Saturday, April 11, 2026
Saturday, April 11, 2026
Home Blog Page 683

Chamber of Commerce Shivamogga ಎಲ್ಲರ ಸಲಹೆ ಸ್ವೀಕರಿಸಿ ಅಗತ್ಯ ಸೌಕರ್ಯಗಳನ್ನು ಶಿವಮೊಗ್ಗ ಕ್ಷೇತ್ರಕ್ಕೆ ತರುವೆ- ಸಂಸದ ಬಿ.ವೈ.ರಾಘವೇಂದ್ರ

0

Chamber of Commerce Shivamogga ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹೊಸ ಯೋಜನೆಗಳನ್ನು ತರಬೇಕು.

ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಪಡಿಸಬೇಕು. ಕೈಗಾರಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು. ರಸ್ತೆ, ರೈಲ್ವೆ, ವಿಮಾನಯಾನ ಕ್ಷೇತ್ರಗಳಲ್ಲಿ ಅವಶ್ಯವಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಆಗಬೇಕಿರುವ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕುರಿತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರೊಂದಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಶ್ರಮಿಸುತ್ತೇನೆ. ಎಲ್ಲರ ಸಲಹೆಗಳನ್ನು ಪರಿಗಣಿಸಿ ಅಗತ್ಯ ಸೌಕರ್ಯಗಳನ್ನು ಶಿವಮೊಗ್ಗ ಕೇತ್ರಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

Chamber of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಮುಖರಾದ ಬಿ.ಗೋಪಿನಾಥ್, ವಸಂತ ಹೋಬಳಿದಾರ್, ಡಿ.ಎಂ.ಶಂಕರಪ್ಪ, ರಮೇಶ್ ಹೆಗಡೆ, ಪರಮೇಶ್ವರ್, ಮರಿಸ್ವಾಮಿ, ಪ್ರದೀಪ್ ಯಲಿ, ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಗಣೇಶ್ ಅಂಗಡಿ ಇದ್ದರು.

Department of Education ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ- ಅಪರ್ಣಾ ಎಂ. ಕೊಳ್ಳ

0

Department of Education ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಮತ್ತು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಇದು ಆಘಾತಕಾರಿ ವಿಷಯವಾಗಿದೆ. ಮಕ್ಕಳನ್ನು ಈ ಎಲ್ಲ ಪಿಡುಗುಗಳಿಂದ ರಕ್ಷಿಸಲು ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಆರ್‌ಡಿಪಿಆರ್ ಸೇರಿದಂತೆ 10 ಇಲಾಖೆಗಳು ಅತ್ಯಂತ ಜವಾಬ್ದಾರಿಯಿಂದ ಮತ್ತು ಸಮನ್ವಯತೆ ಸಾಧಿಸಿ, ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ಸೂಚನೆ ನೀಡಿದರು.
ಆರ್‌ಟಿಇ-2006, ಪೋಕ್ಸೋ-2012 ಹಾಗೂ ಬಾಲನ್ಯಾಯ ಕಾಯ್ದೆ-2015 ರ ಅನುಷ್ಟಾನ ಕುರಿತು ಭಾಗೀದಾರರೊಂದಿಗೆ ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿಯೇ ಮಕ್ಕಳ ವಿರುದ್ದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಮಕ್ಕಳ ರಕ್ಷಣೆ ಸಂಬAಧ ಈ ಹತ್ತೂ ಇಲಾಖೆಗಳು ಪ್ರತಿ ತಿಂಗಳಿಗೆ ಓರ್ವ ಇಲಾಖೆ ನೋಡಲ್ ಇಲಾಖೆಯಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.
Department of Education ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 112, ಇದರಲ್ಲಿ 15 ವರ್ಷ ಮೀರಿದವರು 58 ವಿದ್ಯಾರ್ಥಿಗಳು ಇದ್ದಾರೆ. ಕಳೆದ 90 ದಿನಗಳಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಹಾಸ್ಟೆಲ್‌ಗಳು, ಬಾಲ ಮಂದಿರ ಮತ್ತು ಅಂಗನವಾಡಿಗಳನ್ನು ಭೇಟಿ ನೀಡಿದ್ದೇನೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ. ಸರ್ಕಾರಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಹಾಜರಾತಿ ಕುರಿತು ಸಮರ್ಪಕವಾದ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ನೀಡಬೇಕು. ಡ್ರಾಪ್‌ಔಟ್ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಬೇಕು. ಆಗ ಮಕ್ಕಳ ವಿರುದ್ದದ ಪ್ರಕರಣಗಳು ಕಡಿಮೆ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳ ಹಾಜರಾತಿಯನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಕವಾಗಿ ನೀಡಬೇಕೆಂದು ಎಚ್ಚರಿಸಿದರು.

Madhu Bangarappa ಜೂನ್ 28 , ಶಿವಮೊಗ್ಗದಲ್ಲಿ ಬೃಹತ್ ಜನಸ್ಪಂದನ ಸಭೆ- ಸಚಿವ ಮಧು ಬಂಗಾರಪ್ಪ

0

Madhu Bangarappa ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಲು ಜೂ. 28ರಂದು ಶಿವಮೊಗ್ಗದಲ್ಲಿ ಜನಸ್ಪಂದನ ಮತ್ತು 29 ರಂದು ಕೆಡಿಪಿ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಇಂತಹುದೇ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರ ಅನೇಕ ಕುಂದುಕೊರತೆಗಳನ್ನು ನೀಗಿಸಲಾಗಿತ್ತು. ಈ ಬಾರಿ ಜನಸ್ಪಂದ ನ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಕಳೆದ 7 ದಶಕಗಳಿಂದ ನನೆಗುದಿಗೆ ಬಿದ್ದಿರುವ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದ್ದು, ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನ್ಯಾಯವಾದಿಗಳ ತಂಡವನ್ನು ರಚಿಸಲಾಗುವುದು. ಅರಣ್ಯಭೂಮಿಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಮಟ್ಟದಲ್ಲಿ 13 ಸಭೆ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಏಳೆಂಟು ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ಮೂಲಕ ಬಗರ್‍ಹುಕುಂ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರೆದಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಜಿಲ್ಲಾ ಮಟ್ಟದಲ್ಲಿರುವ ಸಮಸ್ಯೆಗಳನ್ನು ಅವರವರ ಹಂತದಲ್ಲಿಯೇ ಬಗೆಹರಿಸಿಕೊಳ್ಳಲು ಮುಖ್ಯಮಂತ್ರಿಗಳು ಸಂಬಂಧಿಸಿದ ಸಚಿವರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ ಅವರು, ಅರಣ್ಯಕ್ಕೆ ಸಂಬಂಧಿಸಿದ ಕಾನೂನು ಸಡಿಲವಾಗಬೇಕು. ಇಲ್ಲವಾದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ಎರಡು ಮೂರು ತಿಂಗಳಿಂದ ಚುನಾವಣೆ ಹಿನ್ನಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಈಗ ಚುನಾವಣೆ ಮುಗಿದಿದೆ, ಬಜೆಟ್ ನಲ್ಲಿ ಹಣ ಕೂಡ ಮಂಜೂರಾಗಿದೆ. ಇನ್ನು ಅಭಿವೃದ್ಧಿ ಕೆಲಸಕ್ಕೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಪ್ರಮುಖರಾದ ಆರ್. ಪ್ರಸನ್ನಕುಮಾರ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಸಿದ್ದಪ್ಪ, ಚಿನ್ನಪ್ಪ, ಶಿವಾನಂದ್, ಚಂದ್ರಶೇಖರ್ ಎಸ್.ಟಿ. ಇದ್ದರು.

