Sunday, April 12, 2026
Sunday, April 12, 2026
Home Blog Page 687

Delhi Jal Board ದೆಹಲಿಯಲ್ಲಿ ಜಲಕ್ಷಾಮ. ಜಲಮಂಡಳಿ ಕಚೇರಿಗೆ ಜನಮುತ್ತಿಗೆ ಹಾಕಿ ಧ್ವಂಸ

0

Delhi Jal Board ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಬಿಜೆಪಿಯ ಮಹಿಳಾ ಪ್ರತಿಭಟನಾಕಾರರು ಚತ್ತರ್‌ಪುರದಲ್ಲಿರುವ ದೆಹಲಿ ಜಲ ಮಂಡಳಿ (ಡಿಜೆಬಿ) ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

ನೀರಿನ ಸಮಸ್ಯೆ ಸಂಬಂಧ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದಾಗ ದೆಹಲಿ ಜಲ ಮಂಡಳಿ ಕೋಟ್ಯಾಂತರ ರೂಪಾಯಿ ಲಾಭದಲ್ಲಿತ್ತು ಎಂದು ಹೇಳಿದ್ದಾರೆ.

“ಕೇಜ್ರಿವಾಲ್ ಅವರಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಡಿಜೆಬಿ ಅಧ್ಯಕ್ಷರಾಗಿ ಅಧಿಕಾರ ನೀಡಲಾಗಿದೆ. ಒಂದು ವರ್ಷಕ್ಕೂ ಹೆಚ್ಚಿನ ಆಡಿಟ್ ವರದಿ ಕಾಣೆಯಾಗಿದೆ. ಡಿಜೆಬಿ ಭಾರೀ ಸಾಲದಲ್ಲಿದೆ ಎಂಬುವುದು ವಿಚಿತ್ರ.

ಎಎಪಿಯ ಎಲ್ಲಾ ಸಚಿವರು ದೆಹಲಿಯಲ್ಲಿ ನೀರು ಕದಿಯುತ್ತಿದ್ದಾರೆ, ಟ್ಯಾಂಕರ್ ಮಾಫಿಯಾ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ದಾಂಧಲೆ ಬೆನ್ನಲ್ಲೇ ನೀರಿನ ಪೈಪ್‌ಲೈನ್‌ಗಳನ್ನು ಕಾಪಾಡುವಂತೆ ಸಚಿವೆ ಅತಿಶಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

Delhi Jal Board ಜಲ ಸಚಿವೆ ಅತಿಶಿ ಭಾನುವಾರ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ಪತ್ರ ಬರೆದಿದ್ದು, ಮುಂದಿನ 15 ದಿನಗಳವರೆಗೆ ಪ್ರಮುಖ ಪೈಪ್‌ಲೈನ್‌ಗಳಲ್ಲಿ ಗಸ್ತು ತಿರುಗುವಂತೆ, ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ವಿನಂತಿಸಿದ್ದಾರೆ.

“ಯಮುನಾ ನದಿಯಲ್ಲಿ ನೀರಿನ ಕೊರತೆಯಿಂದಾಗಿ, ನೀರಿನ ಉತ್ಪಾದನೆಯು ಸುಮಾರು 70 ಎಂಜಿಡಿಯಷ್ಟು ಕುಸಿದಿದೆ. ದೆಹಲಿಯ ಅನೇಕ ಭಾಗಗಳು ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಈ ಪರಿಸ್ಥಿತಿಯಲ್ಲಿ, ಪ್ರತಿ ಹನಿ ನೀರು ಅಮೂಲ್ಯವಾಗುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

Shivamogga Police ಶಿವಮೊಗ್ಗ ರೈಲ್ವೆಹಳಿಗೆ ಸಿಲುಕಿ ವ್ಯಕ್ತಿಯ ಆತ್ಮಹತ್ಯೆ

0

Shivamogga Police ಶಿವಮೊಗ್ಗದ ವಿದ್ಯಾನಗರ ಸಮೀಪ ರೈಲ್ವೆ ಹಳಿ ಮೇಲೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ವಿದ್ಯಾನಗರದ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Shivamogga Police ಹಳೇ ಗುರುಪುರದ ಬಾಲಾಜಿ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದ್ದು,ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಾಜಿ ಸೋಮವಾರ ಮಧ್ಯಾಹ್ನ ಮನೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ

ಶಿವಮೊಗ್ಗ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Police ಚಾಕುವಿನಿಂದ ಇರಿದು ಸ್ಮಶಾನದಲ್ಲೇ ಬರ್ಬರ ಕೊಲೆ

0

Shivamogga Police ಶಿವಮೊಗ್ಗದ ತುಂಗಾನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನ
ಚಾಕುವಿನಿಂದ ಚುಚ್ಚಿ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ನಗರದ ಆಯನೂರು ಗೇಟ್ ಬಳಿ ಸ್ಮಶಾನವೊಂದರಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು,
ಆಯನೂರು ಗೇಟ್‌ ಸಮೀಪದ ಸ್ಮಶಾನದಲ್ಲಿ ನಿನ್ನೆ ರಾತ್ರಿ ರಾಜು ಹಾಗೂ ವಿಕ್ರಮ್‌ ಎಂಬಿಬ್ಬರು ಕುಡಿಯಲು ತೆರಳಿದ್ದಾರೆ.

