Saturday, April 11, 2026
Saturday, April 11, 2026
Home Blog Page 675

Tarikere Police ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಕಳವು ಮಾಡಿದ ಇಬ್ಬರು ಕಳ್ಳರ ಅರೆಸ್ಟ್.₹74 ಲಕ್ಷ ಮೌಲ್ಯದ ಚಿನ್ನಾಭರಣ ವಶ

0

Tarikere Police ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಕೆಲವು ಮನೆಗಳಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ತರೀಕೆರೆ ಪೊಲೀಸರು ಅವರಿಂದ 74 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದ ಈದ್ದಾ ನಗರ ಸೂಳೆಬೈಲು ನಿವಾಸಿ ತೌಸೀಫ್ ಉಲ್ಲಾ ಬಿನ್ ಅಬ್ದುಲ್ ಸಲಾಂ ಮತ್ತು ತುಂಗಾ ನಗರ ಪೊಲೀಸ್ ಠಾಣೆ ಹಿಂಭಾಗದ ನಿವಾಸಿ ಮಹಮ್ಮದ್ ರಿಯಾಜ್ ಬಿನ್ ಮಹಮ್ಮದ್ ಅಲಿ ಬಂಧಿತರು.
ಮೇ 21,22 ಮತ್ತು 23ರಂದು ಆರೋಪಿಗಳು ಲಿಂಗದಹಳ್ಳಿ ಗ್ರಾಮದ ಕೆಲವು ಮನೆಗಳ ಬೀಗ ಒಡೆದು ಚಿನ್ನಾಭರಣ ಕಳವು ಮಾಡಿದ್ದರು. ಲಿಂಗದಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಕುಮಾರ್ ವೈ.ಎಸ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Tarikere Police ಆರೋಪಿಗಳನ್ನು ಪತ್ತೆಮಾಡಿ ದಸ್ತಗಿರಿ ಮಾಡಿದ ಲಿಂಗದಹಳ್ಳಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ಘೋಷಿಸಿದ್ದಾರೆ.

D.V.S evening college ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವೇದಿಕೆಯಿಂದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ ಸಂವಾದ ಯಶಸ್ವಿ

0

D.V.S evening college ಶಿವಮೊಗ್ಗ ನಗರದ ಬಂಟರ – ಭವನದಲ್ಲಿ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಚಾರ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ವಿ.ಎಸ್ ಸಂಜೆ ಕಾಲೇಜು ಪ್ರಾಂಶುಪಾಲರು, ಚಿಂತಕರಾದ ಪ್ರೋ. ಹೆಚ್. ರಾಚಪ್ಪನವರು ವಹಿಸಿದರು.
ಮುಖ್ಯ ಭಾಷಣಕಾರರಾಗಿ ಪುತ್ತೂರು ವಿವೇಕಾನಂದ ಕಾಲೇಜು ಅಧ್ಯಕ್ಷರಾದ ಕಲ್ಲಡ್ಕ .ಡಾ. ಪ್ರಭಾಕರ್ ಭಟ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು..
D.V.S evening college ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಎ ನಾರಾಯಣ ಸ್ವಾಮಿ. ಮಾಜಿ ಉಪ ಕುಲಪತಿಗಳಾದ ಪ್ರೋ. ವಿಷ್ಣುಕಾಂತ್ ಚಟ್ಪಲ್ಲಿ, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ರಾಮು ಕೋಹಳ್ಳಿ ಉಪಸ್ಥಿತರಿದ್ದರು.. ಕಾರ್ಯಕ್ರಮ ನಿರೂಪಣೆಯನ್ನು ಜಿಲ್ಲಾ ಪ್ರಕೋಷ್ಟಗಳ ಸಂಯೋಜಕರಾದ ಹೃಷಿಕೇಶ್ ಪೈಯವರು ನಡೆಸಿ ಕೊಟ್ಟರು

Shivamogga District Police ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗಬೇಡಿ -ಗೋಪಾಲಕೃಷ್ಣ ನಾಯಕ್

0

Shivamogga District Police ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ) ಸಾಗರ, ಲಾಲ್ ಬಹದ್ದೂರ್ ಕಲಾ,ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸಾಗರ ಉಪ ವಿಭಾಗ, ಸಾಗರ ಗ್ರಾಮಂತರ ಪೊಲೀಸ್ ಠಾಣೆ ಇವರ ಸಹಯೋಗದೊಂದಿಗೆ ದಿನಾಂಕ: 26.06.2024ರ ಬುಧವಾರದಂದು ಎಲ್.ಬಿ.ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀ ಗೋಪಾಲಕೃಷ್ಣ ನಾಯ್ಕ್ ಡಿ.ವೈ.ಎಸ್.ಪಿ.ಸಾಗರ ಉಪವಿಭಾಗ,ಸಾಗರ ಇವರು ವಿದ್ಯಾರ್ಥಿಗಳನ್ನು ಕುರಿತು ಇಂದಿನ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವುದರಿಂದ ದೂರವಿರುವುದು ಹಾಗೂ ಸಮಾಜದಲ್ಲಿರುವ ಯುವಜನರಿಗೆ ಈ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳಿದರು.

