Saturday, April 11, 2026
Saturday, April 11, 2026
Home Blog Page 670

Shivamogga News ಕಾಂತರಾಜ ಆಯೋಗದ ವರದಿ ನೆನೆಗುದಿಗೆ ಬಿದ್ದಿರುವುದು ವಿಷಾದ- ಆರ್.ಕೆ.ಸಿದ್ಧರಾಮಣ್ಣ

0

ಶಿವಮೊಗ್ಗ : ನೆನೆಗುದಿಗೆ ಬಿದ್ದಿರುವ ಕಾಂತರಾಜ ಆಯೋಗದ ವರದಿಯನ್ನು ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಿ ಬರುವ ಜುಲೈ-18 ರಂದು ಗುರುವಾರ ಪ್ರತಿಭಟನಾ ಕಾಯ೯ಕ್ರಮ ಹಮ್ಮಿಕೊಳ್ಳಲು ಹಿಂದುಳಿದ ವರ್ಗಗಳ ಸಂಘಟನೆಗಳು ತೀಮಾ೯ನಿಸಿವೆ.

ಈ ಸಂಬಂಧ ನಿನ್ನೆ ಸಂಜೆ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏಪಾ೯ಟಾಗಿದ್ದ ಹಿಂದುಳಿದ ಜನ ಜಾಗೃತಿ ವೇದಿಕೆ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ಅಖಿಲ ಕರ್ನಾಟಕ ಸಣ್ಣ ಹಿಂದುಳಿದ ಹಾಗು ಅತಿ ಸಣ್ಣ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ ಸಂಯುಕ್ತ ಸಭೆಯಲ್ಲಿ ನಿಣ೯ಯ ಕೈಗೊಳ್ಳಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಕಾಂತರಾಜ ಆಯೋಗದ ವರದಿ ನೆನೆಗುದಿಗೆ ಬಿದ್ದಿರುವುದು ತೀರಾ ವಿಷಾದದ ಸಂಗತಿ ಈ ಬಗ್ಗೆ ಮುಂದಿನ ಅಗತ್ಯ ಕ್ರಮಕ್ಕೆ ಒತ್ತಾಯಿಸಬೇಕಿರುವುದು ಹಿಂದುಳಿದ ವರ್ಗಗಳ ಜವಾಬ್ದಾರಿ ಆದುದರಿಂದ ಹಿಂದುಳಿದ‌ ಜಾತಿ-ವರ್ಗಗಳ ಜನರು ಒಗ್ಗಟ್ಟಾಗಿ ಸಕಾ೯ರದ ಮೇಲೆ ಒತ್ತಡ ಹಾಕುವತ್ತ ಸಂಘಟಿತರಾಗಬೇಕೆಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಹೆಚ್. ರಾಚಪ್ಪ ಬಹು ನಿರೀಕ್ಷಿತ ಕಾಂತರಾಜ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ಸ್ವೀಕರಿಸಿದ್ದು ವರದಿ ಅನುಷ್ಠಾನಗೊಳಿಸಲು ಕೈಗೊಳ್ಳಬೇಕಿರುವ ಮುಂದಿನ ಕ್ರಮಗಳ ಬಗ್ಗೆ ಕಾಯೋ೯ನುಖರಾಗುವಂತೆ ಒತ್ತಾಯಿಸುವ ಕೆಲಸವನ್ನು ನಾವುಗಳು ಒಗ್ಗೂಡಿ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಪ್ಪ, ಪ್ರೊ.‌ ಪರಮೇಶ್ವರಪ್ಪ, ನಿವೃತ್ತ ಅಧಿಕಾರಿ ಶ್ರೀನಿವಾಸ್ ಭದ್ರಾವತಿ, ಚನ್ನವೀರಪ್ಪ ಗಾಮನಗಟ್ಟಿ, ಮಂಜುನಾಥ್, ಜಯಣ್ಣ ಇತರರು ಪಾಲ್ಗೊಂಡಿದ್ದರು. ಆರಂಭದಲ್ಲಿ ಸಂಚಾಲಕ ಆರ್.ಟಿ. ನಟರಾಜ್ ಸ್ವಾಗತಿಸಿ ಸಭೆಯ ಉದ್ದೇಶ ವಿವರಿಸಿದರು, ಕೊನೆಯಲ್ಲಿ ಮತ್ತೋವ೯ ಸಂಚಾಲಕ ಬಿ. ಜನಮೇಜಿರಾವ್ ವಂದನೆ ಸಲ್ಲಿಸಿದರು.

