Saturday, April 11, 2026
Saturday, April 11, 2026
Home Blog Page 677

Dinesh Gundurao ಡೆಂಗಿ ಜ್ವರದ ಬಗ್ಗೆ ಜನ ಜಾಗೃತರಾಗಬೇಕು- ಸಚಿವ ದಿನೇಶ್ ಗುಂಡೂರಾವ್

0

Dinesh Gundurao ಮಳೆಯಿಂದಾಗಿ ಸೊಳ್ಳೆಗಳು ಹೆಚ್ಚುತ್ತಿದ್ದು ಇದರಿಂದಾಗಿ ಡೆಂಘಿ ಹರಡುತ್ತಿದೆ. ಜನರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮನೆಯ ಬಳಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡ್ರಮ್‌ಗಳಲ್ಲಿ, ಬಕೆಟ್‌ಗಳಲ್ಲಿ ನೀರು ಇದ್ದಲ್ಲಿ ಅದನ್ನು ಮುಚ್ಚಿಡಬೇಕು. ಜ್ವರದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Bharat Scouts and Guides ಮಕ್ಕಳು ವಿದ್ಯಾಭ್ಯಾಸದ ಜೊತೆ ಸೈಕ್ಲಿಂಗ್,ಪರಿಸರ,ಯೋಗ ಬಗ್ಗೆ ಆಸಕ್ತಿ ಹೊಂದಿರಬೇಕು-ಕೆ.ರವಿ.

0

Bharat Scouts and Guides ಮಕ್ಕಳಲ್ಲಿ ಪರಿಸರ ಜ್ಞಾನದ ಜತೆಗೆ ಸ್ಕೌಟಿಂಗ್‌ ಹೊರಾಂಗಣ ಚಟುವಟಿಕೆಗಳು ಮುಖ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೋವರ್ ವಿಭಾಗದ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಕೆ.ರವಿ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಮತ್ತು ಸೈಕ್ಲಿಂಗ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕ್ರೀಡೆ, ಸೈಕ್ಲಿಂಗ್ ಹಾಗೂ ವ್ಯಾಯಾಮಗಳ ಕಡೆ, ಯೋಗಾಸನ ಕಡೆಗೆ ಗಮನ ಹರಿಸಬೇಕು. ದೈಹಿಕವಾಗಿ ನಾವು ಸದೃಢರಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ತುಳಿಯುವುದರಿಂದ ದೇಹ ಮನಸ್ಸು ಸದೃಢವಾಗುವುದರ ಜತೆಗೆ ದೇಹದ ಪ್ರತಿಯೊಂದು ಅಂಗಾಂಗದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ಬಾಲ್ಯದಿಂದಲೇ ಸೈಕಲ್ ಹೊಡೆಯಬೇಕು. ಮುಂದೆ ಎಲ್ಲ ವಾಹನಗಳನ್ನು ಓಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
Bharat Scouts and Guides ಮಲ್ನಾಡ್ ಓಪನ್ ಗ್ರೂಪ್ ಸ್ಥಳೀಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಸೈಕಲ್ ಜಾಗೃತಿ ಜಾಥಾದ ಸಾರಥ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿ ಲವಲವಿಕೆ ಹಾಗೂ ಬುದ್ಧಿಶಕ್ತಿ ಚುರುಕುಗೊಳಿಸಲು ಸೈಕ್ಲಿಂಗ್ ತುಂಬಾ ಪರಿಣಾಮಕಾರಿ. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪರಿಸರ ಜಾಗೃತಿ ಮೂಡಿಸಿ ಪುರದಾಳ್ ವರೆಗೆ ಸೈಕಲ್ ಜಾಥಾ ನಡೆಸಲಾಯಿತು. ನ್ಯಾಷನಲ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮಾಸ್ಟರ್ ಸೋಮಲಿಂಗಯ್ಯ, ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆ, ರೋವರ್ ವಿಭಾಗದ ಚೇತನ್, ರೇಂಜರ್ ವಿಭಾಗದ ಶ್ರೇಯಾ, ವರುಣ್ ಕುಮಾರ್, ಪಾಲಕರು, ಸ್ಕೌಟ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Lakshmi Hebbalkar ಅಂಗನವಾಡಿಗಳಲ್ಲಿ ಎಲ್ ಕೆಜಿ & ಯುಕೆಜಿ ಆರಂಭಿಸಲು ಸರ್ಕಾರದ ಸಮ್ಮತಿ- ಲಕ್ಷ್ಮೀ ಹೆಬ್ಬಾಳ್ಕರ್

