Narendra Modi ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು 2014 ರಿಂದ ಸುಮಾರು 32 ಬಾರಿ ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಿಸಿದ್ದು, ಆಗ ಮೌನವಾಗಿದ್ದ ಆಗಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ಆಗೆಲ್ಲ ಮೌನ ಗೌರಿ ವೃತ ಆಚರಿಸುತ್ತಿದ್ದರೇನೋ ಎಂದು ಯುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಆದರ್ಶ ಹುಂಚದಕಟ್ಟೆ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಅಲ್ಲಿ ಇವತ್ತಿನಿಂದ ಇಂಧನ ಬೆಲೆ ಹೆಚ್ಚಿಸಲಾಗಿದೆ. ಜ್ಞಾನೇಂದ್ರ ಮತ್ತು ಬಿಜೆಪಿಗರು ಅಲ್ಲಿಗೋಗಿ ಪ್ರತಿಭಟಿಸಲಿ. ಅವರ ಹೋಗಿ ಬರುವ ಪ್ರಯಾಣದ ವೆಚ್ಚ ಭರಿಸುವುದಾಗಿ ಸವಾಲೆಸೆದರು.
೨೦೧೪ ರಿಂದ ಈತನಕ ಕೇಂದ್ರದ ಬಿಜೆಪಿ ಸರ್ಕಾರ ಇಂಧನ ದರ ಏರಿಸುತ್ತಲೇ ಬಂದಿದೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವೂ ತೈಲ ಬೆಲೆಯನ್ನು ಶೇ. 35 ರಷ್ಟು ಏರಿಸಿ ಬಳಿಕ ಚುನಾವಣೆಯ ಕಾರಣದಿಂದಾಗಿ ಶೇ. ೨೫ ಕ್ಕೆ ಇಳಿಸಿತ್ತು. 2014 ರ ಚುನಾವಣೆಯ ಸಂದರ್ಭದಲ್ಲಿ ಇಂಧನ ಧರ 50 ರಿಂದ 60 ರ ಆಸುಪಾಸಿನಲ್ಲಿಯೇ ಇತ್ತು. ಇದರ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಾ ಅಧಿಕಾರಕ್ಕೆ ಬಂದರೆ ಇಂಧನ ದರ ಇಳಿಸುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿಯವರು ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಇಂಧನ ಬೆಲೆಯನ್ನು ಏರಿಸುತ್ತಲೇ ಹೋಗಿದ್ದಾರೆ. ಆಗೆಲ್ಲ ಸುಮ್ಮನಿದ್ದ ಮಾಜಿ ಗೃಹ ಸಚಿವರು ಹಾಗೂ ಬಿಜೆಪಿಗರು ಮೊನ್ನೆಯ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖವಾಡ ತೊಟ್ಟು ಅಣಕಿಸಿದ್ದು, ಶಾಸಕರು ಹಾಗೂ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದರು.
Narendra Modi ನೀಟ್ ಹಗರದಲ್ಲಿ ಕೇಂದ್ರದ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಆದರ್ಶ ಅವರು, ತಾಲೂಕು ಕಚೇರಿಯಲ್ಲಿ ಜನರ ಕೆಲಸ ಕಾರ್ಯಗಳಾಗದಿದ್ದರೆ, ಅಧಿಕಾರಿಗಳನ್ನು ಕರೆಸಿ ಅವರ ಕಿವಿ ಹಿಂಡುವ ಅಧಿಕಾರ ಶಾಸಕರಾಗಿ ಇವರಿಗೆ ಇದ್ದೇ ಇದೆ. ಆದರೆ ಇದನ್ನು ಬಿಟ್ಟು ತಾಲೂಕು ಕಚೇರಿಯಲ್ಲಿ ಕೂತು ಪ್ರಚಾರಕ್ಕಾಗಿ ವೀಡಿಯೋ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಟ್ಟಣ ಯುವ ಕಾಂಗ್ರೇಸ್ ಅಧ್ಯಕ್ಷ ಅಮರನಾಥ ಶೆಟ್ಟಿ , ಪುಟ್ಲೋಡು ರಾಘವೇಂದ್ರ, ಶ್ರೇಯಸ್, ಅಶ್ವಲ್ ಮುಂತಾದವರಿದ್ದರು.
