Saturday, April 11, 2026
Saturday, April 11, 2026
Home Blog Page 673

Dengue fever ಡೆಂಗ್ಯು ಹರಡುವಿಕೆ‌. ಮಾಳೂರು ಆಸ್ಪತ್ರೆಗೆ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ

0

Dengue fever ಮಳೆಗಾಲ ಆರಂಭವಾಗಿದ್ದು ಡೆಂಗ್ಯೂ ಜ್ವರ ಸೇರಿ ಇತರ ಕಾಯಿಲೆ ಹರಡುತ್ತಿದ್ದು ಈ ವಿಚಾರವಾಗಿ ತಾಲೂಕಿನ ಮಾಳೂರು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿದರು.

ಮೊದಲಿಗೆ ಆಸ್ಪತ್ರೆ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿ ನಂತರ ವಿವಿಧ ವ್ಯವಸ್ಥೆ ಬಗ್ಗೆ ಹಾಗೂ ಆಸ್ಪತ್ರೆಯ ಶುಚಿತ್ವದ ಬಗ್ಗೆ ಪರಿಶೀಲನೆ ಮಾಡಿದರು.

Dengue fever ನಂತರ ರೋಗಿಗಳ ಬಳಿ ತೆರಳಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಸೇವೆಗಳ ಬಗ್ಗೆ ಕೇಳಿ ಮಾಹಿತಿ ಪಡೆದರು.
ನಂತರ ವೈದ್ಯರ ಬಳಿ ಮಾತನಾಡಿ ಇತ್ತೀಚಿಗೆ ವೈರಲ್ ಫೀವರ್ ಹಾಗೂ ಡೆಂಗ್ಯೂ ನಂತಹ ರೋಗಗಳು ಹೆಚ್ಚಾಗಿರುವ ಕಾರಣ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಯಾವುದೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.

Vokkaliga Swamiji Demands CM Post For DK Shivakumar ಸೀಎಂ & ಡಿಸಿಎಂ ಹುದ್ದೆಗಳಿಗೆ ಸ್ವಾಮೀಜಿಗಳ ಬ್ಯಾಟಿಂಗ್

0

Vokkaliga Swamiji Demands CM Post For DK Shivakumar ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಸ್ವಾಮೀಜಿಯೊಬ್ಬರು ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಘಟನೆ ಬಳಿಕ ಮತ್ತಷ್ಟು ಸ್ವಾಮೀಜಿಗಳು ತಮ್ಮ ತಮ್ಮ ಸಮುದಾಯಗಳ ಪರವಾಗಿ ಇಂಥಹದ್ದೇ ಬೇಡಿಕೆ ಮುಂದಿಟ್ಟಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಸ್ವಾಮೀಜಿ ಶ್ರೀಶೈಲ ಜಗದ್ಗುರು ಚಿನ್ನ ಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ, ಒಂದು ವೇಳೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾದರೆ, ತಮ್ಮ ಸಮುದಾಯದ ಸಚಿವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವುದರಲ್ಲಿ ಸಮುದಾಯದ ಮತಗಳು ನಿರ್ಣಾಯಕವಾಗಿರುವುದರಿಂದ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೂ ಸಹ ವೀರಶೈವ-ಲಿಂಗಾಯತ ಸಚಿವರನ್ನು ಪರಿಗಣಿಸಬೇಕು ಎಂದು ಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.

“ಕರ್ನಾಟಕ ರಾಜ್ಯ ರಾಜಕೀಯ ಬೆಳವಣಿಗೆಗಳು ಮತ್ತು ಹೊರಹೊಮ್ಮುತ್ತಿರುವ ಸುದ್ದಿಗಳು ಚರ್ಚೆಯಲ್ಲಿವೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾದರೆ ಮತ್ತು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾದರೆ – ಅಂತಹ ಪರಿಸ್ಥಿತಿಯಲ್ಲಿ, ವೀರಶೈವ-ಲಿಂಗಾಯತ ಸಮುದಾಯದ ಸಚಿವರಿಗೆ ಆದ್ಯತೆ ನೀಡಿ ಎಂದು ನಾನು ಪಕ್ಷ (ಕಾಂಗ್ರೆಸ್) ಮತ್ತು ಸರ್ಕಾರವನ್ನು ಒತ್ತಾಯಿಸುತ್ತೇನೆ,’’ ಎಂದು ಶ್ರೀಗಳು ಹೇಳಿದರು.

ಜಾತಿಗಣತಿ ವರದಿ ಒಪ್ಪಿದರೆ ಹೋರಾಟ:

ಸರ್ಕಾರಕ್ಕೆ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ರಚನೆ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದ ಕಾರಣ ವೀರಶೈವ-ಲಿಂಗಾಯತ ಸಚಿವರಿಗೆ ಆದ್ಯತೆ ನೀಡಬೇಕು, ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್. ಅಂತಹ ಜನರನ್ನು ಪರಿಗಣಿಸಬೇಕು ಮತ್ತು ಅವರ ಅನುಭವವನ್ನು ಬಳಸಿಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ.

