Rashtrakutas ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಕೊರಕೊಡು ಗ್ರಾಮದಲ್ಲಿ 8ನೇ ಶತಮಾನದ ರಾಷ್ಟ್ರಕೂಟರ ಅರಸ ದ್ರುವನ ಅವಧಿಯ ಶಾಸನ ಪತ್ತೆಯಾಗಿದೆ. ಇತಿಹಾಸ ಸಂಶೋಧಕರಾದ ರಮೇಶ. ಬಿ ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿಗುಂಡಿಯವರು ಸ್ಥಳೀಯ ಇತಿಹಾಸ ಸಂಶೋಧಕರಾದ ಶ್ರೀಪಾದ ಬಿಚ್ಚುಗತ್ತಿಯವರ ಸೂಚನೆಯ ಮೇರೆಗೆ ಕ್ಷೇತ್ರ ಅಧ್ಯಯನ ಕೈಗೊಂಡಾಗ ಈ ಶಾಸನ ಪತ್ತೆ ಮಾಡಲಾಗಿದೆ.
ಈ ಶಾಸನವು ಒಟ್ಟು ಹದಿನೇಳು ಸಾಲುಗಳನ್ನು ಹೊಂದಿದ್ದು ಮೇಲ್ಬಾಗದಲ್ಲಿ ವಿಜಯದ ಸಂಕೇತವಾದ ಕುದುರೆ ಶಿಲ್ಪವಿದೆ. ಶಾಸನದ ಮಾಹಿತಿ ಪ್ರಕಾರ ಕ್ರಿ.ಶ. 780-793ರ ಅವಧಿಯಲ್ಲಿ ರಾಷ್ಟ್ರಕೂಟರ ದೊರೆ ದ್ರುವನು ಆಡಳಿತ ನಡೆಸುತ್ತಿದ್ದಾಗ ಬನವಾಸಿ ಪನ್ನಿಚ್ಛಾಸಿರ ನಾಡಿನ ಆಡಳಿತವನ್ನು ಸೇವುಣರ ಮರಕ್ಕೆ ಅರಸ ನೋಡಿಕೊಳ್ಳುತ್ತಿದ್ದ. ಈ ಅವಧಿಯಲ್ಲಿ ಮರಕ್ಕೆ ಅರಸನ ಮಹಾಮಾತ್ರನು ಕೊರಕೊಡಿನ ದೇವರಿಗೆ ಸಲ್ಲುವ ದ್ರವ್ಯದಲ್ಲಿ ದಿಂಡೂರಿನಲ್ಲಿ ಒಂದು ದೇವಾಲಯದ ನಿರ್ಮಿಸಿ ಅದರ ನಿರ್ವಹಣೆಗೆ ಕೃಷಿಯೋಗ್ಯ ಭೂಮಿಯನ್ನು ದಾನ ನೀಡಿದ ಮಾಹಿತಿ ಇದೆ. ಕೊನೆಯಲ್ಲಿ ಈ ದೇವಾಲಯವನ್ನು ದೇವಾವರಿಯರ ಮಗನಾದ ಶಿಲ್ಪಿ ಶ್ರೀಧರನು ನಿರ್ಮಿಸಿದ ಎಂಬ ಮಾಹಿತಿ ಇದೆ.
ಈ ಧರ್ಮವನ್ನು ಹಾಳು ಮಾಡಿದವರಿಗೆ ಮತ್ತು ರಕ್ಷಿಸಿದವರಿಗೆ ಶಾಪಾಶಯವನ್ನು ವಿವರವಾಗಿ ಖಂಡರಿಸಲಾಗಿದೆ. ಈ ಗ್ರಾಮದಲ್ಲಿ 12-13ನೇ ಶತಮಾನದ ಅವಧಿಯ ಐದು ತುರುಗೋಳ್ ವೀರಗಲ್ಲುಗಳು ಪ್ರಕಟವಾಗಿವೆ. ಶಾಸನ ಪಾಠವಿರದ ಇನ್ನೂ ಮೂರು ವೀರಗಲ್ಲುಗಳು ಎರಡು ಮಾಸ್ತಿಕಲ್ಲುಗಳು ಇಲ್ಲಿ ಲಭ್ಯ ಇವೆ. ಈ ವೀರಗಲ್ಲುಗಳನ್ನು ಗ್ರಾಮದ ಕಲ್ಲೇಶ್ವರ ದೇವಾಲಯದ ಎದುರು ಸಾಲಾಗಿ ನಿಲ್ಲಿಸಿ ಸಂರಕ್ಷಿಸಲಾಗಿದೆ. ಈ ದೇವಾಲಯದ ಪಕ್ಕದಲ್ಲಿ ಕಳ್ಳರಾಮೇಶ್ವರ ಎಂಬ ಮಣ್ಣಿನ ಗೋಡೆಯಿಂದ ರಚಿಸಿದ ದೇವಾಲಯವಿದ್ದು ಒಳಭಾಗದಲ್ಲಿ 6-7ನೇ ಶತಮಾನಕ್ಕೆ ಸೇರಬಹುದಾದ ಶಿವಲಿಂಗವಿದೆ.
