Saturday, April 11, 2026
Saturday, April 11, 2026
Home Blog Page 671

Shivamogga Newsಗುಡದಪ್ಪ ಕಸಬಿಗೆ ಶ್ರೇಷ್ಠ ವೈದ್ಯ ರಾಜ್ಯಪ್ರಶಸ್ತಿ

0

ಶಿವಮೊಗ್ಗ: ವೈದ್ಯರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದಿಂದ ನೀಡುವ ಶ್ರೇಷ್ಠ ವೈದ್ಯ ರಾಜ್ಯ ಪ್ರಶಸ್ತಿಗೆ ಶಿವಮೊಗ್ಗದ ವೈದ್ಯ ಡಾ. ಗುಡದಪ್ಪ ಕಸಬಿ ಪಾತ್ರರಾಗಿದ್ದಾರೆ.
ಡಾ. ಗುಡದಪ್ಪ ಕಸಬಿ ಶಿಕಾರಿಪುರ ತಾಲೂಕಿನ ಮದಗ ಹಾರನಹಳ್ಳಿಯವರು. ಸಿದ್ದಪ್ಪ ಮತ್ತು ಯಲ್ಲಮ್ಮ ದಂಪತಿ ಪುತ್ರ. 1976ರಲ್ಲಿ ಜನಿಸಿದ ಗುಡದಪ್ಪ ಕಸಬಿ ಅವರು ಹುಬ್ಬಳ್ಳಿ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್, ಚೆನ್ನೈನಲ್ಲಿ ಐ.ಸಿ.ಎಂ.ಆರ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಎಂ.ಪಿ.ಹೆಚ್ ಹಾಗೂ ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯಲ್ಲಿ ಪಿ.ಜಿ ಡಿಪ್ಲೊಮಾ ಇನ್ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಅಧ್ಯಯನ ಮಾಡಿದ್ದಾರೆ.
ವೈದ್ಯಾಧಿಕಾರಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಗಡಿಯಲ್ಲಿ ವೃತ್ತಿ ಪ್ರಾರಂಭಿಸಿ, ನಂತರ ಮಾಸೂರಿನಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ,
ಹಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2012ರಲ್ಲಿ ಜೋರ್ಡಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೆ.ಎಫ್.ಡಿ ಕುರಿತು ಪ್ರಬಂಧ ಮಂಡಿಸಿದ್ದಾರೆ. ಕೆ.ಎಪ್.ಡಿ ಬಗ್ಗೆ ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಸಿದ್ದಾರೆ. 2013ರಿಂದ ರೋಟರಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ರೋಟರಿ ಅಧ್ಯಕ್ಷ, ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಆಲೆಮನೆ ಟಿ ಬಿ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ, ಮನೆಮನೆಗೆ ಲಾರ್ವಾಹಾರಿ ಮೀನುಗಳ ವಿತರಣೆ ಸೇರಿ ಅನೇಕ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಾದ ರೋಟರಿ ಸಹಾಯಕ ಗವರ್ನರ್ ಹಾಗೂ ರೋಟರಿ ಜಿಲ್ಲಾಮಟ್ಟದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿಯಾಗಿ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ. ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಒಳ್ಳೆಯ ಮಾತಿನ ಕಲೆ ಹೊಂದಿರುವ ಡಾ. ಗುಡದಪ್ಪ ಕಸಬಿ ರೋಟರಿ ಸಂಸ್ಥೆ ಅಧ್ಯಕ್ಷರಾದಾಗ ವಿಶೇಷ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಘದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾಧ್ಯಕ್ಷರಾದ ಸಂದರ್ಭದಲ್ಲಿ ಆರೋಗ್ಯ ಭವನ ನಿರ್ಮಾಣದ ಕನಸು ಕಂಡವರು. ನಗರದ ಶಕ್ತಿಧಾಮದಲ್ಲಿ ಈಗ ಆರೋಗ್ಯ ಭವನ ನಿರ್ಮಾಣವಾಗುತ್ತಿದೆ.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಮಾಜಿ ಜಿಲ್ಲಾ ಗವರ್ನರ್ ಡಾ. ಗೌರಿ ಅಭಿನಂದಿಸಿದ್ದಾರೆ.

Shivamogga Newsಮಕ್ಕಳಲ್ಲಿ ನಾಯಕತ್ವ ಗುಣ ಬೇಕು

0

ಶಿವಮೊಗ್ಗ : ಡೆಲ್ಲಿ ವರ್ಡ್  ಶಾಲೆಯಲ್ಲಿ ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿನಾಯಕರುಗಳಿಗೆ ಪದಗ್ರಹಣಸಮಾರಂಭವನ್ನುಹಮ್ಮಿಕೊಳ್ಳಲಾಗಿತ್ತು. ಪೋಲಿಸ್‌ ಇನ್ಸ್‌ಪೆಕ್ಟರ್‌ ಚಂದ್ರಕಲಾ, ಮಕ್ಕಳ ಕಲ್ಯಾಣಾಧಿಕಾರಿ ಗಾಯತ್ರಿ ಅವರು ಮಾತನಾಡಿ, ನಾಯಕತ್ವ ಗುಣಗಳನ್ನು ಬಾಲ್ಯದಿಂದಲೇ ಮಕ್ಕಳು ಅಳವಡಿಸಿಕೊಳ್ಳಬೇಕೆಂದರು.  ಪ್ರಾಚಾರ್ಯೆ  ದಿವ್ಯ ಶೆಟ್ಟಿಯವರು ಮಾತನಾಡಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವಜನತೆ ಪಾತ್ರ  ಬಹುಮುಖ್ಯ ಅಂತಹ ಆಸಕ್ತಿಯನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು ಮಕ್ಕಳಲ್ಲಿ ಇಂತಹ ಆಸಕ್ತಿಯನ್ನು ಬೆಳೆಸಲು ಶಾಲೆ ಹಾಗೂ ಶಿಕ್ಷಕರ ಪಾತ್ರ ಬಹು ಮುಖ್ಯ ಎಂದರು . ಈ  ಕಾರ್ಯಕ್ರಮದಲ್ಲಿ ಶಿಕ್ಷ ಕರು, ಮಕ್ಕಳು ಉಪಸ್ಥಿತರಿದ್ದು, ಸುಪ್ರೀತಾ ಸ್ವಾಗತಿಸಿ, ಜಾವಿದ್ ವಂದಿಸಿದರೆ, ಗಾಯತ್ರಿ‌ ಕಾರ್ಯಕ್ರಮ ನಿರೂಪಿಸಿದರು.