Vokkaliga Swamiji Demands CM Post For DK Shivakumar ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಗುರುವಾರ ನಡೆದ ಬೆಂಗಳೂರಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಶಿವಕುಮಾರ್ ಸಿಎಂ ಆಗಬೇಕು ಎಂದು ಪಟ್ಟು ಹಿಡಿದರು.

ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಇನ್ನೂ ಮೂವರು ಉಪ ಮುಖ್ಯಮಂತ್ರಿಗಳನ್ನು ಹೊಂದಲು ಸಿದ್ದರಾಮಯ್ಯ ಸಂಪುಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆಯಾಗಿರುವುದು ಮಹತ್ವ ಪಡೆದುಕೊಂಡಿದೆ.

Shalini Rajneesh ಯಾರಿಗೊಲಿಯಲಿದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ?

0

Shalini Rajneesh ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಕಾರ್ಯದರ್ಶಿ ಯಾರು ಎಂಬ ಚರ್ಚೆ ಶುರುವಾಗಿದೆ.

ಪಟ್ಟಿಯಲ್ಲಿ ಐವರು ಅಧಿಕಾರಿಗಳಿದ್ದಾರೆ, ಅವರಲ್ಲಿ ಹಿರಿಯರೆಂದರೆ ಗೋಯೆಲ್ ಅವರ ಪತ್ನಿ ಶಾಲಿನಿ ರಜನೀಶ್ ಅವರು ಜುಲೈ 2027 ರಲ್ಲಿ ನಿವೃತ್ತರಾಗುತ್ತಾರೆ ಮತ್ತು ಎರಡನೇ ಸಾಲಿನಲ್ಲಿ ಗೌರವ್ ಗುಪ್ತಾ ಅವರು ಜೂನ್ 2027 ರಲ್ಲಿ ನಿವೃತ್ತರಾಗುತ್ತಾರೆ. ಇಬ್ಬರ ಪೈಕಿ ಶಾಲಿನಿ ರಜನೀಶ್‌ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಮೂರನೆಯವರಾಗಿ ಎಲ್.ಕೆ.ಅತೀಕ್, ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಕಾರ್ಯಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ಹಿಂದಿನ 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿ ನಿಕಟವಾಗಿ ಕೆಲಸ ಮಾಡಿದ್ದಾರೆ ಮತ್ತು ಅವರಿಗೆ ಆಪ್ತರು ಎಂದು ಹೇಳಲಾಗುತ್ತದೆ.

1991ರ ಬ್ಯಾಚ್‌ನ ಅಧಿಕಾರಿಯಾಗಿರುವ ಅತೀಕ್ 2025ರ ಜನವರಿಯಲ್ಲಿ ನಿವೃತ್ತರಾಗಲಿದ್ದಾರೆ. ಸಿಎಂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಗಿನ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಅವರನ್ನು ಪರಿಗಣಿಸಲಾಗಿತ್ತು.

Shalini Rajneesh ಆದರೆ ಕೊನೆಯ ಗಳಿಗೆಯಲ್ಲಿ ಅತೀಕ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಅತೀಕ್ Black horse ಆಗಿ ಹೊರಹೊಮ್ಮಿದ್ದನ್ನು ಸ್ಮರಿಸಬಹುದು.

ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅಮಾನತಿಗೆ ಬಿಜೆಪಿ ಒತ್ತಾಯ, ಆಯೋಗಕ್ಕೆ ದೂರು
ಕೆಲವು ತಿಂಗಳುಗಳ ಹಿಂದೆ ಕೆಲವು ನಾಯಕರು ಅತೀಕ್ ಅವರ ಹೆಸರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸೂಚಿಸಿದ್ದರು.

ಇತ್ತೀಚೆಗೆ ಸಿದ್ದರಾಮಯ್ಯ ಅವರೊಂದಿಗೆ ಮತ್ತೆ ಈ ಸಂಬಂಧ ಚರ್ಚೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಗರಿಕ ಸೇವಾ ಅಧಿಕಾರಿಗಳ ಜೇಷ್ಠತಾ ಪಟ್ಟಿಯ ಪ್ರಕಾರ, ಅತೀಕ್ ಅವರು ಸಿಎಸ್ ಆಗಿ ನೇಮಕವಾದರೆ, ಅವರು ಮುಂದಿನ ವರ್ಷ ಜನವರಿಯಲ್ಲಿ ನಿವೃತ್ತರಾಗುವವರೆಗೆ ಏಳು ತಿಂಗಳ ಕಾಲ ಹುದ್ದೆಯಲ್ಲಿ ಇರುತ್ತಾರೆ.

