Saturday, April 11, 2026
Saturday, April 11, 2026
Home Blog Page 674

District Health and Family welfare ಡೆಂಗ್ಯು ನಿಯಂತ್ರಣದಲ್ಲಿ ನಿರ್ಲ್ಯಕ್ಷ ತೋರದೇ ಒಗ್ಗೂಡಿ‌ ಕೆಲಸ‌ ಮಾಡೋಣ- ಡಾ.ಕೆ.ಎಸ್.ನಟರಾಜ್

0

District Health and Family welfare ಡೆಂಗ್ಯೂ ಜ್ವರವು ಮಾರಕ ಖಾಯಿಲೆಯಾಗಿದ್ದು ಇದರಿಂದ ಜೀವಹಾನಿ ಸಹ ಸಂಭವಿಸಬಹುದಾದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲರೂ ಸೇರಿ ನಿಯಂತ್ರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ನಟರಾಜ್ ಕೆ.ಎಸ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಯೋಗದೂಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂ.27 ರಂದು ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಡೆಂಗ್ಯೂ ಕುರಿತಾದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಯಾವುದೆ ಖಾಯಿಲೆ ಬಂದರೆ ಅದು ಆರೋಗ್ಯ ಇಲಾಖೆಗೆ ಮಾತ್ರ ಸಂಬಂಧ ಪಟ್ಟಿರುವುದು ಎಂಬ ಮನೋಭಾವ ಬೆಳೆದಿದೆ. ಆದರೆ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ದಂತಹ ಸೋಂಕಿನ ವಿರುದ್ದ ಎಲ್ಲರೂ ಸೇರಿ ಹೋರಾಟ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ಡೆಂಗ್ಯು ನಿಯಂತ್ರಣದಲ್ಲಿ ನಮ್ಮ ಮುಖ್ಯ ಉದ್ದೇಶ ಲಾರ್ವಾಗಳ ನಿರ್ಮೂಲನೆ ಮಾಡುವುದಾಗಿದೆ. ಇದರಲ್ಲಿ ಶಿಕ್ಷಕರ ಪಾತ ಬಹ್ರು ಮುಖ್ಯವಾಗಿದ್ದು, ನೀವು ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡುದಪ್ಪ ಕಸಬಿ ಮಾತನಾಡಿ ಸೊಳ್ಳೆ ಉತ್ಪಾದನೆ ನಿಯಂತ್ರಣ ಮಾಡಿದರೆ ಮಾತ್ರ ಡೆಂಗ್ಯೂ ಕಡಿಮೆ ಮಾಡಬಹುದು. ಸೊಳ್ಳೆಗಳು ಕೇವಲ ಚರಂಡಿಯಿಂದ ಮಾತ್ರ ಬರುವುದಿಲ್ಲ ಮನೆಯ ಒಳಗಡೆ ನಿಂತ ಸ್ವಚ್ಚ ನೀರಿನಲ್ಲಿಯೂ ಉತ್ಪಾದನೆ ಆಗುತ್ತದೆ. ಪಾಟ್, ನೀರಿನಲ್ಲಿ ಬೆಳೆಯುವ ಗಿಡಗಳಲ್ಲಿ ಕೂಡ ಸೊಳ್ಳೆ ಉತ್ಪತ್ತಿಯಾಗುತ್ತವೆ. ಬ್ಯಾಟರಿ ಬೆಳಕಿನ ಮೂಲಕ ಲಾರ್ವಾಗಳ ಓಡಾಟವನ್ನು ನೋಡಬಹುದು. ಸೊಳ್ಳೆಯು 500 ಮೀ ಓಡಾಡುವುದರಿಂದ ನಿಮ್ಮ ಸುತ್ತ ಮುತ್ತಲಿನ ಪ್ರದೇಶದಿಂದ ಬರುವ ಸಾಧ್ಯತೆ ಇರುತ್ತದೆ.

ಅದಕ್ಕಾಗಿ ವಾರಕೊಮ್ಮೆ ಮನೆಯ ಸುತ್ತಮುತ್ತ ಸ್ವಚ್ಛತೆ ಮಾಡಿ, ಪಕ್ಕದವರಿಗೂ ಮಾಹಿತಿ ನೀಡಿ ಎಂದರು. ಮಕ್ಕಳು ಶಾಲೆಯಲ್ಲಿ ಹೆಚ್ಚು ಕಾಲ ಕಳೆಯುವ ಕಾರಣ ಶಾಲೆಯ ಸುತ್ತ ಮುತ್ತ ಮತ್ತು ನೀರಿನ ಮೂಲಗಳನ್ನು ಸ್ವಚ್ಛ ಮಾಡಬೇಕು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಿ ಸುರಕ್ಷತಾ ಕ್ರಮವಹಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಧಿಕಾರಿ ಡಾ. ಚಂದ್ರಶೇಖರ್ ಜಿ.ಬಿ ಮಾತನಾಡಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಜೂನ್ ನಂತರದಲ್ಲಿ ಇದು ಹೆಚ್ಚಾಗುತ್ತಾ ಹೋಗುತ್ತದೆ. ಇಲಾಖೆಗಳ ಸಹಕಾರದಿಂದ ಇದನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಕ್ರಮವಹಿಸಿ ಕೆಲಸ ಮಾಡಬೇಕು. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಇದರ ಅರಿವು ತುಂಬಾ ಮುಖ್ಯವಾಗಿತ್ತದೆ. ಡೆಂಗ್ಯೂ, ಮಲೆರಿಯಾ, ಚಿಕುನ್‍ಗುನ್ಯ ಖಾಯಿಲೆಗಳು ಸೊಳ್ಳೆಯಿಂದಲೇ ಬರುವುದರಿಂದ ಸೊಳ್ಳೆ ನಿಯಂತ್ರಣ ಮಾಡಲೇಬೇಕಿದೆ. ನಿಮ್ಮ ಮನೆಯ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಟೈರ್‍ಗಳು, ಒಡೆದ ಮಡಕೆಗಳು, ನೀರಿನ ತೊಟ್ಟಿಗಳು ಮತ್ತು ವ್ಯವಸಾಯದ ಜಮೀನಿನಲ್ಲಿನ ತ್ಯಾಜ್ಯದಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುವಿಕೆ ಹೆಚ್ಚಿರುತ್ತದೆ.

