Sunday, April 12, 2026
Sunday, April 12, 2026
Home Blog Page 686

Nityotsava Seva Trust ದಂಪತಿಗಳು ಪರಸ್ಪರ ಕಷ್ಟ ಹಂಚಿಕೊಳ್ಳಬೇಕು-ಉಳ್ಳಿ ದರ್ಶನ್

0

Nityotsava Seva Trust ಜೀವನದಲ್ಲಿ ಎದುರಾಗುವ ಕಷ್ಟ ಸುಖ ಸಮಾನವಾಗಿ ಸ್ವೀಕರಿಸಿದಾಗ ದಂಪತಿ ಅರ್ಥಪೂರ್ಣ ಜೀವನ ನಡೆಸಬಹುದು ಎಂದು ಪುರಸಭೆ ಸದಸ್ಯ ಉಳ್ಳಿ ದರ್ಶನ್ ಹೇಳಿದರು.

ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಅಂಬೇಡ್ಕರ್, ಬಸವೇಶ್ವರ ಜಯಂತಿ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ನಿತ್ಯೋತ್ಸವ ಸೇವಾ ಟ್ರಸ್ಟ್, ಆಶ್ರಿತ ಪೌಂಡೇಶನ್ ಆಶ್ರಯದಲ್ಲಿ ನಡೆದ 6ನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ವಿವಾಹ ಬಂಧನ ಗಟ್ಟಿಯಾಗಿ ನಿಲ್ಲುತ್ತಿಲ್ಲ ಅದಕ್ಕೆ ಗಂಡ ಹೆಂಡತಿಯಲ್ಲಿ ಪರಸ್ಪರ ಅರಿವಿನ ಕೊರತೆ ಸಿಟ್ಟಿಗೆ ಬುದ್ಧಿಕೊಡುವುದು ಕಾರಣವಾಗಿದೆ. ದಾಂಪತ್ಯ ಜೀವನದಲ್ಲಿ ಏನೇ ಕಷ್ಟ ಸುಖ ಬಂದರೂ ಸಮಾನವಾಗಿ ನೋಡುವ ಅರಿವು ಇಬ್ಬರಿಗೂ ಬರಬೇಕಿದೆ ಅದಕ್ಕಾಗಿ ಕೂತು ಮಾತನಾಡುವ ಕಷ್ಟ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಪಾಪಯ್ಯ ಮಾತನಾಡಿ, ವಿವಾಹ ಕಾರ್‍ಯ ಇಂದು ಪರಸ್ಪರ ಎರಡು ಕುಟುಂಬ ಕೂಡಿಸುವ ಕಾರ್‍ಯಕ್ರಮ ಆಗಬೇಕು ಬದಲಿಗೆ ಅದು ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಸೀಮಿತವಾಗುತ್ತಿದೆ ಅದಕ್ಕಾಗಿ ದುಂದುವೆಚ್ಚ ಮಾಡಲಾಗುತ್ತಿದೆ. ಪ್ರೀತಿಸಿದ ಯುವ ಮನಸ್ಸುಗಳೆ ಇಂದು ಹೆಚ್ಚು ದೂರವಾಗುತ್ತಿರುವುದು ಕಳವಳಕಾರಿ. ಸರಳ ಸಾಮೂಹಿಕ ವಿವಾಹ ಮಾದರಿಯಾಗಬೇಕಿದೆ ವಿವಾಹ ಕಾರ್‍ಯದಲ್ಲಿ ಮನಸ್ಸು ಬೆಸೆಯುವ, ಕುಟುಂಬ ಅಥೈಸುವ ಕಾರ್‍ಯ ನಡೆಯಬೇಕಿದೆ ಅದಕ್ಕೆ ಈ ಕಾರ್‍ಯಕ್ರಮ ನಾದಿಯಾಗಲಿ ಎಂದು ಹೇಳಿದರು.

Nityotsava Seva Trust ನಿತ್ಯೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಚುರ್ಚಿಗುಂಡಿ ಜಗದೀಶ್ ಮಾತನಾಡಿ, ಆಧುನಿಕ ವಿವಾಹ ಕಾರ್‍ಯಕ್ರಮ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಾಲ ಮಾಡಿ ತುಪ್ಪು ತಿನ್ನುವುದು ಹೆಚ್ಚುತ್ತಿದೆ ಅದನ್ನು ತಪ್ಪಿಸಿ ದಲಿತ, ಹಿಂದುಳಿದ ಕುಟುಂಬಕ್ಕೆ ಆರ್ಥಿಕ ಹೊರೆ ತಪ್ಪಿಸುವುದಕ್ಕಾಗಿ ಸರಳ ಸಾಮೂಹಿಕ ವಿವಾಹ ನಡೆಸುತ್ತಿದ್ದು ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗಬೇಕು ಅದಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಂಜುಂಡಿ, ಜನಜಾಗೃತಿ ವೇದಿಕೆ ಸದಸ್ಯ ಸುನಿತಾ, ಕಟ್ಟಡ ಕಾರ್ಮಿಕ ಸಂಘಟನೆ ಅಧ್ಯಕ್ಷ ಸಂಜಯ್‌ಕುಮಾರ್, ಹನುಮಂತಪ್ಪ, ಲಕ್ಷ್ಮಣ್, ಪರಮೇಶ್, ತಿಮ್ಮಪ್ಪ, ಹಾಲಪ್ಪ ಹಾಬೆ ಇತರರಿದ್ದರು.

