Saturday, April 11, 2026
Saturday, April 11, 2026
Home Blog Page 679

Kempegowda Jayanti ಜೂನ್ 2, ನಗರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ

0

Kempegowda Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜೂ.27 ರ ಬೆಳಗ್ಗೆ 10.30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವರು ನೆರವೇರಿಸುವರು. ಶಾಸಕರಾದ ಎಸ್.ಎನ್ ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Kempegowda Jayanti ಜಿಲ್ಲೆಯ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಮಹಾಪೌರರು, ವಿವಿಧ ನಿಗಮ/ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಸಂಘಗಳ ಮುಖಂಡರು/ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು ಹಾಗೂ ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂಬಿ.ಎ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗಿರಿಧರ್ ಕೆ.ವಿ.ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

Actor Darshan ದರ್ಶನ್ ಗೆ ಊಟ ತಂದ ಪತ್ನಿ ವಿಜಯಲಕ್ಷ್ಮಿ , ಮೀಡಿಯ ಮಂದಿ‌ ಕಂಡು ‌ಹಾಗೇ ವಾಪಸ್!

0

Actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್‌ ಇಂದು ಊಟ ತಂದಿದ್ದಾರೆ. ಇಂದು ವಿಜಯಲಕ್ಷ್ಮಿ ಪುತ್ರ ವಿನೀಶ್‌ ಜೊತೆಗೆ ಕಿಯಾ ಕಾರಿನಲ್ಲಿ ಪರಪ್ಪನ ಅಗ್ರಹಾರಕ್ಕೆ ತೆರಳಿ ಪತಿಗೆ ಊಟ ಕೊಂಡೊಯ್ದಿದ್ದಾರೆ. ಆದರೆ ಮಾಧ್ಯಮದವರನ್ನ ಕಂಡು ವಿಜಯಲಕ್ಷ್ಮಿ ವಾಪಸ್ ಹೊರಟಿದ್ದಾರೆ.
ದರ್ಶನ್‌ ಬಂಧನವಾಗಿ 9 ದಿನಗಳ ಬಳಿಕ ವಿಜಯಲಕ್ಷ್ಮಿ ಜೂನ್‌ 19 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಗೆ ಆಗಮಿಸಿ ಪತಿಯನ್ನು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ನ್ಯಾಯಾಂಗ ಬಂಧನವಾಗಿತ್ತು
ಪತಿ ದರ್ಶನ್‌ ಕುರಿತಾಗಿ ಆರೋಪಗಳು ಕೇಳಿಬರುತ್ತಿದ್ದಂತೆ ವಿಜಯಲಕ್ಷ್ಮಿ ಮನನೊಂದು ದರ್ಶನ್‌ ಅವರನ್ನು ಅನ್‌ ಫಾಲೊ ಮಾಡಿ ಬಳಿಕ ಸೋಶಿಯಲ್‌ ಮೀಡಿಯಾಗೆ ಗುಡ್‌ಬೈ ಹೇಳಿದ್ದರು. ಬಳಿಕ ಮುನಿಸು ಮರೆತು ಮತ್ತೆ ಇನ್ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ.
Actor Darshan ಈ ಹಿಂದೆ 2011 ರಲ್ಲಿ ದರ್ಶನ್‌ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದರು. ತೀವ್ರವಾಗಿ ಗಾಯಗೊಂಡಿದ್ದರೂ ವಿಜಯಲಕ್ಷ್ಮಿ ಬಳಿಕ ಪತಿಯ ವಿರುದ್ಧದ ದೂರನ್ನು ಹಿಂಪಡೆದು, ಸಂಧಾನ ಮಾಡಿಕೊಂಡು ಸಂಸಾರ ಮುಂದುವರಿಸಿದ್ದರು.

Kannada Sahitya Parishath ಪಠ್ಯ ಕಮ್ಮಟಗಳಿಂದ ಕನ್ನಡ ಪಠ್ಯವನ್ನು ನೋಡುವ ದೃಷ್ಟಿಕೋನ ಬೇರೆಯಾಗುತ್ತೆ- ಎ.ಕೆ.ನಾಗೇಂದ್ರಪ್ಪ

0

Kannada Sahitya Parishath ವ್ಯಕ್ತಿಯ ವ್ಯಕ್ತಿತ್ವ ವಿಕಾಸಗೊಳ್ಳಲು ಸೃಜನಾತ್ಮಕ ಆಲೋಚನೆಗೆ ಕನ್ನಡ ಭಾಷೆ, ಸಾಹಿತ್ಯ ಸಹಕಾರಿಯಾಗಲಿದೆ. ನಮ್ಮ ಮಾತೃಭಾಷೆ, ಪರಿಸರದ ಭಾಷೆಯನ್ನು ಚನ್ನಾಗಿ ಮಾತನಾಡಲು, ಓದಲು, ಬರೆಯಲು ಆಸಕ್ತಿ ತೋರಬೇಕು. ಆ ಮೂಲಕ ಎಲ್ಲರೂ ನಾಡಿಗೆ ಕೊಡುಗೆಯಾಗಿರಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಕರೆನೀಡಿದರು.

ಅವರು ಜೂನ್ 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಗೋಣಿಬೀಡು ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಆವರಣದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ವಿದ್ಯಾರ್ಥಿಗಳಿಗೆ ಕಥೆ, ಕವನ, ಪ್ರಬಂಧ ರಚನಾ ಕಮ್ಮಟವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಕೆ. ನಾಗೇಂದ್ರಪ್ಪ ವಿದ್ಯಾರ್ಥಿಗಳಿಗೆ ಈ ಕಮ್ಮಟ ಉಪಯುಕ್ತ. ಕನ್ನಡ ಪಠ್ಯವನ್ನು ನೋಡುವ ದೃಷ್ಟಿಕೋನ ಬೇರೆಯಾಗುತ್ತೆ. ಸಾಹಿತ್ಯದ ಅನೇಕ ಪ್ರಕಾರಗಳು ನಮ್ಮ ಪಠ್ಯದಲ್ಲಿವೆ. ಆ ವಿಚಾರವಾಗಿ ಮಾಹಿತಿ ಕೊರತೆಯಿತ್ತು. ನಿಮ್ಮ ಆಸಕ್ತಿಯನ್ನು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸಾಂಸ್ಕೃತಿಕ ವಲಯದ ಮನಸ್ಥಿತಿ ಸಿದ್ದಪಡಿಸಲು ಸಹಕಾರಿಯಾಗಲಿದೆ. ಫಲಿತಾಂಶದ ಸ್ಪರ್ಧೆ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕ ಜ್ಞಾನ ವನ್ನು ಹೆಚ್ಚಿಸುವ ಕೆಲಸ ಆಗುತ್ತಿದೆ ಎಂದು ವಿವರಿಸಿದರು.

ತಾಲ್ಲೂಕು ಕಸಾಸಾಂ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಸುಧಾಮಣಿ ವೆಂಕಟೇಶ್ ಸಾಹಿತ್ಯದತ್ತ ಮಕ್ಕಳ ಆಸಕ್ತಿ, ಗಮನ ಸೆಳೆಯುವ ಪ್ರಯತ್ನ ಸಫಲವಾಗುತ್ತಿದೆ ಎಂದರು.

ಗೋಣಿಬೀಡು ನಿವಾಸಿಗಳಾದ ಲೋಕೇಶ್ ಗೌಡ ಆರ್. ಜಿ. ಸಂಪನ್ಮೂಲ ವ್ಯಕ್ತಿಗಳಾದ ಸಾಹಿತಿಗಳು, ಅಂಕಣಕಾರರಾದ ಬಿ. ಚಂದ್ರೇಗೌಡರು ಪ್ರಬಂಧ ಸಾಹಿತ್ಯ ಅಂದರೆ ಏನು. ಅದನ್ನು ಬರೆಯಲು ಇರಬೇಕಾದ ಸಿದ್ದತೆಗಳೇನು. ಅವುಗಳ ಓದು, ಅರಿವು, ಬರೆಯುವ ಕ್ರಮಗಳನ್ನು ಕುರಿತು ಮಾಹಿತಿ ನೀಡಿದರು.

ಸಾಹಿತಿಗಳು, ಕನ್ನಡ ಪ್ರಾಧ್ಯಾಪಕರಾದ ಡಾ. ಎಸ್. ಎಂ. ಮುತ್ತಯ್ಯ ಅವರು ಕಾವ್ಯ, ಪದ್ಯ, ಕವನ, ಹನಿಗವನ ಇವುಗಳ ಕುರಿತು ಮಾಹಿತಿ ನೀಡುತ್ತಲೆ ಹತ್ತು ಸಾಲಿನಲ್ಲಿ ಎಷ್ಟೊಂದು ಮಾಹಿತಿ ನೀಡಲು ಕವನಕ್ಕಿರುವ ಶಕ್ತಿಯನ್ನು ವಿವರಿಸಿದರು.

