Sunday, April 12, 2026
Sunday, April 12, 2026
Home Blog Page 684

State Government Employees Union ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿಗೆ ಸ್ಥಳ ತೋರಿಸಿ ವರ್ಗಾವಣೆ

0

State Government Employees Union ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನ ರಾಜ್ಯ ಉಚ್ಚನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಕಚೇರಿಯಲ್ಲಿ ಖಾಲಿ ಇರುವ ಲೆಕ್ಕಾಧಿಕ್ಷಕರ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕರು ಆದೇಶಿಸಿದ್ದಾರೆ.
ನವೆಂಬರ್ 8 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರವನ್ನ ಕೋಲಾರದ ಸಮಾಜ ಕಲ್ಯಾಣದ ಇಲಾಖೆಗೆ ವರ್ಗಾಯಿಸಿ ಆದೇಶಿಸಲಾಗಿತ್ತು. ಇದರ ವಿರುದ್ಧ ಕೆಎಟಿಗೆ ಹೋದ ಪರಿಣಾಮ ಅವರಿಗೆ ಕೊಂಚ ರಿಲೀಫ್ ಸಿಕ್ಕಿತ್ತು.
ರಾಜ್ಯ ಆಡಳಿತ ನ್ಯಾಯ ಮಂಡಳಿ (KSAT) ಅವರ ಅರ್ಜಿಯನ್ನ ಮರುಪರಿಶೀಲಿಸುವಂತೆ ಸೂಚಿಸಿ, ನಾಲ್ಕು ವಾರದೊಳಗೆ ಮರು ಪರಿಶೀಲನೆ ನಡೆಸಬೇಕು ಎಂದು ಆದೇಶಿಸಿತ್ತು. ಈ ಬೆಳವಣಿಗೆ ಜನವರಿ 2024 ರಲ್ಲಿ ನಡೆದಿತ್ತು.ಲೋಕಸಭಾ ಚುನಾವಣೆ ಮತ್ತು ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ತಡವಾಗಿತ್ತು.
State Government Employees Union ಈಗ ಲೆಕ್ಕಪರಿಶೋಧನ ಮತ್ತು ಲೆಕ್ಕಪರಿಶೀಲ ಇಲಾಖೆ ರಾಜ್ಯ ಉಚ್ಚನ್ಯಾಯಲಯದ ರಿಜಿಸ್ಟ್ರಾರ್ ಜನರಲ್ ಅವರ ಕಚೇರಿಯ ವಿಭಾಗದ ಲೆಕ್ಕಾಧೀಕ್ಷಕರ ಹುದ್ದೆ ಖಾಲಿ ಇದ್ದು ಅಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

K.S. Eshwarappa ಈಶ್ವರಪ್ಪ ‘ಘರ್ ವಾಪ್ಸಿ’ ಗಾಳಿಸುದ್ದಿ. ಶೆಟ್ಟರ್ ಫಾರ್ಮುಲಾ ನಡೆದೀತೆ?

0

K.S. Eshwarappa ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಅಲ್ಲಿ ಟಿಕೆಟ್ ಪಡೆದು ಸೋಲನುಭವಿಸಿ ಕೊನೆಗೆ ತಮ್ಮ ತವರು ಪಕ್ಷಕ್ಕೆ ವಾಪಸ್ ಆಗಿ ಲೋಕಸಭೆಯ ಚುನಾವಣೆಯಲ್ಲಿ ಸಂಸದರಾಗಿದ್ದಾರೆ.ಇವರಂತೆಯೇ ಇದೀಗ ಕೆ.ಎಸ್ ಈಶ್ವರಪ್ಪ ಸಹ ಬಿಜೆಪಿಗೆ ಘರ್ ವಾಪಸಿ ಮಾಡಲಿದ್ದಾರೆಯೇ ಎಂಬ ಕುತೂಹಲ ಉಂಟಾಗಿದೆ.
ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ತಿರುಗಿ ಬಿದ್ದು, ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿಕಳೆದುಕೊಂಡ ಕೆ.ಎಸ್ ಈಶ್ವರಪ್ಪ ಇದೀಗ ಚುನಾವಣೆ ನಂತರ ಮತ್ತೆ ಬಿಜೆಪಿಗೆ ಹತ್ತಿರವಾಗಲಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಜಗದೀಶ ಶೆಟ್ಟರ್ ಮಾದರಿಯಲ್ಲೇ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಬಿಜೆಪಿಗೆ ವಾಪಸ್‌ ಕರೆತರಲು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ವಿರೋಧಿ ಬಣ ಸಿದ್ಧತೆ ನಡೆಸುತ್ತಿದೆ ಎಂಬ ಮಾತುಕತೆ ಬಿಜೆಪಿ ಅಂಗಳದಲ್ಲಿ ನಡೆಯುತ್ತಿದೆ.
ತಮ್ಮ ಪುತ್ರನಿಗೆ ಹಾವೇರಿ ಟಿಕೆಟ್ ಸಿಗದಿದ್ದಕ್ಕೆ ರೊಚ್ಚಿಗೆದ್ದ ಕೆಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಮೋದಿ ಹೆಸರಿನಲ್ಲಿಯೇ ಸ್ಪರ್ಧಿಸಿ, ಸೋತರು. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯ ಹೂಡಿದ್ದರು. ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಮಾವೇಶಕ್ಕೂ ಹೋಗಿರಲಿಲ್ಲ. ಬದಲಿಗೆ ಮೋದಿಯವರೇ ತಮ್ಮ ನಾಯಕ ಎಂದು ಪ್ರಚಾರ ಮಾಡಿದ್ದರು. ನೋಟಿಸ್ ಗೂ ಬಗ್ಗದ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

