Saturday, April 11, 2026
Saturday, April 11, 2026
Home Blog Page 676

DC Shivamogga ಜೂನ್ 28, ಕುವೆಂಪು ರಂಗಮಂದಿರದಲ್ಲಿ”ಜನಸ್ಪಂದನ” ಜನ ಅಹವಾಲು ಸಲ್ಲಿಸಬಹುದು- -ಗುರುದತ್ತ ಹೆಗಡೆ

0

DC Shivamogga ವಿವಿಧ ರೀತಿಯ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರ ನೇತೃತ್ವದಲ್ಲಿ ಜೂ.28 ರ ಬೆಳಿಗ್ಗೆ 9.30 ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ‘ಜನ ಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿರುವುದರಿಂದ ಜಿಲ್ಲೆಯ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿರುತ್ತದೆ. ವೈಯಕ್ತಿಕ ಅಹವಾಲು ಸಲ್ಲಿಸುವವರು ತಮ್ಮ ಅಹವಾಲನ್ನು ತಾವೊಬ್ಬರೇ ಸಲ್ಲಿಸಬಹುದು. ಸಾರ್ವಜನಿಕವಾಗಿ ಅಹವಾಲು ಸಲ್ಲಿಸುವವರು ಗರಿಷ್ಟ ಇಬ್ಬರಿಗೆ ಅವಕಾಶ ನೀಡಲಾಗುವುದು ಹಾಗೂ ಅರ್ಜಿ ನೋಂದಾಯಿಸಿದ ನಂತರ ಟೋಕನ್‍ಗಳನ್ನು ಪಡೆಯಬೇಕು. ತಮ್ಮ ಅಹವಾಲು ಸಲ್ಲಿಕೆಯಾದ ನಂತರ ಉಳಿದವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ

Om Birla ಲೋಕಸಭಾಧ್ಯಕ್ಷರಾಗಿ ಓಂ ಬಿರ್ಲಾ ಪುನರಾಯ್ಕೆ

0

Om Birla ಹದಿನೆಂಟನೇ ಲೋಕಸಭೆಯ ಅಧ್ಯಕ್ಷರಾಗಿ ಶ್ರೀ ಓಂ ಬಿರ್ಲಾ ಧ್ವನಿಮತದಿಂದ ಆಯ್ಕೆಯಾಗಿದ್ದಾರೆ.
ಪ್ರಧಾನಿ ಮೋದಿ ಓಂ ಬಿರ್ಲಾ ಅವರ ಹೆಸರನ್ನ ಸೂಚಿಸಿದರು.
ಆಯ್ಕೆ ಘೋಷಣೆ ನಂತರ, ಓಂ ಬಿರ್ಲಾ ಅವರನ್ನು ಪಿಎಂ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದರು.

ಇಬ್ಬರೂ ಅವರನ್ನು ಸ್ಪೀಕರ್ ಕುರ್ಚಿಗೆ ಕರೆದೊಯ್ದರು. ಕಳೆದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಬಿರ್ಲಾ ಅವರ ಅನುಭವವು ದೇಶಕ್ಕೆ ಮತ್ತಷ್ಟು ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ.
ಎರಡನೇ ಬಾರಿಗೆ ಲೋಕಸಭೆ ಅಧ್ಯಕ್ಷರಾಗಿ
ಓಂ ಬಿರ್ಲಾ ಅವರ ಆಯ್ಕೆ ದಾಖಲೆಯಾಗಿದೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಂತಾದವರು
ಓಂ ಬಿರ್ಲಾ ಅವರನ್ನ ಅಭಿನಂದಿಸಿ‌ಮಾತನಾಡಿದರು.

Om Birla ಬಲರಾಂ ಜಾಖರ್ ಅವರೂ ಹಿಂದೆ ಎರಡು ಬಾರಿ ಲೋಕಸಭಾ ಸ್ಪೀಕರ್ ಹುದ್ದೆ ಅಲಂಕರಿಸಿದ್ದರು.
ಹೀಗಾಗಿ ಓಂ ಬಿರ್ಲಾ
ಆ ಸಾಲಿನಲ್ಲಿ ದೀರ್ಘ ಅವಧಿಯಲ್ಲಿದ್ದವರಲ್ಲಿ ಎರಡನೇಯವರಾಗಿದ್ದಾರೆ.

Kuvempu University ಅಬ್ಬಲಗೆರೆಯಲ್ಲಿಎನ್ ಎಸ್ ಎಸ್.ವಿಶೇಷ ವಾರ್ಷಿಕ ಶಿಬಿರ

0

Kuvempu University ಕುವೆಂಪು ವಿಶ್ವವಿದ್ಯಾಲಯ, ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವಕ
ಶ್ರೀ. ಉಜ್ಜಿನಿ ಮರಳಸಿದ್ದೇಶ್ವರ ಸಭಾ ಭವನ ಅಬ್ಬಲಗೆರೆಯಲ್ಲಿ ನಡೆಯಿತು.

Kuvempu University ಡಾ.ಶುಭಾ ಮರವಂತೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲರು ಡಾ ಹೆಚ್ ಎಂ ಧರ್ಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತಿಯ ಪಿಡಿಒ ರಾಜಪ್ಪ ,ಎಸ್ ಟಿ ಎಮ್ ಸಿ ಅಧ್ಯಕ್ಷರಾದ ಗೋಪಿಯ ನಾಯ್ಕ, ಹಾಗೂ ಉಜಿನೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ರಂಗಪ್ಪ ಅವರು ಮತ್ತು ಹಾಲು ಒಕ್ಕೂಟದ ಸದಸ್ಯರಾದ ಚಂದ್ರಶೇಖರ್ ಮತ್ತು ಘಟಕವೊಂದರ ಡಾಕ್ಟರ್ ಗಿರಿಧರ್ ಘಟಕ ಎರಡರ ಕಾರ್ಯಕ್ರಮ ಅಧಿಕಾರಿಯಾದ ದೇವೇಂದ್ರ ಹಾಗೂ ಊರಿನ ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

Department of Space ಮೋಡಗಳ ನಡುವೆ ಸಿಡಿಲ ಮಿಂಚಿನ ಗೆರೆ. “ನಾಸಾ” ಸೆರೆ ಹಿಡಿದ ಅಪೂರ್ವ ಫೋಟೋ

0

Department of Space ಹಿಮಾಲಯದ ಪರ್ವತಗಳಿಗೆ ಸಿಡಿಲಿನ ಬಡಿದ ವರ್ಣರಂಜಿತವಾದ ಚಿತ್ರ ಸೆರೆಸಿಕ್ಕದ್ದು ಈ ಅದ್ಬುತ ಫೋಟೊವನ್ನ ಬಾಹ್ಯಾಕಾಶ ವಿಜ್ಞಾನ ಇಲಾಖೆ ನಾಸಾ ಬಿಡುಗಡೆ ಮಾಡಿದೆ.

ಇದು ಈ ಶತಮಾನದ ಛಾಯಚಿತ್ರ. ಹಿಮಾಲಯದ ಪರ್ವತಗಳಿಗೆ ಬಡಿದ ಸಿಡಿಲಿನ ಚಿತ್ರವಿದು. ಕೆಲ ಕ್ಷಣಗಳಲ್ಲೇ ನಡೆದ ಅದ್ಭುತ ಕ್ಷಣಗಳನ್ನು ಸೆರೆ ಹಿಡಿಯಲಾಗಿದ್ದು ಇದು ಈ ಶತಮಾನದ ರೋಮಾಂಚನದ ಕ್ಷಣ ಎನ್ನಲಾಗಿದೆ. ಈ ಕ್ಷಣಗಳು ವರ್ಣಮಯ ಚಿತ್ರಗಳನ್ನು ಬಾಹ್ಯಾಕಾಶ ವಿಜ್ಞಾನ ಇಲಾಖೆ ನಾಸಾ ಬಿಡುಗಡೆ ಮಾಡಿದೆ.

ಚೀನಾ ಮತ್ತು ಭೂತಾನ್‌ ಪ್ರದೇಶಗಳ ನಡುವಿನಲ್ಲಿ ನಡೆದಿದ್ದು ಈ ಕ್ಷಣ ಚಿತ್ರವನ್ನುಸೆರೆಹಿಡಿದ ಸಮಯ ಮಾತ್ರ ಅದ್ಭುತ. ಒಂದೇ ಬಾರಿಗೆ ನಾಲ್ಕು ಮೋಡಗಳು ಸಿಡಿಲನ್ನು ಚಿಮ್ಮಿದ ಕ್ಷಣವಿದು.

Department of Space ಇದು ಮೋಡ ಮತ್ತು ಮೋಡಗಳ ನಡುವೆ ನಡೆಯುವ ಸಿಡಿಲ ಪ್ರಕ್ರಿಯೆಗಿಂತ ಭಿನ್ನವಾದುದು. ಸಾಮಾನ್ಯವಾಗಿ ಮೋಡ ಮೋಡಗಳ ನಡೆಯುವ ಈ ಸೃಷ್ಟಿಯ ಅದ್ಭುತ ಮೋಡದಿಂದ ನೆಲಕ್ಕೆ ಜಿಗಿದಿದೆ. ಇಂತಹ ಕ್ಷಣವು ಬಿರುಗಾಳಿ ರಹಿತವಾಗಿದ್ದು ಈ ಚೆಂದ ಫೋಟೊ ಸೆರೆ ಸಿಕ್ಕಿದೆ.

International Human Rights & Crime Control Council ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿವೆ- ಯುವರಾಜ್

0

International Human Rights & Crime Control Council ಪುರಸಭೆ ವ್ಯಾಪ್ತಿಯ ಅನೇಕ ಕೆರೆಕಟ್ಟೆಗಳು ಅಕ್ರಮವಾಗಿ ಒತ್ತುವರಿಯಾಗಿದ್ದು, ತೆರವುಗೊಳಿಸಲು ವಿವಿಧ ಸಂಘಟನೆಗಳಿಂದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನೇತೃತ್ವ ವಹಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಯುವರಾಜ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯ ಮೌಲ್ಯದ ಸರ್ಕಾರಿ ಜಾಗಗಳು ಅಕ್ರಮವಾಗಿ ಒತ್ತುವರಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕೂಡಲೇ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು
ಪಟ್ಟಣದಲ್ಲಿ ಹಲವಾರು ಸರ್ಕಾರಿ ಕೆರೆಗಳು ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಈ ಒತ್ತುವರಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳು, ಶಾಲಾಕಾಲೇಜುಗಳು, ಸೇರಿದಂತೆ ಹಲವಾರು ಕಟ್ಟಡಗಳು ನಿರ್ಮಿತವಾಗಿದ್ದು ಇದಕ್ಕೆ ಪುರಸಭೆಯಿಂದ ನಕಲು ದಾಖಲೆಗಳನ್ನು ಸೃಷ್ಟಿಸಿ ಖಾಸಗಿಯವರಿಗೆ ಹಂಚಲಾಗಿದೆ. ತಾಲ್ಲೂಕಿನ ಕಸಬಾ ಕಸಬಾ ಹೋಬಳಿ ಕಾನೂರು ಗ್ರಾಮದ ಸರ್ವೇ ನಂಬರ್ ೧೪೫ ರಲ್ಲಿ ವಡ್ಡನಕಟ್ಟೆ ಕೆರೆಯು ಸರ್ಕಾರಿ ಕೆರೆಯಾಗಿದ್ದು, ಇದು ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು ಇದರ ವಿಸ್ತೀರ್ಣ ೧೨ ಎಕರೆ ೨೦ ಗುಂಟೆ ಇದ್ದು ಕೆಲವು ವರ್ಷಗಳಿಂದ ಭೂಗಳರು ಒತ್ತುವರಿ ಮಾಡಿದ್ದಾರೆ. ಕೆರೆಯನ್ನು ಅಕ್ರಮವಾಗಿ ಸಮತಟ್ಟಾಗಿ ಲೇಔಟ್ ಮಾಡಲಾಗಿದ್ದು ಅಲ್ಲದೆ ಕಟ್ಟಡದ ನಿರ್ಮಾಣ ಮಾಡಿ ಈ ಸ್ವತ್ತು ಸಹ ನೀಡಲಾಗಿದೆ ಎಂದರು.
International Human Rights & Crime Control Council ಈ ಲೇಔಟ್ ನಲ್ಲಿ ಸಾರ್ವಜನಿಕ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಕೆಲವು ವರ್ಷಗಳ ಹಿಂದೆ ವಿವಿಧ ಸಂಘಟನೆ ಹಾಗೂ ಸಾರ್ವಜನಿಕರ ತೀವ್ರ ಹೋರಾಟದಿಂದ ಪ್ರತಿಫಲವಾಗಿ ಕಡುಬಡವರ ಸಣ್ಣ ಪುಟ್ಟ ಮನೆಗಳನ್ನು ಮಾತ್ರ ಆಡಳಿತ ಮಂಡಳಿಯವರು ತೆರವುಗೊಳಿಸಿದ್ದಾರೆ. ಇನ್ನುಳಿದಂತೆ ಉಳ್ಳವರ ಮನೆಗಳನ್ನು ಹಾಗೆಯೇ ಬಿಡಲಾಗಿದೆ. ಇಲ್ಲಿ ನಿರ್ಮಿಸಿರುವ ಶ್ರೀಮಂತರ ಕಟ್ಟಡಗಳಿಗೆ ಪರವಾನಿಗೆ ನೀಡಿದ್ದು ಸುಮಾರು ಏಳೆಂಟು ಎಕರೆ ಭೂಮಿಯನ್ನು ಒತ್ತ್ತುವರಿ ಮಾಡಲಾಗಿದೆ ಕರ್ನಾಟಕ ಭೂಗಂದಾಯ ಕಾಯ್ದೆ ೧೯೬೪ರ ಕಾಲಂ ೧೯೨ಚಿ ಅಡಿಯಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಘಟನೆ, ಜಯ ಕರ್ನಾಟಕ ಸಂಘಟನೆ ಹಾಗೂ ಗೆಳೆಯರ ಬಳಗ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಎಉತ್ತದೆ ಎಂದರು.
ಈ ಸಂದರ್ಭದಲ್ಲಿ ಐ ಹೆಚ್ ಆರ್ ಸಿ ಸಿ ಓ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಆಯಿಷಾ ,ಜೈ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಜುನಾಥ್, ಗೆಳೆಯರ ಬಳಗದ ಅಬ್ದುಲ್ ಜಬ್ಬ್ಬಾರ್ ಸಾಬ್, ಇಮ್ತಿಯಾಜ್, ಚಂದ್ರಶೇಖರ್, ಫಕೀರಪ್ಪ, ರುದ್ರಪ್ಪ, ನಾಗರಾಜ್ ನಾಯ್ಕ್, ಸುರೇಶ ನಾಯ್ಕ್ ಹಾಜರಿದ್ದರು.

Sri Ramakrishna Vidyashala ಯಕ್ಷಗಾನ ನಮ್ಮ ಸಂಸ್ಕೃತಿ ಉಳಿಸುವ ಕಲೆ-ಪಟ್ಲ ಸತೀಶ್ ಶೆಟ್ಟಿ

0

Sri Ramakrishna Vidyashala ಯಕ್ಷಗಾನ ಕಲೆ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ, ಈ ಕಲೆಗೆ ಜೀವನ ಸಂದೇಶ ನೀಡುವ ಶಕ್ತಿ ಇದೆ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಸಮೀಪದ ಮಡಸೂರು ಲಿಂಗದಹಳ್ಳಿ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು ಇವರ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯಡಿ ನಾಟ್ಯ ತರಬೇತಿ ಶಿಕ್ಷಣ ಅಭಿಯಾನದಡಿ ಉಚಿತ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಇದೊಂದು ನಮ್ಮ ಸಂಸ್ಕೃತಿ ಉಳಿಸುವ ಕಲೆ ಎಂದರು.

ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತ, ಉಪನಿಷತ್‌ಗಳ ಸಾರವನ್ನು ಸರಳವಾಗಿ ಹೇಳಲಾಗುತ್ತದೆ. ಧಾರ್ಮಿಕ ಪ್ರಜ್ಞೆ, ಆಧ್ಯಾತ್ಮದ ತಿರುಳು ಈ ಯಕ್ಷಗಾನೀಯ ಕಥಾ ಆವರಣದಲ್ಲಿದೆ. ಯಕ್ಷಗಾನವನ್ನು ನಿತ್ಯ ಅಭ್ಯಾಸ ಮಾಡಿದರೆ ಎಲ್ಲ ವ್ಯಾಯಾಮವೂ ಸಿಗುತ್ತದೆ. ಮನೋಸ್ಥೈರ್ಯ ಬೆಳೆಯುತ್ತದಲ್ಲದೇ, ಸಭಾ ಕಂಪನ ದೂರವಾಗುತ್ತದೆ. ಯಕ್ಷಗಾನ ಕಲೆಯನ್ನು ಅಮೇರಿಕದವರೂ ಮೆಚ್ಚುಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ. ಅಮೇರಿಕದ 18 ರಾಜ್ಯಗಳಿಂದ ಮೂರು ತಿಂಗಳ ಕಾಲ ಯಕ್ಷಗಾನ ಪ್ರದರ್ಶನಕ್ಕೆ ನನಗೆ ಆಹ್ವಾನ ಬಂದಿದೆ ಎಂದರು.

ಯಕ್ಷಗಾನ ಕಲೆಯಿಂದ ಶುದ್ಧ ಕನ್ನಡ ಉಳಿದಿದೆ. ವಿದ್ಯಾರ್ಥಿಗಳ ಕಲಿಕೆಗೆ ಈ ಕಲೆಯ ಕಲಿಕೆ ತೊಡಕಾಗುವುದಿಲ್ಲ ಎಂದು ಸಲಹೆ ನೀಡಿದ ಅವರು, ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದ ಕೆಲವು ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದಾರೆ ಎಂದು ಉದಾಹರಿಸಿದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ನಮ್ಮ ಯೋಜನೆಯಡಿ 6 ಜಿಲ್ಲೆಗಳ 150 ಶಾಲೆಗಳಲ್ಲಿ ಯಕ್ಷಗಾನ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಕರ್ತ ನಗರ ರಾಘವೇಂದ್ರ ಮಾತನಾಡಿ, ಪಟ್ಲ ಸತೀಶ್ ರವರು ಯಕ್ಷಗಾನ ಭಾಗವತರು ಮಾತ್ರ ಆಗದೆ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಆದಾಯದ ಬಹುಭಾಗವನ್ನು ಯಕ್ಷಗಾನ ಕ್ಷೇತ್ರದ ಅಶಕ್ತ ಕಲಾವಿದರಿಗೆ ಧನಸಹಾಯ, ಮನೆ ನಿರ್ಮಾಣ, ಯಕ್ಷ ಶಿಕ್ಷಣ ಮುಂತಾದ ಯೋಜನೆ ಬಳಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವಾಗಿದ್ದಾರೆ. ವಿದ್ಯಾರ್ಥಿಗಳು ಪಟ್ಲರವರು ನೀಡಿದ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದರು.

Sri Ramakrishna Vidyashala ಮತ್ತೊಬ್ಬ ಪತ್ರಕರ್ತ ಹಿತಕರ ಜೈನ್ ಮಾತನಾಡಿ, ಕನ್ನಡ ಭಾಷೆ ಪರಿಶುದ್ಧವಾಗಿ ಉಳಿದಿರುವುದು ಯಕ್ಷಗಾನ ರಂಗದಲ್ಲಿ ಮಾತ್ರ. ಯಕ್ಷಗಾನ ದೇವರ ಕೊಡುಗೆ. ಯಕ್ಷಗಾನವನ್ನು ಶ್ರದ್ಧೆ ಭಕ್ತಿಯಿಂದ ರೂಢಿಸಿಕೊಂಡರೆ ಆರೋಗ್ಯವಂತ ಜೀವನ ಸಾಗಿಸಬಹುದು. ಯಕ್ಷಗಾನದಲ್ಲಿ ಬೇರೆ ಬೇರೆ ಅವಕಾಶಗಳಿವೆ. ತಮ್ಮ ಕಲಾಭಿರುಚಿಗೆ ತಕ್ಕಂತೆ ಇದನ್ನು ಬೆಳೆಸಿಕೊಳ್ಳಬಹುದು. ಹಿಂದೆ ಯಕ್ಷಗಾನಕ್ಕೆ ವಿಶೇಷ ಮಹತ್ವವಿತ್ತು. ಚಂಡೆಯ ಶಬ್ದಕ್ಕೆ ದುಷ್ಟಶಕ್ತಿಗಳು, ಕ್ಷುದ್ರ ದೇವತೆಗಳು ದೂರವಾಗುತ್ತದೆ ಎಂಬ ನಂಬಿಕೆಯಿತ್ತು ಎಂದರು.

ಶ್ರೀ ರಾಮಕೃಷ್ಣ ವಿದ್ಯಾಲಯದ ಮುಖ್ಯಸ್ಥ ದೇವರಾಜ್ ಡಿ.ಎಂ. ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಶಿಕ್ಷಕರಾದ ಗೋಪಾಲಮೂರ್ತಿ, ನಾರಾಯಣ ಹಾಜರಿದ್ದರು.

ಸರಿತಾ ದೇವರಾಜ್ ಸ್ವಾಗತಿದರು. ಹುಚ್ಚಪ್ಪ ವಂದಿಸಿದರು.

Kamala Nehru College ವಿದ್ಯಾರ್ಥಿನಿಯರು ಜಾಲತಾಣದಲ್ಲಿ ಖಾಸಗಿ ಮಾಹಿತಿ ಹಂಚಿಕೊಳ್ಳಬೇಡಿ – ಅನಿಲ್ ಕುಮಾರ್ ಭೂಮರೆಡ್ಡಿ

