World Karate Day ಜೂನ್ 17ರಂದು ವಿಶ್ವಾದ್ಯಂತ ಆಚರಿಸುವ ವರ್ಲ್ಡ್ ಕರಾಟೆ ಪ್ರಯುಕ್ತ ಇಂದು ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 162 ಕರಾಟೆ ವಿದ್ಯಾರ್ಥಿಗಳನ್ನು ಒಳಗೊಂಡ ತಂಡದಿಂದ ಏಕಕಾಲದಲ್ಲಿ ಗುಂಪು ಪ್ರದರ್ಶನ ಮಾಡಿ ವರ್ಲ್ಡ್ ಕರಾಟೆ ಡೇ ಆಚರಣೆ ಮಾಡಲಾಯಿತು.
World Karate Day ಕಾರ್ಯಕ್ರಮದಲ್ಲಿ ಸಿಐಎಸ್ಎಫ್ ಎಸಿಪಿ ಚಂದ್ರಶೇಖರ್ ಸಬ್ ಇನ್ಸ್ಪೆಕ್ಟರ್ ಕೊಟ್ರೇಶ್ ಮತ್ತು ಚಂದ್ರಶೇಖರ್ ಸೇರಿದಂತೆ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಉಪಾಧ್ಯಕ್ಷ ಬಾಲರಾಜ್ ಸಹ ಕಾರ್ಯದರ್ಶಿ ಪಂಚಪ್ಪ ಮತ್ತು ಪ್ರಮುಖರಾದ ಉಷಾ ಉತ್ತಪ್ಪ ರಾಘವೇಂದ್ರ ಕೃಷ್ಣಮೂರ್ತಿ ಗೋವಿಂದಸ್ವಾಮಿ ಶ್ರೇಯಸ್ ಹರ್ಷಿತ್ ಧನಂಜಯ್ ಉಪಸ್ಥಿತರಿದ್ದರು
World Karate Day ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ವಿಶ್ವ ಕರಾಟೆ ದಿನಾಚರಣೆ
Forest Department ಮಂಡಗದ್ದೆ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ಅವರಿಗೆ ಸಿಎಂ ಸುವರ್ಣಪದಕ
Forest Department ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಪಿ. ಆದರ್ಶರವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ 2022– 23ನೇ ಸಾಲಿನ ಚಿನ್ನದ ಪದಕದ ಪುರಸ್ಕಾರವನ್ನು ನೀಡಲಾಗಿದೆ.
ವಲಯ ಅರಣ್ಯ ಅಧಿಕಾರಿ ಆದರ್ಶ ಅವರು ಈ ಹಿಂದೆ ಹೊಸನಗರ ತಾಲೂಕಿನ ಹೊಸನಗರ, ನಗರದ ವಲಯ ಅರಣ್ಯ ಅಧಿಕಾರಿ ಸೇವೆ ಸಲ್ಲಿಸಿ ಕಳೆದ ಎರಡು ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಅರಣ್ಯ ಭೂಮಿ ಸಂರಕ್ಷಣೆ, ನೈಸರ್ಗಿಕವಾಗಿರುವ ಅರಣ್ಯ ಪುನರುತ್ಪತ್ತಿ ಸೇರಿದಂತೆ ಹತ್ತಾರು ಉತ್ತಮ ಕೆಲಸ ಮಾಡಿದ ವಿಷಯಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮಂಡಗದ್ದೆಯ ವಲಯ ಅರಣ್ಯ ಅಧಿಕಾರಿಯಾಗಿ ಆದರ್ಶರವರು ಅರಣ್ಯ ಮತ್ತು ಅರಣ್ಯ ಭೂಮಿಯನ್ನು ಸಂರಕ್ಷಣೆ ಮಾಡುವುದರ ಜೊತೆಯಲ್ಲಿ ಅನೇಕ ಭೂ ಒತ್ತುವರಿ, ಕಬಳಿಕೆಯನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವುದರೊಂದಿಗೆ ಹೊಸ ಒತ್ತುವರಿಗಳನ್ನು ತೆರವುಗೊಳಿಸುವುದು ಹಿಂದಿನ ಒತ್ತುವರಿ, ಕಬ್ಬಳಿಕೆಗಳನ್ನು ನ್ಯಾಯಾಲಯದಲ್ಲಿ ಮತ್ತು ಇಲಾಖೆಯ ಮಟ್ಟದಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕ್ರಮ ಜರುಗಿಸಲು ಮುಂದಾಗಿದ್ದು, ಅರಣ್ಯ ಭೂಮಿಯ ಅಕ್ರಮ ಮರ ಕಡತಲೆ, ವನ್ಯಜೀವಿಗಳ ಬೇಟೆಯಾಡಿ ಪ್ರಾಣಿ ಗಳ ಹತ್ತೆ, ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮರಳು, ಮಣ್ಣು ತೆಗೆದು ಸಾಗಿಸುವುದು ಮುಂತಾದ ಅನೇಕ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸುವುದರ ಜೊತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಸರ್ಕಾರ ಪರಿಗಣಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರವನ್ನು ನೀಡಿ ಘೋಷಣೆ ಮಾಡಿರುತ್ತದೆ.