Shivamogga News ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯರಾಮಕೃಷ್ಣ ವಿದ್ಯಾನಿಕೇತನದ ವೈದ್ಯರ ದಿನಾಚರಣೆಯಲ್ಲಿ ಡಾ.ಧನಂಜಯಸರ್ಜಿ

0

ಶಿವಮೊಗ್ಗ, ಜು.೦೧:
ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಬದುಕಲ್ಲಿ ಸಾಧನೆ ಸಾಧ್ಯವಾಗುತ್ತದೆ. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಳಕಳಿ ಹಂದಬೇಕು. ಮಕ್ಕಳು ವಿಶೇಷವಾಗಿ ದುಷ್ಪರಿಣಾಮ ಉಂಟು ಮಾಡುವ ಜಂಕ್‌ಫುಡ್‌ಗಳನ್ನು ತ್ಯಜಿಸಬೇಕು ಎಂದು ವಿಧಾನ ಪರಿಷತ್ ಶಾಸಕ, ಸರ್ಜಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ತಮ್ಮ ಓದಿನ ಹಾಗೂ ಕಲಿಕೆಯ ಕನಸನ್ನು ನನಸಾಗಿಸಲು ಸತತ ಪ್ರಯತ್ನಗಳ ಜೊತೆಗೆ ಆರೋಗ್ಯ ಅತಿಮುಖ್ಯ ಇದರ ಜೊತೆಗೆ ಶಿಕ್ಷಕರು, ಪೋಷಕರು ಗಮನಹರಿಸಬೇಕು ಎಂದರು.
ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಾವು ಪೂಜ್ಯ ತಂದೆ-ತಾಯಿ ಶಿಕ್ಷಕರಂತೆ ವೈದ್ಯರನ್ನು ಸಹ ಅತ್ಯಂತ ಪ್ರೀತಿಯಿಂದ ಗೌರವಿಸಬೇಕು. ನಮ್ಮ ಜೀವ ರಕ್ಷಕರಾದ ವೈದ್ಯರ ಬಗ್ಗೆ ನಾವು ಗೌರವವನ್ನು ಸೂಚಿಸುವುದು ಆದ್ಯ ಕರ್ತವ್ಯವಾಗಿದೆ. ಆರೋಗ್ಯದಾತ ವೈದ್ಯ ಸಮೂಹಕ್ಕೆ ನಮ್ಮ ರಾಮಕೃಷ್ಣ ವಿದ್ಯಾಸಂಸ್ಥೆಯಿಂದ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ಡಾ.ಧನಂಜಯ ಸರ್ಜಿ ಅವರನ್ನು ರಾಮಕೃಷ್ಣ ವಿದ್ಯಾಸಂಸ್ಥೆ ಆತ್ಮೀಯವಾಗಿ ಸನ್ಮಾನಿಸಲಾಯಿತ

Shivamogga news ಬಿಸಿಗಾಳಿ ನಂತರ ಮಳೆ ಅವಾಂತರದಿಂದ 11 ಜನ ಸಾವು; ಆರೆಂಜ್ ಅಲರ್ಟ್ ಘೋಷಣೆ

0

ದೆಹಲಿ : ಶುಕ್ರವಾರ ಸುರಿದ ದಾಖಲೆ ಮಳೆಯ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ದೆಹಲಿ ನಿವಾಸಿಗಳು ಹೆಚ್ಚಿನ ಮಳೆಯಿಂದ ಕಂಗೆಡುವುದು ಅನಿವಾರ್ಯವಾಗಿದೆ. ಏಕೆಂದರೆ, ಹವಾಮಾನ ಇಲಾಖೆಯು ರಾಷ್ಟ್ರ ರಾಜಧಾನಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆಯ ಎಚ್ಚರಿಕೆ ವ್ಯವಸ್ಥೆಯ ಪ್ರಕಾರ, ಆರೆಂಜ್ ಅಲರ್ಟ್ ಭಾರೀ ಮಳೆಗೆ ಸಿದ್ಧರಾಗಿರಲು ಜನರಿಗೆ ಸೂಚಿಸಿದೆ.

ದೆಹಲಿಯಲ್ಲಿ ಮಾನ್ಸೂನ್‌ನ ಮೊದಲ ಎರಡು ದಿನಗಳಲ್ಲಿ ಹಲವಾರು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಯಿತು ಮತ್ತು 11 ಜೀವಗಳನ್ನು ಬಲಿ ತೆಗೆದುಕೊಂಡಿತು. ಶುಕ್ರವಾರ ಮಾನ್ಸೂನ್ ಅಪ್ಪಳಿಸಿದಾಗ ನಗರದಲ್ಲಿ 228.1 ಮಿಮೀ ಮಳೆ ದಾಖಲಾಗಿದೆ; ಇದು 1936 ರಿಂದ ಜೂನ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಐಎಂಡಿ ವಿಜ್ಞಾನಿ ಸೋಮ ಸೇನ್ ಅವರ ಪ್ರಕಾರ, “ಮಾನ್ಸೂನ್ ಮುಂದುವರೆಯುತ್ತಿದೆ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪೂರ್ವ ಯುಪಿ ವ್ಯಾಪ್ತಿಗೆ ಒಳಪಟ್ಟಿದೆ ಮತ್ತು ಮುಂದಿನ ಎರಡು-ಮೂರು ದಿನಗಳಲ್ಲಿ ಪಶ್ಚಿಮ ಯುಪಿ ಮತ್ತು ಹರಿಯಾಣವನ್ನು ಆವರಿಸುತ್ತದೆ” ಎಂದು ಹೇಳಿದ್ದಾರೆ.