Shivamogga Police ಪಾನಮತ್ತರಾದ ಮೇಲೆ ಇಬ್ಬರ ನಡುವೆ ಜಗಳವಾಗಿದ್ದು, ಪರಸ್ಪರ ಹೊಡೆದಾಟವಾಗಿದೆ.
ಈ ವೇಳೆ ವಿಕ್ರಮ್‌ ರಾಜುವಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಆನಂತರ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sahyadri College ಸಹ್ಯಾದ್ರಿ ಕಾಲೇಜಿನ ಹಿಂಭಾಗ ಪ್ರದೇಶದಲ್ಲಿ ಗಾಂಜಾ ಮಾರಾಟ: ನಾಲ್ವರ ಬಂಧನ

0

Sahyadri College ಸಹ್ಯಾದ್ರಿ ಕಾಲೇಜ್ ಹಿಂಭಾಗದ ಚೌಡಮ್ಮ ದೇವಸ್ಥಾನದ ಹತ್ತಿರದ ಸೇತುವೆಯ ಮೇಲೆ ಮತ್ತೂರು ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜಯನಗರ ಪೊಲೀಸ್ ಠಾಣೆಯ ಪಿಐ ಸಿದ್ದೇಗೌಡ ಹೆಚ್.ಎಂ ಮತ್ತು ಸಿಇಎನ್ ಠಾಣೆಯ ಪಿಎಸ್ ಐ ಬಸವರಾಜ ಬಿರಾದಾರ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿತು.

Sahyadri College ದಾಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಭದ್ರಾವತಿಯ ತಡಸ ಗ್ರಾಮದ ಸೈಯದ್ ಸಲೇಹ @ ಸಾಲಿಯ @ ಸಾಲು, (28) , ಅನ್ವರ್ ಕಾಲ ನಿಯ ಮಹಮದ್ ಮುಸ್ತಪ @ ಸಮ್ಮು, (25 ), ನೆಹರುನಗರದ ಮುಬಾರಕ್ @ ಡಿಚ್ಚಿ, (27) , ಜಟ್ ಪಟ್ ನಗರದ ನ್ಯಾಮತ್ ಖಾನ್( 27 ) ಇವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಅಂದಾಜು ಮೌಲ್ಯ 1,35,000/- ರೂಗಳ 1 ಕೆಜಿ 65 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

Pages Softonis Digital Marketing Agency ಸಮಗ್ರ ಮಾಹಿತಿ‌ ನೀಡುವ ಧ್ಯೇಯ ಶಿವಮೊಗ್ಗ ಪೇಜಸ್ – ಆಶಾ

0

Pages Softonis Digital Marketing Agency ಪೇಜಸ್ ಸಾಫ್ಟೊನಿಸ್ ಎನ್ನುವುದು ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯಾಗಿದ್ದು, ಅಪ್ಲಿಕೇಶನ್ ಆಪ್ ಹೊಂದಿದೆ. ಇದು ಸ್ಟಾರ್ಟ್ಅಪ್ ಆಗಿದ್ದು ಶಿವಮೊಗ್ಗದಲ್ಲಿ ಕಚೇರಿಯನ್ನು ಹೊಂದಿದೆ. ಸದ್ಯದಲ್ಲೇ ಕರ್ನಾಟಕದ ಇತರ ನಗರಗಳಿಗೂ ವಿಸ್ತರಿಸಲಿದೆ. ಇದರ ಒಂದು ಉತ್ಪನ್ನ ಸಾಫ್ಟೊನಿಸ್ ಪೇಜಸ್ ಆಗಿದೆ.

ಇದು ಶಿವಮೊಗ್ಗ ನಗರಕ್ಕೆ ಪ್ರತ್ಯೇಕವಾದ “ಶಿವಮೊಗ್ಗ ಪೇಜಸ್ ಸಮಗ್ರ ಮಾಹಿತಿ ಬೆರಳತುದಿಯಲ್ಲಿ ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಆಶಾ ಹೇಳಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರವು ವಿಶ್ವಗ್ರಾಮದ ಅತಿಸಣ್ಣ ಭಾಗವೆಂದು ಪರಿಗಣಿಸಿರುವುದರಿಂದ ಎಲ್ಲಾ ಸಿಗುವಂತಾಗಬೇಕು. ಉದ್ಯಮಗಳನ್ನು ಡಿಜಿಟಲೈಸ್ ಮಾಡುವುದು. ಅದರ ಮೂಲಕ ಹೆಚ್ಚು ಜನರಿಗೆ ತಲುಪುವಂತೆ ಮಾಡುವುದು ಮತ್ತು ಹೆಚ್ಚು ಉದ್ಯಮ ಬೆಳೆಯುವಂತೆ ಮಾಡುವುದು ಉದ್ದೇಶವಾಗಿದೆ ಎಂದರು.

