ಚಿಕ್ಕಮಗಳೂರು: ಸರಕಾರಿ ಬಸ್ಸು ಹತ್ತುವ ವೇಳೆ ಡೋರ್ ಲಾಕ್ ತುಂಡಾದ ಪರಿಣಾಮ ಮಹಿಳೆ ಬಸ್ಸಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಐದಳ್ಳಿ ಗ್ರಾಮದ ಶಕುಂತಲಮ್ಮ ಎಂಬ ಮಹಿಳೆಗೆ ಗಂಭೀರ ಗಾಯಯವಾಗಿದ್ದು ಅವರನ್ನು ಆಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಸ್ಸು ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದು ಶಕುಂತಳಮ್ಮ ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಬಸ್ಸಿನ ಬಾಗಿಲಿನ ಲಾಕ್ ತುಂಡಾಗಿದೆ ಪರಿಣಾಮ ಬಾಗಿಲು ಹಿಡಿದ್ದಿದ್ದ ಮಹಿಳೆ ಏಕಾಏಕಿ ಬಸ್ಸಿನಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ.
ಬಸ್ಸಿನ ಸರಿಯಾದ ನಿರ್ವಹಣೆ ಇಲ್ಲದೆ ಈ ರೀತಿ ಆಗಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು ಘಟನೆ ಸಂಬಂಧ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga News ಸರಕಾರಿ ಬಸ್ ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ
BY Raghavendra ಶಿವಮೊಗ್ಗಕ್ಕೆ ನೂತನ ರೈಲ್ವೆ ಸಂಪರ್ಕದ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಂಸದ ರಾಘವೇಂದ್ರ ಸಮಾಲೋಚನೆ
BY Raghavendra ಯಶವಂತಪುರ-ಶಿವಮೊಗ್ಗ-ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸುವುದು, ತಾಳಗುಪ್ಪ-ಶಿರಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಮಂಜೂರಾತಿ, ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗಕ್ಕೆ ಮಂಜೂರಾತಿಗಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದ ಬಿ ವೈ ರಾಘವೇಂದ್ರ ಭೇಟಿ ಮಾಡಿ ಚರ್ಚಿಸಿದರು.
ಶಿವಮೂಗ-ಬೀರೂರು ಡಬ್ಲಿಂಗ್ ಕಾಮಗಾರಿ, ಕೋಟೆಗಂಗೂರ್ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್ ಸ್ಥಾಪನೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ, ಭದ್ರಾವತಿ ರೈಲು ನಿಲ್ದಾಣದ ಅಭಿವೃದ್ಧಿ, ಶಿವಮೊಗ್ಗ-ರೇಣಿಗುಂಟಾ-BY Raghavendra ಚೆನ್ನೈ ಎರಡು ವಾರಕ್ಕೊಮ್ಮೆ ವಿಶೇಷ ರೈಲು ಮರುಸ್ಥಾಪನೆ, ರೈಲು ಸಂಖ್ಯೆ ೧೬೫೮೧/೧೬೫೮೨ ರ ದೈನಂದಿನ ರೈಲಿಗೆ ವಿಸ್ತರಣೆ, ಹಾರನಳ್ಳಿ ರೈಲು ನಿಲ್ದಾಣದಲ್ಲಿ ರೈಲು ೧೬೨೨೭/೧೬೨೨೮ ನಿಲುಗಡೆ, ಬೈಂದೂರಿನ ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ, ಉಡುಪಿ ಜಿಲ್ಲೆ ಸೇನಾಪುರ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಚರ್ಚಿಸಿದರು.
Linganamakki Dam ಲಿಂಗನಮಕ್ಕಿ ಜಲಾಶಯದಲ್ಲಿ 13 ಅಡಿ ನೀರಿನ ಮಟ್ಟ ಏರಿಕೆ
Linganamakki Dam ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸ್ಥಳೀಯ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಶಿವಮೊಗ್ಗದಲ್ಲಿ ಅತ್ಯದಿಕ ಅಂದರೆ ಹುಲಿಕಲ್ ನಲ್ಲಿ ಅತ್ಯಧಿಕ 138 ಮಿಲಿಮೀಟರ್ ಮಳೆಯಾಗಿದೆ. ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕಳೆದ ವರ್ಷ ಇದೇ ದಿನಕ್ಕಿಂತ 13 ಅಡಿಗಳಷ್ಟು ಹೆಚ್ಚಿದೆ.