ದೆಹಲಿ ಜನರು ಅಗತ್ಯ ವಸ್ತುಗಳನ್ನು ಪಡೆಯಲು ಪರದಾಡುತ್ತಿದ್ದು, ನೀರಿನ ಅಂಡರ್‌ಪಾಸ್‌ಗಳಲ್ಲಿ ಹಲವು ವಾಹನಗಳು ಸಿಲುಕಿವೆ. ನಿವಾಸಿಗಳು ನೀರಿನ ಮೂಲಕ ಅಲೆದಾಡುವ ದೃಶ್ಯಗಳು ಸಾಮಾನ್ಯವಾಗಿವೆ. ದಿನ ಕಳೆದಂತೆ, ಸಾವಿನ ಸುದ್ದಿ ಬರಲಾರಂಭಿಸಿತು. ಸತ್ತವರಲ್ಲಿ ಹಲವಾರು ಮಕ್ಕಳು ಸೇರಿದ್ದಾರೆ, ಅವರು ಹಳ್ಳಗಳಲ್ಲಿ ಮುಳುಗಿದ್ದು, ಪ್ರಯಾಣಿಕರು ಪ್ರವಾಹಕ್ಕೆ ಒಳಗಾದ ಅಂಡರ್‌ಪಾಸ್‌ಗಳಲ್ಲಿ ಸಿಲುಕಿಕೊಂಡರು. ವಸಂತ ವಿಹಾರ್‌ನಲ್ಲಿ ಗೋಡೆ ಕುಸಿದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ನಲ್ಲಿ, ಭಾರೀ ಮಳೆಯ ನಡುವೆ ಮೇಲಾವರಣದ ಒಂದು ಭಾಗವು ಕುಸಿದು ಹಲವಾರು ಕಾರುಗಳನ್ನು ಪುಡಿಮಾಡಿತು. ಘಟನೆಯಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಕ್ಯಾಬ್ ಚಾಲಕ ಸಾವನ್ನಪ್ಪಿದ್ದಾನೆ.

Shivamogga Newsಹಿರಿಯ ಪತ್ರಕರ್ತ ಅರಸಾಳು ರಂಗನಾಥರಾವ್ ಇನ್ನಿಲ್ಲ

0

ಶಿವಮೊಗ್ಗ : ಹಿರಿಯ ಪತ್ರಕರ್ತರು ಹಾಗೂ ಸಹಕಾರಿ ಧುರೀಣರಾದ ಅರಸಾಳು ರಂಗನಾಥರಾವ್ ರವರು(93 ವರ್ಷ) ಇಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು.
ಇದೆ ಸಂದರ್ಭದಲ್ಲಿ ದುಃಖತಪ್ತ ಕುಟುಂಬಸ್ಥರು ಮೃತರ ಕಣ್ಣುಗಳನ್ನು ನೇತ್ರಾಲಯಕ್ಕೆ ದಾನ ಮಾಡಿದರು. ಮೃತರ ಪಾರ್ಥಿವ ಶರೀರವನ್ನು ವಿನೋಬನಗರದಲ್ಲಿರುವ ಅವರ ಪುತ್ರನ ನಿವಾಸದಲ್ಲಿ ಇಡಲಾಗಿದೆ. ನಾಳೆ (ಸೋಮವಾರ) ಬೆಳಗ್ಗೆ ಏಳು ಗಂಟೆಗೆ ರೋಟರಿ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..
ಮೃತರು ಪತ್ನಿ ಶಾಂತಮ್ಮ, ಸೇರಿದಂತೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ..ಶ್ರೀಯುತರು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್‌ಗಿಲ್ಡ್ ನಲ್ಲಿ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ನಿಧನಕ್ಕೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.

Shivamogga News ವಿಐಎಸ್ಎಲ್ ಸಮಸ್ಯೆ ಅರಿತು ಮುಂದಿನ ಕ್ರಮ: ಹೆಚ್.ಡಿ.ಕೆ

0

ಶಿವಮೊಗ್ಗ : ಮಾಜಿ ಕೇಂದ್ರ ಸಚಿವ ಜಯರಾಮ್ ರಮೇಶ್ ಭಾರತದ ಐದು ಕಬ್ಬಿಣ ಕಾರ್ಖಾನೆ ಬಗ್ಗೆ ನನ್ನ ಮುಂದೆ ಐದು ಪ್ರಶ್ನೆ ಇಟ್ಟಿದ್ದರು. ಆ ಪ್ರಶ್ನೆಗೆ ಮಾಹಿತಿ ಪಡೆಯಲು ಭದ್ರಾವತಿ ವಿಐಎಸ್ ಎಲ್ ಭದ್ರಾವತಿಗೆ ಭೇಟಿ ನೀಡಿರುವುದಾಗಿ ಕೇಂದ್ರ ಬೃಹತ್ ಮತ್ತು ಉಕ್ಕು ಸಚಿವ ಹೆಚ್ ಡಿ‌ ಕುಮಾರ ಸ್ವಾಮಿ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾರ್ಮಿಕರ ಬದುಕು, ಕಾರ್ಖಾನೆ ಉಳಿಸುವ ಕುರಿತು ಏನು ಮಾಡಬಹುದು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇನೆ. ಮಾಹಿತಿ ಪಡೆದು ಮುಂದಿನ ದಿನಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