ರಂಗ ನಿರ್ದೇಶಕರು, ಉಪನ್ಯಾಸಕರಾದ ಡಾ. ಜಿ. ಆರ್. ಲವ ಅವರು ಪುಣ್ಯ ಕೋಟಿ ಕಥೆಯನ್ನು ಉದಾಹರಿಸಿ ಅದೇ ವಿಚಾರವಾಗಿ ಕಥೆ ಹೇಗೆ ಕಟ್ಟಬಹುದು, ಕವನ ಹೇಗೆ ಬರೆಯಬಹುದು ಎಂಬುದನ್ನು ವಿವರಿಸುತ್ತಲೇ ಕಥೆ ಹೇಳುವ, ಬರೆಯುವ ಕ್ರಮಗಳನ್ನು ವಿವರಿಸಿದರು.

Kannada Sahitya Parishath ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಹಾಲೇಶ್ ನಾಯ್ಕ ಪ್ರತಿಭೆ ಪ್ರಯತ್ನದಿಂದ ಬರುತ್ತದೆ. ಪ್ರತಿಭೆ ಹುಟ್ಟಿನಿಂದ ಬರುತ್ತದೆ ಎನ್ನುವ ಕಾವ್ಯ ಮೀಮಾಂಸೆ ಮಾತು ಸರಿಯಲ್ಲ. ಸಾಹಿತ್ಯಕ್ಕೆ ಹೆಣ್ಣು, ಗಂಡು ಎಂಬ ಬೇದವಿಲ್ಲ. ಸಾಹಿತ್ಯಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಹಿಂದಿನಂತೆ ಅಡಚಣೆ ಉಂಟುಮಾಡುವವರು ಕಡಿಮೆ ಆಗಿದ್ದಾರೆ ಎಂದು ಹೇಳುತ್ತಲೆ ಸಾಹಿತ್ಯ ರಚನಾ ಕಮ್ಮಟವನ್ನು ಪ್ರಶಂಸಿದರು. ಭದ್ರಾವತಿ ಸರ್. ಎಂ. ವಿ. ಸರ್ಕಾರಿ ವಿಜ್ಞಾನ ಕಾಲೇಜು ಉಪನ್ಯಾಸಕರಾದ ಡಾ. ಅರಸಯ್ಯ ಉಪಸ್ಥಿತರಿದ್ದರು.

ಕು. ನಾಗಶ್ರೀ ಪ್ರಾರ್ಥನೆ ಹಾಡಿದರು. ಕು. ಸಿಂಧೂ ಸ್ವಾಗತಿಸಿದರು.

Actor Darshan ಆತ್ಮಹತ್ಯೆಗೈದ ಸೌಂದರ್ಯ ಜಗದೀಶ್ & ಪವಿತ್ರ ಗೌಡ. ಬೆಳಕಿಗೆ ಬಂದ ಹಣದ ವ್ಯವಹಾರ

0

Actor Darshan ಆತ್ಮಹತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್‌ ಪವಿತ್ರ ಗೌಡಗೆ 2 ಕೋಟಿ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರು ಮನೆ ಖರೀದಿಸಲು ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.

ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ಅವರ ನಡುವೆ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ. ಅಷ್ಟೇ ಅಲ್ಲ, ಸೌಂದರ್ಯ ಜಗದೀಶ್ ಅವರು ಪವಿತ್ರಾ ಗೌಡ ಅವರ ಮನೆ ಖರೀದಿಗೆ 2 ಕೋಟಿ ರೂಪಾಯಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಸೌಂದರ್ಯ ಜಗದೀಶ್ ಅವರು ಹಣ ಕೊಟ್ಟ ಮರು ದಿನವೇ ಪವಿತ್ರಾ ಗೌಡ ಅವರು ರಾಜರಾಜೇಶ್ವರಿ ನಗರದಲ್ಲಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

Actor Darshan ಸೌಂದರ್ಯ ಜಗದೀಶ್ ಅವರು ಹಣ ಸಹಾಯ ಮಾಡಿದ್ರಾ ಅಥವಾ ಸಾಲ ಕೊಟ್ಟಿದ್ದಾರೋ ಎಂಬುದು ಇದುವರೆಗೆ ತಿಳಿದುಬಂದಿಲ್ಲ.
ಆದರೆ 2017 ನವೆಂಬರ್ ನಲ್ಲಿ 1 ಕೋಟಿ ರೂ. ಹಾಗೇ 2018 ಜನವರಿಯಲ್ಲಿ 1 ಕೋಟಿ ರೂ.ಗಳನ್ನು ಪವಿತ್ರಾಗೌಡಗೆ ಕೊಟ್ಟಿದ್ದರು. ಆದರೆ ಸೌಂದರ್ಯ ಜಗದೀಶ್ ಕುಟುಂಬದವರು ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಲಾಗಿದೆ.