0

Kamala Nehru College ಮಹಿಳೆಯರ ಸಂರಕ್ಷಣೆಗೆ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಇವೆಲ್ಲವೂ ಮಹಿಳೆ ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ರಚಿಸಲ್ಪಟ್ಟವುಗಳು. ಭ್ರೂಣದಿಂದ ಹಿಡಿದು, ಸಾವಿನವರೆಗೂ ಕಾನೂನುಗಳಿದ್ದರೂ ಸಹ ಅವುಗಳ ಅರಿವು ಮತ್ತು ಪ್ರಾಮಾಣಿಕ ಅನುಷ್ಠ್ಠಾನದಿಂದ ಮಾತ್ರ ಅದರ ಫಲ ಅನುಭವಿಸಲು ಸಾಧ್ಯ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಹೇಳಿದರು.
ಕರ್ನಾಟಕ ಸಂಘ ಮತ್ತು ಕಮಲಾ ನೆಹರೂ ಕಾಲೇಜು ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ ” ಮಹಿಳೆ ಮತ್ತು ಕಾನೂನು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನುಗಳ ದುರ್ಬಳಿಕೆಯಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಬೇಕಾದರೆ, ಇರುವ ಒಂದೇ ಸಾಧನವೆಂದರೆ ಕಾನೂನಿನ ಅರಿವು ಮೂಡಿಸುವುದು. ಸರ್ಕಾರ ರಚಿಸಿರುವ ಕಾನೂನು ಸೇವಾ ಪ್ರಾಧಿಕಾರದ ನೆರವನ್ನು ಉಚಿತವಾಗಿ ಪಡೆದು ಕಾನೂನು ನೆರವನ್ನು ಪಡೆಯಬಹುದಾಗಿದೆ ಮತ್ತು ಪೊಕ್ಸೋ ಕಾಯಿದೆಯ ಬಗ್ಗೆಯೂ ಸಹ ತಿಳಿಯಬೇಕು ಎಂದು ಕಿವಿಮಾತು ಹೇಳಿದರು. ಅಲ್ಲದೆ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಲದಲ್ಲಿಯಾಗಲೀ, ಅಪರಿಚಿತರೊಂದಿಗಾಗಲೀ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದರು.
Kamala Nehru College ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಮಾತನಾಡಿ, ಹೆಣ್ಣುಮಕ್ಕಳ ಸುರಕ್ಷತೆಗೆ ಇಷ್ಟ್ಟೆಲ್ಲ ಕಾನೂನುಗಳಿದ್ದರೂ ಸಹ ವಷದಿಂದ ವಷಕ್ಕೆ ಅಪರಾಧಗಳ ಸಂಖ್ಯೆ ಏರುಮುಖವಾಗುತ್ತಿರುವುದು ಕಳವಳಕಾರಿ. ರಾಷ್ಟ್ರೀಯ ಅಪರಾಧ ಸಂಶೋಧನಾ ಸಂಸ್ಥೆಯ ಒಂದು ವರದಿಯಂತೆ ೨೦೨೧ರಲ್ಲಿ ೪,೨೮,೬೫೦ ಮಹಿಳಾ ದೌರ್ಜನ್ಯ ವರದಿಯಾಗಿದೆ. ಅಂದರೆ ಹಿಂದಿನ ವಷಕ್ಕಿಂತ ಶೇ.೮೭ ಹೆಚ್ಚು, ಇದನ್ನು ತಡೆಯಬೇಕಾದರೆ ಯುವಕರಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಹೆಚ್ಚು ಕಾನೂನು ಅರಿವು ಇರುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಕಮಲಾ ನೆಹರೂ ಕಾಲೇಜು ಪ್ರಾಚಾರ್ಯ ಎಂ.ಆರ್.ಜಗದೀಶ್, ಪ್ರೊ. .ಓಂಕಾರಪ್ಪ ಮತ್ತು . ಎಂ. ಆಶಾಲತಾ ಉಪಸ್ಥಿತರಿದ್ದರು.
ದಿವ್ಯಾ ಸ್ವಾಗತಿಸಿದರು. ಕಾವ್ಯಾ ವಂದಿಸಿದರು. ಸುಚಿತ್ರಾ ನಿರೂಪಿಸಿದರು.

Shivamogga Police ಜೂನ್ 25 ರಂದು ರೈಲು ಗಾಡಿನಂ 16567ರ ಕೋಚೊಂದರಲ್ಲಿ ಅಪರಿಚಿತ ಶವ ಪತ್ತೆ

0

Shivamogga Police ಜೂನ್ 25 ರಂದು ಮಧ್ಯರಾತ್ರಿ 1 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ನಂ 16567 ರೈಲುಗಾಡಿ ಬಂದಾಗ, ಆ ರೈಲಿನ ಕೋಚ್ ನಂ ಜಿಎಸ್‌ಆರ್‍ಡಿ/ಎಸ್‌ಡಬ್ಲ್ಯುಆರ್/144211ರಲ್ಲಿ ಸುಮಾರು 65 ವರ್ಷದ ಪುರುಷನ ಶವ ಪತ್ತೆಯಾಗಿದ್ದು, ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರಕ್ಕೆ ಸಾಗಿಸಲಾಗಿದೆ.