Madhu Bangarappa
ರಾಜ್ಯದಲ್ಲಿ ಸುಮಾರು 1900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದ್ದು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ನೀಟ್ ಗೆ ಸಂಬಂಧಿಸಿದಂತೆ ರಾಜ್ಯದ ಆಯ್ದ ಕಾಲೇಜುಗಳಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ನೀಟ್ ತರಬೇತಿ ನೀಡುವ ಕ್ರಮ ಕೈಗೊಳ್ಳಲಾಗುವುದು. ಬಡ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗುವುದು. ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಈಗಿರುವ ನಿರ್ಬಂಧವನ್ನು ಸಡಿಲಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಇತ್ತೀಚೆಗೆ ನಿಧನರಾದ ಬಿಜೆಪಿ ಹಿರಿಯ ನಾಯಕ ಎಂ.ಬಿ. ಭಾನುಪ್ರಕಾಶ್ ಅವರು ಒಳ್ಳೆಯ ಗುಣ ಸ್ವಭಾವದವರಾಗಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಭಾನುಪ್ರಕಾಶ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಚುನಾವಣೆ ಗೆದ್ದಿದ್ದರು. ನಾನು ಕೂಡ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಅವರು ಉತ್ತಮ ಸಹಕಾರಿ ಮನೋಭಾವ ಹೊಂದಿದವರಾಗಿದ್ದರು. ಅವರ ನಿಧನ ನನಗೆ ಬಹಳ ದುಃಖ ತಂದಿದೆ. ಇಂದು ಸಂಜೆ ಮೃತರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳುವುದು ನನ್ನ ಕರ್ತವ್ಯ ಎಂದರು.

NR Pura Police ಭದ್ರಾ ಹಿನ್ನೀರಿನಲ್ಲಿ ಮುಳುಗಿದವರ ಶವಗಳು ಪತ್ತೆ

0

NR Pura Police ತೆಪ್ಪ ಮುಳುಗಿ ಬುಧವಾರ ಭದ್ರಾ ನದಿಯಲ್ಲಿ ಮೂವರು ನೀರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗ್ಗೆ ಭದ್ರಾ ಹಿನ್ನೀರಿನಲ್ಲಿ ಮೂವರ ಶವ ಪತ್ತೆಯಾಗಿದೆ.

ಮೃತದೇಹವನ್ನು ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರಿಂದ ಪತ್ತೆಹಚ್ಚಲಾಗಿದೆ. ಮೃತದೇಹವನ್ನು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನಿಸಲಾಗಿದೆ.

ನಿನ್ನೆಯೂ ಶೋಧ ಕಾರ್ಯ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು. ಕತ್ತಲಾದ ಬಳಿಕ ಶೋಧ ಕಾರ್ಯ ಸ್ಥಗಿತಗೊಳಿಸಿದ್ದರು. ಇಂದು ಮುಂಜಾನೆಯಿಂದ ಶೋಧ ಕಾರ್ಯ ಮುಂದುವರೆದಿತ್ತು. ನಿನ್ನೆ ಪ್ರವಾಸಕ್ಕೆ ಭದ್ರಾ ನದಿ ಹಿನ್ನೀರಿಗೆ ಆಗಮಿಸಿದ್ದ ನಾಲ್ವರು ಸ್ನೇಹಿತರಲ್ಲಿ ಮೂವರು ತೆಪ್ಪದಲ್ಲಿ ಹೋಗಿದ್ದರು. ಓರ್ವ ದಡದಲ್ಲಿ ನಿಂತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

NR Pura Police ತೆಪ್ಪದಲ್ಲಿ ತೆರಳುವಾಗ ತೆಪ್ಪ ಮಗುಚಿ ಮೂವರು ನೀರು ಪಾಲಾಗಿದ್ದಾರೆ. ಆದೀಲ್, ಸಾಜೀದ್, ಅಫ್ಧಾ ಖಾನ್ ಮೂವರು ಮೃತ ದುರ್ದೈವಿಗಳಾಗಿದ್ದಾರೆ.

ಈ ಮೂವರು ಮೃತರು ಶಿವಮೊಗ್ಗದ ವಿದ್ಯಾನಗರದ ಇಸ್ಲಾಮ್‌ಪುರ ನಿವಾಸಿಗಳಾಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ನಿನ್ನೆ ಈ ಘಟನೆ ನಡೆದಿತ್ತು. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

S.N. Channabasappa ಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆ ತುಂಬಲು‌ ಬೆಲೆ ಏರಿಕೆ ಗ್ಯಾರಂಟಿ ಪ್ರಾರಂಭಿಸಿದೆ- ಎಸ್.ಎನ್.ಚನ್ನಬಸಪ್ಪ

0

S.N. Channabasappa ಅವೈಜ್ಞಾನಿಕ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಚುಕ್ಕಾಣಿ ಹಿಡಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಬೆಲೆ ಏರಿಕೆ ಗ್ಯಾರಂಟಿ ಪ್ರಾರಂಭಿಸಿದೆ. ತೈಲದರ ಏರಿಕೆ ಮಾಡಿ ಕನ್ನಡಿಗರಿಗೆ ಇಂಧನ ಬರೆ ಹಾಕಿರುವ ಕಾಂಗ್ರೆಸ್, ದಿನದಿಂದ ದಿನಕ್ಕೆ ಹೊಸ ಗ್ಯಾರೆಂಟಿಗಳೊಂದಿಗೆ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತರಕಾರಿ, ಹಣ್ಣು, ದಿನಸಿ ಸೇರಿದಂತೆ ದಿನಬಳಕೆಯ ವಸ್ತುಗಳ ಹಾಗೂ ಕುಡಿಯುವ ನೀರಿಗೂ ಸುಂಕ ಹೆಚ್ಚಿಸಿ ಕನ್ನಡಿಗರಿಗೆ ಮತ್ತಷ್ಟು S.N. Channabasappa ಬೆಲೆ ಏರಿಕೆಯ ಬರೆ ಹಾಕುವ ಮೂಲಕ ರಾಜ್ಯ ಹಾಗೂ ರಾಜ್ಯದ ಜನತೆಯನ್ನು ದಿವಾಳಿ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರವಿರಲಿ ಎಂದು ಶಿವಮೊಗ್ಗ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ಅವರು ಹೇಳಿದ್ದಾರೆ.ಬಿಜೆಪಿ ಶಿವಮೊಗ್ಗ ನಗರದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.