Forest Department ಆದರ್ಶರವರು ಮಂಡ್ಯ ಜಿಲ್ಲೆಯ ನಾಗಮಂಗಲ, ಶಿವಮೊಗ್ಗ ಹೊಸನಗರ, ನಗರ ಮುಂತಾದ ಊರುಗಳಲ್ಲಿ ಅರಣ್ಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
ಅವರಿಗೆ ರಾಜ್ಯ ಮುಖ್ಯ ಮಂತ್ರಿಗಳ ಚಿನ್ನದ ಪದಕ ಲಭಿಸಿರುವುದು ತೀರ್ಥಹಳ್ಳಿಯ ಹೆಮ್ಮೆಯ ವಿಚಾರವಾಗಿದ್ದು ತೀರ್ಥಹಳ್ಳಿಗೆ ಮತ್ತು ಅರಣ್ಯ ಇಲಾಖೆಗೆ ರಾಜ್ಯಮಟ್ಟದಲ್ಲಿ ಮತ್ತೊಂದು ಕಿರೀಟ ಮತ್ತು ಗೌರವ ಲಭಿಸಿದಂತಾಗಿದೆ.
Film chamber ರೇಣುಕಯ್ಯಸ್ವಾಮಿ ಕುಟುಂಬಕ್ಕೆ ಫಿಲ್ಮ್ ಚೇಂಬರ್ ನಿಂದ ₹5 ಲಕ್ಷ ಸಾಂತ್ವನ ಹಣ- ಸುರೇಶ್
Film chamber ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಸ್ಥರನ್ನು ಇಂದು ಭೇಟಿಯಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸುರೇಶ್ ಸಂತ್ವಾನ ಹೇಳಿದರು. ಪಿಲ್ಮ್ ಚೇಂಬರ್ ವತಿಯಿಂದ ಅವರಿಗೆ 5 ಲಕ್ಷ ರೂ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವಿಲ್ಲಿಗೆ ಬಂದಿರೋದು ಸಂತಾಪಕ್ಕೆ ಅಷ್ಟೇ ಯಾವುದೇ ರಾಜೀ ಇಲ್ಲ. ನಮ್ಮ ಫಿಲ್ಮ್ ಚೇಂಬರ್ ವತಿಯಿಂದ ಐದು ಲಕ್ಷ ರೂಪಾಯಿ ನೀಡಿದ್ದೇವೆ. ಇಡೀ ಚಿತ್ರರಂಗ ಮುಂದೆಯೂ ಸಹ ನೊಂದ ಕುಟುಂಬದವರ ಜೊತೆ ನಿಲ್ಲಲಿದೆ. ಕುಟುಂಬಕ್ಕೆ ಐದು ಲಕ್ಷ ಸಾಂಕೇತಿಕವಾಗಿ ಕೊಡಲಾಗಿದೆ. ಮುಂದೆಯೂ ಇನ್ನೂ ಸಹಾಯ ಹೇಗೆ ಮಾಡಬೇಕು ಮಾಡ್ತಿವಿ. ಶಾಶ್ವತ ಪರಿಹಾರ ನೀಡಲು ನಿರ್ಧಾರ ಮಾಡುತ್ತೇವೆ. ಚಿತ್ರರಂಗ ಕ್ಷಮೆ ಕೇಳಲು ಇಲ್ಲಿಗೆ ಬಂದಿದ್ದೇವೆ ಇದನ್ನು ವೈಭವಿಕರಿಸಬಾರದು ಎಂದು ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಸುರೇಶ್ ಹೇಳಿದರು.
Film chamber ರೇಣುಕಾ ಸ್ವಾಮಿ ಹತ್ಯೆ ಘಟನೆ ಬಗ್ಗೆ ಕಾನೂನಿನಡಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದೀಗ ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿಯಾಗಿದೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು. ಇನ್ನು ಇದೇ ವೇಳೆ ದರ್ಶನ್ ಸಿನಿಮಾ ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರ ನಾವು ಮಾಡೋಕೆ ಆಗೊಲ್ಲ. ಕಲಾವಿದರ ಸಂಘ, ನಿರ್ಮಾಪಕರ ಸಂಘ, ಫ್ಯಾನ್ಸ್ ಪಾಲೋವರ್ಸ್ ಕೂಡ ಇದೆ. ಅಲ್ಲಿ ಸಭೆ ಮಾಡಿದ ನಂತರ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು.
