Sunday, April 12, 2026
Sunday, April 12, 2026
Home Blog Page 697

Agumbe Police ಪೋಷಕರು ಮತ್ತು ಇತರರಿಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷಾ ನಿಯಮ ಪಾಲಿಸಲು ತಿಳಿಸಬೇಕು- ರಂಗನಾಥ್ ಅಂತರಘಟ್ಟಿ

0

Agumbe Police ವಿಧ್ಯಾರ್ಥಿಗಳು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ಮತ್ತು ನಿಮ್ಮ ಪೋಷಕರು ಹಾಗೂ ಪರಿಚಯದವರಿಗೂ ಕೂಡ ರಸ್ತೆ ಸುರಕ್ಷತೆಗಳ ಬಗ್ಗೆ ತಿಳುವಳಿಕೆ ನೀಡಿ ಎಂದು ಪಿಎಸ್ಐ ಶ್ರೀ ರಂಗನಾಥ್ ಅಂತರಘಟ್ಟಿ ಅವರು ಸಲಹೆ ನೀಡಿದರು.

ಆಗುಂಬೆ ಠಾಣಾ ವ್ಯಾಪ್ತಿಯ ಕಡತೂರು ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಶಾಲೆಗೆ ಬರುವ ಸಮಯದಲ್ಲಿ ಮತ್ತು ಶಾಲೆಯಿಂದ ಹೋಗುವ ವೇಳೆ ರಸ್ತೆಯ ಎರಡೂ ಬದಿಯಲ್ಲಿ ನೋಡಿ ವಾಹನಗಳು ಇಲ್ಲೆದೇ ಇರುವುದನ್ನು ಖಾತರಿ ಪಡಿಸಿಕೊಂಡು ನಂತರವೇ ರಸ್ತೆ ದಾಟಿ, ಯಾವುದೇ ಗಡಿಬಿಡಿಯಿಂದ ರಸ್ತೆ ದಾಟುವುದು ಬೇಡ ಎಂದರು.

ಪೋಕ್ಸೋ ಕಾಯ್ದೆ, ಬಾಲ ವಿವಾಹ ನಿಷೇದ ಕಾಯ್ದೆ, ಬಾಲಕಾರ್ಮಿಕ ನಿಷೇದ ಕಾಯ್ದೆಗಳ ಮಾಹಿತಿ ನೀಡಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ 112 ತುರ್ತು ಸಹಾಯವಾಣಿ ಅಥವಾ ಪೊಲೀಸ್ ಇಲಾಖೆಗೆ ಸಂಪರ್ಕಿಸಿ ಎಂದು ಸೂಚಿಸಿದರು.

Agumbe Police ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಫೊನ್ ಬಳಸುವಾಗ ಎಚ್ಚರಿಕೆಯಿಂದ ಬಳಕೆ ಮಾಡಿ, ಯಾರೇ ಆಗಲಿ ಫೋನ್ ಮುಖಾಂತರ OTP, ATM PIN ನಂಬರ್, CVV ನಂಬರ್ ಕೇಳಿದಾಗ ನೀಡಬೇಡಿ, ಒಂದು ವೇಳೆ ನೀವು ಈ ಎಲ್ಲಾ ಮಾಹಿತಿಗಳನ್ನು ನೀಡಿದಾಗ ಸೈಬರ್ ವಂಚಕರು ನಿಮ್ಮನ್ನು ಮೋಸದ ಬಲೆಗೆ ಸುಲಭವಾಗಿ ಸೆಳೆಯುತ್ತಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ, ಶ್ರೀ ಮಾರುತಿ, ಮುಖ್ಯೋಪಾಧ್ಯಾಯರು, ಕಡತೂರು ಪ್ರೌಢ ಶಾಲೆ, ಶಿಕ್ಷಕರು, ಮತ್ತು ವಿಧ್ಯಾರ್ಥಿಗಳು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Renukaswamy Chitradurga ರೇಣುಕಾಸ್ವಾಮಿ ಬರ್ಬರ ಹತ್ಯೆ: ಜಿಲ್ಲಾ ಜಂಗಮ ಸಮಾಜದಿಂದ‌ ಖಂಡನೆ