World International Yoga ಸಮಸ್ತ ಪ್ರಪಂಚದ ಜನರ ದೈಹಿಕ & ಮಾನಸಿಕ ಆರೋಗ್ಯಕ್ಕಾಗಿ ಯೋಗ- ಡಾ.ಪದ್ಮನಾಭ ಅಡಿಗ

0

World International Yoga ಯೋಗಾಚಾರ್ಯ ಶ್ರೀ ಡಾ ಸಿ. ವಿ. ರುದ್ರಾರಾಧ್ಯರ ನೇತೃತ್ವದಲ್ಲಿ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಯೋಗ ಶಾಖೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಯೋಗ ಶಿಕ್ಷಣಾರ್ಥಿಗಳಿಂದ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಾಮಾನ್ಯ ಶಿಷ್ಟಾಚಾರದಂತೆ ಯೋಗ ಅಭ್ಯಾಸದ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯದಂತೆ ” ಸ್ವಹಿತ ಮತ್ತು ಸಮಾಜಕ್ಕಾಗಿ ಯೋಗ ” ಎಂಬುದನ್ನು ನಮ್ಮ ಕೇಂದ್ರ ನಿರಂತರವಾಗಿ ಪಾಲಿಸುತ್ತಿದೆ ಎಂದು ತಿಳಿಸಿದರು. ಯೋಗ ಸಂಭ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಸಂಸ್ಕೃತ ಉಪನ್ಯಾಸಕರು ನಿವೃತ್ತ, ಡಾ. ಪದ್ಮನಾಭ ಅಡಿಗ ಇಂದಿನ ದಿನದ ಪ್ರಾಮುಖ್ಯತೆ ತಿಳಿಸುತ್ತಾ ಭಾರತದ ಪ್ರಾಚೀನ ಸಂಸ್ಕೃತಿಯಲ್ಲಿ ಆರೋಗ್ಯಕ್ಕೆ ಬಹಳ ಮಹತ್ತ್ವ ಕೊಟ್ಟಿದ್ದರು ಎಂಬುದಕ್ಕೆ ಯೋಗಪದ್ಧತಿ ಒಂದು ಉದಾಹರಣೆಯಾಗಿದೆ. ಇಂತಹ ಯೋಗವನ್ನು ಸಮಸ್ತ ಪ್ರಪಂಚದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಒಂದು ಹವ್ಯಾಸವಾಗಿ ರೂಢಿಸಬೇಕೆಂದು ಸೆಪ್ಟೆಂಬರ್, ೨೦೧೪ ರಲ್ಲಿ ಭಾರತದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರಮೋದಿಯವರು ವಿಶ್ವಸಂಸ್ಥೆಯ ಮೂಲಕ ಕರೆಕೊಟ್ಟರು.