Narendra Modi ಬಿಜೆಪಿ 2014 ರಿಂದ 32 ಬಾರಿ ತೈಲ ಬೆಲೆ ಏರಿಸಿದೆ. ಬಿಜೆಪಿಗರು ಮೌನ ತಾಳಿದ್ದರು. ಈಗ ದಿಢೀರನೆ ಎಚ್ಚತ್ತಿದ್ದಾರೆ!- ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ
Actress Chitral Rangaswamy “ನನಗೂ ಅಶ್ಲೀಲ ಮೆಸೇಜ್ ಬರುತ್ತಿತ್ತು” – ನಟಿ ಚಿತ್ರಾಲ್ ರಂಗಸ್ವಾಮಿ
Actress Chitral Rangaswamy ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ.. ಹೀಗಾಗಿ ನಾನೂ ಕೂಡ ಆತನನ್ನು ಬ್ಲಾಕ್ ಮಾಡಿದ್ದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದ ಮೇರೆಗೆ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಸಂದೇಶ ರವಾನಿಸಿದ್ದ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
ಈ ಕುರಿತು ಲೈವ್ ವಿಡಿಯೋ ಮಾಡಿರುವ ನಟಿ ಚಿತ್ರಾಲ್ ರಂಗಸ್ವಾಮಿ, ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ. ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು.
ಹೀಗಾಗಿ ನಾನು ಆ ಖಾತೆಗಳನ್ನು ಬ್ಲಾಕ್ ಮಾಡಿದ್ದೆ ಎಂದು ಹೇಳಿದ್ದಾರೆ.
ʻʻಎಲ್ಲರಿಗೂ ನಮಸ್ಕಾರ, ಪಸ್ತುತ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್ ಮಾಡಲು ಬಂದಿಲ್ಲ. ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾ ಸ್ವಾಮಿ ಅವರು ಈ ತರ ಹಲವರಿಗೆ ಮೆಸೆಜ್ ಕಳುಹಿಸಿದ್ದರು.
ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್ ಸ್ಟೇಷನ್‌ನಲ್ಲಿ ಕಂಪ್ಲೇಟ್ ಕೂಡ ಆಗಿದೆ.
ಅವರ ಅಕೌಂಟ್ ಈ ರೀತಿ ಗೌತಮ್ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ. ಇಷ್ಟು ದಿನ ನಾನು ಸುಮ್ಮನಿದ್ದೆ.
Actress Chitral Rangaswamy ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ” ಎಂದು ಚಿತ್ರಾಲ್ ವಿವರಿಸಿದ್ದಾರೆ.
ಚಿತ್ರಲ್ ರಂಗಸ್ವಾಮಿ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಾಡಿ ಬಿಲ್ಡರ್ ಆಗಿಯೂ ಗುರುತಿಸಿಕೊಂಡಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Shivamogga Peace Organization 10-15 ವರ್ಷಗಳಿಂದ ತಳವೂರಿರುವ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯ
Shivamogga Peace Organization ಸಾರ್ವಜನಿಕರ ಕೆಲಸ ಮಾಡದೆ 10-15 ವರ್ಷದಿಂದ ಇಲ್ಲೇ ತಳವೂರಿರುವ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕೆಂದು ಶಿವಮೊಗ್ಗ ಪೀಸ್ ಆರ್ಗನೈಸೇಶನ್ ಆಗ್ರಹಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಿಯಾಜ್ ಅಹಮದ್, ಸರ್ಕಾರಿ ಕೆಲಸ ಮಾಡದ ಈ ಎಲ್ಲ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಕುಡಿಯುವ ನೀರು, ರಸ್ತೆ, ಚರಂಡಿ, ಒಳಚಂರಡಿ, ಬೀದಿ ದೀಪ, ಹಂದಿ, ನಾಯಿ ಕಾಟ, ಸಾಂಕ್ರ‍್ರಾಮಿಕ ರೋಗಗಳ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಭಿಕ್ಷೆ ಬೇಡುವವರ ರೀತಿ ಅವರಲ್ಲಿ ಬೇಡಬೇಕಿದೆ. ಇನ್ನೂ ಕೆಲವು ಅಧಿಕಾರಿಗಳಿಗೆ ಮನವಿ ಮೇಲೆ ಮನವಿ ಕೊಟ್ಟರೂ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರತಿಭಟನೆಯನ್ನೇ ನಡೆಸಬೇಕಾದ ಸಂದರ್ಭ ತಂದೊಡ್ಡಿದ್ದಾರೆ ಎಂದು ವಿವರಿಸಿದರು.
