Sunday, April 12, 2026
Sunday, April 12, 2026
Home Blog Page 685

Shivamogga Government Employees Association ನವೀಕೃತ ಸರ್ಕಾರಿ ನೌಕರರ ಭವನದ ಲೋಕಾರ್ಪಣೆ

0

Shivamogga Government Employees Association ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ 23 ಜೂನ್ ಭಾನುವಾರದಂದು ಬೆಳಗ್ಗೆ 10.30 ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ಸರ್ವಸದಸ್ಯರ ವಾರ್ಷಿಕ ಮಹಾಸಭೆ ಮತ್ತು ನವೀಕೃತ ಸರ್ಕಾರಿ ನೌಕರರ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ರಾಜ್ಯ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಸಚಿವ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ನೆರವೇರಿಸಲಿದ್ದಾರೆ ಹಾಗೂ ನವೀಕೃತ ಸರ್ಕಾರಿ ನೌಕರರ ಭವನವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಲೋಕಾರ್ಪಣೆ ಮಾಡಲಿದ್ದಾರೆಂದು ತಿಳಿಸಿದರು‌
ಸರ್ಕಾರಿ ನೌಕರರ ಸಂಘವು ಪ್ರತಿವರ್ಷ ರಾಜ್ಯಾದ್ಯಂತ ಸುಮಾರು 10000 ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸುತ್ತಿದೆ. , ಇದರ ಭಾಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ 2024ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 400 ಸರ್ಕಾರಿ ನೌಕರರ ಮಕ್ಕಳನ್ನು ಗುರುತಿಸಿ ರೂ. 1000/ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವ ನೂತನ ವಿಧಾನ ಪರಿಷತ್ ಸದಸ್ಯರು ಹಾಗೂ ನಿಗಮ-ಮಂಡಳಿ ಪ್ರಾಧಿಕಾರದ ಅಧ್ಯಕ್ಷರನ್ನು ಅಭಿನಂದಿಸಲಾಗುವುದು ಎಂದರು.
Shivamogga Government Employees Association ಶಾಸಕ ಚನ್ನಬಸಪ್ಪ ಎಸ್ ಎಲ್ ಬೋಜೇಗೌಡ, ಡಾ!! ಧನಂಜಯ ಸರ್ಜಿ, ಬಲ್ಕೀಶ ಬಾನು, , ಡಿ ಎಸ್ ಅರುಣ್, ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ, ಸ್ಬುಡಾ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಜಿ ಪಲ್ಲವಿ, ಎಸ್ ರವಿಕುಮಾರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ , ಸಿಇಒ ಲೋಖಂಡೆ, ಎಸ್ಪಿ.ಮಿಥುನ್ ಕುಮಾರ್ ಮೊದಲಾದವರು ಉಪಸ್ಥಿತರಿರುವರು ಎಂದರು.

DC Shivamogga ಕುಗ್ಗುತ್ತಿರುವ ಫಲಕದ ಎತ್ತರ, ಪಾದಚಾರಿಗಳೇ ನಿಮ್ಮ ತಲೆ ಜೋಪಾನ!

0

DC Shivamogga ಜಿಲ್ಲಾಧಿಕಾರಿಗಳ‌ ಕಾರ್ಯಾಲಯ ಆವರಣದಲ್ಲಿ ಈಗ ಒಂದು ಬೋರ್ಡ್ ದಿನೇದಿನೆ ಎತ್ತರ ಕಡಿಮೆ‌ ಮಾಡಿಕೊಂಡಿದೆ.
ತಮಾಷೆಯಾಗಿ ಕಾಣುತ್ತದೆ.

ಬಹುಷಃ ಪಾದಚಾರಿಗಳ ಹಾದಿಯನ್ನ ಎತ್ತರಿಸಿದ್ದೇ ಇದಕ್ಕೆ ಕಾರಣ ಎಂದು ಕೆಲವರು ತಕ್ಷಣ ಉತ್ತರಿಸಿದರು.