0

Renukaswamy Chitradurga ಜಂಗಮ ಸಮಾಜದ ಚಿತ್ರದುರ್ಗದ ರೇಣುಕಸ್ವಾಮಿ ಅವರನ್ನು ಚಲನಚಿತ್ರನಟ ದರ್ಶನ್ ಅಭಿಮಾನಿಬಳಗದ ಸದಸ್ಯರ ಮುಖಾಂತರ ಬೆಂಗಳೂರಿಗೆ ಕರೆಸಿ ಚಿತ್ರಹಿಂಸೆ ನೀಡಿ ನರಳಿ ನರಳಿ ಸಾಯುವಂತೆ ಮಾಡಿರುವ ಘಟನೆಯನ್ನು ಜಿಲ್ಲಾ ಜಂಗಮ ಸಮಾಜ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜದ ಮುಖಂಡರು, ರೇಣುಕಾ ಸ್ವಾಮಿಗೆ ತನ್ನ ಅಭಿಮಾನಿಗಳ ಮೂಲಕ ವಿವಿಧ ಆಯುಧಗಳಿಂದ ಅವರ ದೇಹದ ಅಂಗಗಳು ಊನಆಗುವಂತೆ ಹೊಡೆದು ಸಾಯಿಸಿರುವುದು ರಾಕ್ಷಸ ಪ್ರವೃತ್ತಿಯಾಗಿದೆ.

ಸಮಾಜಕ್ಕೆ ಚಲನಚಿತ್ರದ ಮೂಲಕ ನೀತಿ ಪಾತ್ರಗಳು ನೀತಿಪಾತ್ರಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಇಂತಹ ಗೋಮುಖ ವ್ಯಾಘ್ರತನದ ನಟರು ಮಾಡಿರುವ ಕೃತ್ಯವನ್ನು ಕರ್ನಾಟಕದ ಎಲ್ಲ ಜಂಗಮ ಬಂಧುಗಳು ಖಂಡಿಸುತ್ತಾರೆ ಎಂದಿದ್ದಾರೆ.

Renukaswamy Chitradurga ಚಿತ್ರಹಿಂಸೆ ನೀಡಿರುವ ಇವರಿಗೆ ಮರಣದಂಡನೆಯನ್ನು ವಿಧಿಸಿದರೂ ಶಿಕ್ಷೆ ಕಡಿಮೆಯೇ. ಅವರಿಗೂ ಅವರೊಡನೆ ಚಿತ್ರಹಿಂಸೆ ನೀಡಲು ಸಹಕರಿಸಿದ ಎಲ್ಲರಿಗೂ ಘೋರಶಿಕ್ಷೆ ವಿಧಿಸುವಂತೆ ಸಮಾಜದ ಮುಖಂಡರು ಆಗ್ರಹಿಸಿದ್ದಾರಲ್ಲದೆ, ಅವರ ಕೃತ್ಯವನ್ನು ಖಂಡಿಸಿದ್ದಾರೆ.

Lok Sabha Election ಪ್ರಧಾನಿ ಮೋದೀಜಿ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ಡಾ.ಶಿಲ್ಪಿಧರ್

0

Lok Sabha Election ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ 292 ಸ್ಥಾನಗಳನ್ನ ಗಳಿಸುವ ಮೂಲಕ ಸತತ ಮೂರನೇ ಬಾರಿಗೆ ಬಹುಮತ ಪಡೆದು ಅಧಿಕಾರಕ್ಕೇರಿದೆ.

ಈ ಮಧ್ಯೆ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.

ನರೇಂದ್ರ ಮೋದಿಯವರ ಸರ್ಕಾರದ ಅಧಿಕಾರಾವಧಿ ಈ ಬಾರಿ ಹೇಗಿರುತ್ತದೆ ಮತ್ತು ಈ ಬಾರಿಯೂ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.