ಆದ್ದರಿಂದ ಅವನ್ನು ಸ್ವಚ್ಚಗೊಳಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ಜಾಗೃತಿ
ಮೂಡಿಸಬೇಕು ಎಂದರು.

District Health and Family welfare ಕಾರ್ಯಾಗಾರದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಹಸೇನ್ ಸಾಬ್ ಹೆಚ್.ಕೆ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕಿರಣ್ ಎಸ್. ಕೆ, ಪ್ರೌಢಶಾಲಾ ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದರರು ಹಾಜರಿದ್ದರು.

Shivamogga Municipal Corporation ಗೋಪಾಲಗೌಡ ಬಡಾವಣೆಯಲ್ಲಿ ಒತ್ತುವರಿಯಾಗಿದ್ದ ಪಾಲಿಕೆಯ ಜಾಗ ತೆರವು

0

Shivamogga Municipal Corporation ಗೋಪಾಲಗೌಡ ಬಡಾವಣೆಯಲ್ಲಿ ಗೋಪಾಳ ಸರ್ವೆ ನಂ 31/3 ರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಜಾಗವನ್ನು ಅಕ್ರಮವಾಗಿ ಅಕ್ರಮಿಸಿ ತಂತಿ ಬೇಲಿ ಹಾಕಿದ ಜಾಗವನ್ನು ಪಾಲಿಕೆ ಅಧಿಕಾರಿಗಳ ತಂಡ ಸ್ಥಳಿಯರ ದೂರಿನ ಹಿನ್ನೆಲೆಯಲ್ಲಿ ಜೆಸಿಬಿ ತಂದು ತೆರವುಗೊಳಿಸಿದರು.
ಪಾಲಿಕೆಯ ಈ ಜಾಗ ಸುಮಾರು 15 ಎಕರೆಗೂ ಹೆಚ್ಚು ಇದ್ದು, ಕೆಲವು ಜಾಗವನ್ನು ಮಂಡಕ್ಕಿ ಬಟ್ಟಿಯವರಿಗೆ ವಿತರಣೆ ಮಾಡಲಾಗಿತ್ತು. ಉಳಿದ ಜಾಗ ಪಾಲಿಕೆಯ ಕಸದ ವಾಹನಗಳನ್ನು ನಿಲ್ಲಿಸಲು ಕಾಂಪೌಂಡ್ ಹಾಕಿ ನಿರ್ಮಾಣ ಮಾಡಲಾಗಿದೆ. ಕಾಂಪೌಂಡ್ ಪಕ್ಕದ ಜಾಗಕ್ಕೆ ಪಾಲಿಕೆಯವರು ಬೇಲಿ ಹಾಕಿ ಬಂದೋಬಸ್ತ್ ಮಾಡದೇ ಇರುವ ಕಾರಣ ಕೆಲವರು ಬೇಲಿ ಹಾಕಿ ನಕಲಿ ಖಾತೆ ಮಾಡಿಸಿಕೊಂಡು ಮಾರಾಟ ಮಾಡಲು ಯತ್ನಿಸಿ ದಿಢೀರ್ ಬೇಲಿ ಹಾಕಿದ್ದರು.
Shivamogga Municipal Corporation ಈ ಜಾಗ ಕೋಟಿಗೂ ಹೆಚ್ಚು ಬೆಲೆ ಬಾಳುವುದರಿಂದ ಕೆಲವು ಭೂಗಳ್ಳ ರಾಜಕಾರಣಿಗಳ ಕಣ್ಣು ಅದರ ಮೇಲೆ ಬಿದ್ದು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು.
ಸ್ಥಳಿಯ ಮತ್ತು ಅಕ್ಕಪಕ್ಕದ ನಿವಾಸಿಗಳು ಇದನ್ನು ನೋಡಿ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿ ಪಾಲಿಕೆ ಜಾಗವನ್ನು ಆಕ್ರಮಿಸಿದ ಜಾಗವನ್ನು ಕೂಡಲೇ ತೆರವುಗೊಳಿಸಲು ಒತ್ತಾಯಿಸಿದ್ದರು. ಜಿಲ್ಲಾಧಿಕಾರಿಗೆ ಬುಧವಾರ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳ ತಂಡ ಇಂಜಿನಿಯರ್ ಜಗದೀಶ್, ವೇಣುಗೋಪಾಲ್, ಪಾಲಿಕೆ ಸರ್ವೆಯರ್ ಹಾಗೂ ರೆವಿನ್ಯೂ ಆಫೀಸರ್ ವಿಜಯಲಕ್ಷ್ಮಿ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನಿರ್ದೆಶನದ ಮೇರೆಗೆ ಜೆಸಿಬಿ ತಂದು ಜಾಗವನ್ನು ಕ್ಲಿಯರ್ ಮಾಡಿದ್ದಾರೆ. ಬೇಲಿಕಂಬಗಳನ್ನು ಕಿತ್ತು ಸಾಗಿಸಿದ್ದಾರೆ.