Bakrid festival ಪರರಿಗೆ ತೊಂದರೆ ನೀಡದಂತೆ ಸಂಕಷ್ಟದವರಿಗೆ ದಾನಧರ್ಮ ಮಾಡಿ-ಮೌಲಾನಾ ಮಹಮ್ಮದ್ ನಿಜಾಮುದ್ದೀನ್

0

Bakrid festival ಪವಿತ್ರ ಕುರಾನ್ ಹೇಳಿರುವಂತೆ ಬಕ್ರೀದ್ ಹಬ್ಬದ ಸಂಕೇತವೇ ತ್ಯಾಗದ ಸಂದೇಶವಾಗಿದೆ. ಪರರಿಗೆ ತೊಂದರೆ ನೀಡದಂತೆ ಸಂಕಷ್ಟದಲ್ಲಿರುವ ಜನರಿಗೆ ದಾನ ಧರ್ಮ ಮಾಡಿ ಕುರ್ಬಾನ್ ಆಚರಿಸಬೇಕೆಂಬುದೇ ಆಗಿದೆ. ಇದನ್ನು ಪ್ರತಿಯೊಬ್ಬರು ಅನುಸರಿಸಿದಾಗ ಮಾತ್ರ ಮುಸ್ಲಿಂ ಧರ್ಮಕ್ಕೆ ಗೌರವ ಲಭಿಸುತ್ತದೆ ಎಂದು ಸಾದಾತ್ ಕಾಲೋನಿ ಮಸೀದಿ ಆಲ್ಹಾ ಹಜರತ್ ಮೌಲಾನಾ ಮಹಮ್ಮದ್ ನಿಜಾಮುದ್ದೀನ್ ರಜ್ವೀ ಹೇಳಿದರು.

ಅವರು ತರೀಕೆರೆ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಮೂಹ ಪ್ರಾರ್ಥನೆ ಸಂದರ್ಭದಲ್ಲಿ ಮೌಲಾನ ಸಂದೇಶ ನೀಡಿ ಎಲ್ಲಾ ಧರ್ಮಗಳ ಸಾರವೂ ಒಂದೇ ಶಾಂತಿ ನೆಮ್ಮದಿ ಪರಸ್ಪರ ಪ್ರೀತಿ ಪ್ರೇಮದಿಂದ ಬಾಳ್ವೆ ನಡೆಸುವುದೇ ಆಗಿದೆ. ಎಲ್ಲರೂ ಅದರ ತಳಹದಿಯಲ್ಲಿ ಸೋದರತೆ ಮೆರೆದು ಬಾಳೋಣವೆಂದರು.
ತಾಲೂಕು ಅಂಜಮಾನ್ ಕಮಿಟಿ ಅಧ್ಯಕ್ಷ ಮುರ್ತುಜಾಖಾನ್, ಕಾರ್ಯದರ್ಶಿ ಅಬ್ದುಲ್ ಖಾದರ್ ಮತ್ತು ಪದಾಧಿಕಾರಿಗಳು ಮುಸ್ಲಿಂ ಧರ್ಮದ ಅನೇಕ ಮುಖಂಡರು ಭಾಗವಹಿಸಿದ್ದರು.

Bakrid festival ಸಮೂಹ ಪ್ರಾರ್ಥನೆ ಮುಗಿದ ನಂತರ ಪರಸ್ಪರ ಆಲಿಂಗನ ಮಾಡಿಕೊಂಡರು ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಮಂತ್ರಿ ಸಿ.ಎಂ.ಇಬ್ರಾಹಿಂ, ಶಾಸಕ ಬಿ.ಕೆ.ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ಮಾಜಿ ಉಪ ಮೇಯರ್ ಮಹಮ್ಮದ್ ಸನಾವುಲ್ಲಾ ಮುಂತಾದವರು ಕಳಿಸಿಕೊಟ್ಟಿದ್ದ ಶುಭ ಸಂದೇಶವನ್ನು ಅಬ್ದುಲ್ ಖಾದರ್ ಓದಿದರು.

Klive Special Article ಇದು ನಿಜವೆ? ಸದ್ಯ ಪರಾಮರ್ಶೆಯ ಸಂಗತಿ

0

ಲೇ.
ನವೀನ್ ಸೂರಿಂಜೆ.

Klive Special Article ಘಟಿಕೋತ್ಸವದಲ್ಲಿ “ರಾಜ್ಯಪಾಲರ ದರ್ಬಾರ್ ಮತ್ತು ಉಪಕುಲಪತಿಗಳ ಕಣ್ಣೀರಿನ” ಹಿಂದೆ ಬೇರೆಯದ್ದೇ ಕತೆ ಇದೆ. ಸಹಜವಾಗಿ ಮೃದು ಸ್ವಭಾವದವರಾಗಿರುವ ರಾಜ್ಯಪಾಲರು ಈ ಒಂದು ವಿವಿ ಘಟಿಕೋತ್ಸವದಲ್ಲಿ ಮಾತ್ರ ಯಾಕೆ ಹೀಗೆ ‘ರೂಡ್’ ಆಗಿ ನಡೆದುಕೊಂಡರು ಎಂಬುದಕ್ಕೆ ಬಲವಾದ ಕಾರಣ ಇದೆ.

ಇದೊಂದು ಆಫ್ ದಿ ರೆಕಾರ್ಡ್ ಕಥೆ. ಯೂನಿವರ್ಸಿಟಿಗೆ ಉಪಕುಲಪತಿ ನೇಮಕ ಮಾಡಲು ರಾಜ್ಯ ಸರ್ಕಾರವು ಪ್ರೊ ಮುಜಾಫರ್ ಅಸಾದಿ ಹೆಸರನ್ನು ಅಂತಿಮಗೊಳಿಸಿ ಕಡತವನ್ನು ರಾಜಭವನಕ್ಕೆ ಕಳುಹಿಸಿತ್ತು. ಎಲ್ಲಾ ರೀತಿಯಿಂದಲೂ ಮುಜಾಫರ್ ಅಸಾದಿಯವರು ಉಪಕುಲಪತಿ ಹುದ್ದೆಗೆ ಅರ್ಹರಾಗಿದ್ದರು.

