Saturday, April 11, 2026
Saturday, April 11, 2026
Home Blog Page 680

S.N.Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕ‌ ಚನ್ನಬಸಪ್ಪ

0

S.N.Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಭಂದಿಸಿದಂತೆ, ಶಾಸಕರ ಕಚೇರಿಯಾದ ಕರ್ತವ್ಯ ಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ,
೧. ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಕಾಮಗಾರಿ.
೨. ⁠ಮುಜರಾಯಿ ದೇವಸ್ಥಾನಗಳ ಜೀರ್ಣೋದ್ಧಾರ ಅಪೂರ್ಣ ಕಾಮಗಾರಿಗಳ ಬಗ್ಗೆ
೩. ⁠ಹಿಂದುಳಿದ ವರ್ಗಗಳ ಸಮುದಾಯ ಭವನಗಳ ಅಪೂರ್ಣ ಕಾಮಗಾರಿಗಳ ಬಗ್ಗೆ
೪. ⁠ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾಮಗಾರಿಗಳ ಬಗ್ಗೆ
೫. ಶಾಲಾ ಅಭಿವೃದ್ಧಿ ಕಾಮಗಾರಿಗಳು
೬. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು
೭. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಮತ್ತು ಹೊಸ ಪ್ರಸ್ತಾವನೆ ಬಗ್ಗೆ
೮. ⁠ಕ್ರೀಡಾ ಇಲಾಖೆಯ ಕಾಮಗಾರಿಗಳ / ಪ್ರಸ್ತಾವನೆಗಳ ಬಗ್ಗೆ
೯. ⁠ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳ ಬಗ್ಗೆ
೧೦. ⁠ಸಮಾಜ ಕಲ್ಯಾಣ ಇಲಾಖೆಯಿಂದ SCP/TSP ಯೋಜನೆಯಡಿಯಲ್ಲಿ ಪ್ರಸ್ತಾವನೆ ಸಲ್ಲಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಅನೇಕ ನಿರ್ಣಯಗಳನ್ನು ತೆಗೆದುಕೊಂಡರು.

S.N.Chennabasappa ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು, ⁠ತಹಸೀಲ್ದಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕಾರಿಗಳು, ಕೆ.ಆರ್.ಐ.ಡಿ.ಎಲ್ ನ ಇಂಜಿನಿಯರ್ ಗಳು, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರು, ಮುಜರಾಯಿ ತಹಶೀಲ್ದಾರ್ , ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

MESCOM ಜೂನ್ 26 , ಗೋಪಾಳಗೌಡ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಗುವ ಫೀಡರ್ ಎ.ಎಫ್-5ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಇರುವುದರಿಂದ ಜೂನ್ 26 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರವರೆಗೆ ಈ ವ್ಯಾಪ್ತಿಗೆ ಬರುವ MESCOM ಗೋಪಾಳಗೌಡ ಬಡಾವಣೆ ಬಿ.ಸಿ.ಡಿ ಮತ್ತು ಇ ಬ್ಲಾಕ್ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ.

Shivamogga Police ಬಸ್ ಡಿಕ್ಕಿ ಹೊಡೆದು ಹೊಟೆಲ್ ಕಾರ್ಮಿಕ ದಾರುಣ ಮರಣ

0

Shivamogga Police ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕನಿಗೆ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ಇಲ್ಲಿನ ಬೈಪಾಸ್‌ನ ಊರಗಡೂರು ವೃತ್ತದಲ್ಲಿ ನಸುಕಿನಲ್ಲಿ ಸಂಭವಿಸಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರಾಜಹಂಸ ಬಸ್ ಊರುಗಡೂರು ವೃತ್ತದ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಸಂತೋಷ್‌ಗೆ ಡಿಕ್ಕಿ ಹೊಡೆದಿದೆ. ಸಂತೋಷ್ (23) ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ.

Shivamogga Police ಶ್ರೀರಾಮಪುರದಿಂದ ಊರಗಡೂರಿನ ಬಳಿ ಹೋಟೆಲ್ ಕೆಲಸಕ್ಕೆ ತೆರಳುತ್ತಿದ್ದನು.
ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪಘಾತಪಡಿಸಿದ ಕೆಎಸ್ ಆರ್ ಟಿಸಿ ಬಸ್ಸನ್ನು ಠಾಣೆಗೆ ತಂದಿರಿಸಲಾಗಿದೆ.