ಈ ಕುರಿತು ಖ್ಯಾತ ಜ್ಯೋತಿಷಿ ಡಾ.ಶಿಲ್ಪಿಧರ್ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ನರೇಂದ್ರ ಮೋದಿ ಅವರು ಮೂರು ವರ್ಷಗಳ ಕಾಲ ಪ್ರಧಾನಿಯಾಗಿರಲಿದ್ದಾರೆ.

ಈಗ ಅವರ ಜಾತಕದಲ್ಲಿ ಇನ್ನೂ ಮೂರು ವರ್ಷಗಳ ರಾಜಯೋಗವಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಮೂರು ವರ್ಷಗಳ ಕಾಲ ಪ್ರಧಾನಿಯಾಗಿ ಉಳಿಯಬಹುದು. ಮೂರು ವರ್ಷಗಳ ನಂತರ, ಅವರು ತಮ್ಮ ಹುದ್ದೆಯನ್ನು ತ್ಯಜಿಸಬೇಕಾಗಬಹುದು.

“ಬಿಜೆಪಿ ಸರ್ಕಾರ ಬೀಳುತ್ತದೆ ಎಂದಲ್ಲ, ಆದರೆ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಅವರ ಸ್ಥಾನದಲ್ಲಿ ಅಮಿತ್ ಶಾ, ನಿತಿನ್ ಗಡ್ಕರಿ ಅಥವಾ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಬಹುದು ಎಂದಿದ್ದಾರೆ.

Lok Sabha Election ಯೋಗಿ ಆದಿತ್ಯನಾಥ್ ಬಗ್ಗೆ ಈ ದೊಡ್ಡ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸಾಧನೆ ತುಂಬಾ ಕೆಟ್ಟದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇದು ಯೋಗಿ ಆದಿತ್ಯನಾಥ್ ಅವರ ಚಿತ್ರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬ ಊಹಾಪೋಹಗಳನ್ನು ಮಾಡಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸದ್ಯದ ಪರಿಸ್ಥಿತಿ ಗೊಂದಲದಂತಿದೆ. ಅವರು ಭವಿಷ್ಯದ ಚಿತ್ರವನ್ನು ಹೇಳುವುದಿಲ್ಲ. ಅವರ ಮುಂದೆ ಉತ್ತಮ ಸಮಯವಿದೆ. ಅವರ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ.

2027 ರ ನಂತರ ಅವರ ಸಮಯವೂ ಬದಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

B.Y. Raghavendra ಕೇಂದ್ರದ ನೂತನ ಸಚಿವರಿಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ

0

B.Y. Raghavendra ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್‌ ಹಾಗೂ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ.
B.Y. Raghavendra ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ನೂತನ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರಿಗೆ ಸಂಸದ ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Government Residential Polytechnic for Women ಲ್ಯಾಟರಲ್ ಎಂಟ್ರಿ ಸ್ಕೀಂ ಮೂಲಕ 2 ನೇ ವರ್ಷದ ಡಿಪ್ಲೊಮಾಗೆ ಪ್ರವೇಶಾತಿ ಪ್ರಕ್ರಿಯೆ

0

Government Residential Polytechnic for Women 2024-25 ನೇ ಸಾಲಿನ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಸಂಸ್ಥೆ, ಶಿವಮೊಗ್ಗ ಇಲ್ಲಿ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್‍ಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ,

02 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ(ವಿಜ್ಞಾನ/ದ್ವಿತೀಯ ಪಿಯುಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶ ಸೀಟುಗಳನ್ನು ಭರ್ತಿ ಮಾಡಲು ಪ್ರಾಂಶುಪಾಲರ ಹಂತದಲ್ಲಿಯೇ ಮೆರಿಟ್ ಆಧಾರಿತವಾಗಿ ಆಫ್‍ಲೈನ್ ಮೂಲಕ ದಿ: 10-06-2024 ರಿಂದ 25-06-2024 ರವರೆಗೆ ಅರ್ಜಿ ಸ್ವೀಕರಿಸಲಾಗುವುದು.