ಮುಜಾಫರ್ ಅಸಾದಿಯವರ ಹೆಸರಿನ ಕಡತ ರಾಜಭವನಕ್ಕೆ ಹೋಗುತ್ತಿದ್ದಂತೆ ‘ಧರ್ಮ’ಕ್ಕಾಗಿ ಹೋರಾಡುತ್ತಿರುವ ಬಿಜೆಪಿ/ಆರ್ ಎಸ್ ಎಸ್ ನಿಂದ ರಾಜ್ಯಪಾಲರಿಗೆ ಒತ್ತಡ ಬರಲಾರಂಭಿಸಿದವು. ಯಾವ ಕಾರಣಕ್ಕೂ ಮುಜಾಫರ್ ಅಸಾದಿ ಹೆಸರಿಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಒತ್ತಡ ಹೇರಲಾರಂಬಿಸಿದರು. ರಾಜ್ಯಪಾಲರು ಮುಜಾಫರ್ ಅಸಾದಿಯವರ ಹಿನ್ನಲೆಯನ್ನು ಗುಪ್ತಚರ ಇಲಾಖೆಯಿಂದ ತರಿಸಿಕೊಂಡರು.

ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ನಡೆಸಿದ ಉದಾಹರಣೆಯೇ ಇಲ್ಲದ ಪ್ರೋ ಮುಜಾಫರ್ ಅಸಾದಿಯವರು ವಿವಿ ಉಪಕುಲಪತಿ ಹುದ್ದೆಗೆ ಅರ್ಹ ಮಾತ್ರವಲ್ಲ, ಅವರ ನೇಮಕವಾದರೆ ವಿವಿ ಮತ್ತು ಉಪಕುಲಪತಿ ಹುದ್ದೆಗೇ ಅದೊಂದು ಗೌರವವಾಗಿರುತ್ತೆ ಎಂದು ರಾಜ್ಯಪಾಲರಿಗೆ ಮನವರಿಕೆ ಆಗುತ್ತದೆ.

ಆದರೇನು ಮಾಡೋದು ? ಮುಜಾಫರ್ ಅಸಾದಿ ನೇಮಕ ಮಾಡದಂತೆ ಆರ್ ಎಸ್ಎಸ್ ನ ಕೈಗಳು ರಾಜ್ಯಪಾಲರನ್ನು ಕಟ್ಟಿ ಹಾಕಿವೆ.‌ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರು ಮುಜಾಫರ್ ಅಸಾದಿಯವರ ಕಡತವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳಿಸಿದರು.
ಎರಡನೇ ಬಾರಿಯೂ ರಾಜ್ಯ ಸರ್ಕಾರ ಮುಜಾಫರ್ ಅಸಾದಿಯವರ ಹೆಸರಿನ ಕಡತವನ್ನೇ ರಾಜಭವನಕ್ಕೆ ಕಳಿಸಿದರೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿ ಸಹಿ ಹಾಕಲೇಬೇಕಿರುತ್ತದೆ.

ಅದು ರಾಜ್ಯ ಸರ್ಕಾರಕ್ಕೆ ಸಂವಿಧಾನ ನೀಡಿರುವ ಅವಕಾಶ. ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಅಧಿಕಾರದ ಮಿತಿ ಅಷ್ಟೆ. ಇದ್ಯಾವುದರ ಪರಿವೆಯೇ ಇಲ್ಲದ ಆರ್ ಎಸ್ ಎಸ್ “ಯಾವ ಕಾರಣಕ್ಕೂ ಮುಜಾಫರ್ ಅಸಾದಿಯನ್ನು ವಿವಿ ಉಪಕುಲಪತಿಯಾಗಿ ನೇಮಿಸಕೂಡದು” ಎಂದು ರಾಜ್ಯಪಾಲರಿಗೆ ಸೂಚಿಸಿತ್ತು.

ಒಂದು ವೇಳೆ ಇದನ್ನು ಮೀರಿಯೂ ಮುಜಾಫರ್ ಅಸಾದಿಯವರನ್ನೇ ವಿವಿ ಕುಲಪತಿಯನ್ನಾಗಿಸಿದರೆ ರಾಜ್ಯಪಾಲರನ್ನೇ ಬದಲಾಯಿಸುವ ಸಾಧ್ಯತೆ ಇತ್ತು.

ಸರ್ಕಾರ ಎರಡನೇ ಬಾರಿಯೂ ಮುಜಾಫರ್ ಅಸಾದಿ ಹೆಸರಿನ ಕಡತವನ್ನೇ ಕಳುಹಿಸಲು ಯೋಜಿಸಿತ್ತು. ಈಗ ರಾಜ್ಯಪಾಲರು ‘ಧರ್ಮ ಸಂಕಟ’ದಲ್ಲಿ ಸಿಲುಕಿದರು.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ರಾಜ್ಯಪಾಲರು ರಾಜಕೀಯವಾಗಿ ತನ್ನ ವಿರೋಧಿ ಪಕ್ಷದ ಮುಖ್ಯಮಂತ್ರಿಯ ಬಳಿ ಗೋಗರೆಯುವಂತಾಯಿತು. “ದಯವಿಟ್ಟು ಎರಡನೇ ಬಾರಿ ಅಸಾದಿಯವರ ಹೆಸರನ್ನು ಕಳುಹಿಸಬೇಡಿ. ಒಂದು ವೇಳೆ ನೀವು ಕಳಿಸಿದ್ದೇ ಆದರೆ ನಾನು ಅದಕ್ಕೆ ಸಹಿ ಹಾಕಬೇಕಾಗುತ್ತದೆ. ಹಾಗೊಂದು ವೇಳೆ ಸಹಿ ಹಾಕಿದ್ದೇ ಆದಲ್ಲಿ ಹಿಂದುಳಿದ ವರ್ಗದವನಾಗಿರುವ ನನ್ನ ಹುದ್ದೆಯಲ್ಲಿ ಒಬ್ಬ ಬ್ರಾಹ್ಮಣ ಕೂರುತ್ತಾನೆ. ನಾನು ಹುದ್ದೆ ಕಳೆದುಕೊಳ್ಳಬೇಕಾಗುತ್ತದೆ” ಎಂದು ಮುಖ್ಯಮಂತ್ರಿಯನ್ನು ಕೇಳಿಕೊಂಡರು.