Shivamogga Police ಕಟ್ಟಡ ಕಾರ್ಮಿಕನಿಗೆ ವಿದ್ಯುತ್ ಶಾಕ್-ಸಾವು

0

Shivamogga Police ಶಿವಮೊಗ್ಗದ ಸೋಮಯ್ಯ ಲೇ ಔಟ್‌ನಲ್ಲಿ ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದ ಯುವ ಕಾರ್ಮಿಕ ವಿದ್ಯುತ್ ಶಾಕ್‌ನಿಂದ ಸಾವಿಗೀಡಾದ ಘಟನೆ ಸಂಭವಿಸಿದೆ.

ಹರೀಶ್ ಮೃತ ಕಾರ್ಮಿಕನಾಗಿದ್ದಾನೆ. ಆತನ ಸಾವಿಗೆ ಮೇಸ್ತ್ರಿಯ ಬೇಜವಾಬ್ದಾರಿ ಕಾರಣ ಎಂದು ಮೃತನ ಕುಟುಂಬ ಆರೋಪಿಸಿದೆ.

Shivamogga Police ಕಟ್ಟಡವೊಂದನ್ನು ನಿರ್ಮಿಸುತ್ತಿದ್ದ ವೇಳೆ ಮೇಸ್ತ್ರಿ ಸಿಮೆಂಟ್ ಮಿಕ್ಸಿಂಗ್ ನ ವೈಬ್ರೇಷನ್ ಮಿಷನ್ ಸ್ವಚ್ಛಗೊಳಿಸಲು ಸೂಚಿಸಿದ್ದರು. ಸ್ವಚ್ಛಗೊಳಿಸಲು ಮುಂದಾದ ಯುವಕ ದಿಢೀರ್ ಸಾವು ಕಂಡಿದ್ದಾನೆ. ಆದರೆ ಯುವಕನ ಸಾವಿಗೆ ವಿದ್ಯುತ್ ಶಾಕ್ ಕಾರಣ ಎನ್ನಲಾಗಿದೆ. ಮೇಸ್ತ್ರಿ ಸಹ ಮೃತನ ಕುಟುಂಬಕ್ಕೆ ಈ ವಿಷಯ ತಿಳಿಸಿದ್ದಾನೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

BJP Yuva Morcha ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ವ್ಯಕ್ತಿಯ ಬಂಧನ

0

BJP Yuva Morcha ಮಹಿಳೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಯುವಮೋರ್ಚ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಅವರನ್ನು ಮಹಿಳಾ ಪೊಲೀಸರು ಇಂದು ಬೆಳಗಿನ ಜಾವ ಅವರ ಮನೆಯಿಂದ ಬಂಧಿಸಿದ್ದಾರೆ.

ಈ ಹಿಂದೆ ಸಾಗರದ ಮಹಿಳೆಯೊಬ್ಬರಿಗೆ ವಂಚಿಸಿದ ಪ್ರಕರಣದಲ್ಲಿ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಕಾರಣಾಂತರದಿಂದ ದೂರು ದಾಖಲಾಗಿರಲಿಲ್ಲ. ಆದರೆ ಮಹಿಳೆಯು ಶಿವಮೊಗ್ಗ ಮಹಿಳಾ ಠಾಣೆಗೆ ಬಂದು ದೂರು ನೀಡಿದ್ದರಿಂದ ಮಹಿಳಾ ಠಾಣೆ ಪೊಲೀಸ್ ಇನ್ಪೆಕ್ಟರ್ ಭರತ್‌ಕುಮಾರ್ ಭಾನುವಾರ ಸಾಗರದಲ್ಲಿರುವ ಮನೆಗೆ ತೆರಳಿ ಅರುಣ್ ಅವರನ್ನು ಬಂಧಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮಹಿಳೆಯನ್ನು ವಂಚಿಸಿದ ಪ್ರಕರಣ ಇದಾಗಿದೆ.
ಇತ್ತೀಚೆಗೆ ಮತ್ತೆ ಪ್ರಕರಣ ತೀವ್ರತೆ ಪಡೆದುಕೊಂಡಿದ್ದರಿಂದ ಬಂಧನವಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

BJP Yuva Morcha ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಸಾಗರ ಘಟಕದ ಯುವಮುಖಂಡರಾದ ವಿನೋದ್ ಜೊತೆ ಐವರ ಗಡಿಪಾರು ಮಾಡಬೇಕೆಂದು ಇಲಾಖೆ ತಯಾರಿ ನಡೆಸಿತ್ತು. ಐವರಲ್ಲಿ ಅರುಣ್ ಕುಗ್ವೆನೂ ಒಬ್ಬರಾಗಿದ್ದರು.

