Saturday, April 11, 2026
Saturday, April 11, 2026
Home Blog Page 672

S.N.Channabasappa ಜಿಲ್ಲಾ ಕೆಡಿಪಿ ಸಭೆಯಲ್ಲಿ ಬಕ್ರೀದ್ ಗೋಹತ್ಯೆ ಕುರಿತು ಶಾಸಕ ಚೆನ್ನಿ ಮತ್ತು ಶಾಸಕಿ ಬಲ್ಕಿಶ ಬಾನು ನಡುವೆ ವಾಗ್ಯುದ್ಧ

0

ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋಹತ್ಯೆ ಮಾಡಲಾಗುತ್ತಿದೆ. ಕಾನೂನು ಪಾಲನೆ ಮಾಡದೆ ಇರುವುದು ಸರಿಯಲ್ಲ. ಸರ್ಕಾರದಿಂದ ಕಾನೂನು ಪಾಲನೆ ಮಾಡಬಾರದೆಂಬ ಆದೇಶವಿದೆಯೇ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬಕ್ರೀದ್ ಹಬ್ಬದಲ್ಲಿ ಗೋಹತ್ಯೆಯಾಗಿಲ್ಲ ಎಂದು ಈ ವೇಳೆ ಶಾಸಕಿ ಬಲ್ಕೀಶ್ ಬಾನು ಹೇಳಿದಾಗ, ಇದಕ್ಕೆ ಶಾಸಕ ಚನ್ನಬಸಪ್ಪ ಹಬ್ಬದ ಬಗ್ಗೆ ಆಕ್ಷೇಪವಿಲ್ಲ. ಆದರೆ ಗೋಹತ್ಯೆ ನಡೆದಿಲ್ಲ ಎಂದರೆ ರಾಜೀನಾಮೆ ನೀಡುತ್ತೇನೆ ಎಂದರು.

ಗೋಹತ್ಯೆ ವಿಷಯದಲ್ಲಿ ಶಾಸಕ ಚನ್ನಬಸಪ್ಪ ಮತ್ತು ನೂತನ ಎಂಎಲ್ ಸಿ ಬಲ್ಕೀಶ್‌ಬಾನು ನಡುವೆ ಜುಗಲ್ ಬಂಧಿ ನಡೆಯಿತು.

ಚನ್ನಬಸಪ್ಪ ಮಾತನ್ನು ಬೆಂಬಲಿಸಿದ ಶಾಸಕ ಆರಗ ಮತ್ತು ವಿಜಯೇಂದ್ರ ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೊಳಿಸಿ ಎಂದರು. ಇದಕ್ಕೆ ಎಸ್ಪಿ ಮಿಥುನ್‌ಕುಮಾರ್ ಮಾತನಾಡಿ, ಕಳೆದ ವರ್ಷ ೨೧ ಗೋಹತ್ಯೆ ಪ್ರಕರಣ ದಾಖಲಾಗಿದೆ ಈ ವರ್ಷ 44 ಪ್ರಕರಣ ದಾಖಲಾಗಿದೆ.

ಗೋವಿನ ಬಗ್ಗೆ ಮಾಹಿತಿ ಇದ್ದರೆ ನಮ್ಮ ಗಮನಕ್ಕೆ ತನ್ನಿ. ಗಮನಕ್ಕೆ ತಂದ ನಂತರ ಕ್ರಮವಾಗದಿದ್ದರೆ ನೀವು ಆರೋಪಿಸಿ ಎಂದಿದ್ದೆ ಎಂದ ಎಸ್ಪಿ, ಅವರು ಈ ಬಗ್ಗೆ 100 ದೂರು ಬಂದಿದೆ.
ಎಲ್ಲರ ಬಗ್ಗೆ ಕ್ರಮಜರುಗಿಸಲಾಗುವುದು ಎಂದರು.

S.N.Channabasappa ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಗೋಹತ್ಯೆ ನಿಷೇಧ ಕಾನೂನು ವಿಚಾರದಲ್ಲಿ ನಾನು ಮಧ್ಯ ಪ್ರವೇಶಿಸುವುದಿಲ್ಲ. ಕಾನೂನು ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಿ ಎಂದಿರುವೆ. ಕಾನೂನು ಬಿಟ್ಟರೆ ಜನಪ್ರತಿನಿಧಿಗಳು ನನ್ನ ಗಮನಕ್ಕೆ ತನ್ನಿ. ಗೋಹತ್ಯೆ ವಿಷಯ ಸೂಕ್ಷ್ಮ ವಿಚಾರವಾಗಿದೆ. ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದಕ್ಕೆ ಆಕ್ಷೇಪಿಸಿದ ಶಾಸಕ ಚನ್ನಬಸಪ್ಪ ಸೂಕ್ಷ್ಮವಾಗಿದ್ದರೆ ಕ್ರಮ ಜರುಗಿಸಿ. ಹತ್ಯೆಯಾಗಿರುವ ಬಗ್ಗೆ ಕ್ರಮ ಜರುಗಿಸಿ ಎಂದರು. ಎಸ್ಪಿ ಮಿಥುನ್‌ಕುಮಾರ್ ಮಾತನಾಡಿ, ಗೋಹತ್ಯೆ ಪ್ರಕರಣದಲ್ಲಿ ಕಾನೂನು ಬಾಹಿರವಾಗಿದ್ದರೆ ಕ್ರಮ ನಿಶ್ಚಿತ ಎಂದರು. ಗೋಹತ್ಯೆಯೇ ಕಾನೂನು ಬಾಹಿರ ಎಂದು ಮತ್ತೆ ಶಾಸಕ ಚೆನ್ನಿ ಹೇಳಿದರು.

