Paytm ಬ್ರಾಂಡ್‌ನ ಮಾಲೀಕರಾಗಿರುವ ಫಿನ್‌ಟೆಕ್ ಸಂಸ್ಥೆ One97 ಕಮ್ಯುನಿಕೇಷನ್ಸ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಮತ್ತು ಕೆಲಸ ಕಳೆದುಕೊಂಡ ನೌಕರರ ಬೇರೆ ಕಡೆ ಕೆಲಸ ಪಡೆಯಲು ಔಟ್‌ಪ್ಲೇಸ್‌ಮೆಂಟ್ ಬೆಂಬಲವನ್ನು ನೀಡುತ್ತಿದೆ. ಎಂದು ಕಂಪನಿ ತಿಳಿಸಿದೆ.
ಮಾರ್ಚ್ 2024ರ ತ್ರೈಮಾಸಿಕದಲ್ಲಿ Paytmನ ಸೇಲ್ಸ್ ವಿಭಾಗದ ಸುಮಾರು 3,500 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಪೇಟಿಎಂನಲ್ಲಿ 40,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಈಗ 3,500 ಮಂದಿಯ ಲೇ ಆಫ್ ನಂತರ ಸಿಬ್ಬಂದಿ ಸಂಖ್ಯೆ 36,521 ಕ್ಕೆ ಇಳಿದಿದೆ.
Paytm ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ನಿರ್ಬಂಧ ವಿಧಿಸಿದ್ದು, ಒನ್97 ಕಮ್ಯೂನಿಕೇಶನ್ಸ್ನ ವಿವಿಧ ಬಿಸಿನೆಸ್ಗಳಿಗೆ ಹೊಡೆತ ಬಿದ್ದಂತಾಗಿದೆ. ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಪೇಟಿಎಂಗೆ ಆದ ನಷ್ಟ 550 ಕೋಟಿ ರೂ. ಈ ನಷ್ಟವನ್ನು ಕಡಿಮೆ ಮಾಡಬೇಕೆಂದರೆ ಸಂಸ್ಥೆಯ ಸಿಬ್ಬಂದಿ ವರ್ಗದ ಮರುರಚನೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.
Paytm ಪೇ-ಟಿ ಎಮ್ ನಿಂದ 3500 ನೌಕರರಿಗೆ ಪಿಂಕ್ ಚಿಟ್?
Mysuru ಮೈಸೂರು ಅನ್ನದಾನೇಶ್ವರಮಠದ ಹಿರಿಯಶ್ರೀಗಳ ಬರ್ಬರ ಹತ್ಯೆ
Mysuru ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮೈಸೂರಿನ ಸಿದ್ದಾರ್ಥನಗರದಲ್ಲಿ 90 ವರ್ಷದ ಶಿವಾನಂದ ಸ್ವಾಮೀಜಿಯನ್ನು ಸ್ವಾಮೀಜಿ ಆಪ್ತ ಸಹಾಯಕ 60 ವರ್ಷದ ರವಿ ಎಂಬಾತನೇ ಹತ್ಯೆ ಮಾಡಿದ್ದು ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Mysuru ಘಟನಾ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನ್ನದಾನೇಶ್ವರ ಮಠವು ಸುಮಾರು 9 ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳು ಇವೆ.