ಭಾರತದ ಶ್ರೀ ಅಶೋಕ್ ಮುಖರ್ಜಿಯವರು ಡಿಸೆಂಬರ್ ೧೧, ೨೦೧೪ ರಲ್ಲಿ ಇದಕ್ಕೆ ಬೇಕಾದ ಡ್ರಾಫ್ಟ್ ಸಿದ್ಧಗೊಳಿಸಿ ಮಂಡಿಸಿದರು. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಇದು ೧೭೭ ದೇಶಗಳ ಅನುಮೋದನೆಯೊಂದಿಗೆ ಅಂಗೀಕೃತಗೊಂಡಿತು. ೨೦೧೫, ರಿಂದ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಪ್ರತಿವರ್ಷ ಜೂನ್ ೨೧ ರಂದು ಆಚರಿಸಲಾಗುತ್ತಿದೆ. ಮೊದಲ ಆಚರಣೆಯಲ್ಲಿ ನ್ಯೂಯಾರ್ಕ್, ಪ್ಯಾರೀಸ್, ಬೀಜಿಂಗ್, ಬ್ಯಾಂಕಾಕ್, ಕೌಲಾಲಂಪುರ,ಸಿಯೋಲ್, ದೆಹಲಿ ಮೊದಲಾದವು ಪಾಲ್ಗೊಂಡವು. ಉತ್ತರಗೋಳಾರ್ಧದಲ್ಲಿ ಅತಿ ಹೆಚ್ಚು ಹಗಲಿರುವ ಜೂನ್ ಇಪ್ಪತ್ತೊಂದು, ಉತ್ತರಾಯಣ ದಕ್ಷಿಣಾಯನಗಳ ನಡುವಿನ ಸಂಕ್ರಮಣ ಕಾಲ. ಭಾರತೀಯ ರಿಸರ್ವ್ ಬ್ಯಾಂಕ್ ೨೦೧೫ ರಲ್ಲಿ ಈ ಯೋಗದಿನಾಚರಣೆಯ ನಿಮಿತ್ತವಾಗಿ ೧೦ ರೂಪಾಯಿಯ ನಾಣ್ಯಗಳನ್ನು ಬಿಡುಗಡೆಮಾಡಿತು. ೨೦೧೭ ರಲ್ಲಿ ಅಮೇರಿಕದ ಯು ಎನ್ ಪೋಸ್ಟಲ್ ಅಡ್ಮಿನಿಸ್ಟ್ರೇಷನ್ ವಿವಿಧ ಯೋಗಾಸನಗಳ ಚಿತ್ರದ ೧೦ ಸ್ಟಾಂಪ್ ಗಳ ಒಂದು ಹಾಳೆಯನ್ನು ಬಿಡುಗಡೆಗೊಳಿಸಿತು.
World International Yoga ಯೋಗಪದಕ್ಕೆ ಅನೇಕಾರ್ಥಗಳಿವೆ. ಕವಚ, ಉಪಾಯ,ಮ್ ಧ್ಯಾನ, ಸಂಬಂಧ, ಯುಕ್ತಿ, ಯೋಗ್ಯತೆ ಮೊದಲಾದ ಅರ್ಥಗಳಿದ್ದು ಪತಂಜಲಿಯು ಇದನ್ನು ಧ್ಯಾನದ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಯೋಗ ಶಬ್ದಕ್ಕೆ ಯೋಗಕ್ಕೆ ಅರ್ಹ ಎಂಬರ್ಥದಲ್ಲಿ ಯುಚ್ ಪ್ರತ್ಯಯ ಬಂದು ಯೋಗ್ಯ ಎಂಬ ಶಬ್ದವಾಗಿದೆ. ಸಂಸ್ಕೃತದಲ್ಲಿ ಯೋಗ ಶಬ್ದವನ್ನು ಯುಜಿರ್ ಯೋಗೇ, ಯುಜ್ ಸಮಾಧೌ ಮತ್ತು ಯುಜ್ ಸಂಯಮನೇ ಎಂಬ ಮೂರು ಧಾತುಗಳಿಂದ ನಿಷ್ಪತ್ತಿ ಮಾಡಬಹುದು. ಪತಂಜಲಿಯು ಯುಜ್ ಸಮಾಧೌ ಎಂಬ ಧಾತುವಿನಿಂದ ಯೋಗ ಎಂಬ ಪದವನ್ನು ಹೇಳಿದ್ದಾರೆ. ಆದ್ದರಿಂದ ಯೋಗ ಎಂದರೆ ಏಕಾಗ್ರತೆ, ಸಮಾಧಿ ಎಂದು ಅರ್ಥ. ಯೋಗವು ಆತ್ಮವಿದ್ಯೆಯೂ ಹೌದು.
ಇಂದಿನ ಯುವ ಜನಾಂಗವು ಜೀವನಮೌಲ್ಯಗಳ ಕೊರತೆಯಿಂದ ಡ್ರಗ್ಸ್ ಮೊದಲಾದ ಚಟಗಳಿಗೆ ಬಲಿಯಾಗುತ್ತಿದೆ. ಜನರ ಆರೋಗ್ಯ ಸತತವಾಗಿ ಹದಗೆಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯೋಗವು ನಮ್ಮನ್ನು ರಕ್ಷಿಸುತ್ತದೆ ಎಂಬ ಭಾವನೆಯಿಂದ ಈ ಉತ್ಸವವನ್ನು ಆಚರಿಸುತಿದ್ದೇವೆ. ಅಧ್ಯಾತ್ಮ ಲೋಕದಲ್ಲಿ ಜೀವಾತ್ಮಪರಮಾತ್ಮನ ಸಂಯೋಗವೇ ಯೋಗವಾಗಿದೆ.
ಕ್ರಿಯೈವ ಕಾರಣಂ ಸಿದ್ಧೇಃ ಎಂಬಂತೆ ಯೋಗಾಸನಗಳನ್ನು ಪ್ರತಿದಿನ ತಪ್ಪದೇ ಮಾಡಿದರೆ ಮಾತ್ರ ಆರೋಗ್ಯಭಾಗ್ಯ ಲಭಿಸುತ್ತದೆ. ಅದಕ್ಕೆ ಮಿತಾಹಾರ ಮತ್ತು ಯಮ ನಿಯಮಗಳ ಆಚರಣೆಯೂ ಮುಖ್ಯವಾಗಿದೆ. ಷಟ್ಕರ್ಮಗಳಿಂದ ದೇಹ ಶೋಧನೆಯೂ, ಆಸನಗಳಿಂದ ದೇಹ ದೃಢವೂ, ಮುದ್ರೆಯಿಂದ ದೇಹಕ್ಕೆ ಸ್ಥಿರತೆಯೂ, ಪ್ರತ್ಯಾಹಾರದಿಂದ ಧೀರತ್ವವೂ, ಪ್ರಾಣಾಯಾಮದಿಂದ ಲಾಘವವೂ, ಹಗುರತೆಯೂ, ಧ್ಯಾನದಿಂದ ಆತ್ಮ ಪ್ರತ್ಯಕ್ಷವೂ, ಮತ್ತು ಸಮಾಧಿಯಿಂದ ನಿರ್ಲಿಪ್ತತೆಯ ಮುಕ್ತಿಯೂ ದೊರೆಯುತ್ತದೆ.
ಎಲ್ಲಾ ಶಾಖೆಗಳ ಶಿಕ್ಷಕರು ಮತ್ತು ಯೋಗ ಕೇಂದ್ರದ ಕಾರ್ಯದರ್ಶಿಯವರಾದ ಶ್ರೀ ಎಸ್ ಎಸ್ ಜ್ಯೋತಿ ಪ್ರಕಾಶ್ ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Bapuji MBA College ಕೃತಕ ಬುದ್ಧಿಮತ್ತೆಯ ಚಿಕ್ಕಚಿಕ್ಕ ಕೋರ್ಸ್ ಗಳನ್ನ ಕಲಿಯುವುದು ಕ್ಷೇಮಕರ- ಸಿ.ವಿ.ಗೌಡರ್

0

Bapuji MBA College ಕೃತಕ ಬುದ್ಧಿಮತ್ತೆಯು ಈಗಿನ್ನೂ ಆರಂಭಿಕ ಹಂತದಲ್ಲಿದ್ದು ಮುಂದೆ ವ್ಯಾಪಕವಾದಲ್ಲಿ ತಂತ್ರಾಂಶ ಅಭಿವೃದ್ಧಿ ಅಂದರೆ ಸಾಫ್ಟ್ ವೇರ್ ಡೆವಲೆಪ್ ಮೆಂಟ್ ಸಹಾ ಒಂದು ಕೌಶಲ್ಯವಾಗಿರದೇ ಸಾಮಾನ್ಯವೆನ್ನಿಸಬಹುದು, ಆದ್ದರಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಇರುವವರು ಕೃತಕ ಬುದ್ಧಿಮತ್ತೆಯ ಚಿಕ್ಕ ಚಿಕ್ಕ ಕೋರ್ಸ್ ಗಳನ್ನು ಈಗಿಂದಲೇ ಮಾಡುವುದು ಕ್ಷೇಮಕರ ಎಂದು ಬೆಂಗಳೂರಿನ ಎಂಪ್ಲೇ ಇನ್ಕಾರ್ಪೊರೇಷನ್ ನ ಮುಖ್ಯ ವಿಶ್ಲೇಷಣಾಧಿಕಾರಿ ಸಿ .ವಿ. ಗೌಡರ್ ಕಿವಿಮಾತು ಹೇಳಿದರು.