ಇವರು ಮಾಜಿ ಶಾಸಕ ಹರತಾಳು ಹಾಲಪ್ಪನವರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಈ ತಿಂಗಳಲ್ಲೇ ಅರುಣ್ ಗೆ ಬೇರೆ ಯುವತಿಯೊಂದಿಗೆ ಮದುವೆ ನಡೆಯಲಿತ್ತು.
ಅಷ್ಟರಲ್ಲಿ ಅವರ ಬಂಧನವಾಗಿದೆ.

NEET PG Exam ನೀಟ್ ಪಿಜಿ ಪರೀಕ್ಷೆಗಳ ತಾತ್ಕಾಲಿಕ ಮುಂದೂಡಿಕೆ

0

NEET PG Exam ಸ್ಪರ್ಧಾತ್ಮಕ ಪರೀಕ್ಷೆಗಳಾದ ‘ನೀಟ್’ ಮತ್ತು ‘ನೆಟ್’ನಲ್ಲಿ ಅಕ್ರಮಗಳು ನಡೆದಿರುವ ಆರೋಪದ ಹಿನ್ನೆಲೆಯಲ್ಲಿ, ಜೂನ್ 23ರಂದು ನಡೆಯಬೇಕಿದ್ದ ನೀಟ್- ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
“ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳ ಘಟನೆಗಳನ್ನು ಪರಿಗಣಿಸಿ, ಆರೋಗ್ಯ ಸಚಿವಾಲಯವು ವೈದ್ಯಕೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಗಳ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ಧರಿಸಿದೆ” ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೊನೆಯ ಗಂಟೆಯಲ್ಲಿ ಪರೀಕ್ಷೆಯನ್ನು ಮುಂದೂಡಿದ ನಂತರ ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತ ವ್ಯಕ್ತಪಡಿಸಿದರು. ಅನೇಕ ವಿದ್ಯಾರ್ಥಿಗಳು ತಮ್ಮ ನಿಯೋಜಿತ ಪರೀಕ್ಷಾ ಕೇಂದ್ರಗಳನ್ನು ತಲುಪಲು ಇತರ ನಗರಗಳಿಗೆ ಪ್ರಯಾಣಿಸಬೇಕಾಯಿತು.

“ನಂಬಲಾಗುತ್ತಿಲ್ಲ… ದುರದೃಷ್ಟವಶಾತ್ ನನಗೆ 6 ತಿಂಗಳ ಹಿಂದೆ ದೀರ್ಘಕಾಲದ ಮೈಲೋಜೆನಸ್ ಲ್ಯುಕೇಮಿಯಾ ರೋಗನಿರ್ಣಯ ಮಾಡಲಾಯಿತು. ನಾನು ಈಗ ಗುಣಮುಖನಾಗಿದ್ದೇನೆ. ಆದರೆ, ನಾನು ಮೌಖಿಕ ಕೀಮೋಥೆರಪಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಪರೀಕ್ಷೆಗೆ ಹಗಲು ರಾತ್ರಿ ತಯಾರಿ ಮಾಡಬೇಕಾಗಿದೆ. ಈ ಜನರಿಗೆ ನಮ್ಮಲ್ಲಿ ಕೆಲವರ ಕಷ್ಟದ ಬಗ್ಗೆ ತಿಳಿದಿಲ್ಲ” ಎಂದು ವಿದ್ಯಾರ್ಥಿಯೊಬ್ಬ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.