ಖುದ್ದು ರಾಜ್ಯಪಾಲರೇ ವೈಯುಕ್ತಿಕವಾಗಿ ಮನವಿ ಮಾಡಿದ್ದರಿಂದ ಎರಡನೇ ಬಾರಿ ಮುಜಾಫರ್ ಅಸಾದಿಯವರ ಹೆಸರನ್ನು ಮುಖ್ಯಮಂತ್ರಿಗಳು ಕಳುಹಿಸಲಿಲ್ಲ. ಅದೊಂದು ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಅಲಿಖಿತವಾಗಿರುವ ಸೌಜನ್ಯದ ನಡೆಯಾಗಿತ್ತು. ರಾಜ್ಯಪಾಲರು ಹುದ್ದೆ ಉಳಿಸಿಕೊಂಡರು.

ರಾಜ ಭವನದ ಒಂದು ಫೋನ್ ಕರೆಗೆ ರಾಜ್ಯ ಸರ್ಕಾರ ಬೆಚ್ಚಿ ಬೀಳುತ್ತದೆ. ಅಂತದ್ದರಲ್ಲಿ ಹುದ್ದೆ ಉಳಿಸಿಕೊಳ್ಳಲು ರಾಜ್ಯ ಸರ್ಕಾರವನ್ನೇ ರಾಜ್ಯಪಾಲರು ರಿಕ್ವೆಸ್ಟ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತು. . ರಾಜ್ಯಪಾಲರ ಈ ಪರಿಸ್ಥಿತಿಗೆ ಕಾರಣ ಉಪಕುಲಪತಿಯೊಬ್ಬ ಆರ್ ಎಸ್ ಎಸ್ ನಲ್ಲಿ ಹೊಂದಿದ್ದ ಪ್ರಭಾವ. ಅವಮಾನದಿಂದ ಕುಸಿದು ಹೋಗಿದ್ದ ರಾಜ್ಯಪಾಲರು ಸಮಯಕ್ಕಾಗಿ ಕಾಯುತ್ತಿದ್ದರು. ಅವರು ಈಗ ಸೀಮಿತ ಅಧಿಕಾರದ ರಾಜ್ಯಪಾಲರಾಗಿರಬಹುದು, ಅವರೊಳಗೆ ಈ ಹಿಂದೆ ಹಲವು ಬಾರಿ ಲೋಕಸಭೆ, ರಾಜ್ಯಸಭೆ ಸದಸ್ಯರಾಗಿದ್ದು ಕೇಂದ್ರ ಸಚಿವರೂ ಆಗಿದ್ದ ನುರಿತ ರಾಜಕಾರಣಿಯೊಬ್ಬನಿದ್ದ ! ಸಮಯ ಬಂದಿತ್ತು. ಘಟಿಕೋತ್ಸವದ ಬಹಿರಂಗ ಸಭೆಯಲ್ಲಿ ತನ್ನ ಪವರ್ ತೋರಿಸಿದರು. ಪ್ರಭಾವ ಬಳಸಿ ನೇಮಕಗೊಂಡ ವಿಸಿ ಬಹಿರಂಗ ಅವಮಾನ ಅನುಭವಿಸಿ ಕಣ್ಣೀರು ಹಾಕಬೇಕಾಯಿತು.

ಈಗ ಕಣ್ಣೀರು ಹಾಕಿದ ಉಪಕುಲಪತಿ ಪರವಾಗಿ ಹಲವರು ಕಣ್ಣೀರು ಸುರಿಸುತ್ತಿದ್ದಾರೆ. ಕಲಾ ವಿಭಾಗದ ಡೀನ್ ಒಬ್ಬರು ‘ನಾವು ಹೇಗೆ ಸಂಭ್ರಮದಿಂದ ಘಟಿಕೋತ್ಸವ ಸಿದ್ದತೆಗೊಳಿಸಿದ್ವಿ. ಆದರೆ ರಾಜ್ಯಪಾಲರು ಬಂದು ಹೇಗೆ ಹಾಳು ಮಾಡಿದರು’ ಎಂದು ಸುಧೀರ್ಘವಾಗಿ ಬರೆದಿದ್ದಾರೆ.

Klive Special Article ಕೊನೆಗೆ ‘ಪ್ರತಿಯೊಂದು ಸಂಸ್ಥೆಗೂ ಅದರದ್ದೇ ಆದ ಅಧಿಕಾರ, ಸ್ವಾತಂತ್ರ್ಯ, ಮೌಲ್ಯಗಳು ಇರುತ್ತದೆ. ಆ ಮೌಲ್ಯಗಳನ್ನು ನಾವು ರಕ್ಷಿಸಬೇಕಿದೆ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಪ್ರಗತಿಪರ ಚಿಂತಕರೊಬ್ಬರು ಅದಕ್ಕೆ ಸಹಮತ ವ್ಯಕ್ತಪಡಿಸಿ ರಾಜ್ಯಪಾಲರ ವಿರುದ್ದ ಕೇಂದ್ರ ಸರ್ಕಾರಕ್ಕೆ ನಿರ್ಣಯ ಕಳುಹಿಸಬೇಕು ಎಂದಿದ್ದಾರೆ.