Shivamogga Police ಮೃತ ವ್ಯಕ್ತಿಯು ಸುಮಾರು 5.10 ಅಡಿ ಎತ್ತರವಿದ್ದು, ಕೃಶವಾದ ಶರೀರ, ಕಪ್ಪು ಮೈಬಣ್ಣ, ಕೋಲುಮುಖ, ನೀಳ ಮೂಗು, ಸುಮಾರು ಒಂದು ಇಂಚು ಉದ್ದದ ಕಪ್ಪುಬಿಳಿ ಕೂದಲು,ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ತಿಳಿ ನೀಲಿ ಬಣ್ಣದ ಕಾಟನ್ ಚಡ್ಡಿ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್‌ಇನ್ಸಪೆಕ್ಟರ್ ದೂ.ಸಂ:08182222974 ಮತ್ತು 9480802124ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತಿಳಿಸಿದಾರೆ.

Multi Purpose Social Service Society ಕೌಶಲ್ಯ ಕುರಿತ ಪ್ರತಿ ತರಬೇತಿಯು ಮಹಿಳೆಯರಲ್ಲಿ ನಾಯಕತ್ವ ಗುಣ ಇಮ್ಮಡಿಸುತ್ತದೆ-ಆರ್.ಕೆ.ಸಿದ್ಧರಾಮಣ್ಣ

0

Multi Purpose Social Service Society ಉತ್ತಮ ತರಬೇತಿಯಿಂದ ಕೌಶಲ್ಯ ವೃದ್ಧಿಗೆ ಸಹಕಾರಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಕೆ ಸಿದ್ಧರಾಮಣ್ಣ ಅಭಿಪ್ರಾಯಪಟ್ಟರು.

ಅವರ ಶಿವಮೊಗ್ಗ ನಗರದ ಚೈತನ್ಯ ಸಭಾಂಗಣದಲ್ಲಿ ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ಮಹಿಳಾ ನಾಯಕಿಯರಿಗೆ ಹಮ್ಮಿಕೊಂಡಿದ್ದ ಒಕ್ಕೂಟ ಬಲ ವರ್ಧನೆಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬದಲಾಗುವ ತಂತ್ರಜ್ಞಾನ ಮತ್ತು ಕೌಶಲ್ಯ ಕಲಿಕೆಗೆ ತರಬೇತಿ ಅತ್ಯಾವಶ್ಯಕ, ಪ್ರತಿ ತರಬೇತಿಯು ಮಹಿಳೆಯರಲ್ಲಿ ನಾಯಕತ್ವ ಗುಣವನ್ನು ಇಮ್ಮಡಿಗೊಳಿಸುತ್ತದೆ ಎಂದರು.

Multi Purpose Social Service Society ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿ ಎಸ್ ಐ ಶಿವಮೊಗ್ಗ ಸಿರಿ ಲಿಜನ್ ಅಧ್ಯಕ್ಷ ಉಷಾ ಉತ್ತಪ್ಪ ಮಾತನಾಡಿ ಮಹಿಳೆಯರು ಅವಲಂಬಿಗಳಾಗಬೇಕು, ಹೊಸ ಹೊಸ ಕಲಿಕೆಯ ಮೂಲಕ ತನ್ನ ನೆರೆಹೊರೆಯ ಮಹಿಳೆಯರಿಗೆ ಮಾರ್ಗದರ್ಶನ ಮಾಡಬೇಕು, ಸ್ನೇಹ ತಾಳ್ಮೆಯಿಂದ ಒಕ್ಕೂಟದ ಬಲವರ್ಧನೆ ಮಾಡಬೇಕು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ . ಫಾದರ್ ಪಿಯೂಷ್ ಡಿಸೋಜಾ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಮಕ್ಕಳ ನಿಜವಾದ ಗುರುಗಳಾಗಿ ಸಂಸ್ಕಾರ ಮತ್ತು ಸನ್ನಡತೆ ಕಲಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ, ಅದೇ ರೀತಿ ಮಕ್ಕಳಲ್ಲಿ ನಿಜವಾದ ಜ್ಞಾನವನ್ನು ವೃದ್ಧಿಸಿಕೊಳ್ಳುವ , ತಪ್ಪು, ಸರಿಗಳ ಕುರಿತು ನೈಜ ಜ್ಞಾನವನ್ನು ಪಡೆಯಲು ಪ್ರೇರಣೆ ನೀಡುವ ಕೆಲಸ ಮುಖ್ಯವಾಗಿ ಆಗಬೇಕು ಎಂದರು.