ಈ ಹಿಂದೆಯೂ ರಾಜಕುಮಾರ್ ವಿಷ್ಣುವರ್ಧನ್ ಶಂಕರ್‌ನಾಗ್ ಅಂಬರೀಶ್‌ಗೂ ಫ್ಯಾನ್ ಇತ್ತು. ಆದರೆ ಇತ್ತೀಚಿನ ಫ್ಯಾನ್ಸ್ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಆ ರೀತಿ ಯಾರೂ ಪ್ರಚೋದನೆಗೆ ಒಳಗಾಗಬಾರದು. ಆ ರೀತಿ ಒಳಗಾಗಿಯೇ ಇಂತಹ ಘಟನೆ ನಡೆದುಹೋಗಿದೆ. ಕೊರೊನಾ ಬಳಿಕ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಚಿತ್ರರಂಗ, ವಾಣಿಜ್ಯ ಮಂಡಳಿ ಬಗ್ಗೆ ದೂಷಣೆ ಮಾಡಬೇಡಿ ಎಂದರು.
B. Y. Vijayendra ಪೆಟ್ರೋಲ್- ಡಿಸೆಲ್ ದರ ಇಳಿಸುವವರೆಗೆ ಬಿಜೆಪಿಯ ಹೋರಾಟ ನಿಲ್ಲದು- ಬಿ.ವೈ.ವಿಜಯೇಂದ್ರ
B. Y. Vijayendra ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಪಕ್ಷದ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ.
ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ, ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಈ ಬೆಲೆ ಏರಿಕೆಯ ಬಿಸಿ ಪಂಪ್ ಸೆಟ್, ಟ್ರಾಕ್ಟರ್ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಬಳಸುವ ರೈತರ ಕೈ ಸುಡಲಿದೆ. ಅದರ ಜೊತೆಗೆ ವಾಹನವನ್ನು ಆಶ್ರಯಿಸಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಕೂಡ ಇದರ ಬಿಸಿ ತಟ್ಟಲಿದೆ. ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ.
B. Y. Vijayendra ರಾಜ್ಯದ ಸಂಪನ್ಮೂಲವನ್ನು ಬಳಸಿಕೊಳ್ಳುವ ಯಾವ ಕಾಳಜಿಯೂ ಸರ್ಕಾರಕ್ಕಿಲ್ಲ, ಬದಲಾಗಿ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುವವರಿಗೆ ಆಥಿತ್ಯ ನೀಡುವ ತಾಣವನ್ನಾಗಿಸುತ್ತಿದೆ, ಕಾಂಗ್ರೆಸ್ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿ ಮಾಡಿಯೇ ಅಧಿಕಾರದಿಂದ ಕೆಳಗಿಳಿಯುವ ಶಪಥ ಮಾಡಿದಂತೆ ಕಾಣುತ್ತಿದೆ, ಈ ಕೂಡಲೇ ಪೆಟ್ರೋಲ್ – ಡೀಸೆಲ್ ಗಳ ಮೇಲೆ ಹೆಚ್ಚಿಸಿರುವ ದರವನ್ನು ವಾಪಾಸ್ ಪಡೆಯದಿದ್ದರೆ ಬಿಜಿಪಿ ಪಕ್ಷವು ದರ ಹಿಂಪಡೆಯುವವರೆಗೂ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಎಚ್ಚರಿಸ ಬಯಸುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ x ಖಾತೆಯಲ್ಲಿ ತಿಳಿಸಿದ್ದಾರೆ.
Sahyadri College ಶಿವಮೊಗ್ಗ ಎನ್ ಸಿಸಿ ಶಿಬಿರಾರ್ಥಿಗಳಲ್ಲಿ ಕೆಲವರಿಗೆ ಆರೋಗ್ಯದಲ್ಲಿ ಏರುಪೇರು. ಚಿಕಿತ್ಸಾನಂತರ ಚೇತರಿಕೆ
Sahyadri College ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಎನ್ ಸಿಸಿ ಕ್ಯಾಂಪ್ ನಲ್ಲಿ ಭಾಗಿಯಾಗಿದ್ದ 9 ಜನರಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು ತಕ್ಷಣಕ್ಕೆ ಸಿಕ್ಕ ಫಲಿತಾಂಶದಿಂದ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಸಹ್ಯಾದ್ರಿ ಕಾಲೇಜಿನಲ್ಲಿ ಎನ್ ಸಿಸಿ ಕ್ಯಾಂಪ್ ನಡೆದಿದೆ. 400 ಜನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇವರೆಲ್ಲರೂ ಕ್ಯಾಂಪ್ ನಲ್ಲಿ ನೀಡಿದ ಆಹಾರ ಸ್ವೀಕರಿಸಿದ್ದಾರೆ. ಇವರಿಗೆ ಇಬ್ಬರಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.
