Tuesday, April 22, 2025
Tuesday, April 22, 2025

Rahul Gandhi ರಾಹುಲ್ ಗಾಂಧಿ” ಮ್ಯಾನ್ ಆಫ್ ದ ಮ್ಯಾಚ್” ಸಂಸದ‌ ಶಶಿ ತರೂರ್ ಬಣ್ಣನೆ

Date:

Rahul Gandhi ರಾಹುಲ್ ಗಾಂಧಿ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದಾರೆ. ಅವರು ಸದನದಲ್ಲಿ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್ ಆಗ್ರಹಿಸಿದ್ದು, ಇದೇ ರೀತಿಯ ಬೇಡಿಕೆಯನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸೇರಿ ಹಲವು ಕಾಂಗ್ರೆಸ್‌ ನಾಯಕರು ಮುಂದಿಟ್ಟಿದ್ದಾರೆ.

ಇದಲ್ಲದೆ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಬೇಕು ಎಂದು ಸಿಡಬ್ಲ್ಯುಸಿ ಸದಸ್ಯರು ನಿರ್ಣಯ ಅಂಗೀಕರಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಶಿ ತರೂರ್, ಈ ಜನಾದೇಶವು ಬಿಜೆಪಿಯ ದುರಹಂಕಾರ ಮತ್ತು ವರ್ತನೆಗೆ ಮತದಾರರು ನೀಡಿರುವ ಜನಾದೇಶದ ಸಂದೇಶವಾಗಿದೆ. ಸರ್ಕಾರವನ್ನು ನಡೆಸುವಾಗ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಮೋದಿ ಮತ್ತು ಅಮಿತ್ ಶಾ ಅವರಿಗೆ ಇದು ಒಂದು ಸವಾಲಾಗಿದೆ ಮತ್ತು ಇದು ಅವರ ಕಾರ್ಯಚಟುವಟಿಕೆಯನ್ನು ಬದಲಾಯಿಸುವ ಮತ್ತು ಹೆಚ್ಚು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಾರಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಕೆಲವು ವಿಷಯಗಳಲ್ಲಿ ‘ಮಜ್ಬೂರ್ ಸರ್ಕಾರ’ (ಅಸಹಾಯಕ ಸರ್ಕಾರ) ಎಂದು ಸಾಬೀತುಪಡಿಸಬಹುದು, ಏಕೆಂದರೆ ಎನ್‌ಡಿಎ ಭಾಗವಾಗಿರುವ ಎಲ್ಲಾ ಪಕ್ಷಗಳು ಎಲ್ಲವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಹೇಳಿದ್ದಾರೆ.

ಈಗಾಗಲೇ ಅಗ್ನಿವೀರ್ ಯೋಜನೆಯ ಬಗ್ಗೆ ಒಂದು ಪಕ್ಷವು ಪ್ರಶ್ನೆಗಳನ್ನು ಎತ್ತಿದೆ, ಅದನ್ನು ಪರಿಶೀಲಿಸಬೇಕಾಗಿದೆ. ಆಂದ್ರಕ್ಕೆ ಬಿಜೆಪಿ ಸರ್ಕಾರವು ಈವರೆಗೆ ನೀಡಲು ನಿರಾಕರಿಸಿದ್ದ ವಿಶೇಷ ವರ್ಗದ ಸ್ಥಾನಮಾನಕ್ಕೆ ಬೇಡಿಕೆ ಕೇಳಿ ಬಂದಿದೆ, ಅದನ್ನು ಮರುಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು.

Rahul Gandhi ಮೋದಿ ಸರಕಾರವು ಕಳೆದ 10 ವರ್ಷಗಳಲ್ಲಿ ಸಂಸತ್ತನ್ನು ಸೂಚನಾ ಫಲಕದಂತೆ ಪರಿಗಣಿಸಿದೆ. ಈಗ 230ಕ್ಕೂ ಹೆಚ್ಚು ಸಂಸದರ ಪ್ರಬಲ ವಿರೋಧವಿರುವ ಕಾರಣ ಈಗ ಅದು ಸಾಧ್ಯವಿಲ್ಲ. ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ದೇಶದಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹುದ್ದೆ ವಹಿಸುವುದು ಸೂಕ್ತವೆನಿಸಲಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಬಳಿಕ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ ಆಡಳಿತ ಪಕ್ಷವನ್ನು ಎದುರಿಸಲು ಹೆಚ್ಚಿನ ಸಂಖ್ಯಾ ಬಲ ಹೊಂದಿರುವ ಪಕ್ಷದ ಜನಪ್ರಿಯ ನಾಯಕ ವಿಪಕ್ಷದ ಸ್ಥಾನ ವಹಿಸುವುದು ಹೆಚ್ಚು ಸೂಕ್ತವೆನಿಸಲಿದೆ ಎಂದು ಶಶಿ ತರೂರ್‌ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲವನ್ನೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ರಾಹುಲ್ ಗಾಂಧಿ ಅವರು ಪ್ರತಿಪಕ್ಷದ ಪ್ರಮುಖ ನಾಯಕರಾಗಿ ಹೊರಹೊಮ್ಮಬೇಕು ಎಂದು ಇಡೀ ದೇಶ ಒತ್ತಾಯಿಸುತ್ತದೆ. ಈ ಸ್ಥಾನವು ಅವರಿಗೆ ಸೂಕ್ತವಾಗಿದೆ ಎಂದು ಪ್ರತಾಪ್ ಸಿಂಗ್ ಬಾಜ್ವಾ ಹೇಳಿದ್ದಾರೆ.

ಲುಧಿಯಾನದಿಂದ ಆಯ್ಕೆಯಾಗಿರುವ ಸಂಸದ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಅಂತಿಮ ನಿರ್ಧಾರವು ಪಕ್ಷದ ನಾಯಕತ್ವದ ಮೇಲಿದೆ ಮತ್ತು ಈ ಪಾತ್ರವನ್ನು ವಹಿಸಬೇಕೇ ಎಂಬುದನ್ನು ನಿರ್ಧರಿಸುವುದು ರಾಹುಲ್ ಗಾಂಧಿ ಅವರದ್ದಾಗಿದೆ. ರಾಹುಲ್ ಗಾಂಧಿ ಮುಂದೆ ಬಂದು ಎಲ್ಲವನ್ನೂ ನಿಭಾಯಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಆದರೆ ನಾಯಕತ್ವದ ಅಂತಿಮ ನಿರ್ಧಾರ ರಾಹುಲ್ ಗಾಂಧಿ ಅವರೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಬೇಕು. ರಾಹುಲ್ ಗಾಂಧಿ ಮಹಿಳೆಯರು ಮತ್ತು ನಿರುದ್ಯೋಗಿಗಳ ಪರ ಹೋರಾಟ ನಡೆಸುತ್ತಿದ್ದಾರೆ. ಇದು 140 ಕೋಟಿ ಭಾರತೀಯರ ಬೇಡಿಕೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.

ಗುರುದಾಸ್‌ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಸಂಸದ ಸುಖ್‌ಜಿಂದರ್ ಸಿಂಗ್ ರಾಂಧವಾ ಈ ಬಗ್ಗೆ ಮಾತನಾಡಿದ್ದು, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿಗೆ ಪ್ರತ್ಯುತ್ತರ ನೀಡಬಲ್ಲವರು ಮತ್ತು ಆದ್ದರಿಂದ ಅವರು ವಿಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....