K.S. Eshwarappa ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನುಪಕ್ಷಕ್ಕೆ ಸೇರಿಸಿಕೊಂಡಂತೆ ಈಗ ಈಶ್ವರಪ್ಪ ಪಕ್ಷಕ್ಕೆ ಸೇರ್ಪಡೆಯಾಗಲಿ ಏನಾಗುತ್ತೆ ಎಂದು ಒಂದು ಗುಂಪು ಹೇಳಿಕೊಳ್ಳುತ್ತಿದೆ. ಇದು ಯಡಿಯೂರಪ್ಪಅವರ ವಿರೋಧಿ ಗುಂಪು. ಈಶ್ವರಪ್ಪ ಅವರಂತಹ ಹಿಂದುಳಿದ ನಾಯಕರ ಅಗತ್ಯ ಪಕ್ಷಕ್ಕಿದೆ ಎನ್ನುವುದು ಈ ಗುಂಪಿನ ವಾದ. ಇದಕ್ಕೆ ಎಂದಿನಂತೆ ಬಿಎಸ್ ವೈ ಗುಂಪಿನ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಬೈದ ಈಶ್ವರಪ್ಪ ಮತ್ತೆ ಪಕ್ಷಕ್ಕೆ ಬೇಡ. ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳಲೂ ಆಗದಿರುವ ಅವರಿಂದ ಏನು ಉಪಯೋಗ ಎನ್ನುವುದು ಈ ಗುಂಪಿನ ಅಭಿಪ್ರಾಯ. ಹೀಗಾಗಿ ಕೆಎಸ್ ಈಶ್ವರಪ್ಪ ಮತ್ತೆ ಬಿಜೆಪಿ ಸೇರುತ್ತಾರೆಯೇ ಅಥವಾ ತಟಸ್ಥವಾಗಿ ಉಳಿಯುತ್ತಾರೆಯೇ ಅವರ ನಿರ್ಧಾರವೇನೆಂಬುದು ತಿಳಿಯಬೇಕಾದರೇ ಸ್ವಲ್ಪ ದಿನ ಕಾಯಬೇಕಿದೆ.

DCC Bank Shivamogga ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ನಾಮಪತ್ರ ಸಲ್ಲಿಕೆ

0

DCC Bank Shivamogga ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಬಿಗ್ ಟ್ವಿಸ್ಟ್ ದೊರೆತಿದೆ. ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ಅವರ ನಾಮಪತ್ರ ಸಲ್ಲಿಕೆ ಕುತೂಹಲ ಮೂಡಿಸಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ನಾಮಪತ್ರ ಸಲ್ಲಿಕೆ ನಿರ್ಧಾರ ಪ್ರಬಲವಾಗಿದೆ. ಒಂದು ವಾರದ ಹಿಂದೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಎರಡು ದಿನಗಳು ಕಳೆದುಲಿದ್ದು 10 ಜನರಿಂದ 39 ಜನ ನಾಮಪತ್ರ ಸಲ್ಲಿಸಿದ್ದರು.