ಆತ್ಮನಿರ್ಭರ್ ಯೋಜನೆ, ಮೇಕ್ ಇನ್ ಇಂಡಿಯಾ ಮತ್ತು ಸ್ಟೀಲ್ ಅಥಾರಿಟಿ ಇಂಡಿಯಾದ ಕಾನ್ಸೆಪ್ಟ್ ಮತ್ತು 2017 ರ ಪಾಲಿಸಿಯಂತೆ ಮೋದಿಯವರ ಕನಸನ್ನ ನನಸಾಗಿಸಲು ಕಾರ್ಖಾನೆಗೆ ಭೇಟಿ ನೀಡಿದ್ದಾಗಿ ಹೇಳಿದರು.
2017 ರ ಪಾಲಿಸಿ ಪ್ರಕಾರ 2030 ರ ವೇಳೆಗೆ ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣ ತಯಾರಿಕೆಯ ಗುರಿ ಹೊಂದಿದ್ದೇವೆ. ಗುರಿ ಮುಟ್ಟಲು ಹಲವು ಯೋಜನೆಗಳನ್ನು ಆರಂಭಿಸಿದ್ದೇವೆ. ಈ ಹಿನ್ನಲೆಯಲ್ಲಿ ಚಿಂತನೆ ನಡೆಸುವುದಾಗಿ ಹೇಳಿದರು.
ಡಿಸ್ ಇನ್ ವೆಸ್ಟ್ ಮೆಂಟ್, ಕ್ಲೋಸಿಂಗ್ ನಿಂದ ಹೊರಗೆ ತರಬೇಕು ಎಂಬುದು ಕಾರ್ಮಿಕರ ಒತ್ತಾಸೆ, ಕಾರ್ಮಿಕರಿಗೆ ಈಗ 13 ದಿನ ಕೆಲಸವಿದೆ . ಅದನ್ನು 26 ಕ್ಕೆ ಏರಿಸಬೇಕು ಎಂಬ ಆಗ್ರಹವಿದೆ. ಪಾರ್ಲಿಮೆಂಟ್ ನಡೆಯುತ್ತಿದೆ. ನಾನು ಈ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಲು ಸಾಧ್ಯವಿಲ್ಲ.
ಆದರೆ ಕಾರ್ಖಾನೆ ಉಳಿವಿನ ಬಗ್ಗೆ ಸಾಧಕ ಬಾಧಕವನ್ನು ಕ್ರೋಡೀಕರಿಸಿ ಮುಂದಿನ ದಿನಗಳಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತೇನೆ ಎಂಬ ಭರವಸೆ ನೀಡಿದರು.
ಸಂಡೂರಿನ ರಮಣದುರ್ಗದಲ್ಲಿ ಮೈನ್ಸ್ ಗೆ ಅವಕಾಶ ನೀಡಿದ್ದರೂ ಆರಂಭವಾಗಿಲ್ಲ. ಈ ಬಗ್ಗೆ ಈಗ ಆರಂಭದ ಹೆಜ್ಜೆ ಇಟ್ಟಿದ್ದೇವೆ. ಇವೆಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಎಂ ಬದಲಾವಣೆ ವಿಚಾರ ನಮ್ಮ ಪಕ್ಷಕ್ಕೆ ಸೇರಿಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಮಸ್ಯೆ. ಅದನ್ನು ಅವರು‌ ಮಾತನಾಡುತ್ತಾರೆ ಎಂದರು.‌

T20 cricket ಜೈ ಹೋ ಇಂಡಿಯಾ ! ಭಾರತ ಟಿ20 ಕ್ರಿಕೆಟ್ – 2024 ವಿಶ್ವ ಚಾಂಪಿಯನ್ಸ್

0

T20 cricket ಭಾರತದ ಕ್ರಿಕೆಟ್ ಪ್ರಿಯರಿಗೆ ಸಿಕ್ಕಾಪಟ್ಟೆ ಸಂತೋಷದ ಸುದ್ದಿ.

ವೆಸ್ಟ್ ಇಂಡೀಸ್ ಬಾರ್ಬಡೋಸ್‌‌,ಕೆನ್ಸಿಂಗ್ ಟನ್ ಕ್ರೀಡಾಂಗಣದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಗೆ ಇಂಡಿಯಾ ಟೀಮ್
ಮುತ್ತಿಕ್ಕಿದೆ. ಈ ಸಮಾಚಾರ ಮಿಂಚಿನಂತೆ ಹರಡಿದೆ.

ಪಂದ್ಯಾವಳಿಯ ಎಲ್ಲಾ ಮ್ಯಾಚುಗಳನ್ನ
ಗೆಲ್ಲುತ್ತಾ ಬಂದ ಟೀಮ್ ಇಂಡಿಯ
ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು.

ಟಾಸ್ ಗೆದ್ದ ಭಾರತ
ಅರ್ಧಾಂಶ ಗೆಲುವನ್ನ
ಕಿಸೆಗೆ ಹಾಕಿಕೊಂಡಿತ್ತು.

ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಎಂದಿನಂತೆ
ಆರಂಭಿಕ ಬ್ಯಾಟರ್ ಗಳಾಗಿ ಕ್ರೀಸ್ ನಲ್ಲಿದ್ದರು.
ಅನುಭವಿ ಬೌಲರ್ ಕೇಶವ ಮಹಾರಾಜ್
ರೋಹಿತ್ ಅವರ ವಿಕೆಟನ್ನ
ಕಡಿಮೆ ಮೊತ್ತಕ್ಕೆ ಬಲಿ ತೆಗೆದುಕೊಂಡರು.
ಶರ್ಮಾ ವೈಯಕ್ತಿಕ 9 ರನ್ ಗಳಿಸಿದ್ದರು. ಇಂಡಿಯ ಆಗ ಕೇವಲ 23 ರನ್ ಫಲಕದಲ್ಲಿ ಹೊಂದಿತ್ತು. ಶರ್ಮಾ ಬ್ಯಾಟ್ ನಿಂದ
ಬಿರುಸಿನ ಹೊಡೆತಗಳನ್ನ ನಿರೀಕ್ಷೆ ಮಾಡಿದವರಿಗೆ ನಿರಾಸೆಯಾಗಿತ್ತು.
ನಂತರ ಬಂದ ರಿಷಭ್ ಬಹಳ ಹೊತ್ತು‌ ನಿಲ್ಲಲಿಲ್ಲ.
ಕೇಶವ್ ಮಹಾರಾಜ್ ಬೌಲಿಂಗಿಗೆ ವಿಕೆಟ್ ಒಪ್ಪಿಸಿದರು.
T20 cricket ಆಗ ಇಂಡಿಯಾದ ಸ್ಕೋರ್ 23 ರಲ್ಲೇ ಇತ್ತು.
ಆದರೆ ಇಂಡಿಯಾ ತಂಡದ ಅದೃಷ್ಟ ಇನ್ನೊಂದು ತುದಿಯಲ್ಲಿ ವಿರಾಟ್ ನಿಶ್ಚಲವಾಗಿ ಬ್ಯಾಟು ಬೀಸುತ್ತಿದ್ದರು.
ತಾಳ್ಮೆಯ ಆಟವಾಡಿ‌ 76 ರನ್ ಗಳಿಸಿದರು.
ಅವರಿಗೆ ಸರಿಯಾದ ಸಾಥ್ ನೀಡಿದ ಅಕ್ಷರ್ ಪಟೇಲ್ ಸ್ಕೋರ್ ಬೋರ್ಡನ್ನ ಚಲನೆಯಲ್ಲಿಟ್ಟಿದ್ದರು.
47 ರನ್ ಗಳಿಸಿ ಅನ್ಯಾಯವಾಗಿ ರನ್ ಔಟಾದರು.
ಈ ನಡುವೆ ಬಂದ ಬ್ಯಾಟರ್ ಗಳಲ್ಲಿ ಸೂರ್ಯ ಕುಮಾರ್ ಯಾದವ್ 3,ದುಬೆ 27, ಪಾಂಡ್ಯ ಅಜೇಯ 5.ಜಡೇಜಾ 2 ರನ್ ಕಲೆಹಾಕಿದರು.
ಒಟ್ಟು 20 ಓವರ್ ಗಳಲ್ಲಿ 176 ರನ್ ಭಾರತ ತಂಡದ ಮೊತ್ತ.
ಸೌತ್ ಆಫ್ರಿಕಾ ತಂಡವೂ ಕೂಡ ಬಿರುಸಿನ ಆಟ ಶುರುಮಾಡಿತು. ಆದರೆ 7 ರನ್ ಗಳಿಗೆ ಹೆಂಡ್ರಿಕ್ಸ್ ವಿಕೆಟ್ ಕಳೆದುಕೊಂಡಿತು.
ಬೂಮ್ರಾ ಮಾಡಿದ ಮೊದಲ ಆಘಾತ.
ಮತ್ತೆ ಆರ್ಶದೀಪ್ ಮಾರ್ಕರಂ (5) ಔಟಾದರು.
ಸೌತ್ ಆಫ್ರಿಕಾ ತಂಡ
70 ರನ್ ಕಲೆಹಾಕುವ ತನಕ ಜೋಪಾನವಾಗಿ ಆಡಿದರು.ಡಿ.ಸ್ಕಬ್ಸ್ ಅವರನ್ನ ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು.
ಹೀಗೇ ಮುಂದೆ ವಿಜಯಲಕ್ಷ್ಮಿ
ಭಾರತದ ಪರ ಮುನಿಸಕೊಂಡಳೇನೋ‌ ಅನಿಸಿತು .ಏಕೆಂದರ
106 ರನ್ ತನಕ ವಿಕೆಟ್ ಬೀಳಲೇ ಇಲ್ಲ. ಕಾಂಕ್ರಿಟ್ ಆಗಿ ಆಡುತ್ತಿದ್ದ ಡಿ ಕಾಕ್ (39) ಅವರನ್ನ ಆರ್ಶದೀಪ್
ಬಲಿತೆಗೆದುಕೊಂಡರು.
ಮುಂದೆ151 ಮೊತ್ತವಾಗುವಷ್ಟರಲ್ಲಿ ಕ್ಲಾಸೆನ್(52) ಹೊರಬಿದ್ದರು.
ಆಟ ನಿರ್ಣಾಯಕ ಮತ್ತು ಕುತೂಹಕ ಘಟ್ಟ ಮುಟ್ಟಿದ್ದು ಕೊನೇ ಓವರ್ ನಲ್ಲಿ .
168 ಗಳಿಸಿದ ಸೌತ್ ಆಫ್ರಿಕಾ ಇನ್ನೇನು ಜಯಮಾಲೆಗೆ ಕೊರಳೊಡ್ಡಿತು ಎಂದಾಗ ಪಾಂಡ್ಯ ಬೌಲಿಂಗ್ ನಲ್ಲಿ ಮಿಲ್ಲರ್ ಸಿಕ್ಸರ್ ಎತ್ತದರು. ಸೂರ್ಯಕುಮಾರ ಚಾಕಚಕ್ಯತೆಯಿಂದ
ಆ ಸಿಕ್ಸರ್ ಅಸಗುವ ಬಾಲನ್ನ ಬೌಂಡತಿಯೊಳಗೆ ಕ್ಯಾಚ್ ಹಿಡಿದು ಮೇಲೆ ತೂರಿದರು.
ಓಟ್ ರಭಸಕ್ಕೆ ಅವರೇ ಬೌಂಡರಿ ದಾಟಿ ಮತ್ತೆ ಛಂಗನೆ ಒಳ ಬಂದು‌ಕ್ಯಾಚ್ ಹಿಡಿದರು. ಕೊನೆಯ ಬಾಲ್ ಎಸೆದಾಗ ಸೌತ್ ಆಫ್ರಿಕಾ 169 ರನ್ ಗೆ ತೃಪ್ತಿಯಾಗ ಬೇಕಾಯಿತು.
ಬಹಳ ವರ್ಷಗಳ. ಟಿ20 ಕಪ್ ಬಾಯಾರಿಕೆಯಿಂದ ಬಳಲಿದ ಇಂಡಿಯಾ ತಂಡಕ್ಕೆ ಆಕಾಶ ಭೂಮಿ‌ ಒಂದಾದ ಸಂತೋಷದಲ್ಲಿತ್ತು.
ನಾಯಕ ರೋಹಿತ್ ಮೈದಾನದಲ್ಲೇ ಮಲಗಿ ‌ಪಿಚ್ ಗೆ ಕೃತಜ್ಞತೆ ಹೇಳುವಂತೆ ಮಾಡಿದರು.
ಭಾರತ ಈಗ ಟಿ 20
ವಿಶ್ವ ಚಾಂಪಿಯನ್ .