0

Lakshmi Hebbalkar “ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಉಳಿದ ಕಡೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Lakshmi Hebbalkar “ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ನೀಡುವುದೇ ನಮ್ಮ ಉದ್ದೇಶ. ಈ ಕಾರಣಕ್ಕೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಮೂಲಕವೇ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್‌ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಶಾಲೆಗಳ ಮಾದರಿಯಲ್ಲೇ ವರ್ಗಾವಣೆ ಪತ್ರ (ಟಿಸಿ) ನೀಡಲು ಕ್ರಮ ವಹಿಸಲಾಗುವುದು” ಎಂದು ತಿಳಿಸಿದ್ದಾರೆ.

Bhadravati Police ನ್ಯಾಯಾಲಯದ ವಿಚಾರಣೆಗೆ ಬರದೇ ತಲೆಮರೆಸಿಕೊಂಡ ಆರೋಪಿ ಪತ್ತೆಗೆ ಸಹಕರಿಸಲು ಪ್ರಕಟಣೆ

0

Bhadravati Police ಭದ್ರಾವತಿ ರೈಲ್ವೆ ಸ್ಟೇಷನ್ ಮಾರ್ಕೇಟ್ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮಹಮ್ಮದ್‍ರುಮನ್ ಹುಸೇನ್ ಬಿನ್ ಮಹಮ್ಮದ್ ಸಿರಾಜುಲ್ಲಾ ಇಸ್ಲಾಂ, 25 ವರ್ಷ, ಮುಸ್ಲಿಂ ಜನಾಂಗ, ರೆಫೀಜೆಟರ್ ರಿಫೇರಿ ಕೆಲಸ, ವಾಸ: ಶ್ರೀದಾಂಪುರ್ ಗ್ರಾಮ, ಬಾರಿಖಾಲಿ ಪೋಸ್ಟ್, ಮುನಶಿಗಂಜ್ ಜಿಲ್ಲೆ, ಬಾಂಗ್ಲಾದೇಶ ಎಂದು ತಿಳಿಸಿದ ಯುವಕ ಭಾರತ ದೇಶಕ್ಕೆ ಬರಲು ಪಾಸ್‍ಪೋರ್ಟ, ವೀಸಾ ಅಥವಾ ಅಧಿಕೃತ ದಾಖಲೆಗಳು ಇಲ್ಲವೆಂದು ಹಿಂದಿ ಭಾಷೆಯಲ್ಲಿ ತಿಳಿಸಿದ್ದು, ಈ ಆರೋಪಿತನು ಯಾವುದೇ ದಾಖಲಾತಿಗಳು ಇಲ್ಲದೇ ಬಾಂಗ್ಲಾದೇಶದಿಂದ ಭಾರತ ದೇಶಕ್ಕೆ ಬಂದಿದ್ದರಿಂದ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಿದ್ದು ವಿಚಾರಣೆಯಲ್ಲಿರುತ್ತದೆ. ಆರೋಪಿಯು ನ್ಯಾಯಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ.

ನ್ಯಾಯಲಯವು ಈ ಆರೋಪಿತನ ಪತ್ತೆ ಮತ್ತು ಸ್ಥಿರಾಸ್ಥಿಯ ಮಾಹಿತಿ ಬಗ್ಗೆ ಪ್ರಕ್ಲೋಮೇಶನ್ ಹೊರಡಿಸಿದ್ದು, ಈ ವ್ಯಕ್ತಿಯು ಎಲ್ಲಿಯಾದರೂ ಕಂಡುಬಂದಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್