ಬಾಪೂಜಿ ಎಂಬಿಎ ಕಾಲೇಜಿನ ರಾಜ್ಯಮಟ್ಟದ ಅಂತರ ಕಾಲೇಜು ಯುವೋತ್ಸವ ‘ಆಕ್ಟಾಗನ್ 2024’ ನ್ನು ಉದ್ಘಾಟಿಸಿ ಮಾತನಾಡುತ್ತಾ ಕೃತಕ ಬುದ್ಧಿಮತ್ತೆಯು ಮಾನವರಂತೆಯೇ ಕಾರ್ಯನಿರ್ವಹಿಸುತ್ತದೆಯಾದರೂ ಅತ್ಯಂತ ಚುರುಕಾಗಿ ಹಾಗೂ ನಿಖರವಾಗಿ ನಿರ್ವಹಿಸುತ್ತದೆ, ಚಾಲಕನಿಲ್ಲದ ಸ್ವಯಂ ಚಾಲಿತ ಕಾರುಗಳು, ವೈದ್ಯರಿಲ್ಲದೆ ವೈದ್ಯಕೀಯ ತಪಾಸಣೆ, ತತ್ ಕ್ಷಣದ ಭಾಷಾಂತರ ವ್ಯವಸ್ಥೆ, ಯಂತ್ರಗಳೇ ನಿರ್ವಹಿಸುವ ಷೇರು ವ್ಯವಹಾರ ಮುಂತಾಗಿ ಏನೆಲ್ಲವೂ ಕೌತುಕಮಯವಾಗಬಹುದು, ಆದರೂ ಗಾಬರಿಬೇಡ, ಆಸಕ್ತಿಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಬಗ್ಗೆ ಈಗಿಂದಲೇ ಆಲೋಚನೆ ಮತ್ತು ಸಂಶೋಧನೆಗಳನ್ನು ವೈಯುಕ್ತಿಕವಾಗಿ ಕೈಗೊಳ್ಳುವುದು ಕ್ಷೇಮಕರ, ಕೃತಕ ಬುದ್ಧಿಮತ್ತೆಯು ದೊಡ್ಡ ಶಕ್ತಿಯಾಗಬಹುದಾದರೂ ಅದರ ಸದುಪಯೋಗ ಮುಖ್ಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಎಂಬಿಎ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ಫತ್ರಿಭುವನಾನಂದರವರು ಆಕ್ಟಾಗನ್ ಅಂದರೆ ಅಷ್ಟಕೋನ ಎಂಬ ಈ ಉತ್ಸವದಲ್ಲಿ ಜೀವನಾವಶ್ಯಕ ಎಂಟು ಸಾಂಬಾರು ಪದಾರ್ಥಗಳ ಹೆಸರುಗಳನ್ನು ಎಂಟು ಸ್ಪರ್ಧೆಗಳಿಗೆ ಇಟ್ಟಿದ್ದು ರಾಜ್ಯದ 23 ಕ್ಕೂ ಹೆಚ್ಚು ಕಾಲೇಜುಗಳಿಂದ ಸ್ಪರ್ಧಾರ್ಥಿಗಳು ಬಂದಿದ್ದಾರೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಅಥಣಿ ಎಸ್.ವೀರಣ್ಣನವರು ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ಉದ್ಯೋಗಗಳನ್ನು ಕಸಿಯುತ್ತದೆ ಎಂಬ ಆತಂಕ ಬೇಡ, ಇದು ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಡುವ ಸಾಧ್ಯತೆಗಳಿವೆ, ಆದ್ದರಿಂದಲೇ ತಮ್ಮ ಸಂಸ್ಥೆಯಲ್ಲಿ ಪಠ್ಯದಲ್ಲಿಲ್ಲದಿದ್ದರೂ ಕೃತಕ ಬುದ್ಧಿಮತ್ತೆಯ ವಿಷಯವನ್ನು ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Bapuji MBA College ವಿಭಾಗ ಮುಖ್ಯಸ್ಥ ಡಾ.ಎಸ್ ಹೆಚ್ ಸುಜಿತ್ ಕುಮಾರ್, ಅಧ್ಯಾಪಕರುಗಳಾದ ಡಾ.ಶ್ರುತಿ ಮಾಕನೂರು,ಡಾ. ಪ್ರಕಾಶ್ ಅಳಲಗೇರಿ, ವಿಜಯ್ ಕೆ, ಡಾ. ಚೈತ್ರಾ, ಸರೋಜಾ, ವನಿತಾ ಪಾಟೀಲ್,ರಾಯ್ಕರ್ ಮುಂತಾದವರ ಉಪಸ್ಥಿತಿಯಲ್ಲಿ ಸುಪ್ರಿಯಾ ದಿವಾಕರ್ ಹಾಗೂ ಅಯೇಷಾ ಸಿದ್ದಿಕಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಭಾವನಾ ಹಾಡಿದರೆ ಅತಿಥಿಗಳ ಪರಿಚಯವನ್ನು ಅನುಷಾ ಧನು ಅಮೂಲ್ಯ ನಿವೇದಿತಾ ಮಾಡಿದರು.

ಆಕ್ಟಾಗನ್ 2024ರ ಪಾರಿತೋಷಕಗಳನ್ನು ಅಧ್ಯಕ್ಷರು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.

-ಚಿತ್ರ ಹಾಗೂ ವರದಿ ಡಾ.ಎಚ್.ಬಿ.ಮಂಜುನಾಥ-

Klive Special Article ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ

0

ಲೇ; ಎಮ್.ಎನ್.ಕಬ್ಬೂರ್. ಸವದತ್ತಿ.