Linganamakki Dam ಲಿಂಗನಮಕ್ಕಿ ಜಲಾಶಯ ೧೮೧೯ ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ೧೭೫೩.೨೦ ಅಡಿ ತಲುಪಿದ್ದು ಜಲಾಶಯಕ್ಕೆ ೨೦೯೫೧ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಕಳೆದ ವರ್ಷ ಇದೇ ದಿನ ಜಲಾಶಯ ನೀರಿನ ಮಟ್ಟ ೧೭೪೦.೬೫ ಅಡಿ ದಾಖಲಾಗಿತ್ತು
ಇವತ್ತು ಮಂಗಳವಾರ ಬೆಳಿಗ್ಗೆ ೮:೦೦ ಗಂಟೆಗೆ ಅಂತ್ಯಗೊಂಡ ೨೪ ಗಂಟೆಗಳ ಅವಧಿಯಲ್ಲಿ ತಾಲೂಕಿನ ಹುಲಿಕಲ್ ನಲ್ಲಿ೧೩೮ ಮಿಲಿಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ. ಉಳಿದಂತೆ ತಾಲೂಕಿನ ಮಾಸ್ತಿ ಕಟ್ಟೆಯಲ್ಲಿ ೧೩೩ ಮಿಲಿ ಮೀಟರ್ ಮಾಣಿ ಯಲ್ಲಿ ೧೧೪ ಮಿಲಿಮೀಟರ್ ಯಡೂರಿನಲ್ಲಿ ೧೦೮ ಮಿಲಿ ಮೀಟರ್ ಹೊಸನಗರದಲ್ಲಿ ೬೮.೪ ಮಿಲಿಮೀಟರ್ ಕಾರ್ಗಲ್ನಲ್ಲಿ ೬೪.೬ ಮಿಲಿ ಮೀಟರ್ ಹೊಂಬುಜದಲ್ಲಿ೩೯.೪ ಅರಸಾಳಿನಲ್ಲಿ೨೧.೬ ಮಿಲಿ ಮೀಟರ್ ಮಳೆ ದಾಖಲಾಗಿದೆ.
S N Channabasappa ಶಿವಮೊಗ್ಗದಲ್ಲಿ ಡೆಂಗ್ಯು ನಿಯಂತ್ರಣಕ್ರಮ ಕೈಗೊಳ್ಳಿ. ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ಸೂಚನೆ
S N Channabasappa ಶಿವಮೊಗ್ಗ ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರದ ಕುರಿತಂತೆ ಕ್ರಮವಹಿಸುವಂತೆ ಸೂಚಿಸಿ, ದಿನನಿತ್ಯ ಫಾಗಿಂಗ್ ವ್ಯವಸ್ಥೆ, ಸ್ಪ್ರೇ ಸಿಂಪಡಣೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಶಾಸಕ ಎಸ್ ಎನ್ ಚನ್ನಬಸಪ್ಪ ಆರೋಗ್ಯ ಅಧಿಕಾರಿಗೆ ಸೂಚಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಶಿವಮೊಗ್ಗ ನಗರದ ಗೋಪಾಳ, ಬೊಮ್ಮನಕಟ್ಟೆ, ಗಾಡಿಕೊಪ್ಪ ಹಾಗೂ ಸೋಮಿನಿಕೊಪ್ಪದ ಹೊರವಲಯ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರುದ್ರಭೂಮಿಗೆ ಪ್ರತ್ಯೇಕ ಜಾಗ ಹಾಗೂ ಮೂಲಸೌಕರ್ಯಕ್ಕಾಗಿ ಕ್ರಮ ವಹಿಸಲು, ಮಹಾನಗರ ಪಾಲಿಕೆಯ ವ್ಯಾಪ್ತಿಯ ರುದ್ರ ಭೂಮಿಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದರು.
S N Channabasappa ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಇರುವ ಅಂಡರ್ ಪಾಸ್ ಅನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಬೇಕು. ನಗರದಲ್ಲಿ ಬೀದಿ ನಾಯಿಗಳಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು. ಗಾಂಧಿಬಜಾರ್‌ನಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಇರುವ ಸಂತೆ ಮೈದಾನಕ್ಕೆ ಸ್ಥಳಾಂತರಿಸಲು ಆದೇಶಿಸಿದರು.
ಶಿವಮೊಗ್ಗ ನಗರದ ಹೂವಿನ ಮಾರುಕಟ್ಟೆಯನ್ನು ಬಸ್ ಸ್ಟ್ಯಾಂಡ್ ನಿಂದ ಬಿ.ಹೆಚ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಸ್ಥಳಾಂತರಿಸುವುದು,
ಪೌರಕಾರ್ಮಿಕರ ಭವನ ಮತ್ತು ಪೌರಕಾರ್ಮಿಕರಿಗೆ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ, ಉದ್ಘಾಟಿಸಲು, ನಗರದಲ್ಲಿರುವ ಬೀದಿ ದೀಪಗಳ ಸಮಸ್ಯೆಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರದ ಹೊರವಲಯದಲ್ಲಿರುವ ತಂಬಾಕು ಗೋಡನನ್ನು ಗೋಶಾಲೆಗೆ ನೀಡುವಂತೆ ಸರ್ಕಾರಗೆ ಪ್ರಸ್ತಾವನೆ ಕಳಿಸಲು ಆದೇಶಿಸಿದರು. ಎಂಆರ್‌ಎಸ್ ಸರ್ಕಲ್ ನಲ್ಲಿ ಯುದ್ಧ ಟ್ಯಾಂಕರ್ ಸ್ಥಾಪಿಸುವ ಕುರಿತಂತೆ ಚರ್ಚೆ ನಡೆಸಿದರು.