Shivamogga District Police ಹಾಗೂ ಇನ್ನೋರ್ವ ಅತಿಥಿಯಾಗಿದ್ದ ಶ್ರೀ ಮಹಾಬಲೇಶ್ವರ ನಾಯ್ಕ ಪಿ.ಎಸ್.ಐ ಸಾಗರ ಗ್ರಾಮಂತರ ಪೊಲೀಸ್ ಠಾಣೆ ಇವರು ವಿದ್ಯಾರ್ಥಿಗಳನ್ನು ಕುರಿತು ರಸ್ತೆ ಸುರಕ್ಷತೆ ಮತ್ತು ವಾಹನ ಚಾಲನೆಯ ನಿಯಮ ಪಾಲನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಹೆಚ್.ಎಂ.ಶಿವಕುಮಾರ ಪ್ರಧಾನ ಕಾರ್ಯದರ್ಶಿಗಳು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಾಗರ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸತ್ಯನಾರಾಯಣ ಎಂ.ಆರ್. ಜಂಟಿ ಕಾರ್ಯದರ್ಶಿಗಳು, ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್.ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿರುವ ಎಲ್ಲಾ ಗಣ್ಯರನ್ನು ಶ್ರೀ ಅಶೋಕ ಎಂ. ಎನ್.ಎಸ್.ಎಸ್ ಅಧಿಕಾರಿ ಸ್ವಾಗತಿಸಿದರು, ಲೆಫ್ಟಿನೆಂಟ್ ನೂತನ್ ಏನ್.ಸಿ.ಸಿ ಅಧಿಕಾರಿ ಎಲ್ಲರನ್ನು ವಂದಿಸಿದರು, ಮತ್ತು ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ. ನಿರಂಜನ್ ಮೂರ್ತಿ ಟಿ ನೆರವೇರಿಸಿದರು.

Klive Special Article ಕೆ ಲೈವ್ ವಿಶೇಷ. ಲೇ:ಆರ್.ರಘು.ಪ್ರಶಿಕ್ಷಣಾರ್ಥಿ.ವಾರ್ತಾಇಲಾಖೆ.

0

Klive Special Article ಭಾರತದ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಹೋರಾಟಗಾರರು, ಮಹಾನ್ ನಾಯಕರ ಕುರಿತು ನಾವು ಓದಿದ್ದೇವೆ. ಅನೇಕ ನಾಯಕರು ಬ್ರಿಟಿಷರ ವಿರುದ್ಧದ ಭಾಷಣಗಳ ಮೂಲಕ ಜನರನ್ನು ಒಂದುಗೂಡಿಸುತ್ತಿದ್ದರು. ಇನ್ನೂ ಕೆಲವರು ಕ್ರಾಂತಿಕಾರಿ ಹೋರಾಟಗಳ ಮೂಲಕ, ಶಾಂತಿ ಸಭೆಗಳ ಮೂಲಕ ಹೀಗೆ ಭಿನ್ನ ವಿಭಿನ್ನ ರೀತಿಯಲ್ಲಿ ಹೋರಾಟಕ್ಕೆ ಜನರನ್ನು ಪ್ರೇರೆಪಿಸುವ ಸಂಗತಿಗಳನ್ನು ನಾವು ಕಾಣಬಹುದು.
ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸಿ, ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಮೂಡಿಸುವುದು ಅನಿವಾರ್ಯವಾಗಿದ ಸಂದರ್ಭದಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ. ಬ್ರಿಟಿಷರು ಅವರನ್ನು ಚಟರ್ಜಿ ಎಂದು ಕರೆಯುತ್ತಿದ್ದರು.
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು 1838ರ ಜೂನ್ 27ರಂದು ನೈಹತಿಯಲ್ಲಿರುವ ಕಂಥಾಲಪಾರ ಎಂಬ ಗ್ರಾಮದಲ್ಲಿ ಜನಿಸಿದರು. 1857ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಇಬ್ಬರು ಪದವೀಧರರ ಪೈಕಿ ಅವರು ಒಬ್ಬರಾಗಿದ್ದರು. 1869ರಲ್ಲಿ ಒಂದು ಕಾನೂನು ಪದವಿಯನ್ನೂ ಗಳಿಸಿದರು. ಮುಂದೆ ತಮ್ಮ ತಂದೆಯ ರೀತಿಯಲ್ಲಿಯೇ ಜೆಸ್ಸೋರ್‍ನ ಉಪ-ಜಿಲ್ಲಾಧಿಕಾರಿಯಾಗಿ ನೇಮಿಸಲ್ಪಟ್ಟರು ಓರ್ವ ಉಪ-ನ್ಯಾಯಾಧಿಪತಿಯ ಹುದ್ದೆಗೇರಿದ ಚಟರ್ಜಿಯವರು 1891ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. ಆಡಳಿತ ನಡೆಸುತ್ತಿದ್ದ ಬ್ರಿಟಿಷರೊಂದಿಗೆ ಘರ್ಷಣೆಗೆ ಇಳಿಯಲು ಕಾರಣವಾಗುವಂಥ ಘಟನೆಗಳು ಅವರ ಈ ಸೇವೆಯ ವರ್ಷಗಳಲ್ಲಿ ದಟ್ಟವಾಗಿ ತುಂಬಿಕೊಂಡಿದ್ದವು.
ರಾಮಕೃಷ್ಣ ಪರಹಂಸರ ಸಂಪರ್ಕ:
ಶ್ರೀರಾಮಕೃಷ್ಣರು ಮತ್ತು ಬಂಕಿಮಚಂದ್ರರು ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು ಮತ್ತು ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಯಿಂದ ಗೌರವಿಸುತ್ತಿದ್ದರು. ಒಂದು ದಿನ ಶ್ರೀ ರಾಮಕೃಷ್ಣರು ಬಂಕಿಮರಿಗೆ ಬಂಕಿಮ್ ಎಂದರೇ ಬಾಗಿದ ಎಂದು ಅರ್ಥ ಬರುತ್ತದೆ. ನಿನ್ನನ್ನು ಬಗ್ಗಿಸಿದ್ದು ಯಾವುದು? ಎಂದು ಕೇಳುಯತ್ತಾರೆ. ಅಯ್ಯೋ, ಠಾಕೂರ್, ನನ್ನನ್ನು ಏನು ಬಗ್ಗಿಸಿದೆ ಎಂದು ನಿಮಗೆ ತಿಳಿದಿಲ್ಲವೇ? ಬ್ರಿಟಿಷರ ಬೂಟ್ ನನ್ನನು ಬಾಗಿಸಿದೆ ಎಂದು ಬಂಕಿಮರು ಉತ್ತರಿಸಿದರು. ಶ್ರೀ ರಾಮಕೃಷ್ಣ ಪರಮಹಂಸ ಅವರು ಆಧ್ಯಾತ್ಮಿಕ ಮೇರು ಶಿಖರವಾಗಿದ್ದರು, ಮಹಾನ್ ದಾರ್ಶನಿಕರಾಗಿದ್ದರು. ಅವರು ಮತ್ತು ಬಂಕಿಮರು ಹಲವಾರು ವಿಷಯಗಳನ್ನು ಚೆರ್ಚಿಸುತ್ತಿದ್ದರು.