ಇಬ್ಬರಲ್ಲಿ ವಾಂತಿ ಕಾಣಿಸಿಕೊಂಡಿದ್ದು ಉಳಿದ 7 ಜನ ಮಕ್ಕಳಿಗೆ ವಾಂತಿ ಆಗಿದೆ. ತಕ್ಷಣಕ್ಕೆ ಮೆಗ್ಗಾನ್ ಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಸಧ್ಯಕ್ಕೆ ದಾಖಲಾದ ಮಕ್ಕಳಲ್ಲಿ ಆರೋಗ್ಯ ಚೇತರಿಕೆ ಕಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
Sahyadri College ಇತರೆ ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿಗಳು ಕಂಡು ಬಂದಿವೆ.
Shivamogga Police ಶಿವಮೊಗ್ಗ ಮಿಷನ್ ಕಾಂಪೌಂಡ್ ನಲ್ಲಿ ಮಹಿಳೆ ನೇಣಿಗೆ ಶರಣು
Shivamogga Police ಮಾನಸಿಕ ಅಸ್ವಸ್ಥ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಿಷನ್ ಕಾಂಪೌಂಡ್ ನಲ್ಲಿ ನಡೆದಿದೆ.
ಸರಸ್ವತಿ ಎಂಬ 35 ವರ್ಷದ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮದುವೆಯಾಗಿ 15 ವರ್ಷ ಸಂಸಾರ ನಡೆಸಿದ್ದ ಮಹಿಳೆ ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಾನಸಿಕಾಸ್ವಸ್ಥಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಬೇಸತ್ತು ಈ ರೀತಿ ನೇಣಿಗೆ ಶರಣಾಗಿರುವುದಾಗಿ ಆರೋಪಿಸಿದ್ದಾರೆ. ಮಹಿಳೆಗೆ ಒಂದು ಮಗುವಿತ್ತು ಎಂದು ಹೇಳಲಾಗುತ್ತಿದೆ.
Shivamogga Police ಮೃತ ದೇಹವನ್ನು ಮೆಗ್ಗಾನ್ ಶವಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
Klive Special Article ಮನಸೆಳೆದ “ಏಕಲವ್ಯ” ರಂಗ ಪ್ರಯೋಗ ಲೇ: ಮಂಜುನಾಥ ಸ್ವಾಮಿ.ಎಸ್.ರಂಗಕರ್ಮಿ.ಶಿವಮೊಗ್ಗ.
Klive Special Article ಇದು ಒಂದು ದಾಖಲಾಗದ ಕಥೆ ಎಂದು ಪ್ರಾರಂಭವಾಗುವ ನಾಟಕ ಹಲವು ಹೊಸ ವಿಷಯಗಳನ್ನು ಪ್ರೇಕ್ಷಕರ ಮನಪಟಲಕ್ಕೆ ದಾಖಲಿಸಿದ್ದಂತು ನಿಜ.
ನಮಗೆಲ್ಲ ತಿಳಿದಂತೆ ಏಕಲವ್ಯ ಒಬ್ಬ ಬೇಡರ ಹುಡುಗ, ಕಾಡು ಮೇಡು ಅಲೆದು ಜೀವನ ಸಾಗಿಸುವ ಒಂದು ಸಮುದಾಯದವನು, ಇಂತಹ ಏಕಲವ್ಯನಿಗೆ ದೊಡ್ಡ ಬಿಲ್ಲುಗಾರನಾಗಬೇಕು ಎಂಬ ಆಸೆ ಬಂದು ಗುರು ದ್ರೋಣಾಚಾರ್ಯ ಬಳಿ ಬಿಲ್ ವಿದ್ಯೆ ಕಲಿಸಲು ಕೇಳಿಕೊಳ್ಳುತ್ತಾನೆ. ಆದರೆ ಗುರು ದ್ರೋಣಾಚಾರ್ಯರು ನಾನು ಕೇವಲ ಕ್ಷತ್ರಿಯರಿಗೆ ಮಾತ್ರ ವಿದ್ಯೆಯನ್ನು ಕಲಿಸುವವನು ಎಂದು ಅವನನ್ನು ತಿರಸ್ಕರಿಸುತ್ತಾನೆ .ಇದನ್ನು ಮನಗಂಡ ಏಕಲವ್ಯ ದ್ರೋಣಾಚಾರ್ಯರ ವಿಗ್ರಹ ಮಾಡಿ ಸ್ವತಃ ತಾನೇ ವಿದ್ಯೆ ಕಲಿಯುತ್ತಾನೆ. ಇದನ್ನು ಅರಿತ ದ್ರೋಣಾಚಾರ್ಯ ಏಕಲವ್ಯನಿಗೆ ಗುರುದಕ್ಷಿಣೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಕೇಳಿ ಪಡೆಯುತ್ತಾರೆ.ಇದು ಸಹಜವಾಗಿ ನಮಗೆ ಗೊತ್ತಿರುವ ಕಥೆ.