Shivamogga News ಸೋಮಿನಕೊಪ್ಪ ಆಜಾದ್ ಶಾಲೆಯಲ್ಲಿ ಬಿಸಿಯೂಟ ಶುರು. ಜನಸ್ಪಂದನದ ಫಲಶೃತಿ

0

ಜನ ಸ್ಪಂದನ ಕಾರ್ಯಕ್ರಮದಿಂದ ಮಕ್ಕಳಿಗೆ ಬಿಸಿಯೂಟ
ಶಿವಮೊಗ್ಗ
ಲಷ್ಕರ್ ಮೊಹಲ್ಲಾದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಯು ಒಂದು ವರ್ಷದ ಹಿಂದೆ ಸೋಮಿನಕೊಪ್ಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರುವುದಿಲ್ಲ. ಈ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ಜೂ. 28 ರಂದು ನೆಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪೋಷಕರು ಮನವಿ ಮಾಡಿರುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಮೌಲಾನಾ ಆಜಾದ್ ಮಾದರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕಲ್ಪಿಸುವಂತೆ ಸೂಚಿಸಿರುತ್ತಾರೆ. ಅದರಂತೆ ಜೂ.29 ರಿಂದ ಹತ್ತಿರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಿಂದ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Shivamogga News ಹೊಸನಗರ ತಾಲ್ಲೂಕಿನಾದ್ಯಂತ ವರ್ಷವೈಭವ

0

ಹೊಸನಗರ ತಾಲೂಕಿನಾದ್ಯಂತ ಕಳೆದ ಕೆಲ ಗಂಟೆಗಳಿಂದ ಸುರಿಯುತ್ತಿರು‌ವ ಮಳೆಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಮಧ್ಯಾಹ್ನದಿಂದ ಗುಡುಗು, ಸಿಡಿಲಬ್ಬರದೊಂದಿಗೆ ಬಿರುಗಾಳಿ ಸಹಿತ ಬಿಟ್ಟು ಬಿಡದೆ ಧೋ… ಎಂದುಸುರಿಯುತ್ತಿರುವ ಭಾರಿ ಮಳೆನಗರ, ಮಾಸ್ತಿಕಟ್ಟೆ, ಕೋಡೂರು, ಹುಂಚ, ನಿಟ್ಟೂರು, ಸಂಪೆಕಟ್ಟೆ, ಹೊಸನಗರ ಪಟ್ಟಣ ಸೇರಿದಂತೆ ಹ‌ಲವೆಡೆ ಭಾರಿ ಮಳೆಭಾರಿ ಗಾಳಿ,ಮಳೆಗೆಧರೆಗುರುಳುತ್ತಿರುವ ಬೃಹತ್ ಮರಗಳುಸತತವಾಗಿ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿರುವ ನದಿ, ಹಳ್ಳ-ಕೊಳ್ಳಗಳುಭಾರಿ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲೂವ್ಯತ್ಯಯಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು

Shivamogga News ಕಿರುಚಿತ್ರ ನಿರ್ಮಿಸುವವರಿಗೆ “ಅಂಬೆಗಾಲು-೭” ಸ್ಪರ್ಧೆ. ಸಿಹಿಮೊಗೆಯಿಂದ ಸಿಹಿಸುದ್ದಿ

