Saturday, April 11, 2026
Saturday, April 11, 2026
Home Blog Page 682

Yoga Day ಯೋಗ ನಮ್ಮ ದೈನಿಕ ಬದುಕಿನ ಅವಿಭಾಜ್ಯ ಅಂಗವಾಗಬೇಕು- ಶ್ರೀಸಾಯಿನಾಥಶ್ರೀ

0

Yoga Day ಯೋಗ ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.

ಗುರುಪುರದ ಬಿಜಿಎಸ್ ಶಾಲಾ ಮತ್ತು ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಅವರು ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಇದು ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಅವಿಭಾಜ್ಯ ಅಂಗವಾಗಿರಬೇಕು ಎಂದರು.

ಯೋಗ ಭಾರತದ ಪ್ರಾಚೀನ ಕಲೆ ಇದನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ, 2014ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಯೋಗದ ಬಗ್ಗೆ ಪ್ರಸ್ತಾಪಿಸಲಾಯಿತು. ಆ ಸಂದರ್ಭದಲ್ಲಿ 177 ರಾಷ್ಟ್ರಗಳು ಇದಕ್ಕೆ ಒಪ್ಪಿಗೆಯನ್ನ ಸೂಚಿಸಿದವು ಇದರ ಪರಿಣಾಮವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ವಿದೇಶಿಯರು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತಾರೆ. ದುರಂತವೆಂದರೆ ಭಾರತದಲ್ಲಿಯೇ ಯೋಗದ ಅಭ್ಯಾಸ ನಿರಂತರವಾಗಿ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ನಮ್ಮ ದೇಶದ ಮೂಲವಾಗಿರುವ ಯೋಗವನ್ನ ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಪ್ರತಿಯೊಬ್ಬರು ಆರೋಗ್ಯವಂತರಾಗಿ, ಸದಾ ಲವಲವಿಕೆಯಿಂದಿರಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.

ಜ್ಞಾನದಲ್ಲಿ 18 ಪಾದಗಳಿದ್ದು ಅದರಲ್ಲಿ ನಾಲ್ಕು ಯೋಗಗಳು ಇರುತ್ತವೆ. ಜ್ಞಾನ ಯೋಗ, ರಾಜಯೋಗ, ಕರ್ಮ ಯೋಗ,ಭಕ್ತಿ ಯೋಗ ಎಂಬ ನಾಲ್ಕು ವಿಭಾಗಗಳಿದ್ದು ಈ ನಾಲ್ಕು ಭಾಗಗಳಲ್ಲಿ ನಾವು ಪ್ರತಿನಿತ್ಯ ಯೋಗ ಅಭ್ಯಾಸವನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.

Yoga Day ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್., ಉಪನ್ಯಾಸಕ ಸಂದೀಪ್ ಶೆಟ್ಟಿ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಮಾಲತೇಶ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರಿದ್ದರು.

ಬಾಕ್ಸ್ : ಕೇವಲ ಭಾರತವಲ್ಲದೆ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಇದರ ರೂವಾರಿಯಾಗಿದ್ದು,ಈಗ ಭಾರತದ ಯೋಗ ವಿಶ್ವದ ತುಂಬಾ ಹರಡಿದೆ ಎಂದರು.
ಪ್ರತಿನಿತ್ಯ ಅರ್ಧಗಂಟೆ ಎಲ್ಲರೂ ಕೂಡ ಯೋಗಾಸನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ದಶಕದಿಂದೀಚೆಗೆ ಯೋಗದ ಮಹತ್ವದ ಜನರಿಗೆ ಅರಿವಾಗಿದ್ದು, ಹೆಚ್ಚಿನ ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು, ಯೋಗಾಭ್ಯಾಸದ ಕಡೆಗೆ ಒಲವು ಹೊಂದಿದ್ದಾರೆ ಎಂದರು.

ಯೋಗಾಸನದ ಮೂಲಕ ಶರೀರ, ಮನಸ್ಸು ಮತ್ತು ನರ-ನಾಡಿಗಳನ್ನು ಸದಾ ಕ್ರಿಯಾಶೀಲವಾಗಿಡುವಲ್ಲಿ ಸಹಕಾರಿಯಾಗದೇ ಮಾತ್ರವಲ್ಲ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಪಿತ್ತಕೋಶ, ಕಿಡ್ನಿ ಮುಂತಾದವುಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಯೋಗಾಭ್ಯಾಸ ಉತ್ತಮವಾದುದಾಗಿದೆ ಎಂದು ತಿಳಿಸಿದರು

McGann Hospital ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿ ವ್ಯಕ್ತಿಯ ಕಾಲಿಗೆ ಗಾಯ

0

McGann Hospital ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ. ತಾಲ್ಲೂಕಿನ ಹುಣಸೋಡು ಗ್ರಾಮದ ಜಮೀನಿನಲ್ಲಿ ಘಟನೆ ಸಂಭವಿಸಿದೆ. ಲೋಕೇಶ್ (36) ಗಾಯಾಳು.
ಜೂ.15ರಂದು ರಾತ್ರಿ ಕುಮಾರ ನಾಯ್ಕ ಎಂಬುವವರ ಜಮೀನಿನಲ್ಲಿ ಜೋಳ ಕಾಯಲು ಹೋಗಿದ್ದ ಸಂದರ್ಭ ಅವಘಡ ಸಂಭವಿಸಿದೆ. McGann Hospital ಕುಮಾರ ನಾಯ್ಕ ಕೋವಿ ಹಿಡಿದುಕೊಂಡಿದ್ದಾಗ ಆಕಸ್ಮಿಕವಾಗಿ ಹಾರಿದ ಗುಂಡು ಲೋಕೇಶ್‌ಗೆ ತಗುಲಿದೆ. ಗಂಭೀರ ಗಾಯಗೊಂಡಿದ್ದ ಆತನನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Co-operative society ಹೊಸನಗರದಲ್ಲಿ ಸಹಕಾರ ಸಂಘದ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಕುಸಿತ

0

Co-operative society ನಿರ್ಮಾಣ ಹಂತದ ಕಟ್ಟಡದ ಸೆಂಟ್ರೀಂಗ್ ಕುಸಿದ ಘಟನೆ ಹೊಸನಗರ ಖಾಸಗಿ ಬಸ್ ನಿಲ್ದಾಣ ಬಳಿ ನಡೆದಿದೆ.
ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಕಾಮಗಾರಿಯ ಸೆಂಟ್ರೀಂಗ್ ಕುಸಿದಿದೆ. ಘಟನೆಯಲ್ಲಿ ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Aam Aadmi Party ಶಿವಮೊಗ್ಗ ಜಿಲ್ಲೆಯಲ್ಲಿ ಆಮ್ ಆದ್ಮಿ ಚಟುವಟಿಕೆ ಆರಂಭ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ -ಬಿ.ಟಿ.ನಾಗಣ್ಣ

0

Aam Aadmi Party ಮುಂಬರುವ ಜಿ.ಪಂ., ತಾ.ಪಂ., ಸೇರಿದಂತೆ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅರವಿಂದ್‌ ಕ್ರೇಜಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿರುವುದು ಸಂತಸ ತಂದಿದೆ. ಸತ್ಯಕ್ಕೆ ಜಯ ಸಿಕ್ಕಂತೆಯಾಗಿದೆ. ಬಿಜೆಪಿ ಸರ್ವಾಧಿಕರತನದಿಂದ ವರ್ತಿಸುತ್ತಿದ್ದು, ಭ್ರಷ್ಟಚಾರ ರಹಿತ ನಾಯಕರನ್ನು ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಇದೊ೦ದು ಕೆಟ್ಟ ರಾಜಕಾರಣವಾಗಿದೆ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಚಾಟಿ ಏಟು ಬೀಸಿದೆ. ಆದರೂ ಕೂಡ ಇದನ್ನು ಮುಂದುವರಿಸಲಾಗುತ್ತಿದೆ ಎಂದರು.

ನೀಟ್ ಪರೀಕ್ಷೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದ್ದಲ್ಲದೆ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರವೇ ಕಾರಣವಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Aam Aadmi Party ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ಕೂಡ ಆಡಳಿತ ನಡೆಸುವಲ್ಲಿ ವೈಫಲ್ಯ ಖಂಡಿವೆ. ರಾಜ್ಯ ಸರ್ಕಾರ ಗ್ಯಾರಂಟಿಗಳಲ್ಲಿ ಮುಳುಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸಲಾಗಿದೆ. ದೆಹಲಿ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ನೀಡಿದರೂ ಕೂಡ ಯಾವುದೇ ಬೆಲೆಯನ್ನು ಏರಿಸಿಲ್ಲ. ಕರ್ನಾಟಕ ರಾಜ್ಯದಲ್ಲಿ ಏಕೆ ಈ ರೀತಿ ಆಡಳಿತ ನಡೆಸಬಾರದು ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮನೋಹರ ಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಹೊಸ ತಂಡ ರಚಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೂತನ ಜಿಲ್ಲಾಧ್ಯಕ್ಷ ಮನೋಹರ ಗೌಡ, ಪದಾಧಿಕಾರಿಗಳಾದ ಪ್ರೊ.ಚಂದ್ರಶೇಖರ್, ಕಿರಣ್ ಕೆ., ನಜೀರ್‌ ಅಹಮ್ಮದ್, ರಾಜು, ಲಿಂಗರಾಜು, ಹರೀಶ್, ಲಕ್ಷ್ಮೀಶ್, ಸಗೀರ್ ಅಹಮ್ಮದ್ ಮುಂತಾದವರು ಇದ್ದರು.

Shivamogga Police ಶಿವಮೊಗ್ಗ ಸಮೀಪ ಗಾಂಜಾ ಮಾರುತ್ತಿದ್ದ ಯುವಕನ ಬಂಧನ

0

Shivamogga Police ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ತುಂಗಾನಗರ ಎಸ್ ಐ ಮಂಜುನಾಥ್ ಬಿ, ಸಿದ್ದಪ್ಪ, ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 88,560 ರೂಗಳ 2 ಕೆಜಿ 214 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕ್‌ನ್ನು ಅಮಾನತುಪಡಿಸಿಕೊಂಡಿದೆ.
Shivamogga Police ಬಂಧಿತ ವ್ಯಕ್ತಿ ನಾಗೇಶ ನಾಯ್ಕ ( 29) ಲಕ್ಷ್ಮಿಪುರ ಹೊಸಳ್ಳಿ ತಾಂಡಾದವನಾಗಿದ್ದಾನೆ. ಈತನು ಓತಿಘಟ್ಟದಿಂದ ದುಮ್ಮಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದ ರುದ್ರಭೂಮಿಯ ಹತ್ತಿರ ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದನು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

Shivamogga DCC Bank ಡಿಸಿಸಿ ಬ್ಯಾಂಕಿಗೆ ರಿಪ್ಪನ್ ಪೇಟೆಯ ಎಂ.ಎಂ.ಪರಮೇಶ್ ಅವಿರೋಧ ಆಯ್ಕೆ

0

Shivamogga DCC Bank ಶಿವಮೊಗ್ಗ ಡಿಸಿಸಿ ಬ್ಯಾ೦ಕ್‌ ನಿರ್ದೇಶಕ ಸ್ಥಾನಕ್ಕೆ ರಿಪ್ಪನ್ ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ೦. ಎ೦ ಪರಮೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ನಿನ್ನೆ ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು 13 ಕ್ಷೇತ್ರದಿ೦ದ 35 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ನಾಮಪತ್ರ ಪರಿಶೀಲನೆ ನಡೆದಿದೆ. ನಾಳೆ ಜೂ.22 ರಂದು ನಾಮಪತ್ರ ಹಿ೦ಪಡೆಯುವ ಕೊನೆಯ ದಿನಾ೦ಕವಾಗಿದೆ. ಹೊಸನಗರ ಕ್ಲೇತ್ರದಿ೦ದ ಎ೦ ಎ೦ ಪರಮೇಶ್‌ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಈ ಕ್ಷೇತ್ರಕ್ಕೆ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Shivamogga DCC Bank ರಿಪ್ಪನ್ ಪೇಟೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎಂ ಎಂ ಪರಮೇಶ್‌ 9 ನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಶಿವಮೊಗ್ಗ ಡಿಸಿಸಿ ಬ್ಯಾ೦ಕ್‌ ನ ನಿರ್ದೇಶಕರಾಗಿದ್ದು ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

International Yoga Day ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪತಂಜಲಿ ಅಷ್ಟಾಂಗ ಯೋಗ ಪೂರಕ-ಡಾ.ಅನಿತಾ

0

International Yoga Day ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪತಂಜಲಿ ಮಹರ್ಷಿಯ ಅಷ್ಟಾಂಗಯೋಗ ಪೂರಕವಾಗಿದೆ. ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಯೋಗ ಅಭ್ಯಾಸವನ್ನು ಮಾಡಲು ಮುಂದೆ ಬರಬೇಕು. ಖೈದಿಗಳ ಮಾನಸಿಕ ಪರಿವರ್ತನೆಗೆ ಯೋಗಾಸನ ತರಬೇತಿ ಶಿಬಿರ ಸಹಕಾರಿಯಾಗಿದೆ ಎಂದು ಕೇಂದ್ರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ|| ಅನಿತಾ ಆರ್. ಹೇಳಿದರು.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಕೇಂದ್ರ ಕಾರಾಗೃಹದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಖೈದಿಗಳ ಮಾನಸಿಕ ಪರಿವರ್ತನೆಗಾಗಿ ಏರ್ಪಡಿಸಿದ್ದ ವಿಶೇಷ ಯೋಗಾಸನ ತರಬೇತಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಕಾರಾಗೃಹದಲ್ಲಿ ಇರುವ ಪ್ರತಿಯೊಬ್ಬರು ಯೋಗಾಸನ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮುಂದೆ ಬರಬೇಕು. ನುರಿತ ಯೋಗ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳು ಜಾನಪದ ಕಲಾವಿದರ ಮೂಲಕ ಹೆಚ್ಚು ಅರ್ಥಬದ್ಧವಾಗಿ ಈ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯವಾದದ್ದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತಂಜಲಿ ಜೆ.ನಾಗರಾಜ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಯೋಗಾಸನ ತರಬೇತಿ ನೀಡಲು ಸಹಕಾರ ನೀಡಿದ್ದಾರೆ. 740 ಪುರುಷ ಖೈದಿಗಳು, 40 ಮಹಿಳಾ ಖೈದಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.

International Yoga Day ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ ಮಾತನಾಡಿ, ಯೋಗ ಕಲೆಯೂ ಹೌದು, ವಿಜ್ಞಾನವೂ ಹೌದು ಎಂದರು.
ಪತಂಜಲಿ ಸಿ.ಇ.ಓ. ಪರಿಸರ ಸಿ.ರಮೇಶ್ ಮಾತನಾಡಿ, ಪತಂಜಲಿ ಯೋಗ ಶಾಖೆಯನ್ನು ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಿದ್ದು, ಅದರ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಡಿ.ಕೃಷ್ಣಪ್ಪ ದಾಸಪ್ಪ ಮಲ್ಲಾಡಿಹಳ್ಳಿ ಹೊಳಲ್ಕೆರೆ ಚಿತ್ರದುರ್ಗ ಜಿಲ್ಲೆ ಇವರನ್ನು ಆಯ್ಕೆ ಮಾಡಿದ್ದೇವೆ. ಇವರ ನೇತೃತ್ವದಲ್ಲಿ ನಿರಂತರವಾಗಿ ಯೋಗಾಸನ ತರಬೇತಿಯನ್ನು ನಡೆಸಲಾಗುವುದು. ಮೂರು ತಿಂಗಳಿನಲ್ಲಿ ಅತ್ಯುತ್ತಮವಾಗಿ ಯೋಗಾಸನ ತರಬೇತಿ ಕಲಿಯುವ ಶಿಬಿರಾರ್ಥಿಗಳಿಗೆ ಅಭಿನಂದನೆ ಮಾಡಿ ಸನ್ಮಾನಿಸಲಾಗುವುದುಎಂದರು.
ಅಧ್ಯಕ್ಷತೆಯನ್ನು ಪತಂಜಲಿ ರಾಜ್ಯ ಸಮಿತಿ ಸದಸ್ಯ, ಜೇಸಿಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ವಹಿಸಿದ್ದರು.

Vidhusekhara Bharathi Swamiji ಶಿವಮೊಗ್ಗದಲ್ಲಿ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಧಾರ್ಮಿಕ ಕಾರ್ಯಕ್ರಮ

0

Vidhusekhara Bharathi Swamiji ಶೃಂಗೇರಿ ಶಾರದ ಪೀಠಾಧೀಶರರಾದ ವಿದುಶೇಖರ್ ಭಾರತಿ ಮಹಾಸ್ವಾಮಿಗಳು ಜೂನ್ 24ರಿಂದ 26ರವರೆಗೆ ಶಿವಮೊಗ್ಗದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಡಾ|| ಪಿ. ನಾರಾಯಣ, ೨೪ ರ ಸಂಜೆ ೬ ಗಂಟೆಗೆ ಕೋಟೆ ಭೀಮೇಶ್ವರ ದೇವಸ್ಥಾನಕ್ಕೆ ಸ್ವಾಮೀಜಿ ಆಗಮಿಸುವರು.

ಅಲ್ಲಿಂದ ಶೋಭಾಯಾತ್ರ್ರೆ ಮೂಲಕ ಶಂಕರಮಠಕ್ಕೆ ಆಗಮಿಸುವರು. ಪೂರ್ಣಕುಂಭ ಸ್ವಾಗತ, ಪಾದಪೂಜೆಯನ್ನು ನಡೆಸಲಾಗುವುದು. 8 ಗಂಟೆಗೆ ಚಂದ್ರಮೌಳೇಶ್ವರನ ಪೂಜೆಯಲ್ಲಿ ಸ್ವಾಮೀಜಿ ಪಾಲ್ಗೊಳ್ಳುವರು ಎಂದರು.

25ರಂದು ನಾರಿಕೇಳ ಹೋಮ ಬೆಳಗ್ಗೆ ೬ರಿಂದ ಆರಂಭವಾಗಲಿದೆ. 6 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಸಂಜೆ 5ಕ್ಕೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸ್ತೋತ್ರಗಳ ಮಹಾಸಮರ್ಪಣೆ ನಡೆಯಲಿದೆ. ನಂತರ ಗುರುವಂದನೆ , ಸ್ವಾಮೀಜಿಯಿಂದ ಆಶೀರ್ವಚನ ನಡೆಯಲಿದೆ ಎಂದರು.

Vidhusekhara Bharathi Swamiji 26ರಂದು ಬೆಳಗ್ಗೆ 9ಕ್ಕೆ ಶಂಕರ ಮಠದ ಪಕ್ಕದಲ್ಲಿರುವ ಅಭಿನವ ವಿದ್ಯಾತೀರ್ಥ ಮಂಟಪದ ಪುನನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಇದು ಕೇವಲ ಧಾರ್ಮಿಕ ಮಂದಿರವಾಗಿರಲಿದೆ. ಯಜ್ಞ,, ಯಾಗಾದಿ, ಧಾರ್ಮಿಕ ಪಠಣ ಮೊದಲಾದವುಗಳಿಗೆ ಬಳಕೆಯಾಗಲಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಇದು ಪುನರ್ನಿರ್ಮಾಣವಾಲಿದೆ.
11ರಿಂದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಸ್ವಾಮೀಜಿಯಿಂದ ಭಕ್ತರಿಗೆ ಮಂತ್ರಾಕ್ಷತೆ ವಿತರನೆ ಇರಲಿದೆ. ಮದ್ಯಾಹ್ನ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ ಭಾಗವತ್, ಮುಖಂಡರಾದ ಶಿವಶಂಕರ್, ಚಂದ್ರಶೇಖರ್, ಕೇಶವಮೂರ್ತಿ, ಲಕ್ಷ್ಮೀ ಶ್ರೀಧರ್, ಎಚ್ ಎಸ್ ರವೀಂದ್ರನಾಥ, ಚೇತನ್, ಮಂಜುನಾಥ ಮೊದಲಾದವರಿದ್ದರು.

National Education Committee ಅರೆಕಾಲಿಕ ಉಪನ್ಯಾಸಕಿ ಸೇವೆ ಪೂರ್ಣಕಾಲಿಕ ಮಾಡಲು ಕೋರ್ಟ್ ತೀರ್ಪು

0

National Education Committee ಶಿವಮೊಗ್ಗ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಹಿಂದಿ ವಿಷಯದ ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಎಚ್.ಎಸ್.ವಿಜಯಲಕ್ಷ್ಮೀ ಅವರನ್ನು ಪೂರ್ಣ ಕಾಲಿಕ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋಟ್೯ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯಾದ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಆದೇಶಿಸಿದೆ.

ಮುಂದುವರಿದು ಮೂರು ತಿಂಗಳೊಳಗಾಗಿ ಈ ಆದೇಶವನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೋಟ್೯ ಎಚ್ಚರಿಕೆ ನೀಡಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎಚ್.ಎಸ್.ವಿಜಯಲಕ್ಷ್ಮೀ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕಷ್ಣ ಎಸ್.ದೀಕ್ಷಿತ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ರಾಜ್ಯ ಸರ್ಕಾರ ಬಹಳ ಜಾಗರೂಕ ಹೆಜ್ಜೆ ಇಡಬೇಕು ಎಂದು ಕಿವಿ ಮಾತು ಹೇಳಿದೆ.

ಶಿವಶಂಕರ ಭಟ್ಟ ಅವರ ನಿವೃತ್ತಿಯಿಂದ ಹಿಂದಿ ಭಾಷೆಯ ಉಪನ್ಯಾಸಕ ಹುದ್ದೆ ಖಾಲಿ ಇತ್ತು. ಆ ಹುದ್ದೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯು ವಿಜಯಲಕ್ಷ್ಮೀ ಅವರನ್ನು 1996ರ ಜೂನ್ 1ರಂದು ಅರೆಕಾಲಿಕ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಂಡಿತ್ತು.

National Education Committee ವಾರಕ್ಕೆ 16ಗಂಟೆಗಳ ಕಾರ್ಯಭಾರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಏಕಸದಸ್ಯ ನ್ಯಾಯಪೀಠ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕಾಲೇಜು ಶಿಕ್ಷಣ) ನಿಯಮ 2003ನ್ನು ಸರಿಯಾಗಿ ಗ್ರಹಿಸದೆ ಅರ್ಜಿದಾರರನ್ನು ಪೂರ್ಣಕಾಲಿಕ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ಸರಿಯಲ್ಲ. ನಿಯಮ 3ರಂತೆ ಸುಧೀರ್ಘ ಅವಧಿಯ ವರೆಗೆ ಅರ್ಜಿದಾರರು ಸಲ್ಲಿಸಿರುವ ಸೇವೆಯನ್ನು ಅನುದಾನಿತ ಸಂಸ್ಥೆಗಳಲ್ಲಿ ಬಳಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Dr. Kamala Hampana ಖ್ಯಾತ ಸಾಹಿತಿ ಕಮಲಾ ಹಂಪನಾ ಇನ್ನಿಲ್ಲ

0

Dr. Kamala Hampana ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ ಅವರು ಶನಿವಾರ (ಜೂನ್ 22) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಮಲ ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಇರುವ ತಮ್ಮ ಮಗಳು ಆರತಿ ಮನೆಯಲ್ಲಿ ವಾಸವಿದ್ದರು.

ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತವಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಮಲಾ ಹಂಪನಾ ಅವರು ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಕಮಲಾ ಹಂಪನಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಹಲವರು ನುಡಿ ನಮನ ಸಲ್ಲಿಸಿದ್ದಾರೆ.

Dr. Kamala Hampana ಕಮಲಾ ಹಂಪನಾ ಅವರು 1948ರ ಸುಮಾರಿನಲ್ಲಿ ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆ ಕಾರ್ಮಿಕರ ಕಲ್ಯಾಣ ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿ.ಆದು ಈಗ ಭದ್ರಾವತಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ. ಅಲ್ಲಿ ನಾನು 1982 ರಲ್ಲಿ ಮುಖ್ಯ ಉಪಾಧ್ಯಾಯನಾಗಿ ಕೆಲಸ ನಿರ್ವಸಿದ್ದೆ. ಶಾಲೆಗೆ 75 ವಷ೯
ತುಂಬಿದ್ದರ ಸ್ಮರಣೆಗಾಗಿ ಹೊರ ತರಲು ಯೋಜನೆ ಹಾಕಿಕೊಂಡು ಹೋದ ವರುಷ ಸಂದೇಶ ಕೋರಲು ಅವರು ಮನೆಗೆ ನನ್ನಾಕೆಯೊಡನೆ ಹೋಗಿದ್ದೆ.
ಹಂಪನಾ ದಂಪತಿ ಅವರು ಮಗಳು ಮನೆಗೆ ಬಂದಿದ್ದರು.
ನಮ್ಮನ್ನು ಕಂಡು ಅವರಿಗಾದ ಸಂತಸ ಅಪಾರ. ಭದ್ರಾವತಿಯಲ್ಲಿನ ಶಾಲೆ ನನ್ನ ಶಾಲೆ.ಆದು “ನನ್ನ ಭಾಗ್ಯದ ಬಾಗಿಲು” ತೆರೆದ ಶಾಲೆ ಎಂದು ಭಾವಪೂರ್ಣವಾಗಿ ಉದ್ಗರಿಸಿದರು.
ನಾನು ಅವರಿಗೆ ಹಾಕಲು ಹಾರ ತೆಗೆದುಕೊಂಡು ಹೋಗಿದ್ದೆ.
ನಮ್ಮನ್ನೇ ಅವರು ಸೋಫಾದಲ್ಲಿ
ಕೂಡಿಸಿ ಹಂಪನಾ ದಂಪತಿ ನನಗೆ ಶಾಲು ಹೊದಿಸಿ- ನನ್ನ ಪತ್ನಿಗೆ ಸೀರೆ- ನೀಡಿ ಸನ್ಮಾನಿಸಿದರು.
ಕಮಲಾ ಹಂಪನಾ ಅವರು ಕನಾ೯ಟಕದ ಪುಣ್ಯ.
ಶ್ರದ್ಧಾಂಜಲಿ

ಸ್ಮರಣೆ:
ಸಿ.ವಿ.ತಿರುಮಲರಾವ್
ನಿವೃತ್ತ ಜಂಟಿ ನಿರ್ದೇಶಕರು. ಶಿಕ್ಷಣ ಇಲಾಖೆ.