DCC Bank Shivamogga ನಾಳೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕವಾಗಿದ್ದು, ಇದುವರೆಗೂ 16 ಜನ ನಾಮಪತ್ರ ಸಲ್ಲಿಕೆಯಾಗಿದೆ. ಮಹಾಲಿಂಗ ಶಾಸ್ರ್ತಿಗಳು, ಶಾಸಕ ಗೋಪಾಲಕೃಷ್ಣ ಬೇಳೂರು, ವಿರೂಪಾಕ್ಷಪ್ಪ ಜಿ, ಶಿವಮೂರ್ತಿ ಗೌಡ, ರತ್ನಾಕರ‌ ಹೊನಗೋಡ, ಹೆಚ್ ಜಿ ಮಲ್ಲಯ್ಯ ನಾಮಪತ್ರ ಸಲ್ಲಿಸಿದ್ದಾರೆ.

H.D.Kumaraswamy ಮೂರ್ನಾಲ್ಕು ತಿಂಗಳಲ್ಲಿ ಭದ್ರಾವತಿ ವಿಐಎಸ್ ಎಲ್ ಬಗ್ಗೆ ಮಾಹಿತಿ ಸಂಗ್ರಹಿಸುವೆ- ಸಚಿವ ಎಚ್.ಡಿ.ಕುಮಾರಸ್ವಾಮಿ

0

H.D.Kumaraswamy ವಿಐಎಸ್‌ಎಲ್ ಕಾರ್ಖಾನೆಗೆ ಶಾಶ್ವತ ಪರಿಹಾರಕ್ಕಾಗಿ ಮೂರ್‍ನಾಲ್ಕು ತಿಂಗಳ ಸಮಯವಕಾಶ ಬೇಕಾಗಿದೆ. ಜಡ್ಡು ಹಿಡಿದು ಕುಳಿತ ಸೈಲ್ ಅಧಿಕಾರಿಗಳನ್ನು ರಹದಾರಿಗೆ ತರಬೇಕಾಗಿದೆ. ನಾವು ಈಗಾಗಲೆ ಉನ್ನತ ಅಧಿಕಾರಿಗಳ ಬಳಿ ಕಾರ್ಖಾನೆಯನ್ನು ಉಳಿಸಲು ಬೇಕಾದ ಮಾಹಿತಿಗೆ ಸೂಚಿಸಲಾಗಿದೆ ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಮಂಗಳವಾರ ಬೆಂಗಳೂರಿನ ಕೆಐಓಸಿಎಲ್ ಕಚೇರಿಯಲ್ಲಿ ಭೇಟಿ ಮಾಡಿದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಾರದಾ ಅಪ್ಪಾಜಿ ಮತ್ತು ಪಕ್ಷದ ಅಧ್ಯಕ್ಷ ಆರ್.ಕರುಣಾಮೂರ್ತಿ ನೇತೃತ್ವದ ನಿಯೋಗದ ಮನವಿ ಆಲಿಸಿ ಸಂಭಂದಿತ ಅಧಿಕಾರಿಗಳ ಬಳಿ ಮಾತುಕತೆ ನಡೆಸಿದರು. ನಂತರ ನಿಯೋಗಕ್ಕೆ ಇನ್ನು ಮೂರ್‍ನಾಲ್ಕು ತಿಂಗಳಲ್ಲಿ ನುರಿತ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಶಾಶ್ವತ ಪರಿಹಾರಕ್ಕೆ ಮುನ್ನುಡಿ ಬರೆಯೋಣ ಎಂದರು.
ಮನವಿ ಸಲ್ಲಿಸಿ ಮಾತನಾಡಿದ ಶಾರದಾ ಅಪ್ಪಾಜಿ ಅವರು ರಾಜ್ಯ ಸರಕಾರ ಕೇವಲ 1 ರೂ ಮುಖ ಬೆಲೆಗೆ ಕಾರ್ಖಾನೆಯನ್ನು ಕೇಂದ್ರ ಸರಕಾರಕ್ಕೆ ಅಭಿವೃದ್ದಿ ಪಡಿಸಲು ನೀಡಿತ್ತು. ಕೇಂದ್ರ ಸರಕಾರವು ವಾಗ್ದಾನದಂತೆ ಬಂಡವಾಳ ಹೂಡದೆ, ಪುನಶ್ಚೇತನಗೊಳಿಸದೆ ಮಲತಾಯಿ ಧೋರಣೆ ತೋರಿದ್ದರಿಂದ ಹೀನ ಸ್ಥಿತಿಗೆ ಬಂದಿದೆ. ಆದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅರೆ ಉಕ್ಕು ಪ್ರಾಧಿಕಾರದಿಂದ ಸಂಪೂರ್ಣ ಸೈಲ್ ಅಧೀನಕ್ಕೆ ಒಪ್ಪಿಸಿದ ಫಲದಿಂದ ಇಂದಿಗೂ ಕಾರ್ಖಾನೆ ಉಸಿರಾಡುತ್ತಿದೆ. ಹಿಂದಿನ ಅನೇಕ ಕೇಂದ್ರ ಸಚಿವರು ಕಾರ್ಖಾನೆಗೆ ಬಂದು ಬಂಡವಾಳ ತೊಡಗಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಕೇಂದ್ರದ ನೀತಿ ಆಯೋಗವು ಕಾರ್ಖಾನೆಯನ್ನು ಕ್ಲೋಸರ್ ಮಾಡಲು ಮುಂದಾಗಿದೆ. ಆದರೆ ಸಂಸದ ಬಿ.ವೈ.ರಾಘವೇಂದ್ರ ಕ್ಲೋಸರ್ ಮಾಡಲು ಬಿಡದೆ ಉಳಿಸಿದ್ದಾರೆ.
H.D.Kumaraswamy ಈಗ ನಮ್ಮೆಲ್ಲರ ಅದೃಷ್ಟವೆಂಬಂತೆ ಕರ್ನಾಟಕದ ಹೆಮ್ಮೆಯ ಪುತ್ರರಾಗಿರುವ ನೀವು ದೇವರ ಕೃಪೆಯಿಂದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವುದು ಕಾರ್ಮಿಕರ ಪುಣ್ಯವಾಗಿದೆ. ಕಾರ್ಖಾನೆಗೆ ಜೀವ ತುಂಬುವ ಕೆಲಸವೀಗ ನಿಮ್ಮಿಂದ ಆಗಬೇಕಾಗಿದೆ. ಕಾರ್ಮಿಕ ಮತ್ತು ಗುತ್ತಿಗೆ ಕಾರ್ಮಿಕ ಕುಟುಂಬಗಳು ಹಾಗೂ ಲಕ್ಷಾಂತರ ಮಂದಿ ಅವಲಂಭಿತರ ಜೀವನಕ್ಕೆ ಬೆಳಕು ಮೂಡಿದಂತಾಗಿದೆ. ಶಾಶ್ವತ ಪರಿಹಾರ ನಿಮ್ಮಿಂದ ಆಗಿ ಮತ್ತೆ ನೂರ್‍ಕಾಲ ಕಾರ್ಖಾನೆ ಉಸಿರಾಡುವಂತಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರತಿ ಮಿಶ್ರಾ, ಪ್ರಧಾನ ಕಾರ್ಯದರ್ಶಿ ವಿಕಾಸ್ ಬಷೀರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಉಪಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್, ಕಾರ್ಯದರ್ಶಿ ಕೆ.ಆರ್.ಮನು, ಖಜಾಂಚಿ ಎಸ್.ಮೋಹನ್, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್, ಕುಮಾರಸ್ವಾಮಿ, ವಿನಯಕುಮಾರ್, ತ್ರಿವೇಣಿ ಮುಂತಾದವರಿದ್ದರು.