ಶಿವಮೊಗ್ಗ, ಜೂನ್ 24 (ಕರ್ನಾಟಕ ವಾರ್ತೆ): ಭದ್ರಾವತಿ ರೈಲ್ವೆ ಸ್ಟೇಷನ್ ಮಾರ್ಕೇಟ್ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮಹಮ್ಮದ್‍ರುಮನ್ ಹುಸೇನ್ ಬಿನ್ ಮಹಮ್ಮದ್ ಸಿರಾಜುಲ್ಲಾ ಇಸ್ಲಾಂ, 25 ವರ್ಷ, ಮುಸ್ಲಿಂ ಜನಾಂಗ, ರೆಫೀಜೆಟರ್ ರಿಫೇರಿ ಕೆಲಸ, ವಾಸ: ಶ್ರೀದಾಂಪುರ್ ಗ್ರಾಮ, ಬಾರಿಖಾಲಿ ಪೋಸ್ಟ್, ಮುನಶಿಗಂಜ್ ಜಿಲ್ಲೆ, ಬಾಂಗ್ಲಾದೇಶ ಎಂದು ತಿಳಿಸಿದ ಯುವಕ ಭಾರತದೇಶಕ್ಕೆ ಬರಲು ಪಾಸ್‍ಪೋರ್ಟ, ವೀಸಾ ಅಥವಾ ಅಧಿಕೃತ ದಾಖಲೆಗಳು ಇಲ್ಲವೆಂದು ಹಿಂದಿ ಭಾಷೆಯಲ್ಲಿ ತಿಳಿಸಿದ್ದು, ಈ ಆರೋಪಿತನು ಯಾವುದೇ ದಾಖಲಾತಿಗಳು ಇಲ್ಲದೇ ಬಾಂಗ್ಲಾದೇಶದಿಂದ ಭಾರತ ದೇಶಕ್ಕೆ ಬಂದಿದ್ದರಿಂದ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಿದ್ದು ವಿಚಾರಣೆಯಲ್ಲಿರುತ್ತದೆ. ಆರೋಪಿಯು ನ್ಯಾಯಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ.

Bhadravati Police ನ್ಯಾಯಲಯವು ಈ ಆರೋಪಿತನ ಪತ್ತೆ ಮತ್ತು ಸ್ಥಿರಾಸ್ಥಿಯ ಮಾಹಿತಿ ಬಗ್ಗೆ ಪ್ರಕ್ಲೋಮೇಶನ್ ಹೊರಡಿಸಿದ್ದು, ಈ ವ್ಯಕ್ತಿಯು ಎಲ್ಲಿಯಾದರೂ ಕಂಡುಬಂದಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

DCC Bank Shivamogga ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ. ಕಣದಲ್ಲಿ 27 ಅಭ್ಯರ್ಥಿಗಳು

0

DCC Bank Shivamogga ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 12 ಕ್ಷೇತ್ರಗಳಿಗೆ ಜೂನ್ 28 ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ರ ವರೆಗೆ ಮತದಾನ ನೆಡೆಯಲಿದೆ.

2028-29 ನೇ ಸಾಲಿನ 05 ವರ್ಷಗಳ ಅವಧಿಯಲ್ಲಿನ ಚುನಾವಣೆಗೆ ಉದೇದುವಾರಿಕೆ ವಾಪಸ್ಸು ಪಡೆದ ನಂತರ ಅಂತಿವಾಗಿ ಚುನಾವಣಾ ಕಣದಲ್ಲಿ ಒಟ್ಟು 27 ಅಭ್ಯರ್ಥಿಗಳು ಉಳಿದಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ, ಶಿವನಂಜಪ್ಪ.ಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ, ಸಿ.ಹನುಮಂತಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಕೆ.ಎಸ್.ಶಿವಕುಮಾರ್, ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು, ಪ್ರಾ ಕೃ ಪ ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ, ಎಸ್.ಪಿ ಚಂದ್ರಶೇಖರಗೌಡ, ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ, ಶಿವಮೂರ್ತಿಗೌಡ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ, ವಿರೂಪಾಕ್ಷಪ್ಪ ಜಿ.ಈ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ DCC Bank Shivamogga ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್, ಜಿ.ಎಸ್.ಸುಧೀರ್, ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ, ಮರಿಯಪ,್ಪ ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಡಿ.ಎಲ್, ರವೀಂದ್ರ ಹೆಚ್.ಎಸ್, ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ವiಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಹರೀಶ್ ಎನ್.ಡಿ ಇವರುಗಳು ಅಂತಿಮ ಕಣದಲ್ಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರಿಟರ್ನಿಂಗ್ ಅಧಿಕಾರಿ ಹಾಗೂ ಶಿವಮೊಗ್ಗ ಉಪವಿಭಾಗಾಧಿಕಾರಿಗಳಾದ ಸತ್ಯನಾರಾಯಣ ಬಿ.ಹೆಚ್. ತಿಳಿಸಿದ್ದಾರೆ.