ಹಾಗೂ ದಿ: 27-06-2024 ರಿಂದ 28-06-2024 ರವರೆಗೆ ಸೀಟು ಹಂಚಿಕೆ ಮಾಡಲಾಗುವುದು.

ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟಿಸ್(ಕನ್ನಡ), ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲೀಷ್), ಆಪರೇಲ್ ಡಿಸೈನ್ & ಫ್ಯಾಬ್ರಿಕೇಷನ್ ಟೆಕ್ನಾಲಜಿ ಕೋರ್ಸುಗಳು ಲಭ್ಯವಿದೆ.

Government Residential Polytechnic for Women ಆಸಕ್ತ ಅಭ್ಯರ್ಥಿಗಳು ಐಟಿಐ/ಪಿಯುಸಿ ಪರೀಕ್ಷೆಯಲ್ಲಿ ಶೇ.35 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮೂಲ ವರ್ಗಾವಣೆ ಪ್ರಮಾಣ ಪತ್ರ/ಎನ್‍ಓಸಿ, 5 ವರ್ಷದ ವ್ಯಾಸಂಗ ಪ್ರಮಾಣ ಪತ್ರ, ಜಾತಿ ಮತ್ತು ಆಧಾರಯ ಪ್ರಮಾಣ ಪತ್ರ, ಆಧಾರ್, 04 ಭಾವಚಿತ್ರಗಳನ್ನು ಸಲ್ಲಿಸಬೇಕು.

ಜೂನ್ 25 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ಹೆಚ್ಚಿನ ವಿವರಗಳಿಗೆ ರವಿನಾಯಕ್ ಡಿ, ಪ್ರಾಂಶುಪಾಲರು ಮೊ.ಸಂ: 9886610245 ನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

Council of Ministers ಕೇಂದ್ರದ ಮೋದಿ ಸಂಪುಟದಲ್ಲಿ ಕರ್ನಾಟಕದ ಐವರು ಯಾರು?ಯಾವ ಖಾತೆ?

0

Council of Ministers ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್‌ ಹಾಗೂ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ.

ಪ್ರಹ್ಲಾದ ಜೋಶಿ (61)

ಕ್ಷೇತ್ರ/ರಾಜ್ಯ: ಧಾರವಾಡ, ಕರ್ನಾಟಕ

ವಿದ್ಯಾರ್ಹತೆ: ಬಿಎ
5 ಬಾರಿ ಲೋಕಸಭೆಗೆ ಆಯ್ಕೆ

ಮೋದಿ-2 ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು-ಗಣಿ ವ್ಯವಹಾರಗಳ ಸಚಿವರಾಗಿ ಕೆಲಸ. ಈ ಮೂಲಕ ಮೋದಿ ಅವರ ಪರಮಾಪ್ತ ಎಂದು ಖ್ಯಾತಿ ಪಡೆದಿದ್ದಾರೆ‌.

ಎಚ್‌.ಡಿ ಕುಮಾರಸ್ವಾಮಿ (64)

ಕ್ಷೇತ್ರ: ಮಂಡ್ಯ, ಕರ್ನಾಟಕ

ವಿದ್ಯಾರ್ಹತೆ: ಬಿಎಸ್ಸಿ

3ನೇ ಬಾರಿ ಸಂಸದ, ಮಾಜಿ ಮುಖ್ಯಮಂತ್ರಿ

Council of Ministers ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ಮಂತ್ರಿ. ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ನಿರ್ವಹಣೆ. ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ. ಜೆಡಿಎಸ್‌ ಪಕ್ಷದ ನೇತಾರರಾಗಿ ಕರ್ನಾಟಕದಲ್ಲಿ ಪಕ್ಷ ಸಂಘಟಿಸಿದ ಅಪಾರ ಅನುಭವ ಹೊಂದಿದ್ದಾರೆ.

ನಿರ್ಮಲಾ ಸೀತಾರಾಮನ್‌ (65)

ಕ್ಷೇತ್ರ/ರಾಜ್ಯ: ಕರ್ನಾಟಕ
ವಿದ್ಯಾರ್ಹತೆ: ಸ್ನಾತಕೋತ್ತರ ಪದವೀಧರೆ

ಕರ್ನಾಟಕದಿಂದ 3 ಬಾರಿ ರಾಜ್ಯಸಭೆ ಸದಸ್ಯೆ

ವಿತ್ತ, ವಾಣಿಜ್ಯ, ಕೈಗಾರಿಕೆ ಸಚಿವೆಯಾಗಿ ಕೆಲಸ ಮಾಡಿದ ಅನುಭವ. ಮೋದಿ-2 ಸರ್ಕಾರದಲ್ಲಿ ವಿತ್ತ ಸಚಿವೆಯಾಗಿ ಸಾಕಷ್ಟು ಪ್ರಶಂಸೆ ಹಾಗೂ ಟೀಕೆ-ಟಿಪ್ಪಣಿ, ಎರಡಕ್ಕೂ ಗುರಿಯಾಗಿದ್ದಾರೆ.

ಸೋಮಣ್ಣ

ಕ್ಷೇತ್ರ ತುಮಕೂರು
ಜಾತಿ ಲಿಂಗಾಯತ
ವಿದ್ಯಾರ್ಹತೆ ಬಿಎ
ಸಂಸದ 1ನೇ ಸಲ
ಕೇಂದ್ರ ಸಚಿವ 1ನೇ ಸಲ ಆಯ್ಕೆಯಾಗಿದ್ದಾರೆ.

ಶೋಭಾ ಕರಂದ್ಲಾಜೆ(57)

ಕ್ಷೇತ್ರ: ಬೆಂಗಳೂರು ಉತ್ತರ, ಕರ್ನಾಟಕ

ವಿದ್ಯಾರ್ಹತೆ: ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ

ಮೂರನೇ ಬಾರಿ ಲೋಕಸಭೆಗೆ, ಕೇಂದ್ರ ಸಚಿವೆ

2014,2019ರಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆ. ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವೆ. ಸಂಸದೆಗೂ ಮುನ್ನ ಎಂಎಲ್‌ಸಿ, ಶಾಸಕಿ. ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್, ಇಂಧನ ಸಚಿವೆಯಾಗಿದ್ದಾರೆ.

Canara Bank Self Employment Training Institute ಶಿವಮೊಗ್ಗ ಸಂಪದ್ಭರಿತ ಜಿಲ್ಲೆ. ಸ್ವ ಉದ್ಯೋಗಕ್ಕೆ ಅವಕಾಶಗಳಿವೆ- ಸ್ನೇಹಲ್ ಸುಧಾಕರ್ ಲೋಖಂಡೆ

0

Canara Bank Self Employment Training Institute ಶಿವಮೊಗ್ಗ ಜಿಲ್ಲೆಯು ಸಂಪತ್ಭರಿತಾ ಜಿಲ್ಲೆಯಾಗಿದ್ದು, ಇಲ್ಲಿ ಸ್ವಉದ್ಯೋಗ ಮಾಡಲು ಬಹಳ ಅವಕಾಶಗಳಿವೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಿಇಓ ಲೋಖಂಡೆ ಸ್ನೇಹಲ್ ಸುಧಾಕರ್ ತಿಳಿಸಿದರು.

ಅವರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಹೊಳಲೂರು ಇಲ್ಲಿ ಪಶು ಸಖಿ ಮತ್ತು ಬ್ಯೂಟಿಪಾರ್ಲರ್ ಮ್ಯಾನೆಜ್ಮೇಂಟ್ ತರಬೇತಿ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲ ಶಿವಯೋಗಿ ಯೆಲಿ, ಉಪ ನಿರ್ದೇಶಕರು, ಪಶು ವೈದ್ಯಕೀಯ ಇಲಾಖೆ ಶಿವಮೊಗ್ಗ ಇವರು ಪಶು ಇಲಾಖೆಯ ಬಗ್ಗೆ ಮತ್ತು ಪಶು ಸಖಿಯರ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು.

ಡೋಮೈನ್ ಸ್ಕೀಲ್ ಟ್ರೈನರ್ ಅದಂತಹ ಕತ್‍ಮುನಿಸಾ ಮತ್ತು ದೀಪಾರವರು ಹಾಜರಿದ್ದರು. ಸಂಸ್ಥೆಯ ನಿರ್ದೇಶಕ ಕಾಂತೇಶ ಅಂಬಿಗಾರ್ ಇವರು ಮಾತನಾಡಿ ಈ ತರಬೇತಿಗಳು ನಿಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಅವಕಾಶವಿದ್ದಂತೆ. ಇದನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಜೀವನದಲ್ಲಿ ಉನ್ನತವಾಗಿ ಬೆಳೆಯಬೇಕೆಂದು ತಿಳಿಸುವ ಜೊತೆಗೆ ಸಂಸ್ಥೆಯ ಕಿರು ಪರಿಚಯವನ್ನು ಮಾಡಿಕೊಟ್ಟರು.

Canara Bank Self Employment Training Institute ಉಪನ್ಯಾಸಕ ಸುರೇಶ್ ವೈ ಹಳ್ಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Kimmane Ratnakar ಸಮಾಜದ ಪರಿಸ್ಥಿತಿ ಸರಿಪಡಿಸುವ ಹೊಣೆ ಶಿಕ್ಷಕರ ಮೇಲಿದೆ- ಕಿಮ್ಮನೆ ರತ್ನಾಕರ್

0

Kimmane Ratnakar ಇವತ್ತಿನ ವಾಸ್ತವ ಸಮಾಜದ ಪರಿಸ್ಥಿತಿ ಸರಿಪಡಿಸುವ ಗುರತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಈಸೂರು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಪ್ರವೀಣ್ ಮಹಿಷಿ ಅವರ ಸ್ನೇಹ ಬಳಗ ಹೊರತಂದ ಅಮೃತಬಳ್ಳಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜ ಹೆಚ್ಚು ಹಾಳಾಗುತ್ತಿರುವುದು ವಿದ್ಯಾವಂತರಿಂದಲೇ. ಶಿಕ್ಷಣ ಪಡೆದವರಿಂದಲೇ ಜಾಸ್ತಿ ತಪ್ಪುಗಳು, ಅನಾಹುತಗಳು ಆಗುತ್ತಿರುವ ಈ ಸಂದರ್ಭದಲ್ಲಿ ಸಮಾಜವನ್ನು ಸುಸ್ಥಿತಿಗೆ ತರುವ
ಹೊಣೆ ಶಿಕ್ಷಕರ ಮೇಲೆ ಹೆಚ್ಚಾಗಿದೆ ಎಂದರು.

ನಾವು ಇಂದು ಹೆಚ್ಚಾಗಿ ದೂರುತ್ತಿರುವುದು ದುಡಿವ ವರ್ಗದವರನ್ನು. ಆದರೆ, ಸಮಾಜ ಹಾಳಾಗುತ್ತಿರುವುದು ದುಡಿವ ವರ್ಗದ ಜನರಿಂದ ಅಲ್ಲ, ವಿದ್ಯಾವಂತರಿಂದ ಎಂಬುದನ್ನು ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ನಾವು ನೋಡಿದ್ದೇವೆ. ಈ ಸಂದರ್ಭದಲ್ಲಿ ಆಗುತ್ತಿರುವ ಲೋಪಗಳನ್ನು ಯಾರು, ಯಾವಾಗ ಸರಿಪಡಿಸಬೇಕು ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಪಡೆದವರು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು. ಶಿಕ್ಷಣ ಸಮಾಜಕ್ಕೇ ಏನಾದರೂ ಕೊಡುತ್ತಿದೆಯಾ?
ಸಮಾಜಕ್ಕೆ ಏನಾದ್ರೂ ಲಾಭ ಆಗ್ತಿದೆಯಾ? ನಾನು ಪಡೆದ ಶಿಕ್ಷಣ ನನಗೆ, ನನ್ನ ಹಾಗೂ ನನ್ನ ಕುಟುಂಬಕ್ಕೆ ಮಾತ್ರ ಲಾಭ ಆಗ್ತಾ ಇದೆ ಅನ್ನೋದಾದ್ರೆ, ಇಂಥ ಶಿಕ್ಷಣದಿಂದ ಯಾವುದೇ ಲಾಭ ಇಲ್ಲ.