Petrol and diesel prices ತೈಲ ಬೆಲೆ ಏರಿಕೆ: ಸಂಕಷ್ಟದಲ್ಲಿ ಲಾರಿ ಮಾಲೀಕರು-ತಲ್ಕಿನ್ ಅಹಮ್ಮದ್

0

Petrol and diesel prices ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಏರಿಸಿದೆ. ಡೀಸೆಲ್ ಬೆಲೆ ಲೀಟರ್ ಗೆ ೩.೫೦ ರೂ, ಹೆಚ್ಚಾಗಿದೆ. ಇದು ಲಾರಿ ಮಾಲೀಕರ ಮೇಲೆ ಹೊರೆಯಾಗಿದೆ. ಈಗಾಗಲೇ ಲಾರಿ ಮಾಲೀಕರು ಟೋಲ್ ದರ ಏರಿಕೆ, ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ ಎಂದು ಲಾರಿ ಮಾಲೀಕರ ಒಕ್ಕೂಟದ ಜಿಲ್ಲಾಧ್ಯಕ್ಷ ತಲ್ಕಿನ್ ಅಹಮ್ಮದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾರಿಯ ವಿ.ಎಲ್.ಟಿ. ಮತ್ತು ಪ್ಯಾನಿಕ್ ಬಟನ್ ಹೊರೆಯೂ ಕೂಡ ಹೆಚ್ಚಾಗಿದೆ. ಇದರಿಂದ ಸಾಗಣೆ ವೆಚ್ಚವೂ ಕೂಡ ಅಧಿಕವಾಗುತ್ತದೆ. ಸಾಗಣೆಗೆ ಪಡೆಯುವ ದರ ಹೆಚ್ಚಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಲಾರಿ ಮಾಲೀಕರು ಅತ್ಯಂತ ಸಂಕಷ್ಟದಲ್ಲಿದ್ದಾರೆ ಎಂದು ದೂರಿದರು.
Petrol and diesel prices ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ತಕ್ಷಣವೇ ಇಳಿಸಬೇಕು . ೨೪ -೨೫ರ ಬಜೆಟ್ ನಲ್ಲಿ ಈಗಾಗಲೇ ರಸ್ತೆ ತೆರಿಗೆ ಮೇಲೆ ಶೇ. ೩ರಷ್ಟು ಸೆಸ್ ಹೆಚ್ಚಿಗೆ ಮಾಡಲಾಗಿದೆ. ಈ ಎಲ್ಲಾ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ವಾಪಸ್ ಪಡೆಯಲು ಈ ಉದ್ಯಮ ನಡೆಯುತ್ತಿರುವ ಡಿಮ್ಯಾಂಡ್ ಮತ್ತು ಸಪ್ಲೆನಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಏರಿಸಿರುವ ದರ ಇಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡುವ ನೆಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಬೆಲೆ ಏರಿಸಿರುವುದು ಸರಿಯಲ್ಲ. ನಮಗೆ ಖಂಡಿತ ಗ್ಯಾರಂಟಿಗಳು ಬೇಡ. ಅದರ ಬದಲು ಇಂಧನ ಬೆಲೆ ಏರಿಸದಿದ್ದರೆ ಸಾಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ನಾಸಿರ್ ಖಾನ್, ಭೋಜರಾಜ್, ಜಗನ್ನಾಥ್, ಬಾಬು, ಏಜಾಜ್ ಅಹಮ್ಮದ್, ರಫೀವುಲ್ಲಾ, ಅಜ್ಜ ಪಾಶಾ, ಮಹಮ್ಮದ್ ಗೌಸ್ ಇದ್ದರು.

Lok Sabha ಹದಿನಂಟನೇ ಸಂಸತ್ ಅಧಿವೇಶದ ಮೊದಲಲ್ಲೇ “ಇಂಡಿ” ಕೂಟದಿಂದ ಸಂವಿಧಾನ ಪ್ರತಿ ಹಿಡಿದು ಬೃಹತ್ ಪ್ರತಿಭಟನೆ

0

Lok Sabha 18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದ ಮಧ್ಯೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಟಿಎಂಸಿ ಸಂಸದ ಸೌಗತ ರಾಯ್ ಸೇರಿದಂತೆ ವಿರೋಧ ಪಕ್ಷದ ಇಂಡಿಯಾ ಬಣದ ನಾಯಕರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ಸೋಮವಾರ ನಡೆಸಿದರು.

ಕೈಯಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು, ಬಿಜೆಪಿಯವರು ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸುತ್ತಲೇ ನಾಯಕರು ಅದನ್ನು ರಕ್ಷಿಸುವಂತೆ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮೋದಿಯವರು ಸಂವಿಧಾನವನ್ನು ಒಡೆಯಲು ಯತ್ನಿಸಿದ್ದಾರೆ, ಅದಕ್ಕಾಗಿಯೇ ಇಂದು ಎಲ್ಲ ಪಕ್ಷಗಳ ನಾಯಕರು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿ ಗಾಂಧಿ ಪ್ರತಿಮೆ ಇತ್ತು, ಎಲ್ಲ ಪ್ರಜಾಪ್ರಭುತ್ವವನ್ನು ಒಡೆಯುತ್ತಿದ್ದಾರೆ. ಅದಕ್ಕಾಗಿಯೇ ಇಂದು ನಾವು ಮೋದಿ ಜೀ, ನೀವು ಸಂವಿಧಾನದ ಪ್ರಕಾರ ಮುಂದುವರಿಯಬೇಕು ಎಂದು ತೋರಿಸಲು ಬಯಸುತ್ತೇವೆ” ಎಂದರು.

ಗಮನಾರ್ಹವಾಗಿ, ತಮ್ಮ ಹೇಳಿಕೆಯಲ್ಲಿ, ತುರ್ತು ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಯವರ ಟೀಕೆಗಳಿಗೆ ಖರ್ಗೆ ವಾಗ್ದಾಳಿ ನಡೆಸಿದರು. ಇದನ್ನೇ 100 ಸಲ ಹೇಳ್ತಾರೆ, ತುರ್ತು ಪರಿಸ್ಥಿತಿ ಘೋಷಣೆ ಮಾಡದೆ ಹೀಗೆ ಮಾಡುತ್ತಿದ್ದೀರಿ, ಈ ಬಗ್ಗೆ ಮಾತನಾಡುತ್ತಾ ಎಷ್ಟು ದಿನ ಆಡಳಿತ ನಡೆಸುತ್ತೀರಿ ಎಂದು ಕಿಡಿಕಾರಿದರು.

ಇದೇ ವೇಳೆ, ಪ್ರತಿಭಟನಾ ಸ್ಥಳದಿಂದ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, “ಹಂಗಾಮಿ ಸ್ಪೀಕರ್ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವುದು ಗಮನಾರ್ಹ. ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ, ನರೇಂದ್ರ ಮೋದಿ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ, ಹಂಗಾಮಿ ಸ್ಪೀಕರ್ ನೇಮಕ ಮಾಡಿರುವುದು ಸಂವಿಧಾನದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದರು

Lok Sabha ಪಕ್ಷದ ಮತ್ತೊಬ್ಬ ಸಂಸದ ಸೌಗತ ರಾಯ್ ಕೂಡ ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು, “ಸಂವಿಧಾನವನ್ನು ನಾಶಪಡಿಸುವ ಮತ್ತು ಗುರುತಿಸಲಾಗದಷ್ಟು ತಿದ್ದುಪಡಿ ಮಾಡುವ ಬಿಜೆಪಿಯ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.

ವಿರೋಧ ನಡುವೆಯೆ, ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಇಂದು 18 ನೇ ಲೋಕಸಭೆಯ ಸದಸ್ಯರಾಗಿ ಪಿಎಂ ಮೋದಿ ಮತ್ತು ಇತರ ಚುನಾಯಿತ ಸಂಸದರಿಗೆ ಪ್ರಮಾಣ ವಚನ ಬೋಧಿಸಿದರು. ಗಮನಾರ್ಹವೆಂದರೆ, ಪಿಎಂ ಮೋದಿ ಸತತ ಮೂರನೇ ಅವಧಿಗೆ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Dr. Dhananjay Sarji ಎಲ್ಲರ ಸಲಹೆ ಸ್ವೀಕರಿಸಿ ಉತ್ತಮ ಕಾರ್ಯ ನಿರ್ವಹಿಸುವೆ- ಡಾ.ಧನಂಜಯ ಸರ್ಜಿ

0

Dr. Dhananjay Sarji ವಿಧಾನ ಪರಿಷತ್ ನೂತನ ಸದಸ್ಯ ಡಾ. ಧನಂಜಯ ಸರ್ಜಿ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಜಿಲ್ಲೆಯ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಸಮಾಲೋಚನೆ ನಡೆಸಿದರು. ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಗತಿ ಕುರಿತು ಡಾ. ಧನಂಜಯ ಸರ್ಜಿ ಅವರೊಂದಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಚರ್ಚಿಸಿದರು.