0

ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ ಆಯೋಜನೆ
ರಾಜ್ಯ ಮಟ್ಟದ ಅಂಬೆಗಾಲು – ೬ ಕಿರು ಚಿತ್ರ ಸ್ಪರ್ಧೆ
ಮೊದಲ ಬಹುಮಾನ 50000 ನಗದು, ಆಕರ್ಷಕ ಸ್ಮರಣಿಕೆ,
ಹತ್ತು ವೈಯಕ್ತಿಕ ಬಹುಮಾನಗಳು

ಶಿವಮೊಗ್ಗ
ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ಇದೀಗ  ರಾಜ್ಯ ಮಟ್ಟದ ಅಂಬೆಗಾಲು - ೬ ಕಿರು ಚಿತ್ರ (ಶಾರ್ಟ್ ಫಿಲಂ) ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಬೆಳ್ಳಿಮಂಡಲದ ಕಾರ್ಯಧ್ಯಕ್ಷರು ಹಾಗೂ  ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕರೂ ಅದ ಡಿ. ಎಸ್. ಅರುಣ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅಂಬೆಗಾಲು - ೬ ಕಿರುಚಿತ್ರ ಸ್ಪರ್ಧೆಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ  ನಾಲ್ಕು ವರ್ಷಗಳಲ್ಲಿ ನಡೆದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ. ಈ ಸ್ಪರ್ಧೆಗಳಲ್ಲಿ  ಪ್ರಶಸ್ತಿ ಪುರಸ್ಕೃತರಾದ ಫನ್ಮಂಡ್ರಿ ಕ್ರಾಸ್, ಹೆಕ್ಕೆಮನೆ, ಚೌಕಿ, ಅನಲಾ, ಕುರ್ಲಿ, ದಾಳಿ, ಭ್ರಾಂತು, ಖೇಜ್, ಕಲಾಂ ಹಿಂದೂಸ್ಥಾನಿ, ಬ್ಲೌಸ್,  ನೊಂದವರ ಯುವಕರು ಸಂಘ, ದೂರದರ್ಶನ, ಸೌಮ್ಯ..  ಮೊದಲಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆಯಲ್ಲದೇ,  ಅನೇಕ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಆರನೇ ವರ್ಷದಲ್ಲಿ ಈ ರಾಜ್ಯಮಟ್ಟದ ಅಂಬೆಗಾಲು - ೬ ಕಿರು ಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದೆಲ್ಲೆಡೆಯಿಂದ ಶ್ರೇಷ್ಟ ಗುಣಮಟ್ಟದ ಕಿರು ಚಿತ್ರಗಳನ್ನು ನಿರೀಕ್ಷಿಸಲಾಗಿದೆ ಎಂದರು.
 ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು,  ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್ ಸೇರಿ ೦೫ ರಿಂದ ೦೭ ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು ಎಂದ ಅವರು, ಮೊಬೈಲ್ ಸೇರಿದಂತೆ ಯಾವುದೇ ಕ್ಯಾಮರಾವನ್ನು ಬಳಸಿ ಚಿತ್ರೀಕರಿಸಬಹುದಾಗಿದ್ದು, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಯಾವುದೇ ಮಾಧ್ಯಮಗಳಿಗಿಂದ ದೃಶ್ಯಗಳನ್ನು ಕಟ್ ಅಂಡ್ ಪೇಸ್ಟ್ ಆಗಲೀ, ಸಾಕ್ಷ÷್ಯಚಿತ್ರವನ್ನಾಗÀಲೀ ಅಥವಾ ಸಂಪೂರ್ಣ ಎನಿಮೇಷನ್ ಚಿತ್ರಗಳನ್ನಾಗಲೀ ಸ್ಪರ್ಧೆಗೆ ಕಳಿಸುವಂತಿಲ್ಲ. ಸಂಪೂರ್ಣವಾಗಿ ಸ್ವಂತಿಕೆಯ ನಿರ್ದೇಶನದ ಯಾವುದೇ ವಿಷಯವನ್ನು ಕುರಿತು ಕಿರು ಚಿತ್ರ ನಿರ್ಮಿಸಬಹುದು. ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆಯಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ  ಡಾ. ನಾಗಭೂಷಣ, ಜಿ. ವಿಜಯಕುಮಾರ್, ಕೆ. ಎಸ್. ಚೇತನ್, ಚೇತನ್ (ಶ್ರೀನಿಽ), ಆನಂದ, ಚಂದ್ರಶೇಖರ್, ಶಿವಾನಂದ್, ಸುಕುಮಾರ್, ಸಂತೋಷ್, ಮಂಜುನಾಥ್, ಶಿವು, ಎನ್. ಬಿ. ರವೀಶ, ಮೊದಲಾದವರು ಉಪಸ್ಥಿತರಿದ್ದರು.
ಬಾಕ್ಸ್
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು  ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. ೫೦,೦೦೦ ರೂಗಳ ಪ್ರಥಮ ಬಹುಮಾನ, ರೂ. ೩೦,೦೦೦.೦೦ ರೂ.ಗಳ ದ್ವಿತೀಯ ಬಹುಮಾನ ಜೊತೆಗೆ ಶ್ರೇಷ್ಟ ನಟ, ಶ್ರೇಷ್ಟ ನಟಿ, ಶ್ರೇಷ್ಟ ನಿರ್ದೇಶಕ, ಶ್ರೇಷ್ಟ ಕಥೆ-ಚಿತ್ರಕಥೆ, ಶ್ರೇಷ್ಟ ಛಾಯಾಗ್ರಹಣ, ಶ್ರೇಷ್ಟ ಸಂಗೀತ, ಶ್ರೇಷ್ಟ ಸಂಗೀತ ವಿಭಾಗಗಳಲ್ಲಿ ಹತ್ತು ಮಂದಿಗೆ ತಲಾ ೫,೦೦೦ ನಗದು ಆಕರ್ಷಣೀಯ ಸ್ಮರಣಿಕೆಗಳಿವೆ. ಪ್ರಶಸ್ತಿ ಪುರಸ್ಕೃತರಿಗೆ ಅಕ್ಟೋಬರ್ ಮಾಸಾಂತ್ಯದಲ್ಲಿ,  ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
| ಡಿ. ಎಸ್. ಅರುಣ್
ಬಾಕ್ಸ್
ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ೧,೦೦೦.೦೦ ರೂ.ಗಳ  ಪ್ರವೇಶ ಶುಲ್ಕವಿದ್ದು, ಅರ್ಜಿಗಳನ್ನು ಬಿ.ಹೆಚ್. ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು,  ಭರ್ತಿ ಮಾಡಿ  ಜುಲೈ ೩೧ರ ಒಳಗಾಗಿ ಸಲ್ಲಿಸಬಹುದು. ಕಿರು ಚಿತ್ರಗಳನ್ನು   ನಾಲ್ಕು ಹೆಚ್‌ಡಿ ಶ್ರೇಣಿಯ ಡಿವಿಡಿ ಸಹಿತ  ಆಗಸ್ಟ್  ೩೦, ೨೦೨೪ ಒಳಗಾಗಿ ಸಲ್ಲಿಸಬಹುದು. ಸ್ಪರ್ಧೆಯ ವಿವರಗಳಿಗೆ ವೈದ್ಯ ಸಂಚಾಲಕರು (೯೮೪೪೪ ೫೬೫೦೫, ೮೩೧೦೬ ೭೯೯೨೫), ಡಾ. ನಾಗಭೂಷಣ (೯೪೪೯೨ ೮೪೪೯೫) ಮಂಜುನಾಥ್ (೯೬೮೬೫ ೫೯೯೫೦)ರವರನ್ನು ಸಂಪರ್ಕಿಸಬಹುದು.
| ಡಿ. ಎಸ್. ಅರುಣ್
ಬರುವ ಅಕ್ಟೋಬರ್ ತಿಂಗಳಲ್ಲಿ ದಸರಾ ಚಲನಚಿತ್ರೋತ್ಸವ, ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರ, ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟಿçÃಯ ಚಲನಚಿತ್ರೋತ್ಸವ, ಗಿರೀಶ್ ಕಾಸರವಳ್ಳಿಯವರ ಬಿಂಬ ಬಿಂಬನ ಕೃತಿ ಬಿಡುಗಡೆ, ಚಲನಚಿತ್ರ ಪ್ರದರ್ಶನ - ಸಂವಾದ ಆಯೋಜಿಸಲಾಗುತ್ತದೆ.