Yakshagana Adhyayana Kendra ಜೂನ್ 23 ತೀರ್ಥಹಳ್ಳಿಯಲ್ಲಿ ತಾಳಮದ್ದಳೆ & ಯಕ್ಷಗಾನ

0

Yakshagana Adhyayana Kendra ಯಕ್ಷಭೂಮಿ ,ಯಕ್ಷಗಾನ ಅಧ್ಯಯನ ಕೇಂದ್ರ,ತೀರ್ಥಹಳ್ಳಿ ವತಿಯಿಂದ ಜೂನ್ 23 ರ ಭಾನುವಾರ ಸಂಜೆ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ತಾಳಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷ ಶೈಲೇಶ್ ತೀರ್ಥಹಳ್ಳಿ ಹೇಳಿದರು.
Yakshagana Adhyayana Kendra ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5:30ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಮಂಥರಾಂತರ ಹಾಗೂ 7:30ಕ್ಕೆ ಯಕ್ಷಭೂಮಿ ಸಂಸ್ಥೆ ವಿದ್ಯಾರ್ಥಿಗಳಿಂದ ಮೈಂದ ದ್ವಿವಿದ ಕಾಳಗ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯಣ್ ಹಾಗೂ ತೀರ್ಥಹಳ್ಳಿ ನಟಮಿತ್ರರು ಅಧ್ಯಕ್ಷ ಸಂದೇಶ್ ಜವಳಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.ಈ ಗೋಷ್ಟಿಯಲ್ಲಿ ಕಲಾವಿದರಾದ ರೋಹಿತ್,ಶಿವಕುಮಾರ್ ನೀನಾಸಂ,ನಿರಂಜನ್ ಪವಾರ್,ವಾಣಿಶ್ರೀ ಕಾಮತ್ ಉಪಸ್ಥಿತರಿದ್ದರು.