ಸಂಸ್ಥೆಯ ಧ್ಯೇಯ ವಾಕ್ಯ ರೀಚ್ ಮೋರ್ ಅರ್ನ್ ಮೋರ್ ಎನ್ನುವುದಾಗಿದೆ. ಸಾಫ್ಟೊನಿಸ್ ಫೇಜಸ್ ನಲ್ಲಿ ಶಿವಮೊಗ್ಗ ನಗರದ ಪ್ರತಿಯೊಂದು ಉದ್ಯಮ ಅಥವಾ ಸಂಸ್ಥೆಯ ಮೊಬೈಲ್ ಅಪ್ಲಿಕೇಶನ್ ಮೂಲಕ ಎಲ್ಲರಿಗೂ ತಲುಪುತ್ತದೆ. ಇದು ಪುಸ್ತಕ ತಿರುವಿದ ಅನುಭವ ನೀಡುತ್ತದೆ. ಇದರಲ್ಲಿ ಪರಿವಿಡಿ ಸಹ ಇರುತ್ತದೆ. ಜನರನ್ನು ತಮ್ಮತ್ತ ಸೆಳೆಯುವಂತೆ ಮಾಡುವ ಅವರ ಸಂಸ್ಥೆಯ, ಉದ್ಯಮದ ಅರ್ಧಪುಟಗಳಷ್ಟು ಜಾಹೀರಾತನ್ನು ಒಂದು ವರ್ಷ “ಸಾಫ್ಟೊನಿಸ್” ಉಚಿತವಾಗಿ ಪ್ರಕಟಿಸುತ್ತದೆ. ಅದರಲ್ಲಿ ಉದ್ಯಮದ, ಸಂಸ್ಥೆಯ ಹೆಸರು, ಭಾವಚಿ ಗೂಗಲ್ ಲೊಕೇಶನ್ ಮತ್ತು ಮೊಬೈಲ್ ನಂಬರ್ ಹಾಗೂ ಅವರು ನೀಡುವ ಜಾಹೀರಾತು ಸಹ ಇರುತ್ತದೆ. ಇದರ ಸಹಾಯದಿಂದ ಜನರು ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದರು.

ಸಂಸ್ಥೆಯ, ಉದ್ದಿಮೆಯ ಉತ್ಪನ್ನಗಳ ಅಥವಾ ಸೇವೆಗಳ ಜಾಹೀರಾತನ್ನು ಇಲ್ಲಿಯೇ ಬೇರೆ-ಬೇರೆ ಡಿಸ್ಕೌಂಟ್ ಆಫರ್‌ಗಳನ್ನು ನೋಡಿ ಜನರು ಇವರ ಮಳಿಗೆಗೆ ಭೇಟಿ ನೀಡಬಹುದಾಗಿದೆ. ಇದರಿಂದ ಬಿಸಿನೆಸ್ ಸಹ ಜಾಸ್ತಿಯಾಗುತ್ತದೆ. ಆರಂಭದಲ್ಲಿಯೇ “ಸಾಫ್ಟೊನಿಸ್ ಫೇಜಸ್ ನಲ್ಲಿ ಒಂದು ಪುಟದ ಜಾಹೀರಾತು ಬಯಸಿದರೆ ರಿಯಾಯಿತಿ ನೀಡಲಾಗುವುದು. ಉದ್ಯಮದ ವೀಡಿಯೋಗಳಿದ್ದರೆ ಅದರ ಜಾಹೀರಾತನ್ನೂ ನೀಡುತ್ತೇವೆ. ಬ್ಲಿಂಕ್ ಅಗುವ ಜಾಗದಲ್ಲಿ ಮಾಡಿದರೆ ಜಾಹೀರಾತಿನ ವೀಡಿಯೋ ಓಪನ್ ಆಗುತ್ತದೆ. ಈ ರೀತಿಯಾಗಿ ಜಾಹೀರಾತು ಜನಪ್ರಿಯವಾಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ಬಳಸಿಕೊಳ್ಳುತ್ತೇವೆ. ಶಿವಮೊಗ್ಗದಲ್ಲಿ ಗೂಗಲ್ ಅಥವಾ ಕ್ರೋಮ್ ಮೂಲಕ ಜನರ ಯಾವುದಕ್ಕಾದರೂ ಹುಡುಕಾಡಿದರೆ ಕಾಣುವಂತಹ ವ್ಯವಸ್ಥೆಯಾಗುತ್ತದೆ. “ಸಾಫೊನಿಸ್ ಫೇಜಸ್” ಪ್ರತಿದಿನವೂ ಅಪ್‌ಡೇಟ್ ಆಗುತ್ತಿರುತ್ತದೆ ಎಂದರು.

ಪೋಟೋ/ವೀಡಿಯೋಗ್ರಾಫರ್, ಕಾರ್ಪೆಂಟರ್, ಕಂಪ್ಯೂಟರ್ ಆಪರೇಟರ್, ಪ್ಲಂಬರ್ಸ್, ಎಲೆಕ್ನಿಷಿಯನ್, ಇತರರು ತಮ್ಮ ಹೆಸರು, ತಮ್ಮ ಕೆಲಸ, ಮೊಬೈಲ್ ನಂಬರ್, ವಿಳಾಸ ಮತ್ತು ಪೋಟೋವನ್ನು ನೀಡುವ ಮೂಲಕ ತಮ್ಮ ಹೆಸರನ್ನು ಸಾಫ್ಟೋನಿಕ್ ಪೇಜಿನಲ್ಲಿ ನೋಂದಾಯಿಸಿಕೊಳ್ಳಬಹುದು. ಅವರ ಅವಶ್ಯಕತೆ ಇರುವವರು ಅವರ ಮೊಬೈಲ್ ಮೂಲಕ ನೇರವಾಗಿ ಯಾವ ಮಧ್ಯವರ್ತಿಯ ಸಹಾಯವಿಲ್ಲದೇ ಪಡೆಯಬಹುದು.