Missing case ಆಗುಂಬೆಯ ಯುವತಿ ನಾಪತ್ತೆ. ಪೊಲೀಸ್ ಪ್ರಕಟಣೆ
Missing case ಆಗುಂಬೆಯ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದ ಯುವತಿ ಈವರೆಗೂ ವಾಪಾಸ್ಸಾಗಿಲ್ಲ ಎಂದು ಆಕೆಯ ತಂದೆ ದೂರು ನೀಡಿದ್ದಾರೆ.
ಕುಶಾಲ್ ಎಂಬುವವರ ಮಗಳು ಪೂಜಾ (24) ಜೂನ್ 30 ರಂದು ಮನೆಯಿಂದ ಹೋಗಿದ್ದಾಳೆ. 4.06 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ.
Missing case ಈಕೆಯ ಕುರಿತು ಮಾಹಿತಿ ದೊರೆತಲ್ಲಿ ಎಸ್.ಪಿ. ಕಚೇರಿ ಶಿವಮೊಗ್ಗ-೦೮೧೮೨-೨೬೧೪೦೦, ತೀರ್ಥಹಳ್ಳಿ ಡೆ.ಎಸ್.ಪಿ -೦೮೧೮೧-೨೨೦೩೮೮, ಸಿಪಿಐ ಮಾಳೂರು-೯೪೮೦೮೦೩೩೩೩ ಆಗುಂಬೆ-೯೪೮೦೮೦೩೩೧೪ ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.
Ganja Seize ಶಿವಮೊಗ್ಗ ರಾಗಿಗುಡ್ಡ ಬಳಿ ಗಾಂಜಾ ಮಾರಾಟ.ಪೊಲೀಸ್ ಕಾರ್ಯಾಚರಣೆಯಿಂದಮೂವರ ಬಂಧನ
Ganja Seize ಶಿವಮೊಗ್ಗ ನಗರದ ರಾಗಿಗುಡ್ಡ ಚಾನಲ್ ಹತ್ತಿರ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿಎಸ್ಪಿ ಸುರೇಶ್ ಮೇಲ್ವಿಚಾರಣೆಯಲ್ಲಿ, ಗ್ರಾಮಾಂತರ ಪಿಐ ಸತ್ಯನಾರಾಯಣ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿನಡೆಸಿ, ಗಾಂಜಾ ಮಾರಾಟ ಮಾಡುತ್ತಿದವರನ್ನು ಬಂಧಿಸಿದೆ.
ಗೋಪಾಳದ ಸಂಕೇತ (೨೩), ನ್ಯೂಮಂಡ್ಲಿಯ ಅಂಬರೀಶ (೨೬), ಪುರಲೆಯ ಧನುಷ್ (೨೦) ಅವರನ್ನು ದಸ್ತಗಿರಿ ಮಾಡಿ, ಅಂದಾಜು ಮೌಲ್ಯ ೬೮,೦೦೦ ರೂಗಳ ೧ ಕೆಜಿ ೨೪೩ ಗ್ರಾಂ ತೂಕದ ಒಣ ಗಾಂಜಾ ಮತ್ತು ೨,೩೫೦ ನಗದು ಹಣವನ್ನು ಅಮಾನತುಪಡಿಸಿಕೊಳ್ಳಲಾಗಿದೆ.
ಆರೋಪಿತರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Miss World 2024 ಶಿರಸಿ ಮೂಲದ ಡಾ.ಶೃತಿ ಹೆಗಡೆ. ಅಮೆರಿಕದಲ್ಲಿ ವಿಶ್ವ ಸುಂದರಿ ಪಟ್ಟ. ಸುವರ್ಣ ಕಿರೀಟ ಧಾರಣೆ
Miss World 2024 ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿ ಇತ್ತೀಚಿಗೆ ಅಮೇರಿಕಾದಲ್ಲಿ ಅದ್ದೂರಿಯಾಗಿ ಜರುಗಿದ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ವಿಶ್ವ ಸುಂದರಿಯಾಗಿ ವಿಜೇತಳಾಗಿದ್ದಾಳೆ.
ಮುಂಡಿಗೆಸರ ಅಜ್ಜರಮನೆ ಕುಟುಂಬದವ ಈಕೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ . ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಶೃತಿ ಹೆಗಡೆ ಅಮೇರಿಕಾದಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪ್ರಥಮವಾಗಿ ಚಿನ್ನದ ಕಿರೀಟಕ್ಕೆ ಮುತ್ತಿಕ್ಕಿ ವಿಶ್ರ ಸುಂದರಿಯಾಗಿ ಹೊರಹೊ ಮೊದಲು 2018 ರಲ್ಲಿ ಮಿಸ Optimized by Optimole
ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದಳು.
Miss World 2024 2023 ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಇವರು ಅಮೇರಿಕಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಚಿನ್ನದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಅಮೇರಿಕಾದ ಫ್ಲೋರಿಡಾದಲ್ಲಿ ಜೂ.6 ರಿಂದ 10 ವರೆಗೆ ಆಯೋಜಿತವಾಗಿದ್ದ ಸ್ಪರ್ಧೆಯಲ್ಲಿ ಭಾರತ ಒಟ್ಟೂ 40 ದೇ ಸೇರಿದಂತೆ ಭಾಗವಹಿಸಿ ಪೈಪೋಟಿಯ 39 Optimized by Optim
ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶೋತ್ತರ, ವಯಕ್ತಿಕ ಸಂದರ್ಶನ ಮುಂತಾದ ವಿವಿಧ ಸುತ್ತುಗಳಲ್ಲಿ ಸ್ಪರ್ಧೆ ಸಾಗಿತ್ತು.
ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿ, ಶೃತಿ ಹೆಗಡೆ ಗೆಲುವು ಸಾಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಎಮ್.ಬಿ.ಬಿ.ಎಸ್.ಮುಗಿಸಿ
ಡಾ!! ಶೃತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ ತುಮಕೂರಿನಲ್ಲಿ ಎಮ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಈಕೆ ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡೀವ್, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಕೆಲವು ಧಾರವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್ ನಲ್ಲಿ ನಟಿಸಿದ್ದಾಳೆ ಎಂದು ತಿಳಿದುಬಂದಿದೆ.
Shivamogga Railway Station ಶಿವಮೊಗ್ಗ ರೈಲ್ವೆ ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಬೈಕ್ ಕಳವು
Shivamogga Railway Station ರೈಲ್ವೆ ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ ಕಳುವಾದ ಬಗ್ಗೆ ವರದಿಯಾಗಿದೆ.
ನಿಲ್ದಾಣದೊಳಗೆ ಹೋಗಿ ಬರುವಷ್ಟರಲ್ಲಿ ಕೃತ್ಯ ನಡೆದಿದೆ.
ತಾಲೂಕಿನ
ಭದ್ರಾಪುರದ ದುರ್ಗೇಶ ಎಂಬುವವರ ಪರಿಚಿತರೊಬ್ಬರು ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದರು.
Shivamogga Railway Station ಕೆಲವು ಸಾಮಗ್ರಿಗಳನ್ನು ಅವರಿಗೆ ಕೊಡಬೇಕಿದ್ದರಿಂದ ದುರ್ಗೇಶ ಬೈಕ್‌ನಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಸ್ಪ್ಲೆಂಡರ್ ಬೈಕ್ ನಿಲ್ಲಿಸಿ ನಿಲ್ದಾಣದ ಒಳಗೆ ಹೋಗಿ ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ದುರ್ಗೇಶ ಬಳಿಕ ಠಾಣೆಗೆ ದೂರು ನೀಡಿದ್ದಾರೆ.
ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stop Plastic Use ಆದಷ್ಟೂ ಪ್ಲಾಸ್ಟಿಕ್ ಬಳಕೆ ತಪ್ಪಿಸಿ.ಇಂದು ಪ್ಲಾಸ್ಟಿಕ್ ಮುಕ್ತ ದಿನಾಚರಣೆ
Stop Plastic Use ಮಾನವ ಆಧುನಿಕ ದಿನಗಳಲ್ಲಿ ಯಾವುದಾದರು ಒಂದು ಹೊಸ ಆವಿಷ್ಕಾರಗಳನ್ನು ಮಾಡುತ್ತೇಲೆ ಬಂದಿದ್ದಾನೆ. ಅದು ಅವನ ಉಪಯೋಗಕ್ಕಾಗಿ ಅಥವಾ ಪ್ರಯೋಗಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಆದರೆ ಇಂತಹ ಆವಿಷ್ಕಾರಗಳಲ್ಲಿ ಮಾನವರಿಗೆ ಮಾತ್ರ ಅನುಕೂಲವಾಗುವುದನ್ನು ಕಂಡು ಹಿಡಿಯುತ್ತಾನೆ, ತನ್ನ ಸುತ್ತಮುತ್ತಲಿನ ಪರಿಸರದ ಬಗ್ಗೆ ಯೋಚನೆ ಮಾಡುವುದಿಲ್ಲ. ಅದೇ ರೀತಿಯಲ್ಲಿ ಕಂಡುಹಿಡಿದ ಒಂದು ವಸ್ತುವೇ ಈ ಪ್ಲಾಸ್ಟಿಕ್ ಎನ್ನಬಹುದು.
ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯು ಮಾನವನ ಅವಿಭಾಜ್ಯ ಅಂಗದ ರೀತಿಯಲ್ಲಿ ತನ್ನ ನೆಲೆಯನ್ನು ವಿಸ್ತರಸಿಕೊಂಡಿದೆ. ದಿನ ಬಳಕೆ ವಸ್ತುವಾಗಿ, ಮೆನೆಯ ಒಳಗಿನ ಅಲಂಕಾರಿಕ ವಸ್ತುವಾಗಿ, ಪೀಠೋಪಕರಣಗಳು, ವಿದ್ಯುತ್ ಉಪಕರಣಗಳು ಮತ್ತು ವಿವಿಧ ರೀತಿಯ ನಿಯಮಿತ ಉಪಯೋಗ ಪಡೆಯಲು ಪ್ಲಾಸ್ಟಿಕ್‍ಗೆ ಅವಲಂಬಿತನಾಗಿದ್ದಾನೆ.