Prajwal Revanna ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನ ಮತ್ತೆ 14 ದಿನ ವಿಸ್ತರಣೆ

0

Prajwal Revanna ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ನ್ಯಾಯಾಂಗ ಬಂಧನವನ್ನು ಬೆಂಗಳೂರು ನ್ಯಾಯಾಲಯ ಮಂಗಳವಾರ ವಿಸ್ತರಿಸಿದೆ. ಜನಪ್ರತಿನಿಧಿಗಳ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವಿಶೇಷ ನ್ಯಾಯಾಲಯವು ಅವರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯನ್ನು ಘೋಷಿಸುತ್ತದೆ.
ವಿಶೇಷವೆಂದರೆ, ಏಪ್ರಿಲ್ 28 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. 47 ವರ್ಷದ ಮಾಜಿ ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ರೇವಣ್ಣ ಅವರನ್ನು ಆರೋಪಿ ಸಂಖ್ಯೆ 2 ಎಂದು ಪಟ್ಟಿ ಮಾಡಲಾಗಿದ್ದು, ಅವರ ತಂದೆ ಮತ್ತು ಶಾಸಕ ಎಚ್ ಡಿ ರೇವಣ್ಣ ಪ್ರಮುಖ ಆರೋಪಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುವ ವೇಳೆಗೆ ರೇವಣ್ಣ ಅವರು ದೇಶ ತೊರೆದಿದ್ದರು ಮತ್ತು ಮೇ 31 ರಂದು ಭಾರತಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಹಾಸನದಲ್ಲಿ ಮತದಾನ ನಡೆದ ಒಂದು ದಿನದ ನಂತರ ಅವರು ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ್ದರು.
ನ್ಯಾಯಾಂಗ ಬಂಧನದ ಮೂರನೇ ವಿಸ್ತರಣೆ

Prajwal Revanna ಪ್ರಜ್ವಲ್ ಬಂಧನದ ನಂತರ ನ್ಯಾಯಾಲಯವು ಅವರನ್ನು ಜೂನ್ 6 ರವರೆಗೆ ಎಸ್‌ಐಟಿ ಕಸ್ಟಡಿಗೆ ಕಳುಹಿಸಿತು, ನಂತರ ಅದನ್ನು ಜೂನ್ 10 ರವರೆಗೆ ವಿಸ್ತರಿಸಲಾಯಿತು. ರೇವಣ್ಣ ಅವರ ಅಶ್ಲೀಲ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಜೂನ್ 10 ರಂದು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಆದರೆ, ಸೈಬರ್ ಕ್ರೈಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಇಂದು ಅವರ ವಿರುದ್ಧ ಬಾಡಿ ವಾರೆಂಟ್ ಅನ್ನು ಕೋರಿದೆ. ನಂತರ ಜೂನ್ 14 ರಂದು ಅವರ ಕಸ್ಟಡಿಯನ್ನು ಜೂನ್ 18 ರವರೆಗೆ ವಿಸ್ತರಿಸಲಾಯಿತು.