ಈ ಮೌಲ್ಯಗಳು ಮತ್ತು ನಿರ್ಣಯಗಳು “ಮುಜಾಫರ್ ಅಸ್ಸಾದಿಯವರ ಕಡತವನ್ನು ವಾಪಸ್ ಕಳುಹಿಸುವಾಗ” ಎಲ್ಲಿ ಹೋಗಿತ್ತು. ಆಗ ಯಾಕೆ ಆ ಯೂನಿವರ್ಸಿಟಿ ಮತ್ತು ಚಿಂತಕರು ರಾಜ್ಯಪಾಲರ ವಿರುದ್ದ ಮಾತನಾಡಲಿಲ್ಲ. ಹೋಗಲಿ, ಆ ವಿಶ್ವವಿದ್ಯಾನಿಲಯವು ಮೂವರು ಬಹುಕೋಟಿ ಉದ್ಯಮಿಗಳಿಗೆ ಡಾಕ್ಟರೇಟ್ ಘೋಷಿಸಿ ಸಾರ್ವಜನಿಕರಿಂದ ಛೀಮಾರಿಗೆ ಒಳಗಾದಾಗ ಆ ಸಂಸ್ಥೆಯ ‘ಮೌಲ್ಯ’ ಎಲ್ಲಿ ಹೋಗಿತ್ತು ?

ನಾವು ‘ಧರ್ಮ’ದ ಪರವಾಗಿ ಹೋರಾಡುವ ಮೊದಲು ‘ಧರ್ಮ’ದೊಳಗಿನ ಹುಳುಕುಗಳ ವಿರುದ್ದ ಹೋರಾಡಬೇಕಲ್ಲವೇ ? ರಾಜ್ಯಪಾಲರ ವಿರುದ್ದ ನಿರ್ಣಯ ಮಾಡಬೇಕಾಗಿರುವುದೇನೋ ಸರಿ, ರಾಜ್ಯಪಾಲರು ವಿವಿಗೆ ನೇಮಕಾತಿ ಮಾಡುವ ಸಂದರ್ಭದಲ್ಲೇ ಈ ನಿರ್ಣಯ ಮಾಡಿದ್ದರೆ ಇವತ್ತು ನಾವ್ಯಾರು ಅಧರ್ಮದ ಬಗ್ಗೆ ‘ಕಣ್ಣೀರು’ ಹಾಕುವ ಪರಿಸ್ಥಿತಿಯೇ ಬರುತ್ತಿರಲಿಲ್ಲ.

ರಾಜ್ಯಪಾಲರ ವಿರುದ್ದ ಕಾನೂನುಬದ್ಧವಾಗಿ ಹೋರಾಡೋಣಾ/ಮಾತಾಡೋಣಾ. ಆದರೆ ಒಂದು ಕ್ಲಾರಿಟಿ ಇರಲಿ. ಈ ಹೋರಾಟ/ಮಾತಿನಲ್ಲಿ, ಯೂನಿವರ್ಸಿಟಿ ಉಳಿಸುವುದು ಮಾತ್ರ ನಮ್ಮ ಧರ್ಮವಾಗಲಿ
‘ಧರ್ಮ’ ಉಳಿಸುವುದು ನಮ್ಮ ಧರ್ಮವಲ್ಲ !

ಬರಹ : ನವೀನ್ ಸೂರಿಂಜೆ

Rahul Gandhi ರಾಹುಲ್ ವಿರುದ್ಧ ಅಪಪ್ರಚಾರ : ಯುಟ್ಯೂಬರ್ ಅಜಿತ್ ಭಾರ್ತಿ ವಿರುದ್ಧ ಕೇಸ್

0

Rahul Gandhi ರಾಹುಲ್ ಗಾಂಧಿ ವಿರುದ್ದ ಅಪಪ್ರಚಾರ ನಡೆಸಿರುವ ಆರೋಪದ ಮೇಲೆ ಬಲಪಂಥೀಯ ಯೂಟ್ಯೂಬರ್ ಅಜೀತ್ ಭಾರ್ತಿ ವಿರುದ್ದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ ಬೋಪಣ್ಣ ಅವರು ನೀಡಿದ ದೂರಿನನ್ವಯ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(ಎ)( ಧರ್ಮ, ಜಾತಿ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವುದು) ಮತ್ತು 505(2) (ಜಾತಿ, ಧರ್ಮ, ಜನಾಂಗದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಉದ್ದೇಶದಿಂದ ನಕಲಿ ಸುದ್ದಿ ಹರಡುವುದು) ಅಡಿ ಜೂನ್ 15ರಂದು ಪ್ರಕರಣ ದಾಖಲಾಗಿದೆ.

Rahul Gandhi ಜೂನ್‌ 6ರಂದು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಅಜೀತ್ ಭಾರ್ತಿ” ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ರೀರಾಮ ಮಂದಿರದ ಬದಲಿಗೆ ಬಾಬ್ರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ” ಎಂದು ಹೇಳಿದ್ದರು.

ಆದರೆ, ರಾಹುಲ್ ಗಾಂಧಿ ತಮ್ಮ ಯಾವುದೇ ಭಾಷಣಗಳಲ್ಲಿ ಅಂತಹ ಹೇಳಿಕೆ ನೀಡಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷ ಪ್ರಚೋದಿಸುವ ಉದ್ದೇಶದಿಂದ ಅಜೀತ್ ಭಾರ್ತಿ ಸುಳ್ಳು ಸುದ್ದಿ ಹರಡಿದ್ದಾರೆ.