Klive Special Article ಸ್ವಾಭಿಮಾನದ ಕಿಚ್ಚುಹಚ್ಚಿದ ವಂದೇ ಮಾತರಂ:
ಆನಂದಮಠ ಕಾದಂಬರಿಯಲ್ಲಿ ಬರೆದ ಓ ತಾಯಿ, ಭಾರತಿಯೇ, ನಿನಗೆ ನಮನ’ ಎಂದು ಸಾರುವ ವಂದೇ ಮಾತರಂ ಭಾರತೀಯರಿಗೆ ಪವಿತ್ರ ಗೀತೆಯಂತಿದೆ. ಈ ಗೀತೆಗೆ ರವೀಂದ್ರನಾಥ ಠಾಗೂರರು ಸಂಗೀತ ಸಂಯೋಜಿಸಿರು. ವಂದೇ ಮಾತರಂ ಭಾರತಮಾತೆಯ ಮಾಂತ್ರಿಕ ಮಂತ್ರ-ಅಗ್ನಿಯಾಗಿತ್ತು. ಇದು ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಕೂಗು. ಈ ಹಾಡನ್ನು ಹಾಡುತ್ತಾ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದರು. ಅವರಿಗೆ, ಇದು ಕೇವಲ ಶಬ್ದವಲ್ಲ, ಜೀವಂತ ಶಕ್ತಿ. ಪದಗಳಲ್ಲ ಉರಿಯುತ್ತಿರುವ ಸ್ಫೂರ್ತಿ, ದೇಶಭಕ್ತಿಯ ಈ ಮೂಲದಿಂದ ಸಾವಿರಾರು ಜನರು ಸ್ಫೂರ್ತಿ ಪಡೆದರು.
ಈ ಹಾಡನ್ನು ಹಾಡಿದ್ದಕ್ಕಾಗಿ ಅನೇಕ ಜನರು ಜೈಲಿಗೆ ಹೋಗಬೇಕಾಯಿತು ಮತ್ತು ಅವರೆಲ್ಲರೂ ಸಂತೋಷದಿಂದ ಮತ್ತು ಲವಲವಿಕೆಯಿಂದ ಹೋದರು. ಇದು ಸಾಮಾನ್ಯ ಹಾಡಲ್ಲ. ಬದಲಾಗಿ ಮಂತ್ರಗಳ ಮಂತ್ರ, ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿದ ಬೀಜ ಮಂತ್ರ. ಮಾತೃಭೂಮಿಯನ್ನು ಮಾತೃ-ದೇವತೆಯೊಂದಿಗೆ ಗುರುತಿಸುವ ಮೂಲಕ ರಾಷ್ಟ್ರೀಯತೆಯನ್ನು ಧರ್ಮದ ಮಟ್ಟಕ್ಕೆ ಏರಿಸಿದರು.
ಬಂಕಿಮ್ ಅವರ ಸಾಹಿತ್ಯವನ್ನು 1882 ರಲ್ಲಿ ರಾಷ್ಟ್ರೀಯತೆ ಸ್ವತಃ ಅಭಿವೃದ್ಧಿಯ ಅತ್ಯಂತ ಆರಂಭಿಕ ಹಂತದಲ್ಲಿದ್ದಾಗ ಬರೆಯಲಾಯಿತು. ವಂದೇ ಮಾತರಂ 1937 ರಿಂದ ಭಾರತದ ರಾಷ್ಟ್ರೀಯ ಗೀತೆಯಾಗಿದೆ.