ತಾಲೂಕು ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ ಉಪಸ್ಥಿತರಿದ್ದರು, ಜಗದೀಶ್ ಸ್ವಾಗತಿಸಿದರು.

World Blood Donor Day ಯುವಜನರು ರಕ್ತದಾನದಂತಹ ಮಹತ್ಕಾರ್ಯಕ್ಕೆ ಕೈ ಜೋಡಿಸಬೇಕು-ಡಾ.ಕೆ.ಎಲ್.ಅರವಿಂದ

0

World Blood Donor Day ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್.ಎನ್.ಎಂ. ಕಾಲೇಜಿನ ಗ್ರಂಥಾಲದ ಆವರಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವರೆಡ್ ಕ್ರಾಸ್ ಘಟಕಗಳ ವತಿಯಿಂದ
ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಲ್.ಅರವಿಂದ ಅವರು ನಮ್ಮ ಕಾಲೇಜಿನ ವತಿಯಿಂದ ರಕ್ತದಾನ ಶಿಬಿರ ಹಾಗೂ ರಕ್ತದ ಗುಂಪು ತಪಾಸಣೆ ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ.
ರಕ್ತದಾನಕ್ಕಿಂತ ಬೇರೆ ದಾನ ಇನ್ನೊಂದಿಲ್ಲ, ಕೇವಲ ಒಂದು ಯುನಿಟ್ ರಕ್ತ ನಾಲ್ಕು ಜನರ ಜೀವವನ್ನು ಉಳಿಸಬಲ್ಲದು, ರಕ್ತವನ್ನು ಕೃತಕವಾಗಿ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲದ ಕಾರಣ ರಕ್ತಕ್ಕೆ ಬಹಳ ಬೇಡಿಕೆ ಇದೆ.

ಯುವಜನರು ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡುತ್ತಾ ರಕ್ತದಾನದಿಂದ ಹೃದಯಾಘಾತ ಕಡಿಮೆ ಆಗುವುದರಜೊತೆಗೆ ಹಾಗೂ ದೇಹದಲ್ಲಿ ರಕ್ತದಾನದಿಂದ ಕೊಬ್ಬಿನಾಂಶ ಹೊರಹೋಗುವುದರಿಂದ ಸದಾ ಲವಲವಿಕೆಯಿಂದ ಇರುವುದರಜೊತೆಗೆ ದೀರ್ಘಾಷ್ಯುವುಳ್ಳವರಾಗಿರುತ್ತಾರೆ.

ಜಿಲ್ಲೆಯಲ್ಲಿ ರಕ್ತದಕೊರತೆ ತುಂಬಾ ಹೆಚ್ಚಾಗಿದ್ದು ಇದನ್ನು ನೀಗಿಸಲು ಯುವಕರು ರಕ್ತದಾನ ಮಾಡುವುದರಲ್ಲಿ ಮುಂದಾಗಬೇಕು ಹಾಗೂ ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

World Blood Donor Day ಈ ರಕ್ತದಾನ ಶಿಬಿರದಲ್ಲಿ 115 ಕ್ಕೂ ಹೆಚ್ಚುಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ಎನ್.ಎಸ್.ಎಸ್. ಘಟಕದ ಲಕ್ಷ್ಮಣ. ಕೆ, ಮಂಜುನಾಥ. ಕೆ, ಯುವ ರೆಡ್‌ಕ್ರಾಸ್‌ ಘಟಕದ ಡಾ. ನಾಗರಾಜ. ಕೆ. ಎಸ್, ಉಪನ್ಯಾಸಕರಾದ ಡಾ. ಮುಕುಂದ ಎಸ್., ಡಾ. ಪ್ರಶಿತ್ ಕೇಕುಡ ಟಿ.ಆರ್., ಸಂಗೀದಾ ಬಾನು, ನಂದನ್, ಅಂಕಿತ್, ಶಿವಮೊಗ್ಗದ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಗಿರೀಶ್. ಆರ್, ಜಿ.ವಿಜಯಕುಮಾರ್, ಉಮಾ ಸೋಮಶೇಖರ್. ನಂದಿತಾ ಗೀತ ಹಾಗೂ ಎನ್.ಎಸ್.ಎಸ್.ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.