Monday, April 28, 2025
Monday, April 28, 2025

Sri Ramakrishna Vidyashala ಯಕ್ಷಗಾನ ನಮ್ಮ ಸಂಸ್ಕೃತಿ ಉಳಿಸುವ ಕಲೆ-ಪಟ್ಲ ಸತೀಶ್ ಶೆಟ್ಟಿ

Date:

Sri Ramakrishna Vidyashala ಯಕ್ಷಗಾನ ಕಲೆ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ, ಈ ಕಲೆಗೆ ಜೀವನ ಸಂದೇಶ ನೀಡುವ ಶಕ್ತಿ ಇದೆ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಸಮೀಪದ ಮಡಸೂರು ಲಿಂಗದಹಳ್ಳಿ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು ಇವರ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯಡಿ ನಾಟ್ಯ ತರಬೇತಿ ಶಿಕ್ಷಣ ಅಭಿಯಾನದಡಿ ಉಚಿತ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಇದೊಂದು ನಮ್ಮ ಸಂಸ್ಕೃತಿ ಉಳಿಸುವ ಕಲೆ ಎಂದರು.

ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತ, ಉಪನಿಷತ್‌ಗಳ ಸಾರವನ್ನು ಸರಳವಾಗಿ ಹೇಳಲಾಗುತ್ತದೆ. ಧಾರ್ಮಿಕ ಪ್ರಜ್ಞೆ, ಆಧ್ಯಾತ್ಮದ ತಿರುಳು ಈ ಯಕ್ಷಗಾನೀಯ ಕಥಾ ಆವರಣದಲ್ಲಿದೆ. ಯಕ್ಷಗಾನವನ್ನು ನಿತ್ಯ ಅಭ್ಯಾಸ ಮಾಡಿದರೆ ಎಲ್ಲ ವ್ಯಾಯಾಮವೂ ಸಿಗುತ್ತದೆ. ಮನೋಸ್ಥೈರ್ಯ ಬೆಳೆಯುತ್ತದಲ್ಲದೇ, ಸಭಾ ಕಂಪನ ದೂರವಾಗುತ್ತದೆ. ಯಕ್ಷಗಾನ ಕಲೆಯನ್ನು ಅಮೇರಿಕದವರೂ ಮೆಚ್ಚುಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ. ಅಮೇರಿಕದ 18 ರಾಜ್ಯಗಳಿಂದ ಮೂರು ತಿಂಗಳ ಕಾಲ ಯಕ್ಷಗಾನ ಪ್ರದರ್ಶನಕ್ಕೆ ನನಗೆ ಆಹ್ವಾನ ಬಂದಿದೆ ಎಂದರು.

ಯಕ್ಷಗಾನ ಕಲೆಯಿಂದ ಶುದ್ಧ ಕನ್ನಡ ಉಳಿದಿದೆ. ವಿದ್ಯಾರ್ಥಿಗಳ ಕಲಿಕೆಗೆ ಈ ಕಲೆಯ ಕಲಿಕೆ ತೊಡಕಾಗುವುದಿಲ್ಲ ಎಂದು ಸಲಹೆ ನೀಡಿದ ಅವರು, ಯಕ್ಷಗಾನ ಕಲೆಯನ್ನು ಅಭ್ಯಾಸ ಮಾಡಿದ ಕೆಲವು ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದಾರೆ ಎಂದು ಉದಾಹರಿಸಿದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ನಮ್ಮ ಯೋಜನೆಯಡಿ 6 ಜಿಲ್ಲೆಗಳ 150 ಶಾಲೆಗಳಲ್ಲಿ ಯಕ್ಷಗಾನ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಕರ್ತ ನಗರ ರಾಘವೇಂದ್ರ ಮಾತನಾಡಿ, ಪಟ್ಲ ಸತೀಶ್ ರವರು ಯಕ್ಷಗಾನ ಭಾಗವತರು ಮಾತ್ರ ಆಗದೆ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಆದಾಯದ ಬಹುಭಾಗವನ್ನು ಯಕ್ಷಗಾನ ಕ್ಷೇತ್ರದ ಅಶಕ್ತ ಕಲಾವಿದರಿಗೆ ಧನಸಹಾಯ, ಮನೆ ನಿರ್ಮಾಣ, ಯಕ್ಷ ಶಿಕ್ಷಣ ಮುಂತಾದ ಯೋಜನೆ ಬಳಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವಾಗಿದ್ದಾರೆ. ವಿದ್ಯಾರ್ಥಿಗಳು ಪಟ್ಲರವರು ನೀಡಿದ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದರು.

Sri Ramakrishna Vidyashala ಮತ್ತೊಬ್ಬ ಪತ್ರಕರ್ತ ಹಿತಕರ ಜೈನ್ ಮಾತನಾಡಿ, ಕನ್ನಡ ಭಾಷೆ ಪರಿಶುದ್ಧವಾಗಿ ಉಳಿದಿರುವುದು ಯಕ್ಷಗಾನ ರಂಗದಲ್ಲಿ ಮಾತ್ರ. ಯಕ್ಷಗಾನ ದೇವರ ಕೊಡುಗೆ. ಯಕ್ಷಗಾನವನ್ನು ಶ್ರದ್ಧೆ ಭಕ್ತಿಯಿಂದ ರೂಢಿಸಿಕೊಂಡರೆ ಆರೋಗ್ಯವಂತ ಜೀವನ ಸಾಗಿಸಬಹುದು. ಯಕ್ಷಗಾನದಲ್ಲಿ ಬೇರೆ ಬೇರೆ ಅವಕಾಶಗಳಿವೆ. ತಮ್ಮ ಕಲಾಭಿರುಚಿಗೆ ತಕ್ಕಂತೆ ಇದನ್ನು ಬೆಳೆಸಿಕೊಳ್ಳಬಹುದು. ಹಿಂದೆ ಯಕ್ಷಗಾನಕ್ಕೆ ವಿಶೇಷ ಮಹತ್ವವಿತ್ತು. ಚಂಡೆಯ ಶಬ್ದಕ್ಕೆ ದುಷ್ಟಶಕ್ತಿಗಳು, ಕ್ಷುದ್ರ ದೇವತೆಗಳು ದೂರವಾಗುತ್ತದೆ ಎಂಬ ನಂಬಿಕೆಯಿತ್ತು ಎಂದರು.

ಶ್ರೀ ರಾಮಕೃಷ್ಣ ವಿದ್ಯಾಲಯದ ಮುಖ್ಯಸ್ಥ ದೇವರಾಜ್ ಡಿ.ಎಂ. ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಶಿಕ್ಷಕರಾದ ಗೋಪಾಲಮೂರ್ತಿ, ನಾರಾಯಣ ಹಾಜರಿದ್ದರು.

ಸರಿತಾ ದೇವರಾಜ್ ಸ್ವಾಗತಿದರು. ಹುಚ್ಚಪ್ಪ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...