Sarvodaya mandala ಸರ್ವೋದಯ ಮಂಡಲದ ಅಧ್ಯಕ್ಷರಾಗಿ ಬಸವರಾಜಪ್ಪ ಕಂದಗಲ್ ಆಯ್ಕೆ

0

Sarvodaya mandala ಶಿವಮೊಗ್ಗ ನಗರದ ಮಥುರಾ ಪ್ಯಾರಡೇಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲದ ಸಾಮಾನ್ಯ ವಾರ್ಷಿಕ ಸಭೆಯನ್ನು ನಡೆಸಲಾಯಿತು.
ಮಂಡಲದ ರಾಜ್ಯ ಅಧ್ಯಕ್ಷ ಡಾ. ಹೆಚ್.ಎನ್.ಸುರೇಶ್ ಶಿವಮೊಗ್ಗ ಜಿಲ್ಲೆ ಯ ಸರ್ವೋದಯ ಮಂಡಲದ ಕಾರ್ಯಕಾರಿ ಸಮಿತಿಯಲ್ಲಿ ಬದಲಾವಣೆ ಕುರಿತಾಗಿ ಪ್ರಸ್ತಾವನೆಯನ್ನು ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಮಂಡಿಸಿದ್ದು ಅದರ ಪ್ರಕಾರ ಬಸವರಾಜಪ್ಪ ಪರಪ್ಪನವರ ಕಂದಗಲ್ ಜಿಲ್ಲಾಧ್ಯಕ್ಷರನ್ನಾಗಿ , ಉಪಾಧ್ಯಕ್ಷರಾಗಿ ಭಗವಂತರಾವ್, ರಾಜ್ಯ ಸಮಿತಿ ಸದಸ್ಯರಾಗಿ ಬಸವರಾಜಪ್ಪ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
Sarvodaya mandala ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರನ್ನಾಗಿ ಸಾಸ್ವೇಹಳ್ಳಿ ಧರ್ಮರಾಜ ನಾಡಿಗ್ ಹಾಗೂ ಎಸ್ ಆರ್ ವಿಶ್ವೇಶ್ವgಯ್ಯ್ಶ ಹೊಸನಗರ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಜಿಲೆಯ್ಲ ಸರ್ವೋದಯ ಮಂಡಲದ ಸಲಹಾ ಸಮಿತಿ ಸದಸ್ಯರನ್ನಾಗಿ ಎಂ.ಎನ್.ಸುಂದರರಾಜ್ ಮತ್ತು ಪ್ರೊ.ಸತ್ಯನಾರಾಯಣ್ ಅವರನ್ನು ಆಯ್ಕೆ ಮಾಡಲಾಯಿತು.
ಡಾ.ಹೆಚ್.ಎನ್.ಸುರೇಶ್ ಹಾಗೂ ಭಗವಂತ ರಾವ್ ಅವರಿಗೆ ತಾಲ್ಲೂಕು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ತಾಲ್ಲೂಕು ಸರ್ವೋದಯ ಮಂಡಲದ ನಿಕಟ ಪೂರ್ವ ಅಧ್ಯಕ್ಷೆ ಎನ್.ಆರ್.ಮಂಜುಳಾ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರೊ.ಸತ್ಯನಾರಾಯಣ್ ಸ್ವಾಗತಿಸಿ,ಸಿ ನಿರೂಪಿಸಿದರು. ರಮೇಶ್ ವಂದಿಸಿದರು.

Dharmasthala Rural Development Project ಮಕ್ಕಳು ದೇಶದ ಆಸ್ತಿ, ದೇಶಪ್ರೇಮವನ್ನ ಅವರಲ್ಲಿ ಬೆಳೆಸಬೇಕು- ಆರ್.ಆರ್.ಪಾಟೀಲ್

0

Dharmasthala Rural Development Project ಮಕ್ಕಳು ನೋಡಿ ಕಲಿಯುವುದೆ ಹೆಚ್ಚು ಮಕ್ಕಳು ದುರಬ್ಯಾಸಕ್ಕೆ ಒಳಗಾಗಬಾರದು ಎಂದರೆ ಮೊದಲು ಪೋಷಕರು ಒಳ್ಳೆಯ ಅಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಆರ್.ಆರ್.ಪಾಟೀಲ್ ಹೇಳಿದರು.
ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ದೇಶದ ಆಸ್ತಿ ಅವರಿಗೆ ನಮ್ಮ ದೇಶ ನಮ್ಮ ಹೆಮ್ಮೆ ಎನ್ನುವ ಮನೋಭಾವ ವಿದ್ಯಾರ್ಥಿ ದೆಸೆಯಿಂದಲೆ ಬೆಳೆಸಬೇಕು. ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ಪೋಷಕರು, ಶಿಕ್ಷಕರು, ಸಮಾಜದ ಪ್ರತಿಯೊಬ್ಬರೂ ಎಚ್ಚರಿಕೆವಹಿಸಬೇಕು. ಮೊಬೈಲ್ ಬಳಕೆ ಮಿತಿಮೀರುತ್ತಿರುವುದು ಆತಂಕಕಾರಿ ಅದರಲ್ಲಿ ಸಿಗುವ ಒಳ್ಳೆಯ ವಿಷಯ ನೋಡುವುದಕ್ಕೆ ಪ್ರೇರೇಪಿಸಬೇಕು ಮಕ್ಕಳೆದುರು ದೊಡ್ಡವರೆ ರೀಲ್ಸ್ ನೋಡುತ್ತಾ ಕೂತರೆ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ನಿತ್ಯ ಶಾಲೆಯಲ್ಲಿ ಮಾಡಿದ ಪಾಠ ಅಂದೆ ಮನೆಯಲ್ಲಿ ಮನನ ಮಾಡಿಕೊಳ್ಳಬೇಕು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಆಗ ಜೀವನಕ್ಕೊಂದು ಸಾರ್ಥಕತೆ ಸಿಗುತ್ತದೆ ಎಂದರು.
Dharmasthala Rural Development Project ಈಸೂರು ವಲಯಾಧ್ಯಕ್ಷ ಬೇಗೂರು ಶಿವಪ್ಪ ಮಾತನಾಡಿ ದುಶ್ಚಟ ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತದೆ, ಒಳ್ಳೆಯ ಗುಣ ಹೇಗೆ ಜೀವನದಲ್ಲಿ ಮೇಲೇರುವುದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ ಎನ್ನುವುದು ಮಕ್ಕಳಿಗೆ ತಿಳಿಸುವುದಕ್ಕಾಗಿ ಗ್ರಾಮದಲ್ಲಿ ಕಾರ್‍ಯಕ್ರಮ ನಡೆಸಿರುವುದು ಒಳ್ಳೆಯ ಬೆಳೆವಣಿಗೆ ಇಲ್ಲಿ ಕೇಳಿದ ಎಲ್ಲ ವಿಷಯ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲೆ ಭಾರತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಎಲ್ಲ ಸದಸ್ಯರು, ವಲಯ ಮೇಲ್ವಿಚಾರಕಿ ಶ್ವೇತಾ, ಪ್ರತಿನಿಧಿ ಗೀತಾ, ಪೂರ್ಣಿಮಾ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Lok Sabha Election ಕೇರಳದಲ್ಲಿ ಜೆಡಿಎಸ್ ಪಕ್ಷವು ಎಡರಂಗದ ಜೊತೆ ಇರುವ ನಿರ್ಧಾರ