ಸಾರ್ವಜನಿಕ ದೂರುಗಳ ಬಗ್ಗೆ ಎಳ್ಳಷ್ಟೂ ಗಮನ ಹರಿಸದ ಅಧಿಕಾರಿಗಳ ಮನೋಭಾವ ಬದಲಾಗಬೇಕಿದೆ. ವಾರ್ಡುಗಳು ಇಂತಹವರಿದಾಗಿ ಸ್ಲಂಗಳು ಆಗುತ್ತಿವೆ. ೩೧ನೆಯ ವಾರ್ಡಿನ ಇಲಿಯಾಸ್ ನಗರದ ೧೦ನೆಯ ತಿರುವಿನಲ್ಲಿ ಕುಡಿಯುವ ನೀರಿಲ್ಲ. ಹಲವು ವರ್ಷಗಳ ಸಮಸ್ಯೆ ಇದು. ಮೇಲಿಂದ ಮೇಲೆ ಈ ಬಗ್ಗೆ ದೂರಿದ್ದರೂ ಕ್ರಮ ಜರುಗಿಸಿಲ್ಲ ಎಂದರು.
ಅಧಿಕಾರಿಗಳನ್ನು ಈ ಬಗ್ಗೆ ಕೇಳಲು ಹೋದರೆ ಸಿಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ವಾರ್ಡುಗಳನ್ನು ನಿರ್ಲಕ್ಷ್ಯಿಸುವ ಕೆಲಸ ನಡೆಯುತ್ತಿದೆ. ವಾರ್ಡಿನ ಸಿಬ್ಬಂದಿಗಳನ್ನು ಸಾಮೂಹಿಕವಾಗಿ ಪಾಲಿಕೆಯವರು ವರ್ಗಾವಣೆ ಮಾಡಬೇಕು. ಸಮಸ್ಯೆ ಬಗೆಹರಿಸಬೇಕೆಂದು ಕೋರಿದರು.
Shivamogga Peace Organization 10 ಬಾರಿ ಕರೆ ಮಾಡಿದ ಮೇಲೆ ಸ್ಥಳಕ್ಕೆ ಬರ್ತೀನಿ ಎನ್ನುತ್ತಾರೆ. ಆದರೆ ಬರೊಲ್ಲ. ಅಲ್ಪಸಂಖ್ಯಾತರ ವಾರ್ಡ್ಗೆ ಭೇಟಿ ನೀಡದೆ, ಜನ ಸಾಮಾನ್ಯರ ಸಮಸ್ಯೆ ಬಗೆಹರಿಸದ, ರಾಜಕಾರಣಿಗಳ ಮಾತನ್ನು ಮಾತ್ರ ಕೇಳುವ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ರಿಯಾಜ್ ಅಹ್ಮದ್ ಆಗ್ರಹಿಸಿದರು.