Narendra Modi ಬಿಜೆಪಿ 2014 ರಿಂದ 32 ಬಾರಿ ತೈಲ ಬೆಲೆ ಏರಿಸಿದೆ. ಬಿಜೆಪಿಗರು ಮೌನ ತಾಳಿದ್ದರು. ಈಗ ದಿಢೀರನೆ ಎಚ್ಚತ್ತಿದ್ದಾರೆ!- ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ

0

Narendra Modi ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು 2014 ರಿಂದ ಸುಮಾರು 32 ಬಾರಿ ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಿಸಿದ್ದು, ಆಗ ಮೌನವಾಗಿದ್ದ ಆಗಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ಆಗೆಲ್ಲ ಮೌನ ಗೌರಿ ವೃತ ಆಚರಿಸುತ್ತಿದ್ದರೇನೋ ಎಂದು ಯುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಆದರ್ಶ ಹುಂಚದಕಟ್ಟೆ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಅಲ್ಲಿ ಇವತ್ತಿನಿಂದ ಇಂಧನ ಬೆಲೆ ಹೆಚ್ಚಿಸಲಾಗಿದೆ. ಜ್ಞಾನೇಂದ್ರ ಮತ್ತು ಬಿಜೆಪಿಗರು ಅಲ್ಲಿಗೋಗಿ ಪ್ರತಿಭಟಿಸಲಿ. ಅವರ ಹೋಗಿ ಬರುವ ಪ್ರಯಾಣದ ವೆಚ್ಚ ಭರಿಸುವುದಾಗಿ ಸವಾಲೆಸೆದರು.
೨೦೧೪ ರಿಂದ ಈತನಕ ಕೇಂದ್ರದ ಬಿಜೆಪಿ ಸರ್ಕಾರ ಇಂಧನ ದರ ಏರಿಸುತ್ತಲೇ ಬಂದಿದೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವೂ ತೈಲ ಬೆಲೆಯನ್ನು ಶೇ. 35 ರಷ್ಟು ಏರಿಸಿ ಬಳಿಕ ಚುನಾವಣೆಯ ಕಾರಣದಿಂದಾಗಿ ಶೇ. ೨೫ ಕ್ಕೆ ಇಳಿಸಿತ್ತು. 2014 ರ ಚುನಾವಣೆಯ ಸಂದರ್ಭದಲ್ಲಿ ಇಂಧನ ಧರ 50 ರಿಂದ 60 ರ ಆಸುಪಾಸಿನಲ್ಲಿಯೇ ಇತ್ತು. ಇದರ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಾ ಅಧಿಕಾರಕ್ಕೆ ಬಂದರೆ ಇಂಧನ ದರ ಇಳಿಸುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿಯವರು ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಇಂಧನ ಬೆಲೆಯನ್ನು ಏರಿಸುತ್ತಲೇ ಹೋಗಿದ್ದಾರೆ. ಆಗೆಲ್ಲ ಸುಮ್ಮನಿದ್ದ ಮಾಜಿ ಗೃಹ ಸಚಿವರು ಹಾಗೂ ಬಿಜೆಪಿಗರು ಮೊನ್ನೆಯ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖವಾಡ ತೊಟ್ಟು ಅಣಕಿಸಿದ್ದು, ಶಾಸಕರು ಹಾಗೂ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದರು.
Narendra Modi ನೀಟ್ ಹಗರದಲ್ಲಿ ಕೇಂದ್ರದ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಆದರ್ಶ ಅವರು, ತಾಲೂಕು ಕಚೇರಿಯಲ್ಲಿ ಜನರ ಕೆಲಸ ಕಾರ್ಯಗಳಾಗದಿದ್ದರೆ, ಅಧಿಕಾರಿಗಳನ್ನು ಕರೆಸಿ ಅವರ ಕಿವಿ ಹಿಂಡುವ ಅಧಿಕಾರ ಶಾಸಕರಾಗಿ ಇವರಿಗೆ ಇದ್ದೇ ಇದೆ. ಆದರೆ ಇದನ್ನು ಬಿಟ್ಟು ತಾಲೂಕು ಕಚೇರಿಯಲ್ಲಿ ಕೂತು ಪ್ರಚಾರಕ್ಕಾಗಿ ವೀಡಿಯೋ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಟ್ಟಣ ಯುವ ಕಾಂಗ್ರೇಸ್ ಅಧ್ಯಕ್ಷ ಅಮರನಾಥ ಶೆಟ್ಟಿ , ಪುಟ್ಲೋಡು ರಾಘವೇಂದ್ರ, ಶ್ರೇಯಸ್, ಅಶ್ವಲ್ ಮುಂತಾದವರಿದ್ದರು.