Klive Special Article ಯೋಗವು ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ‘ಯೋಗ’ ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುವ, ಸೇರುವುದು ಅಥವಾ ಒಂದಾಗುವುದು ಎಂದರ್ಥ. ಇಂದು ಇದನ್ನು ಪ್ರಪಂಚದಾದ್ಯಂತ ವಿವಿಧ ರೂಪಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ ಮತ್ತು ಜನಪ್ರಿಯತೆಯಲ್ಲಿ ಬೆಳೆಯುತ್ತಿದೆ. ಪ್ರಾಚೀನ ಭಾರತೀಯ ಯೋಗಾಭ್ಯಾಸದ ಹಿಂದಿನ ತತ್ತ್ವಶಾಸ್ತ್ರವು ಭಾರತದಲ್ಲಿ ಸಮಾಜವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವಿಧ ಅಂಶಗಳನ್ನು ಪ್ರಭಾವಿಸುತ್ತದೆ, ಅದು ಆರೋಗ್ಯ ಮತ್ತು ಔಷಧದಂತಹ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರಬಹುದು ಅಥವಾ ಶಿಕ್ಷಣ ಮತ್ತು ಕಲೆ ಸಂಬಂಧಿಸಿದಂತೆ ಇರಬಹುದು. ಹೆಚ್ಚಿನ ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಅನುಮತಿಸಲು ದೇಹ ಮತ್ತು ಆತ್ಮದೊಂದಿಗೆ ಮನಸ್ಸನ್ನು ಏಕೀಕರಿಸುವ ಆಧಾರದ ಮೇಲೆ ಯೋಗದ ಮೌಲ್ಯಗಳು ಸಮುದಾಯದ ನೀತಿಯ ಪ್ರಮುಖ ಭಾಗವಾಗುತ್ತದೆ. “ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ” ಎಂಬುದು ಯೋಗದ ಪ್ರಮುಖ ಪ್ರಯೋಜನಗಳನ್ನು ಒತ್ತಿಹೇಳುತ್ತದೆ, ತನ್ನೊಳಗೆ ಸಾಮರಸ್ಯವನ್ನು ಸಾಧಿಸುವುದು ಮತ್ತು ಜಗತ್ತಿನಲ್ಲಿ ಶಾಂತಿಯನ್ನು ಉತ್ತೇಜಿಸುವುದು ಯೋಗದ ಮೂಲ ಮಂತ್ರವಾಗಿದೆ. 2014 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಯೋಗದ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.

● ಇತಿಹಾಸ:- ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2014 ರಲ್ಲಿ ತಮ್ಮ ಯುಎನ್ ಭಾಷಣದಲ್ಲಿ ಜೂನ್ 21 ರಂದು ವಾರ್ಷಿಕ ಯೋಗ ದಿನವನ್ನು ಸೂಚಿಸಿದರು. ಏಕೆಂದರೆ ಇದು ಉತ್ತರ ಗೋಳಾರ್ಧದಲ್ಲಿ ವರ್ಷದ ದೀರ್ಘ ದಿನವಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹಂಚಿಕೊಳ್ಳುತ್ತದೆ. ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ಯುನೈಟೆಡ್ ಸ್ಟೇಟ್ಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿತು. ಆರಂಭಿಕ ಪ್ರಸ್ತಾಪವನ್ನು ಅನುಸರಿಸಿ, ಯುಎನ್ 2014 ರಲ್ಲಿ “ಯೋಗ ದಿನ” ಎಂಬ ಕರಡು ನಿರ್ಣಯವನ್ನು ಜಾರಿಗೆ ತರಲಾಯಿತು. ಯೋಗ ದಿನವನ್ನು ಮೊದಲು 21 ಜೂನ್ 2015 ರಂದು ವಿಶ್ವದಾದ್ಯಂತ ವಿಶ್ವ ಯೋಗ ದಿನ ಎಂದು ಆಚರಿಸಲಾಯಿತು. ಭಾರತದ ನಿಯೋಗವು ಸಮಾಲೋಚನೆಗಳನ್ನು ನಡೆಸಿತು. 2015 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಂತರಾಷ್ಟ್ರೀಯ ಯೋಗ ದಿನವನ್ನು ಗುರುತಿಸಲು 10 ರೂಪಾಯಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿತು. ಏಪ್ರಿಲ್ 2017 ರಲ್ಲಿ ಯುಎನ್ ಪೋಸ್ಟಲ್ ಅಡ್ಮಿನಿಸ್ಟ್ರೇಷನ್ (ಯುಎನ್‌ಪಿಎ) ಅಂತರಾಷ್ಟ್ರೀಯ ಯೋಗ ದಿನವನ್ನು ಗುರುತಿಸಲು ಒಂದೇ ಹಾಳೆಯ ಮೇಲೆ 10 ಆಸನಗಳ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತು.

Klive Special Article ಅಂತರಾಷ್ಟ್ರೀಯ ಯೋಗ ದಿನ 2024 ರ ಥೀಮ್:- ಈ ವರ್ಷದ ಅಧಿಕೃತ ಥೀಮ್ “ಮಹಿಳಾ ಸಬಲೀಕರಣಕ್ಕಾಗಿ ಯೋಗ” ಎಂದು ಘೋಷಿಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಯೋಗವನ್ನು ಸಂಭಾವ್ಯ ಸಾಧನವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದುವ ಮೂಲಕ, ಮಹಿಳೆಯರ ಯೋಗಕ್ಷೇಮ, ಮಹಿಳೆಯರ ಆರೋಗ್ಯವನ್ನು ನಿರ್ವಹಿಸುವುದು ಮತ್ತು ಅವರಲ್ಲಿ ಆತ್ಮ ವಿಶ್ವಾಸ ತುಂಬುವುದು ಇದರ ತಿರುಳಾಗಿದೆ.

● ಅಂತರರಾಷ್ಟ್ರೀಯ ಯೋಗ ದಿನದ ಲೋಗೋವಿನ ವಿವಿಧ ಅಂಶಗಳು ಮತ್ತು ಮಹತ್ವ:-
1) ಮಾನವನ ಚಿತ್ರ:- ಯೋಗದ ಭಂಗಿಯಲ್ಲಿ ಚಿತ್ರಿಸಲಾದ ಕೇಂದ್ರದಲ್ಲಿರುವ ಮಾನವ ಆಕೃತಿಯು ಯೋಗಾಭ್ಯಾಸವನ್ನು ಸಂಕೇತಿಸುತ್ತದೆ.
2) ಕಿತ್ತಳೆ ಪ್ರಭಾವಲಯ:- ಮಾನವನ ಆಕೃತಿಯ ತಲೆಯ ಸುತ್ತಲಿನ ಕಿತ್ತಳೆ ಪ್ರಭಾವಲಯವು ಜ್ಞಾನೋದಯ, ಆಧ್ಯಾತ್ಮಿಕ ಜಾಗೃತಿ ಅಥವಾ ಯೋಗವು ಬೆಳೆಸಲು ಸಹಾಯ ಮಾಡುವ ಆಂತರಿಕ ಬೆಳಕನ್ನು ಪ್ರತಿನಿಧಿಸುತ್ತದೆ.
3) ಗ್ಲೋಬ್:- ವಿಶ್ವ ಯೋಗ ದಿನದ ಲಾಂಛನದಲ್ಲಿ ಗ್ಲೋಬ್‌ನ ಚಿತ್ರಣವು ಯೋಗದ ಸಾರ್ವತ್ರಿಕತೆಯನ್ನು ಸೂಚಿಸುತ್ತದೆ, ಅಂದರೆ ಇದು ಪ್ರಪಂಚದಾದ್ಯಂತದ ಜನರಿಗೆ ಪ್ರವೇಶಿಸಬಹುದಾದ ಅಭ್ಯಾಸವಾಗಿದೆ.
4) ಎಲೆಗಳು (ಕಂದು ಮತ್ತು ಹಸಿರು):- ಎರಡು ಜೋಡಿ ಎಲೆಗಳು, ಒಂದು ಕಂದು ಮತ್ತು ಒಂದು ಹಸಿರು, ಯೋಗ ಮತ್ತು ಪ್ರಕೃತಿಯ ನಡುವಿನ ಸಂಪರ್ಕವನ್ನು ಪ್ರತಿನಿಧಿಸುತ್ತದೆ.
5) ಕಂದು ಎಲೆಗಳು:- ಲೋಗೋದಲ್ಲಿನ ಕಂದು ಎಲೆಗಳು ಭೂಮಿಯ ಅಂಶವನ್ನು ಸಂಕೇತಿಸುತ್ತವೆ.
6) ಹಸಿರು ಎಲೆಗಳು:- ಲೋಗೋದಲ್ಲಿನ ಹಸಿರು ಎಲೆಗಳು ಪ್ರಕೃತಿ ಮತ್ತು ಹೊಸ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ.