ಈ ಮೂಲಕ ಸಮಾಜದಲ್ಲಿ ಸುವ್ಯವಸ್ಥೆ ಮತ್ತು ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ವಕೀಲ ಬಿ.ಕೆ ಬೋಪಣ್ಣ ದೂರಿನಲ್ಲಿ ಆರೋಪಿಸಿದ್ದರು.

Dr.G. Parameshwar ಯಾರನ್ನೂ ರಕ್ಷಿಸುವ & ಸಾಫ್ಟ್ ಕಾರ್ನರ್ ತೋರಿಸುವ ಪ್ರಶ್ನೆಯೇ ಇಲ್ಲ- ಡಾ.ಜಿ.ಪರಮೇಶ್ವರ್

0

Dr.G. Parameshwar ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಅವರ ಪ್ರಕರಣದಲ್ಲಿ ಯಾರಿಗೂ ಸಾಫ್ಟ್ ಕಾರ್ನರ್ ತೋರಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪೊಲೀಸರು ಯಾವುದೇ ಪರಿಗಣನೆಗೆ ಒಳಗಾಗದೆ ಕ್ರಮ ಕೈಗೊಳ್ಳುತ್ತಾರೆ. ಯಾರನ್ನೂ ರಕ್ಷಿಸುವ ಅಥವಾ ಸಾಫ್ಟ್ ಕಾರ್ನರ್ ತೋರಿಸುವ ಪ್ರಶ್ನೆಯೇ ಇಲ್ಲ, ಅಂತಹ ಯಾವುದೇ ವಿಷಯಗಳಿಗೆ ನಾವು ಮಣಿಯುವುದಿಲ್ಲ” ಎಂದರು.
ಸೂಕ್ಷ್ಮ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ನಿರಾಕರಿಸಿದ ಗೃಹ ಸಚಿವರು, ತನಿಖೆಯ ನಂತರ ತನಿಖಾ ವರದಿಯನ್ನು ಹೊರತರಲಾಗುವುದು ಎಂದು ಹೇಳಿದರು.
ತನಿಖೆ ಯಾವಾಗ ಮುಗಿಯುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, “ಅದನ್ನು ತನಿಖಾ ತಂಡಕ್ಕೆ ಬಿಡಲಾಗಿದೆ; ಕಾನೂನು ಪ್ರಕಾರ ಏನೇ ಕ್ರಮ ಕೈಗೊಳ್ಳಬೇಕೋ ಅದನ್ನು ಪ್ರಾರಂಭಿಸಲಾಗುವುದು. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಪರಿಗಣನೆಯಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಪದೇ ಪದೇ ಹೇಳಿದ್ದೇವೆ” ಎಂದು ಅವರು ಹೇಳಿದರು.
Dr.G. Parameshwar ತನಿಖಾ ತಂಡಕ್ಕೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಮರು ಸೇರ್ಪಡೆಗೊಳಿಸುವ ಕುರಿತು ಪ್ರತಿಕ್ರಿಯಿಸಿ, “ಅಂತಹ ಬದಲಾವಣೆಗಳು ಆಡಳಿತಾತ್ಮಕ ಅವಶ್ಯಕತೆಗಳಿಗೆ ಒಳಪಟ್ಟಿರುತ್ತವೆ ಮತ್ತು ತನಿಖೆಯ ಭಾಗವಾಗಿ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಪೊಲೀಸ್ ಇಲಾಖೆಗೆ ಬಿಡಲಾಗಿದೆ” ಎಂದು ಹೇಳಿದರು.
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪದ ಮೇಲೆ ಜೂನ್ 8 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್ ಸೇರಿದಂತೆ ಅವರ 17 ಮಂದಿ ಸಹಾಯಕರನ್ನು ಬಂಧಿಸಲಾಗಿತ್ತು.

CM Siddharamaih ನಮ್ಮ ಸರ್ಕಾರದಲ್ಲಿಅಲ್ಪ ಸಂಖ್ಯಾತರು & ಬಹು ಸಂಖ್ಯಾತರಿಗೆ ಒಂದೇ ರೀತಿಯ ರಕ್ಷಣೆ- ಸಿದ್ಧರಾಮಯ್ಯ

0

CM Siddharamaih ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲಾ ಮುಸಲ್ಮಾನ ಬಾಂಧವರಿಗೆ ಬಕ್ರೀದ್ ಶುಭಾಶಯಗಳು. ಎಲ್ಲರೂ ಇಂದು ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮನುಕುಲಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೀರಿ. ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ್ದು, ಸಮಾಜದಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರ ಹಾಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು.

ಭಾರತ ಬಹುತ್ವದ ದೇಶ. ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವರು ಒಟ್ಟಾಗಿ ಬಾಳಬೇಕು. ಮನುಷ್ಯತ್ವ ಬಹಳ ದೊಡ್ಡದು. ಎಲ್ಲರೂ ಪರಸ್ಪರ ಪ್ರೀತಿಸಬೇಕು. ಪ್ರತಿಯೊಬ್ಬರೂ ಸಹಿಷ್ಣುತೆಯನ್ನು ಪಾಲಿಸಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಾಗೆ ಬೆಳೆದಾಗ ಮಾತ್ರ ರಾಷ್ಟ್ರ ಸಮಾಜ ಹಾಗೂ ಎಲ್ಲಾ ಧರ್ಮಗಳೂ ಏಳಿಗೆಯಾಗುತ್ತವೆ.