NEET PG Exam “ನನ್ನ ಜೂನಿಯರ್‌ನಿಂದ ಈ ಸಂದೇಶವನ್ನು ಪರಿಶೀಲಿಸಿ. ಅವಳು ಈಗ ತಾಯಿಯಾಗಿದ್ದಾಳೆ ಮತ್ತು ಇಡೀ ಕುಟುಂಬ ಪ್ರಯಾಣಿಸಿದೆ. ಅವರ ನೋವನ್ನು ಊಹಿಸಿ. ಎಷ್ಟೋ ವಿದ್ಯಾರ್ಥಿಗಳಿಗೆ ತುಂಬಾ ನೋವು. ಮೊದಲು ಪರೀಕ್ಷೆಯ ದಿನಾಂಕಗಳೊಂದಿಗೆ ಆಟವಾಡುತ್ತಾ ಇರಿ, ಪೂರ್ವಭಾವಿಯಾಗಿ ಮತ್ತು ಈಗ ಪರೀಕ್ಷೆಗಳನ್ನು ಮುಂದೂಡಿ” ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದರು.

Shivamogga Government Employees Union ಸರ್ಕಾರಿ ನೌಕರರೆಲ್ಲರೂ ಒಂದೇ ಕುಟುಂಬದವರು- ಗುರುದತ್ತ ಹೆಗಡೆ

0

Shivamogga Government Employees Union ಮಕ್ಕಳಿಗೆ ಪಾಲಕರೇ ಪ್ರೇರೇಪಣೆ. ಪಾಲಕರ ಉತ್ತಮ ಕೆಲಸ ನೋಡಿ, ಅವರು ಶ್ರಮಪಟ್ಟು ಕುಟುಂಬವನ್ನು ಕಟ್ಟಿದ್ದನ್ನು ಗಮನಿಸಿ ಮಕ್ಕಳು ಜವಾಬ್ದಾರಿ ಅರಿಯಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.

ಶಿವಮೊಗ್ಗ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೂತನ ಜನಪ್ರತಿನಿಧಿಗಳಿಗೆ ಸನ್ಮಾನ ಮತ್ತು ನವೀಕೃತ ಸರ್ಕಾರಿ ನೌಕರರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪಾಲಕರು ಕಷ್ಟಪಟ್ಟು ಓದಿ ನೌಕರಿ ಹಿಡಿದಿದ್ದಾರೆ.

ಈಗ ಅವರು ತಮ್ಮ ಮಕ್ಕಳಿಗೂ ದುಡಿಮೆಯಿಂದ ವಿದ್ಯಾಭ್ಯಾಸ ಮಾಡಿಸುತ್ತಿದ್ದ್ದಾರೆ. ಪಾಲಕರ ಕಷ್ಟವನ್ನು ಮಕ್ಕಳು ಅ ರಿಯಬೇಕು. ಅವರ ಮಾರ್ಗದರ್ಶನದಲ್ಲಿ ನಡೆೆಯಬೇಕೆಂದರಲ್ಲದೆ, ಸರಕಾರಿ ನೌಕರರೆಲ್ಲ ಒಂದೇ ಕುಟುಂಬದವರು. ಸಮಾಜದ ಮತ್ತು ಜನರ ಸಮಸ್ಯೆ ಅರಿತು ಅವರಿಗೆ ಸ್ಪಂದಿಸಿ ಕೆಲಸ ಮಾಡುವವರು. ಇಂತಹ ಉತ್ತಮ ಮನಃಸ್ಥಿತಿಯಿಂದ ಮಕ್ಕಳು ಉತ್ತೇಜಿತರಾಗಬೇಕು ಎಂದು ಹೇಳಿದರು.

ಎಂಎಲ್ಸಿ ಡಾ|| ಧನಂಜಯ ಸರ್ಜಿ ಮಾತನಾಡಿ, ಸಂಘಟನೆ ಚೆನ್ನಾಗಿದ್ದರೆ ಹೆಚ್ಚು ಬಲ ಬರುತ್ತದೆ. ಹಕ್ಕಿಗಳ ಹಿಂಡಿನಂತೆ ಸಂಘಟನೆ ಇರಬೇಕು. ನೌಕರರ ಮಕ್ಕಳೂ ಸಹ ಪಾಲಕರಿಂದ ಕಲಿಯುವ ವಿಷಯಗಳು ಸಾಕಷ್ಟಿವೆ. ನಿಸ್ವಾರ್ಥ ಸೇವೆ ಮಾಡುವ ಪಾಲಕರನ್ನು ಅನುಸರಿಸಬೇಕು. ದಾನ- ಧರ್ಮದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದರು.