DC Shivamogga ನಡೆದರೆ ಎದೆ ಮಟ್ಟಕ್ಕೆ ಫಲಕ ಎದುರಾಗುತ್ತದೆ.
ಆಗಲಿ. ಅಕಸ್ಮಾತ್ ಪಾದಚಾರಿಗಳು ತಲೆಗೆ ಚಚ್ಚಿಕೊಳ್ಳುವ ಮುನ್ನ
ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆ ಕಿರಿಕ್ ಅನ್ನು
ತಪ್ಪಿಸಬಹುದಲ್ಲವೆ?

Shivamogga Style Dance Group ನೋಬೆಲ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮುರಿದ ಶಿವಮೊಗ್ಗ ಸ್ಟೈಲ್ ಡಾನ್ಸ್ ಗ್ರೂಪ್

0

Shivamogga Style Dance Group ಸ್ಟೈಲ್ ಡ್ಯಾನ್ಸ್ ಗ್ರೂಪ್ ವಿದ್ಯಾರ್ಥಿಗಳು ಮುಂಬೈನ ನೃತ್ಯ ತಂಡದ ರೆಕಾಡ್೯ ಅನ್ನು ಬ್ರೇಕ್ ಮಾಡಿ ನೊಬೆಲ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆಂದು ಸಂಸ್ಥೆಯ
ಅಧ್ಯಕ್ಷ ಕೆ.ಇ.ಕಾಂತೇಶ್ ಹರ್ಷ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಮಾತನಾಡಿ, ಸುಮಾರು 37 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ಒಂದು ಮುಕ್ಕಾಲು ಗಂಟೆ ನಿರಂತರವಾಗಿ ಡ್ಯಾನ್ಸ್ ಕಾರ್ಯಕ್ರಮ ನೀಡಿ ದಾಖಲೆ ಮಾಡಿದ್ದಾರೆ. ಈ ಹಿಂದಿನ ಮುಂಬೈ ದಾಖಲೆ 1 ಗಂಟೆಯದಾಗಿತ್ತು.

ಅದನ್ನು ಮುರಿದು ಹೊಸ ದಾಖಲೆ ನಮ್ಮ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ್ದಾರೆ ಈ ಪ್ರಯತ್ನ ಕರ್ನಾಟಕದಲ್ಲೇ ಪ್ರಥಮ ಎಂದರು.

ನೊಬೆಲ್ ಬುಕ್ ಆಫ್ ರೆಕಾರ್ಡ್‌ನ ಶಿವಮೊಗ್ಗ ಉಸ್ತುವಾರಿ ವಿನೋದ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರವಾಗಿ ಡ್ಯಾನ್ಸ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
ನಿಯಮಾವಳಿ ಪ್ರಕಾರವೇ ಸ್ಪರ್ಧೆ ನಡೆಸಲಾಗಿತ್ತು ಎಂದರು.

Shivamogga Style Dance Group ಪತ್ರಿಕಾಗೋಷ್ಠಿಯಲ್ಲಿ ಉಷಾ, ರಮೇಶ್, ಶಶಿಕುಮಾರ್ ಮತ್ತು ಸಂಸ್ಥೆಯ ಪೋಷಕರು ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು.

D.K.Shivakumar ಸ್ವಗೃಹವನ್ನ ರಾಜಾಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪ. ನಟ ದರ್ಶನ್ ಮೇಲೆ ಕ್ರಮ- ಡಿ.ಕೆ.ಶಿವಕುಮಾರ್

0

D.K.Shivakumar ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ಬೆನ್ನಲ್ಲೇ ನಟ ದರ್ಶನ್‌ ಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತಲೇ ಇದ್ದು ಇದೀಗ ರಾಜರಾಜೇಶ್ವರಿ ನಗರದಲ್ಲಿರುವ ರಾಜಕಾಲುವೆ ಮೇಲೆ ನಿರ್ಮಿಸಲಾಗಿರುವ ನಿವಾಸದ ವಿಚಾರದಲ್ಲೂ ಸಂಕಷ್ಟ ಶುರುವಾಗಿದೆ.