ಅದರ ನಂತರ, ಕೆಲವು ರಾಜ್ಯಗಳು ಅಧಿಕಾರವಧಿ ವಿಸ್ತರಣೆ ಸಂಪ್ರದಾಯವನ್ನು ಹೊಂದಿರುವುದರಿಂದ ಅವರ ಅಧಿಕಾರವಧಿಯನ್ನು ವಿಸ್ತರಣೆಗೆ ಪರಿಗಣಿಸಬಹುದು. ಅತೀಕ್ ಅವರನ್ನು ಈ ಹುದ್ದೆಗೆ ಪರಿಗಣಿಸಿದರೆ, ಶಾಲಿನಿ ರಜನೀಶ್ ಮತ್ತು ಗೌರವ್ ಗುಪ್ತಾ ಸೇರಿದಂತೆ ಅನೇಕ ಹಿರಿಯರನ್ನು ಅವರು ಹಿಂದಿಕ್ಕಲಿದ್ದಾರೆ.

ಶಾಲಿನಿ ರಜನೀಶ್ ಅವರ ಬ್ಯಾಚ್ ಜೂನಿಯರ್. ಅತೀಕ್ ಅವರಿಗೆ ಪೈಪೋಟ ನೀಡಲು ಅಜಯ್ ಸೇಠ್ ಮತ್ತು ಅತುಲ್ ತಿವಾರಿ ಇದ್ದಾರೆ , ಅವರು ಕೇಂದ್ರ ಹಣಕಾಸು ಕಾರ್ಯದರ್ಶಿ ಮತ್ತು ದೊಡ್ಡ ಪೋರ್ಟ್ಫೋಲಿಯೊವನ್ನು ನಿರ್ವಹಿಸುತ್ತಿದ್ದಾರೆ. ಅತುಲ್ ತಿವಾರಿ ಅವರು ಕೇಂದ್ರ ನಿಯೋಜನೆಯಲ್ಲಿದ್ದಾರೆ ಮತ್ತು ಇದೀಗ ಕರ್ನಾಟಕಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸುವ ಸಾಧ್ಯತೆಯಿದೆ.

ಸದ್ಯ ಎಲ್ಲರ ಕಣ್ಣು ಸಿಎಂ ಮೇಲೆ ನೆಟ್ಟಿದ್ದು, ಇನ್ನೆರಡು ದಿನದಲ್ಲಿ ಮುಖ್ಯ ಕಾರ್ಯದರ್ಶಿ ಆಯ್ಕೆ ಹೊರಬೀಳುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗಳು ಹಿರಿತನಕ್ಕೆ ಕಟ್ಟು ಬಿದ್ದರೆ ಅವರು ಶಾಲಿನಿ ರಜನೀಶ್ ಅವರನ್ನು ಆಯ್ಕೆ ಮಾಡಬಹುದು.

BS Yediyurappa ಕೇಸು ದುರ್ಬಲಗೊಳಿಸಲು ಬಿಎಸ್ ವೈ ಆಪ್ತರಿಂದಪ್ರಯತ್ನ- ಸಿಐಡಿ ಆರೋಪ

0

BS Yediyurappa ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಬಿಎಸ್‌ವೈ ಆಪ್ತರೆನ್ನಲಾದ ಮೂವರು ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಸುಮ್ಮನಿರುವಂತೆ ಹಣ ನೀಡಿ ಖರೀದಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದೆ.

81ರ ಹರೆಯದ ಯಡಿಯೂರಪ್ಪ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), 204 (ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆ ನಾಶಪಡಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಯಡಿಯೂರಪ್ಪನವರ ಆಪ್ತರಾದ ಇತರ ಮೂವರು ಸಹ ಆರೋಪಿಗಳಾದ ಅರುಣ್ ವೈ ಎಂ, ರುದ್ರೇಶ್ ಎಂ ಮತ್ತು ಜಿ ಮರಿಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 204 ಮತ್ತು 214 ರ ಅಡಿಯಲ್ಲಿ ಗುರುವಾರ ಫಾಸ್ಟ್ ಟ್ರ್ಯಾಕ್ ಕೋರ್ಟ್ 1 ರಲ್ಲಿ ಪೋಕ್ಸೋ ಕಾಯ್ದೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ಚಾರ್ಜ್‌ಶೀಟ್ ಪ್ರಕಾರ, ಈ ವರ್ಷದ ಫೆಬ್ರವರಿ 2 ರಂದು ಬೆಳಿಗ್ಗೆ 11.15 ರ ಸುಮಾರಿಗೆ, 17 ವರ್ಷದ ಸಂತ್ರಸ್ತೆ, ತನ್ನ 54 ವರ್ಷದ ತಾಯಿ, (ದೂರುದಾರೆ) ಇಲ್ಲಿನ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