ಸಯ್ಯದ್ ಸೈಫುಲ್ಲಾ, ಮಕ್ಬ್ಬೂಲ್ ಅಹ್ಮದ್, ನಾಸಿರ್ ಅಹ್ಮದ್, ಇಜಾಜ್ ಅಹ್ಮದ್, ಮೊಹಮದ್ ಸೂಫಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Maine Middle School ಪೋಷಕರಿಗೆ ಬಿಗ್ ಆಫರ್: ಶಿವಮೊಗ್ಗ ಮೈನ್ ಮಿಡ್ಲ್ ಸ್ಕೂಲ್ ಪ್ರವೇಶಾತಿ ಮಕ್ಕಳಿಗೆ ಉಚಿತ₹ 2000 ಠೇವಣಿ
Maine Middle School ಶಿವಮೊಗ್ಗ ನಗರದ ಬಿ.ಎಚ್ ರಸ್ತೆ ಕರ್ನಾಟಕ ಪಕ್ಕದಲ್ಲಿರುವ ಮೈನ್ ಮಿಡ್ಲ್ ಸ್ಕೂಲ್ (ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ) ಯಲ್ಲಿ 30/6/2024ರ ಒಳಗೆ 1ನೇ ತರಗತಿಯಿಂದ 7ನೇ ತರಗತಿಯವರೆಗೂ ಕನ್ನಡ ಮಾಧ್ಯಮಕ್ಕೆ ದಾಖಲಾಗುವ ಎಲ್ಲಾ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಯಿಂದ ಆ ಮಕ್ಕಳ ಹೆಸರಿನಲ್ಲಿ 2000ರೂ. ಡಿಪಾಸಿಟ್ ಇಡಲಾಗುತ್ತದೆ.
ಈ ಅವಕಾಶ (ಆಫರ್) ಇದೇ ತಿಂಗಳು 30ಕ್ಕೆ, ಕೊನೆಗೊಳ್ಳುವುದು,
ಸರ್ಕಾರದ ಎಲ್ಲಾ ಯೋಜನೆಗಳು ಈ ಶಾಲೆಯಲ್ಲಿ ಲಭ್ಯ,
*ಉಚಿತ ಪಠ್ಯ ಪುಸ್ತಕ,
*ಉಚಿತ ಸಮವಸ್ತ್ರ,
*ಉಚಿತ ಕ್ಷೀರ ಭಾಗ್ಯ,
*ಉಚಿತ ಮಧ್ಯಾಹ್ನದ ಬಿಸಿ ಊಟ,
*ಮಕ್ಕಳಿಗೆ ಶೂ ಅಂಡ್ ಸಾಕ್ಸ್,
*ವಿಶಾಲವಾದ ಶಾಲಾ ಆವರಣ, ಹಾಗೂ ಆಟದ ಮೈದಾನ,
*ಆವರಣದ ಸುತ್ತಲೂ ಹಸರೀನಿಂದ ಕೂಡಿದ ಗಿಡಮರಗಳು,
*ಶುದ್ಧ ತಡೆ ರಹಿತ ಗಾಳಿ,
*ಶುದ್ಧ ಕುಡಿಯುವ ನೀರು,
*ಸಿಸಿಟಿವಿ ಅಳವಡಿಕೆಗೆ,
*ಕಣ್ಣಿಗೆ ತಂಪು ನೀಡುವ ಹೂವಿನ ಗಿಡಮರಗಳು,
*ಮಕ್ಕಳು ಹೊರ ಹೋಗದಂತೆ ಗೇಟಿಗೆ ಸೆಕ್ಯೂರಿಟಿ,
*ಉತ್ತಮ ಭೋಜನಾಲಯ,
*ಸುವೆವಸ್ಥಿತ ಶೌಚಾಲಯ,
*ಈ ಶಾಲೆಯಲ್ಲಿ ಈ ಸಾಲಿನಿಂದ LKG ಹಾಗೂ UKG ಆರಂಭವಾಗಿದೆ.
Maine Middle School ಹೆಚ್ಚಿನ ಮಾಹಿತಿಗಾಗಿ ಶಾಲಾ ಸಮಯದಲ್ಲಿ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದು.