ಹೌದು, ಈಗಾಗಲೇ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನು ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂಬ ಆರೋಪವಿದೆ.
ಹೀಗಾಗಿ ಈ ಮನೆಯನ್ನು ತೆರವುಗೊಳಿಸಬೇಕು ಎಂಬ ಒತ್ತಡವಿದೆ. ಆದರೆ, ದರ್ಶನ್ ಸ್ಟೇ ತಂದಿದ್ದು, ಇದನ್ನು ತೆರವು ಮಾಡಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಬಗ್ಗೆ ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಒತ್ತುವರಿ ಜಾಗವನ್ನು ತೆರವು ಮಾಡುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಅದರಲ್ಲಿ ನೀನು, ನಾನು ಎಂದು ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.

D.K.Shivakumar ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್‌ ಅವರ ತೂಗುದೀಪ ನಿವಾಸ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್‌ ಎಸ್‌ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು
ಇದೀಗ ದರ್ಶನ್ ಸೇರಿದಂತೆ ಹಲವರು ತಂದಿರುವ ಹೈಕೋರ್ಟ್ ಸ್ಟೇ ತೆರವುಗೊಳಿಸಲು ಸರ್ಕಾರ ಮುಂದಾಗಿದ್ದು, ಕಟ್ಟಡಗಳನ್ನು ತೆರವುಗೊಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ದರ್ಶನ್ ಅವರ ನಿವಾಸ ಮತ್ತು ಇತರರು ಬಫರ್ ಝೋನ್‌ ಅನ್ನು ಅತಿಕ್ರಮಣ ಮಾಡಿರುವುದರ ಬಗ್ಗೆ ಹೈಕೋರ್ಟ್ (ಎಚ್‌ಸಿ) ನಲ್ಲಿ ಇನ್ನೂ ತಡೆಯಾಜ್ಞೆ ಇದೆ ಎಂದು ಕಂಡುಬಂದಿದೆ. ಮುಂದಿನ ಕೆಲಸದ ದಿನದಲ್ಲಿ ಬಿಬಿಎಂಪಿ ತಡೆಯಾಜ್ಞೆ ತೆರವು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಲಿದೆ” ಎಂದು ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿ ನಾಥ್ ತಿಳಿಸಿದ್ದಾರೆ.

Shivamogga Police ಅಪರಿಚಿತನ ಶವ ಪತ್ತೆ: ತುಂಗಾನಗರ ಪೊಲೀಸ್ ಪ್ರಕಟಣೆ

0

Shivamogga Police ಜೂನ್ 12 ರಂದು ರಾತ್ರಿ 11.30 ಕ್ಕೆ ಶಿವಮೊಗ್ಗ ಗೋಪಾಳದ ಚಾಲುಕ್ಯನಗರ ಬಸ್ ನಿಲ್ದಾಣದ ಬಳಿ ಸುಮಾರು 60 ರಿಂದ 65 ವಯಸ್ಸಿನ ಗಂಡಸಿನ ಶವ ಪತ್ತೆಯಾಗಿದ್ದು, ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೃತ ವ್ಯಕ್ತಿಯು 5.5 ಅಡಿ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಸುಮಾರು ಮೂರು ಇಂಚು ಉದ್ದದ ಕಪ್ಪುಬಿಳಿ ಕೂದಲು ಹಾಗೂ ಗಡ್ಡ ಬಿಟ್ಟಿರುತ್ತಾನೆ. ಕಾಟನ್ ಜರ್ಕಿನ್ ಮತ್ತು ಟಿ ಶರ್ಟ್ ಧರಿಸಿರುತ್ತಾನೆ.

Shivamogga Police ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಎಸ್.ಪಿ ಶಿವಮೊಗ್ಗ 08182 261400, ಪಿ,ಐ ತುಂಗಾನಗರ ಪೊಲೀಸ್ ಠಾಣೆ 9480803370 ಮತ್ತು ತುಂಗಾ ನಗರ ಪೊಲೀಸ್ ಠಾಣೆ 9141289308 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತುಂಗಾನರ ಪೊಲೀಸ್ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ.