Tumkur Police ತುಮಕೂರು ಜಿಲ್ಲೆಯಲ್ಲಿ ಮಗು ಕಳ್ಳಸಾಗಣೆ ಜಾಲ ಪತ್ತೆ.ಪೊಲೀಸರ ಶೋಧಕಾರ್ಯ

0

Tumkur Police ಊರೂರು ತಿರುಗಿ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದ ಅಲೆಮಾರಿ ಕುಟುಂಬದ ದಂಪತಿಯ 11 ತಿಂಗಳ ಮಗು ಕಳವು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಇಡೀ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಕಳ್ಳಸಾಗಾಣೆ ಜಾಲವನ್ನೆ ಪತ್ತೆ ಮಾಡಿದ್ದಾರೆ. ಈ ಪ್ರಕರಣದಿಂದ ತುಮಕೂರು ಜನತೆ ಬೆಚ್ಚಿಬಿದ್ದಿದ್ದು, ಈವರೆಗೆ ಐದು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಅಲೆಮಾರಿ ಕುಟುಂಬದ ಮಗು ಕಳ್ಳತನ ಪ್ರಕರಣದ ತನಿಖೆಯು ತಿರುವು ಪಡೆದುಕೊಂಡಿದ್ದು, ಹಲವು ತಿಂಗಳುಗಳಿಂದ ಸಕ್ರಿಯವಾಗಿದ್ದ ಒಂದೇ ಗುಂಪು, ಬರೊಬ್ಬರಿ 9 ಮಕ್ಕಳನ್ನು ಕಿಡ್ನಾಪ್ ಮಾಡಿದ್ದಾರೆ. ಕದ್ದ ಮಕ್ಕಳನ್ನ 2 ರಿಂದ 3 ಲಕ್ಷ ರೂಪಾಯಿಗೆ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕಳುವಾಗಿದ್ದ 9 ಮಕ್ಕಳ ಪೈಕಿ 5 ಮಕ್ಕಳನ್ನ ಪೊಲೀಸರು ರಕ್ಷಿಸಿದ್ದು, ಅದರಲ್ಲಿ 1 ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಇನ್ನುಳಿದ 3 ಮಕ್ಕಳಿಗಾಗಿ ತನಿಖಾ ತಂಡ ಶೋಧಕಾರ್ಯ ಮುಂದುವರಿಸಿದೆ.

ಜಾಲ ಪತ್ತೆಯಾಗಿದ್ದು ಹೇಗೆ..?

ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಜುಲೈ ಒಂಬತ್ತರಂದು ಮಗು ಕಳ್ಳತನ ಪ್ರಕರಣ ದಾಖಲಾಗಿತ್ತು. ತಾಲೂಕಿನ ಚೇಳೂರು ಮೂಲದ ಅಲೆಮಾರಿ ಕುಟುಂಬದ ದಂಪತಿಗಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಕೂದಲು ಸಂಗ್ರಹಿಸಿ, ಪಾತ್ರೆ-ಪಡಗ ವ್ಯಾಪಾರ ನಡೆಸುತ್ತಾ ಜೀವನ ಸಾಗಿಸುತ್ತಿದ್ರು. ಅದೇ ರೀತಿ ವ್ಯಾಪಾರ ಮುಗಿಸಿ ಇದೇ ಜೂನ್ 9 ರ ರಾತ್ರಿ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಲಗಿದ್ದಾಗ, ಬೆಳಗಾಗುವಷ್ಟರಲ್ಲಿ ದಂಪತಿಗಳ 11 ತಿಂಗಳ ರಾಕಿ ಎಂಬ ಮಗು ನಾಪತ್ತೆಯಾಗಿದ್ದ. ಈ ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಗೆ ಮಗುವಿನ ಪೋಷಕರು ದೂರು ನೀಡಿದ್ದರು.
ಮಕ್ಕಳಿಲ್ಲದ ದಂಪತಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಈ ಮಕ್ಕಳ ಕಳ್ಳರ ಗ್ಯಾಂಗ್, ಗರ್ಭ ಧರಿಸಿದ ಅವಿವಾಹಿತ ಯುವತಿಯರಿಂದ ಮಕ್ಕಳನ್ನ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಜತೆಗೆ, ಮಕ್ಕಳ ಕಳ್ಳತನಕ್ಕೂ ಇಳಿದಿದ್ದರು. ಸದ್ಯ ಪ್ರಕರಣ ಸಂಬಂಧ 7 ಜನ ಆರೋಪಿಗಳ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಯು.ಡಿ, ಮಹಬೂಬ್ ಶರೀಫ್, ಕೆ.ಎನ್.ರಾಮಕೃಷ್ಣ, ಹನುನಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಎನ್. ಹಾಗೂ ಸೌಜನ್ಯ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು
ಮಕ್ಕಳಿಲ್ಲದ ದಂಪತಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಒಂದನೆ ಆರೋಪಿ ಮಹೇಶ್, ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಸದ್ಯ ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾನೆ‌.
Tumkur Police ಗುಬ್ಬಿಯಲ್ಲಿ ಮಗುವನ್ನ ಕಳವು ಮಾಡಿದ್ದ ಮೂರನೇ ಆರೋಪಿ ರಾಮಕೃಷ್ಣ ಹಾಗೂ ನಾಲ್ಕನೇ ಆರೋಪಿ ಹನುಮಂತರಾಜು, ಮಹೇಶ್ ಮೂಲಕ ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ಮೂಲದ ದಂಪತಿಗೆ ಮಗು ಮಾರಾಟ ಮಾಡಿದ್ದ. ಕಿಡ್ನಾಪ್ ಆಗಿದ್ದ 11 ತಿಂಗಳ ರಾಕಿಯನ್ನ ಪೊಲೀಸರು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.
ಜಾತ್ರೆಗಳಲ್ಲಿ ಟ್ಯಾಟು ಹಾಕುವ ಕೆಲಸ ಮಾಡ್ತಿದ್ದ ರಾಮಕೃಷ್ಣ ಹಾಗೂ ಹನುಮಂತರಾಜು ಇಬ್ಬರನ್ನೂ ಹಿಡಿದು ತನಿಖೆ ನಡೆಸಿದಾಗ ಮಕ್ಕಳ ಮಾರಾಟ ಜಾಲ ಪ್ರಕರಣ ಬೆಳಕಿಗೆ ಬಂದಿದೆ. ಎರಡನೇ ಆರೋಪಿ ಮಹಬೂಬ್ ಶರೀಫ್ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ತನ್ನ ಪತ್ನಿ ಹೆಸರಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ. ಜೊತೆಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ವಿತರಣಾ ವಿಭಾಗದಲ್ಲಿ ಕೆಲಸ ಮಾಡ್ತಿದ್ದ. ತಮ್ಮ ಕ್ಲಿನಿಕ್ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳ ಸಹಾಯದಿಂದ ಮಕ್ಕಳನ್ನ ಖರೀದಿ ಮಾಡುವ ಪೋಷಕರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು, ಮಗು ಅವರಿಗೆ ಹುಟ್ಟಿದೆ ಎಂದು ನಕಲಿ ದಾಖಲೆಪತ್ರಗಳನ್ನು ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆ ಡಾಕ್ಟರ್, ನರ್ಸ್ ಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ಚುರುಕುಗೊಳಿಸಲಾಗಿದೆ. ಬಂಧಿತ ಪೂರ್ಣಿಮಾ ಮಧುಗಿರಿ ತಾಲೂಕಿನ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೋರ್ವ ಆರೋಪಿ ಸೌಜನ್ಯ ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಮೇಲೆ ಈ ಹಿಂದೆ ಭ್ರೂಣ ಹತ್ಯೆ ಕೇಸ್ ಕೂಡ ದಾಖಲಾಗಿತ್ತು.
ಬಂಧಿತ ಆರೋಪಿಗಳು
ಪೂರ್ಣಿಮಾ ಹಾಗೂ ಸೌಜನ್ಯ ಆಸ್ಪತ್ರೆಯಲ್ಲಿ ಗರ್ಭಧರಿಸಿದ ಅವಿವಾಹಿತ ಮಹಿಳೆಯರು, ಮಗು ಬೇಡ ಎನ್ನುತ್ತಿದ್ದ ವಿವಾಹಿತ ಮಹಿಳೆಯರ ಬಗ್ಗೆ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಮಹೇಶ್ ಗೆ ಮಾಹಿತಿ ನೀಡುತ್ತಿದ್ದರು. ಅಂತವರನ್ನು ಸಂಪರ್ಕ ಮಾಡುತ್ತಿದ್ದ ಈ ತಂಡ, ಮಕ್ಕಳನ್ನ ಪಡೆದು ಮಾರಾಟ ಮಾಡ್ತಿದ್ದರು.
ಪ್ರಕರಣ ಸಂಬಂಧ 9 ಜನರ ವಿರುದ್ಧ ಕೇಸ್ ದಾಖಲಿಸಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಅವರಿಂದ ಮಾರುತಿ 800 ಕಾರು, 50 ಸಾವಿರ ನಗದು ಹಾಗೂ 4 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಗುಬ್ಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Tirtahalli Police ತೀರ್ಥಹಳ್ಳಿಯನ್ನು ಗಾಂಜಾ ಮುಕ್ತ ಮಾಡಲು ಶಪಥ‌ ಮಾಡೋಣ- ಗಜಾನನ ವಾಮನ ಸುತಾರ