ಭಾರತದ ಸಾಹಿತ್ಯಿಕ ಪುನರುದಯದಲ್ಲಿನ ಓರ್ವ ಪ್ರಮುಖ ವ್ಯಕ್ತಿಯಾಗಿ ಚಟರ್ಜಿಯವರನ್ನು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಕಾದಂಬರಿಗಳು, ಪ್ರಬಂಧಗಳು ಮತ್ತು ವ್ಯಾಖ್ಯಾನಗಳನ್ನು ಒಳಗೊಂಡಂತಿರುವ ಅವರ ಕೆಲವೊಂದು ಬರಹಗಳು ಸಾಂಪ್ರದಾಯಿಕವಾದ ಛಂದೋಬದ್ಧ ಪದ್ಯ-ಉದ್ದೇಶಿತ ಭಾರತೀಯ ಬರಹಗಳಿಗಿಂತ ವಿಭಿನ್ನವಾದ ಒಂದು ಹೊರಳುದಾರಿಯನ್ನು ತುಳಿದವು, ಮತ್ತು ಭಾರತದ ಉದ್ದಗಲಕ್ಕೂ ಇರುವ ಲೇಖಕರಿಗೆ ಸಂಬಂಧಿಸಿದಂತೆ ಒಂದು ಪ್ರೇರಣೆಯನ್ನು ನೀಡಿದೆ.
ಕಾದಂಬರಿಗಳು:
ದುರ್ಗೇಶ್‍ನಂದಿನಿ, ಕಪಾಲಕುಂಡಲ, ಮೃಣಾಲಿನಿ, ವಿಷಬೃಕ್ಷ , ಇಂದಿರಾ, ಜುಗಲನ್‍ಗುರಿಯಾ, ರಾಧಾರಾಣಿ, ಚಂದ್ರಶೇಖರ್, ಕಮಲಾಕಾಂತೆರ್ ದಪ್ತರ್ , ರಜನಿ, ಕೃμÁ್ಣಕಾಂತೆರ್ ಉಯಿಲ್, ರಾಜಸಿಂಹ, ಆನಂದಮಠ, ದೇವಿ ಚೌಧುರಾನ, ಕಮಲಾಕಾಂ, ಸೀತಾರಾಮ್, ಮೂಚಿರಾಮ್ ಗುರೆರ್ ಜೀವನ್‍ಚರಿತಾ ಮುಂತಾದವು ಬಂಕಿಮ ಚಂದ್ರರ ಕಾದಂಬರಿಗಳು.
ಬಂಕಿಮ ಚಂದ್ರ ಧಾರ್ಮಿಕ ವ್ಯಾಖ್ಯಾನಗಳಲ್ಲಿ ಕೃಷ್ಣ ಚರಿತ್ರ, ಧರ್ಮತತ್ವ, ದೇವತತ್ತ್ವ, ಶ್ರೀಮದ್ಭಗವದ್ ಗೀತಾ ಭಗವದ್ಗೀತಾದ ಮೇಲಿನ ಒಂದು ವ್ಯಾಖ್ಯಾನ ಪ್ರಸಿದ್ಧವೆನಿಸಿವೆ. ಲಲಿತಾ ಓ ಮಾನಸ್ ಅವರ ಕವನ ಸಂಗ್ರಹ. ಲೋಕ್ ರಹಸ್ಯ, ಬಿಜ್ಞಾನ್ ರಹಸ್ಯ, ಬಿಚಿತ್ರ ಪ್ರಬಂಧ , ಸಮ್ಯಾ ಮುಂತಾದವು ಪ್ರಬಂಧ ಸಂಗ್ರಹಗಳು. ಬಂಕಿಮ ಚಂದ್ರರ ಈ ಎಲ್ಲ ಕೃತಿಗಳೂ ಇಂಗ್ಲಿμï ಭಾμÉ ಸೇರಿದಂತೆ ಇತರ ಭಾμÉಗಳಲ್ಲಿ ಮೂಡಿಬಂದಿವೆ. ಬಂಕಿಮ ಚಂದ್ರರು 1894ರ ಏಪ್ರಿಲ್ 8 ರಂದು ವಿಧಿವಶರಾದರು.