ಸನ್ಮಾನ ಸ್ವೀಕರಿಸಿದ ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

Dr. Dhananjay Sarji ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಮುಖರಾದ ಬಿ.ಗೋಪಿನಾಥ್, ವಸಂತ ಹೋಬಳಿದಾರ್, ಡಿ.ಎಂ.ಶಂಕರಪ್ಪ, ಪರಮೇಶ್ವರ್, ಮರಿಸ್ವಾಮಿ, ಪ್ರದೀಪ್ ಯಲಿ, ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಗಣೇಶ್ ಅಂಗಡಿ ಇದ್ದರು.

Mangalore Institute of Oncology Hospital ತೀರ್ಥಹಳ್ಳಿಯಲ್ಲಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲೇ ಆರಂಭ- ಟಿ.ಕೆ.ರಮೇಶ ಶೆಟ್ಟಿ

0

Mangalore Institute of Oncology Hospital ಬಹುದಿನಗಳ ಪರಿಶ್ರಮ, ಮಲೆನಾಡಿನ ಭಾಗದ ಜನರ ಅಪೇಕ್ಷೆ ತೀರ್ಥಹಳ್ಳಿಯಲ್ಲಿ ಒಂದು ಕ್ಯಾನ್ಸರ್ ಆಸ್ಪತ್ರೆ ಬೇಕು ಎಂಬ ಆಶಯಕ್ಕೆ ಸ್ಪಂದಿಸಿದವರು ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಆಡಳಿತ ಮಂಡಳಿಯವರು ಎಂದು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ‘ಅಂತರಂಗ’ ಪತ್ರಿಕೆಯ ಸಂಪಾದಕರಾದ ಟಿ.ಕೆ.ರಮೇಶ್ ಶೆಟ್ಟಿಯವರು ತಿಳಿಸಿದರು.
ಅವರು ಜೂ. 22 ಶನಿವಾರ
ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ
ಅಸ್ಪತ್ರೆಯ ಆಡಳಿತ ನಿರ್ದೆಶಕರಾದ ಡಾ. ಡಿ. ಸುರೇಶ್ ರಾವ್ ಜೊತೆ ತೀರ್ಥಹಳ್ಳಿಯಲ್ಲಿ ಭವ್ಯವಾಗಿ ನಿರ್ಮಿಸುತ್ತಿರುವ ಕಟ್ಟಡದ ಕಾಮಗಾರಿ ವೀಕ್ಷಣೆ ನಂತರ ಸಂವಾದ ಸಭೆಯಲ್ಲಿ ಮಾತನಾಡುತ್ತ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಮತ್ತು ಚಿಕ್ಕಮಗಳೂರಿನಿಂದ ಕ್ಯಾನ್ಸರ್ ಪೀಡಿತರು ಮಂಗಳೂರಿನ ಆ್ಯಂಕಾಲಜಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರು. ಈಗ ಇಲ್ಲಿ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ನಗರದ ಸಾಮಾಜಿಕ ಕಾರ್ಯಕರ್ತ ಅ.ನಾ.ವಿಜಯೇಂದ್ರ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೇವಾ ಮನೋಭಾವ ಹೊಂದಿರುವ ಡಾ.ಸುರೇಶ್ ರಾವ್ ರವರ ಕುಟುಂಬದವರು ಸಾಮಾಜಿಕ ಕಳಕಳಿಯನ್ನು ಹೊಂದಿದವರು ಈಗಾಗಲೇ ಈ ಕ್ಷೇತ್ರದಲ್ಲಿ ಹೆಚ್ವು ಸೇವೆ ಸಲ್ಲಿಸಿ ಈ ಭಾಗದ ಜನರ ಉಪಯೋಗಕ್ಕೆ ತೀರ್ಥಹಳ್ಳಿಯನ್ನು ಕೇಂದ್ರವನ್ನಾಗಿಸಿ ಸುಮಾರು ಏಳೆಂಟು ಜಿಲ್ಲೆಗೆ ಒಂದು ಉತ್ತಮ ಕ್ಯಾನ್ಸರ್ ಅಸ್ಪತ್ರೆ ಪ್ರಾರಂಭಿಸುತ್ತಿರುವ ಇವರ ಕಾರ್ಯ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ
ಡಾ. ಡಿ. ಸುರೇಶ್ ರಾವ್ ರವರು ಮಾತನಾಡುತ್ತ ನುರಿತ ವೈದ್ಯಕೀಯ ತಂಡದವರೊಂದಿಗೆ ಸುಮಾರು 65 ಬೆಡ್ ನೊಂದಿಗೆ ಅಗಸ್ಟ್ ತಿಂಗಳಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಟ್ಟಡದ ಬಹುತೇಕ ಕೆಲಸ ಮುಗಿದಿದ್ದು ಪೀಠೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ಈಗಾಗಲೇ ಅವಶ್ಯತೆಯಿರುವ ಎಲ್ಲಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು. ಹೆಚ್ಚಿನದಾಗಿ ಸ್ಥಳೀಯ ಜನರಿಗೆ ಉದ್ಯೋಗ ನೀಡಲಾಗಿದ್ದು, ಅವರಿಗೆಲ್ಲ ಈಗಾಗಲೇ ತರಬೇತಿ ನಿಡುವ ಕಾರ್ಯ ಆರಂಭವಾಗಿದೆ.
ನಮ್ಮ ಮುಖ್ಯ ಉದ್ಧೇಶ ಸೇವಾ ಮನೋಭಾವನೆಯ ಗುರಿಯಾಗಿದ್ದು ತರಬೇತಿ ಕಾರ್ಯಕ್ರಮದಲ್ಲಿ ಸೇವಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ ಅನುಭವಿ ತಜ್ಞರನ್ನು ಕರೆಸಿ ಅವರಿಂದ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿಸುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