ಶಿವಾನಂದ ಸ್ವಾಮೀಜಿ ಹತ್ಯೆ
ಹಣ ಪಡೆದು ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಅವಕಾಶ: ಮಲತಂದೆ ಸೇರಿ ಮೂವರ ಬಂಧನ
ಕುಡಿದ ಮತ್ತಿನಲ್ಲಿ ಶಿವಾನಂದ ಸ್ವಾಮೀಜಿ ಅವರನ್ನು ರವಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
International Day of Yoga ಯೋಗದಿನ ಮುಂಚಿನ ವಿಶೇಷವಾಗಿ ಯೋಗೋತ್ಸವ ಆರಂಭ
International Day of Yoga ಜೂನ್ 21 ರಂದು ಆಯೋಜಿಸಲಾಗುವ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜೂನ್ 10 ರಿಂದ 20 ರವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಕಚೇರಿ, ಶಿವಮೊಗ್ಗ ವತಿಯಿಂದ ಜಿಲ್ಲೆಯ ವಿವಿಧೆಡೆ ಯೋಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶಿವಮೊಗ್ಗ ನಗರದ ಬಾಪೂಜಿ ಆಯುರ್ವೇದ ಮಹಾವಿದ್ಯಾಲಯದಲ್ಲ ಯೋಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ ಎಸ್ ಹಿಂಡಸಗಟ್ಟಿ, ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ.ಪಂಕಜ್ ಪ್ರಸಾದ್, ಆಡಳಿತಾಧಿಕಾರಿ ಆರಾಧ್ಯ ಇವರು ಕಾರ್ಯಕ್ರಮ ಉದ್ಘಾಟಿಸಿದರು.
International Day of Yoga ಯೋಗದ ಮಹತ್ವ ಹಾಗೂ ಆಯುಷ್ ಪದ್ದತಿಗಳ ಪರಿಚಯ ಮತ್ತು ಯೋಗದೊಂದಿಗೆ ಜೀವನ ಶೈಲಿಯ ನಿರ್ವಹಣೆ ಎಂಬ ವಿಷಯದ ಬಗ್ಗೆ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಹಿರಿಯ ವೈದ್ಯಾಧಿಕಾರಿ ಡಾ.ನಾಗೇಂದ್ರಾಚಾರಿ ಉಪನ್ಯಾಸ ನೀಡಿದರು. ಯೋಗ ತರಬೇತುದಾರರಾದ ಮಹೇಂದ್ರ ಬಿ ಆರ್ ಮತ್ತು ಕು.ಮೋನಿಯಾ ಇವರು ಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಕಾಲೇಜಿನ ಎಲ್ಲ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Heavy rain Shivamogga city ಹುಲಿಕಲ್ಲಿನಲ್ಲಿ ಮಳೆಯಾರ್ಭಟ.ಶಿವಮೊಗ್ಗ ತಾಲ್ಲೂಕಿನಾದ್ಯಂತ ವರುಣನ ಕೃಪೆ
Heavy rain Shivamogga city ಮಲೆನಾಡಿನ ತವರೂರು, ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಮಳೆಯಾರ್ಭಟ ಜೋರಾಗಿದ್ದು ಸೋಮವಾರ ಬೆಳಗ್ಗೆ ೮ ಗಂಟೆಗೆ ಅಂತ್ಯಗೊಂಡಂತೆ ಕಳೆದ ೨೪ ಗಂಟೆಗಳಲ್ಲಿ ಹುಲಿಕಲ್ ನಲ್ಲಿ ಅತ್ಯಧಿಕ ೯೬ ಮಿ.ಮೀ. ಮಳೆ ಸುರಿದಿದೆ.
ಉಳಿದಂತೆ ಮಾಣಿಯಲ್ಲಿ ೯೦, ಮಾಸ್ತಿಕಟ್ಟೆಯಲ್ಲಿ ೨೫, ಯಡೂರಿನಲ್ಲಿ ೬೬, ಸೊನಲೆಯಲ್ಲಿ ೨೪ ಮತ್ತು ಹೊಸನಗರದಲ್ಲಿ ೧೭.೪ ಮಿಲಿ ಮೀಟರ್ ಮಳೆ ದಾಖಲಾಗಿದೆ.