Pages Softonis Digital Marketing Agency ಶಿವಮೊಗ್ಗ ನಗರದಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೇವೆಗಳ ಬಗ್ಗೆ ತಿಳಿಸುತ್ತದೆ. ಆಸ್ಪತ್ರೆಗಳು, ಆಂಬ್ಯೂಲೆನ್ಸ್, ಅಗ್ನಿಶಾಮಕದಳ, ಪೊಲೀಸ್ ಮುಂತಾದ ಅತ್ಯಾವಶ್ಯಕ ಸೇವೆಗಳ ಸಂಪರ್ಕ ಸಂಖ್ಯೆ ಮತ್ತು ಮಾಹಿತಿಯನ್ನು ಹೊಂದಿರುತ್ತದೆ.
ಶಿವಮೊಗ್ಗದಲ್ಲಿ ಉದ್ಯಮ/ಸಂಸ್ಥೆ ಹೊಂದಿರುವವರು ತಮಗೆ ಬೇಕಾದ ಕೆಲಸಗಾರರ ಮಾಹಿತಿಯನ್ನು ಸಾಫ್ಟೊನಿಸ್ ಪೇಜಸ್’ನಲ್ಲಿ ಇರುವ ಗೂಗಲ್ ಫಾರಂ ಭರ್ತಿ ಮಾಡಿ ಕಳುಹಿಸುವ ಮೂಲಕ ಇಲ್ಲಿ ಉಚಿತವಾಗಿ ನೀಡಬಹುದು. ಅದನ್ನು ನೋಡಿದ ಜನರು ತಮ್ಮ ನೌಕರಿಗಾಗಿ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೇ ಕೆಲಸದ ಜಾಹೀರಾತು ನೀಡಿದ ಸ೦ಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 8431122691 ಸಂಪರ್ಕಿಸಬಹುದು.

Klive Special Article ರಂಗ ಸಮೀಕ್ಷೆ ಗೋರ್ಮಾಟಿ

0

ಲೇ. ನಾಗೇಂದ್ರ.ಪತ್ರಕರ್ತರು.ಶಿವಮೊಗ್ಗ

Klive Special Article ಸ್ನೇಹಿತ್ರೆ, ಭಾನುವಾರ ಸಂಜೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗದ ನೇಟಿವ್ ಥಿಯೇಟರ್ ಸಂಸ್ಥೆ ಹಾಗೂ ಮೈಸೂರು ರಂಗಾಯಣ ರೆಪೆರ್ಟರಿ ಪ್ರಯೋಗಿಸಿದ ನಾಟಕವೇ ‘ಗೋರ್ ಮಾಟಿ’, ಇದು ಬರೀ ನಾಟಕವಾಗಿರದೇ ಬಂಜಾರರ ಐತಿಹಾಸಿಕ ಹಿನ್ನೆಲೆ, ಕಲೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಚರಣೆ, ಸಂಪ್ರದಾಯ, ಆಚಾರ-ವಿಚಾರ, ಬದುಕು-ಭವಣೆಗಳ ಸಂಕಥನವಾಗಿರುವುದು ವಿಶೇಷ.

ಸಿ.ಬಸವಲಿಂಗಯ್ಯನವರ ಪರಿಕಲ್ಪನೆ, ಸಂಗೀತ, ನಿರ್ದೇಶನದೊಂದಿಗೆ, ಡಾ.ಶಿರಗಾನಹಳ್ಳಿ ಶಾಂತನಾಯಕ್ ರವರ ನಾಟಕ/ರಂಗರೂಪದೊಂದಿಗೆ, ನಂದಿನಿ.ಕೆ.ಆರ್ ರವರ ಸಹ ನಿರ್ದೇಶನ ಮತ್ತು ರಂಗಪಠ್ಯದೊಂದಿಗೆ, ಗೀತಾ ಮೋoಟಡ್ಕರವರ ರಂಗ ನಿರ್ವಹಣೆಯೊಂದಿಗೆ ನಾಟಕವು ಬಲು ಸೊಗಸಾಗಿ ಮೂಡಿ ಬಂದಿತು. ಈ ನಾಟಕದಲ್ಲಿ ಶಾಂತನಾಯಕ್ ರವರ ‘ಗೋರ್ ಮಾಟಿ’ ಕಾದಂಬರಿಯ ಕೆಲವು ಅಧ್ಯಾಯಗಳನ್ನು ಹಾಗೂ ಬಿ.ಟಿ.ಲಲಿತಾನಾಯಕ್ ರವರ ‘ತಾಂಡಾಯಣ’ ಮತ್ತು ‘ಹಬ್ಬ ಮತ್ತು ಬಲಿ’ ಸಣ್ಣ ಕಥೆಗಳ ಜೊತೆಗೆ ಚರಿತ್ರೆಯಲ್ಲಿ ಮುಖ್ಯವಾಗಿರುವ ಲಕ್ಕಿಸಾ ಬಂಜಾರ ಹಾಗೂ ವಸಾಹತುಶಾಹಿಯಡಿಯಲ್ಲಿ ಬಂಜಾರರ ದಮನಿತ ಸಂಕಥನಗಳನ್ನು ಹಾಗೂ ಸಂತ ಸೇವಾಲಾಲರ ಧರ್ಮ ಬೋಧನೆಯ ಅಂಶಗಳನ್ನು ಬೆಸೆಲಾಗಿದೆ.

‘ಗೋರ್ ಮಾಟಿ’ ಎಂದರೆ ನಮ್ಮವರು ಎನ್ನುವ ಒಳಗೊಳ್ಳುವಿಕೆಯ ಅರ್ಥದ ಹಿನ್ನೆಲೆಯಲ್ಲಿ ಬಳಸಲಾಗಿದ್ದು, ಸುಮಾರು 2 ಗಂಟೆ 15 ನಿಮಿಷಗಳ ಈ ನಾಟಕವು ಕೃಷ್ಣನ ಗೊಲ್ಲ ಕಥೆಯಿಂದ ಹಿಡಿದು ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಅಕ್ಷರಸ್ಥ ಬಂಜಾರರ ಬದುಕಿನವರೆಗೂ ಪ್ರೇಕ್ಷಕರನ್ನು ಎಲ್ಲಿಯೂ ಅಲುಗಾಡದಂತೆ ಹಿಡಿದಿಟ್ಟುಬಿಡುತ್ತದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹರಡಿಕೊಂಡಿರುವ ಬಂಜಾರ ಅಲೆಮಾರಿ ಬುಡಕಟ್ಟು ಸಮುದಾಯವು ಹೇಗೆ ಅನೇಕ ಶತಮಾನಗಳ ಹೋರಾಟದಿಂದ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡಿತು ಎಂಬುವ ದೃಶ್ಯರೂಪ ಈ ಸಂಕಥನದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ.

“ಜನನ ಮರಣಗಳ ವೃತ್ತಾಕಾರ” ಎಂಬ ಹಾಡಿನಿಂದ ಪ್ರಾರಂಭವಾಗುವ ಈ ನಾಟಕವು ಚಾರ್ಲಿ ಚಾಪ್ಲಿನ್ ನಂತಹ ಮೇರು ನಟರೂ ಸಹ ಬಂಜಾರ ಸಮುದಾಯದವರೇ ಎಂದು ತೋರಿಸುತ್ತದೆ. ಹಾಡಿನ ನಂತರ ಕೃಷ್ಣನ ಗೊಲ್ಲ ಕಥೆಯಲ್ಲಿ ಒಂದು ಅದ್ಭುತವಾದ ಡೈಲಾಗ್ ಬರುತ್ತೆ. “ಜಗದೋದ್ಧಾರದ ಕಾಯಕದಲ್ಲಿ ಜನಾಂಗಗಳು ಜಾತಿಗಳಾಗದೇ ಜಗದ ಜ್ಯೋತಿಗಳಾಗಲಿ…..” ಎಂದು. ಭವಿಷ್ಯಃ ಈ ಕೃಷ್ಣ ವಾಣಿಯು ಪ್ರಪಂಚದ ಎಲ್ಲಾ ಜಾತಿ-ಜನಾಂಗಗಳಿಗೂ, ಇಡೀ ಮಾನವ ಕುಲಕ್ಕೂ ಎಂದೆಂದಿಗೂ ಅನ್ವಯವಾಗುವ ವಾಣಿ.

ತದನಂತರ ಲಕ್ಕಿಸಾ ಬಂಜಾರರ ಇತಿಹಾಸ ಹಾಗೂ ಸಿಕ್ಕರ ಇತಿಹಾಸವನ್ನೂ ಈ ರಂಗರೂಪಕದಲ್ಲಿ ಹಾಡು ಹಾಗೂ ನೃತ್ಯಗಳ ಮೂಲಕ, ವಿಶೇಷವಾಗಿ ಪರದೆಯ ಮೇಲೆ ಗೊಂಬೆಗಳ ನೆರಳಿನ ಆಟದೊಂದಿಗೆ ತೋರಿಸಿರುವುದು ಅತ್ಯಂತ ಕ್ರಿಯಾತ್ಮಕ ಸಂಗತಿಯಾಗಿದೆ. ತದನಂತರ ನಿಧಾನವಾಗಿ ಬಂಜಾರರ ಮಕ್ಕಳು ಶಾಲೆಗೆ ಹೋಗಿ ಅಕ್ಷರಭ್ಯಾಸ ನಡೆಸುವ ಸಂದರ್ಭದಲ್ಲಿ ವಿದ್ಯಾಭ್ಯಾಸವನ್ನು ನಡೆಸಬಾರದು ಎಂದು ತಾಂಡಾದ ನಾಯಕರು ಬಂದೂಕಿನಿಂದ ಹೆದರಿಸಿ ಬಂಜಾರ ಸಮುದಾಯವು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗುವ ಇತಿಹಾಸದ ಹಿನ್ನೆಲೆ ಹಾಗೂ ಇದರ ತತ್ಪರಿಣಾಮವಾಗಿ ಬಂಜಾರರ ಮೇಲೆ ಬ್ರಿಟಿಷರ ದಬ್ಬಾಳಿಕೆ, ಬ್ರಿಟಿಷ್ ಸರ್ಕಾರದ ಕಂದಾಯ ಇಲಾಖೆಯಿಂದ ಬರುವ ಪತ್ರ, ಅಕ್ಷರ ಜ್ಞಾನವಿಲ್ಲದೆ ಅದನ್ನು ಓದಲೂ ಆಗದೇ ಹೆಣಗಾಡುವ ಬಂಜಾರರ ಪರಿಸ್ಥಿತಿ, ತಾಂಡಾದಲ್ಲಿರುವ ಅಕ್ಷರಸ್ಥ ತುಳಸಿರಾಮನ ಸಹಾಯ ಪಡೆದು ಪತ್ರದಲ್ಲಿ ಬಂಜಾರ ಸಮುದಾಯ ಬದುಕುತ್ತಿರುವ ನೂರು ಎಕರೆ ಭೂಮಿಯೂ ಸರ್ಕಾರದ ವಶವಾಗಿರುವ ಆಘಾತಕಾರಿ ಸಂಗತಿ, ಮತ್ತೆ ಬಂಜಾರರು ನೆಲೆಯಿಲ್ಲದೆ ಹೆಣಗಾಡುವ ರೀತಿ ಈ ಎಲ್ಲಾ ದೃಶ್ಯ ರೂಪಕಗಳನ್ನು ನಾಟಕದಲ್ಲಿ ನೋಡುವಾಗ ಅನಿಸಿದ್ದು, “ಇಷ್ಟೆಲ್ಲಾ ಬವಣೆಗಳನ್ನು ಅನುಭವಿಸಿದ ಬಂಜಾರ ಸಂಸ್ಕೃತಿಯನ್ನು ಅದು ಹೇಗೆ ಇತಿಹಾಸ ಮರೆತುಬಿಟ್ಟಿದೆ” ಎಂದು.

ಇದರ ನಂತರ ಬಂಜಾರರ ಅತಿ ಮುಖ್ಯವಾದ ಐತಿಹಾಸಿಕ ಚರಿತ್ರೆಯಾದ ಸಂತ ಸೇವಾಲಾಲರ ಚರಿತ್ರೆ ಹಾಗೂ ಬಂಜಾರರ ರಕ್ಷಣೆಗಾಗಿ ಸಂತ ಸೇವಾಲಾಲರು ಆಜನ್ಮ ಬ್ರಹ್ಮಚಾರಿಯಾದ ಕಥೆಯನ್ನು ನೃತ್ಯ-ಲಾವಣಿಗಳಲ್ಲಿ ತೋರಿಸಿರುವುದಂತೂ ಬಲು ರೋಚಕವಾಗಿದೆ. ಆಹಾರ ಪದಾರ್ಥ, ಧವಸ-ಧಾನ್ಯ, ಅಕ್ಕಿ, ಉಪ್ಪು, ಯುದ್ಧ ಸಾಮಗ್ರಿಗಳನ್ನು ಸಾಗಿಸುವ ವ್ಯಾಪಾರಿ ಪ್ರವೃತ್ತಿಯುಳ್ಳ ಬಂಜಾರರು ಎಲ್ಲಿ ಸಿಗುತ್ತದೆಯೋ ಅಲ್ಲಿಯೇ ತಮ್ಮ ತಾಂಡಾಗಳನ್ನು ಹೂಡುತ್ತಿದ್ದರು. ಕಾಲಕ್ರಮೇಣ ವಿದ್ಯಾಭ್ಯಾಸವನ್ನು ಪಡೆದು ಅಕ್ಷರಾಭ್ಯಾಸವನ್ನು ಕಲಿತ ಬಂಜಾರರು ತಮ್ಮ ಸ್ವಂತ ತಾಂಡಾಗಳನ್ನು ಪಡೆದು ಕೃಷಿ-ಪಶುಸಂಗೋಪನೆ ಪ್ರಾರಂಭಿಸಿದರು. ಆದರೂ ಭೂ ಮಾಲೀಕರು, ಆಳುವ ವರ್ಗ, ಗೂಂಡಾಗಳು, ಬ್ರಿಟಿಷ್ ಸರ್ಕಾರ ಕೊಡುವ ಕಿರುಕುಳ, ದಬ್ಬಾಳಿಕೆಗಳಿಂದ ಸಮಾಜದಲ್ಲಿ ಜೀತದಾಳು ಪದ್ಧತಿಯ ಭೀಕರತೆಯನ್ನು ಸಹ ಅತ್ಯಂತ ಅಚ್ಚುಕಟ್ಟಾಗಿ ಇಲ್ಲಿ ತೋರಿಸಲಾಗಿದೆ.

Klive Special Article ಇದರ ನಂತರ ಹುಡುಗನಿಗೆ ಮದುವೆಯಾಗಿ ಮಕ್ಕಳಿದ್ದರೂ ಸಹ ಅದೇ ತಾಂಡಾದ ಮತ್ತೊರ್ವ ಕನ್ಯೆ ಹುಡುಗನನ್ನು ನೋಡಿ ಪ್ರೇಮಿಸುವುದು, ಇದಕ್ಕೆ ಸಮಾಜದ ವಿರೋಧ, ಪಂಚಾಯಿತಿಯಲ್ಲಿ ಅವರು ಒಟ್ಟಿಗೆ ಬದುಕಲು ಸಿಗುವ ಸಮ್ಮತಿ ಇವೆಲ್ಲವೂ ಸಹ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಳ್ಳುತ್ತವೆ.

ಇನ್ನೂ ಬರೆಯುತ್ತಾ ಹೋದರೆ ಸಾಕಷ್ಟಿದೆ ಈ ನಾಟಕದ ಬಗ್ಗೆ, ನಾಟಕದ ಕೊನೆಯಲ್ಲಿ ಪ್ರಸ್ತುತ ತಾಂಡಾಗಳಿಂದ ಹೊರ ಬರುತ್ತಿರುವ ಅಕ್ಷರಸ್ಥ ಬಂಜಾರರು ನಗರಗಳಲ್ಲಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುತ್ತಿರುವ ದೃಶ್ಯ ಕಂಡುಬರುತ್ತದೆ. ಹಾಗೆಯೇ ಬಂಜಾರರನ್ನು ಇತಿಹಾಸ ಹೇಗೆ ಮರೆಯಿತು ಎಂಬ ಪ್ರಶ್ನೆಗೆ ಇತಿಹಾಸ ಇನ್ನೂ ಅವರನ್ನು ಮರೆತಿಲ್ಲ ಎಂಬ ಉತ್ತರ ಈ ಮುಂದಿನ ಸಾಲುಗಳಲ್ಲಿ ಸಿಕ್ಕಿತು. “ಭವಿಷ್ಯಃ ಶತಶತಮಾನಗಳಿಂದ ಅನುಭವಿಸಿದ ಬವಣೆಗಳು, ಸಂಕಟಗಳು, ದಬ್ಬಾಳಿಕೆಗಳು, ಕಷ್ಟಗಳನ್ನು ಮೆಟ್ಟಿ ಇಂದಿಗೂ ಗಟ್ಟಿಯಾಗಿ ನಿಂತಿರುವ ಬಂಜಾರ ಸಮುದಾಯದ ಸಾಂಸ್ಕೃತಿಕ ಪರಂಪರೆಗೆ, ಅವರ ಕರಕುಶಲತೆಗೆ 2023 ರಲ್ಲಿ ಹಂಪಿಯಲ್ಲಿ ನಡೆದ G-20 ಶೃಂಗಸಭೆಯಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಜಾಗ ಸಿಗುವ ಮುಖಾಂತರ ಬಂಜಾರ ಸಂಸ್ಕೃತಿಗೆ ಜಾಗತಿಕ ಮನ್ನಣೆ ಸಿಕ್ಕಿರುವುದು ಇವೆಲ್ಲದರ ಫಲಶ್ರುತಿ ಎಂಬುದು ಸುಳ್ಳಲ್ಲ”, ಈ ಅದ್ಬುತ ನಾಟಕದಿಂದ ಬಂಜಾರ ಸಂಸ್ಕೃತಿಯ ಬಗ್ಗೆ ಕೇವಲ ಎರಡು ಗಂಟೆಗಳಲ್ಲಿ ಆಳವಾದ ಅಧ್ಯಯನ ಮಾಡಲು ಸಾಧ್ಯವಾಯಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಚಿತ್ರಕೃಪೆ : ಸ್ಪಂದನ ಚಂದ್ರು, ಶಿವಮೊಗ್ಗ.

ಬರಹ : ನಾಗೇಂದ್ರ.ಟಿ.ಆರ್, ಪತ್ರಕರ್ತರು, ಶಿವಮೊಗ್ಗ.
6362570396

B.S.Yediyurappa ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರಿಗೆ‌ ಜನರು ತಕ್ಕ‌ಪಾಠ ಕಲಿಸಲಿದ್ದಾರೆ- ಬಿಎಸ್ ವೈ

0

B.S. Yediyurappa ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿ-2012) ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಮಾರ್ಚ್ 14 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕನನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸಿಐಡಿಗೆ ತಡೆಯಾಜ್ಞೆ ನೀಡಿದೆ.
ಪೋಲೀಸ್ ದೂರಿನ ಪ್ರಕಾರ, ಯಡಿಯೂರಪ್ಪ ವಿರುದ್ಧ 17 ವಯಸ್ಸಿನ ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ 2012 ರ B.S. Yediyurappa ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವರ್ಷದ ಫೆಬ್ರವರಿ ಎರಡರಂದು ಇಲ್ಲಿನ ಡಾಲರ್ಸ್ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ತನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದರು.
ಯಡಿಯೂರಪ್ಪ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

M.B. Bhanuprakash ಅಗಲಿದ ಭಾನುಪ್ರಕಾಶ್ ಗೆಬಿ.ವೈ.ವಿಜಯೇಂದ್ರ ಶೋಕ

0

M.B. Bhanuprakash ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (68 ವರ್ಷ) ಅವರ ನಿಧನ ಅತ್ಯಂತ ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ನಮ್ಮೆಲ್ಲ ಹಿರಿಯರು, ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು, ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಹಾಗೂ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು ಎಂದು ತಿಳಿಸಿದ್ದಾರೆ.

M.B. Bhanuprakash ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Shivamogga Talent Festival ಶಿವಮೊಗ್ಗದಲ್ಲಿ ಟ್ಯಾಲೆಂಟ್ ಫೆಸ್ಟಿವಲ್

0

Shivamogga Talent Festival ಶಿವಮೊಗ್ಗ ನಗರದ ರಾಯಲ್ ಆರ್ಕೆಡ್ ಸೆಂಟ್ರಲ್ ಹೊಟೆಲಿನಲ್ಲಿ ಶಿವಮೊಗ್ಗ ಟ್ಯಾಲೆಂಟ್ ಫೆಸ್ಟಿವಲ್‌ನ್ನು ಜೂನ್ 23ರಂದು ಸಂಜೆ 4ರಿಂದ 7ರವರೆಗೆ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೃತ್ಯ ನಿರ್ದೇಶಕ ಶಶಿಕುಮಾರ್, ನಗರದ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯ ಅವಕಾಶ ನೀಡಿ ಅವರಲ್ಲಿ ಆತ್ಮವಿಶ್ವಾಸ, ಪ್ರೋತ್ಸಾಹ, ಉತ್ಸಾಹ ನೀಡುವುದು ರಾಯಲ್ ಆರ್ಕೆಡ್ ಸಂಸ್ಥೆಯ ಉದ್ದೇಶವಾಗಿದೆ. ಎಲ್ಲಾ ರೀತಿಯ ಗುಂಪು ನೃತ್ಯ ಅಥವಾ ಸೋಲೋ ನೃತ್ಯ, ನಾಟಕ, ಸ್ಟ್ಯಾಂಡ್ ಅಪ್ ಕಾಮಿಡಿ, ವಾದ್ಯ ನುಡಿಸುವುದು. ಸಂಗೀತ, ಕರಾಟೆ, ಜಿಮ್ಯಾಸ್ಟಿಕ್ಸ್, ಯೋಗಾಸನ, ಚಿತ್ರಕಲೆ, ನಿರೂಪಣೆ, ಕರೋಕೆ ಗೀತೆ ಹಾಡುಗಾರಿಕೆ, ಭರತನಾಟ್ಯ, ಏಕಿಪಾತ್ರಾಭಿನಯ, Shivamogga Talent Festival ಮಿಮಿಕ್ರಿ ಇತರೆ ಯಾವುದೇ ಪ್ರತಿಭೆ ಇದ್ದರೂ ಗುಂಪು ಅಥವಾ ಏಕೀಯವಾಗಿ ಭಾಗವಹಿಸಲು ಅವಕಾಶವಿದೆ ಎಂದರು.
ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟಡಿಯೋ, ಲಕ್ಷ್ಮಿ ಗೆಲಾಕ್ಸಿ ಕಾಂಪ್ಲೆಕ್ಸ್, 3 ನೇ ಮಹಡಿ, ಗೋಪಿಸರ್ಕಲ್, ಶಿವಮೊಗ್ಗ ಇಲ್ಲಿ ಅಥವಾ ರಾಯಲ್ ಆರ್ಕೆಡ್ ಸೆಂಟ್ರಲ್‌ನಲ್ಲಿ ಹೆಸರನ್ನುನು ನೊಂದಾಯಿಸಬಹುದು. ಕಾರ್ಯಕ್ರಮದ ಸ್ಥಳದಲ್ಲಿಯೂ ಅಂದು ಹೆಸರು ನೊಂದಾಯಿಸಬಹುದು. ಪ್ರವೇಶ ಶುಲ್ಕ ೫೯೯ ರೂ. ಆಗಿರುತ್ತದೆ. ವಿಜೇತರಿಗೆ ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ, ಡಿನ್ನರ್, ನೀಡಲಾಗುವುದು. ) ಸಾರ್ವಜನಿಕರಿಗೆ, ಪೋಷಕರಿಗೆ ರೂ. 399 ಪ್ರವೇಶ ಶುಲ್ಕವಿದೆ. ಡಿನ್ನರ್ ನೀಡಲಾಗುವುದು. ವಯಸ್ಸಿನ ಮಿತಿಯಿಲ್ಲ. 2 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು ಎಂದರು.

M.B. Bhanuprakash ಶಿವಮೊಗ್ಗ ಬಿಜೆಪಿ” ಭಾನು”ಅಸ್ತಂಗತ

0

M.B. Bhanuprakash ಮಾಜಿ ಬಿಜೆಪಿ ಎಂಎಲ್ಸಿ ಎಂಬಿ ಭಾನುಪ್ರಕಾಶ್(69)ಹಠಾತ್ ಹೃದಯಘಾತದಿಂದ ನಿಧನರಾಗಿದ್ದಾರೆ ‌.

ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ
ಬೈಕ್ ಅಣಕು ಪ್ರದರ್ಶನದಲ್ಲಿ ಕೂಡ ಭಾಗಿಯಾಗಿದ್ದರು.

ಪ್ರತಿಭಟನೆ ಮುಗಿಸಿ ಪಕ್ಷದ ಕಚೇರಿಗೆ ಭೇಟಿ ನೀಡುವ ವೇಳೆ ಹೃದಯಘಾತ ಸಂಭವಿಸಿದ್ದು,
ಖಾಸಗಿ ಆಸ್ಪತ್ರೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ನಿಧನ‌ ಹೊಂದಿದ್ದಾರೆ.

2013 ರಿಂದ 2019ರ ತನಕರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ
ಇವರು ಇದಕ್ಕೂ ಮೊದಲು ಜಿಲ್ಲಾ ಪಂಚಾಯತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

M.B. Bhanuprakash ಬಿಜೆಪಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷದ ಕಾರ್ಯ ನಿರ್ವಹಿಸಿದ್ದ ಭಾನು ಪ್ರಕಾಶ್ ಅವರುಸಂಘ ಪರಿವಾರದ ಹಿನ್ನೆಲೆಯಲ್ಲಿ ಪ್ರಸ್ತುತ ನಾಲ್ಕು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.