Mangalore Institute of Oncology Hospital ಗುಣಮಟ್ಟದ ಚಿಕಿತ್ಸೆಗೆ ಬೇಕಾದ ಎಲ್ಲಾ ಏರ್ಪಾಟು ಮಾಡಿಕೊಳ್ಳಲಾಗಿದೆ ಎಂದು ಈ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಅಸ್ಪತ್ರೆಯ ಸುತ್ತಲೂ ಇರುವ ಪರಿಸರವೂ ತುಂಬಾ ಚೆನ್ನಾಗಿದ್ದು ಅಕ್ಕ ಪಕ್ಕ ಗಿಡ
ಮರಗಳಿಂದ ಕೂಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದುರ್ಗಾದಾಸ್ ಅಡಪ ರವರು ಉಪಸ್ಥಿತರಿದ್ದರು.

Chamber of Commerce Shivamogga ಕಠಿಣ ಪರಿಶ್ರಮದಿಂದ ಧ್ವನಿ ಸಂಸ್ಕರಣೆಗೆ ಪ್ರಾಮುಖ್ಯತೆ ನೀಡಬೇಕು- ಗಾಯಕ ಭದ್ರಾವತಿ ವಾಸು

0

Chamber of Commerce Shivamogga ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿನ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.

ಅಶೋಕ ನಗರದ ಎಆರ್‌ಬಿ ಕಾಲನಿಯ ಯೋಗ ಮಂದಿರದಲ್ಲಿ ಕದಂಬ ಕರೋಕೆ ಗ್ರೂಪ್ ವತಿಯಿಂದ ಆಯೋಜಿಸಿದ್ದ ಕದಂಬ ಕರೋಕೆ ಗಾಯನ ಸ್ಪರ್ಧೆ ಸೀಸನ್ 2ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತದ ಕಲಿಕೆಯಿಂದ ಮನುಷ್ಯನ ಖಿನ್ನತೆ ದೂರಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ ನೆರವಾಗುತ್ತದೆ ಎಂದು ತಿಳಿಸಿದರು.