Surabhi swadara griha ಶಿವಮೊಗ್ಗದಿಂದ ಯುವಕ- ಯುವತಿ ನಾಪತ್ತೆ. ಪೊಲೀಸ್ ಪ್ರಕಟಣೆ
Surabhi swadara griha ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುರಭಿ ಸ್ವಾದರ ಗೃಹದಲ್ಲಿ ಆಶ್ರಯ ಪಡೆದಿದ್ದ ಸಾಗರದ ಯಶೋದಾ ಕೋಂ ಭುಜೇಂದ್ರ ಎಂಬ 19 ವರ್ಷದ ಯುವತಿ ಜುಲೈ 2023ರಿಂದ ಕಾಣೆಯಾಗಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ.
ಈಕೆಯ ಚಹರೆ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿರುತ್ತಾಳೆ.
ಇನ್ನೊಂದು ಪ್ರಕರಣದಲ್ಲಿ ರಾಮ ಎಂಬುವವರ ಮಗ ಅಭಿಷೇಕ್ ಎಂಬ 25 ವರ್ಷದ ಯುವಕ ಮಾರ್ಚ್-2023 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈತನ ಚಹರೆ;5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ.
Surabhi swadara griha ಈ ಚಹರೆಯ ವ್ಯಕ್ತಿ ಕಂಡ ಬಂದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ, ದೂ.ಸಂ.: 9480803308 ಅಥವಾ ಕಂಟ್ರೋಲ್ ರೂಂ.ನಂ.: 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿರುತ್ತಾರೆ.
Bike Accident ಟಾಟಾ ಏಸ್ & ಬೈಕ್ ಡಿಕ್ಕಿ: ಬೈಕ್ ಸವಾರ ಸಾವು
Bike Accident ಶಿವಮೊಗ್ಗ ತಾಲೂಕಿನ ಹಾರನಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ
ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಟಾಟಾ ಏಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಸತೀಶ್ (25) ಸಾವಿಗೀಡಾಗಿದ್ದಾನೆ. ಈತನು ಮೈಸವಳ್ಳಿ ಗ್ರಾಮದವನು. ಸಂಬಂಧಿಯೊಬ್ಬರ ಮಗುವನ್ನು ಹಾರನಹಳ್ಳಿಗೆ ಕರೆದುಕೊಂಡು ಆಸ್ಪತ್ರೆಯೊಂದಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಟಾಟಾ ಏಸ್
Bike Accident ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸತೀಶ್ ತಲೆಗೆ ಗಂಭೀರ ಪೆಟ್ಟು ತಗುಲಿತ್ತು. ಆಸ್ಪತ್ರೆಗೆ ಸಾಗಿಸಬೇಕೆನ್ನುವ ವೇಳೆಯೇ ಅವರು ಸಾವಿಗೀಡಾಗಿದ್ದರು. ಅದೃಷ್ಟಕ್ಕೆ ಮಗು ಭರಣಿ (7) ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯ ಕಾಲಿಗೆ ಪೆಟ್ಟು ತಗುಲಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kempegowda Jayanti ಜೂನ್ 2, ನಗರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ
Kempegowda Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜೂ.27 ರ ಬೆಳಗ್ಗೆ 10.30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿಯನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವರು ನೆರವೇರಿಸುವರು. ಶಾಸಕರಾದ ಎಸ್.ಎನ್ ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
Kempegowda Jayanti ಜಿಲ್ಲೆಯ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಮಹಾಪೌರರು, ವಿವಿಧ ನಿಗಮ/ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಸಂಘಗಳ ಮುಖಂಡರು/ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು ಹಾಗೂ ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಂಬಿ.ಎ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗಿರಿಧರ್ ಕೆ.ವಿ.ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
Actor Darshan ದರ್ಶನ್ ಗೆ ಊಟ ತಂದ ಪತ್ನಿ ವಿಜಯಲಕ್ಷ್ಮಿ , ಮೀಡಿಯ ಮಂದಿ ಕಂಡು ಹಾಗೇ ವಾಪಸ್!
Actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಇಂದು ಊಟ ತಂದಿದ್ದಾರೆ. ಇಂದು ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆಗೆ ಕಿಯಾ ಕಾರಿನಲ್ಲಿ ಪರಪ್ಪನ ಅಗ್ರಹಾರಕ್ಕೆ ತೆರಳಿ ಪತಿಗೆ ಊಟ ಕೊಂಡೊಯ್ದಿದ್ದಾರೆ. ಆದರೆ ಮಾಧ್ಯಮದವರನ್ನ ಕಂಡು ವಿಜಯಲಕ್ಷ್ಮಿ ವಾಪಸ್ ಹೊರಟಿದ್ದಾರೆ.
ದರ್ಶನ್ ಬಂಧನವಾಗಿ 9 ದಿನಗಳ ಬಳಿಕ ವಿಜಯಲಕ್ಷ್ಮಿ ಜೂನ್ 19 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಆಗಮಿಸಿ ಪತಿಯನ್ನು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ನ್ಯಾಯಾಂಗ ಬಂಧನವಾಗಿತ್ತು
ಪತಿ ದರ್ಶನ್ ಕುರಿತಾಗಿ ಆರೋಪಗಳು ಕೇಳಿಬರುತ್ತಿದ್ದಂತೆ ವಿಜಯಲಕ್ಷ್ಮಿ ಮನನೊಂದು ದರ್ಶನ್ ಅವರನ್ನು ಅನ್ ಫಾಲೊ ಮಾಡಿ ಬಳಿಕ ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿದ್ದರು. ಬಳಿಕ ಮುನಿಸು ಮರೆತು ಮತ್ತೆ ಇನ್ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ.
Actor Darshan ಈ ಹಿಂದೆ 2011 ರಲ್ಲಿ ದರ್ಶನ್ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದರು. ತೀವ್ರವಾಗಿ ಗಾಯಗೊಂಡಿದ್ದರೂ ವಿಜಯಲಕ್ಷ್ಮಿ ಬಳಿಕ ಪತಿಯ ವಿರುದ್ಧದ ದೂರನ್ನು ಹಿಂಪಡೆದು, ಸಂಧಾನ ಮಾಡಿಕೊಂಡು ಸಂಸಾರ ಮುಂದುವರಿಸಿದ್ದರು.
Kannada Sahitya Parishath ಪಠ್ಯ ಕಮ್ಮಟಗಳಿಂದ ಕನ್ನಡ ಪಠ್ಯವನ್ನು ನೋಡುವ ದೃಷ್ಟಿಕೋನ ಬೇರೆಯಾಗುತ್ತೆ- ಎ.ಕೆ.ನಾಗೇಂದ್ರಪ್ಪ
Kannada Sahitya Parishath ವ್ಯಕ್ತಿಯ ವ್ಯಕ್ತಿತ್ವ ವಿಕಾಸಗೊಳ್ಳಲು ಸೃಜನಾತ್ಮಕ ಆಲೋಚನೆಗೆ ಕನ್ನಡ ಭಾಷೆ, ಸಾಹಿತ್ಯ ಸಹಕಾರಿಯಾಗಲಿದೆ. ನಮ್ಮ ಮಾತೃಭಾಷೆ, ಪರಿಸರದ ಭಾಷೆಯನ್ನು ಚನ್ನಾಗಿ ಮಾತನಾಡಲು, ಓದಲು, ಬರೆಯಲು ಆಸಕ್ತಿ ತೋರಬೇಕು. ಆ ಮೂಲಕ ಎಲ್ಲರೂ ನಾಡಿಗೆ ಕೊಡುಗೆಯಾಗಿರಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಕರೆನೀಡಿದರು.
ಅವರು ಜೂನ್ 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಗೋಣಿಬೀಡು ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಆವರಣದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ವಿದ್ಯಾರ್ಥಿಗಳಿಗೆ ಕಥೆ, ಕವನ, ಪ್ರಬಂಧ ರಚನಾ ಕಮ್ಮಟವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಕೆ. ನಾಗೇಂದ್ರಪ್ಪ ವಿದ್ಯಾರ್ಥಿಗಳಿಗೆ ಈ ಕಮ್ಮಟ ಉಪಯುಕ್ತ. ಕನ್ನಡ ಪಠ್ಯವನ್ನು ನೋಡುವ ದೃಷ್ಟಿಕೋನ ಬೇರೆಯಾಗುತ್ತೆ. ಸಾಹಿತ್ಯದ ಅನೇಕ ಪ್ರಕಾರಗಳು ನಮ್ಮ ಪಠ್ಯದಲ್ಲಿವೆ. ಆ ವಿಚಾರವಾಗಿ ಮಾಹಿತಿ ಕೊರತೆಯಿತ್ತು. ನಿಮ್ಮ ಆಸಕ್ತಿಯನ್ನು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸಾಂಸ್ಕೃತಿಕ ವಲಯದ ಮನಸ್ಥಿತಿ ಸಿದ್ದಪಡಿಸಲು ಸಹಕಾರಿಯಾಗಲಿದೆ. ಫಲಿತಾಂಶದ ಸ್ಪರ್ಧೆ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕ ಜ್ಞಾನ ವನ್ನು ಹೆಚ್ಚಿಸುವ ಕೆಲಸ ಆಗುತ್ತಿದೆ ಎಂದು ವಿವರಿಸಿದರು.
ತಾಲ್ಲೂಕು ಕಸಾಸಾಂ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಸುಧಾಮಣಿ ವೆಂಕಟೇಶ್ ಸಾಹಿತ್ಯದತ್ತ ಮಕ್ಕಳ ಆಸಕ್ತಿ, ಗಮನ ಸೆಳೆಯುವ ಪ್ರಯತ್ನ ಸಫಲವಾಗುತ್ತಿದೆ ಎಂದರು.
ಗೋಣಿಬೀಡು ನಿವಾಸಿಗಳಾದ ಲೋಕೇಶ್ ಗೌಡ ಆರ್. ಜಿ. ಸಂಪನ್ಮೂಲ ವ್ಯಕ್ತಿಗಳಾದ ಸಾಹಿತಿಗಳು, ಅಂಕಣಕಾರರಾದ ಬಿ. ಚಂದ್ರೇಗೌಡರು ಪ್ರಬಂಧ ಸಾಹಿತ್ಯ ಅಂದರೆ ಏನು. ಅದನ್ನು ಬರೆಯಲು ಇರಬೇಕಾದ ಸಿದ್ದತೆಗಳೇನು. ಅವುಗಳ ಓದು, ಅರಿವು, ಬರೆಯುವ ಕ್ರಮಗಳನ್ನು ಕುರಿತು ಮಾಹಿತಿ ನೀಡಿದರು.
ಸಾಹಿತಿಗಳು, ಕನ್ನಡ ಪ್ರಾಧ್ಯಾಪಕರಾದ ಡಾ. ಎಸ್. ಎಂ. ಮುತ್ತಯ್ಯ ಅವರು ಕಾವ್ಯ, ಪದ್ಯ, ಕವನ, ಹನಿಗವನ ಇವುಗಳ ಕುರಿತು ಮಾಹಿತಿ ನೀಡುತ್ತಲೆ ಹತ್ತು ಸಾಲಿನಲ್ಲಿ ಎಷ್ಟೊಂದು ಮಾಹಿತಿ ನೀಡಲು ಕವನಕ್ಕಿರುವ ಶಕ್ತಿಯನ್ನು ವಿವರಿಸಿದರು.
ರಂಗ ನಿರ್ದೇಶಕರು, ಉಪನ್ಯಾಸಕರಾದ ಡಾ. ಜಿ. ಆರ್. ಲವ ಅವರು ಪುಣ್ಯ ಕೋಟಿ ಕಥೆಯನ್ನು ಉದಾಹರಿಸಿ ಅದೇ ವಿಚಾರವಾಗಿ ಕಥೆ ಹೇಗೆ ಕಟ್ಟಬಹುದು, ಕವನ ಹೇಗೆ ಬರೆಯಬಹುದು ಎಂಬುದನ್ನು ವಿವರಿಸುತ್ತಲೇ ಕಥೆ ಹೇಳುವ, ಬರೆಯುವ ಕ್ರಮಗಳನ್ನು ವಿವರಿಸಿದರು.