Actress Chitral Rangaswamy “ನನಗೂ ಅಶ್ಲೀಲ‌ ಮೆಸೇಜ್ ಬರುತ್ತಿತ್ತು” – ನಟಿ ಚಿತ್ರಾಲ್ ರಂಗಸ್ವಾಮಿ

0

Actress Chitral Rangaswamy ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ.. ಹೀಗಾಗಿ ನಾನೂ ಕೂಡ ಆತನನ್ನು ಬ್ಲಾಕ್ ಮಾಡಿದ್ದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದ ಮೇರೆಗೆ ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ತಮಗೂ ಅಶ್ಲೀಲ ಸಂದೇಶ ರವಾನಿಸಿದ್ದ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.

ಈ ಕುರಿತು ಲೈವ್ ವಿಡಿಯೋ ಮಾಡಿರುವ ನಟಿ ಚಿತ್ರಾಲ್ ರಂಗಸ್ವಾಮಿ, ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ. ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು.

ಹೀಗಾಗಿ ನಾನು ಆ ಖಾತೆಗಳನ್ನು ಬ್ಲಾಕ್ ಮಾಡಿದ್ದೆ ಎಂದು ಹೇಳಿದ್ದಾರೆ.
ʻʻಎಲ್ಲರಿಗೂ ನಮಸ್ಕಾರ, ಪಸ್ತುತ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್‌ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್‌ ಮಾಡಲು ಬಂದಿಲ್ಲ. ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾ ಸ್ವಾಮಿ ಅವರು ಈ ತರ ಹಲವರಿಗೆ ಮೆಸೆಜ್ ಕಳುಹಿಸಿದ್ದರು.

ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೇಟ್‌ ಕೂಡ ಆಗಿದೆ.
ಅವರ ಅಕೌಂಟ್‌ ಈ ರೀತಿ ಗೌತಮ್‌ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ. ಇಷ್ಟು ದಿನ ನಾನು ಸುಮ್ಮನಿದ್ದೆ.

Actress Chitral Rangaswamy ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ” ಎಂದು ಚಿತ್ರಾಲ್ ವಿವರಿಸಿದ್ದಾರೆ.
ಚಿತ್ರಲ್‌ ರಂಗಸ್ವಾಮಿ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಾಡಿ ಬಿಲ್ಡರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Shivamogga Peace Organization 10-15 ವರ್ಷಗಳಿಂದ ತಳವೂರಿರುವ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯ

0

Shivamogga Peace Organization ಸಾರ್ವಜನಿಕರ ಕೆಲಸ ಮಾಡದೆ 10-15 ವರ್ಷದಿಂದ ಇಲ್ಲೇ ತಳವೂರಿರುವ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕೆಂದು ಶಿವಮೊಗ್ಗ ಪೀಸ್ ಆರ್ಗನೈಸೇಶನ್ ಆಗ್ರಹಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ರಿಯಾಜ್ ಅಹಮದ್, ಸರ್ಕಾರಿ ಕೆಲಸ ಮಾಡದ ಈ ಎಲ್ಲ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಕುಡಿಯುವ ನೀರು, ರಸ್ತೆ, ಚರಂಡಿ, ಒಳಚಂರಡಿ, ಬೀದಿ ದೀಪ, ಹಂದಿ, ನಾಯಿ ಕಾಟ, ಸಾಂಕ್ರ‍್ರಾಮಿಕ ರೋಗಗಳ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಭಿಕ್ಷೆ ಬೇಡುವವರ ರೀತಿ ಅವರಲ್ಲಿ ಬೇಡಬೇಕಿದೆ. ಇನ್ನೂ ಕೆಲವು ಅಧಿಕಾರಿಗಳಿಗೆ ಮನವಿ ಮೇಲೆ ಮನವಿ ಕೊಟ್ಟರೂ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರತಿಭಟನೆಯನ್ನೇ ನಡೆಸಬೇಕಾದ ಸಂದರ್ಭ ತಂದೊಡ್ಡಿದ್ದಾರೆ ಎಂದು ವಿವರಿಸಿದರು.
ಸಾರ್ವಜನಿಕ ದೂರುಗಳ ಬಗ್ಗೆ ಎಳ್ಳಷ್ಟೂ ಗಮನ ಹರಿಸದ ಅಧಿಕಾರಿಗಳ ಮನೋಭಾವ ಬದಲಾಗಬೇಕಿದೆ. ವಾರ್ಡುಗಳು ಇಂತಹವರಿದಾಗಿ ಸ್ಲಂಗಳು ಆಗುತ್ತಿವೆ. ೩೧ನೆಯ ವಾರ್ಡಿನ ಇಲಿಯಾಸ್ ನಗರದ ೧೦ನೆಯ ತಿರುವಿನಲ್ಲಿ ಕುಡಿಯುವ ನೀರಿಲ್ಲ. ಹಲವು ವರ್ಷಗಳ ಸಮಸ್ಯೆ ಇದು. ಮೇಲಿಂದ ಮೇಲೆ ಈ ಬಗ್ಗೆ ದೂರಿದ್ದರೂ ಕ್ರಮ ಜರುಗಿಸಿಲ್ಲ ಎಂದರು.
ಅಧಿಕಾರಿಗಳನ್ನು ಈ ಬಗ್ಗೆ ಕೇಳಲು ಹೋದರೆ ಸಿಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ವಾರ್ಡುಗಳನ್ನು ನಿರ್ಲಕ್ಷ್ಯಿಸುವ ಕೆಲಸ ನಡೆಯುತ್ತಿದೆ. ವಾರ್ಡಿನ ಸಿಬ್ಬಂದಿಗಳನ್ನು ಸಾಮೂಹಿಕವಾಗಿ ಪಾಲಿಕೆಯವರು ವರ್ಗಾವಣೆ ಮಾಡಬೇಕು. ಸಮಸ್ಯೆ ಬಗೆಹರಿಸಬೇಕೆಂದು ಕೋರಿದರು.
Shivamogga Peace Organization 10 ಬಾರಿ ಕರೆ ಮಾಡಿದ ಮೇಲೆ ಸ್ಥಳಕ್ಕೆ ಬರ್ತೀನಿ ಎನ್ನುತ್ತಾರೆ. ಆದರೆ ಬರೊಲ್ಲ. ಅಲ್ಪಸಂಖ್ಯಾತರ ವಾರ್ಡ್ಗೆ ಭೇಟಿ ನೀಡದೆ, ಜನ ಸಾಮಾನ್ಯರ ಸಮಸ್ಯೆ ಬಗೆಹರಿಸದ, ರಾಜಕಾರಣಿಗಳ ಮಾತನ್ನು ಮಾತ್ರ ಕೇಳುವ ಅಧಿಕಾರಿಗಳನ್ನು ಸಾಮೂಹಿಕ ವರ್ಗಾವಣೆ ಮಾಡುವಂತೆ ರಿಯಾಜ್ ಅಹ್ಮದ್ ಆಗ್ರಹಿಸಿದರು.
ಸಯ್ಯದ್ ಸೈಫುಲ್ಲಾ, ಮಕ್ಬ್ಬೂಲ್ ಅಹ್ಮದ್, ನಾಸಿರ್ ಅಹ್ಮದ್, ಇಜಾಜ್ ಅಹ್ಮದ್, ಮೊಹಮದ್ ಸೂಫಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Maine Middle School ಪೋಷಕರಿಗೆ ಬಿಗ್ ಆಫರ್: ಶಿವಮೊಗ್ಗ ಮೈನ್ ಮಿಡ್ಲ್ ಸ್ಕೂಲ್ ಪ್ರವೇಶಾತಿ ಮಕ್ಕಳಿಗೆ ಉಚಿತ₹ 2000 ಠೇವಣಿ

0

Maine Middle School ಶಿವಮೊಗ್ಗ ನಗರದ ಬಿ.ಎಚ್ ರಸ್ತೆ ಕರ್ನಾಟಕ ಪಕ್ಕದಲ್ಲಿರುವ ಮೈನ್ ಮಿಡ್ಲ್ ಸ್ಕೂಲ್ (ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ) ಯಲ್ಲಿ 30/6/2024ರ ಒಳಗೆ 1ನೇ ತರಗತಿಯಿಂದ 7ನೇ ತರಗತಿಯವರೆಗೂ ಕನ್ನಡ ಮಾಧ್ಯಮಕ್ಕೆ ದಾಖಲಾಗುವ ಎಲ್ಲಾ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಯಿಂದ ಆ ಮಕ್ಕಳ ಹೆಸರಿನಲ್ಲಿ 2000ರೂ. ಡಿಪಾಸಿಟ್ ಇಡಲಾಗುತ್ತದೆ.