Shivamogga Government Employees Union ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್‌ಕುಮಾರ್ ಮಾತನಾಡಿ, ಯಶಸ್ಸು ಎನ್ನುವುದು ತಲೆಗೆ ಏರಬಾರದು. ಒಂದು ವೇಳೆ ತಲೆಗೇರಿದಲ್ಲಿ ಇನ್ನೊಬ್ಬರನ್ನು ಕೀಳಾಗಿ ಕಾಣುವ ಮನೋಭಾವ ಆರಂಭವಾಗುತ್ತದೆ. ನಿರಂತರ ಓದು, ಶ್ರಮ ವಹಿಸಿ ಸಾಧನೆ ಮಾಡಬೇಕು. ಸಿಕ್ಕ ಅವಕಾಶವನ್ನು ಬಿಡಬಾರದು. ಕುಟುಂಬದ ಸತತ ಪ್ರೋತ್ಸಾಹ ಪಡೆದುಕೊಂಡು ಹೆಜ್ಜೆ ಇಡಿ. ಯಾವುದೇ ಉದ್ಯೋಗ ಮಾಡಿ ಅದರಲ್ಲಿ ನಿಸ್ವಾರ್ಥತೆ, ನಿಷ್ಠೆ ಇರಲಿ. ಆಗ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಡೆದುಬಂದ ಹಾದಿಯನ್ನು ಯಾವತ್ತೂ ಮರೆಯಬಾರದು. ಸಮಾಜದಲ್ಲಿ ಇಂದಿನ ದಿನಗಳಲ್ಲಿ ಮೌಲ್ಯ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚೆಚ್ಚು ಕಾಪಾಡಿಕೊಳ್ಳಬೇಕು. ಮೌಲ್ಯಾಧಾರಿತ ಸಮಾಜ ಕಟ್ಟಲು ಮುಂದಾಂಬೇಕೆಂದರು.

ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುನಲ್ಲಿ ಉತ್ತಮ ಸಾಧನೆ ಮಾಡಿದ ಸರಕಾರಿ ನೌಕರರ 500 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ, ಸ್ಬುಡಾ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಪ. ಜಾತಿ, ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಸರಕಾರಿ ನೌಕರರ ಸಂಘದ ಜಿಲ್ಲಾ ಮತ್ತು ರಾಜ್ಯ, ತಾಲೂಕು ಪದಾಧಿಕಾರಿಗಳು ಹಾಜರಿದ್ದರು.

Chikkaballapur Police ಮಲಮಗಳಿಗೆ ವಿಚಿತ್ರ ಹಿಂಸೆ ನೀಡಿದ ಮಲತಂದೆ

0

Chikkaballapur Police ಮೂರು ವರ್ಷದ ಬಾಲಕಿಗೆ ಮಲತಂದೆಯೊಬ್ಬ ಸಿಗರೇಟ್’ನಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ಘಟನೆಯೊಂದು ಗೌರಿಬಿದನೂರಿನ ಟಿಪ್ಪು ನಗರದಲ್ಲಿ ವರದಿಯಾಗಿದೆ.

ಆರೋಪಿ ಅಮ್ಜದ್‌ನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಗುವಿನ ತಾತ ಎಸ್‌ಜಿ ಅನ್ವರ್ ನೀಡಿದ ದೂರಿನ ಆಧಾರದ ಮೇಲೆ ಗೌರಿಬಿದನೂರು ಪೊಲೀಸರು ಅಮ್ಜದ್‌ನನ್ನು ಬಂಧಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಡಿಎಲ್ ನಾಗೇಶ್ ತಿಳಿಸಿದ್ದಾರೆ.
ಜರೀನಾ ತಾಜ್ ಎಂಬಾಕೆ ಮೂರು ಮದುವೆಯಾಗಿದ್ದು ಮೊದಲ ಪತಿಯಿಂದ ಇಬ್ಬರು ಹೆಣ್ಣು ಮಕ್ಕಳು ಮತ್ತು ಎರಡನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿದ್ದು ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ, 10 ತಿಂಗಳ ಹಿಂದೆ ಟ್ರಕ್ ಡ್ರೈವರ್ ಆಗಿದ್ದ 40 ವರ್ಷದ ಅಮ್ಜದ್ ಅಲಿಯಾಸ್ ಅಶು ನನ್ನು ಮೂರನೇ ಮದುವೆಯಾಗಿದ್ದಳು.