Heavy rain Shivamogga city ಇನ್ನೂ ೧೮೧೯ ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ ೮ ಗಂಟೆಗೆ ೧೭೪೫ ಅಡಿ ತಲುಪಿದ್ದು ಕಳೆದ ಬಾರಿ ಇದೇ ಅವರಿಗೆ ೧೭೪೪.೬೦ ಅಡಿ ದಾಖಲಾಗಿತ್ತು. ಜಲಾಶಯಕ್ಕೆ ೫೨೮೫ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ತಾಲೂಕುವಾರು ಮಳೆ ವಿವರ :
ಶಿವಮೊಗ್ಗ : ೨.೮೦ ಮಿ.ಮೀ.
ಭದ್ರಾವತಿ ೫ ಮಿ..ಮೀ.
ತೀರ್ಥಹಳ್ಳಿ ೨೭.೮೦ ಮಿ.ಮೀ.
ಸಾಗರ ೧೮.೪೦ ಮಿ.ಮೀ.
ಶಿಕಾರಿಪುರ ೨.೮೦ ಮಿ.ಮೀ.
ಸೊರಬ ೫.೧೦ ಮಿ.ಮೀ.
ಹೊಸನಗರ ೧೭.೮೦ ಮಿ.ಮೀ.
Prajwal Revanna ಪ್ರಜ್ವಲ್ ಈಗ ಎಸ್ ಐಟಿ ವಶದಿಂದ ನ್ಯಾಯಾಂಗ ಬಂಧನಕ್ಕೆ ಹಸ್ತಾಂತರ
Prajwal Revanna ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಪ್ರಜ್ವಲ್ ರೇವಣ್ಣ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಇಂದು 42ನೇ ಎಸಿಎಂಎಂ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದ್ದರು.
ನ್ಯಾಯಾಲಯದಲ್ಲಿ ಎಸ್‌ಐಟಿ ಪೊಲೀಸರು, “ಪ್ರಜ್ವಲ್ ರೇವಣ್ಣ ವಿಚಾರಣೆ ಮುಗಿದಿದ್ದು, ಸದ್ಯಕ್ಕೆ ತಮ್ಮ ಕಸ್ಟಡಿಗೆ ಅವಶ್ಯಕತೆ ಇರುವುದಿಲ್ಲ” ಎಂದು ತಿಳಿಸಿದ್ದಾರೆ. ಪ್ರಜ್ವಲ್ ಪರ ವಕೀಲರು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
Prajwal Revanna ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಜೂ. 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಪರಪ್ಪನ ಕೇಂದ್ರ ಕಾರಾಗೃಹ ಸೇರಲಿದ್ದಾರೆ.
ಮೇ 31ರಂದು ತಡರಾತ್ರಿ ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಜ್ವಲ್‌ರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು, ಅಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಜೂನ್ 6ವರೆಗೆ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದರು.
Gajanur Dam ಯಾವುದೇ ಸಮಯದಲ್ಲೂ ನದಿಗೆ ಹೆಚ್ಚುವರಿ ನೀರು ಬಿಡುಗಡೆ,ಗಾಜನೂರು ಡ್ಯಾಂ- ಕಾಲುವೆ ಆಸುಪಾಸಿನವರಿಗೆ ಎಚ್ಚರಿಕೆ
Gajanur Dam ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ತುಂಗಾ ಡ್ಯಾಂ ಭರ್ತಿಯಾಗುವ ಹಂತಕ್ಕೆ ಬಂದಿದ್ದು ಯಾವುದೇ ಸಮಯದಲ್ಲಿ ನದಿಗೆ ನೀರುಬಿಡಲಾಗುವುದು ಎಂದು ಸಂಬಂಧ ಪಟ್ಟ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿತ್ತು.
ಇದೀಗ ತುಂಗಾ ಜಲಾಶಯ ಭರ್ತಿಗೆ ಒಂದುವರೆ ಅಡಿಯಷ್ಟೆ ಬಾಕಿಯಿದೆ. ಡ್ಯಾಂಗೆ ಒಳಹರಿವು ಒಂದೂವರೆ ಸಾವಿರ ಕ್ಯೂಸೆಕ್ಸ್ ಇದ್ದು ಸಂಜೆಯೊಳಗೆ ಪವರ್ ಹೌಸ್ ಮೂಲಕ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
Gajanur Dam ಈ ಮೂಲಕ 5 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ.
