಸಬೇಕು- ಅನಿಲ್ ಕುಮಾರ್ ಭೂಮಾರೆಡ್ಡಿ

0

JNN Engineering College ಆರೋಗ್ಯವಂತ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು. ಜೀವ ಉಳಿಸುವ ಕಾಯಕದಲ್ಲಿ ಕೈಜೋಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದರು.
ಶಿವಮೊಗ್ಗ ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಜ್ಯುಬಿಲಿ, ಸ್ವಯಂ ಪ್ರೇರಿತ ರಕ್ತದಾನಿಗಳ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಕರು ಆರೋಗ್ಯಕರ ಜೀವನ ನಡೆಸಬೇಕು. ಉತ್ತಮ ಚಟುವಟಿಕೆಯಿಂದ ಗುರಿ ಸಾಧಿಸಬೇಕು. ಆರ್ಥಿಕವಾಗಿ ಸದೃಢರಾಗಿ ದೇಶದ ಅಸ್ತಿಯಾಗಬೇಕು ಎಂದು ತಿಳಿಸಿದರು.
ಶೇ. 95 ರಷ್ಟು ಅಪಘಾತ ಯುವಕರ ಅಜಾಗರೂಕತೆಯಿಂದ ಆಗುತ್ತದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ನಗರದಲ್ಲಿ ಪ್ರತಿ ದಿನ 5-6 ಅಪಘಾತ ಆಗುತ್ತಿವೆ. ತಾಳ್ಮೆ ಇದ್ದರೆ ಅಪಘಾತ ತಡೆಘಟ್ಟಬಹುದು. ಸುರಕ್ಷತೆ ಅತ್ಯಂತ ಅವಶ್ಯಕ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಅಶ್ವತ್ಥ್ ನಾರಾಯಣ ಶೆಟ್ಟಿ ಮಾತನಾಡಿ, ರಕ್ತದಾನಕ್ಕೆ ಮೊದಲಿನಿಂದಲೂ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ನಲವತ್ತು ಬಾರಿ ರಕ್ತದಾನ ಮಾಡಿರುವ ತೃಪ್ತಿ ಇದೆ. ರಕ್ತದಾನ ಪುಣ್ಯದ ಕೆಲಸ ಎಂದು ಅಭಿಪ್ರಾಯಪಟ್ಟರು.
ಜೆಎನ್‌ಎನ್‌ಸಿಸಿ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಮಾತನಾಡಿ, ರಕ್ತದಾನ ಮಾಡುವ ಜತೆಯಲ್ಲಿ ಇತರರಿಗೂ ರಕ್ತದಾನ ಮಾಡಲು ಪ್ರೇರೆಪಿಸಬೇಕು. ರಕ್ತದಾನ ಮಾಡೋಣ ಎಂದು ಹೇಳಿದರು.
JNN Engineering College ರೋಟರಿ ಜ್ಯುಬಿಲಿ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ಮೈಸೂರಿನಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುವಾಗ ಮದ್ಯರಾತ್ರಿ ನಟರೊಬ್ಬರಿಗೆ ಅಪಘಾತವಾಗಿ ಮೂರು ಯುನಿಟ್ ವಿಶೇಷ ರಕ್ತದ ಅವಶ್ಯಕತೆ ಇತ್ತು. ಅಲ್ಲಿಯ ತಾಂತ್ರಿಕ ಕಾಲೇಜಿನ ಹಾಸ್ಟೆಲ್ ಹುಡುಗರು ಆ ರಾತ್ರಿ ಆಸ್ವತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದನ್ನು ಎಂದು ಮರೆಯುವುದಿಲ್ಲ. ರೋಟರಿ ಎಂದೆಂದಿಗೂ ಇಂತಹ ಕಾರ್ಯದಲ್ಲಿ ಮುಂದಿರುತ್ತದೆ ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ 158 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಸ್ವಯಂ ಪ್ರೇರಿತ ರಕ್ತದಾನಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧರಣೇಂದ್ರ ದಿನಕರ್, ಛಾಯಾ, ರೂಪಾ ಪುಣ್ಯಕೋಟಿ, ಅರುಣ್ ಕುಮಾರ್, ಆನಂದರಾಜ್, ಬಸವರಾಜ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ಗಿರೀಶ್, ವಾಗೇಶ್, ಸುರೇಶ, ಡಾ. ದಿನಕರ್, ಬಸಪ್ಪ , ವಿದ್ಯಾರ್ಥಿಗಳು ಇದ್ದರು