ಪ್ಲಾಸ್ಟಿಕ್ ಬ್ಯಾಗನ್ನು ಬಳಸುವುದು ತುಂಬಾ ಸುಲಭವಾದ ಮಾರ್ಗ. ಅದಕ್ಕಾಗಿ ಎಲ್ಲ ಜನರು ಪ್ಲಾಸ್ಟಿಕ್ ಬ್ಯಾಗ್‍ಗೆ ಮರುಳಾಗಿದ್ದಾರೆ . ಮಾರ್ಕೆಟ್ ಗೆ ಹೋಗಲಿ, ಶಾಪಿಂಗ್ ಹೋಗಲಿ ಅಥವಾ ಯಾವುದೇ ರೀತಿಯ ವಸ್ತುವನ್ನು ತರುವುದಕ್ಕೆ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬ್ಯಾಗನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಚಿಕ್ಕದಾದ ಅಂಗಡಿಯಿಂದ ದೊಡ್ಡ ಶಾಪಿಂಗ್ ಮಾಲ್‍ವರೆಗೆ ಪ್ಲಾಸ್ಟಿಕ್ ಬಳಕೆ ಯಥೇಚ್ಚವಾಗಿದೆ.
ಹೋಟೆಲ್‍ಗಳಲ್ಲಿ ಪಾರ್ಸೆಲ್ ಮಾಡಲು ಪ್ಲಾಸ್ಟಿಕ್ ಕವರ್ ಬಳಸುತ್ತಾರೆ. ಆದರೆ ಈ ಪ್ಲಾಸ್ಟಿಕ್ ಬ್ಯಾಗ್‍ಗಳ ಉಪಯೋಗವು ಮಿತಿಮೀರಿದ ಹಂತ ತಲುಪಿದ್ದು ಇದನ್ನು ತಡೆಯುವ ಉದ್ದೇಶದಿಂದ ಜು.3 ರಂದು ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಆಚರಿಸಲಾಗುತ್ತದೆ.
ಪರಿಸರ ಸಂರಕ್ಷಣೆಗಾಗಿ 2002 ರಲ್ಲಿ ಬಾಂಗ್ಲಾದೇಶವು ವಿಶ್ವದಲ್ಲೇ ಮೊದಲು ಪ್ಲಾಸ್ಟಿಕ್ ಬ್ಯಾಗ್ ನಿಷೇಧ ಮಾಡಿತು. 2008 ರಲ್ಲಿ ರುವಾಂಡ ದೇಶವು ಪ್ಲಾಸ್ಟಿಕ್ ಚೀಲಗಳು ಮತ್ತು ಪ್ಯಾಕೇಜಿಂಗ್ ಮೇಲೆ ನಿಷೇಧವನ್ನು ವಿಧಿಸುತ್ತದೆ. ನಂತರ ಹತ್ತು ವರ್ಷಗಳಲ್ಲಿ ವಿಶ್ವದ ಮೊದಲ ಪ್ಲಾಸ್ಟಿಕ್ ಮುಕ್ತ ದೇಶವಾಗಿ ಗುರುತಿಸಿಕೊಳ್ಳುತ್ತದೆ.
Stop Plastic Use ಭಾರತ ದೇಶವು 2021 ರ ಆಗಸ್ಟ್ 21 ರಂದು ಪ್ಲಾಸ್ಟಿಕ್‍ಬ್ಯಾಗ್ ನಿಷೇಧಿಸಿ ಅದೇಶಿಸುತ್ತದೆ. ಹೀಗೆ ಪ್ಲಾಸ್ಟಿಕ್‍ಬ್ಯಾಗ್ ನಿಷೇಧವಿದ್ದರೂ ಜನರು ಮಾತ್ರ ಬಳಕೆಯನ್ನು ಮಾತ್ರ ಕಡಿಮೆ ಮಾಡಿಲ್ಲ. ಇಪಿಎ ಸಂಶೋಧನೆಯ ಪ್ರಕಾರ ಜಾಗತಿಕವಾಗಿ ನಾವು ಪ್ರತಿ ವರ್ಷಕ್ಕೆ ಸುಮಾರು ಒಂದು ಟ್ರಿಲಿಯನ್ ನಷ್ಟು ಬಿಸಾಡಬಹುದಾದ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತೇವೆ. ಹಾಗೂ ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ ಒಂದು ಮಿಲಿಯನ್ ಚೀಲಗಳನ್ನು ಬಳಸುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಪ್ಲಾಸ್ಟಿಕ್ ಬ್ಯಾಗನ್ನು ಏಕೆ ನಿಷೇಧ ಮಾಡಬೇಕೆಂದು ನೋಡುವುದಾದರೆ, ಭೂಮಿಯ ಮೇಲಿನ ವಾತಾವರಣವನ್ನು ಮಲಿನಗೊಳಿಸುತ್ತದೆ. ಪ್ಲಾಸ್ಟಿಕ್ ಚೀಲಗಳು ಮನುಷ್ಯನ ಆರೋಗ್ಯಕ್ಕೆ ಹಾನಿಕರಕವಾಗಿದೆ. ಆಹಾರ ಪದಾರ್ಥಗಳನ್ನು ಅದರಲ್ಲಿ ತಂದು ಸೇವಿಸಿದರೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಬರುವ ಸಾಧ್ಯತೆ ಇದೆ. ಈ ಪ್ಲಾಸ್ಟಿಕ್ ಚೀಲಗಳು ಚರಂಡಿ ಮತ್ತು ನೀರಿನ ಮೂಲಗಳನ್ನು ಮುಚ್ಚಿಕೊಂಡಿರುತ್ತದೆ, ಇದರಿಂದ ಕೊಳಚೆ ನೀರು ನಿಂತುಕೊಂಡು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಖಾಯಿಲೆಗಳು ಹೊರಡುವ ಸಾಧ್ಯತೆ ಇದೆ. ಮತ್ತು ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಯಾಗಲು ಕಾರಣವಾಗುತ್ತದೆ. ಬೀದಿ ಬದಿಗಳು ಪ್ಲಾಸ್ಟಿಕ್ ಚೀಲಗಳಿಂದ ಕೂಡಿರುತ್ತದೆ.