• ರಘು ಆರ್
ಅಪ್ರೆಂಟಿಸ್, ವಾರ್ತಾ ಇಲಾಖೆ

Sacred Heart High School ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈಯುವಲ್ಲಿ ದೈಹಿಕ ಶಿಕ್ಷಕರ ಶ್ರಮ ಸ್ಮರಣೀಯ-ಜಿ.ಸುಮತಿ

0

Sacred Heart High School ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರ ಹಿಂದೆ ದೈಹಿಕ ಶಿಕ್ಷಕರ ಶ್ರಮ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಸುಮತಿ ಅವರು ತಿಳಿಸಿದ್ದರು.
ಸೆಕ್ರೇಡ್ ಹಾರ್ಟ್ ಫ್ರೌಢಶಾಲಾ ಸಭಾಂಗಣದಲ್ಲಿ ಉಪ ನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ಇವರ ವತಿಯಿಂದ 2023-24 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 2023-24 ನೇ ಸಾಲಿನಲ್ಲಿ ಕ್ರೀಡಾಕೂಟ ನಡೆಸಿದ ಸಂಚಾಲಕರಿಗೆ ಅಭಿನಂದನೆ ಮತ್ತು 2024-25 ನೇ ಸಾಲಿನಲ್ಲಿ ಕ್ರೀಡಾಕೂಟ ನಡೆಸುವ ಸಂಚಾಲಕರಿಗೆ ಆಹ್ವಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು.
ಕ್ರೀಡಾಕೂಟ ಎಂಬುದು ದೈಹಿಕ ಶಿಕ್ಷಕರಿಗೆ ಒಂದು ರೀತಿಯಲ್ಲಿ ಅತ್ಯಂತ ಕಠಿಣ ಕೆಲಸವಾಗಿದೆ. ಅದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇದು ಒಂದು ಉತ್ತಮ ಕಾರ್ಯವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಶಾಲಾ ಕಾಲೇಜುಗಳ ಕ್ರೀಡಾಕೂಟ ಪ್ರಾಥಮಿಕ ಮೆಟ್ಟಿಲು ಆಗಲಿದೆ. ಎಲ್ಲಾ ದೈಹಿಕ ಶಿಕ್ಷಕರು ಕ್ರೀಡಾಕೂಟಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ ಮಕ್ಕಳಿಗೆ ಉತ್ತಮವಾದ ತರಬೇತಿಯನ್ನು ನೀಡುವ ಮೂಲಕ ತಾಲೂಕಿನಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.
ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕರಾದ ನಿರಂಜನಮೂರ್ತಿ ಅವರು ಮಾತನಾಡಿ ವಲಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಯಾರಿ ಮಾಡಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ದೈಹಿಕ ಶಿಕ್ಷಕರ ಶ್ರಮ ಸ್ಮರಣೀಯವಾದದ್ದು. ಈ ನಿಟ್ಟಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಜೊತೆಗೆ ದೈಹಿಕ ಶಿಕ್ಷಕರಿಗೂ ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಕ್ರೀಡೆಯಲ್ಲಿ ಮಾತ್ರವಲ್ಲ ಜೀವನದಲ್ಲೂ ಇರಬೇಕು. ಆಗ ಮಾತ್ರ ಜೀವನದಲ್ಲಿ ಉತ್ತಮವಾದ ಸಾಧಕನಾಗಲು ಸಾಧ್ಯ ಎಂದರು.
ಈ ವೇಳೆ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಾದ ಇರಾನ್ ಶೇಖ್, ಶಶಾಂಕ್, ಶ್ರೀನಿವಾಸ್, ಮೊಹಮ್ಮದ್ ಬಿಲಾಲ್, ನಿಖಿತ, ಸೈಯದ್ ಪೈಜಲ್, ಶಿಥಿಲ್ ಸೇರಿದಂತೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ದೈಹಿಕ ಶಿಕ್ಷಕರಿಗೂ ಸಹ ಸನ್ಮಾನಿಸಲಾಯಿತು.
Sacred Heart High School ಈ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ಸಂಯೋಜಕರಾದ ಬಸವರಾಜಪ್ಪ, ಮೋಹನ್, ಸೈಯದ್ ಮುಸ್ತಪೀಜ್ ಉಲ್ಲಾ ಹಸನ್ ಸಾಬ್ ಹಾಗೂ ಸೇಕ್ರೆಡ್ ಹಾರ್ಟ್ ಶಾಲೆಯ ಮುಖ್ಯಶಿಕ್ಷಕ ಹ್ಯೂಬರ್ಟ್ ಮಿರಾಂಡ, ದೈಹಿಕ ಶಿಕ್ಷಕ ಸಂಘದ ತಾಲೂಕ್ ಅಧ್ಯಕ್ಷ ಲಕ್ಷ್ಮಣ್, ಸಂಘದ ಪದಾಧಿಕಾರಿಗಳಾದ ರತನ್ ಸಿಂಗ್, ವೇದಾವತಿ, ಗೀತಾ ಸುನೀತ ಹಾಗೂ ವಿವಿಧ ಶಾಲೆಯ ದೈಹಿಕ ಶಿಕ್ಷಕರು, ಕ್ರೀಡಾ ಸಾಧಕರು ಉಪಸ್ಥಿತರಿದ್ದರು.

Veerabhadreshwara Temple ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರಿಂದ ಕಡ್ತೂರು ಶ್ರೀವೀರಭದ್ರೇಶ್ವರ ದೇಗುಲಕ್ಕೆ ಅನುದಾನ ಮಂಜೂರು

0

Veerabhadreshwara Temple ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಕೇಸಲೂರು ಗ್ರಾಮದ ಒಂದು ಸಣ್ಣ ಹಳ್ಳಿಯಾದ ಕಡ್ತೂರಿನ ವೀರಭದ್ರೇಶ್ವರ ದೇವಸ್ಥಾನಕ್ಕೆ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ರವರು ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ಅನುದಾನ ನೀಡಲು ಕೋರಿದ್ದು, ಮುಜರಾಯಿ ಇಲಾಖೆಯಿಂದ ರೂ.5 ಲಕ್ಷ ಸಹಾಯಧನ ಮಂಜೂರಾಗಿರುತ್ತದೆ.