ಮುನ್ಸಿಪಾಲ್ಟಿ ವಾಹನದಲ್ಲಿ ಗೋತ್ಯಾಜ್ಯ ಸಾಗಾಣೆ ಆಗಿದೆ. ಇದು ಕಾನೂನು ಬಾಹಿರವಲ್ಲವೇ ಎಂದ ಶಾಸಕ ಚೆನ್ನಿಗೆ ಎಸ್ಪಿ ವಿವರಣೆ ನೀಡಿ, ಈ ವರ್ಷ 101 ಗೋರಕ್ಷಣೆ ಆಗಿದೆ ಎಂದು ಹೇಳಿದರು.

ರಕ್ಷಕರ ವಿರುದ್ಧ ಎಷ್ಟು ಕೇಸ್ ಹಾಕಿದ್ದೀರಿ ಎಂದು ಎಂಎಲ್ ಸಿ ಅರುಣ್ ಪ್ರಶ್ನಿಸಿದರು. ಶಾಸಕ ಚೆನ್ನಿ ಅವರ ಮಾತಿಗೆ ಭದ್ರಾವತಿ ಶಾಸಕ ಸಂಗಮೇಶ್ವರ್ ಭದ್ರಾವತಿಯಲ್ಲಿ ಗೋಹತ್ಯೆ ನಡೆದಿಲ್ಲ ಎಂದರು.

ಈ ಮಧ್ಯೆ ಬಲ್ಕೀಶ್ ಬಾನು ಜಿಲ್ಲೆಯಲ್ಲಿ ಹಲವು ಸಮಸ್ಯೆ ಇದೆ. ಬೇರೆ ವಿಷಯ ಮಾತನಾಡಿ ಎಂದಾಗ, ನಿಮ್ಮ ಬಗ್ಗೆ ಗೌರವವಿದೆ. ಗೋಹತ್ಯೆ ಸಮಸ್ಯೆ ಅಲ್ವಾ ಎಂದು ಚನ್ನಬಸಪ್ಪ ಆಕ್ಷೇಪಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋಶಾಲೆಯಲ್ಲಿ ಗೋಸಾಗಣೆ ಮಾಡಿ ಹತ್ಯೆ ಮಾಡಲಾಗಿದೆ. ಕಾನೂನು ಸರಿಯಾಗಿ ಪಾಲನೆ ಆಗದಿದ್ದರೆ ಎರಡು ಧರ್ಮಗಳ ನಡುವೆ ಗಲಾಟೆ ಆಗಲಿದೆ ಎಂದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ ಗೋಶಾಲೆ ಆರಂಭಿಸಿ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಗೋಶಾಲೆ ಆರಂಭ ವಿಳಂಬವಾಗಿರುವ ಬಗ್ಗೆ ಶಾಸಕ ಚನ್ನಬಸಪ್ಪ ಆಕ್ಷೇಪಿಸಿದರು.

BJP Raitha Morcha ದನಕರುಗಳನ್ನ ಡೀಸಿ ಕಚೇರಿ ಎದುರು ಕಟ್ಡಿಹಾಕಿ ಬಿಜೆಪಿ ಯಿಂದ ಹಾಲಿನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

0

BJP Raitha Morcha ಹಾಲಿನ ಬೆಲೆ ಏರಿಕೆ ಏರಿಕೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ದನಗಳನ್ನ ಡಿಸಿ ಕಚೇರಿಗೆ ಹೊಡೆದುಕೊಂಡು ಬಂದು ಕಟ್ಟಿಹಾಕಿ ಪ್ರತಿಭಟನೆ ನಡೆಸಿತು.

ಕಳೆದ ಬಜೆಟ್‌ನಲ್ಲಿ ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆಯಾದರೂ, ಪಶುಪಾಲನ ಇಲಾಖೆ ಇತರೆ ವೆಚ್ಚಗಳಿಗೆ ಬಳಸಿಕೊಂಡಿರುವ ಆರೋಪವಿದ್ದು ಸರ್ಕಾರ ಸ್ಪಷ್ಟಪಡಿಸಬೇಕು.
08 ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಕ್ಷೀರ ಸಂಮೃದ್ಧಿ ಬ್ಯಾಂಕ್ ಆರಂಭಿಸದೆ ಇರುವುದು ಸರಿಯಲ್ಲ. ೮೨೪ ರೈತರ ಆತ್ಮಹತ್ಯೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

BJP Raitha Morcha ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯಾಗಿದೆ ಎಂದು ಪ್ರತಿಭನಾಕಾರರು ಆಗ್ರಹಿಸಿದರು.