ನಮ್ಮದು ಸರ್ವಧರ್ಮ ಸಮನ್ವಯದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ. ಸಂವಿಧಾನ ಹೇಳುವಂತೆ ನಡೆದುಕೊಳ್ಳುತ್ತೇವೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಏಳು ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಈ ಕೆಲಸವನ್ನು ತಾರತಮ್ಯವಿಲ್ಲದೆ ಮಾಡುತ್ತೇವೆ.

CM Siddharamaih ಅಲ್ಪಸಂಖ್ಯಾತರು ಕೂಡ ಯಾವುದೇ ಕಾರಣಕ್ಕೂ ಭಯ ಆತಂಕ ಪಡಬೇಕಾದ ಅಗತ್ಯವಿಲ್ಲ. ನಮ್ಮಸರ್ಕಾರದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರಿಗೆ ಒಂದೇ ರೀತಿಯಲ್ಲಿ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಅಭಿವೃದ್ಧಿಗೆ ಒಳ್ಳೆ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು‌ ತಮ್ಮ x ಖಾತೆ ಸಂದೇಶದಲ್ಲಿ ತಿಳಿಸಿದ್ದಾರೆ.

S.N. Chennabasappa ಮಾರ್ಗದರ್ಶಿಯೊಂದಿಗೆ ಮರೆಯಲಾಗದ ಚಿತ್ರ- ಶಾಸಕ “ಚೆನ್ನಿ”

0

S.N. Chennabasappa ಹಿರಿಯ ಸ್ವಯಂಸೇವಕರು, ರಾಜ್ಯ ಬಿಜೆಪಿಯ ಮಾಜಿ ಉಪಾಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರು, ನಮ್ಮೆಲ್ಲರ ಹಿರಿಯ ನಾಯಕರು, ನನ್ನ ಮಾರ್ಗದರ್ಶಕರು ಆಗಿದ್ದ ಶ್ರೀ ಎಂ ಬಿ ಭಾನುಪ್ರಕಾಶ್ ಅವರು ಇಂದು ನಮ್ಮನ್ನು ಅಗಲಿರುವುದು ತೀವ್ರ ದುಃಖದ ಸಂಗತಿಯಾಗಿದೆ.

S.N. Chennabasappa ಅವರ ಅಗಲಿಕೆ ನನ್ನಂತಹ ಸಹಸ್ರಾರು ಕಾರ್ಯಕರ್ತರಿಗೆ ಜೀವನದಲ್ಲಿ ಶೂನ್ಯವನ್ನು ಸೃಷ್ಠಿಸಿದೆ ಎಂದು
ಶಾಸಕ ಚನ್ನಬಸಪ್ಪ ಅಪರೂಪದ ಭಾವಚಿತ್ರ ಹಂಚಿಕೊಂಡಿದ್ದಾರೆ.

Kanchenjunga Express ಪಶ್ಚಿಮ ಬಂಗಾಳ, ರೈಲ್ವೆ ಅಫಘಾತ- ಸಾವಿನ ಸಂಖ್ಯೆ 15 ಕ್ಕೆ ಏರಿಕೆ

0

Kanchenjunga Express ಸೋಮವಾರ ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ತೆರಳುತ್ತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ ಕನಿಷ್ಠ 15 ಕ್ಕೆ ಏರಿಕೆಯಾಗಿದ್ದು, ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲಿನ ಇಂಜಿನ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಕ್ಸ್‌ಪ್ರೆಸ್ ರೈಲಿನ ಮೂರು ಹಿಂಭಾಗದ ಕಂಪಾರ್ಟ್‌ಮೆಂಟ್‌ಗಳು ಹಳಿತಪ್ಪಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸುಮಾರು 30 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.

“ಇದುವರೆಗೆ ಅಪಘಾತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಗಾಯಾಳುಗಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

“ನನ್ನ ಹೆಂಡತಿ, ಮಗು ಮತ್ತು ನಾನು ಹೇಗೋ ಕೋಚ್‌ನಿಂದ ಹೊರಬಂದೆವು. ನಾವು ಪ್ರಸ್ತುತ ಸಿಕ್ಕಿಬಿದ್ದಿದ್ದೇವೆ… ರಕ್ಷಣಾ ಕಾರ್ಯಾಚರಣೆಗಳು ಸಹ ತಡವಾಗಿ ಪ್ರಾರಂಭವಾಯಿತು” ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Department of Forest ಆಗುಂಬೆಯ ಮನೆಯಲ್ಲಿ 12 ಅಡಿ ಉದ್ದದ ಕಾಳಿಂಗ ಪತ್ತೆ. ಸರಂಕ್ಷಿಸಿ ಅರಣ್ಯಕ್ಕೆ ವಾಪಸ್

0

Department of Forest ಆಗುಂಬೆಯಲ್ಲಿ ಎಆರ್‌ಎಸ್‌ಎಸ್‌ನ ಟೀಂ ಮತ್ತೊಂದು ಕಾಳಿಂಗ ಸರ್ಪವೊಂದನ್ನು ರಕ್ಷಣೆ ಮಾಡಿದೆ.

ಆಗುಂಬೆ ಬಳಿ 12 ಅಡಿ ಉದ್ದದ ಕಾಳಿಂಗವೊಂದು ರಸ್ತೆ ದಾಟುತ್ತಿತ್ತು. ಈ ವೇಳೆ ಅಲ್ಲಿದ್ದ ನಾಯಿಗಳು ಕಾಳಿಂಗವನ್ನು ಬೆದರಿಸಿವೆ. ಇದರಿಂದ ಭಯಗೊಂಡ ಕಾಳಿಂಗ ಅಲ್ಲಿಯೇ ಇದ್ದ ಮನೆಯೊಂದರ ಬಚ್ಚಲು ಒಲೆಯೊಳಗೆ ಅಡಗಿಕೊಂಡಿದೆ. ಕಾಳಿಂಗ ಅಲ್ಲಿಂದಲೇ ನೋಡುತ್ತಾ ಬುಸುಗುಟುತ್ತಿತ್ತು. . ಹಾಗಾಗಿ ಆತಂಕ ಗೊಂಡ ಸ್ಥಳೀಯರು ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರದ ಅಜಯ್‌ ಗಿರಿಯವರಿಗೆ ವಿಷಯ ತಿಳಿಸಿದ್ದಾರೆ.