ಇದಕ್ಕೆ ಒಂದಿಷ್ಟು ವಿಷಯಗಳನ್ನು ಸೇರಿಸಿ ಮೂಲ ಕಥೆಗೆ ಚ್ಯುತಿ ಬಾರದಂತೆ ನಿರ್ದೇಶಕ ಚಂದನ್ ಬಹಳ ಸೂಕ್ಷ್ಮವಾಗಿ ಮತ್ತು ಅರ್ಥಪೂರ್ಣವಾಗಿ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಏಕಲವ್ಯನ ಕಥೆ ಎಂದರೆ ಒಂದು ಸಮುದಾಯದ ತೆಗಳಿಕೆ ಎಂದು ಭಾವಿಸಿ ನಿರ್ದೇಶಿಸುವವರ ಮಧ್ಯೆ ಎಲ್ಲಿಯೂ ಕಥೆಗೆ ಮತ್ತು ಸಮುದಾಯಗಳಿಗೆ ಅಪಚಾರವಾಗದಂತೆ ನಾಟಕವನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಜೆ.ಎನ್.ಎನ್.ಸಿ ವಿದ್ಯಾರ್ಥಿಗಳಿಗಾಗಿ ರಚನೆ ಅದ ನಾಟಕ ಹಲವು ಪ್ರಶಸ್ತಿಗಳನ್ನು ಪಡೆದಿದೆ.ವಿದ್ಯಾರ್ಥಿಗಳ ಅಭಿನಯವಂತು ನಿಜಕ್ಕೂ ಅದ್ಬುತವಾಗಿತ್ತು, ದ್ರೋಣಾಚಾರ್ಯ, ಏಕಲವ್ಯ, ಅವನ ತಂದೆಯ ಪಾತ್ರಧಾರಿಗಳು ಮನೋಜ್ಞವಾಗಿ ಅಭಿನಯಿಸಿದ್ದರು. ಓದಿನ ಒತ್ತಡದಲ್ಲಿಯು ರಂಗಭೂಮಿ ಬಗ್ಗೆ ಆಸಕ್ತಿ ಬೆಳಸಿಕೊಂಡು ನಾಟಕದಲ್ಲಿ ಅಭಿನಯಿಸುತ್ತಿರು ವಿದ್ಯಾರ್ಥಿಗಳ ಶ್ರಮ ಇಡಿ ನಾಟಕದ ತುಂಬಾ ಎದ್ದುಕಾಣುತ್ತದೆ.ಶೈಲೇಶ್ ಅವರ ಯಕ್ಷ ನಡೆ ನಾಟಕಕ್ಕೆ ಹೊಸ ರೂಪವನ್ನು ಕೊಟ್ಟಿದೆ. ಅಚ್ಚುಕಟ್ಟಾದ ರಂಗ ಸಜ್ಜಿಕೆ, ನಾಟಕಕ್ಕೆ ಒಪ್ಪುವ ವಸ್ತ್ರವಿನ್ಯಾಸ,ಪ್ರಸಾಧನ ನೋಡಗರ ಮನಸ್ಸಿಗೆ ಮುದ ನೀಡಿತು.
Klive Special Article ನಾಟಕದ ಪ್ಲಸ್ ಪಾಂಯಿಟ್ ಅಂದರೆ ಸಂಗೀತ. ನಾಟಕದ್ದುದ್ದಕ್ಕೂ ರಂಗಾಸಕ್ತರನ್ನು ಹಿಡಿದಿಟ್ಟ ಕೊಳ್ಳುವಲ್ಲಿ ಯಶಸ್ವಿಯಾಯಿತು. ಭರವಸೆಯ ಸಂಗೀತ ನಿರ್ದೇಶಕರಾದ ಶ್ರೀ ಪಾದ ತೀರ್ಥಹಳ್ಳಿ ಮತ್ತು ಶಿವಕುಮಾರ್ ತೀರ್ಥಹಳ್ಳಿ ಸಂಪೂರ್ಣ ನಾಟಕವನ್ನು ತಮ್ಮ ಸಂಗೀತದಿಂದ ಹಿಡಿದಿಟ್ಟಿದ್ದರು. ಇವರ ರಂಗ ಸಂಗೀತಕ್ಕೆ ಶಿವಮೊಗ್ಗದಲ್ಲಿ ಹೊಸದೊಂದು ಪ್ರೇಕ್ಷಕವರ್ಗ( FAN Base) ಸೃಷ್ಟಿ ಆಗಿದೆ ಅಂದರೆ ನಂಬಲೆಬೇಕು. ಒಂದು ಗಂಟೆಯಕಾಲ ರಂಗಾಸಕ್ತರುನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಸಾಮಥ್ರ್ಯ ನಾಟಕಕ್ಕೆ ಇದದ್ದು ನಾಟಕದ ಯಶಸ್ಸು ಎಂದು ಭಾವಿಸ ಬಹುದು.ರಂಗಕಾಶಿ ಎನಿಸಿಕೊಂಡ ಶಿವಮೊಗ್ಗದಲ್ಲಿ ಪ್ರತಿಭಾವಂತ ಯುವ ರಂಗ ನಿರ್ದೇಶಕರು ಹೊಸ ಹೊಸ ಪ್ರಯೋಗಗಳ ಮೂಲಕ ಶಿವಮೊಗ್ಗ ರಂಗಭೂಮಿಯನ್ನು ಶ್ರೀಮಂತ ಗೊಳಿಸುತ್ತಿದ್ದಾರೆ.ನಾನು ಗಮನಿಸಿದ್ದು ಪ್ರಸ್ತುತ ಶಿವಮೊಗ್ಗ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಎದ್ದುಕಾಣುತ್ತಿದೆ. ಉತ್ತಮ ನಾಟಕಗಳಿಗೂ ಪ್ರೇಕ್ಷಕರು ಸ್ಪಂದಿಸುತ್ತಿಲ್ಲ ಎಂಬುದನ್ನು ಮನಗಂಡು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚು ನಾಟಕಗಳು ರಂಗಾಸಕ್ತರನ್ನು ತಲುಪಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಎಲ್ಲಾ ರಂಗತಂಡಗಳು ಶ್ರಮಿಸಬೇಕಾಗಿದೆ.
ಬರಹ : ಮಂಜುನಾಥ ಸ್ವಾಮಿ.ಎಸ್, ರಂಗಕರ್ಮಿ, ಶಿವಮೊಗ್ಗ.
Chittara Star Award ರಮೇಶ್ ಬೇಗಾರ್ ನಿರ್ದೇಶನದ ” ಜಲಪಾತ” ಚಿತ್ರಕ್ಕೆ ಚಿತ್ತಾರ ಸ್ಟಾರ್ ಅವಾರ್ಡ್
Chittara Star Award ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು ನಿರ್ಮಿಸಿ, ಮಲೆನಾಡ ಕ್ರಿಯಾಶೀಲ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿದ ಜಲಪಾತ ಸಿನಿಮಾ ಕ್ಕೆ 2024 ರ ಚಿತ್ತಾರ ಸ್ಟಾರ್ ಅವಾರ್ಡ್ ಲಭಿಸಿದೆ.
ಉತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ವಿಭಾಗದಲ್ಲಿ ಜಲಪಾತ ನಾಮ ನಿರ್ದೇಶನಗೊಂಡಿತ್ತು.
ಜೊತೆಗೆ ಚಿತ್ರದ ನಾಯಕ ನಟಿ ನಾಗಶ್ರೀ ಬೇಗಾರ್ ಮೊದಲ ಸಿನಿಮಾದ ಶ್ರೇಷ್ಠ ನಾಯಕಿ ವಿಭಾಗದಲ್ಲಿ ನಾಮಿನೆಟ್ ಆಗಿದ್ದರು. ಈ ಪೈಕಿ ಸಿನಿಮಾ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಆನ್ ಲೈನ್ ವೋಟಿಂಗ್ ಮತ್ತು ತೀರ್ಪು ಗಾರ ತಂಡ ದ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಜೂನ್ 15 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ಗ್ರಾಂಡ್ ಸಭಾಂಗಣ ದಲ್ಲಿ ಚಿತ್ತಾರ ಸಿನಿ ಮ್ಯಾಗಜಿನ್ ಕಲರ್ಸ್ ಕನ್ನಡ ಸಹಯೋಗದಲ್ಲಿ ಆಯೋಜಿಸಿದ್ದ ಚಂದನವನ ಸಂಭ್ರಮ ಕಾರ್ಯಕ್ರಮ ದಲ್ಲಿ ಪ್ರಸಿದ್ಧ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ನಿರಂಜನ್ ದೇಶಪಾಂಡೆ ಮತ್ತು ಜಾಹ್ನವಿ ಕಾರ್ತಿಕ್ ನಿರೂಪಣೆ ಯ ಈ ವರ್ಣ ರಂಜಿತ ಕಾರ್ಯಕ್ರಮ ದಲ್ಲಿ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಸಿನಿಮಾ ರಂಗದ ಪ್ರಸಿದ್ದ ಕಲಾವಿದರು ಭಾಗವಹಿಸಿದ್ದರು.
ಜಲಪಾತ ತಂಡದ ಪರವಾಗಿ ನಿರ್ಮಾಪಕ ರವೀಂದ್ರ ಮತ್ತು ನಿರ್ದೇಶಕ ರಮೇಶ್ ಬೇಗಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ ಈ ಪ್ರಶಸ್ತಿಯನ್ನು ಸ್ವೀಕರಿದರು.