NEET-UG ನೀಟ್ – ಯುಜಿ ಪೇಪರ್ ಲೀಕ್: ಗುಜರಾತಿನ ಏಳು ಕಡೆ ಶೋಧ ಕಾರ್ಯಾಚರಣೆ

0

NEET-UG ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ಶನಿವಾರ ಗುಜರಾತ್‌ನ ಏಳು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನಂದ್, ಖೇಡಾ, ಅಹಮದಾಬಾದ್ ಮತ್ತು ಗೋದ್ರಾ ಸೇರಿದಂತೆ ನಾಲ್ಕು ಜಿಲ್ಲೆಗಳ ಶಂಕಿತರ ಮನೆಗಳಲ್ಲಿ ಬೆಳಿಗ್ಗೆ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಅವರು ಹೇಳಿದರು.

ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರಿಗೆ ಸಹಾಯ ಮಾಡಲು ಯತ್ನಿಸಿದ ಆರೋಪದ ಮೇಲೆ ಪತ್ರಕರ್ತ ಜಮಾಲುದ್ದೀನ್ ಅನ್ಸಾರಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (ನೀಟ್-ಯುಜಿ) ಗೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಶಾಲೆಯೊಂದರ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಹಿಂದಿ ಪತ್ರಿಕೆಯೊಂದರ ಪತ್ರಕರ್ತರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.

ಮೇ 5 ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್ ಅವರನ್ನು ಹಜಾರಿಬಾಗ್‌ನ ನಗರ ಸಂಯೋಜಕರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

ಉಪಪ್ರಾಂಶುಪಾಲ ಇಮ್ತಿಯಾಜ್ ಆಲಂ ಅವರನ್ನು ಎನ್‌ಟಿಎ ವೀಕ್ಷಕರಾಗಿ ಮತ್ತು ಓಯಸಿಸ್ ಶಾಲೆಯ ಕೇಂದ್ರ ಸಂಯೋಜಕರನ್ನಾಗಿ ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಸೋರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಇನ್ನೂ ಐದು ಜನರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ ಎಂದು ಹೇಳಿದರು.

NEET-UG ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ, ಇದರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇಲೆ ತನ್ನದೇ ಆದ ಎಫ್‌ಐಆರ್ ಮತ್ತು ತನಿಖೆಯನ್ನು ವಹಿಸಿಕೊಂಡ ರಾಜ್ಯಗಳಿಂದ ಐದು ಸೇರಿವೆ. ತನಿಖಾ ಸಂಸ್ಥೆಯು ಬಿಹಾರ, ಗುಜರಾತ್‌ನಲ್ಲಿ ತಲಾ ಒಂದು ಮತ್ತು ರಾಜಸ್ಥಾನದಲ್ಲಿ ಮೂರು ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

G.K. Mithun Kumar ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾದರೆ ಜೀವನ ಪೂರ್ತಾ ಸಾಮಾನ್ಯ ಜ್ಞಾನದ ಲಾಭ- ಜಿ.ಕೆ. ಮಿಥುನ್ ಕುಮಾರ್

0

G.K. Mithun Kumar ಜೀವನ ನಡೆಸಲು ಪ್ರಾಪಂಚಿಕ ಜ್ಞಾನ ಮುಖ್ಯವಾಗಿದ್ದು, ಒಂದು ಬಾರಿಯಾದರೂ ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದೇ ಆದರೆ ಸಾಮಾನ್ಯ ಜ್ಞಾನವು ನಿಮಗೆ ಜೀವನದುದ್ದಕ್ಕೂ ಉಪಯೋಗಕ್ಕೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಲೋಕ ಸೇವ ಆಯೋಗವು ನಡೆಸುವ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ ಮಿಥುನ್‌ಕುಮಾರ್ ಹೇಳಿದರು.

ಅವರು ಸಾಗರ ತಾಲೂಕು ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನದ ವಿಶ್ವವಿದ್ಯಾಲಯದಲ್ಲಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಚಲಿತ ವಿದ್ಯಮಾನಗಳು, ಸರ್ಕಾರದ ಆಡಳಿತ ವೈಖರಿ, ಸುತ್ತೋಲೆ, ಆದೇಶಗಳ ಬಗ್ಗೆ, ಆರ್ಥಿಕತೆ, ರಾಜಕೀಯ, ಭೌಗೋಳಿಕ ವಿಷಯದಲ್ಲಿ ಜ್ಞಾನ ಪಡೆದುಕೊಳ್ಳಬೇಕು. ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದರಿಂದ ಸುಲಭವಾಗಿ ಯಶಸ್ಸು ಕಾಣಲು ಸಾಧ್ಯವಿದೆ ಎಂದ ಅವರು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯ ಪರೀಕ್ಷಾರ್ಥಿಗಳು ತೆಗೆದುಕೊಳ್ಳುತ್ತಾರಾದರೂ ಸಂಪೂರ್ಣವಾಗಿ ತಯಾರಿ ನಡೆಸಿದವರಿಗೆ ಮಾತ್ರ ಯಶಸ್ಸು ದೊರೆಯಲಿದೆ. ಸತತ ಪ್ರಯತ್ನಕ್ಕೆ ಖಚಿತವಾಗಿ ಫಲ ದೊರೆಯುತ್ತದೆ ಎಂದರು.