University of Veterinary and Fisheries Sciences ಯಂತ್ರೋಪಕರಣ ಅಸಮರ್ಪಕತೆ :ದೂರುದಾರರಿಗೆ ಪರಿಹಾರ ನೀಡಲು ಕಂಪನಿಗೆ ಗ್ರಾಹಕ ಆಯೋಗ ಆದೇಶ

0

University of Veterinary and Fisheries Sciences ಅರ್ಜಿದಾರರಾದ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರಕ್ಕೆ ಖರೀದಿಸಲಾದ ಉಪಕರಣಕ್ಕೆ ಸಂಬಂಧಿಸಿದಂತೆ ಎದುರುದಾರ ವಿತರಕ ಸಂಸ್ಥೆಯ ವಿರುದ್ದ ದಾಖಲಿಸಿದ್ದ ಸೇವಾ ನ್ಯೂನ್ಯತೆ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ಉಪಕರಣ ದುರಸ್ತಿಪಡಿಸಿಕೊಡಲು ತಪ್ಪಿದಲ್ಲಿ ಅದರ ಮೌಲ್ಯ ಮರುಪಾವತಿಸುವಂತೆ ಆದೇಶಿಸಿದೆ.

ಸಂಶೋಧನಾ ಕೇಂದ್ರಕ್ಕೆ ಆಸ್ಟ್ರಿಯ ದೇಶದ HYCEL HNDEL SGESELLSCHAFT ಸಂಸ್ಥೆಯಿಂದ ತಯಾರಿಸಲ್ಪಟ್ಟ ‘ಆಟೋ ಹೆಮಟಾಲಜಿ ಆನಲೈಸರ್’ ಉಪಕರಣವನ್ನು ಈ ಸಂಸ್ಥೆಯಿಂದ ಅಧಿಕೃತಗೊಳಿಸಲಾದ ಚೆನ್ನೈನ ಮೆ|| ಬೀಟಾ ಎಕ್ಟಿಪ್‍ಮೆಂಟ್ಸ್ & ಎಕ್ವಿಪ್‍ಮೆಂಟ್ಸ್ ಇವರಿಂದ ಟೆಂಡರ್ ಮೂಲಕ ರೂ.6,73,200 ಗಳಿಗೆ ಖರೀದಿಸಿದ್ದು ದಿ: 05-10-2018 ರಂದು ಸದರಿ ಉಪಕರಣವನ್ನು ಚೆನ್ನೈನ ಸಂಸ್ಥೆಯವರು ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರದ ಪ್ರಯೋಗಾಲಯದಲ್ಲಿ ಅಳವಡಿಸಿರುತ್ತಾರೆ.

ಈ ಉಪಕರಣವು ಪ್ರಾರಂಭದಿಂದಲೂ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಮತ್ತು ಜಾನುವಾರುಗಳ ರಕ್ತದ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಒಂದೇ ಮಾದರಿಯನ್ನು ಪುನರ್ ವಿಶ್ಲೇಷಣೆಗೆ ಒಳಪಡಿಸಿದಾಗ ಪ್ರತಿಫಲಿತ ಫಲಿತಾಂಶಗಳು ಸ್ಥಿರವಾಗಿರದೆ ವ್ಯತ್ಯವಾಗುತ್ತಿದ್ದು ಸದರಿ ಉಪಕರಣ ಉತ್ಪಾದನಾ ದೋಷ ಹೊಂದಿರುವುದಾಗಿ ಮತ್ತು ಸದರಿ ಉಪಕರಣವನ್ನು ದುರಸ್ತಿಪಡಿಸಿಕೊಡಲು ಅಥವಾ ಬದಲಿ ಉಪಕರಣವನ್ನು ಒದಗಿಸಲು ಉತ್ಪಾದಕ ಮತ್ತು ವಿತರಕ ಸಂಸ್ಥೆಗಳಿಗೆ ದೂರುದಾರರಾದ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಕೋರಿರುತ್ತಾರೆ.