ಆರತಿ ಕೃಷ್ಣರವರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕಾಗಿ ಸರ್ಕಾರದ ವತಿಯಿಂದ ಅನುದಾನ ಕೋರಿರುತ್ತಾರೆ. ಮಂಜೂರಾಗದ ಕಾರಣ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಜೀರ್ಣೋದ್ದಾರ ಕಾರ್ಯ ಮಾಡಿರುತ್ತಾರೆ.

Veerabhadreshwara Temple ಮುಂದುವರೆದು ದೇವಸ್ಥಾನದ ಆವರಣಕ್ಕೆ ಇಂಟರ್‍ಲಾಕ್, ಟೈಲ್‌ಗಳ ಅವಶ್ಯಕತೆ ಇದ್ದು ಅಂದಾಜು
ರೂ.5 ಲಕ್ಷ ಸಹಾಯ ಧನವನ್ನು ಸರ್ಕಾರದ ವತಿಯಿಂದ ನೀಡಲು ಉಪಾಧ್ಯಕ್ಷರನ್ನು ಕೋರಿರುತ್ತಾರೆ. ಕೋರಿಕೆಗೆ ಸ್ಪಂದಿಸಿದ ಡಾ.ಆರತಿ ಕೃಷ್ಣರವರು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಇವರಿಗೆ ಸದರಿ ಅನುದಾನ ನೀಡಲು ಕೋರಿದ್ದು ಮುಜರಾಯಿ ಇಲಾಖೆ ವತಿಯಿಂದ ರೂ. 5 ಲಕ್ಷಗಳನ್ನು ಮಂಜೂರು ಮಾಡಿರುತ್ತಾರೆ, ಮತ್ತು ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗುವುದು ಎಂದು ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Rahul Gandhi ಸಂಸದರಾಗುತ್ತಿದ್ದಂತೇ ರಾಹುಲ್ ಗೆ ಬೆಂಬಿಡದಕೋರ್ಟ್ ಸಮನ್ಸ್

0

Rahul Gandhi ಲೋಕಸಭೆಗೆ ನೂತನವಾಗಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಸದ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಕೋರ್ಟ್ ಶಾಕ್ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಇದೇ ಜು.2ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಉತ್ತರ ಪ್ರದೇಶದ ಸಂಸದ-ಶಾಸಕರ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಮಾನಹಾನಿಕರ ಹೇಳಿಕೆಗಳನ್ನ ನೀಡಿದ್ದಾರೆ ಎಂದು ಆಪಾದಿಸಿ ಬಿಜೆಪಿಯ ನಾಯಕ ವಿಜಯ್ ಮಿಶ್ರಾ ಎಂಬುವವರು 2018ರಲ್ಲಿ ಕೇಸ್ ದಾಖಲಿಸಿದ್ದರು.

Rahul Gandhi ರಾಮ್ ಪ್ರತಾಪ್ ಎಂಬುವವರು ತಮ್ಮನ್ನು ಈ ಪ್ರಕರಣದಲ್ಲಿ ಭಾಗಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದರು ಎಂದು ದೂರಿನ ವಕೀಲ ಸಂತೋಷ್ ಕುಮಾರ್ ಪಾಂಡೆ ಹೇಳಿದ್ದಾರೆ.

Thirtahalli Police ಹೊಸನಗರ ತಾಲ್ಲೂಕಿನ ಯಡೂರು ಬಳಿ ಕಾರು ಪಲ್ಟಿ- ಓರ್ವನ ಸಾವು, ಈರ್ವರಿಗೆ ಗಂಭೀರ ಗಾಯ

0

Thirtahalli Police ಹೊಸನಗರ ತಾಲ್ಲೂಕು ಯಡೂರು ಸಮೀಪ ನಿನ್ನೆ ಅಪಘಾತವೊಂದು ಸಂಭವಿಸಿದೆ. ಯಡೂರು ಸಮೀಪ ಮತ್ತಿಗ ಎಂಬ ಗ್ರಾಮದ ಬಳಿಯಲ್ಲಿ ಮೀನು ಹಿಡಿಯಲು ಹೋಗಿ ವಾಪಾಸ್ ಬರುವಾಗ ಕಾರೊಂದು ಅಪ್‌ಸೆಟ್‌ ಆಗಿ ಓರ್ವ ಸಾವನ್ನಪ್ಪಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ.