G.K. Mithun Kumar ಪ್ರಸ್ತುತ ಆನ್ ಲೈನ್ ಮುಖಾಂತರ ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತಯಾರಿ ನಡೆಸಲು ಸಹಾಯವಾಗುವ ಮಾಹಿತಿ ಕೂಡ ಸುಲಭವಾಗಿ ದೊರೆಯಲಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಕರೆ ನೀಡಿದರು.

Madhu Bangarappa ಮಲೆನಾಡಿನಲ್ಲಿ ಆನೆಹಿಂಡುಗಳ ಕಾಟದ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು- ಮಧು ಬಂಗಾರಪ್ಪ

0

Madhu Bangarappa ಮಲೆನಾಡು ಭಾಗದಲ್ಲಿ ಆಗಾಗ್ಗೆ ಕಂಡುಬರುವ ಆನೆಗಳ ಹಿಂಡುಗಳಿಂದಾಗಿ ಕೃಷಿಕರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಗೊಳಗಾಗುತ್ತಿದೆ. ಅದರ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಆನೆಯ ತುಳಿತಕ್ಕೊಳಗಾದ ಕುಟುಂಬಕ್ಕೆ ಒಂದು ತಿಂಗಳೊಳಗಾಗಿ ಪರಿಹಾರಧನ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಸಂಬಂಧಿಸಿದ ತಾಲೂಕುಗಳ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೊರತೆ ಇರುವ ಶಿಕ್ಷಕರ ಭರ್ತಿ ಮಾಡಲು ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಸುಮಾರು 12,000 ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 15,000 ಶಿಕ್ಷಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಕಡಿಮೆ ಮಕ್ಕಳಿರುವ ಶಾಲೆಯ ಮಕ್ಕಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಿ, ಉತ್ತಮ ಶಿಕ್ಷಣ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ನೀಟ್ ಪರೀಕ್ಷಾ ಪೂರ್ವ ತರಬೇತಿ ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 500ಕೆ.ಪಿ.ಎಸ್. ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗಳ ಸಂಖ್ಯೆಯನ್ನು 1000ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದ್ದು, ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಜಿಲ್ಲೆಯಲ್ಲಿ ಕೊರತೆ ಇರುವ ವೈದ್ಯರ ಹುದ್ದೆಗಳ ನೇಮಕಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರನ್ನು ನೇಮಿಸಲು ಉದ್ದೇಶಿಸಲಾಗಿದೆ. ಪಶು ಇಲಾಖೆಯಲ್ಲಿನ ವೈದ್ಯರ ಹುದ್ದೆಗಳ ನೇಮಕ್ಕಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಅತಿವೃಷ್ಟಿಯಿಂದ ಬಿದ್ದಿರುವ ಹಾಗೂ ಭಾಗಶಃ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ಥರಿಗೆ ಕಳೆದ 2-3 ವರ್ಷಗಳಿಂದ ಪರಿಹಾರಧನ ವಿತರಿಸದಿರುವುದು ನೋವಿನ ಸಂಗತಿ ಕೂಡಲೇ ಪರಿಹಾರಧನ ಕೊಡಿಸುವಂತೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಸಚಿವರಿಗೆ ಮನವಿ ಮಾಡಿದರು.

Madhu Bangarappa ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಎಸ್ ಪಿ ಜಿ.ಕೆ.ಮಿಥುನ್‌ಕುಮಾರ್, ಶಾಸಕ ಬಿ.ಕೆ.ಸಂಗಮೇಶ್, ಎಸ್.ಎನ್.ಚನ್ನಬಸಪ್ಪ, ಶಾಸಕಿ ಶಾರದಾ ಪೂರ್ಯಾನಾಯ್ಕ್ ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಭಾರತಿ ಶೆಟ್ಟಿ, ಎಂ.ಎ.ಡಿ.ಬಿ.ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

B. Y. Raghavendra ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಪ್ರೌಢಶಾಲಾ ಹಂತ ಉತ್ತಮ- ಬಿ.ವೈ.ರಾಘವೇಂದ್ರ

0

B. Y. Raghavendra ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರೌಢಶಾಲಾ ಹಂತ ಉತ್ತಮವಾಗಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ “ಮೈ ಸೇವಾ ಟ್ರಸ್ಟ್” ವತಿಯಿಂದ ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದರು.