ಭೂಮಿಯ ಮೇಲಿನ ಪ್ರತಿಯೊಂದು ಜೀವ ಸಂಕುಲಕ್ಕೂ ಪ್ಲಾಸ್ಟಿಕ್ ನಿಂದ ತೊಂದರೆ ಉಂಟಾಗುತ್ತದೆ. ಪ್ಲಾಸ್ಟಿಕ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ನವೀಕರಿಸಲಾಗದ ಸಂಪನ್ಮೂಲಗಳಾದ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂನಿಂದ ಹೊರ ತೆಗೆಯಲಾಗುತ್ತದೆ, ಇದು ಜಾಗತಿಕವಾಗಿ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾಕಷ್ಟು ಶಕ್ತಿ ಸಂಪನ್ಮೂಲಗಳು ಬೇಕಾಗುತ್ತದೆ. 9 ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸಲು ಸುಮಾರು ಒಂದು ಕಿಲೋಮೀಟರ್ ಕಾರನ್ನು ಓಡಿಸುವಷ್ಟು ಶಕ್ತಿ ಬೇಕಾಗುತ್ತದೆ. ವಿಷಕಾರಿ ರಾಸಾಯನಿಕ ಬಿಡುಗಡೆ ಮಾಡುವುದರಿಂದ ಹಸಿರು ಮನೆ ಪರಿಣಾಮ ಉಂಟಾಗುತ್ತದೆ. ಪ್ಲಾಸ್ಟಿಕ್ ಬ್ಯಾಗ್ ಜೈವಿಕವಾಗಿ ವಿಘಟಿಸುವುದಿಲ್ಲ್ಲ, ನೂರಾರು ವರ್ಷಗಳಾದರೂ ಅವು ಕೊಳೆಯುವುದಿಲ್ಲ. ಬದಲಾಗಿ ರಾಸಾಯನಿಕ ಬಿಡುಗಡೆ ಮೂಲಕ ಮಣ್ಣಿನ ಫಲವತ್ತತೆ ಕಡಿಮೆ ಮಾಡುತ್ತದೆ.
ಪ್ಲಾಸ್ಟಿಕ್ ಬ್ಯಾಗ್ ಬಳಕೆಯಿಂದ ಪ್ರತಿಯೊಂದು ಜೀವಿಗೂ ಮಾರಣಾಂತಿಕ ಸಮಸ್ಯೆಗಳು ಉಂಟಾಗುತ್ತದೆ. ಪ್ರಮುಖವಾಗಿ ನಗರ ಪ್ರದೇಶಗಳಲ್ಲಿ ಆಹಾರವನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೊಗುತ್ತಾರೆ. ಇಂತಹ ಆಹಾರ ಸೇವಿಸಿದ ನಂತರ ಅದನ್ನು ಹೊರಗಡೆ ಎಸೆಯುತ್ತಾರೆ. ಹೀಗೆ ಎಸೆದ ಪ್ಲಾಸ್ಟಿಕ್ ವಸ್ತುವನ್ನು ಹಸು, ಕುದುರೆ, ಎಮ್ಮೆ, ಕತ್ತೆ ಮತ್ತು ಮುಂತಾದ ಮೂಖ ಪ್ರಾಣಿಗಳು ಸೇವಿಸುತ್ತವೆ. ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕರಗುವುದಿಲ್ಲ, ಅಲ್ಲಿ ರಾಸಾಯನಿಕ ಉತ್ಪತ್ತಿಯಾಗಿ ಮರಣ ಹೊಂದುತ್ತಿರುವುದು ಹೆಚ್ಚಾಗಿ ನೋಡುತ್ತಿದ್ದೆವೆ.