Chikkaballapur Police ಎರಡನೇ ಪತಿಯ ಮೂರು ವರ್ಷದ ಹೆಣ್ಣು ಮಗುವಿಗೆ ಅಮ್ಜದ್ ಚಿತ್ರ ಹಿಂಸೆ ನೀಡಿದ್ದಾನೆ. ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್ ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ.

15 ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ಬಳಿಕ ಪತ್ನಿ ಜರೀನಾ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್ ಗೆ ಒಳಗಾಗಿದ್ದಾಳೆ.

D.K.Shivakumar ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ. ನಿಖಿಲ್ ಅಥವಾ ಯೋಗೇಶ್ವರ್ ಕಣಕ್ಕೆ?

0

D.K.Shivakumar ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉತ್ಸುಕರಾಗಿದ್ದಾರೆಂಬ ಸುಳಿವು ಸಿಗುತ್ತಿದ್ದಂತೆಯೇ ಇತ್ತ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿಯೂ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆಗಳು ಆರಂಭವಾಗಿವೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತಾಡಿದ ಕೇಂದ್ರ ಸಚಿವರ ಕುಮಾರಸ್ವಾಮಿಯವರು, ಬೆಂಗಳೂರು ಗ್ರಾಮಾಂತರ ಲೋಕಸಭೆಯ ಫಲಿತಾಂಶವನ್ನು ಪುನರಾವರ್ತಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕೈಜೋಡಿಸುವುದಾಗಿ ಹೇಳಿದರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕುಮಾರಸ್ವಾಮಿಯವರ ಬಾವ ಡಾ ಸಿಎನ್ ಮಂಜುನಾಥ್ ಅವರು, ಡಿಕೆ.ಶಿವಕುಮಾರ್ ಅವರ ಕಿರಿಯ ಸಹೋದರ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದರು.
D.K.Shivakumar ಕುಮಾರಸ್ವಾಮಿ ಅವರು ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜಕೀಯದ ಕುರಿತು ಚರ್ಚೆ ನಡೆಸಿರುವುದಾಗಿ ಹೇಳಿದ್ದು, ಉಭಯ ನಾಯಕರ ಮಾತುಕತೆ ವೇಳೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಅಮಿತ್ ಶಾ ಸೂಚಿಸುತ್ತಾರೆಯೇ ಎಂಬುದರ ಕುರಿತು ಕುತೂಹಲಗಳು ಮೂಡತೊಡಗಿದೆ.
ಡಿಕೆ.ಶಿವಕುಮಾರ್ ಅವರು ಡಿಸಿಎಂ ಆದ ಬಳಿಕ ಕಳೆದ ಒಂದೂವರೆ ವರ್ಷದಿಂದ ಅವರು ಚನ್ನಪಟ್ಟಣಕ್ಕೆ ಹೋಗಿಲ್ಲ. ಈಗ ಕ್ಷೇತ್ರದ ಬಗ್ಗೆ ಅನುಕಂಪ ತೋರುತ್ತಿದ್ದಾರೆ. ಇದುವರೆಗೂ ಚನ್ನಪಟ್ಟಣವನ್ನು ಅಭಿವೃದ್ಧಿಪಡಿಸದಂತೆ ಅವರನ್ನು ಯಾರು ತಡೆದಿದ್ದರು? ಸಂಸದರಾಗಿ ಶಿವಕುಮಾರ್ ಅವರ ಸಹೋದರನ ಕೊಡುಗೆ ಏನಿತ್ತು? ನಮ್ಮ ಕಡೆಯಿಂದ ಯಾರು ಅಭ್ಯರ್ಥಿ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ.ಶಿವಕುಮಾರ್ ಅವರು ಸ್ಪರ್ಧಿಸಿದ್ದೇ ಆದರೆ, ಇದು ಅವರ ರಾಜಕೀಯ ಜೀವನದ ಅಂತ್ಯವಾಗಲಿದೆ ಎಂದು ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಅವರು ಹೇಳಿದ್ದು, ಈ ಮೂಲಕ ತಾವೂ ಕೂಡ ಟಿಕೆಟ್ ಆಕಾಂಕ್ಷಿ ಎಂಬುದನ್ನು ವ್ಯಕ್ತಪಡಿಸಿದ್ದಾರೆ.