ಮೈತ್ರಾದೇವಿ ಯಡಿಯೂರಪ್ಪ ಎಂದು ಇದ್ದು ಅವರ ಹೆಸರಿನಲ್ಲಿ ಸಂಸ್ಥೆ ನಿರ್ಮಿಸಿ ಸಾಮಾಜಿಕ ಕಾರ್ಯ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದರು. ನಮಗೆ ಗಾಂಧೀಜಿ, ಅಂಬೇಡ್ಕರ್ ,ಸಾವರ್ಕರ್, ಆಜಾದ್ ಚಂದ್ರಶೇಖರ್ ಮಾದರಿಯಾಗಿರಬೇಕು ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಮಾತನಾಡಿ, ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ , ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಿಮ್ಮ ತಂದೆ ತಾಯಿಗಳು ತಾವು ತಿನ್ನುವ ತುತ್ತಿನಲ್ಲಿ, ನಿಮಗೆ ತುತ್ತು ಕೊಟ್ಟು ಸಾಕಿ ಬೆಳೆಸಿದ್ದಾರೆ , ಅವರಿಗೆ ವಯಸ್ಸಾದ ಕಾಲಕ್ಕೆ, ಅವರ ಮನಸ್ಸಿಗೆ ನೋವಾಗದಂತೆ ಅವರನ್ನು ದೂರ ಮಾಡದಂತೆ ನೀವು ನೋಡಿಕೊಳ್ಳಬೇಕು ಎಂದರು.

ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಹೆದರಿ ಓಡಿ ಹೋಗದೆ, ಅವುಗಳನ್ನು ಧೈರ್ಯವಾಗಿ ನಿಂತು ದಿಟ್ಟವಾಗಿ ಎದುರಿಸಿ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ಸುಗಳ ಸಮಸ್ಯೆ ಇದ್ದು , ಈಗಾಗಲೇ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಹಲವು ಲೈನ್ ಗಳಿಗೆ ಬಸ್ಸು ಗಳನ್ನು ಓಡಿಸಲಾಗುತ್ತಿದೆ, ಇನ್ನು ಬಾಕಿ ಇರುವ ಪ್ರದೇಶಗಳಿಗೆ ಮತ್ತೆ ಸಾರಿಗೆ ಸಚಿವರ ಜೊತೆ ಮಾತುಕತೆ ನಡೆಸಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಎಸ್ ಬಿ ಮಠದ್ ವಹಿಸಿದ್ದರು.

B. Y. Raghavendra ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಶಾಸಕ ರಾಮಮೂರ್ತಿ , ಎಂ ಎ ಡಿ ಬಿ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ , ಮೈ ಟ್ರಸ್ಟಿನ ಕಾರ್ಯದರ್ಶಿ ಹಾಗೂ ಹಿರಿಯ ವಕೀಲರ ಸಂದೀಪ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಇರ್ಫಾನ್ ಖಾನ್ , ಅಶೋಕ್ ನಾಯಕ್, ಸೋಮಶೇಖರ್ , ಬಿ ಪಾಪಯ್ಯ, ನಿಂಬೆಗೊಂದಿ ಸಿದ್ದಲಿಂಗಪ್ಪ , ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ , ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ , ಮುಂತಾದವರು ಪಾಲ್ಗೊಂಡಿದ್ದರು.

Laloo Prasad Yadav ಎಮರ್ಜೆನ್ಸಿಯಲ್ಲಿ ನಾನೂ ಮೀಸಾ ಬಂದಿಯಾಗಿದ್ದೆ’ ನೆನಪು ಮಾಡಿ ಕೊಂಡ ಲಾಲೂ ಪ್ರಸಾದ್ ಯಾದವ್

0

Laloo Prasad Yadav ಆಗಿನ ಪ್ರಧಾನಿ ಇಂದಿರಾ ಗಾಂಧಿ ಅನೇಕ ನಾಯಕರನ್ನು ಕಂಬಿ ಹಿಂದೆ ಹಾಕಿದರು; ಆದರೆ ಅವರು ಎಂದಿಗೂ ನಿಂದಿಸಲಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ತಾವು ಅನುಭವಿಸಿದ್ದನ್ನು ನೆನಪಿಸಿಕೊಂಡರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪತ್ರಕರ್ತ ನಳಿನ್ ವರ್ಮಾ ಬರೆದ “ದಿ ಸಂಘ್ ಸೈಲೆನ್ಸ್ ಇನ್ 1975” ಲೇಖನವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, 1975 ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದ್ದರೂ, 2024ರಲ್ಲಿ ವಿರೋಧ ಪಕ್ಷವನ್ನು ಯಾರು ಗೌರವಿಸುವುದಿಲ್ಲ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

“ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿಯ ಮಿತಿಮೀರಿದ ವಿರುದ್ಧದ ಚಳವಳಿಯನ್ನು ಮುಂದುವರಿಸಲು ಜಯಪ್ರಕಾಶ್ ನಾರಾಯಣ್ ಅವರು ರಚಿಸಿದ್ದ ಸ್ಟೀರಿಂಗ್ ಕಮಿಟಿಯ ಸಂಚಾಲಕನಾಗಿದ್ದೆ. ನಾನು 15 ಕ್ಕೂ ಹೆಚ್ಚು ಕಾಲ ಭದ್ರತಾ ಕಾಯಿದೆ (ಮಿಸಾ) ಅಡಿಯಲ್ಲಿ ಜೈಲಿನಲ್ಲಿದ್ದೆ. ಹಲವು ತಿಂಗಳುಗಳಿಂದ ನನಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಮೋದಿ, ಜೆಪಿ ನಡ್ಡಾ ಮತ್ತು ಇಂದು ನಮಗೆ ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ಉಪನ್ಯಾಸ ನೀಡುತ್ತಿರುವುದನ್ನು ನಾವು ಕೇಳಿರಲಿಲ್ಲ” ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Laloo Prasad Yadav “ಇಂದಿರಾ ಗಾಂಧಿಯವರು ನಮ್ಮಲ್ಲಿ ಅನೇಕರನ್ನು ಕಂಬಿ ಹಿಂದೆ ಹಾಕಿದರು, ಆದರೆ ಅವರು ಎಂದಿಗೂ ನಮ್ಮನ್ನು ನಿಂದಿಸಲಿಲ್ಲ. ಅವರು ಅಥವಾ ಅವರ ಮಂತ್ರಿಗಳು ನಮ್ಮನ್ನು “ದೇಶವಿರೋಧಿ” ಅಥವಾ “ದೇಶದ್ರೋಹಿ” ಎಂದು ಕರೆಯಲಿಲ್ಲ. ನಮ್ಮ ವಾಸ್ತುಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಯನ್ನು ಅಶುದ್ಧಗೊಳಿಸಲು ವಿಧ್ವಂಸಕರಿಗೆ ಅವರು ಎಂದಿಗೂ ಅವಕಾಶ ನೀಡಲಿಲ್ಲ. ಆದರೆ, 2024 ರಲ್ಲಿ ವಿರೋಧ ಪಕ್ಷವನ್ನು ಯಾರು ಗೌರವಿಸುವುದಿಲ್ಲ ಎಂದು ನಾವು ಮರೆಯಬಾರದು” ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

K.B. Ashok Naik ವಿದ್ಯಾರ್ಥಿಗಳು ಸಾಂಸ್ಕೃತಿ, ಕ್ರೀಡಾ ವೇದಿಕೆಗಳ ಸದುಪಯೋಗ ಪಡೆಯಬೇಕು-ಕೆ.ಬಿ.ಅಶೋಕ್ ನಾಯಕ್

0

K.B. Ashok Naik  ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಖಿನ್ನತೆಯಿಂದ ದೂರ ಉಳಿಯಬಹುದಾಗಿದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು ಎಂದು ಅಕ್ಷರ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರಾದ ಕೆಬಿ ಅಶೋಕ್ ನಾಯಕಅವರು
ಶಿವಮೊಗ್ಗ ನಗರದ ಅಕ್ಷರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಯಲ್ಲಿ ಕಾಲೇಜು ಮಟ್ಟದಲ್ಲಿ ಸಿಗುವ ವೇದಿಕೆಗಳ, ಸಾಂಸ್ಕೃತಿಕ ಹಾಗೂ ಕ್ರೀಡಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯು ಸಾಂಸ್ಕೃತಿಕ ಮತ್ತು ಕ್ರೀಡಾ ಸಾಧಕರ ತವರೂರು. ಸಾಕಷ್ಟು ಜನರು ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಾಲಾ ಕಾಲೇಜಿನ ಹಂತದಿಂದಲೇ ಅಭ್ಯಾಸ ಆರಂಭಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಂಕಲ್ಪ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದರ್ಶಿ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಸಾಂಸ್ಕೃತಿಕ ಸಂಘಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುವುದರ ಜೊತೆಗೆ ಅವರಲ್ಲಿರುವ ಭಯ ಹೊರಟು ಹೋಗುತ್ತದೆ ಹಾಗೂ ಅವರಿಗೆ ವೇದಿಕೆಯ ಅವಕಾಶ ಸಿಗುವುದರ ಜೊತೆಗೆ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ಮಾಡಿದಂತಾಗುತ್ತದೆ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿ ಗಳಾಗಲು ವಿದ್ಯಾಭ್ಯಾಸದ ಜೊತೆಗೆ ಇಂಥ ಕಾರ್ಯಕ್ರಮಗಳು ತುಂಬಾ ಅಗತ್ಯ ಎಂದು ನುಡಿದರು
ಅಕ್ಷರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸುರೇಶ್ ಎಚ್ಆರ್ ಮಾತನಾಡಿ, ಕಾಲೇಜಿನ ಜೀವನವು ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ತರವಾಗಿದ್ದು, ಸಾಂಸ್ಕೃತಿಕ ವೇದಿಕೆಗಳಲ್ಲಿ ಭಾಗವಹಿಬೇಕು. ನಿಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
K.B. Ashok Naik  ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಗಿರೀಶ್ ಹೆಚ್ ಟಿ. ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಅವಕಾಶಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಅನೂಪ್ ರಾಜ್ ರವರು ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದರ ಜೊತೆಗೆ ನಮ್ಮನ್ನು ಸದಾ ಲವಲವಿಕೆಯಿಂದ ಇಡಲು ಸ್ಪೂರ್ತಿಯಾಗುತ್ತದೆ ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ನುಡಿದರು ಜಿ.ವಿಜಯ್‌ಕುಮಾರ್ ಅವರು ಲಾವಣಿ, ಜಾನಪದ, ಹಳೇಯ ಕನ್ನಡ ಚಿತ್ರಗೀತೆಗಳನ್ನು ಹಾಡಿದರು.
ಸಮ್ರಿನ್ , ಗಿರೀಶ್, ಸುರೇಶ್ ಎಚ್.ಆರ್., ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Phulo Devi Netam ನೀಟ್ ಪರೀಕ್ಷೆ ಅಕ್ರಮ. ಪ್ರತಿಭಟನೆ ವೇಳೆ ತಲೆಸುತ್ತಿ ಬಿದ್ದರಾಜ್ಯ ಸಭಾ ಸಂಸದೆಫುಲೋ ದೇವಿ ನೇತಮ್