BS Yediyurappa ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (ಮಗಳ ಮೇಲೆ) ಮತ್ತು ಇತರ ಸಮಸ್ಯೆಗಳಲ್ಲಿ ನ್ಯಾಯ ಪಡೆಯಲು ಸಹಾಯ ಕೇಳಿದ್ದರು.
ಯಡಿಯೂರಪ್ಪ ಅವರು ತಾಯಿಯೊಂದಿಗೆ ಮಾತನಾಡುವಾಗ ತನ್ನ ಎಡಗೈಯಿಂದ ಸಂತ್ರಸ್ತೆಯ ಬಲ ಮಣಿಕಟ್ಟನ್ನು ಹಿಡಿದಿದ್ದರು.
ನಂತರ ಯಡಿಯೂರಪ್ಪ ಅವರು ಅಪ್ರಾಪ್ತರನ್ನು ಹಾಲ್‌ನ ಪಕ್ಕದಲ್ಲಿರುವ ಮೀಟಿಂಗ್ ರೂಮ್‌ಗೆ ಕರೆದು ಬಾಗಿಲು ಹಾಕಿದರು. ನಂತರ ಅವರು ಸಂತ್ರಸ್ತೆಯನ್ನು ಕೇಳಿದರು, ಈ ಹಿಂದೆ ನಿನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಮುಖವು ನೆನಪಿದೆಯೇ ಎಂದು ಸಂತ್ರಸ್ತೆ ಎರಡು ಬಾರಿ ಉತ್ತರಿಸಿದಳು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಇದಾದ ನಂತರ ಯಡಿಯೂರಪ್ಪ ಆಗ ವಯಸ್ಸು ಎಷ್ಟು ಎಂದು ಕೇಳಿದರು, ಅದಕ್ಕೆ ಅವರು ಆರೂವರೆ ಎಂದು ಉತ್ತರಿಸಿದರು; ಈ ಹಂತದಲ್ಲಿ ಅವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಿಐಡಿ ಆರೋಪಿಸಿದೆ.

ಗಾಬರಿಗೊಂಡ ಸಂತ್ರಸ್ತೆ ಯಡಿಯೂರಪ್ಪನವರ ಕೈಯನ್ನು ತಳ್ಳಿ, ದೂರ ಸರಿದು ಬಾಗಿಲು ತೆರೆಯುವಂತೆ ಕೇಳಿಕೊಂಡರು. ನಂತರ ಯಡಿಯೂರಪ್ಪ ಬಾಗಿಲು ತೆರೆದು ತಮ್ಮ ಜೇಬಿನಿಂದ ಸಂತ್ರಸ್ತೆಯ ಕೈಗೆ ಸ್ವಲ್ಪ ಹಣವನ್ನು ಹಾಕಿ ನಿರ್ಗಮಿಸಿದರು.

ನಂತರ ಅವರು ಸಂತ್ರಸ್ತೆಯ ತಾಯಿಗೆ ಪ್ರಕರಣದಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅವರ ಜೇಬಿನಿಂದ ಸ್ವಲ್ಪ ಹಣವನ್ನು ನೀಡಿ ಅವರನ್ನು ಕಳುಹಿಸಿದರು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆಯ ತಾಯಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ, ಫೆಬ್ರವರಿ 20 ರಂದು, ಯಡಿಯೂರಪ್ಪ ಅವರ ಆದೇಶದ ಮೇರೆಗೆ, ಇತರ ಆರೋಪಿಗಳಾದ ಅರುಣ್, ರುದ್ರೇಶ್ ಮತ್ತು ಮರಿಸ್ವಾಮಿ ಅವರ ಮನೆಗೆ ತೆರಳಿ ಅವರನ್ನು ಅವರ ನಿವಾಸಕ್ಕೆ ಕರೆತಂದಿದ್ದಾರೆ.

ಚಾರ್ಜ್‌ಶೀಟ್ ಪ್ರಕಾರ, ಸಂತ್ರಸ್ತೆಯ ತಾಯಿ ತನ್ನ ಫೇಸ್‌ಬುಕ್ ಖಾತೆಯಿಂದ ಮತ್ತು ಆಕೆಯ ಐಫೋನ್‌ನ ಗ್ಯಾಲರಿಯಿಂದ ವೀಡಿಯೊವನ್ನು ಅಳಿಸಿದ್ದಾಳೆ ಎಂಬುದನ್ನು ಅರುಣ್ ಖಚಿತಪಡಿಸಿಕೊಂಡರು. ಯಡಿಯೂರಪ್ಪನವರ ನಿರ್ದೇಶನದ ಮೇರೆಗೆ ರುದ್ರೇಶ್ ಸಂತ್ರಸ್ತೆಗೆ ಎರಡು ಲಕ್ಷ ರೂಪಾಯಿ ನಗದು ನೀಡಿದ್ದರು ಎನ್ನಲಾಗಿದೆ.

ಈ ವರ್ಷ ಮಾರ್ಚ್ 14 ರಂದು ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಬೆಂಗಳೂರು ನ್ಯಾಯಾಲಯ ಜೂನ್ 13 ರಂದು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್ ಜೂನ್ 14 ರಂದು ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸಿಐಡಿಗೆ ತಡೆಯಾಜ್ಞೆ ನೀಡಿದ್ದು, ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಯಡಿಯೂರಪ್ಪ ಅವರನ್ನು ಜೂನ್ 17 ರಂದು ಸಿಐಡಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದ ಸಂತ್ರಸ್ತೆಯ ತಾಯಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಕಳೆದ ತಿಂಗಳು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮಾರ್ಚ್ 14 ರಂದು ಪ್ರಕರಣ ದಾಖಲಾಗಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಆರೋಪಿಸಿ ಸಂತ್ರಸ್ತೆಯ ಸಹೋದರ ಈ ತಿಂಗಳ ಆರಂಭದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಆರೋಪವನ್ನು ತಳ್ಳಿಹಾಕಿರುವ ಯಡಿಯೂರಪ್ಪ, ಈ ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಅವರು ತಮ್ಮ ವಿರುದ್ಧದ ಸಂಪೂರ್ಣ ವಿಚಾರಣೆಯನ್ನು ಪ್ರಶ್ನಿಸಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ, ಅದು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.