ಸಮುದ್ರ, ನದಿ ಮತ್ತು ಕೆರೆ ಇತ್ಯಾದಿ ಜಲ ಮೂಲಗಳಿಗೆ ನೇರವಾಗಿ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಎಸೆಯುವುದರ ಮೂಲಕ ಅಥವಾ ಮಳೆಯ ನೀರಿನ ಮೂಲಕ ಸೇರಿಕೊಂಡಿರುತ್ತದೆ. ಅದರಿಂದ ಜಲಚಲಗಳಾದ ಮೀನುಗಳು, ಆಮೆಗಳು, ನೀರುನಾಯಿಗಳು ಮತ್ತು ಸರಿಸೃಪಗಳಿಗೆ ತೊಂದರೆ ಉಂಟಾಗುತದೆ. ಪ್ಲಾಸ್ಟಿಕ್ ಬ್ಯಾಗ್‍ಗಳು ಅವುಗಳಿಗೆ ಸಿಕ್ಕಿಕೊಂಡು ನೀರಿನಲ್ಲಿ ಸಂಚರಿಸಲು ಮತ್ತು ಆಹಾರ ಸೇವನೆ ಮಾಡಲು ತೊಂದರೆಯಾಗಿ ಮರಣ ಹೊಂದುತ್ತಿವೆ. ಪಕ್ಷಿಗಳು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುವನ್ನು ಸೇವಿಸಿ ಸಾವಿಗೀಡಾಗುತ್ತಿವೆ.
ನಿಸರ್ಗದ ಮೇಲೆ ಪ್ಲಾಸ್ಟಿಕ್ ದುಷ್ಟಪರಿಣಾಮ ಬೀರುತ್ತಿದೆ. ಅರಣ್ಯದಲ್ಲಿ ಬಿಸಾಡುವುದರಿಂದ ವನ್ಯ ಜೀವಿಗಳೂ ಸೇವಿಸಿ ಅಪಾಯಕ್ಕೆ ಗುರಿಯಾಗುತ್ತವೆ. ಹೀಗೆ ಅನೇಕ ತರಹದ ಪರಿಣಾಮ ನೋಡುತ್ತೇವೆ.
ಸಮಸ್ಯೆ ನಿವಾರಣೆ ಹೇಗೆ?
ಪ್ಲಾಸ್ಟಿಕ್ ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಯಲು ಬಹಳ ಸುಲಭವಾದ ಮಾರ್ಗವೆಂದರೆ, ಮೊದಲು ನೀವು ಇದರ ದುಷ್ಪರಿಣಾಮದ ಬಗ್ಗೆ ಅರಿತುಕೊಂಡು ಬಳಕೆಯನ್ನು ನಿಲ್ಲಿಸಬೇಕು. ಬಟ್ಟೆ, ಸೆಣಬು ಅಥವಾ ನೈಸರ್ಗಿಕವಾಗಿ ಸಿಗುವ ಅಂಶದಿಂದ ತಯಾರಿಸಿದ ಚೀಲಗಳನ್ನು ಬಳಸುವುದು ಉತ್ತಮ ಮಾರ್ಗವಾಗಿದೆ . ಪರಿಸರದ ಬಗ್ಗೆ ಅಮೂಲ್ಯವಾದ ಕಾಳಜಿಯನ್ನು ಹೊಂದಬೇಕು. ಪ್ರವಾಸಕ್ಕೆಂದು ತೆರಳಿದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ನಿಮಗೆ ನೀಡುವ ಪ್ಲಾಸ್ಟಿಕ್ ಚೀಲವನ್ನು ನಿರಾಕರಿಸಿ, ಸ್ವೀಕರಿಸಬೇಡಿ . ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ಲಾಸ್ಟಿಕ್ ಚೀಲವನ್ನು ಒಂದೆಡೆ ಸಂಗ್ರಹಿಸಿ ಮಾಲಿನ್ಯ ತಡೆಗಟ್ಟಬಹುದು. ಹಾಗೂ ಸಾರ್ವಜನಿಕರಿಗೆ ಅರಿವಿನ ಕಾರ್ಯಕ್ರಮಗಳನ್ನು ನಡೆಸಬೇಕು.
ಪ್ಲಾಸ್ಟಿಕ್ ಬ್ಯಾಗ್ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು. ಆಗ ಸಾರ್ವಜನಿಕರು ಮನೆಯಿಂದ ಪರಿಸರ ಸ್ನೇಹಿ ಚೀಲಗಳನ್ನು ಬಳಸುತ್ತಾರೆ. ಹೆಚ್ಚು ಹೆಚ್ಚು ಮರುಬಳಕೆ ಮಾಡುವ ಚೀಲಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬ್ಯಾಗ್ ಬಳಕೆ ನಿಯಂತ್ರಿಸಲು ಸರ್ಕಾರವು ಹಲವು ಮಾರ್ಗಗಳನ್ನು ತಂದಿದೆ. ಪರಿಣಾಮಕಾರಿಯಾಗಿ ಅವುಗಳ ಪಾಲನೆಯಾಗಬೇಕು.
ಪ್ರಕೃತಿ ಮನುಷ್ಯನಿಗೆ ತನ್ನ ಮಡಿಲಿನಲ್ಲಿ ಜೀವ ನೀಡಿದೆ. ಆದರೆ ಇಂದು ಮಾನವ ನಿಸರ್ಗವನ್ನೇ ಪ್ಲಾಸ್ಟಿಕ್ ಎಂಬ ವಸ್ತುವಿನಿಂದ ಉಸಿರು ಕಟ್ಟಿಸಿದ್ದಾನೆ. ಉಸಿರುಕಟ್ಟದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ. ಮುಂದಿನ ಪೀಳಿಗೆಗಳಿಗೆ ಉತ್ತಮ ಪರಿಸರ ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಬಹು ಮುಖ್ಯವಾಗಿದೆ.