ಅತಿಶಯ (23) ವರ್ಷ ಮೃತಪಟ್ಟ ಯುವಕ ತೀರ್ಥಹಳ್ಳಿಯಿಂದ ಐವರು ಕಾರಿನಲ್ಲಿ ತೆರಳಿ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿದು ವಾಪಸ್‌ ಬರುವಾಗ ಕಾರು ಪಲ್ಟಿಯಾಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

Thirtahalli Police ಅವರನ್ನ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿ ಆಗದೇ ಓರ್ವ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Police ನ್ಯಾಯಾಂಗ ವ್ಯವಸ್ಥೆ ವಿರುದ್ಧ ಎಸ್ ಐ ಹೇಳಿಕೆ ವೈರಲ್: ವಿಚಾರಣೆಗೆ ಪೂರ್ವ ವಲಯ ಐಜಿಪಿಯಿಂದ ನೋಟೀಸ್

0

Shivamogga Police ದುಡ್ಡು ಕೊಟ್ಟರೇ ಜಡ್ಜ್ ಜಾಮೀನು ನೀಡುತ್ತಾರೆ ಎಂಬ ಹೇಳಿಕೆ ನೀಡಿದ ಇನ್ಸ್‌ಪೆಕ್ಟರ್ ಚಂದ್ರಕಲಾ ವಿರುದ್ಧ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ.

ವಿನೋಬ ನಗರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಕಲಾ ಅವರು ಲಕ್ಷಗಟ್ಟಲೆ ದುಡ್ಡು ಕೊಟ್ಟರೆ ಜಡ್ಜ್ ಕೂಡ ಬೇಲ್ ನೀಡುತ್ತಾರೆ ಅಂತ ಫೋನಿನಲ್ಲಿ ಮಾತಾಡಿರೋ ಆಡಿಯೋವೊಂದು ವೈರಲ್ ಆಗಿತ್ತು. ಅಲ್ಲದೇ ಈ ಇಬ್ಬರ ಆಡಿಯೋ ನ್ಯಾಯಾಂಗ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಅಡಕೆ ಮಂಡಿ ಮಾಲೀಕ‌ ಮಂಜುನಾಥ ಗೌಡ ಎಂಬುವವರ ಜೊತೆ ಇನ್ಸ್‌ಪೆಕ್ಟರ್ ಚಂದ್ರಕಲಾ ಮಾತನಾಡುವ ಸಂಭಾಷಣೆ ವೈರಲ್ ಆದ ಬಳಿಕ ಅವರನ್ನು ಪೂರ್ವ ವಲಯ ಐಜಿಪಿ ಡಾ.ತ್ಯಾಗರಾಜನ್ ಅವರು ವಿಚಾರಣೆಗೆ ಬರುವಂತೆ ಆದೇಶಿಸಿದ್ದಾರೆ.

ಮಂಜುನಾಥ ಗೌಡ ಎಂಬುವವರು ತಮ್ಮ ಮಂಡಿಯಲ್ಲಿ ನಡೆದಿದ್ದ ಹಣದ ವಂಚನೆ ಕುರಿತು ಠಾಣೆಗೆ ದೂರು ನೀಡಿದ್ದರು. ಜೊತೆಗೆ ವಂಚಕರು ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಹೇಳಿದ್ದರು.
ಈ ವೇಳೆ ವಿನೋಬ ನಗರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಕಲಾ ಲಕ್ಷಗಟ್ಟಲೆ ದುಡ್ಡು ಕೊಟ್ಟರೆ ಜಡ್ಜ್ ಸಹ ಬೇಲ್ ನೀಡುತ್ತಾರೆ ಅಂತ ಹೇಳಿದ್ದರು.

Shivamogga Police ಇನ್ಸ್‌ಪೆಕ್ಟರ್ ಚಂದ್ರಕಲಾ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು, ಎಸ್ಪಿಯ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಇಲಾಖೆ ಇನ್ಸ್‌ಪೆಕ್ಟರ್ ಚಂದ್ರಕಲಾಗೆ ಶೋ ಕಾಸ್ ನೋಟಿಸ್ ನೀಡಿದ್ದಾರೆ.

ಇನ್ನು, ಐಜಿಪಿ ತ್ಯಾಗರಾಜನ್ ಅವರು ಪತ್ರ ತಲುಪಿದ 7 ದಿನದೊಳಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಈ ಕೇಸ್ ಸಂಬಂಧ ವಿಚಾರಣಾಧಿಕಾರಿಯಾಗಿ ಶಿವಮೊಗ್ಗ ಉಪ ವಿಭಾಗದ 1 ಡಿಎಸ್ಪಿಯನ್ನು ನೇಮಕ ಮಾಡಲಾಗಿದೆ.

Kateel Ashok Pai Memorial College ವಿದ್ಯಾರ್ಥಿಗಳು ಮಾದಕ ವಸ್ತು ವ್ಯಸನವನ್ನ ತಡೆಗಟ್ಟುವ ಹರಿಕಾರರಾಗಬೇಕು- ನ್ಯಾ. ಎಂ.ಎಸ್.ಸಂತೋಷ್

0

Kateel Ashok Pai Memorial College ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸುರಭಿ ಮಹಿಳಾ ಮಂಡಳಿ ಹಾಗೂ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಹಾಗೂ ಸಾಗಣೆ ವಿರೋಧಿ ದಿನದ ಪ್ರಯುಕ್ತ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಗಾರವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಶ್ರೀ ಸಂತೋಷ್.ಎಂ.ಎಸ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

“ಇಂದು ಜಗತ್ತಿನಾದ್ಯಂತ ಮಾದಕ ವಸ್ತು ವ್ಯಸನವು ಪಿಡುಗಾಗಿ ಯುವ ಜನರನ್ನು ಕಾಡುತ್ತಿದೆ, ಇದನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಬದಲಾವಣೆಯ ಹರಿಕಾರರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಾವುದೇ ಮಾದಕ ವಸ್ತುಗಳಿಂದ ದೂರವಿರುವುದಲ್ಲದೇ ತಮ್ಮ ಸಮವಯಸ್ಕರನ್ನು ವ್ಯಸನ ಮುಕ್ತವಾಗಿಡಲು ಪ್ರೇರೇಪಿಸಬೇಕು” ಎಂದು ತಿಳಿಸಿದರು.