ಚೆನ್ನೈನ ವಿತರಕ ಸಂಸ್ಥೆ ಲಿಖಿತ ಆಶ್ವಾಸನೆ ನೀಡಿ ವಾಪಸ್ ಒಯ್ದಿದ್ದರೂ ಸಹ ಇದುವರೆಗೆ ಸದರಿ ಉಪಕರಣವನ್ನು ದುರಸ್ತಿಪಡಿಸಿ ವಾಪಸ್ ನೀಡದೇ ಅಥವಾ ಬದಲಿ ಉಪಕರಣ ಒಗದಿಸದೆ ಎದುರುದಾರ ಉತ್ಪಾದನಾ ಮತ್ತು ವಿತರಕ ಸಂಸ್ಥೆಯವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಸೂಕ್ತ ಪರಿಹಾರ ಕೋರಿ ಆಯೋಗದ ಮುಂದೆ ಪ್ರಕರಣ ದಾಖಲಿಸಲಾಗಿರುತ್ತದೆ.

ಈ ಪ್ರಕರಣದ ವಿಚಾರಣೆ ಕೈಗೊಂಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ವಿಚಾರಣೆಗೆ ಹಾಜರಾಗಲು ತಿಳುವಳಿಕೆ ಪತ್ರ ಜಾರಿಗೊಳಿಸಿದ್ದು, ಆಸ್ಟ್ರಿಯಾದ ತಯಾರಕ ಸಂಸ್ಥೆ ವಿಚಾರಣೆಗೆ ಗೈರು ಹಾಜರಾಗಿರುತ್ತದೆ. ಚೆನ್ನೈನ ವಿತರಕ ಸಂಸ್ಥೆಯವರು ವಿಚಾರಣಗೆ ಹಾಜರಾಗಿ ತಮ್ಮಿಂದ ಸೇವಾ ನ್ಯೂನ್ಯತೆ ಆಗಿಲ್ಲವೆಂದು ವಾದಿಸಿರುತ್ತಾರೆ.

University of Veterinary and Fisheries Sciences ಉಭಯ ಪಕ್ಷಕಾರರ ವಾದ-ವಿವಾದಗಳನ್ನು , ದಾಖಲೆಗಳನ್ನು ಆಯೋಗವು ಕೂಲಂಕುಷವಾಗಿ ಪರಿಶೀಲಿಸಿ ಚೆನ್ನೈನ ಎದುರುದಾರ ವಿತರಕ ಸಂಸ್ಥೆಯು ಉಪಕರಣವನ್ನು ವಾಪಸ್ಸು ತೆಗೆದುಕೊಂಡು ಹೋದ ದಿ: 16-11-2021 ರಿಂದ ಇದುವರೆಗೆ ತೃಪ್ತಿಕರವಾಗಿ ದುರಸ್ತಿ ಪಡಿಸಿ ಹಿಂದಿರುಗಿಸದಿರುವುದು ಅಥವಾ ಬದಲಿ ಉಪಕರಣ ಒದಗಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಎದುರುದಾರ ಸಂಸ್ಥೆಗಳು ಜಂಟಿಯಾಗಿ ಅಥವಾ ವೈಯಕ್ತಿಕವಾಗಿ ಜವಾಬ್ದಾರರೆಂದು ಪರಿಗಣಿಸಿ, ಆಯೋಗದ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಉಪಕರಣವನ್ನು ದುರಸ್ತಿಪಡಿಸಿ ಹಿಂದಿರುಗಿಸಲು ತಪ್ಪಿದಲ್ಲಿ ಉಪಕರಣ ಖರೀದಿ ಮೌಲ್ಯವನ್ನು ವಾರ್ಷಿಕ ಶೇ.10 ರ ಸವಕಳಿ ಸೂತ್ರದಲ್ಲಿ ಪರಿಗಣಿಸಿ ದಿ: 16-11-2021 ಕ್ಕೆ ಅನ್ವಯವಾಗುವಂತೆ ಉಪಕರಣದ ಮೌಲ್ಯವನ್ನು ಆಯೋಗದ ಆದೇಶದ ದಿನಾಂಕದಿಂದ 45 ದಿನಗಳ ಒಳಗೆ ಮರು ಪಾವತಿಸಲು ತಪ್ಪಿದಲ್ಲಿ ಸದರಿ ಉಪಕರಣದ ಮೌಲ್ಯಕ್ಕೆ ಶೇ.10ರ ಬಡ್ಡಿ ಸೇರಿಸಿ ನೀಡಲು ಹಾಗೂ ಎದುರುದಾರ ಸಂಸ್ಥೆಗಳಿಂದ ಸೇವಾ ನ್ಯೂನ್ಯತೆಯಿಂದಾಗಿ ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರ ಮತ್ತು ವಿಶ್ವವಿದ್ಯಾಲಯಕ್ಕೆ ಆದ ಅನಾನುಕೂಲತೆ ಮತ್ತು ಸಂಕಷ್ಟಗಳಿಗೆ ಪರಿಹಾರವಾಗಿ ರೂ.1,00,000/- ಗನ್ನು ಹಾಗೂ ಪ್ರಕರಣದ ವೆಚ್ಚ ರೂ.20,000/- ಗಳನ್ನು ಎದುರುದಾರ ಸಂಸ್ಥೆಗಳು ಪಾವತಿಸಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜೂ.12 ರಂದು ಆದೇಶಿಸಿದೆ.