ಸಮಾಜಮುಖಿ ಆಗದ ಶಿಕ್ಷಣದಿಂದ ಐದು ಪೈಸೆ ಲಾಭ ಇಲ್ಲ ಎಂದು ಅವರು ವಿಶ್ಲೇಷಿಸಿದರು. ಶಿಕ್ಷಣದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಶಿಕ್ಷಣದಿಂದ ಮಾತ್ರ ಒಳ್ಳೆಯರಾಗ್ತಿವಿ ಅನ್ನೋರಿಗೆ ಬದ್ಧತೆ ಬೇಕು. ಈ ಪ್ರಪಂಚವನ್ನು, ಸಮಾಜವನ್ನು ಸರಿದಾರಿಯಲ್ಲಿ ಕಟ್ಟಬೇಕು ಎಂಬ ಉದ್ದೇಶ ಹೊಂದಿರುವ ಶಿಕ್ಷಕರು
ಕ್ರಿಯಾಶೀಲರಾಗಲು ಇದು ಸುಸಮಯ.

Kimmane Ratnakar ದಿನೇದಿನೇ ಭಾರೀ ಅವ್ಯವಸ್ಥೆಯತ್ತ ಸಾಗುತ್ತಿರುವ ಸಮಾಜವನ್ನು ಸುಸ್ಥಿತಿಗೆ ತರುವ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ ಎಂದು ಕರೆ ನೀಡಿದರು. ಅಮೃತಬಳ್ಳಿ’
ಪುಸ್ತಕವನ್ನು ಬೆಂಗಳೂರಿನ ನಿವೃತ್ತ ಪ್ರಾಚಾರ್ಯರಾದ ಅನುರಾಧ ಬಿಡುಗಡೆ ಮಾಡಿದರು.

ಪ್ರವೀಣ್ ಮಹಿಷಿ, ಶೀಲಾ ಮಹಿಷಿ, ಉಪನ್ಯಾಸಕರಾದ ಡಾ. ಸಾಸ್ವೇಹಳ್ಳಿ ಸತೀಶ್, ಗೋಪಾಲಗೌಡ, ರವಿಕುಮಾರ್, ಅನಿತಾ ಜವಳಿ, ಗೋಪಾಲಕೃಷ್ಣ, ಶ್ವೇತಾ, ಶಿಲ್ಪಾ, ಶೃತಿ ಮೊದಲಾದವರಿದ್ದರು.

Mysore Annadaneshwar Muth ಮೈಸೂರು ಅನ್ನದಾನೇಶ್ವರ ಮಠದ ಹಿರಿಯಶ್ರೀಗಳ ಬರ್ಬರ ಹತ್ಯೆ

0

Mysore Annadaneshwar Muth ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಮೈಸೂರಿನ ಸಿದ್ದಾರ್ಥನಗರದಲ್ಲಿ 90 ವರ್ಷದ ಶಿವಾನಂದ ಸ್ವಾಮೀಜಿಯನ್ನು ಸ್ವಾಮೀಜಿ ಆಪ್ತ ಸಹಾಯಕ 60 ವರ್ಷದ ರವಿ ಎಂಬಾತನೇ ಹತ್ಯೆ ಮಾಡಿದ್ದು ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನಾ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನ್ನದಾನೇಶ್ವರ ಮಠವು ಸುಮಾರು 9 ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳು ಇವೆ.