ಈ ಅವಕಾಶ (ಆಫರ್) ಇದೇ ತಿಂಗಳು 30ಕ್ಕೆ, ಕೊನೆಗೊಳ್ಳುವುದು,
ಸರ್ಕಾರದ ಎಲ್ಲಾ ಯೋಜನೆಗಳು ಈ ಶಾಲೆಯಲ್ಲಿ ಲಭ್ಯ,
*ಉಚಿತ ಪಠ್ಯ ಪುಸ್ತಕ,
*ಉಚಿತ ಸಮವಸ್ತ್ರ,
*ಉಚಿತ ಕ್ಷೀರ ಭಾಗ್ಯ,
*ಉಚಿತ ಮಧ್ಯಾಹ್ನದ ಬಿಸಿ ಊಟ,
*ಮಕ್ಕಳಿಗೆ ಶೂ ಅಂಡ್ ಸಾಕ್ಸ್,
*ವಿಶಾಲವಾದ ಶಾಲಾ ಆವರಣ, ಹಾಗೂ ಆಟದ ಮೈದಾನ,
*ಆವರಣದ ಸುತ್ತಲೂ ಹಸರೀನಿಂದ ಕೂಡಿದ ಗಿಡಮರಗಳು,
*ಶುದ್ಧ ತಡೆ ರಹಿತ ಗಾಳಿ,
*ಶುದ್ಧ ಕುಡಿಯುವ ನೀರು,
*ಸಿಸಿಟಿವಿ ಅಳವಡಿಕೆಗೆ,
*ಕಣ್ಣಿಗೆ ತಂಪು ನೀಡುವ ಹೂವಿನ ಗಿಡಮರಗಳು,
*ಮಕ್ಕಳು ಹೊರ ಹೋಗದಂತೆ ಗೇಟಿಗೆ ಸೆಕ್ಯೂರಿಟಿ,
*ಉತ್ತಮ ಭೋಜನಾಲಯ,
*ಸುವೆವಸ್ಥಿತ ಶೌಚಾಲಯ,
*ಈ ಶಾಲೆಯಲ್ಲಿ ಈ ಸಾಲಿನಿಂದ LKG ಹಾಗೂ UKG ಆರಂಭವಾಗಿದೆ.

Maine Middle School ಹೆಚ್ಚಿನ ಮಾಹಿತಿಗಾಗಿ ಶಾಲಾ ಸಮಯದಲ್ಲಿ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದು.

Surabhi swadara griha ಶಿವಮೊಗ್ಗದಿಂದ ಯುವಕ- ಯುವತಿ ನಾಪತ್ತೆ. ಪೊಲೀಸ್ ಪ್ರಕಟಣೆ

0

Surabhi swadara griha ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುರಭಿ ಸ್ವಾದರ ಗೃಹದಲ್ಲಿ ಆಶ್ರಯ ಪಡೆದಿದ್ದ ಸಾಗರದ ಯಶೋದಾ ಕೋಂ ಭುಜೇಂದ್ರ ಎಂಬ 19 ವರ್ಷದ ಯುವತಿ ಜುಲೈ 2023ರಿಂದ ಕಾಣೆಯಾಗಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ.
ಈಕೆಯ ಚಹರೆ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿರುತ್ತಾಳೆ.
ಇನ್ನೊಂದು ಪ್ರಕರಣದಲ್ಲಿ ರಾಮ ಎಂಬುವವರ ಮಗ ಅಭಿಷೇಕ್ ಎಂಬ 25 ವರ್ಷದ ಯುವಕ ಮಾರ್ಚ್-2023 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈತನ ಚಹರೆ;5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ.
Surabhi swadara griha ಈ ಚಹರೆಯ ವ್ಯಕ್ತಿ ಕಂಡ ಬಂದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ, ದೂ.ಸಂ.: 9480803308 ಅಥವಾ ಕಂಟ್ರೋಲ್ ರೂಂ.ನಂ.: 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿರುತ್ತಾರೆ.