Shivamogga Newsಕಂದಕಕ್ಕೆ ಬಸ್ ಬಿದ್ದು ಪ್ರಯಾಣಿಕರಿಗೆ ಗಾಯ. ಪ್ರಾಣಾಪಾಯದಿಂದ ಎಲ್ಲರೂ ಪಾರು

0

ಶಿವಮೊಗ್ಗ

ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕೆಎಸ್ಆರ್ಟಿಸಿ ಬಸ್ಸು.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆ ಸಮೀಪದ ಬೊಪ್ಪನಮನೆ ಗ್ರಾಮದಲ್ಲಿ ಘಟನೆಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ಬಸ್ಸು
ಬಸ್ಸಿನಲ್ಲಿದ್ದ 15ಕ್ಕೂ ಪ್ರಯಾಣಿಕರಿಗೆ ಗಾಯ
ಸ್ಥಳೀಯರ ಸಹಾಯದಿಂದ ಪ್ರಯಾಣಿಕರ ರಕ್ಷಣೆ
ಮುಂದೆಯಿಂದ ಬರುತ್ತಿದ್ದ ವಾಹನವನ್ನ ತಪ್ಪಿಸಲು ಹೋಗಿ ಅವಘಢಬೆಂಗಳೂರಿನಿಂದ ಭಟ್ಕಳ್ಳಕ್ಕೆ ಕೆ ಎಸ್ ಆರ್ ಟಿ ಸಿ ಬಸ್ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲಗಾಯಳುಗಳನ್ನು ಸಮೀಪದ ನಗರ ಸರ್ಕಾರಿ ಆಸ್ಪತ್ರೆ ದಾಖಲುಸಿಎಂಎಸ್ ವಾಹನಕ್ಕೆ ಡಿಕ್ಕಿಹೊಡೆಯುವದನ್ನು ತಪ್ಪಿಸಲು ಹೋಗಿ ಅವಘಡಸಿಎಂಎಸ್ ವಾಹನದ ಮುಂಭಾಗ ಕೂಡ ಜಖಂ
ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Shivamogga News ಜುಲೈ 3 ರಿಂದ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಬಿಡಲಾಗುತ್ತದೆ. ರೈತರಿಗೆ ಜಾಗೃತರಾಗಿರಲು ಪ್ರಕಟಣೆ

0

ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಯಲ್ಲಿ ನೀರು ಹರಿಸುವಿಕೆ : ಎಚ್ಚರಿಕೆಯಿಂದರಿಲು ಸೂಚನೆ
ಶಿವಮೊಗ್ಗ, ಜು.01 (ಕರ್ನಾಟಕ ವಾರ್ತೆ)
ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ದಿ: 03-07-2024 ರಿಂದ 10-11-2024 ರವರೆಗೆ ಜಲಾಶಯದಲ್ಲಿ ನೀರಿನ ಲಭ್ಯತೆ ಅನುಸಾರ ನೀರು ಹರಿಸಲಾಗುವುದು. ಆದ್ದರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರ, ಜನ, ಜಾನುವಾರುಗಳೊಂದಿಗೆ ಯಾವುದೇ ಚಟುವಟಿಎಕಗಳನ್ನು ಮಾಡದೇ ಮುನ್ನೆಚ್ಚರಿಕೆಯಿಂದಿರಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ತುಂಗಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