● ಅಂತರಾಷ್ಟ್ರೀಯ ಯೋಗ ದಿನದ ಮಹತ್ವ:-
1) ಯೋಗದ ಅರಿವು ಮತ್ತು ಅಭ್ಯಾಸವನ್ನು ಉತ್ತೇಜಿಸುವ ಮೂಲಕ, ಇದು ಪ್ರಪಂಚದಾದ್ಯಂತ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಇದು ಪ್ರತಿಯಾಗಿ ಆರೋಗ್ಯಕರ ಜೀವನಶೈಲಿ ಮತ್ತು ತಡೆಗಟ್ಟುವ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುವ ಪರಿಣಾಮವನ್ನು ಹೊಂದಿದೆ.

2) ಯೋಗವು ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸಲು ಮತ್ತು ಒತ್ತಡ ಮತ್ತು ನಕಾರಾತ್ಮಕತೆಯನ್ನು ಬಿಡಲು ನಮಗೆ ಕಲಿಸುತ್ತದೆ. ಇದು ನಮ್ಮ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಂಡುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

3) ಸಂಘರ್ಷ ವಲಯಗಳಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ದಿನ ಮತ್ತು ಯೋಗದ ಅಭ್ಯಾಸವನ್ನು ಸಹ ಬಳಸಲಾಗುತ್ತದೆ.

4) ಯೋಗವು ಪ್ರಪಂಚದೊಂದಿಗೆ ಮತ್ತು ಪ್ರಕೃತಿಯೊಂದಿಗೆ ಏಕತೆಯ ಭಾವವನ್ನು ಕಂಡುಕೊಳ್ಳುವ ಸಾಧನವಾಗಿದೆ. ಇದು ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿಯ ಆದರ್ಶಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

5) ಪ್ರಪಂಚದಾದ್ಯಂತದ ಜನರನ್ನು ಕರೆತರುವ ಮೂಲಕ, ರಾಷ್ಟ್ರೀಯತೆ, ಧರ್ಮ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ, ದಿನವು ಜಾಗತಿಕ ಏಕತೆಯನ್ನು ಬೆಳೆಸಲು ಸಹಾಯ ಮಾಡುತ್ತದೆ.

6) ಯೋಗದ ಸಮಗ್ರ ವಿಧಾನವು ವ್ಯಕ್ತಿಗಳು ಮತ್ತು ಗ್ರಹದ ಯೋಗಕ್ಷೇಮವನ್ನು ಒತ್ತಿಹೇಳುತ್ತದೆ. ಇದು ಸುಸ್ಥಿರ ಅಭಿವೃದ್ಧಿಯ ತತ್ವಗಳೊಂದಿಗೆ ಹೊಂದಿಕೊಳ್ಳುತ್ತದೆ.

7) ಯೋಗವು ಅಹಿಂಸೆ, ಸಹಾನುಭೂತಿ ಮತ್ತು ಎಲ್ಲಾ ಜೀವಿಗಳಿಗೆ ಗೌರವದ ತತ್ವಗಳು ಜಾಗತಿಕ ಶಾಂತಿ ಮತ್ತು ಶಾಂತಿಯ ವಿಶಾಲ ಗುರಿಗಳೊಂದಿಗೆ ಹೊಂದಿಕೊಳ್ಳುತ್ತವೆ.

● ಯೋಗಾಸನಗಳು:- ಯೋಗದಲ್ಲಿ ವಿವಿಧ ರೀತಿಯ ಆಸನಗಳಿದ್ದು ಅವುಗಳನ್ನು ಈ ರೀತಿ ಪಟ್ಟಿ ಮಾಡಬಹುದು.
1) ನಿಂತು ಮಾಡುವ ಆಸನಗಳು:- ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರೀಕೋನಾಸನ.
2) ಕುಳಿತು ಮಾಡುವ ಆಸನಗಳು:- ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷಿಟ್ರಾಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ.
3) ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳು:- ಮಕರಾನಸ, ಭುಜಂಗಾಸನ, ಶಲಭಾಸನ.
4) ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳು:- ಸೇತುಬಂಧಾಸನ, ಉತ್ತಾನಪಾದಾಸನ, ಅರ್ಧಹಾಲಾಸನ, ಪವನ ಮುಕ್ತಾಸನ, ಶವಾಸನ.
ಇವುಗಳ ಜೊತೆಜೊತೆಗೆ ಕಪಾಲಬಾತಿ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

● ಯೋಗಾಭ್ಯಾಸದ ಪ್ರಯೋಜನಗಳು:-
1) ಯೋಗವು ದೈಹಿಕ ಸಾಮರ್ಥ್ಯ ಮತ್ತು ಮಾಂಸಖಂಡ ಹಾಗೂ ಮೂಳೆಗಳ ದೃಢತೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕಾರಿಯಾಗಿದೆ.
2) ಮಾನಸಿಕ ಖಿನ್ನತೆ, ಆಯಾಸ, ಆತಂಕ ಮುಂತಾದ ಸಮಸ್ಯೆಗಳ ನಿವಾರಣೆಗೆ ಯೋಗವು ಸಹಾಯಕಾರಿಯಾಗಿದೆ.
3) ಮಧುಮೇಹ, ಉಸಿರಾಟದ ತೊಂದರೆ, ಅಲರ್ಜಿ, ಅಧಿಕ ರಕ್ತದೊತ್ತಡ ಮತ್ತು ಜೀವನಶೈಲಿಗೆ ಸಂಬಂಧಿಸಿದ ಹಲವಾರು ರೋಗಗಳ ನಿರ್ವಹಣೆಯಲ್ಲಿ ಇದು ಪ್ರಯೋಜನಕಾರಿಯಾಗಿದೆ.
4) ಮುಟ್ಟು ಮತ್ತು ಮುಟ್ಟು ನಿಲ್ಲುತ್ತಿರುವ ಸಂದರ್ಭದ ಸಮಸ್ಯೆಗಳನ್ನು ನಿಯಂತ್ರಿಸಲು ಯೋಗವು ಸಹಾಯಕಾರಿಯಾಗಿದೆ.
5) ಮುಖ್ಯವಾಗಿ ಯೋಗವು ದೇಹ ಮತ್ತು ಮನಸ್ಸಿನ ಅಡೆತಡೆಗಳನ್ನು ನಿವಾರಿಸಿ, ಉತ್ಸಾಹಭರಿತ ಜೀವನಕ್ಕೆ ಪ್ರೇರಣೆ ನೀಡುವ ಪ್ರಕ್ರಿಯೆಯಾಗಿದೆ.

