Monday, May 4, 2026
Monday, May 4, 2026

Karnataka Skill Development Corporation ಕೌಶಲ್ಯಾಭಿವೃದ್ಧಿ & ಸಮಾಜ ಕಲ್ಯಾಣ ಇಲಾಖೆಯಿಂದ ಪ,ಜಾತಿ/ ಪ.ಪಂಗಡದವರಿಗೆ ಉದ್ಯಮಶೀಲತೆ ತರಬೇತಿಗೆ ಅರ್ಜಿ ಆಹ್ವಾನ

Date:

Karnataka Skill Development Corporation ಕೌಶಲ್ಯಾಭಿವೃದ್ದಿ ಇಲಾಖಾ ವ್ಯಾಪ್ತಿಯ ಸಿಡಾಕ್ ಸಂಸ್ಥೆಯ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಉದ್ಯಮಶೀಲತೆ ಬಗ್ಗೆ ಹತ್ತು ದಿನಗಳ ಉಚಿತ ತರಬೇತಿ ನೀಡಲು ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕನಿಷ್ಟ 21 ಹಾಗೂ ಗರಿಷ್ಟ 50 ವರ್ಷದೊಳಗಿನ ಪಿಯುಸಿ ಮತ್ತು ಮೇಲ್ಪಟ್ಟವರು ನ.30 ರೊಳಗೆ ಲಿಂಕ್ https://www.scsptsp.karnataka.gov.in/BMS/CDOC/EDPRegistrationForm.aspx ರಲ್ಲಿ ಅರ್ಜಿ ಸಲ್ಲಿಸಬಹುದು.

Karnataka Skill Development Corporation ತರಬೇತಿಯಲ್ಲಿ ಉದ್ದಿಮೆ, ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ಮತ್ತು ಮಾರ್ಗದರ್ಶನ ನೀಡಲಾಗುವುದು. ಸರ್ಕಾರದ ವಿವಿಧ ಇಲಾಖೆಗಳಿಂದ ಪ.ಜಾತಿ/ಪ.ಪಂಗಡದವರಿಗೆ ಉದ್ದಿಮೆಗಳನ್ನು ಸ್ಥಾಪಿಸಲು ನೀಡಲಾಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್‍ಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಂದ ನೀಡಲಾಗುವ ಸಾಲ ಸೌಲಭ್ಯದ ಮಾಹಿತಿ ನೀಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಹತ್ತು ದಿನದ ಉಚಿತ ತರಬೇತಿ ಹಾಗೂ ಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ ಹತ್ತು ದಿನಗಳಿಗೆ ರೂ.1000/- ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...