Department of Forest ಸ್ಥಳಕ್ಕೆ ಬಂದ ಅವರು ಸುರಕ್ಷಿತವಾಗಿ ಕಾಳಿಂಗವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

Arun Somanna ಕೇಂದ್ರ ಸಚಿವ ಸೋಮಣ್ಣ ಪುತ್ರ ಅರುಣ್ ಅವರ ಮೇಲೆ ವಂಚನೆ, ದೈಹಿಕ ಹಲ್ಲೆ ಆರೋಪದ ಮೇರೆ ಎಫ್ ಐ ಆರ್ ದಾಖಲು

0

Arun Somanna ವಂಚನೆ, ಬ್ಲಾಕ್‌ಮೇಲಿಂಗ್, ದೈಹಿಕ ಹಲ್ಲೆ ಮತ್ತು ಜೀವ ಬೆದರಿಕೆ ಆರೋಪದಡಿ ದಂಪತಿಗಳು ನೀಡಿದ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ಕೇಂದ್ರ ಸಚಿವ ವಿ ಸೋಮಣ್ಣ ಅವರ ಪುತ್ರ ಹಾಗೂ ಮತ್ತಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಚಿವರ ಪುತ್ರ ಅರುಣ್‌ ಹಾಗೂ ಪ್ರಕರಣದ ಇತರ ಇಬ್ಬರು ಆರೋಪಿಗಳನ್ನು ದಾಸರಹಳ್ಳಿ ನಿವಾಸಿ ಜೀವನ್ ಕುಮಾರ್ ಮತ್ತು ಬೆಂಗಳೂರಿನ ಹೆಬ್ಬಾಳ ನಿವಾಸಿ ಪ್ರಮೋದ್ ರಾವ್ ಎಂದು ಗುರುತಿಸಲಾಗಿದೆ .

ದೂರಿನ ಪ್ರಕಾರ, 23 ವರ್ಷಗಳಿಂದ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿರುವ ತೃಪ್ತಿ ಮತ್ತು ಅವರ ಪತಿ ಮಧ್ವರಾಜ್ ಅವರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರ ಪುತ್ರ ಅರುಣ್ ಅವರನ್ನು 2013 ರಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು.

ದಂಪತಿಗಳು ಈ ಹಿಂದೆ ಅರುಣ್ ಅವರ ಸಹೋದರಿಗಾಗಿ ಯಶಸ್ವಿ ಹುಟ್ಟುಹಬ್ಬವನ್ನು ಆಯೋಜಿಸಿದ್ದರು, ಇದು ಗಮನಾರ್ಹವಾದ ಮೆಚ್ಚುಗೆಯನ್ನು ಗಳಿಸಿತ್ತು. ಅವರ ಕೆಲಸದಿಂದ ಪ್ರಭಾವಿತರಾದ ಅರುಣ್ ಅವರು ಮಧ್ವರಾಜ್ ಅವರೊಂದಿಗೆ ಪಾಲುದಾರಿಕೆಯನ್ನು ಪ್ರಸ್ತಾಪಿಸಿದರು, ಕರ್ನಾಟಕದಲ್ಲಿ ತಮ್ಮ ತಂದೆಯ ಪ್ರಭಾವಿ ಸ್ಥಾನವನ್ನು ಜಂಟಿಯಾಗಿ ವ್ಯಾಪಾರವನ್ನು ವಿಸ್ತರಿಸುವ ಸಾಧನವಾಗಿ ಉಲ್ಲೇಖಿಸಿದರು.

Arun Somanna ಆದಾಗ್ಯೂ, 2019 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯು ತೀವ್ರ ನಷ್ಟವನ್ನು ಅನುಭವಿಸಿತು.
ಕಂಪನಿಯ ನಿಯಂತ್ರಣವನ್ನು ಅರುಣ್ ವಹಿಸಿಕೊಂಡಿದ್ದರಿಂದ ದಂಪತಿಗಳು ತಮ್ಮ ಲಾಭದ ಪಾಲನ್ನು ಪಡೆಯುವುದನ್ನು ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ, ಅರುಣ್ ದಂಪತಿಗಳು ಷೇರುದಾರರಿಗೆ ರಾಜೀನಾಮೆ ನೀಡಬೇಕು ಮತ್ತು 1.2 ಕೋಟಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು. ಅವರು ನಿರಾಕರಿಸಿದಾಗ, ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಅರುಣ್ , ಕಚೇರಿಯ ನೌಕರರ ಮುಂದೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ಮಧ್ವರಾಜ್ ಮೇಲೆ ಬೆಲ್ಟ್ ಮತ್ತು ದೀಪದಿಂದ ದೈಹಿಕವಾಗಿ ಹಲ್ಲೆ ನಡೆಸಿದರು.
ಪೊಲೀಸರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಬೆದರಿಕೆ, ಸಾಮಾನ್ಯ ಉದ್ದೇಶ ಮತ್ತು ವಂಚನೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನಿರ್ದೇಶನದ ಮೇರೆಗೆ ಅರುಣ್ ಸೋಮಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.