● ಕೊನೆಯ ಮಾತು:- ಯೋಗವು ನಮ್ಮ ಪ್ರಾಚೀನ ಸಂಪ್ರದಾಯದಿಂದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆಯನ್ನು ಒಳಗೊಂಡಿರುತ್ತದೆ. ನಮ್ಮ ಆರೋಗ್ಯ ಮತ್ತು ನಮ್ಮ ಯೋಗಕ್ಷೇಮಕ್ಕೆ ಮೌಲ್ಯಯುತವಾದ ಒಂದು ಸಮಗ್ರ ವಿಧಾನವಾಗಿದ್ದು, ಯೋಗವೆಂದರೆ ಕೇವಲ ವ್ಯಾಯಾಮವಲ್ಲ, ಇದು ನಮ್ಮೊಂದಿಗೆ, ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಅರ್ಥವನ್ನು ಕಂಡುಕೊಳ್ಳುವ ಒಂದು ಮಾರ್ಗವಾಗಿದೆ. ಜೊತೆಜೊತೆಗೆ ಯೋಗವು ದೈನಂದಿನ ಜೀವನದಲ್ಲಿ ಸಮತೋಲಿತ ಮನೋಭಾವವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ಬೆಳೆಸುತ್ತದೆ ಮತ್ತು ಒಬ್ಬರ ಕಾರ್ಯಗಳ ಕಾರ್ಯಕ್ಷಮತೆಯಲ್ಲಿ ಕೌಶಲ್ಯವನ್ನು ನೀಡುತ್ತದೆ. ಇಂತಹ ಯೋಗವನ್ನು ನಾವು ನೀವೆಲ್ಲ ಅನುಸರಿಸೋಣವೇ….

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com

Bhadravati Police ಭದ್ರಾವತಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಕಳವು

0

Bhadravati Police ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ ನಿಲ್ಲಿಸಿದ್ದ ಬೈಕ್‌ವೊಂದನ್ನ ಸಂಜೆಯಾಗುವಷ್ಟರಲ್ಲಿ ಕಳ್ಳರು ಕದ್ದೊಯ್ದ ಬಗ್ಗೆ ವರದಿಯಾಗಿದೆ.
ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಘಟನೆ ಸಂಬಂಧ ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗತಿಬೆಳಗಲು ಗ್ರಾಮದ ಯುವಕ ಎನ್. ಲೋಕೇಶ್ ಸಿಡಿ ಡಿಲಕ್ಸ್ ದ್ವಿಚಕ್ರ ವಾಹನವನ್ನು ಬೆಳಿಗ್ಗೆ 8.50 ಸಮಯದಲ್ಲಿ Bhadravati Police ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಬಳಿಕ ಕೆಲಸ ಮುಗಿಸಿ ಸಂಜೆ 5.30ರ ಸಮಯದಲ್ಲಿ ಬಂದು ಬೈಕ್‌ ಹುಡುಕಿದ್ದಾರೆ. ಆದರೆ ಬೈಕ್‌ ಇರಲಿಲ್ಲ ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಕಳುವಾಗಿರುವುದಾಗಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Girl Died while making Reels ರೀಲ್ಸ್ ಮಾಡಲು ಹೋಗಿ ಕಾರು ಸಮೇತ ಪ್ರಪಾತಕ್ಕೆ ಜಾರಿ ಪ್ರಾಣತೆತ್ತ ಯುವತಿ

0

Girl Died while making Reels ರೀಲ್ಸ್‌ ಹುಚ್ಚಿಗೆ ಯುವತಿಯೊಬ್ಬಳು ಸಲ್ಲದ ಸಾಹಸ ಮಾಡಲು ಹೋಗಿ ಸಾವನ್ನಪ್ಪಿದ ಘಟನೆಯ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್‌ ಗ್ರಾಮದಲ್ಲಿನ ವಿಡಿಯೋ ಇದಾಗಿದೆ. ಶ್ವೇತಾ (25) ಮೃತ ಯುವತಿ
ಇಲ್ಲಿನ ದತ್ತ ಮಂದಿರದ ಬೆಟ್ಟದ ತುದಿಗೆ ಕಾರನ್ನ ರಿವರ್ಸ್‌ ತೆಗೆದುಕೊಂಡು ಹೋಗಿ ನಿಲ್ಲಿಸುವ ರೀಲ್ಸ್‌ ಮಾಡಿದ ಯವತಿ, ಕಾರು ಕಂಟ್ರೋಲ್‌ಗೆ ಸಿಗದೇ ಪ್ರಪಾತಕ್ಕೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ.
Girl Died while making Reels ಮೂವರು ಸ್ನೇಹಿತರ ಜತೆಗೆ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ತೆರಳಿದ್ದ ಶ್ವೇತಾ ಅವರು ಕಾರ್‌ನ್ನು ಹಿಂದಕ್ಕೆ ಚಲಿಸಿ ರೀಲ್ಸ್‌ ಮಾಡುತ್ತಿದ್ದರು. ಈ ವೇಳೆ ಆಕೆಯ ಸ್ನೇಹಿತರು ದೃಶ್ಯವನ್ನು ಶೂಟ್‌ ಮಾಡುತ್ತಿದ್ದರು. ಶ್ವೇತಾ ಕಾರ್‌ನ್ನು ಹಿಮ್ಮುಖವಾಗಿ ಚಾಲನೆ ಮಾಡುವಾಗ ಸ್ನೇಹಿತರು ಕಾರು ನಿಲ್ಲಿಸುವಂತೆ ಕೂಗಿದ್ದಾರೆ. ಆದರೆ ಅಷ್ಟರಲ್ಲಿ ನಿಯಂತ್ರಣ ತಪ್ಪಿದ ಕಾರು ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾರೆ.