Saturday, April 11, 2026
Saturday, April 11, 2026
Home Blog Page 681

Engineering ಈ ವರ್ಷ ಹೆಚ್ಚುವರಿಯಾಗಿ 8000 ಕ್ಕೂ ಹೆಚ್ಚು ಇಂಜಿನಿಯರಿಂಗ್ ಸೀಟ್ ಗಳು‌ ವಿದ್ಯಾರ್ಥಿಗಳಿಗೆ ಲಭ್ಯ

0

Engineering ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಶ್ ಸಿಕ್ಕಿದ್ದು, ಈ ವರ್ಷ 8 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟ್ ಗಳು ಹೆಚ್ಚಳವಾಗಲಿವೆ.

ಹೌದು ಈ ವರ್ಷ ಹೆಚ್ಚುವರಿಯಾಗಿ ಎಂಟು ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ವಿದ್ಯಾರ್ಥಿಗಳಿಗೆ ಸಿಗಲಿವೆ. ಎಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಇನ್ ಟೇಕ್ ಸಡಿಲಗೊಳಿಸಿದ ಪರಿಣಾಮ ಈ ವರ್ಷ ಎಂಟು ಸಾವಿರಕ್ಕೂ ಹೆಚ್ಚು ಸೀಟುಗಳ ಸಿಗಲಿವೆ.

2024-25ನೇ ಸಾಲಿನ ಎಂಜಿನಿಯರಿಂಗ್ ಪ್ರವೇಶಕ್ಕೆ ಎಲ್ಲ ಮಾದರಿಯ 245 ಎಂಜಿನಿಯರಿಂಗ್ ಕಾಲೇಜುಗಳಿಂದ 1,32,309 ಸೀಟುಗಳ ಇನ್ ಟೆಕ್ ಇದ್ದು, ಈ ಪೈಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 62,930 ಸೀಟುಗಳ ಲಭ್ಯವಾಗಿದೆ.

Engineering ಈ ವರ್ಷದ ಸೀಟುಗಳನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು 7,758ಸೀಟುಗಳು ಹಾಗೂ ಕೆಇಎ ಪಾಲಿಗೆ 4,085 ಸೀಟುಗಲೂ ಲಭ್ಯವಾಗಿವೆ.

Sri Ayyanna ಆಂಧ್ರದಲ್ಲಿ ಕೆಲವು ‌ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದು

0

Sri Ayyanna ಆಂಧ್ರ ದಲ್ಲಿ ಹಿಂದಿನ ಜಗನ್ ಅವರ ಸರ್ಕಾರ ಟಿವಿ5, ಈಟಿವಿ. ಎಬಿಎನ್ ಆಂಧ್ರ ಜ್ಯೋತಿ ಚಾನಲ್ ಗಳ ಮೇಲೆ ನಿಷೇಧ ಹೇರಿತ್ತು. ಈಗ ತೆಲುಗು ದೇಸಂ ಸರ್ಕಾರದ ಬಂದ ಮೇಲೆ ಈ ನಿರ್ಬಂಧ ತೆಗೆದು‌ ಹಾಕಲಾಗಿದೆ.

ಜನಸಾಮಾನ್ಯರ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ಸುಮಾರು 4 ವರ್ಷ ಒಂಬತ್ತು ತಿಂಗಳ ಕಾಲ ಮಾಧ್ಯಮಗಳ ಮೇಲೆ ನಿಷೇಧ ಹೇರಿತ್ತು.

Sri Ayyanna ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ನನ್ನ ಕರ್ತವ್ಯವನ್ನು ಪ್ರಾರಂಭಿಸಲು ನಾನು ಬಯಸುತ್ತೇನೆ. ಹಾಗಾಗಿ, ಮಾಧ್ಯಮದ ಮೇಲಿನ ನಿಷೇಧವನ್ನು ತೆಗೆದುಹಾಕುವ ಕಡತವನ್ನು ನಾನು ಕೈಗೆತ್ತಿಕೊಂಡೆ, ”ಎಂದು ಮೊದಲು ಆಂದ್ರ ಪ್ರದೇಶ ವಿಧಾನಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಅಯ್ಯಣ್ಣ ಪತ್ರುಡು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. “ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಿರುವುದರಿಂದ ಇದು ನನಗೆ ತೃಪ್ತಿಯನ್ನು ನೀಡುತ್ತದೆ” ಎಂದು ಅವರು ಹೇಳಿದ್ದಾರೆ.

International Yoga Day ವೈಜ್ಞಾನಿಕವಾಗಿ ಒಕ್ಕೊರಲ ಮನಸ್ಸಿನಿಂದ ಯೋಗವನ್ನು ಪ್ರಪಂಚವೇ ಒಪ್ಪಿ ಅಪ್ಪಿಕೊಂಡಿದೆ-ಶ್ರೀನಿವಾಸ ಆಚಾರ್ಯ

0

International Yoga Day ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಯೋಗ ದಿನವನ್ನು ಗೋಪಾಲಗೌಡ ಬಡಾವಣೆಯ ಬಿ ಬ್ಲಾಕ್‌ನಲ್ಲಿನ ಶ್ರೀ ಸಿದ್ಧಿ ಬುದ್ಧಿ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು.

ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಯೋಗ ಗುರುಗಳಾದ ಶ್ರೀನಿವಾಸ ಆಚಾರ್ಯರವರು ಪಾಲ್ಗೊಂಡು, ಯೋಗಾಸನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ ನಮ್ಮ ಸನಾತನ ಸಂಸ್ಕೃತಿಯ ವಿಶಿಷ್ಟ ಕೊಡುಗೆ. ಮನಸ್ಸಿನ ಸ್ಥಿರತೆ, ದೈಹಿಕ ಆರೋಗ್ಯವನ್ನು ಸಮತೋಲನವಾಗಿ ಕಾಯ್ದುಕೊಳ್ಳಲು ಇದು ಸಹಕಾರಿ. ಇಂದು ನಮ್ಮ ಪ್ರಾಚೀನ ಕಾಲದ ಯೋಗವನ್ನು, ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಒಕ್ಕೊರಲ ಮನಸ್ಸಿನಿಂದ ಪ್ರಪಂಚವೇ ಒಪ್ಪಿ ಅಪ್ಪಿಕೊಂಡಿದ್ದು, ಇದು ಭಾರತ ದೇಶದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ ಎಂದರು.

International Yoga Day ಬ್ಯಾಂಕಿನ ಕ್ಷೇತ್ರೀಯ ಪ್ರಬಂಧಕರಾದ ಪಂಕಜ್ ಕುಮಾರ್ ಸುಮನ್, ಉಪ ಮಹಾ ಪ್ರಬಂಧಕ ಯೋಗೀಶ್, ಮುಖ್ಯ ಪ್ರಬಂಧಕರಾದ ನವೀನ್ ಚಂದ್ರ, ಪ್ರದೀಪ್ ಶೆಟ್ಟಿ, ರಾಜ್ ಸಿನ್ನ ಮತ್ತು ಸಿಬ್ಬಂದಿ ವರ್ಗದವರು, ಸಿದ್ಧಿ ಬುದ್ಧಿ ಮಹಾಗಣಪತಿ
ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಉಪಸ್ಥಿತರಿದ್ದು, ಯೋಗ ಗುರುಗಳಾದ ಶ್ರೀನಿವಾಸ ಆಚಾರ್ಯರನ್ನು ಸನ್ಮಾನಿನಿಸಿದರು.

Nidhi App Ke Nikat ಜೂನ್ 27 ರಂದು ಸಾಗರ & ಜಗಳೂರಿನಲ್ಲಿ ” ನಿಧಿ ಆಪ್ ಕೆ ನಿಕಟ್” ಕಾರ್ಯಕ್ರಮ

0

Nidhi App Ke Nikat ಶಿವಮೊಗ್ಗ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜೂನ್ 27 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರದ ಶಾಯ್ ಎಕ್ಸ್‍ಪೋರ್ಟ್ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನ ಎಪಿಎಂಸಿ ಹಿಂಭಾಗದ ಶ್ರೀಕೃಷ್ಣ ಬಡಾವಣೆ ಪಟ್ಟಣ ಪಂಚಾಯತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
Nidhi App Ke Nikat ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

District Minorities Department ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆಗೆ ನಾಮ ನಿರ್ದೇಶನ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನ

0

District Minorities Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಧಾನಮಂತ್ರಿಗಳ ಹೊಸ 15 ಅಂಶ ಕಾರ್ಯಕ್ರಮಗಳ ಅನುಷ್ಟಾನದ ಜಿಲ್ಲಾ ಮಟ್ಟದ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರುಗಳನ್ನು ಆಯ್ಕೆ ಮಾಡಲು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಸಮುದಾಯಕ್ಕೆ ಸೇರಿರುವ ಪಂಚಾಯತ್ ರಾಜ್/ ಪುರಸಭೆಯಿಂದ ಚುನಾಯಿತರಾದ ಪ್ರತಿನಿಧಿಗಳನ್ನು ಹಾಗೂ ಅಲ್ಪಸಂಖ್ಯಾತರ ಸಂಸ್ಥೆಗಳ 3 ಜನಪ್ರತಿನಿಧಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
District Minorities Department ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜುಲೈ 05 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ದೂ.ಸಂ.: 08182-220206 ನ್ನು ಸಂಪರ್ಕಿಸುವುದು.

S.N.Chennabasappa ಶಿವಮೊಗ್ಗದ ಸ್ಥಳೀಯ ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಶಾಸಕ ‘ ಚೆನ್ನಿ’ ಅವರಿಂದ ಚಿಂತನ- ಮಂಥನ ಸಭೆ

0

S.N.Chennabasappa ಶಿವಮೊಗ್ಗ ನಗರದ ಶಾಸಕ ಶ್ರೀ ಚನ್ನಬಸಪ್ಪ ಇವರೊಂದಿಗೆ ಶಿವಮೊಗ್ಗ ನಗರದ ಸಮಸ್ಯೆಗಳ ಚಿಂತನ ಮಂಥನ ಸಭೆ. ದಿ.24.06.24 ಸೊಮವಾರ ಬೆಳಿಗ್ಗೆ 11ಗಂಟೆಗೆ. ಸ್ಥಳ: ಬಂಟರ ಭವನ, ಗೊಪಾಲ ಗೌಡ ಬಡಾವಣೆ, 100ಅಡಿ ರಸ್ತೆ, ಶಿವಮೊಗ್ಗ. ಸರ್ವರಿಗೂ ಆದರದ ಸ್ವಾಗತ. ತಪ್ಪದೇ ಭಾಗವಹಿಸಿ. ವಿ.ಸೂ. ಸಭೆಯಲ್ಲಿ ಚರ್ಚಿಸುವ ವಿಷಯವನ್ನು ಸಭೆಗಿಂತ ಮೊದಲು ಲಿಖಿತ ರೊಪದಲ್ಲಿ ನೀಡ ತಕ್ಕದ್ದು.

District Tourism Forum ಗೋವಾದಲ್ಲಿ ಮಳೆಗಾಲದ ಚಾರಣ.ಆಸಕ್ತರಿಂದ ಅರ್ಜಿ ಆಹ್ವಾನ

0

District Tourism Forum ಯೂತ್‌ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗೋವ, ತರುಣೋದಯ, ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆಯ ವತಿಯಿಂದ ಮಳೆಗಾಲದ ಚಾರಣವನ್ನು ಗೋವಾದಲ್ಲಿ 16-07-2024 ರಿಂದ 21-07-2024 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಶುಲ್ಕ 10,000-00.

12 ವರ್ಷ ಮೇಲ್ಪಟವರು ಭಾಗವಹಿಸಬಹುದು.

District Tourism Forum ಆಸಕ್ತರು ಅ.ನಾ.ವಿಜಯೇಂದ್ರ ರಾವ್, 9448790127 ಅಥವಾ
ಎಸ್.ಎಸ್.ವಾಗೇಶ್, ಛೇರ್ಮನ್ ವೈಹೆಚ್ಏಐ ತರುಣೋದಯ ಘಟಕ ಪೋನ್ ನಂಬರ್ +917892548980 ಇವರನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ತಿಳಿಸಿದ್ದಾರೆ.

CM Siddharamaih ವಿಜಯನಗರ ಜಿಲ್ಲೆ ಎಸ್ಎಸ್ ಎಲ್ ಸಿ ಫಲಿತಾಂಶ ಕುಸಿತ- ಸಿದ್ಧರಾಮಯ್ಯ ಅಧಿಕಾರಿಗಳ ಮೇಲೆ “ಗರಂ”

0

CM Siddharamaih ಎಸ್​​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ಕುಸಿದಿದೆ. ಹಾಗಾಗಿ ಡಿಡಿಪಿಐ, ಬಿಇಒ ಅಮಾನತು ಮಾಡುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೊಸಪೇಟೆಯಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ವಿಜಯನಗರ ಜಿಲ್ಲೆ 10ನೆ ಸ್ಥಾನದಿಂದ 27ನೆ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಡಿಡಿಪಿಐ ಹಾಗೂ ಬಿಇಒ ಅವರನ್ನು ಅಮಾನತು ಮಾಡುವಂತೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಶೈಕ್ಷಣಿಕವಾಗಿ ವಿಜಯನಗರ ಜಿಲ್ಲೆ ಕುಸಿದಿರುವುದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು?. ಎಸ್ಎಸ್ಎಲ್ ಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಪ್ರಮಾಣ ಕುಸಿದಿರುವುದಕ್ಕೆ ನೀವೇ ಕಾರಣ ಎಂದು ಸಿಎಂ, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಾರಿ ಶೇ. 20 ರಷ್ಟು ಗ್ರೇಸ್​ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದೆ ಎಂದರೆ ನಿಮ್ಮ ಸಾಧನೆ ಏನು? ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಸಿಎಂ ಪ್ರಶ್ನಿಸಿದ್ದಾರೆ. ಇನ್ನು ಮುಂದಿನ ವರ್ಷ ಕೃಪಾಂಕ ಕೊಡಬಾರದು ಎಂದು ಹೇಳಿದ್ದೇನೆ ಎಂದರು.

CM Siddharamaih 10 ರಿಂದ 27ನೆ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ಸಭೆ ಮಧ್ಯದಲ್ಲೆ ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿದರು. ಅಲ್ಲದೆ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದರು.

Sooraj Revanna ಸೂರಜ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯ: ಯುವಕನ ದೂರು

0

Sooraj Revanna ಪ್ರಜ್ವಲ್ ರೇವಣ್ಣ ವಿರುದ್ಧದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ನಡೆಯುತ್ತಿರುವ ಮಧ್ಯೆಯೇ, ಅವರ ಸಹೋದರ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ದ ಅಂಥದ್ದೇ ಆರೋಪ ಕೇಳಿ ಬಂದಿದೆ.

ಸೂರಜ್ ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹಾಸನ ಜಿಲ್ಲೆ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಬೆಂಗಳೂರಿನಲ್ಲಿ ಮುಖಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಸುಮಾರು 16 ಪುಟಗಳ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಸಂತ್ರಸ್ತ ಯುವಕ ಲೋಕಸಭೆ ಚುನಾವಣೆಯ ವೇಳೆ ಹಾಸನದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ. ಈ ವೇಳೆ ಆತನನ್ನು ಪರಿಚಯ ಮಾಡಿಕೊಂಡಿದ್ದ ಸೂರಜ್ ರೇವಣ್ಣ, ಬಳಿಕ ಆತನಿಗೆ ಮೆಸೇಜ್ ಮಾಡಿ ಆಪ್ತತೆ ಬೆಳೆಸಿಕೊಂಡಿದ್ದರು. ಜೂನ್ 16ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಯುವಕ ದೂರಿನಲ್ಲಿ ಆರೋಪಿಸಿದ್ದಾಗಿ ತಿಳಿದು ಬಂದಿದೆ.
Sooraj Revanna “ಕಳೆದ ಜೂನ್ 16ರ ಭಾನುವಾರಂದು ತನಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದ ಸೂರಜ್ ರೇವಣ್ಣ, ಗನ್ನಿಕಡದ ತೋಟದ ಮನೆಗೆ ಆಹ್ವಾನಿಸಿದ್ದಕ್ಕೆ ತೆರಳಿದ್ದೆ. ತನಗೆ ಉದ್ಯೋಗದ ನೆರವು ನೀಡುವುದಾಗಿ ಭರವಸೆ ಕೊಟ್ಟು ಕರೆಸಿಕೊಂಡಿದ್ದರು. ಸಂದೇಶ ನಂಬಿಕೊಂಡು ಅಲ್ಲಿಗೆ ಹೋಗಿದ್ದೆ. ನಾನು ತೋಟದ ಮನೆಗೆ ತಲುಪಿಪಿದ ಬಳಿಕ, ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಸಲಿಂಗಕಾಮಕ್ಕೆ ಒತ್ತಾಯಿಸಿದ್ದಾರೆ. ನನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ನನ್ನ ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ. ಇದನ್ನು ಎಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ” ಎಂದು ಸುದೀರ್ಘ ದೂರಿನಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಉದ್ಯೋಗಿ, ಜೆಡಿಎಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ.

Acharya Tulsi National College ಸ್ಪರ್ಧಾತ್ಮಕ ಚಟುವಟಿಕೆಗಳಿಂದ ಪ್ರಾಯೋಗಿಕ ಜ್ಞಾನ -ಡಾ.ಸ್ವಾಮಿ ತ್ರಿಭುವನಾನಂದ

0

Acharya Tulsi National College ಪಠ್ಯಕ್ಕೆ ಪೂರಕವಾದ ಪ್ರಾಯೋಗಿಕ ಜ್ಞಾನವು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಸ್ವಯಂ ಮನದಟ್ಟಾಗುತ್ತದೆ ಎಂದು ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಹೇಳಿದರು.

ಅವರು ಕಾಲೇಜಿನ ವತಿಯಿಂದ ಏರ್ಪಾಡಾಗಿದ್ದ ಮ್ಯಾನೇಜ್ಮೆಂಟ್ ವಿಷಯಕ್ಕೆ ಸಂಬಂಧಪಟ್ಟ ರಾಜ್ಯಮಟ್ಟದ ಯುವೋತ್ಸವ ‘ಆಕ್ಟಾಗನ್ 2024’ರ ಸಮಾರೋಪ ಹಾಗೂ ಪ್ರಾಯೋಜಕರ ಉಪಸ್ಥಿತಿಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ಪರ್ಧೆಯಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಕೊಳ್ಳುವ ವಿದ್ಯಾರ್ಥಿಗಳು ವಸ್ತುಸ್ಥಿತಿ ಹಾಗೂ ಅದರಲ್ಲಿ ತಾವು ವ್ಯವಹರಿಸಬೇಕಾದ ಚಾಕಚಕ್ಯತೆಯನ್ನು ಅನುಭವವಾಗಿ ಪಡೆಯುತ್ತಾರೆ ಎಂದರು.

ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜು ತಂಡ ಚಾಂಪಿಯನ್ಶಿಪ್ ಪಾರಿಶೋತ್ಸವವನ್ನು, ಶಿವಮೊಗ್ಗೆಯ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ತಂಡವು ರನ್ನರ್ಸ್ ಪಾರಿತೋಷಿಕವನ್ನು ಪಡೆದುಕೊಂಡರು.

Acharya Tulsi National College ವಿಭಾಗ ಮುಖ್ಯಸ್ಥ ಡಾ.ಎಸ್.ಹೆಚ್.ಸುಜಿತ್ ಕುಮಾರ್, ಡಾ. ಶ್ರುತಿ ಮಾಕನೂರು, ಸರೋಜಾ ಮುಂತಾದವರು ಉಪಸ್ಥಿತರಿದ್ದು ದಿವ್ಯ ಮತ್ತು ಪರಶುರಾಮ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಕಾಶ್ ಅಳಲಗೇರಿ ವಂದನೆ ಸಲ್ಲಿಸಿದರು. ಚಿತ್ರ ಹಾಗೂ ವರದಿ: ಡಾ.ಎಚ್.ಬಿ.ಮಂಜುನಾಥ-