Chittara Star Award ಕಾರ್ಯಕ್ರಮದಲ್ಲಿ ಮುಖ್ಯ ತಾಂತ್ರಿಕ ವರ್ಗ ಛಾಯಾಗ್ರಾಹಕ ಶಶಿರ ಶೃಂಗೇರಿ, ಸಂಕಲನ ಕಾರ ಅವಿನಾಶ್ ಶೃಂಗೇರಿ ಕಲಾನಿರ್ದೇಶಕ ಅಭಿಷೇಕ್ ಮತ್ತು ನಿರ್ವಾಹಕ ಕಾರ್ತಿಕ್ ಶೃಂಗೇರಿ ಇವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಮೇಶ್ ಮಾತನಾಡಿ ” ಇದೊಂದು ಸಾಮಾಜಿಕ ಸಂದೇಶ ದ ಚಿತ್ರವಾದರೂ ವಾಣಿಜ್ಯ ವಿಭಾಗ ದಲ್ಲೂ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದಿದೆ. ಮಲೆನಾಡ ಗ್ರಾಮೀಣ ಪ್ರದೇಶ ದ ಕಲಾವಿದ ತಂತ್ರಜ್ಞರಿಗೆ ಮೊದಲು ಒಳಿದ ಪ್ರಶಸ್ತಿ ಇದಾಗಿದ್ದು ಮಲೆನಾಡ ಸಮಸ್ತ ಜನತೆಗೆ ಪ್ರಶಸ್ತಿ ಯನ್ನು ಸಮರ್ಪಿಸುತ್ತೇವೆ ” ಎಂದರು.
2023 ರಲ್ಲಿ ಚಿತ್ರೀಕರಣ ಗೊಂಡು ಬಿಡುಗಡೆ ಆಗಿ ಎ ಬಿ ಸಿ ಕೇಂದ್ರ ಗಳಲ್ಲಿ 50 ದಿನ ಪ್ರದರ್ಶಿತ ಗೊಂಡ ಜಲಪಾತ ಪ್ರತಿಷ್ಠಿತ ಆಮೇಜಾನ್ ಪ್ರೈಮ್ ನಲ್ಲೂ ಬಿಡುಗಡೆ ಗೊಂಡಿದೆ ಮಾತ್ರವಲ್ಲ 8 ಕ್ಕೂ ಮಿಕ್ಕಿದ ಐ ಎಂ ಡಿ ಬಿ ರೇಟಿಂಗ್ ದಾಖಲಿಸಿದ ವಿಶಿಷ್ಟ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದೆ.
Shivamogga Police ಶಿವಮೊಗ್ಗದಿಂದ ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ!
Shivamogga Police ವಿಜಯಪುರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಆಕೆಯನ್ನಯ ಕೊಲೆ ಮಾಡಲಾಗಿದೆ.
ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ 4ನೇ ಕ್ರಾಸ್ ವಾಸಿ ಟೈಲರ್ ಕೆಲಸ ಮಾಡಿಕೊಂಡಿದ್ದ ಮಮತಾ ಶ್ರೀಧರ್ ಎಂಬ 48 ವರ್ಷದ ಮಹಿಳೆ ಜೂ.02 ರಿಂದ ಕಾಣೆಯಾಗಿದ್ದರು.
ತನ್ನ ಮನೆಯಿಂದ ಜೂನ್ 02 ರಂದು ವಿಜಯಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಮಮತಾ ವಾಪಾಸ್ ಆಗಿರಲಿಲ್ಲ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.
ಈಕೆಯ ಫೋನ್ ಸ್ವಿಚ್‍ಆಪ್ ಆಗಿತ್ತು. ಈ ಪ್ರಕರಣವನ್ನು ಬೇಧಿಸಿದ ಕೋಟೆ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ನಾಪತ್ತೆಯಾಗಿದ್ದ ಮಹಿಳೆ ಪತ್ತೆಗೆ ಕೋಟೆ ಪಿಐ ಗುರುಬಸಪ್ಪ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈ ತಂಡ ಮಹಿಳೆಯ ಫೋನ್ ಲೊಕೇಷನ್ನನ್ನು ಟ್ರ್ಯಾಕ್ ಮಾಡಿತ್ತು.
ಲೋಕೇಷನ್ ವಿಜಯಪುರ ಜಿಲ್ಲೆ ಬೀಳಗಿ ತಾಲೂಕನ್ನು ಕೊನೆಯದಾಗಿ ತೋರಿಸಿದೆ. ಫೋನ್ ಟ್ರ್ಯಾಕ್ ಮಾಡಿದಾಗ ರೇವಣ ಸಿದ್ದಯ್ಯ (27) ಪತ್ತೆಯಾಗಿದ್ದಾನೆ . ಆಕೆಯ ಕೊನೆಯ ಫೋನ್ ಕಾಲು ಈತನಿಗೆ ಇದ್ದುದರಿಂದ ಪೊಲೀಸರು ಬೀಳಗಿಯಲ್ಲಿ ಈತನನ್ನು ಬಂಧಿಸಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ರೇವಣ ಸಿದ್ದಯ್ಯ ಕೋಟೆ ಪೊಲೀಸರ ಖಡಕ್ ವಿಚಾರಣೆಯಲ್ಲಿ ಕೊಲೆ ವಿಷಯ ಬಾಯಿ ಬಿಟ್ಟಿದ್ದಾನೆ. ಬೀಳಗಿಯಲ್ಲಿ ಕೊಲೆ ಮಾಡಿ ಕೃಷ್ಣ ನದಿಗೆ ಬಿಸಾಕಿರುವುದಾಗಿ ಮಾಹಿತಿ ಕೊಟ್ಟಿದ್ದಾನೆ.
ಫೋನ್ ಸಂಪರ್ಕಕ್ಕೆ ಬಂದಿದ್ದ ರೇವಣ ಸಿದ್ದಯ್ಯನಿಗೆ ಮಮತಾ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿದ್ದಳು. ಹಣ ವಾಪಾಸ್ ಪಡೆಯಲು ಕೇಳಿದಾಗ ವಿಜಯಪುರಕ್ಕೆ ಬರುವಂತೆ ಆತ ಹೇಳಿದ್ದ ಎನ್ನಲಾಗಿದೆ. ವಿಜಯಪುರಕ್ಕೆ ಜೂ.02 ರಂದು ಬಂದಿದ್ದಳು.
Shivamogga Police ಜೂನ್ 04 ರಂದು ಆಕೆಯನ್ನು ಕೊಲೆ ಮಾಡಿ ಕೃಷ್ಣಾ ನದಿಗೆ ಬಿಸಾಕಿದ್ದಾನೆ. ಬೀಳಗಿ ಪೊಲೀಸರಿಗೆ ಈ ಮೃತದೇಹ ಪತ್ತೆಯಾದರೂ ಗುರುತು ಸಿಗದ ಕಾರಣ ಅಪರಿಚಿತ ಶವ ಪತ್ತೆ ಎಂದು ದೂರು ದಾಖಲಿಸಿಕೊಂಡಿದ್ದರು.
Karnataka raises petrol and diesel price ದಿಢೀರನೆ ಪೆಟ್ರೋಲ್ & ಡಿಸೆಲ್ ಬೆಲೆ ಏರಿಕೆ. ಟೀಕಿಸಿದ ವಿಪಕ್ಷ ನಾಯಕರು
Karnataka raises petrol and diesel price ದಿಢೀರನೆ ಪೆಟ್ರೊಲ್ & ಡಿಸೆಲ್ ಬೆಲೆ ಏರಿಕೆ.
ಟೀಕಿಸಿದ ಪ್ರತಿಪಕ್ಷಗಳು
ಪೆಟ್ರೋಲ್ ₹3 ಮತ್ತು ಡೀಸೆಲ್₹3.50 ಗಳಷ್ಟು ಏರಿಕೆಯಾಗಿದೆ.
ಉಚಿತ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣವನ್ನು ಕ್ರೋಢೀಕರಿಸಲು ಹತಾಶವಾಗಿರುವ ಕರ್ನಾಟಕ ಸರ್ಕಾರವು ಚಿಲ್ಲರೆ ತೆರಿಗೆ ಸ್ಲ್ಯಾಬ್‌ನಲ್ಲಿ ಪರಿಷ್ಕರಣೆ ಮಾಡಿದ ನಂತರ ಈ ಹೆಚ್ಚಳವನ್ನು ಮಾಡಿದೆ.
ಬಿಜೆಪಿ ರಾಷ್ಡ್ರೀಯ ಕಾರ್ಯದರ್ಶಿ &ಶಾಸಕ ಸಿ.ಟಿ.ರವಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ರಾಜ್ಯದ ಜನತೆಯ ಕಿವಿಯ ಮೇಲೆ ಹೂವಿಟ್ಟು ಗ್ಯಾರೆಂಟಿ ಎಂಬ ಚಿಪ್ಪು ಕೊಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ”. ಕನ್ನಡಿಗರಿಗೆ ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ಅಸಲಿ “ಕರ್ನಾಟಕ ಮಾಡೆಲ್”
ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ 3 ರೂಪಾಯಿ ಹಾಗೂ ಡಿಸೇಲ್…
ಕರ್ನಾಟಕ ಬಿಜೆಪಿ
ಅಧ್ಯಕ್ಷ ಬಿ.ವೈ.ವಿಜಯೇಂದ್ರ
ಅವರು “ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯ ಸೋಲಿನ ಹಿನ್ನಡೆಯನ್ನು ರಾಜ್ಯದ ಜನತೆಯ ಮೇಲೆ ತೋರ್ಪಡಿಸುತ್ತಿದೆ.
Karnataka raises petrol and diesel price ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಬರೆ ಹಾಕಿದೆ.”
ಎಂದಿದ್ದಾರೆ.