Shivamogga DCC Bank ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ.ಬಿಜೆಪಿಗೆ ಮುಖಭಂಗ

0

Shivamogga DCC Bank ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 12 ನಿರ್ದೇಶಕರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವನೆಯಲ್ಲಿ ಹಾಲಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಆರ್ ಎಂ. ಮಂಜುನಾಥ ಗೌಡ ಅವರ ಬಣ 11 ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಚುನಾವಣೆ ಕಣಕ್ಕಿಳಿದಿದ್ದ ಬಿಜೆಪಿಯ ಸಹಕಾರ ಭಾರತಿ ಶೂನ್ಯ ಸಂಪಾದನೆ ಮಾಡಿದೆ.

ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರ ರಾಷ್ಟ್ರಭಕ್ತ ಬಳಗದ ಪರ ಸ್ಪಧಿಸಿದ್ದ ಮಹಾಲಿಂಗ ಶಾಸ್ತ್ರಿ ಜಯ ಸಾಧಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನ ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಮೇಶ್ ಅವಿರೋಧ ಆಯ್ಕೆಯಾಗಿದ್ದರು.
ಉಳಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ ಮತ್ತು ಶಿವನಂಜಪ್ಪ.ಜೆ ನಡುವಿನ ಜಿದ್ದಾಜಿದ್ದಿಲ್ಲಿ ದುಗ್ಗಪ್ಪ ಗೌಡ ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ ಸಿ.ಹನುಮಂತಪ್ಪ ನುಡುವಿನ ಸಿ ಹನುಮಂತ ಹಣಾಹಣಿಯಲ್ಲಿ ಗೆದ್ದು ಬೀಗಿದ್ದಾರೆ.

ಇವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಮತ್ತು ಕೆ.ಎಸ್.ಶಿವಕುಮಾರ್ ನಡುವಿನ ಫೈಟ್ ನಲ್ಲಿ ವಿಜಯದೇವ್, ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು ನಡುವಿನ ಬಿಗ್ ಫೈಟ್ ನಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಜಯಗಳಿಸಿದ್ದಾರೆ.

Shivamogga DCC Bank ಪ್ರಾ ಕೃ ಪ ಸ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ, ಎಸ್.ಪಿ ಚಂದ್ರಶೇಖರಗೌಡ ನಡುವಿನ ಫೈಟ್ ನಲ್ಲಿ ಚಂದ್ರಶೇಖರ್ ಗೌಡ ಗೆಲುವು ತಮ್ಮದಾಗಿಸಿಕೊಡಂರೆ, ಪ್ರಾ ಕೃ ಪ ಸ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ, ಶಿವಮೂರ್ತಿಗೌಡ ನಡುವೆ ಸಚಿವ ಮಧು ಅವರ ಆಪ್ತ ಕೆ.ಪಿ ರುದ್ರೇಗೌಡ ಗೆದ್ದಿದ್ದಾರೆ.

ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ ಮತ್ತು ವಿರೂಪಾಕ್ಷಪ್ಪ ಜಿ. ಅವರ ಹೋರಾಟದಲ್ಲಿ ಮಂಜುನಾಥ್ ಗೌಡ ಗೆದ್ದಿದ್ದಾರೆ. ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್, ಜಿ.ಎಸ್.ಸುಧೀರ್ ನಡುವಿನ ಜಿದ್ದಾ ಜಿದ್ದಿನಲ್ಲಿ ಜಿ.ಎಸ್ ಸುಧೀರ್ ಗೆದ್ದಿದ್ದಾರೆ.

ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ ಮರಿಯಪ್ಪ ನಡುವಿನ ಫೈಟ್ ನಲ್ಲಿ ಮರಿಯಪ್ಪ ಗೆದ್ದಿದ್ದಾರೆ. ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಎಸ್.ಕೆ, ಬಸವರಾಜ್ ಡಿ.ಎಲ್, ರವೀಂದ್ರ ಹೆಚ್.ಎಸ್ ನಡುವಿನ ಫೈಟ್ ನಲ್ಲಿ ಬಸವರಾಜ್ ಗೆದ್ದಿದ್ದಾರೆ.

ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ, ಕೆ.ಎಲ್.ಜಗದೀಶ್ವರ್, ಹೆಚ್.ಬಿ ದಿನೇಶ್, ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್, ಜೆ.ಪಿ ಯೋಗೇಶ್, ಟಿ. ಶಿವಶಂಕರಪ್ಪ, ಹರೀಶ್ ಎನ್.ಡಿ ನಡುವಿನ ಫೈಟ್ ನಲ್ಲಿ ರಾಷ್ಟ್ರಭಕ್ತ ಬಳಗದ ಮಹಲಿಂಗ ಶಾಸ್ತ್ರಿ ಗೆದ್ದಿದ್ದಾರೆ.
ಇದರಿಂದ ೧೩ ಕ್ಷೇತ್ರದಲ್ಲಿ ೧೨ ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದು, ಮತ್ತೆ ಆರ್ ಎಂ. ಮಂಜುನಾಥ್ ಗೌಡರ ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಆರ್ ಎಂ ಎಂ ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಮತಗಳ ವಿವರ
ಶಿವಮೊಗ್ಗ ತಾಲೂಕು
ಕೆ ಪಿ ದುಗ್ಗಪ ಗೌಡ -೧೩,
ಶಿವನಂಜಪ್ಪ- ೧೨

ಭದ್ರಾವತಿ-
ಎಚ್ ಎಲ್ ಷಡಾಕ್ಷರಿ–೭
ಸಿ. ಹನುಮಂತು-೯
ತೀರ್ಥಹಳ್ಳಿ
ಬಸವಾನಿ ವಿಜಯದೇವ್- ೧೪
ಕೆ ಎಸ್ ಶಿವಕುಮಾರ್-೯
ಸಾಗರ
ಬೇಳೂರು ಗೋಪಾಲಕೃಷ್ಣ- ೧೫
ರತ್ನಾಕರ ಹೊನಗೋಡು- ೧೪

ಶಿಕಾರಿಪುರ-
ಅಗಡಿ ಅಶೋಕ್- ೧೧
ಎಸ ಪಿ ಚಂದ್ರಶೇಖರ್ ಗೌಡ -೨೬
ಸೊರಬ
ಕೆ ಪಿ ರುದ್ರಗೌಡ- ೧೪
ಶಿವಮೂರ್ತಿ ಗೌಡ- ೧೦
ಹೊಸನಗರ
ಎಂ ಎಂ ಪರಮೇಶ್- ಅವಿರೋಧ ಆಯ್ಕೆ

ಶಿವಮೊಗ್ಗ ಉಪವಿಭಾಗ ಕ್ಷೇತ್ರ – ೨
ಆರ್ ಎಂ ಮಂಜುನಾಥ ಗೌಡ- ೧೫
ಜಿ ವಿರೂಪಾಕ್ಷಪ್ಪ- ೩
ಸಾಗರ ಉಪವಿಭಾಗ
ಬಿ ಡಿ ಭೂಕಾಂತ- ೨೧
ಜಿಎನ್ ಸುಧೀರ್-೨೩
ಶಿವಮೊಗ್ಗ ಉಪವಿಭಾಗ ಕ್ಷೇತ್ರ-೩
ಎಸ್ ಪಿ ದಿನೇಶ್- ೧೬
ಎಸ್ ಕೆ ಮರಿಯಪ್ಪ- ೩೯
ಸಾಗರ ಉಪವಿಭಾಗ
ಬಸವರಾಜ ಪಿ. ಎಲ್- ೩೨
ರವೀಂದ್ರ ಎಚ್ ಎಸ್-೨೧
ತಿರಸ್ಕೃತ-೩
ಶಿವಮೊಗ್ಗ ಉಪವಿಭಾ ಕ್ಷೇತ್ರ-೪
ಡಿ ಆನಂದ- ೧೬
ಕೆ ಎಲ್ ಜಗದೀಶ್ವರ್- ೪೫
ಮಹಾಲಿಂಗಯ್ಯ ಶಾಸಿ- ೪೭
ಜೆ ಪಿ ಯೋಗೇಶ್-೧೪
ಸಾಗರ ಉವಿಭಾಗ
ಟಿ ಶಿವಶಂಕರಪ್ಪ- ೭೫
ಎಂ ಡಿ ಹರೀಶ್- ೬೧
ತಿರಸ್ಕೃತ- ೧

ಒಟ್ಟೂ ೬೨೧ ಮತಗಳು ಚಲಾವಣೆಯಾಗಿದ್ದು, ೫ ಮತ ತಿರಸ್ಕೃತವಾಗಿದೆ.

Delhi Airport Terminal 1 Roof Collapses ದೆಹಲಿ ವಿಮಾನ ನಿಲ್ದಾಣ. ಭಾರೀ ಮಳೆಗೆ ಮೇಲ್ಛಾವಣಿ ಕುಸಿದು ಆರು ಮಂದಿಗೆ ಗಾಯ

Delhi Airport Terminal 1 Roof Collapses ಭಾರೀ ಮಳೆಯ ಮಧ್ಯೆ ಬೆಳ್ಳಂಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರ ಮೇಲ್ಛಾವಣಿಯ ಒಂದು ಭಾಗ ಕೆಳಗೆ ಸಂಚರಿಸುತ್ತಿದ್ದ ಟ್ಯಾಕ್ಸಿಗಳು ಹಾಗೂ ಕಾರುಗಳ ಮೇಲೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (DFS) ಅಧಿಕಾರಿಗಳು ತಿಳಿಸಿದ್ದಾರೆ.