Madhu Bangarappa ಕೃಷಿ ನಮ್ಮ ದೇಶದ ಭವಿಷ್ಯ- ಸಚಿವ ಮಧು ಬಂಗಾರಪ್ಪ

0

Madhu Bangarappa ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಕೃಷಿಗೆ ಎಂದಿಗೂ ಪ್ರಾಮುಖ್ಯತೆ ಇದೆ. ಕೃಷಿ ಮತ್ತು ತೋಟಗಾರಿಕೆ ಕೋರ್ಸ್ ಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಅದರ ಸದುಪಯೋಗ ಪಡೆಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಶಿವಮೊಗ್ಗ ಇವರ ಸಹಯೋಗದಲ್ಲಿ ಜೂ.29 ರಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಶಿಕ್ಷಣ ಸುಗ್ಗಿ_-2024 ಕಾರ್ಯಕ್ರಮ ಉದ್ಘಾಟಿಸಿ ಅವರಿ ಮಾತನಾಡಿದರು.
ಕೃಷಿ ಭವಿಷ್ಯದಲ್ಲಿ ಬೇಡಿಕೆ ಇರುವ ವಲಯ ಆಗಲಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಶೇ.60 ರಷ್ಟು ರೈತರು ಇದ್ದು, ಕೃಷಿ ಕ್ಷೇತ್ರದಿಂದ ಜಿಡಿಪಿಗೆ ಶೇ.17 ಕೊಡುಗೆ ಇದೆ. ದೇಶಕ್ಕೆ ಕೃಷಿಕರ ಕೊಡುಗೆ ಅಪಾರವಾಗಿದೆ.
ವಿದ್ಯಾರ್ಥಿಗಳು, ವಿಶೇಷವಾಗಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯದಂತಹ ಪದವಿ-ಕೋರ್ಸ್‍ಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ವೇದಿಕೆಯಲ್ಲಿ ಹಲವಾರು ಸಾಧಕರು, ಕೃಷಿ ತಜ್ಞರು ಕೃಷಿ ಕೋರ್ಸುಗಳು, ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದು, ವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಬೆಳೆಯುತ್ತದೆ.
ಕೃಷಿ ಉತ್ಪನ್ನಗಳು ಸಾಕಷ್ಟಿದ್ದು ಈ ಬಗ್ಗೆ ಜನರಿಗೆ ತಿಳಿಸುವಲ್ಲಿ ಹಿಂದೆ ಉಳಿದಿದ್ದೇವೆ. ಈ ಕೆಲಸವನ್ನು ನಾವು ಮಾಡಬೇಕಿದೆ. ಹಾಗೂ ಕೃಷಿ ಕೋರ್ಸ್‍ಗಳಿಗೆ ಸಾಕಷ್ಟು ಬೇಡಿಕೆ ಇದ್ದು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿಗಳೇ ದೇಶದ ಸಂಪನ್ಮೂಲ. ಯಾವುದೇ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅನುತ್ತೀರ್ಣರಾಗಬಾರದು ಹಾಗೂ ಉತ್ತಮ ಅಂಕ ಗಳಿಕೆಯ ಉದ್ದೇಶದಿಂದ ಮೂರು ಪರೀಕ್ಷೆಗಳನ್ನು ಮಾಡಿ ಅದರಲ್ಲಿ ಉತ್ತಮವಾಗಿ ಗಳಿಸಿದ ಅಂಕಗಳನ್ನು ಉಳಿಸಿಕೊಳ್ಳುವ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆ ರಾಷ್ಟ್ರದಲ್ಲೇ ಮೊದಲನೆ ಪ್ರಯತ್ನವಾಗಿದೆ. ಇದರಿಂದ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಂಭವ ಕಡಿಮೆ ಇದ್ದು ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ.