0

Tirtahalli Police ಭಾರತದ ಉದ್ದಗಲದ ಬೀದಿಗಳಲ್ಲಿ, ಗಾಂಜಾದ ಪಿಸುಮಾತುಗಳು ಆಗಾಗಲೇ ಕೇಳಿ ಬರುತ್ತಿವೆ. ಗಾಂಜಾ ಸೇವನೆ ಮಾಡುವುದರಿಂದ ಬರುವ ಹೊಗೆಯು ಸಿಗರೇಟ್ ಹೊಗೆಯಂತೆಯೇ ಕಠಿಣವಾಗಿರುತ್ತದೆ, ಶ್ವಾಸಕೋಶದ ಅಂಗಾಂಶವನ್ನು ಹಾನಿಗೊಳಿಸುತ್ತದೆ ಮತ್ತು ನಿಮಗೆ ಉಸಿರುಗಟ್ಟಿಸುವಂತೆ ಮಾಡುತ್ತದೆ ಈ ಗಾಂಜಾ ಸೇವನೆಯ ದುಷ್ಪರಿಣಾಮದಿಂದ ಆರೋಗ್ಯವು ಕೆಡುತ್ತದೆ. ಇದರಿಂದ ನಾವು ನೀವೆಲ್ಲರೂ ತೀರ್ಥಹಳ್ಳಿಯನ್ನು ಗಾಂಜಾ ಮುಕ್ತ ಮಾಡಲು ಶಪಥ ತೋಡೋಣ ಎಂದು ಡಿವೈಎಸ್ ಪಿ ಗಜಾನನ ವಾಮನ ಸುತಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಡಿಗ್ರಿ ಕಾಲೇಜಿನಲ್ಲಿ ಗಾಂಜಾ ಮುಕ್ತದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಗಾಂಜಾ ಸೇವನೆ ಮಾಡಿದ ಕಾಲಾನಂತರದಲ್ಲಿ, ಕೆಮ್ಮು ಮತ್ತು ಉಬ್ಬಸಗಳು ದೀರ್ಘಕಾಲದ ಎದೆನೋವು ಮತ್ತು ಶ್ವಾಸಕೋಶದ ಕಾಯಿಲೆಗಳಾಗಿ ಬದಲಾಗುತ್ತವೆ, ಒಂದೇ ಒಂದು ಮೆಟ್ಟಿಲು ಹತ್ತಿದ ನಂತರವೂ ನಿಮಗೆ ಉಸಿರಾಟದ ತೊಂದರೆ ಉಂಟಾಗುತ್ತದೆ.
Tirtahalli Police ಗಾಂಜಾವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಜೀವನ ಮೋಡದ ಛಾಯೆಯನ್ನಾಗಿ ಮಾಡುತ್ತದೆ. ಏಕಾಗ್ರತೆ ವೇಗವಾಗಿ ಕರಗುತ್ತದೆ. ಗಡುವನ್ನು ಪೂರೈಸಲು, ಸಂಕೀರ್ಣ ವಿಚಾರಗಳನ್ನು ನಿರ್ವಹಿಸಲು ಅಥವಾ ಸಾಮಾಜಿಕ ಸೂಚನೆಗಳನ್ನು ಓದಲು ನಿಮಗೆ ಕಷ್ಟವಾಗುತ್ತದೆ. ಈ ಮಾನಸಿಕ ಮಂಜು ಸುಲಭವಾಗಿ ಶೈಕ್ಷಣಿಕ ಮತ್ತು ವೃತ್ತಿಜೀವನವನ್ನು ನಾಶಪಡಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಶಿವನಗೌಡ, ಸಿಪಿಐ ಅಶ್ವಥ್ ಗೌಡ, ಹಾಗೂ ಕಾಲೇಜು ಅಧ್ಯಾಪಕರು ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

Arundhati Roy ಲೇಖಕಿ ಅರುಂಧತಿ ರಾಯ್ ಗೆ “2024 ಪೆನ್ ಪಿಂಟರ್ ಪ್ರಶಸ್ತಿ”