ಕದಂಬ ಕರೋಕೆ ಗ್ರೂಪ್‌ನಲ್ಲಿ ಸಾಕಷ್ಟು ಜನ ಕಲಾವಿದರು ತಮ್ಮದೇ ಆದ ರೀತಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭದ್ರಾವತಿ ವಾಸು ಸಾರಥ್ಯದಲ್ಲಿ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಕೆಲಸ ಆಗುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯ ಗಾಯಕ ಭದ್ರಾವತಿ ವಾಸು ಮಾತನಾಡಿ, ಕಠಿಣ ಪರಿಶ್ರಮದ ಪ್ರಯತ್ನದಿಂದ ಧ್ವನಿ ಸಂಸ್ಕರಣೆಗೆ ಪ್ರಾಮುಖ್ಯತೆ ನೀಡಬೇಕು. ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಬೇಕು. ಕದಂಬ ಕರೋಕೆ ಗ್ರೂಪ್‌ನಿಂದ ಹೊಸ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಎಎಸ್‌ಐ ರವಿ ಚವ್ಹಾಣ್ ಮಾತನಾಡಿ, ಸ್ಪರ್ಧೆಗಳ ಆಯೋಜನೆಯಿಂದ ಪ್ರತಿಭಾನ್ವಿತರಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.

ಕದಂಬ ಕರೋಕೆ ಸೀಸನ್ 2ರಲ್ಲಿ ಶಿಕಾರಿಪುರ ರಾಜು ಪ್ರಥಮ, ಶಿಕಾರಿಪುರ ಗುರುರಾಜ್ ದ್ವಿತೀಯ ಹಾಗೂ ಶಿವಮೊಗ್ಗದ ಅಜಯ್ ತೃತೀಯ ಸ್ಥಾನ ಪಡೆದು ಬಹುಮಾನ ವಿಜೇತರಾದರು. ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಯುಗಳ ಗೀತೆ, ವೈಯುಕ್ತಿಕ ಗೀತೆ ಗಾಯನ, ಕನ್ನಡ, ಹಿಂದಿ ಗೀತೆಗಳನ್ನು ಕಲಾವಿದರು ಹಾಡಿದರು.

Chamber of Commerce Shivamogga ಆದ್ಯಾ ಪ್ರಶಾಂತ್, ರಾಜಶೇಖರ್, ಹೇಮಂತ್, ಅನೂಪ್, ಸುಮಾ, ಭರತ್, ಸುಮಿತ್ರಾ, ಪ್ರಿಯಾಂಕ, ಆನಂದ, ಲಕ್ಷ್ಮೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

S.N.Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕ‌ ಚನ್ನಬಸಪ್ಪ

0

S.N.Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಭಂದಿಸಿದಂತೆ, ಶಾಸಕರ ಕಚೇರಿಯಾದ ಕರ್ತವ್ಯ ಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ,
೧. ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಕಾಮಗಾರಿ.
೨. ⁠ಮುಜರಾಯಿ ದೇವಸ್ಥಾನಗಳ ಜೀರ್ಣೋದ್ಧಾರ ಅಪೂರ್ಣ ಕಾಮಗಾರಿಗಳ ಬಗ್ಗೆ
೩. ⁠ಹಿಂದುಳಿದ ವರ್ಗಗಳ ಸಮುದಾಯ ಭವನಗಳ ಅಪೂರ್ಣ ಕಾಮಗಾರಿಗಳ ಬಗ್ಗೆ
೪. ⁠ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾಮಗಾರಿಗಳ ಬಗ್ಗೆ
೫. ಶಾಲಾ ಅಭಿವೃದ್ಧಿ ಕಾಮಗಾರಿಗಳು
೬. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು
೭. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಮತ್ತು ಹೊಸ ಪ್ರಸ್ತಾವನೆ ಬಗ್ಗೆ
೮. ⁠ಕ್ರೀಡಾ ಇಲಾಖೆಯ ಕಾಮಗಾರಿಗಳ / ಪ್ರಸ್ತಾವನೆಗಳ ಬಗ್ಗೆ
೯. ⁠ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳ ಬಗ್ಗೆ
೧೦. ⁠ಸಮಾಜ ಕಲ್ಯಾಣ ಇಲಾಖೆಯಿಂದ SCP/TSP ಯೋಜನೆಯಡಿಯಲ್ಲಿ ಪ್ರಸ್ತಾವನೆ ಸಲ್ಲಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಅನೇಕ ನಿರ್ಣಯಗಳನ್ನು ತೆಗೆದುಕೊಂಡರು.

S.N.Chennabasappa ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು, ⁠ತಹಸೀಲ್ದಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕಾರಿಗಳು, ಕೆ.ಆರ್.ಐ.ಡಿ.ಎಲ್ ನ ಇಂಜಿನಿಯರ್ ಗಳು, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರು, ಮುಜರಾಯಿ ತಹಶೀಲ್ದಾರ್ , ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.