0

Lok Sabha Election ಜೆಡಿ(ಎಸ್) ರಾಷ್ಟ್ರೀಯ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿರುವ ಹಿನ್ನೆಲೆ, ಪಕ್ಷದ ಕೇರಳ ರಾಜ್ಯ ಘಟಕದ ನಾಯಕರು ಹೊಸ ಪಕ್ಷ ಸ್ಥಾಪನೆಗೆ ನಿರ್ಧರಿಸಿದ್ದಾರೆ.
ಮಂಗಳವಾರ ತಿರುವನಂತಪುರದ ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ಸೇರಿದ ಕೇರಳ ಜೆಡಿಎಸ್ ನಾಯಕರು, ಹೊಸ ಹೆಸರು, ಚಿಹ್ನೆಯೊಂದಿಗೆ ಹೊಸ ಪಕ್ಷ ಕಟ್ಟುವ ನಿರ್ಧಾರ ಕೈಗೊಂಡಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ಜೆಡಿ (ಎಸ್‌) ನಾಯಕರು ಏಕಾಏಕಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪಕ್ಷದ ಕೇರಳ ಘಟಕ, “ನಾವು ಕೇರಳದಲ್ಲಿ ಆಡಳಿತರೂಢ ಎಡರಂಗದ ಜೊತೆಯೇ ಇರುತ್ತೇವೆ” ಎಂದು ಹೇಳಿದ್ದರು.
Lok Sabha Election ಆರಂಭದಲ್ಲಿ ಕೇರಳದ ಜೆಡಿಎಸ್‌ ನಾಯಕರ ಮನವೊಲಿಸುವ ಪ್ರಯತ್ನ ನಡೆಸಿದ್ದ ದೇವೇಗೌಡರು ಮತ್ತು ಕುಮಾರಸ್ವಾಮಿ, ಅವರು ಒಪ್ಪದಿದ್ದಾಗ “ಕೇರಳ ಜೆಡಿಎಸ್ ಎಡರಂಗದ ಜೊತೆಯೇ ಮುಂದುವರಿಯಲಿದೆ” ಎಂದಿದ್ದರು. ಆದರೂ, ಕೇರಳದ ನಾಯಕರಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಸಮಾಧಾನ ನೀಡಿರಲಿಲ್ಲ.
ಲೋಕಸಭೆಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಕುಮಾರಸ್ವಾಮಿ, ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬೆಳವಣಿಗೆ ಕೇರಳ ಜೆಡಿಎಸ್‌ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Shubha Mangala Shivamogga ಜೂನ್ 21, ಶುಭಮಂಗಳ ಭವನದಲ್ಲಿ ವಿಶಿಷ್ಟ ವಿಶ್ವ ಯೋಗ ದಿನಾಚರಣೆ

0

Shubhamangala Shivamogga ಶುಭ ಮಂಗಳ ಸಮಯದಾಯ ಭವನದಲ್ಲಿ ಶಿವಮೊಗ್ಗ ನಗರದ ವಿವಿಧ ಯೋಗ ಸಂಸ್ಥೆಗಳ ಆಶ್ರಯದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು,
ನಮ್ಮ ದೇಹ ಮತ್ತು ಮನಸ್ಸನ್ನು ಪುನರ್ಜೀವನ ಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ದಿನ ಯೋಗ ಮಾಡುವುದರಿಂದ ಉದ್ವೇಗಗಳ ಮೇಲೆ ಕೆಲಸ ಮಾಡಲು ಸಹಾಯವಾಗುತ್ತದೆ. ನಮ್ಮ ಚೈತನ್ಯವು ಹೆಚ್ಚುವುದು ಮತ್ತು ಮನಸ್ಸು ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಮನುಷ್ಯ ಅನಗತ್ಯ ಪ್ರತಿವರ್ಷ ಜೂನ್ 21ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನರು ತಮ್ಮ ಮಾನಸಿಕ ಒತ್ತಡ, ದೈಹಿಕ ಆರೋಗ್ಯಕ್ಕಾಗಿ ಭಾರತೀಯ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದ್ದು, ಭಾರತೀಯ ಯೋಗ ಪರಂಪರೆ ಜಗತ್ತಿಗೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದರು.

ದಿ ಆರ್ಟ್ ಆಫ್ ಲಿವಿಂಗ್, ಸುಮೇರು ಯೋಗ ಕೇಂದ್ರ, ಅಮೃತ ಯೋಗ ಕೇಂದ್ರಕಣಾದ ಯೋಗ ಮತ್ತು ರಿಸರ್ಚ್
, ಎಸ್.ಪಿ.ವೈ.ಎಸ್.ಎಸ್. (ರಿ.), ಕರ್ನಾಟಕ, ಫೌಂಡೇಷನ್, ನಿಹಾರಿಕಾ ಯೋಗ ಕೇಂದ್ರ, ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಬಾರಿಯ ಧ್ಯೇಯ ವಾಕ್ಯ ” ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎನ್ನುವುದಾಗಿದೆ. 21 ರ ಶುಕ್ರವಾರ ಬೆಳಿಗ್ಗೆ 5.30 ರಿಂದ 8.30ರವರೆಗೆ ವಿನೋಬನಗರ, ಶುಭಮಂಗಳ ಸಮುದಾಯ ಧ್ಯಾನ ನಂತರ ಉಪನ್ಯಾಸ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ ನಡೆಯಲಿದೆ ಎಂದರು.

Shubhamangala Shivamogga ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ವೈದ್ಯ ಡಾ!!.
ಪ್ರೀತಮ್ ಬಿ. ಆಗಮಿಸಿ ಡಯಾಬಿಟಿಸ್ ರಿವರ್ಸಲ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶನೇಶ್ವರ
ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್ (ಶಿವಮೊಗ್ಗ ನಗರದ ಭಜನಾ ಒಕ್ಕೂಟ), ಸಂಸ್ಕಾರ ಪ್ರತಿಷ್ಠಾನ ಹಾಗೂ ಧರ್ಮವರ್ಧಿನಿ (ರಿ.), ಇವರುಗಳ ವಿಶೇಷ ಸಹಕಾರವಿದೆ ಎಂದರು.

ಹೆಚ್ಚಿನ ಮಾಹಿತಿಗೆ
ಸಂಪರ್ಕಿಸಿ: 9964072793 (ಶ್ರೀ ಶಬರೀಶ್ ಕಣ್ಣನ್), 9481505853 (ಶ್ರೀ ಶಶಿಭೂಷಣ್ ಶಾಸ್ತ್ರಿ) 9972368587 (ಶ್ರೀ ಕೃಷ್ಣ 9886674375 (ಶ್ರೀ ಅನಿಲ್‌ ಕುಮಾರ್ ಹೆಚ್. ಶೆಟ್ಟರ್) 9741103173 (ಶ್ರೀಮತಿ ಸುಧಾ ಮಂಜುನಾಥ್), 9945150204 (ಶ್ರೀಮತಿ ಶಾಂತ ಎಸ್. ಶೆಟ್ಟಿ) 9379097360 (ಶ್ರೀಮತಿ ಮಧುಸುರೇಶ್), 9481500419 (ಶ್ರೀಮತಿ ಮಮತಾ 9480457274 (ಶ್ರೀ ಬೆಲಗೂರು ಮಂಜುನಾಥ್), 9901824699 – (ಶ್ರೀ ರಾಜಶೇಖರ್).