Shivamogga Science PU College ಜೂನ್ 26, ಆರ್ಯ ವಿಜ್ಞಾನ ಪಿಯು ಕಾಲೇಜಿನ ಕಟ್ಟಡ ಉದ್ಘಾಟನೆ

0

Shivamogga Science PU College ಶಿವಮೊಗ್ಗ ನಗರಕ್ಕೆ ವಿಜ್ಞಾನ ಪಿಯು ಕಾಲೇಜಿನ ಅವಶ್ಯಕತೆಯನ್ನು ಮನಗಂಡು ಎಲ್ಲಾ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಎಲ್‌ಬಿಎಸ್ ನಗರದ ಎರಡನೇ ತಿರುವಿನಲ್ಲಿ ಆರ್ಯ ವಿಜ್ಞಾನ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಜೂ. 26ರಂದು ಬೆಳಿಗ್ಗೆ 9.30ಕ್ಕೆ ಶೃಂಗೇರಿ ಶ್ರೀಗಳಾದ ಜಗದ್ಗುರು ಶ್ರೀ ವಿಧುಶೇಖರಭಾರತೀರವರು ಉದ್ಘಾಟಿಸಲಿದ್ದಾರೆ.

ಈ ಕುರಿತು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ್ ಕಾಲೇಜನ್ನು ಈ ವರ್ಷದಿಂದಲೇ ಆರಂಭಿಸಲಾಗಿದೆ. ಕಾಲೇಜಿನ ಕಟ್ಟಡದ ಉದ್ಘಾಟನೆ ಮಾತ್ರ ಜೂ. ೨೬ರ ಬೆಳಿಗ್ಗೆ ನಡೆಯಲಿದೆ ಎಂದರು.

ಶೃಂಗೇರಿ ಶ್ರೀಕ್ಷೇತ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಬುದ್ಧಿವಂತರಾಗುತ್ತಾರೆ ಎಂಬ ಮಾತಿದೆ. ಈ ಹಿನ್ನಲೆಯಲ್ಲಿ ಅವರನ್ನು ನಮ್ಮ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಉದ್ಘಾಟನೆಯ ದಿನ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದರು.

Shivamogga Science PU College ಶ್ರೀಗಳಿಂದ ಸರಸ್ವತಿ ಪೂಜೆ ನಡೆಸಲಾಗುವುದು. ಬಳಿಕ ಧೂಳಿ ಪೂಜೆ ನೆರವೇರಿಸಲಾಗುವುದು ಅನಂತರ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಶ್‌ರೀಗಳು ಅಲ್ಲಿ ಆಶೀರ್ವಚನ ನೀಡಿ, ಭಕ್ತರಿಗೆ ಫಲಮಂತ್ರಾಕ್ಷತೆ ನೀಡುವರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಶೃಂಗೇರಿ ಶಂಕರಮಠದ ಧರ್ಮದರ್ಶಿ ಡಾ. ಪಿ. ನಾರಾಯಣ್, ಶಾಸಕ ಎಸ್. ಎನ್.ಚನ್ನಬಸಪ್ಪ, ಡಾ. ಮಂಜುನಾಥ ಭಂಡಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಆರ್ಯ ಪಿಯು ಕಾಲೇಜಿನಲ್ಲಿ ಈಗ ೧೧೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ೧೦ ಕ್ಲಾಸ್ ರೂಮ್‌ಗಳಿವೆ, ೩ ಸುಸಜ್ಜಿತ ಲ್ಯಾಬ್‌ಗಳಿವೆ ಪಿಯು ಪಾಠದ ಜೊತೆ ಜೊತೆಗೆಯೇ ನೀಟ್, ಜೆಇಇ ಪರೀಕ್ಷೆಗೂ ತರಬೇತಿ ನೀಡಲಾಗುವುದು. ಉತ್ತಮ ಉಪನ್ಯಾಸಕ ವರ್ಗದವರಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿ ಖಜಂಚಿ ಬಿ.ಜೆ.ಸುನೀತಾ ದೇವಿ, ಉಪನ್ಯಾಸಕರಾದ ಕಣ್ಣನ್, ಪ್ರಕಾಶ್ ಮೊದಲಾದವರಿದ್ದರು.