ಮನೋಜ್.ಎಂ
ಅಪ್ರೆಂಟಿಸ್, ವಾರ್ತಾ ಇಲಾಖೆ
Shivamogga News ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದ- ಭಾರತ ಡಯಾಸ್
ಶಿವಮೊಗ್ಗ: ಸೇವಾ ಜೀವನದಲ್ಲಿ ಉನ್ನತ ಯಶಸ್ಸು ಸಾಧಿಸುವುದು ಸಾರ್ಥಕ ಭಾವನೆ ಮೂಡಿಸುತ್ತದೆ ಎಂದು ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯಲ್ಲಿ 8 ವರ್ಷಗಳಿಂದ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಭಾರತಿ ಡಯಾಸ್ ಅವರಿಗೆ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಮಲೆನಾಡು ಓಪನ್ ಗ್ರೂಪ್
ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತಿ ಡಯಾಸ್ ಅವರು ಶಿವಮೊಗ್ಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಮುಂದಿನ ಸೇವಾ ಅವಧಿಯಲ್ಲಿ ಉನ್ನತ ಸ್ಥಾನ ತಲುಪುವಂತಾಗಲಿ ಎಂದು ಆಶಿಸಿದರು.
ಶಿವಮೊಗ್ಗ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಭಾರತಿ ಡಯಾಸ್ ಅವರು 8 ವರ್ಷಗಳಲ್ಲಿ ಜಿಲ್ಲಾ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ದಿನಾಚರಣೆ, ಮಹನೀಯರ ಜಯಂತಿ ಕಾರ್ಯಕ್ರಮ, ಜಿಲ್ಲಾ ಪುರಸ್ಕಾರ, ನಿಪುಣ ಪರೀಕ್ಷಾ ಶಿಬಿರಗಳಲ್ಲಿ, ಸಂಸ್ಥೆಯ ಗಣತಿ ಹೆಚ್ಚಿಸುವುದರಲ್ಲಿ, ಜಿಲ್ಲಾ ಮಟ್ಟದ ವಯಸ್ಕ ನಾಯಕರ ತರಬೇತಿ ಮತ್ತು ಮಕ್ಕಳ ಶಿಬಿರಗಳನ್ನು ಸಂಘಟಿಸುವುದರಲ್ಲಿ ಭಾಗವಹಿಸಿದ್ದರು. ಇತ್ತೀಚಿಗೆ ರಾಜ್ಯ ಸಂಸ್ಥೆ ಮಾರ್ಗದರ್ಶನದಂತೆ ನಡೆದ ಒವೈಎಂಎಸ್ ಮತ್ತು ಪ್ರತಿಯೊಬ್ಬ ಸದಸ್ಯರು ಪಡೆದುಕೊಳ್ಳಬೇಕಾದ ಯುಐಡಿ ಸಂಖ್ಯೆಯನ್ನು ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿ ಜಿಲ್ಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ ಎಂದರು.
ಮುಂದಿನ ಸೇವಾ ಅವಧಿಯಲ್ಲಿ ಇನ್ನು ಹೆಚ್ಚಿನ ಯಶಸ್ಸು ಪಡೆಯಲಿ ಎಂದು ಶುಭಹಾರೈಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಭಾರತಿ ಡಯಾಸ್ ಅವರು ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್ ಮಾತನಾಡಿ, ವೃತ್ತಿಯಲ್ಲಿ ನಾವು ಮಾಡಿದ ಸೇವೆ ಸದಾ ಹಸಿರಾಗಿರುತ್ತದೆ ಹಾಗೂ ಹಲವಾರು ಹೊಸ ಹೊಸ ಸ್ಕೌಟ್ ಮತ್ತು ಗೈಡರ್ಸ್ ಗಳಿಗೆ ನಿರಂತರ ಮಾರ್ಗದರ್ಶನ ನೀಡಿ ಅವರನ್ನ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಕೀರ್ತಿ ಭಾರತಿ ಡಯಾಸ್ ಅವರಿಗೆ ಸೇರುತ್ತದೆ ಎಂದರು.
ಜಿಲ್ಲಾ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು. ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ, ಜಿಲ್ಲಾ ಜಂಟಿ ಕಾರ್ಯದರ್ಶಿ ಲಕ್ಷ್ಮೀ ರವಿ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ್, ಜಿಲ್ಲಾ ಸಂಸ್ಥೆ ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಕಾತ್ಯಾಯಿನಿ, ಕೇಂದ್ರ ಸ್ಥಾನಿಕ ಆಯುಕ್ತ ಕೆ. ರವಿ, ಬಿಂದು ವಿಜಯ್‌ಕುಮಾರ್, ಗೈಡರ್ ಶಾಂತಮ್ಮ, ಕ್ರಿಸ್ಟಿನ ಶೀಲಾ, ಸ್ಕೌಟರ್ ಕೃಷ್ಣ ಸ್ವಾಮಿ, ಚಂದ್ರಶೇಖರ್, ಕಚೇರಿ ಮೇಲ್ವಿಚಾರಕ ದೇವಯ್ಯ, ಕುಮಾರ್, ಭರತ ಮತ್ತಿತರರು ಭಾಗವಹಿಸಿದ್ದರು.