Department of Animal Husbandry ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಲಸಿಕೆ ಕಾರ್ಯಕ್ರಮ

0

Department of Animal Husbandry ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಲ್ಲಿರುವ ದನಗಳಿಗೆ ದಿನಾಂಕ: 20-06-2024 ರಿಂದ 20-07-2024 ರವರೆಗೆ ಚರ್ಮಗಂಟು ರೋಗ ನಿಯಂತ್ರಣಕ್ಕೆ ಮೇಕೆ ಸಿಡುಬು ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಚರ್ಮ ಗಂಟು ರೋಗವು ಕ್ಯಾಪ್ರಿ ಫಾಕ್ಸ್ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಮೇಕೆ ಸಿಡುಬು ಲಸಿಕೆಯಿಂದ ಇದನ್ನು ತಡೆಗಟ್ಟಬಹುದಾಗಿದೆ.
2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ರೋಗೋದ್ರೇಕವು ಅತಿ ಹೆಚ್ಚಾಗಿ ಮಳೆಗಾಲ ಮುಕ್ತಾಯವಾದ ಕೂಡಲೇ ಕಂಡುಬಂದಿರುತ್ತದೆ. ಪ್ರಸ್ತುತ ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಳೆಗಾಲದಲ್ಲಿ ಹೆಚ್ಚಾಗುವ ಸೊಳ್ಳೆ, ನೊಣ ಹಾಗೂ ಕೀಟಗಳ ಕಡಿತದಿಂದ ರೋಗವು ಜಾನುವಾರುವಿನಿಂದ ಜಾನುವಾರುವಿಗೆ ಹರಡುವುದರಿಂದ ಮುಂಜಾಗ್ರತಾ ಕ್ರಮವಾಗಿ ರೋಗದ ವಿರುದ್ಧ 2024-25 ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ಗ್ರಾಮಗಳಲ್ಲಿರುವ ದನಗಳಿಗೆ ಜೂನ್ 20 ರಿಂದ ಜುಲೈ 20 ರವರೆಗೆ ಮೇಕೆ ಸಿಡುಬು ಲಸಿಕೆ ಹಾಕಲಾಗುವುದು.

ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲ್ಲೂಕುವಾರು, ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಯನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ದನಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು.