ಹೆಚ್ಚುವರಿಯಾಗಿ ನೀರು ಡ್ಯಾಂಗೆ ಹರಿದು ಬಂದರೆ ಡ್ಯಾಂ ಗೇಟ್ ಓಪನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನೂ ವಾರ್ತಾಇಲಾಖೆ ನೀಡಿದ ಮಾಹಿತಿ ಪ್ರಕಾರ, ತುಂಗಾ ಡ್ಯಾಂ ಮಟ್ಟ ಹೀಗಿದೆ.
ಡ್ಯಾಂನ 588.24 (ಗರಿಷ್ಠ), 587.54 (ಇಂದಿನ ಮಟ್ಟ), 1789.00 (ಒಳಹರಿವು), 65.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.25 ಇದೆ.
Natanam Bala Natya Kendra ನಟನಂ ಕಲಾವಿದ ಕೇಶವ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
Natanam Bala Natya Kendra ಶಿವಮೊಗ್ಗದ ನಟನಂ ಬಾಲ್ಯನಾಟ್ಯ ಕೇಂದ್ರದ ಕೇಶವ ಕುಮಾರ್ ಅವರಿಗೆ ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇದರಿಂದ ಇನ್ನುಮುಂದೆ ಡಾ.ಕೇಶವ ಕುಮಾರ್ ಎಂಬ ಬಿರುದಿನಿಂದ ಗುರುತಿಸಲ್ಪಡುತ್ತಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕುಮಾರ್, ಕೊಲ್ಕತ್ತದ ವೆಸ್ಟ್ ಬೆಂಗಾಲ್ ನ ಹಿಂದೂಸ್ತಾನ್ ಆರ್ಟ್ಸ್ & ಮ್ಯೂಸಿಕ್ ಸೊಸೈಟಿ ಅವರ 35 ವರ್ಷದ ಕಲಾ ಸೇವೆಯನ್ನ. ಗುರುತಿಸಿ ನೀಡಿದೆ ಎಂದರು.
Natanam Bala Natya Kendra ಇವರು ಶಿವಮೊಗ್ಗ, ಭದ್ರಾವತಿ, ಕಡೂರು ಒಟ್ಟು 8 ಭರತನಾಟ್ಯ ಶಾಖೆಗಳನ್ನ ತೆರೆದಿದ್ದಾರೆ. 400 ವಿದ್ಯಾರ್ಥಿಗಳು ತರಬೇತಿ ಪಡೆದು ರಾಜ್ಯ, ಹೊರರಾಜ್ಯ, ತೈಲ್ಯಾಂಡ್, ಮಲೇಷಿಯಾ, ದುಬೈಗಳಲ್ಲಿ ಕಾರ್ಯಕ್ರಮವನ್ನ ನೀಡಿ ಉತ್ತಮ ಹೆಸರು ಮಾಡಿದೆ.
Lok Sabha ಸಂಸತ್ತಿನ ಅಧಿವೇಶನದಲ್ಲಿ ಬಿಜೆಪಿಗೆ ಸವಾಲು ಹಾಕಲು ಇಂಡಿ ಒಕ್ಕೂಟದ ತಯಾರಿ ಸಭೆ
Lok Sabha ಲೋಕಸಭೆ ಮತ್ತು ರಾಜ್ಯಸಭೆಯ ಮುಂಚೂಣಿ ನಾಯಕರಿರುವ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಸಂಸದೀಯ ಕಾರ್ಯತಂತ್ರದ ಸಭೆಯು
ನವದೆಹಲಿಯ ರಾಜಾಜಿ ಮಾರ್ಗದಲ್ಲಿನ ಬಂಗಲೆ ನಂ10 ರಲ್ಲಿ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ಮುಂತಾದವರು ಉಪಸ್ಥಿತರಿದ್ದರು.
ಸರ್ಕಾರವನ್ನು ಹೊಣೆಗಾರರನ್ನಾಗಿಸುವ ಜನಸಮಸ್ಯೆಗಳನ್ನು ಈ ಅಧಿವೇಶನದ ಉಳಿದ ಭಾಗದಲ್ಲಿ ನಾವು ಜನರ ಪರವಾಗಿ ಸಂಸತ್ತಿನಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂಬ ಏಕಾಭಿಪ್ರಾಯ ಹೊರಹೊಮ್ಮಿತು.
Lok Sabha ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿ ಇಂಡಿ ಒಕ್ಕೂಟದ ಪಕ್ಷಗಳ ಸಭೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ಹೇಳಲಾಗಿದೆ.
MESCOM ಜೂನ್ 12 ರಂದು ಮಂಡ್ಲಿ ಸುತ್ತಮುತ್ತ ಮೆಸ್ಕಾಂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
MESCOM ಶಿವಮೊಗ್ಗ ನ.ಉ.ವಿ-೨ರ ಮಂಡ್ಲಿ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಜೂನ್ ೧೨ ರಂದು ಬೆಳಗ್ಗೆ ೧೦.೦೦ ರಿಂದ ಸಂಜೆ ೬.೦೦ರವರೆಗೆ ಇಲಿಯಾಜ್‌ನಗರ ೫ ರಿಂದ ೧೪ನೇ ಕ್ರಾಸ್, ೧೦೦ ಅಡಿರಸ್ತೆ, ಕಾಮತ್ ಲೇಔಟ್, ಮೇಲಿನ ತುಂಗಾನಗರ, ಫಾರೂಕ್ಯ ಶಾದಿಮಹಲ್, ಇಲಿಯಾಜ್‌ನಗರ ಲಾರಿ ಗ್ಯಾರೇಜ್, ಚಾನಲ್ ಏರಿಯಾ ಸುತ್ತಮುತ್ತಲಿನ ಪ್ರದೇಶ, ಸಾಗರ MESCOM ನರ್ಸರಿ, ಎಫ್-೦೬ ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಎಫ್-೧೭ ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‌ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Lok Sabha Election ಅಭ್ಯರ್ಥಿ ಆಯ್ಕೆಯಲ್ಲೇ ಕಾಂಗ್ರೆಸ್ ತಪ್ಪೆಸಗಿದೆ – ವೀರಪ್ಪ ಮೊಯಿಲಿ
Lok Sabha Election ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಸಾಧನೆಗೆ ಅಭ್ಯರ್ಥಿಗಳ ತಪ್ಪು ಆಯ್ಕೆ ಮತ್ತು ಕಳಪೆ ತಂತ್ರಗಾರಿಕೆಯೇ ಪ್ರಮುಖ ಕಾರಣ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಹೇಳಿದ್ದಾರೆ.
ನಾವು ಗೆಲ್ಲುವುದನ್ನು ಪರಿಗಣಿಸುವ ಬದಲು ಜಾತಿ ಲೆಕ್ಕಾಚಾರ ಮತ್ತು ಹಣದ ಥೈಲಿ ಆಧಾರದ ಮೇಲೆ ಟಿಕೆಟ್ ನೀಡುವ ಪ್ರಯತ್ನ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಮೊಯಿಲಿ ಹೇಳಿದರು.ಅಭ್ಯರ್ಥಿಯೊಬ್ಬರು ಹೆಚ್ಚು ಹಣ ಹೊಂದಿರುವುದರಿಂದ ಅವರು
Lok Sabha Election ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನ ಚುನಾವಣೆ ತೋರಿಸಿಕೊಟ್ಟಿದೆ.