ತರೀಕೆರೆ ಕ್ಷೇತ್ರದ ಶಾಸಕರು ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಜಿ.ಹೆಚ್.ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಮೆಡಿಕಲ್ ಓದುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹಲವಾರು ಎಂಜಿನಿಯರಿಂಗ್ ಕಾಲೇಜುಗಳಿದ್ದು ಎಂಜಿನಿಯರಿಂಗ್ ಮುಗಿಸಿದ ಅನೇಕರಿಗೆ ಉದ್ಯೋಗಾವಕಾಶ ಕಷ್ಟವಾಗಿದೆ. ಕೃಷಿ ಮತ್ತು ತೋಟಗಾರಿಕೆ ಕೋರ್ಸ್‍ಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕೃಷಿ ಕೋರ್ಸ್‍ಗಳನ್ನು ಮಾಡಿದವರಿಗೆ ವಿಫುಲ ಅವಕಾಶಗಳಿವೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಓದಿದ ಶೇ.15 ರಷ್ಟು ವಿದ್ಯಾರ್ಥಿಗಳಿಗೆ ಹೊರ ರಾಜ್ಯ ಮತ್ತು ದೇಶಗಳಿಗೆ ಹೋಗುವ ಅವಕಾಶವಿದೆ. ಈ ಕೋರ್ಸ್ ಮಾಡಿದವರಿಗೆ ಉದ್ಯೋಗದ ಕೊರತೆ ಇಲ್ಲ. ಇಲ್ಲಿ ಕೌಶಲ್ಯ ಅಭಿವೃದ್ಧಿಗೂ ಒತ್ತು ನೀಡಿ ಕೌಶಲ್ಯವನ್ನು ವೃದ್ದಿಸಲಾಗುತ್ತಿದೆ. ಹಾಗೂ ರೈತರ ಮಕ್ಕಗಳಿಗೆ ಕೃಷಿ, ತೋಟಗಾರಿಕೆ ಕೋರ್ಸ್‍ಗಳಲ್ಲಿ ಶೇ.50 ಮೀಸಲಾತಿ ಇದೆ ಎಂದರು.
ಆಡಳಿತ ಮಂಡಳಿ ಸದಸ್ಯರಾದ ಡಾ.ಪಿ.ಕೆ.ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ಕೃಷಿ ಕೋರ್ಸ್‍ಗಳನ್ನು ಮಾಡಿಕೊಂಡರೆ ಕೃಷಿ ಪರಿಕರ, ರಾಸಾಯನಿಕ ಗೊಬ್ಬರ, ಮಾರ್ಕೆಟಿಂಗ್ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಲಭಿಸಲಿದೆ. ಗೊಬ್ಬರ ಸಂಶೋಧನೆಯಲ್ಲಿ ಸಹ ಕೃಷಿ ಪದವಿ ಪಡೆದವರಿಗೆ ಅವಕಾಶ ಲಭ್ಯವಿದೆ. ಸಾವಯವ ಗೊಬ್ಬರ ತಯಾರಿಕೆ ಮೂಲಕ ಸ್ವಂತ ಉದ್ದಿಮೆಗೆ ಅವಕಾಶವಿದೆ. ಸಾವಯವ ಕೃಷಿಗೆ ಸಹ ಉತ್ತೇಜನ ದೊರಕಲಿದೆ. ಹಾಗೂ ಸರ್ಕಾರದ ಸಹಾಯಧನ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.
ಡಿಡಿಪಿಯು ಕೃಷ್ಣಪ್ಪ ಮಾತನಾಡಿ, ಕೃಷಿ ಅತಿ ಶ್ರೇಷ್ಠ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಕೃಷಿ ಮತ್ತು ತೋಟಗಾರಿಕೆ ಅತ್ಯುತ್ತಮ ಕೋರ್ಸ್ ಆಗಿದ್ದು, ಈ ವಿದ್ಯಾರ್ಥಿಗಳು ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಕುರಿತು ಹೆಚ್ಚಿನ ಸಂಶೋಧನೆ ನಡೆಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು ತಿಳಿಸಿದರು.
ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ ಪಿಯುಸಿ ವಿದ್ಯಾರ್ಥಿಗಳಿಗೆ ಕೃಷಿ ಶಿಕ್ಷಣ, ವಿವಿಧ ಕೃಷಿ ಕಾರ್ಯಕ್ರಮಗಳ ಕುರಿತು ಮಾಹಿತಿ, ಕೃಷಿ ಪದವಿಗೆ ಸೇರಲು ಬೇಕಾದ ಅರ್ಹತೆಗಳು, ಕೃಷಿ ಮತ್ತು ತೋಟಗಾರಿಕೆ, ಅರಣ್ಯ ಇತರೆ ಪದವಿ ಪಡೆದವರಿಗೆ ಇರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಗೆ ಕೃಷಿ ಕುರಿತು ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತÀರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Madhu Bangarappa ಕುಲಸಚಿವರಾದ ಕೆ.ಸಿ ಶಶಿಧರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಕ್ರಮ ಕೃಷಿ ಶಿಕ್ಷಣದ ಕುರಿತಾದ ಜಾಗೃತಿ ಅಭಿಯಾನವಾಗಿದೆ. ಕೃಷಿ ಪದವಿ ಬಗ್ಗೆ ಅರಿವಿನ ಕೊರತೆ ಇದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿಯೂ ಕೃಷಿ ಪದವಿ ಪಡೆಯಬಹುದಾಗಿದೆ. ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಇದ್ದು ಅವರು ಪ್ರಾಯೋಗಿಕ ಪರೀಕ್ಷೆಯನ್ನು ಬರೆದು ಸೀಟು ಪಡೆದುಕೊಳ್ಳಬಹುದು. ಈ ಪ್ರಾಯೋಗಿಕ ಪರೀಕ್ಷೆಗೆ ಯಾವುದೇ ಕೋಚಿಂಗ್ ಅವಶ್ಯಕತೆ ಇಲ್ಲ. ಸುಲಭವಾಗಿರುತ್ತದೆ. ಈ ಕಾರ್ಯಕ್ರಮದಲ್ಲೇ ಈ ಬಗ್ಗೆ ಒಂದು ಅಣಕು ಪರೀಕ್ಷೆ ಏರ್ಪಡಿಸಲಾಗಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದರು.
ಹಾಗೂ ಅವರು ಕೃಷಿ ಶಿಕ್ಷಣದ ಪ್ರಾಮುಖ್ಯತೆ ಮತ್ತು ಪಿಯುಸಿ ನಂತರ ಏನು? ಎಂಬ ಬಗ್ಗೆ ಪಿಪಿಟಿ ಪ್ರದರ್ಶನದ ಮೂಲಕ ವಿವರಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕುವೆಂಪು ರಂಗಮಂದಿರ ಆವರಣದಲ್ಲಿ ಕೃಷಿ ಉತ್ಪನ್ನಗಳು, ಕೀಟಗಳು, ಚಿಟ್ಟೆಗಳು, ವಿವಿಧ ಭತ್ತದ ಬೀಜದ ತಳಿ, ಸಾವಯವ ಕೃಷಿ, ಜೇನು ಸಾಕಾಣಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ತೆರೆದು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Forest Department ಎಂಪಿಎಂ ಗೆ ನೀಡಿದ್ದ 20 ಸಾವಿರ ಹೆಕ್ಟೇರ್ ಭೂಮಿ ವಾಪಸ್ ಅರಣ್ಯ ಇಲಾಖೆಗೆ ನೀಡಿ- “ನಮ್ಮೂರಿಗೆ ಅಕೇಶಿಯ ಬೇಡ” ಸಂಘಟನೆ

0

Forest Department ಎಂಪಿಎಂಗೆ ನೀಡಿದ್ದ 20 ಸಾವಿರ ಹೆಕ್ಟೇರ್ ಅಕೇಶಿಯ ಭೂಮಿಯನ್ನು ವಾಪಾಸ್ ಅರಣ್ಯ ಇಲಾಖೆಗೆ ನೀಡುವಂತೆ ನಮ್ಮೂರಿಗೆ ಅಕೇಶಿಯ ಮರ ಬೇಡ ಎಂಬ ಸಂಘಟನೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಕೆ ಪಿ, ಶ್ರೀಪಾಲ್, ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ 20,0000.5 ಹೆಕ್ಟೇರ್ ಭೂಮಿಯನ್ನು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿ ನೀಡಲಾಗಿತ್ತು.

ಇದನ್ನು 40 ವರ್ಷದ ಅವಧಿಗೆ ಲೀಸ್ ನೀಡಲಾಗಿತ್ತು. ಆದರೆ ನವೆಂಬರ್ 2020ರಲ್ಲಿ ಲೀಸ್ ಅಗ್ರಿಮೆಂಟ್ ಮಾಡಿಕೊಂಡು ಲೀಜ್ ನೀಡುವಂತೆ ಕೇಂದ್ರಕ್ಕೆ ಮುಂದುವರೆಸಲು ಕೇಳಿಕೊಂಡಿದೆ.

ಆದರೆ ಕೇಂದ್ರ ನೀಡಿಲ್ಲ. ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಅಕೇಶಿಯ ಬೆಳೆಯಲು ಬಿಟ್ಟಿರಲಿಲ್ಲ ಎಂದರು.
20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಅಕೇಶಿಯ ಮರವನ್ನು ಎಂಪಿಎಂಗೆ ನೀಡಿ ಈ ಜಾಗದಲ್ಲಿ ಸ್ವಾಭಾವಿಕವಾಗಿ ಮರ ಬೆಳೆಸಲು ಕೋರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಮನವಿ ನೀಡಲಾಗಿದೆ.

ಆದರೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಅವರ ಪುತ್ರ ಸಂಸದರಾಗಿ ಆಯ್ಕೆಯಾಗಿರುವ ಸೂರಜ್ ಖಂಡ್ರ‍್ರೆ ಮತ್ತೆ ಕೇಂದ್ರ ಸರ್ಕಾರದ ಸಚಿವರಿಗೆ 20 ಸಾವಿರ ಹೆಕ್ಟೇರ್ ಎಂಪಿಎಂಗೆ ಮುಂದುವರೆಸಿ ಎಂದು ಕೇಳಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

ಮೈಸೂರಿನ ಕಾರ್ಖಾನೆ ಮುಚ್ಚಲಾಗಿದೆ. ಅಜೇಶಿಯ ಭೂಮಿ ಅರಣ್ಯಕ್ಕೆ ಬರಬೇಕು. ಆಗುಂಬೆಯಲ್ಲೂ ಅಕೇಶಿಯ ಮರಗಳು ಇವೆ. ಒಂದು ಇಂಚು ಭೂಮಿಯನ್ನು ಕಾರ್ಖಾನೆಗೆ ನೀಡಲು ನಮ್ಮೂರಿಗೆ ಅಕೇಶಿಯ ಬೇಡ ಎಂದು ಆಗ್ರಹಿಸಲಿದೆ. ಕಾರ್ಖಾನೆ ಹೆಸರಿನಲ್ಲಿರುವ ಭೂಮಿ ಫಲವತ್ತತೆ ಕಳೆದುಕೊಂಡಿವೆ. ಅವರಿಗೆ ಯಾವ ಕಾರಣಕ್ಕೂ ಜಾಗ ನೀಡಬಾರದು ಎಂದರು.

Forest Department ಐಟಿಸಿಗೆ ಜಾಗ ನೀಡಲು ಯೋಚಿಸಲಾಗಿತ್ತು. ಐಟಿಸಿ ಕಂಪನಿ ಸಿಗರೇಟ್ ಬಿಟ್ಟರೆ ಬೇರೆ ಯೋಜನೆಗಳಿಲ್ಲ. ಬಿಎಸ್ ವೈ 380 ಕೋಟಿ ರೂ. ಕೊಟ್ಟು ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾದರೂ ಯಾವುದೇ ಲಾಭಬಾರದೆ ಕಾರ್ಖಾನೆ ನಷ್ಟಕ್ಕೆ ಜಾರಿತು. ಈಗ ಅದರ ಜಾಗದ ಮೇಲೆ ಸರ್ಕಾರವೇ ಕಣ್ಣು ಹಾಕಿರುವುದು ದುರಂತ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ರಾಜೇಂದ್ರ ಚಿನ್ನಿ, ಡಿಎಸ್‌ಎಸ್ ಗುರುಮೂರ್ತಿ, ಸುರೇಶ್ ಅರಸಾಳು, ಹರಿಗೆ ರವಿ ಮೊದಲಾದವರು ಉಪಸ್ಥಿತರಿದ್ದರು.

Aravind Kejriwal ದೆಹಲಿ ಸೀಎಂ ಕೇಜ್ರಿವಾಲ್ ಗೆ ಜುಲೈ 12 ರವರೆಗೆ ನ್ಯಾಯಾಂಗ ಬಂಧನ

0

Aravind Kejriwal ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜುಲೈ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ರೋಸ್ ಅವೆನ್ಯೂ ಕೋರ್ಟ್ ಶನಿವಾರ ಕಳುಹಿಸಿದೆ. ಮುಖ್ಯಮಂತ್ರಿಯ ನ್ಯಾಯಾಂಗ ಬಂಧನಕ್ಕೆ ಕೋರಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಅರ್ಜಿಯ ಆದೇಶವನ್ನು ನ್ಯಾಯಾಲಯವು ಈ ಹಿಂದೆ ಕಾಯ್ದಿರಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ನ್ಯಾಯಾಂಗ ಬಂಧನಕ್ಕೆ ಕೋರಿ ರೌಸ್ ಅವೆನ್ಯೂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಅರವಿಂದ್ ಕೇಜ್ರಿವಾಲ್ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಪ್ರಶ್ನೆಗಳಿಗೆ ನೇರ ಉತ್ತರ ನೀಡುವುದನ್ನು ತಪ್ಪಿಸುತ್ತಿದ್ದಾರೆ ಎಂದು ಸಿಬಿಐ ಹೇಳಿದೆ.

ನ್ಯಾಯಾಲಯದಲ್ಲಿ ಸಿಬಿಐ ಹೇಳಿದ್ದೇನು?

“ಕೇಜ್ರಿವಾಲ್ ಅವರು ತನಿಖೆಯ ಮೇಲೆ ಪ್ರಭಾವ ಬೀರುವ ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದಾರೆ. ಸಿಎಂ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಪ್ರಶ್ನೆಗಳಿಗೆ ಸರಿಯಾದ ಮತ್ತು ನೇರ ಉತ್ತರವನ್ನು ನೀಡಲಿಲ್ಲ” ಎಂದು ಆರೋಪಿಸಿದೆ.

Aravind Kejriwal ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ, ದಕ್ಷಿಣ ಗುಂಪಿನ ಆರೋಪಿಗಳು ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಸಂದರ್ಭದಲ್ಲಿ, ಕೇವಲ ಒಂದು ದಿನದೊಳಗೆ ಪರಿಷ್ಕೃತ ಅಬಕಾರಿ ಸುಂಕ ನೀತಿಗೆ ಕ್ಯಾಬಿನೆಟ್ ಅನುಮೋದನೆಯನ್ನು ತರಾತುರಿಯಲ್ಲಿ ಏಕೆ ಪಡೆಯಲಾಯಿತು ಎಂಬುದನ್ನು ವಿವರಿಸಲು ಕೇಜ್ರಿವಾಲ್‌ಗೆ ಸಾಧ್ಯವಾಗಲಿಲ್ಲ ಎಂದು ಸಿಬಿಐ ಹೇಳಿದೆ. ಅದೂ ಸಹ ಅವರ ನಿಕಟವರ್ತಿ ವಿಜಯ್ ನಾಯರ್ ಜೊತೆಗಿನ ಸಭೆಗಳನ್ನು ನಡೆಸುವುದು, ನಾಯರ್ ಮತ್ತು ವಿವಿಧ ಪಾಲುದಾರರೊಂದಿಗಿನ ಅವರ ಸಭೆಗಳ ಬಗ್ಗೆ ಪ್ರಶ್ನೆಗಳನ್ನು ತಪ್ಪಿಸಿದರು ಎಂದು ಹೇಳಿದೆ.