Department of Animal Husbandry ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸಬಹುದೆಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಶಿವಯೋಗಿ ತಿಳಿಸಿದ್ದಾರೆ.

MESCOM ಜೂನ್ 20 ರಂದು ಶಿವಮೊಗ್ಗ ಅಶೋಕ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಕೋಟೆ ಮಾರಿಕಾಂಬ ದೇವಸ್ಥಾನದ ಬಳಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ದಿ:20-06-2024 ರಂದು ಹಮ್ಮಿಕೊಂಡಿರುವ ಪ್ರಯುಕ್ತ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಅಶೋಕ ರಸ್ತೆ, ಕೋಟೆ ರಸ್ತೆ, ಎಸ್‍ಪಿಎಂ ರಸ್ತೆ, ರಾಮಣ್ಣ ಶೆಟ್ಟಿ ಪಾರ್ಕ್, ಮಹಾರಾಜ ರಸ್ತೆ, ಗಾಂಧಿ ಬಜಾರ್, ನಾಗಪ್ಪ ಕೇರಿ, ಸಾವರ್ಕರ್ ನಗರ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್ ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Shivamogga Police ಜಿಲ್ಲೆಯ ಕಲಾವಿದರು & ಕಲಾತಂಡಗಳಿಗೆ ಗುರುತಿನ ಚೀಟಿ ಪಡೆಯಲು ಅರ್ಜಿ ಆಹ್ವಾನ

0

Shivamogga Police ಜೂನ್ 12 ರಂದು ರಾತ್ರಿ 11.30 ಕ್ಕೆ ಶಿವಮೊಗ್ಗ ಗೋಪಾಳದ ಚಾಲುಕ್ಯನಗರ ಬಸ್ ನಿಲ್ದಾಣದ ಬಳಿ ಸುಮಾರು 60 ರಿಂದ 65 ವಯಸ್ಸಿನ ಗಂಡಸಿನ ಶವ ಪತ್ತೆಯಾಗಿದ್ದು, ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೃತ ವ್ಯಕ್ತಿಯು 5.5 ಅಡಿ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಸುಮಾರು ಮೂರು ಇಂಚು ಉದ್ದದ ಕಪ್ಪುಬಿಳಿ ಕೂದಲು ಹಾಗೂ ಗಡ್ಡ ಬಿಟ್ಟಿರುತ್ತಾನೆ. ಕಾಟನ್ ಜರ್ಕಿನ್ ಮತ್ತು ಟಿ ಶರ್ಟ್ ಧರಿಸಿರುತ್ತಾನೆ.

Shivamogga Police ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಎಸ್.ಪಿ ಶಿವಮೊಗ್ಗ 08182 261400, ಪಿ,ಐ ತುಂಗಾನಗರ ಪೊಲೀಸ್ ಠಾಣೆ 9480803370 ಮತ್ತು ತುಂಗಾ ನಗರ ಪೊಲೀಸ್ ಠಾಣೆ 9141289308 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತುಂಗಾನರ ಪೊಲೀಸ್ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ.

D.C. Mayanna ಹಿರಿಯ ಕಾರ್ಮಿಕ ನಾಯಕ ಡಿ.ಸಿ.ಮಾಯಣ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ

0

D.C. Mayanna ಜೀವನ ಪರ್‍ಯಂತ ಅಸಂಘಟಿತ ಕಾರ್ಮಿಕರ ಶೋಷಿತರ ಅಮಾಯಕರ ತಳ ಮಟ್ಟದವರ ಪರ ಹೋರಾಡುತ್ತಾ ಬಂದಿರುವ 90ರ ಇಳಿ ವಯಸ್ಸಿನ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ ಜೀವಂತವಾಗಿರುವಾಗಲೇ ಅವರನ್ನು ಅವರ ಸೇವೆ ಗುರುತಿಸಿ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಡಿ.ಸಿ.ಮಾಯಣ್ಣ ಅಭಿಮಾನಿಗಳ ಸಂಘದ ಪ್ರಧಾನ ಸಂಚಾಲಕ ಬಿ.ಎನ್.ರಾಜು ಹೇಳಿದರು.

ಅವರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಸಾಮಾನ್ಯವಾಗಿ ಸಮಾಜದಲ್ಲಿ ಗುರುತಿಸಿ ಕೊಂಡವರು ಮರಣ ಹೊಂದಿದ ಮೇಲೆ ಸಂಘ ಸಂಸ್ಥೆಗಳು ಸ್ಮರಣೆ ಕಾರ್ಯಕ್ರಮಗಳನ್ನು ಮಾಡುವುದು ವಾಡಿಕೆ. ಆದರೆ ನಾವು ಅದಕ್ಕೆ ಭಿನ್ನವಾಗಿ ಡಿ.ಸಿ.ಮಾಯಣ್ಣ ರವರು ಮಾಡಿದ 50 ವರ್ಷಗಳ ನಿರಂತರ ಸೇವೆ ಮತ್ತು ಹೋರಾಟಕ್ಕೆ ತಕ್ಕ ಪ್ರತಿಫಲ ನೀಡಲು ಅವರ ಜೀವಿತ ಕಾಲದಲ್ಲಿಯೇ ಅಭಿನಂದನಾ ಸಮಾರಂಭ ಮಾಡಲು ಮುಂದಾಗಿದ್ದೇವೆ.

ಗೌರವಾರ್ಪಣೆಯಿಂದ ಅವರಿಗೂ ಸಮಾಜ ನಮ್ಮನ್ನು ಗುರ್ತಿಸಿ ಗೌರವಿಸಿದೆ ಎಂಬ ಆತ್ಮ ತೃಪ್ತಿ ಲಭಿಸಲಿದೆ. ಇಂತಹ ಸಮಾರಂಭವನ್ನು ಜೀವಂತವಿದ್ದಾಗಲೇ ಕಣ್ತುಂಬಿಕೊಳ್ಳಲಿ ಎಂದು ಹಂಬಲಿಸಿ ಸಮಾರಂಭಕ್ಕೆ ಮುಂದಾಗಿದ್ದೇವೆ.

ಜೂ: 23 ರಂದು ಭಾನುವಾರ ಸಂಜೆ 4 ಗಂಟೆಗೆ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಯುವ ಕಾ: ಡಿ.ಸಿ.ಮಾಯಣ್ಣ ನವರ ೯೦ ನೇ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಬಿ.ಕೆ.ಸಂಗಮೇಶ್ವರ್ ವಹಿಸಿದರೆ, ಜಿಲ್ಲಾ ಉಸ್ತುವಾರಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ.

D.C. Mayanna ಸಂಸದ ಬಿ.ವೈ.ರಾಘವೇಂದ್ರ ರವರು ಮಾಯಣ್ಣ ರವರ ಜೀವನ ಚರಿತ್ರೆಯ ಪುಸ್ತಕದ ಮುಖಪುಟ ಅನಾವರಣ ಮಾಡುವರು. ರೈತ ಸಂಘದ ರಾಜ್ಯ ಅಧ್ಯಕ್ಷ ಕೆ.ಟಿ.ಗಂಗಾಧರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ನಗರಸಭೆ ಮಾಜಿ ಅಧ್ಯಕ್ಷ ಆರ್.ಕರುಣಾಮೂರ್ತಿ, ಮಾಯಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಸೀತಾರಾಮ್, ಕಾರ್ಮಿಕ ಮುಖಂಡರಾದ ಟಿ.ಜಿ.ಬಸವರಾಜಯ್ಯ, ಕಾಳೇಗೌಡ, ಎಸ್.ಆಂಜನೇಯ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ಎಸ್.ಜಿ.ರಾಜು ಮುಂತಾದವರು ಭಾಗವಹಿಸಲಿದ್ದಾರೆಂದು ಬಿ.ಎನ್.ರಾಜು ತಿಳಿಸಿದರು.