Mysore Annadaneshwar Muth ಹಣ ಪಡೆದು ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಅವಕಾಶ: ಮಲತಂದೆ ಸೇರಿ ಮೂವರ ಬಂಧನ
ಕುಡಿದ ಮತ್ತಿನಲ್ಲಿ ಶಿವಾನಂದ ಸ್ವಾಮೀಜಿ ಅವರನ್ನು ರವಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Karnataka SSLC Exam 2024 ಎಸ್ಎಸ್ಎಲ್ ಸಿ ಪರೀಕ್ಷೆ-2 . ಜಿಲ್ಲೆಯಾದ್ಯಂತ ಸಿದ್ಧತೆ,-ಸಿದ್ಧಲಿಂಗ ರೆಡ್ಡಿ

Karnataka SSLC Exam 2024 ಜೂನ್ 14 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 :ಸಿದ್ದತೆಗೆ ಎಡಿಸಿ ಸೂಚನೆ ಶಿವಮೊಗ್ಗ ಜೂ.11 ( ಕರ್ನಾಟಕ ವಾರ್ತೆ) 2023-24 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ಜೂನ್ 14 ರಿಂದ 22 ರವೆಗೆ ಜಿಲ್ಲೆಯಲ್ಲಿ ನಡೆಯಲಿದ್ದು ಪರೀಕ್ಷೆಗಳು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜೂ.11 ರಂದು ಏರ್ಪಡಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾವತಿ 02, ಹೊಸನಗರ 01, ಸಾಗರ 01, ಶಿಕಾರಿಪುರ 01, ಶಿವಮೊಗ್ಗ 03, ಸೊರಬ 01 ತೀರ್ಥಹಳ್ಳಿ 01 ಸೇರಿ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 14 ರಿಂದ 22 ರವರೆಗೆ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗೆ ಪುನರಾವರ್ತಿತ ವಿದ್ಯಾರ್ಥಿಗಳು 2091, ಖಾಸಗಿ ಪುನರಾವರ್ತಿತ 171 ಮತ್ತು ಫಲಿತಾಂಶ ಸುಧಾರಣೆಗಾಗಿ 249 ಸೇರಿ ಒಟ್ಟು 2511 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪ್ರಥಮ ಭಾಷೆಗೆ 1215, ದ್ವಿತೀಯ ಭಾಷೆಗೆ 1549, ತೃತೀಯ ಭಾಷೆಗೆ 1409, ಗಣಿತ 1785, ವಿಜ್ಞಾನ 2035 ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ 1435 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಆಸನ/ಪೀಠೋಪಕರಣಗಳ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.
ಈಗಾಗಲೇ ಪ್ರತಿ ಕೇಂದ್ರಗಳಿಗೆ 10 ಜನ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ 07 ಮಾರ್ಗಗಳಿಗೆ 07 ಜನ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅನ್ಯ ಇಲಾಖಾ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
Karnataka SSLC Exam 2024 ಜಿಲ್ಲಾಧಿಕಾರಿಗಳ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಯಾವುದೇ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ.
ಪರೀಕ್ಷಾ ಸಂಬಂಧ ಪೊಲೀಸ್ ಬಂದೋಬಸ್ತ್, ಆರೋಗ್ಯ ಸಹಾಯಕರ ನೇಮಕಕ್ಕೆ ಕೋರಲಾಗಿದ್ದು, ಜಿಲ್ಲಾ/ತಾಲ್ಲೂಕು ಖಜಾನೆಗಳಿಗೆ ಭದ್ರತಾ ಕೊಠಡಿ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ.
ಸಿಸಿಟಿವಿ ಅಳವಡಿಕೆ ಕಡ್ಡಾಯ : ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಸಿಸಿಟಿವಿ ಗಳು ಪರೀಕ್ಷಾ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಹಾಗೂ ಜಿಲ್ಲಾ ಪಂಚಾಯ್ತಿಯ ಸಿಇಓ ಕಚೇರಿಯಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಮಾನಿಟರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ನಿಯೋಜನೆಗೊಂಡ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ವೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಡಯಟ್ ಪ್ರಾಚಾರ್ಯ ಬಸವರಾಜ್, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು, ಬಿಇಓ ಗಳು ಪಾಲ್ಗೊಂಡಿದ್ದರು.