ಹಾನಿಗೊಳಗಾದ ವಾಹನಗಳಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಮೇಲ್ಛಾವಣಿಯ ಶೀಟ್‌ನ ಹೊರತಾಗಿ, ಸಪೋರ್ಟ್ ಬೀಮ್ ಗಳು ಸಹ ಕುಸಿದಿದ್ದು, ಟರ್ಮಿನಲ್‌ನ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರು ಮಂದಿಯಲ್ಲಿ ಕಬ್ಬಿಣದ ತೊಲೆ ಬಿದ್ದ ಕಾರಿನಿಂದ ಒಬ್ಬನನ್ನು ರಕ್ಷಿಸಲಾಗಿದೆ. ಘಟನೆಯ ಬಗ್ಗೆ ಡಿಎಫ್‌ಎಸ್‌ಗೆ ಬೆಳಗ್ಗೆ 5:30 ರ ಸುಮಾರಿಗೆ ಕರೆ ಬಂದ ನಂತರ ಮೂರು ಅಗ್ನಿಶಾಮಕ ಟೆಂಡರ್‌ಗಳನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ.

Delhi Airport Terminal 1 Roof Collapses ಮೇಲ್ಛಾವಣಿ ಕುಸಿತದ ಘಟನೆಯ ನಂತರ ಟರ್ಮಿನಲ್ -1ರಲ್ಲಿ ವಿಮಾನ ನಿರ್ಗಮನವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ.ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಮೇಲ್ಛಾವಣಿ ಕುಸಿತದ ಘಟನೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯ ಸಾಗುತ್ತಿದೆ. ಟರ್ಮಿನಲ್ 1ರಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದೆ ಎಂದು ಹೇಳಿದ್ದಾರೆ.

Horticulture Department ತೋಟಗಾರಿಕಾ ಮಿಷನ್ ಯೋಜನೆ 2024-25 ಇದರ ಲಾಭ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನ

0

Horticulture Department ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖಾ ವತಿಯಿಂದ 2024-25ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ (ಅಂಗಾಂಶ ಬಾಳೆ, ಹೈಬ್ರಿಡ್ ತರಕಾರಿ, ಕಾಳುಮೆಣಸು, ಬಿಡಿಹೂ, ಸುಗಂಧರಾಜ ಮತ್ತು ಗುಲಾಬಿ), ನೀರು ಸಂರಕ್ಷಣಾ ಘಟಕಗಳಾದ ವೈಯುಕ್ತಿ ಕೃಷಿ ಹೊಂಡ ಮತ್ತು ಸಮುದಾಯ ಕೃಷಿಹೊಂಡ ನಿರ್ಮಾಣ, ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ನೆಲಹೊದಿಕೆ (ಪ್ಲಾಸ್ಟಿಕ್ ಮಲ್ಚಿಂಗ್), ಮಿನಿ ಟ್ರ್ಯಾಕ್ಟರ್ ಮತ್ತು ಮಾನವ ಸಂಪನ್ಮೂಲ ಕಾರ್ಯಕ್ರಮಗಳಾದ ರೈತರಿಗೆ ತರಬೇತಿ ಮತ್ತು ಶೈಕ್ಷಣಿಕ ಪ್ರವಾಸ ಇತ್ಯಾದಿ ಕಾರ್ಯಕ್ರಮಗಳ ಸೌಲಭ್ಯವನ್ನು ಪಡೆಯಬಹುದಾಗಿದೆ.

ಕೃಷಿ ಯಾಂತ್ರೀಕರಣ ಉಪ ಅಭಿಯನಾ (ಎಸ್.ಎಂ.ಎ.ಎಂ) ಕಾರ್ಯಕ್ರಮದಡಿ ಅಡಿಕೆ ಸುಲಿಯುವ ಯಂತ್ರ, ಅಡಿಕೆ ಗೊರಬಲು ಪಾಲಿಷತ್, ಅಡಿಕೆ ದೋಟಿ ಇತ್ಯಾದಿ ಯಂತ್ರಗಳಿಗೆ ಸಹಾಯಧನ ಲಭ್ಯವಿದೆ.
ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15 ರೊಳಗಾಗಿ ಸಲ್ಲಿಸುವಂತೆ ತೋಟಗಾರಿಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Horticulture Department ಹೆಚ್ಚಿನ ಮಾಹಿತಿಗಾಗಿ ಅಯಾ ತಾಲೂಕು ತೋಟಗಾರಿಕೆ ಕಚೇರಿ/ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಅಥವಾ ಜಿಲ್ಲಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವುದು.