0

Phulo Devi Netam ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಜ್ಯ ಸಭಾ ಸಂಸದೆ ಫುಲೊ ದೇವಿ ನೇತಮ್‌ ಸಂಸತ್‌ನೊಳಗೆ ಕುಸಿದು ಬಿದ್ದ ಘಟನೆ ನಡೆದಿದೆ.

ಪ್ರತಿಭಟನೆ ವೇಳೆ ತಲೆತಿರುಗಿದಂತಾಗಿ ಕುಸಿದು ಬಿದ್ದ ಅವರನ್ನು ಕೂಡಲೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದವು ಆದರೆ ಇತ್ತ ಆಡಳಿತ ಪಕ್ಷವೂ ಮೊದಲಿಗೆ ರಾಷ್ಟ್ರಪತಿಗಳ ಭಾಷನದ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಪ್ರತಿಪಕ್ಷಗಳು ಗಲಾಟೆ ಮುಂದುವರೆಸಿದವು.

ಹೀಗಾಗಿ ಸಂಸತ್ ಕಲಾಪವನ್ನು ಸೋಮವಾರ ಜುಲೈ 1ರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಮೇಲೆ ಕಿಡಿಕಾರಿದ್ದಾರೆ. ಇದು ಅವರ ಸಮಸ್ಯೆ, ನಾನು ಅವರ ಗಮನ ಸೆಳೆಯುವುದಕ್ಕಾಗಿ ಸದನಕ್ಕೆ ಹೋದೆ. ಆದರೆ ಅವರು ನಮತ್ತ ನೋಡಲೇ ಇಲ್ಲ, ನಾನು ಗಮನ ಸೆಳೆಯಲು ಸಾಕಷ್ಟು ಪ್ರಯತ್ನಿಸಿದೆ.

Phulo Devi Netam ಆದರೆ ಅವರು ಕೇವಲ ಆಡಳಿತ ಪಕ್ಷದ ಕಡೆಯೇ ನೋಡುತ್ತಿದ್ದರು. ನಿಯಮಗಳ ಪ್ರಕಾರ ನಾನು ಯಾವಾಗ ಅವರ ಗಮನ ಸೆಳೆಯಬೇಕು. ಅವರು ನಮ್ಮತ್ತಲೂ ನೋಡಲೇಬೇಕು. ಆದರೆ ಅವರು ನಮ್ಮತ್ತ ನೋಡದೆಯೇ ನಮ್ಮನ್ನು ಅವಮಾನಿಸಿದರು. ಹೀಗಿರುವಾಗ ನಮಗೇನು ಉಳಿದಿದೆ.