ಇದರೊಂದಿಗೆ “ಯಾವುದೇ ಚಟವಿರುವ ವ್ಯಕ್ತಿ ಇನ್ನೊಬ್ಬರು ಅದನ್ನೇ ಪಾಲಿಸುವಂತೆ ಒತ್ತಡ ಹೇರಬಾರದು” ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀ ಜಿ.ಕೆ.ಮಿಥುನ್ ಕುಮಾರ್ ರವರು ವಿದ್ಯಾರ್ಥಿಗಳಿಗೆ “ಎಲ್ಲಿಯೇ ಮಾದಕ ವಸ್ತುಗಳ ಅಕ್ರಮ ಮಾರಾಟ, ಸಾಗಣೆ, ಬಳಕೆಯು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಲೇಬೇಕು” ಎಂದು ಸೂಚಿಸಿದರು. “ಕೇವಲ 20 ದಿನಗಳಲ್ಲಿ 61 ಕಡೆಗಳಲ್ಲಿ ಅಕ್ರಮ ಮಾದಕ ವಸ್ತುಗಳು ಜಿಲ್ಲೆಯಾದ್ಯಂತ ಪತ್ತೆಯಾಗಿದೆ” ಎಂದು ತಿಳಿಸಿದರು.

ದಿಕ್ಸೂಚಿ ಭಾಷಣವನ್ನು ಮಾಡಿದ ಮಾನಸ ಸಂಸ್ಥೆಯ ಡಾ.ರಾಜೇಂದ್ರ ಚೆನ್ನಿಯವರು “ಮಾದಕ ವಸ್ತು ಬಳಕೆ ಮತ್ತು ಮಾರಾಟವನ್ನು ತಡೆಗಟ್ಟುವುದು ಹಾಗೂ ವ್ಯಸನಿಗಳನ್ನು ಅವರ ಕುಟುಂಬದವರನ್ನು ಕಳಂಕ ರಹಿತವಾಗಿ ಮುಖ್ಯ ವಾಹಿನಿಯಲ್ಲಿರುವಂತೆ ಪರಿವರ್ತಿಸುವುದು ಮಹತ್ವದ ಜವಾಬ್ದಾರಿ” ಎಂದು ತಿಳಿಸಿದರು. ಅವರು ಈ ವರ್ಷದ ಘೋಷವಾಕ್ಯ “ಸ್ಪಷ್ಟ ಸಾಕ್ಷಿಯಿದೆ: ತಡೆಗಟ್ಟುವುದಕ್ಕಾಗಿ ಹೂಡಿಕೆಯನ್ನು ಮಾಡೋಣ” ಎಂಬುದನ್ನು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೃಷ್ಣಪ್ಪ, ವಿಕಲಚೇತನರ ಸಬಲೀಕರಣ ಇಲಾಖೆಯ ಶ್ರೀಮತಿ ಶಶಿರೇಖಾ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ.ಎ.ಪೈ, ಸುರಭಿ ಮಹಿಳಾ ಮಂಡಳಿಯ ಯೋಜನಾ ನಿರ್ದೇಶಕರಾದ ಶ್ರೀಮತಿ ಲತಾ ಮತ್ತು ಶ್ರೀಮತಿ ರೇಖಾ, ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.

Kateel Ashok Pai Memorial College ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ಕಾರ್ಯಾಗಾರದಲ್ಲಿ ಸುರಭಿ ವ್ಯಸನ ಮುಕ್ತ ಕೇಂದ್ರದಿಂದ ವ್ಯಸನಮುಕ್ತರಾಗಿ ಈಗ ಸಮಾಜದಲ್ಲಿ ಹಲವರನ್ನು ವ್ಯಸನ ಮುಕ್ತರಾಗಿಸಲು ಸ್ವಯಂಸೇವೆಯನ್ನು ನೀಡುತ್ತಿರುವ ಶ್ರೀ ಮಂಜುನಾಥ್, ಸತೀಶ್, ದೇವುರವರನ್ನು ಸನ್ಮಾನಿಸಲಾಯಿತು. ಅವರು ಅವರ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಕು.ವಿದ್ಯಾ ನಿರೂಪಿಸಿದರು, ಕಾಲೇಜಿನ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶ್ರೀಮತಿ ರೇಖಾ ಸ್ವಾಗತಿಸಿ, ಶ್ರೀಮತಿ ಲತಾ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀ ಮಂಜುನಾಥ ಸ್ವಾಮಿ ವಂದಿಸಿದರು.