0

Arundhati Roy ದೆಹಲಿ ಲೆಫ್ಟಿನೆಂಟ್-ಗವರ್ನರ್ ಇತ್ತೀಚೆಗೆ ಕಠಿಣ ಯುಎಪಿಎ ಕಾನೂನಿನಡಿಯಲ್ಲಿ ವಿಚಾರಣೆಗೆ ಒಪ್ಪಿಗೆ ನೀಡಿದ ಲೇಖಕಿ ಅರುಂಧತಿ ರಾಯ್ ಅವರು ‘ಪೆನ್ ಪಿಂಟರ್ ಪ್ರಶಸ್ತಿ 2024’ ಕ್ಕೆ ಭಾಜನರಾಗಿದ್ದಾರೆ.
10 ಅಕ್ಟೋಬರ್ 2024 ರಂದು ಬ್ರಿಟಿಷ್ ಲೈಬ್ರರಿ ಸಹಯೋಗದಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ, ಅಲ್ಲಿ ಅವರು ಭಾಷಣ ಮಾಡಲಿದ್ದಾರೆ ಎಂದು ಪ್ರಶಸ್ತಿ ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಪ್ರಶಸ್ತಿಯನ್ನು ಧೈರ್ಯದ ಬರಹಗಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ; ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಸಕ್ರಿಯವಾಗಿರುವ ಬರಹಗಾರ್ತಿ, ಆಗಾಗ್ಗೆ ಅವರ ಸ್ವಂತ ಸುರಕ್ಷತೆ ಮತ್ತು ಸ್ವಾತಂತ್ರ್ಯಕ್ಕೆ ಹೆಚ್ಚಿನ ಅಪಾಯವಿದೆ. ಇಂಗ್ಲಿಷ್ ‘ಪೆನ್‌’ನಿಂದ ಬೆಂಬಲಿತವಾದ ಪ್ರಕರಣಗಳ ಕಿರುಪಟ್ಟಿಯಿಂದ ಅರುಂಧತಿ ರಾಯ್ ಆಯ್ಕೆ ಮಾಡಿದ ಸಹ-ವಿಜೇತರನ್ನು 10 ಅಕ್ಟೋಬರ್ 2024 ರಂದು ಈವೆಂಟ್‌ನಲ್ಲಿ ಘೋಷಿಸಲಾಗುವುದು” ಎಂದು ಸಂಘಟನೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
Arundhati Roy 2024 ರ ಪೆನ್ ಪಿಂಟರ್ ಪ್ರಶಸ್ತಿಯಾಗಿ ರಾಯ್ ಅವರನ್ನು, ಇಂಗ್ಲಿಷ್ ಪೆನ್ ನ ಅಧ್ಯಕ್ಷರಾದ ರೂತ್ ಬೋರ್ತ್‌ವಿಕ್; ನಟ ಮತ್ತು ಕಾರ್ಯಕರ್ತ ಖಾಲಿದ್ ಅಬ್ದಲ್ಲಾ, ಬರಹಗಾರ ಮತ್ತು ಸಂಗೀತಗಾರ ರೋಜರ್ ರಾಬಿನ್ಸನ್ ಎಂಬ ತೀರ್ಪುಗಾರರು ಆಯ್ಕೆ ಮಾಡಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಒಬ್ಬರಾದ ರುತ್ ಬೋರ್ತ್‌ವಿಕ್ ಅವರು, “ರಾಯ್ ಅವರು ಬುದ್ಧಿವಂತಿಕೆ ಮತ್ತು ಸೌಂದರ್ಯದೊಂದಿಗೆ ಅನ್ಯಾಯದ ತುರ್ತು ಕಥೆಗಳನ್ನು ಹೇಳುತ್ತಾರೆ. ಭಾರತವು ಒಂದು ಪ್ರಮುಖ ಕೇಂದ್ರವಾಗಿ ಉಳಿದಿದ್ದರೂ, ಅವರು ನಿಜವಾಗಿಯೂ ಅಂತರಾಷ್ಟ್ರೀಯ ಚಿಂತಕರಾಗಿದ್ದಾರೆ ಮತ್ತು ಅವರ ಪ್ರಬಲ ಧ್ವನಿಯನ್ನು ಮೌನಗೊಳಿಸಬಾರದು” ಎಂದು ಹೇಳಿದ್ದಾರೆ.
ಖಾಲಿದ್ ಅಬ್ದಲ್ಲಾ ಅವರು, “ಸ್ವಾತಂತ್ರ್ಯ ಮತ್ತು ನ್ಯಾಯದ ಪ್ರಕಾಶಮಾನವಾದ ಧ್ವನಿ, ಅವರ ಮಾತುಗಳು ಈಗ ಸುಮಾರು ಮೂವತ್ತು ವರ್ಷಗಳಿಂದ ತೀವ್ರ ಸ್ಪಷ್ಟತೆ ಮತ್ತು ನಿರ್ಣಯದೊಂದಿಗೆ ಬಂದಿವೆ” ಎಂದು ರಾಯ್ ಅವರನ್ನು ಹೊಗಳಿದ್ದಾರೆ.

Social Welfare Department ಪರಿಶಿಷ್ಟ ಜಾತಿ ಅರ್ಹ ಕಾನೂನು ಪದವಿಧರರಿಗೆ ನ್ಯಾಯವಾದಿ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

0

Social Welfare Department ಶಿವಮೊಗ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು 2024-25 ಸಾಲಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ಎರಡು ವರ್ಷಗಳ ತರಬೇತಿಗಾಗಿ ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಪ.ಜಾ.ಗೆ ಸೇರಿದವರಾಗಿರಬೇಕು. ಕಾನೂನು ಪದವಿ ಪಡೆದು 2 ವರ್ಷಗಳ ಒಳಗಿರಬೇಕು. ಆಯ್ಕೆಯಾದವರಿಗೆ ಪ್ರತಿ ಮಾಹೆ ಹತ್ತು ಸಾವಿರ ರೂ.ಗಳ ಶಿಷ್ಯವೇತನ ನೀಡಲಾಗುವುದು.
ಆಸಕ್ತರು ಇಲಾಖೆಯ ವೆಬ್‍ಸೈಟ್ WWW.SW.KAR.NIC.IN ರ ಮೂಲಕ ಜುಲೈ 31ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Social Welfare Department ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೃಥ್ವಿ ಮ್ಯಾನ್ಷನ್, ವಿನೋಬನಗರ, 100 ಅಡಿರಸ್ತೆ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ ಅಥವಾ ವೆಬ್‍ಸೈಟ್ ಅಥವಾ ದೂ.ಸಂ.: 08182-249241 ನ್ನು ಸಂಪರ್ಕಿಸಬಹುದು

Linganamakki Dam ಕುದುರುತ್ತಿರುವ ಮಳೆಗಾಲ. ಲಿಂನಮಕ್ಕಿ ಜಲಾಶಯದ ನೀರಿನ ಮಟ್ಟ ಏಳು ಅಡಿ ಏರಿಕೆ

0

Linganamakki Dam ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲ್ಲೂಕಿನಾದ್ಯಂತ ಅರಿದ್ರಾ ಮಳೆ ಅಬ್ಬರ ಒಂದೇ ಸಮನೆ ಮುಂದುವರಿದಿದ್ದು, ಗುರುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 118 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.

ಹುಲಿಕಲ್ಲಿನಲ್ಲಿ 117, ಯಡೂರಿನಲ್ಲಿ 86, ಮಾಣಿಯಲ್ಲಿ 74, ಬಿದನೂರು ನಗರದಲ್ಲಿ 64, ಹೊಸನಗರದಲ್ಲಿ 57 ಮಿಲಿ ಮೀಟರ್ ಮಳೆ ಬಿದ್ದಿರುತ್ತದೆ.

Linganamakki Dam ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ಬಾರಿಗಿಂತ ಏಳು ಅಡಿ ನೀರು ಹೆಚ್ಚು ಸಂಗ್ರಹವಾಗಿದ್ದು ಇಂದು ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 1747.60 ಅಡಿ ತಲುಪಿದ್ದು ಜಲಾಶಯಕ್ಕೆ 16984 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ1740.20 ಅಡಿ ದಾಖಲಾಗಿತ್ತು.

Antony Blinken ಭಾರತದಲ್ಲಿ ದ್ವೇಷ ಭಾಷಣಗಳು, ಮತಾಂತರ ವಿರೋಧಿ ಕಾನೂನುಗಳಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ- ಆ್ಯಂಟನಿ ಬ್ಲಿಂಕನ್

0

Antony Blinken ಭಾರತದಲ್ಲಿ ಅಲ್ಪಸಂಖ್ಯಾತ ಧರ್ಮದ ಸಮುದಾಯಗಳ ಸದಸ್ಯರಿಗೆ ಮತಾಂತರ ವಿರೋಧಿ ಕಾನೂನುಗಳು, ದ್ವೇಷ ಭಾಷಣಗಳು, ಅವರ ಮನೆಗಳು ಮತ್ತು ಪೂಜಾ ಸ್ಥಳಗಳ ಧ್ವಂಸ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ವಾರ್ಷಿಕ ರಾಜ್ಯ ಇಲಾಖೆ ವರದಿಯ ಬಿಡುಗಡೆಯ ತನ್ನ ಹೇಳಿಕೆಗಳಲ್ಲಿ ಉಲ್ಲೇಖಿಸಿರುವ ಬ್ಲಿಂಕೆನ್, “ಅದೇ ಸಮಯದಲ್ಲಿ, ಪ್ರಪಂಚದಾದ್ಯಂತದ ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ” ಎಂದು ಹೇಳಿದರು.

2023ರಲ್ಲಿ ಅಮೆರಿಕದ ಹಿರಿಯ ಅಧಿಕಾರಿಗಳು ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಧಾರ್ಮಿಕ ಸ್ವಾತಂತ್ರ್ಯ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದನ್ನು ಮುಂದುವರೆಸಿದ್ದಾರೆ ಎಂದು ವರದಿ ಹೇಳಿದೆ.

“ಭಾರತದಲ್ಲಿ, ಮತಾಂತರ-ವಿರೋಧಿ ಕಾನೂನುಗಳು, ದ್ವೇಷ ಭಾಷಣಗಳು, ಅಲ್ಪಸಂಖ್ಯಾತರ ನಂಬಿಕೆಯ ಸಮುದಾಯಗಳ ಸದಸ್ಯರಿಗೆ ಮನೆಗಳು ಮತ್ತು ಪೂಜಾ ಸ್ಥಳಗಳ ಧ್ವಂಸಗಳ ಬಗ್ಗೆ ನಾವು ನೋಡುತ್ತೇವೆ. ಅದೇ ಸಮಯದಲ್ಲಿ, ಪ್ರಪಂಚದಾದ್ಯಂತ ಜನರು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

28 ರಾಜ್ಯಗಳಲ್ಲಿ ಹತ್ತು ರಾಜ್ಯಗಳು ಎಲ್ಲ ನಂಬಿಕೆಗಳಿಗೆ ಧಾರ್ಮಿಕ ಮತಾಂತರಗಳನ್ನು ನಿರ್ಬಂಧಿಸುವ ಕಾನೂನುಗಳನ್ನು ಹೊಂದಿವೆ. ಈ ಕೆಲವು ರಾಜ್ಯಗಳು ಮದುವೆಯ ಉದ್ದೇಶಕ್ಕಾಗಿ ಬಲವಂತದ ಧಾರ್ಮಿಕ ಮತಾಂತರಗಳ ವಿರುದ್ಧ ನಿರ್ದಿಷ್ಟವಾಗಿ ದಂಡವನ್ನು ವಿಧಿಸುತ್ತವೆ ಎಂದು ಹೇಳಿದರು.