₹300 ಕೋಟಿ ಗಳಿಕೆಗೆ ಸ್ಕೆಚ್‌ ಹಾಕಿದ್ದ ನೀಟ್‌ ದಂಧೆಕೋರರು..!
ಅವರ ಗಮನ ಸೆಳೆಯುವುದಕ್ಕಾಗಿ ನಾವು ಒಂದೋ ಸೀದಾ ಒಳಗೆ ಹೋಗಬೇಕು ಅಥವಾ ಜೋರಾಗಿ ಕಿರುಚಾಡಬೇಕು. ಹೀಗಾಗಿ ಇದು ರಾಜ್ಯಸಭಾ ಅಧ್ಯಕ್ಷರ ತಪ್ಪು. ಅವರು ಈ ರೀತಿ ಮಾಡಬಾರದು ರಾಜ್ಯಸಭೆಯ ಗೌರವವನ್ನು ರಕ್ಷಿಸಬೇಕು. ನೀಟ್ ಪರೀಕ್ಷೆ ಎಂಬುದು ದೊಡ್ಡದಾದ ಹಗರಣ, ಪರೀಕ್ಷಾ ಪೇಪರ್ ಲೀಕ್ ಆಗಿದೆ. ಲಕ್ಷಕ್ಕೂ ಅಧಿಕ ಮಕ್ಕಳು ಚಿಂತೆಗೀಡಾಗಿದ್ದಾರೆ. ನಾವು ಈ ಬಗ್ಗೆ ನಿರ್ದಿಷ್ಟ ಚರ್ಚೆಗೆ ಕೇಳಿದ್ದೆವು. ನಾವು ಯಾರಿಗೂ ತೊಂದರೆ ಮಾಡುವುದಕ್ಕೆ ಅಲ್ಲ, ನಾವು ಕೇವಲ ವಿದ್ಯಾರ್ಥಿಗಳ ಸಮಸ್ಯೆಯನ್ನು ತೋರಿಸುವುದಕ್ಕೆ ಬಯಸಿದೆವು. ಆದರೆ ಅವರು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ., ಗಮನವನ್ನು ಹರಿಸಲಿಲ್ಲ ಎಂದು ಖರ್ಗೆ ಕಿಡಿಕಾರಿದರು.

Dr. Lata Nagendra ಮಕ್ಕಳಿಂದ ವೃದ್ಧರವರೆಗೆ ಒತ್ತಡದಲ್ಲಿ ಬದುಕುತ್ತಿದ್ದೇವೆ. ನಾವು ದೇಹ & ಮಾನಸಿಕ ಆರೋಗ್ಯ ಗಮನಿಸುತ್ತಿಲ್ಲ- ಡಾ.ಲತಾ ನಾಗೇಂದ್ರ

0

ನಿಮ್ಮ ಮನೆಯ ಚಿಕ್ಕ ಮಕ್ಕಳ ಆರೋಗ್ಯದ ಕುರಿತಾಗಿ ಯಾವುದೇ ರೀತಿಯಲ್ಲೂ ಪೋಷಕರು ನಿರ್ಲಕ್ಷ ಮಾಡಬಾರದು ಎಂದು ಎನ್’ಇಎಸ್ ಕಾರ್ಯದರ್ಶಿ ಸಿ.ಎನ್. ನಾಗರಾಜ್ ಸಲಹೆ ನೀಡಿದರು.

ಶಿವಮೊಗ್ಗದ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಶಿಕ್ಷಕರಿಗೆ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಇಂದಿನ ಹವಾಮಾನ, ಜೀವನ ಶೈಲಿಗಳು ಮೊದಲಿನಂತೆ ಇಲ್ಲ. ಎಲ್ಲವೂ ಬದಲಾವಣೆಯಾಗಿದ್ದು, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ, ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಎಲ್ಲರೂ ಮಾಡಿಸಿಕೊಳ್ಳುವುದು ಅಗತ್ಯ. ಅನಾರೋಗ್ಯಗಳು ನಮ್ಮತ್ತ ಸುಳಿಯದಂತೆ ಜೀವನ ಶೈಲಿ, ಆಹಾರ ಶೈಲಿಗಳನ್ನು ಬದಲಾವಣೆ ಮಾಡಿಕೊಳ್ಳುವ ಜೊತೆಯಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕಕಿ ಡಾ|| ಲತಾ ನಾಗೇಂದ್ರ ಮಾತನಾಡಿ, ಇತ್ತೀಚೀನ ದಿನಗಳಲ್ಲಿ ಮಕ್ಕಳಿಂದ ವೃದ್ಧರವರಿಗೆ ಎ?? ವಯೋಮಾನದವರು ಒತ್ತಡದಲ್ಲಿ ಬದುಕುತ್ತಿದ್ದೇವೆ.. ನಮ್ಮ ದೇಹ ಹಾಗೂ ಮಾನಸಿನ ಆರೋಗ್ಯದ ಬಗ್ಗೆ ಗಮನ ಹರಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಸ್ತನ ಕ್ಯಾನ್ಸರ್ ತಡೆಯಲು ನಿಯಮಿತ ತಪಾಸಣೆ, ಪರೀಕ್ಷೆ, ಸೂಕ್ತ ಮುಂಜಾಗ್ರತೆ ವಹಿಸಬೇಕು. ಇದಕ್ಕಾಗಿ ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಪರೀಕ್ಷಿಸಗೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ನವೀನಾ ಪಾಯಸ್, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸನ್ ಎಚ್’ಒಡಿ ಡಾ|| ಡಿ.ಆರ್. ಬಾಲು, ಡಾ| ಭಾಗ್ಯಶ್ರೀ, ಡಾ|| ಅನುಪಮಾ, ಡಾ|| ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.