Uttarakhand Tragedy ಉತ್ತರಾಖಂಡ್ ಚಾರಣಕ್ಕೆ ತೆರಳಿದ್ದದಂಪತಿಗಳ ದಾರುಣ ಮರಣ

0

Uttarakhand Tragedy ಉತ್ತರಾಖಂಡ ಸಹಸ್ರ ತಾಳ್ ಶಿಖರದ ಚಾರಣಕ್ಕೆ ತೆರಳಿದ್ದ ಹುಬ್ಬಳ್ಳಿ ಮೂಲದ ಮುಂಗುರವಾಡಿ ದಂಪತಿ ಹವಾಮಾನ ವೈಪರೀತ್ಯದಿಂದ ದುರಂತ ಅಂತ್ಯ ಕಂಡಿದ್ದಾರೆ.
ಕರ್ನಾಟಕದಿಂದ ತೆರಳಿದ್ದ ೨೨ ಚಾರಣಿಗರ ತಂಡವೊಂದು ಉತ್ತರಾಖಂಡದ ಎತ್ತರದ ಸಹಸ್ರ ತಾಳ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಮುಂದಾಗಿದೆ. ಆಗ ಮಾರ್ಗಮಧ್ಯೆ ನಡೆಯಬಾರದ ಘಟನೆ ನಡೆದು ಹೋಗಿದೆ. ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟು, ಎಲ್ಲ ಚಾರಣಿಗರು ಅಪಾಯಕ್ಕೆ ಸಿಲುಕಿದ್ದಾರೆ. ಇದರಲ್ಲಿ ೯ ಚಾರಣಿಗರು ಮೃತಪಟ್ಟಿದ್ದು, ೧೩ ಜನರನ್ನು ರಕ್ಷಣೆ ಮಾಡಲಾಗಿದೆ. ಇದುವರೆಗೆ ಐವರ ಮೃತದೇಹ ಮಾತ್ರ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಚಾರಣಕ್ಕೆ ಹೋದ ೨೨ ಮಂದಿಯ ಪೈಕಿ ಹುಬ್ಬಳ್ಳಿ ಮೂಲದ ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ಮುಂಗುರವಾಡಿ ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್ ೩ರಂದೇ (ಇಸವಿ ಬೇರೆ) ಇಬ್ಬರ ಜನನವಾಗಿತ್ತು. ಅದೇ ತರನಾಗಿ ಜೂನ್ ೪ರಂದು ಒಟ್ಟಿಗೆ ಮೃತಪಟ್ಟಿರುವುದು ಕ್ರೂರ ವಿಧಿಯಾಟವೇ ಸರಿ.
Uttarakhand Tragedy ಮೃತರಿಬ್ಬರೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ೧೯೯೪ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ವಿನಾಯಕ ಮೆಕ್ಯಾನಿಕಲ್ ವಿಭಾಗದಿಂದ ಚಿನ್ನದ ಪದಕ ಪಡೆದಿದ್ದರು. ಆರಂಭಿಕ ದಿನಗಳಲ್ಲಿ ಹುಬ್ಬಳ್ಳಿಯ ಉಣಕಲ್‌ನಲ್ಲಿ ವಾಸವಿದ್ದ ಇಬ್ಬರೂ ಉದ್ಯೋಗ ಅರಸಿಕೊಂಡು ೧೯೯೬ರಲ್ಲಿ ಬೆಂಗಳೂರಿಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಲೇ `ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ ೧೬ ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿದ್ದರು.
ಪ್ರತಿವರ್ಷ ಚಾರಣ ಮಾಡುವ ಹವ್ಯಾಸ ಹೊಂದಿದ್ದ ಇವರಿಗೆ ಈ ಬಾರಿ ಚಾರಣಕ್ಕೆ ಕೆಎಂಎ (ಕರ್ನಾಟಕ ಮೌಂಟೆನ್ ಅಸೋಸಿಯೇಷನ್) ಅವಕಾಶ ನೀಡಿರಲಿಲ್ಲ. ಆದರೂ ಬೆಂಬಿಡದೇ ಪ್ರಯತ್ನಪಟ್ಟು ಟಿಕೆಟ್ ಗಿಟ್ಟಿಸಿಕೊಂಡಿದ್ದ ಅವರು ಘೋರ ಅಂತ್ಯ ಕಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿರುವ ಪುತ್ರಿ ಅದಿತಿ ಹಾಗೂ ಇಂಜಿನಿಯರಿಂಗ್ ಓದುತ್ತಿರುವ ಪುತ್ರ ಇಶಾನ್ ಅವರನ್ನೂ ಚಾರಣಕ್ಕೆ ಕರೆದೊಯ್ಯುವ ಯೋಜನೆಯಲ್ಲಿದ್ದ ದಂಪತಿಗೆ ಸಿಕ್ಕಿದ್ದು ಎರಡು ಟಿಕೆಟ್ ಮಾತ್ರ. ಹೀಗಾಗಿ ಮಕ್ಕಳನ್ನು ಬಿಟ್ಟು ಇಬ್ಬರೇ ಅಲ್ಲಿಗೆ ತೆರಳಿದ್ದರು.