Antony Blinken ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಕೆಲವು ಸದಸ್ಯರು ಹಿಂಸಾಚಾರದಿಂದ ರಕ್ಷಿಸಲು, ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ವಿರುದ್ಧದ ಅಪರಾಧಗಳನ್ನು ತನಿಖೆ ಮಾಡಲು ಮತ್ತು ಅವರ ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಸರ್ಕಾರದ ಸಾಮರ್ಥ್ಯ ಮತ್ತು ಇಚ್ಛೆಗೆ ಅವರು ಸವಾಲು ಹಾಕಿದರು.

National Highways Department ಶಿವಮೊಗ್ಗ ಹೊರ ವಲಯದ ಸೂಳೆಬೈಲ್ ಮಾರ್ಗದ ಹೆದ್ದಾರಿ ಕೂಡು ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪ್ರತಿಭಟನೆ

0

National Highways Department ಶಿವಮೊಗ್ಗ ನಗರದ ಹೊರವಲಯ ಸೂಳೈಬೈಲು ಬಡಾವಣೆ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಮಾಯಕರು ಸಾವು – ನೋವಿಗೆ ತುತ್ತಾಗುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಸಂಬಂಧ ಬಡಾವಣೆಯ ವೃತ್ತದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಅಪಘಾತಗಳ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ಸಂಬಂಧಿಸಿದ ಇಲಾಖೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ಧಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು.
ಪ್ರತಿನಿತ್ಯ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜೊತೆಗೆ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪಘಾತಗಳ ನಿಯಂತ್ರಣ ಉದ್ಧೇಶದಿಂದ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಅಳವಡಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡುವುದು ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

National Highways Department ಪ್ರತಿಭಟನೆಯಲ್ಲಿ ಅಬ್ದುಲ್ ರಹೀಂ, ಸನಾವುಲ್ಲಾ, ಇಮ್ರಾನ್, ನ್ಯಾಮತ್, ಮುಜ್ಜು, ಸಲೀಂ, ನವಾಜ್, ಯಾಸೀನ್ ಸೇರಿದಂತೆ ಮೊದಲಾದವರಿದ್ದರು.

Akashvani Bhadravati ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ” ವೃತ್ತಿ ಶಿಕ್ಷಣ ಮಾರ್ಗದರ್ಶನ” ಸರಣಿ ಪ್ರಸಾರ ಆಯೋಜನೆ

0

Akashvani Bhadravati ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಒಳ್ಳೆಯ ಭವಿಷ್ಯವಿದೆ, ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಯಾವರೀತಿಯ ಉದ್ಯೋಗಕ್ಕೆ ಹೋಗಬಹುದು, ಪೋಷಕರು, ವಿದ್ಯಾರ್ಥಿಗಳಿಗೆ ಹೇಗೆ ಮಾರ್ಗದರ್ಶನ ನೀಡಬಹುದು ಮುಂತಾದ ವಿಷಯಗಳನ್ನು ಒಳಗೊಂಡ ವಿಶೇಷ ಕಾರ್ಯಕ್ರಮ ಸರಣ “ವೃತ್ತಿಶಿಕ್ಷಣ ಮಾರ್ಗದರ್ಶನ” ಆಕಾಶವಾಣಿ ಭದ್ರಾವತಿ ಕೇಂದ್ರ ದಿನಾಂಕ: ೨೮.೦೬.೨೦೨೪ ರಿಂದ ಪ್ರತೀ ಶುಕ್ರವಾರ ಬೆಳಿಗ್ಗೆ ೯.೦೫ರಿಂದ ೯.೨೦ರವರೆಗೆ ಪ್ರಸಾರವಾಗಲಿದೆ. ಪಿ.ಇ.ಎಸ್ ಸಮೂಹ ಶಿಕ್ಷಣ ಸಂಸ್ಥೆ ಶಿವಮೊಗ್ಗ ಸಹಯೋಗದಲ್ಲಿ ಪ್ರಸಾರವಾಗುವ ಈ ಸರಣ ಯಲ್ಲಿ ಪಿ.ಇ.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಕೆರಿಯರ್ ಗೈಡೆನ್ಸ್ ಸೆಲ್ ನ ಪರಿಣ ತರು, ಪ್ರಾಂಶುಪಾಲರು ಹಾಗೂ ಪ್ರತೀ Akashvani Bhadravati ವಿಭಾಗದ ಮುಖ್ಯಸ್ಥರು ಮಾಹಿತಿ ನೀಡುವ ಈ ಸರಣ ಆಕಾಶವಾಣ ಭದ್ರಾವತಿ ಅಮೃತ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ವರ್ಷಪೂರ್ತಿ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಅರ್.ಭಟ್ ತಿಳಿಸಿದ್ದಾರೆ.ಈ ಕಾರ್ಯಕ್ರಮವನ್ನು ಈಒ ೧೦೩.೫ನಲ್ಲಿ ಕೇಳುವದರೊಟ್ಟಿಗೆ ಜಗತ್ತಿನಾದ್ಯಂತ ಕೇಳಬಹುದು.