Kannada Sahitya Parishath ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಹಾಲೇಶ್ ನಾಯ್ಕ ಪ್ರತಿಭೆ ಪ್ರಯತ್ನದಿಂದ ಬರುತ್ತದೆ. ಪ್ರತಿಭೆ ಹುಟ್ಟಿನಿಂದ ಬರುತ್ತದೆ ಎನ್ನುವ ಕಾವ್ಯ ಮೀಮಾಂಸೆ ಮಾತು ಸರಿಯಲ್ಲ. ಸಾಹಿತ್ಯಕ್ಕೆ ಹೆಣ್ಣು, ಗಂಡು ಎಂಬ ಬೇದವಿಲ್ಲ. ಸಾಹಿತ್ಯಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಹಿಂದಿನಂತೆ ಅಡಚಣೆ ಉಂಟುಮಾಡುವವರು ಕಡಿಮೆ ಆಗಿದ್ದಾರೆ ಎಂದು ಹೇಳುತ್ತಲೆ ಸಾಹಿತ್ಯ ರಚನಾ ಕಮ್ಮಟವನ್ನು ಪ್ರಶಂಸಿದರು. ಭದ್ರಾವತಿ ಸರ್. ಎಂ. ವಿ. ಸರ್ಕಾರಿ ವಿಜ್ಞಾನ ಕಾಲೇಜು ಉಪನ್ಯಾಸಕರಾದ ಡಾ. ಅರಸಯ್ಯ ಉಪಸ್ಥಿತರಿದ್ದರು.
ಕು. ನಾಗಶ್ರೀ ಪ್ರಾರ್ಥನೆ ಹಾಡಿದರು. ಕು. ಸಿಂಧೂ ಸ್ವಾಗತಿಸಿದರು.
Actor Darshan ಆತ್ಮಹತ್ಯೆಗೈದ ಸೌಂದರ್ಯ ಜಗದೀಶ್ & ಪವಿತ್ರ ಗೌಡ. ಬೆಳಕಿಗೆ ಬಂದ ಹಣದ ವ್ಯವಹಾರ
Actor Darshan ಆತ್ಮಹತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್ ಪವಿತ್ರ ಗೌಡಗೆ 2 ಕೋಟಿ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರು ಮನೆ ಖರೀದಿಸಲು ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.
ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ಅವರ ನಡುವೆ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ. ಅಷ್ಟೇ ಅಲ್ಲ, ಸೌಂದರ್ಯ ಜಗದೀಶ್ ಅವರು ಪವಿತ್ರಾ ಗೌಡ ಅವರ ಮನೆ ಖರೀದಿಗೆ 2 ಕೋಟಿ ರೂಪಾಯಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸೌಂದರ್ಯ ಜಗದೀಶ್ ಅವರು ಹಣ ಕೊಟ್ಟ ಮರು ದಿನವೇ ಪವಿತ್ರಾ ಗೌಡ ಅವರು ರಾಜರಾಜೇಶ್ವರಿ ನಗರದಲ್ಲಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
Actor Darshan ಸೌಂದರ್ಯ ಜಗದೀಶ್ ಅವರು ಹಣ ಸಹಾಯ ಮಾಡಿದ್ರಾ ಅಥವಾ ಸಾಲ ಕೊಟ್ಟಿದ್ದಾರೋ ಎಂಬುದು ಇದುವರೆಗೆ ತಿಳಿದುಬಂದಿಲ್ಲ.
ಆದರೆ 2017 ನವೆಂಬರ್ ನಲ್ಲಿ 1 ಕೋಟಿ ರೂ. ಹಾಗೇ 2018 ಜನವರಿಯಲ್ಲಿ 1 ಕೋಟಿ ರೂ.ಗಳನ್ನು ಪವಿತ್ರಾಗೌಡಗೆ ಕೊಟ್ಟಿದ್ದರು. ಆದರೆ ಸೌಂದರ್ಯ ಜಗದೀಶ್ ಕುಟುಂಬದವರು ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಲಾಗಿದೆ.