Government Residential Polytechnic for Women ಶಿವಮೊಗ್ಗ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ನಲ್ಲಿ‌ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮ

0

Government Residential Polytechnic for Women ಶಿವಮೊಗ್ಗ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂ.27 ರಂದು ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ತೀರ್ಥೇಶ್ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರವಿ ನಾಯಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಜಿಲ್ಲಾ ಕಾರ್ಯದರ್ಶಿ ಸರ್ಕಾರಿ ನೌಕರರ ಸಂಘ ಡಿಟಿ ಕೃಷ್ಣಮೂರ್ತಿ, ರೆಡ್ ಕ್ರಾಸ್ ಅಧಿಕಾರಿ ಶ್ರೀಮತಿ ಚೈತ್ರ ಕೆ ಎಂ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಗುರುಸ್ವಾಮಿ, ಎನ್.ಎಸ್.ಎಸ್. ಅಧಿಕಾರಿ ಶ್ರೀಮತಿ ಜ್ಯೋತಿ ಬಿಕೆ, ಕ್ರೀಡಾ ಸಂಘದ ಅಧಿಕಾರಿ ಶ್ರೀಮತಿ ಶಾಲಿನಿ ಬಿ ಎನ್, ಪ್ಲೇಸ್ಮೆಂಟ್ ಆಫೀಸರ್ ಶ್ರೀಮತಿ ಅನುಷಾ ನಾಯಕ್ ಉಪಸ್ಥಿತರಿದ್ದರು.

Shivamogga Police ನಾಪತ್ತೆಯಾಗಿರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಪ್ರಕಟಣೆ

0

Shivamogga Police ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಜಿ.ಬಿ ಬಿನ್ ಫಕೀರಪ್ಪ 30 ವರ್ಷ ಎಂಬುವವರು ನವೆಂಬರ್ 2023ರಲ್ಲಿ ಮನೆಯಿಂದ ಕೆಲಸಕ್ಕೆ ಎಂದು ಹೋದವರು ಈವರೆಗೂ ಮನೆಗೆ ಬಂದಿರುವುದಿಲ್ಲ. ಈ ವ್ಯಕ್ತಿಯೂ ಸುಮಾರು 5.8 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈ ಬಣ್ಣ ಹೊಂದಿರುತ್ತಾರೆ ಮನೆಯಿಂದ ಹೊಗುವಾಗ ಪಿಂಕ್ ಬಣ್ಣದ ಟೀ ಶರ್ಟ್ ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ.
Shivamogga Police ಮತ್ತೊಂದು ಪ್ರಕರಣದಲ್ಲಿ ನಗರದ ರಂಗಪ್ಪ ಬಿನ್ ಜವರೇಗೌಡ 79 ವರ್ಷದ ವ್ಯಕ್ತಿ ಜೂನ್ 2023ರಲ್ಲಿ ಮನೆಯಿಂದ ಹೊರಗೆ ಹೋದವರು ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ ಈ ವ್ಯಕ್ತಿಯೂ ಸುಮಾರು 5.7 ಅಡಿ ಎತ್ತರ ದುಂಡುಮುಖ ಬಿಳಿಕೂದಲು ಗೋಧಿ ಮೈ ಬಣ್ಣ ಹೊಂದಿರುತ್ತಾರೆ ಮನೆಯಿಂದ ಹೊಗುವಾಗ ಸಿಮೇಂಟ್ ಬಣ್ಣದ ಟೀ ಶರ್ಟ್ ನೀಲಿ ಬಣ್ಣದ ಪಂಚೆ ಹಸಿರು ಬಣ್ಣದ ಟವಲ್ ಧರಿಸಿರುತ್ತಾರೆ.ಈ ಚಹರೆಯ ವ್ಯಕ್ತಿಗಳು ಕಂಡ ಬಂದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ, ದೂ.ಸಂ.: 9480803308 ಅಥವಾ ಕಂಟ್ರೋಲ್ ರೂಂ.ನಂ.: 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿರಿಸಿರುತ್ತಾರೆ.

Keladi Shivappanayaka University ಜೂನ್ 29, ಕುವೆಂಪು ರಂಗಮಂದಿರದಲ್ಲಿ ಕೃಷಿ ಶಿಕ್ಷಣ ಸುಗ್ಗಿ- 2024

0

Keladi Shivappanayaka University ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಶಿವಮೊಗ್ಗ ಇವರ ಸಂಯುಕ್ತ್ರಾಯದಲ್ಲಿ ಜೂನ್ 29 ರ ಬೆಳಗ್ಗೆ 9.30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಕೃಷಿ ಶಿಕ್ಷಣ ಸುಗ್ಗಿ-2024 ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಇವರು ನೆರವೇರಿಸುವರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ ಜಗದೀಶ ಅಧ್ಯಕ್ಷತೆ ವಹಿಸುವರು.

Keladi Shivappanayaka University ಮುಖ್ಯ ಅಥಿತಿಗಳಾಗಿ ಜಿಲ್ಲಾಧಿಕಾರಿಗಳಾದ ಗುತುದತ್ತ ಹೆಗಡೆ, ವಿವಿ ಆಡಳಿತ ಮಂಡಳಿಯ ಸದಸ್ಯರುಗಳಾದ ಜಿ.ಹೆಚ್.ಶ್ರೀನಿವಾಸ್, ಡಾ.ಪಿ.ಕೆ ಬಸವರಾಜ, ಡಾ.ಬಿ.ಕೆ ಕುಮಾರಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ.ಬಿ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು, ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.