Shivamogga News ಗಾಂಧಿ ಬಜಾರ್ ನಲ್ಲಿನ ಉಪ್ಪಾರ ಕೇರಿಯಲ್ಲಿ ಅಗ್ನಿ ಅವಘಡ. ಶಾಸಕ ಚೆನ್ನಿ ಭೇಟಿ- ಪರಿಶೀಲನೆ

0

ನೆನ್ನೆ ರಾತ್ರಿ ಶಿವಮೊಗ್ಗ ನಗರದ ಗಾಂಧಿ ಬಜಾರ್ ನ ಉಪ್ಪಾರಕೇರಿಯ 2ನೇ ತಿರುವಿನಲ್ಲಿರುವ ಬಟ್ಟೆ ಮಾರ್ಕೆಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಆದ ಅಗ್ನಿ ಅವಗಢವಾದ ಸ್ಥಳಕ್ಕೆ ಶಿವಮೊಗ್ಗ ನಗರದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಾಸ್ತವಿಕ ಪರಿಸ್ಥಿತಿಯನ್ನು ವೀಕ್ಷಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಅಗ್ನಿಶಾಮಕದಳದ ಸಿಬ್ಬಂದಿಯು ತಕ್ಷಣವೇ ಕಾರ್ಯಪ್ರವತ್ತರಾಗಿದ್ದು, ಈ ಹಿನ್ನಲೆಯಲ್ಲಿ ದೊಡ್ಡ ಅನಾಹುತವೇತಪ್ಪಿದ್ದು ಇದಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಭಿನಂದನೆ ತಿಳಿಸಿ, ಮುಂಬರುವ ದಿನಗಳಲ್ಲಿ ಇಂತಹ ಅಗ್ನಿ ಅನಾಹುತಗಳು ಸಂಭವಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಈ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೇಕಾಗಿರುವಂತ ಪರಿಹಾರವನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Shivamogga News ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಭೇಟಿಮಾಡಿ ಶಿವಮೊಗ್ಗ ಕ್ಷೇತ್ರದ ಹೆದ್ದಾರಿ ಯೋಜನೆ ಬಗ್ಗೆ ಸಂಸದ ರಾಘವೇಂದ್ರ ಸಮಾಲೋಚನೆ

0

ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರಾದ ನಿತಿನ್ ಗಡ್ಕರಿ ಯವರನ್ನು ಇಂದು ಅವರ ಗೃಹ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ ವೈ ರಾಘವೇಂದ್ರರವರು ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಮನವಿ ಮಾಡಿದರು.

1) ಆಗುಂಬೆಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ.

2) ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರಿ ಸೇತುವೆ ನಿರ್ಮಾಣ.

3) ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ.

4) ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ

5) ರಾ. ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣ

ಸನ್ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂದಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಸದರಿ ಕಾಮಗಾರಿಗಳ ಯೋಜನಾವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿದ್ದು ಯೋಜನಾ ವರದಿ ಪಡೆದು ಮಂಜೂರಾತಿ ನೀಡಲು ಸಹ ಕ್ರಮವಹಿಸಲು ಸೂಚಿಸಿದರು.

Shivamogga News ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆಯ ವಿವಿಧ ಸಾಲ ಸೌಲಭ್ಯಗಳಿಗೆ ಆಯ್ಕೆಯಾದಂತಹ ಫಲಾನುಭವಿಗಳಿಗೆ ಇಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಚೆಕ್ಕನ್ನು ವಿತರಿಸಿದರು.

0
  1. ಶ್ರಮಶಕ್ತಿ ಸಾಲ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕುಲಕಸುಬುದಾರರಿಗೆ 50000ರೂ ಸಾಲವನ್ನು ನೀಡಲಾಗುತ್ತಿತ್ತು, ಇದರಲ್ಲಿ 25000ರೂ ಸಾಲ ಮತ್ತು 25000ರೂ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 2317 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ 5 ಜನರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.
  2. ಶ್ರಮಶಕ್ತಿ ಸಾಲ (ವಿಶೇಷ ಮಹಿಳೆಯರಿಗಾಗಿ)ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿಧವೆ/ ವಿಚ್ಛೇದಿತ/ಅವಿವಾಹಿತ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕಾಗಿ 50000ರೂ ಸಾಲವನ್ನು ಶೇಕಡ 4% ಬಡ್ಡಿ ದರದಲ್ಲಿ ನೀಡಲಾಗಿದ್ದು, ಇದರಲ್ಲಿ 25000ರೂ ಸಾಲ ಮತ್ತು 25000ರೂ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 169 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ 6 ಜನರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.
  3. ವೃತ್ತಿ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆ 100000ರೂ ಸಾಲವನ್ನು ಶೇಕಡ 4% ಬಡ್ಡಿ ದರದಲ್ಲಿ ನೀಡಲಾಗಿದ್ದು, ಇದರಲ್ಲಿ 50000ರೂ ಸಾಲ ಮತ್ತು 50000ರೂ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 765 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ 5 ಜನರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.
  4. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ವೈಯಕ್ತಿಕ ಕೊಳವೆ ಬಾವಿಯನ್ನು ಕೊರಿಸಲು 1 ಎಕರೆಯವರೆಗೆ ಕೃಷಿ ಜಮೀನನ್ನು ಹೊಂದಿದವರಿಗೆ 300000ರೂ ಸಾಲವನ್ನು ಶೇಕಡ 4% ಬಡ್ಡಿ ದರದಲ್ಲಿ ನೀಡಲಾಗಿದ್ದು, ಇದರಲ್ಲಿ 75000ರೂ ವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಗೆ ಹಣ ಪಾವತಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಒಟ್ಟಾರು 7 ಅರ್ಜಿಗಳು ಸ್ವೀಕರಿಸಲಾಗಿದ್ದು ಈ ಪೈಕಿ ಆಯ್ಕೆಯಾದ ಇಬ್ಬರಿಗೆ ಸಾಲದ ಚೆಕ್ಕನ್ನು ವಿತರಿಸಲಾಯಿತು.

Shivamogga NEWS ಜನ ಸಂಪರ್ಕ ಸಭೆ

0

ಶಿವಮೊಗ್ಗ ಜು.01 (ಕರ್ನಾಟಕ ವಾರ್ತೆ)
ಜು.3 ರಂದು ಬೆಳಿಗ್ಗೆ 11 ರಿಮದ ಮಧ್ಯಾಹ್ನ 1 ಗಂಟೆವರೆಗೆ ನಗರ ಉಪವಿಭಾಗ-1, ಸರ್ವಜ್ಞ ವೃತ್ತ, ಬಾಲಾಜಿ ಅರಸ್ ರಸ್ತೆ, ಮೆಸ್ಕಾಂ ಶಿವಮೊಗ್ಗ ಈ ಕಚೇರಿಯಲ್ಲಿ ‘ಜನ ಸಂಪರ್ಕ’ ಸಭೆಯನ್ನು ನಡೆಸಲಾಗುವುದು.
ಸಭೆಯಲ್ಲಿ ಮೆಸ್ಕಾಂ ನ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು ಗ್ರಾಹಕರು ನೀಡುವ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಆದದರಿಂದ ನಗರ ಉಪವಿಭಾಗ-1. ಶಿವಮೊಗ್ಗ ಘಟಕ-1, 2 ಮತ್ತು 3 ರ ವ್ಯಾಪ್ತಿಯ ಗ್ರಾಹಕರು ಜನಸಂಪರ್ಕ ಸಭೆಯ ಸದುಪಯೋ ಪಡೆದುಕೊಳ್ಳಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.