Rashtrakutas ಶಾಸನ ಸಾಹಿತ್ಯ ಅಧ್ಯಯನಕ್ಕೆ ಇತಿಹಾಸ ಸಂಶೋಧಕರಾದ ಡಾ. ಪಾಡಿಗಾರ್ ಮತ್ತು ಡಾ. ಜಗದೀಶ ಅಗಸಿ ಬಾಗಿಲು ಡಾ. ಶೇಜೇಶ್ವರ ನಾಯಕರವರು ಮಾರ್ಗದರ್ಶನ ನೀಡಿದ್ದಾರೆ. ಶಾಸನ ಶೋಧನೆಗೆ ಇತಿಹಾಸ ಸಂಶೋಧಕರಾದ ಶ್ರೀಪಾದ ಬಿಚ್ಚುಗತ್ತಿಯವರು, ಮತ್ತು ಗ್ರಾಮದ ಮಧು, ಜಗದೀಶಗೌಡ, ಶಾಂತಪ್ಪಗೌಡ್ರು, ಸಂತೋಷ. ಮಲ್ಲಿಕಾರ್ಜುನ ಗೌಡ್ರು, ನಂಜುಂಡಗೌಡ್ರ, ಕೆಂಡಪ್ಪ ಗೌಡ್ರು ಮುಂತಾದವರು ಸಹಕರಿಸಿದ್ದಾರೆಂದು ಇತಿಹಾಸ ಸಂಶೋಧಕರಾದ ರಮೇಶ. ಬಿ ಹಿರೇಜಂಬೂರು ತಿಳಿಸಿದ್ದಾರೆ.
ಕೊರಕೊಡು ಗ್ರಾಮದಲ್ಲಿ ಪತ್ತೆಯಾದ ಶಾಸನವು 8ನೇ ಶತಮಾನದ ರಾಷ್ಟ್ರಕೂಟರ ಅರಸ ದ್ರುವನ ಅವಧಿಯದ್ದು . ಈ ಶಾಸನವು ಒಟ್ಟು ಹದಿನೇಳು ಸಾಲುಗಳನ್ನು ಹೊಂದಿದ್ದು ಮೇಲ್ಬಾಗದಲ್ಲಿ ವಿಜಯದ ಸಂಕೇತವಾದ ಕುದುರೆ ಶಿಲ್ಪವಿದೆ ಎಂದು ಅವರು ಹೇಳಿದ್ದಾರೆ.
Rashtrakutas ಸೊರಬದ ಕೊರಕೊಡು ಗ್ರಾಮದಲ್ಲಿ ಆರನೇ ಶತಮಾನದ ಶಿಲಾಶಾಸನ ಪತ್ತೆ
Shivamogga News ಭಾರತ್ ಅಕ್ಕಿ ಬಂದ್: ಖಂಡನೀಯ
ಶಿವಮೊಗ್ಗ: ಲೋಕಸಭಾ ಚುನಾವಣೆಯ ಮುನ್ನ ಅಂದರೆ 02.02.2024 ರಂದು ಮೋದಿಯವರ ಸರ್ಕಾರ ಪ್ರಾರಂಭಿಸಿದ್ದ ಶ್ರೀಸಾಮಾನ್ಯನಿಗೆ ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಪಡಿತರ ವಿತರಿಸುವ ಭಾರತ್ ರೈಸ್ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಅತ್ಯಂತ ಖಂಡನೀಯ ಸಂಗತಿ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಹೇಳಿದೆ.
ಶುಕ್ರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಎನ್.ಡಿ.ಎ ಅಂಗಪಕ್ಷಗಳ ಮುಖಂಡರಾದ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಮತ್ತು ಬಿಹಾರದ ಜೆ.ಡಿ.ಯು ಪಕ್ಷದ ಮುಖಂಡರಾದ ನಿತೀಶ್‌ಕುಮಾರ್ , ಮತ್ತು ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮುಂತಾದವರು ಈ ಜನಪ್ರಿಯ ಭಾರತ್ ರೈಸ್ ಯೋಜನೆಯನ್ನು ಕೂಡಲೇ ಮುಂದುವರೆಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮೇಲೆ ಒತ್ತಡ ತರಲು ಆಗ್ರಹಿಸಿದರು.
ನ್ಯಾಷನಲ್ ಕೋ ಆಪರೇಟಿವ್
ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಅಮಿಟೆಡ್ (ನಾಫೆಡ್) ರಿಯಾಯಿತಿ ದರದಲ್ಲಿ ಭಾರತ್ ಅಕ್ಕಿ, ಬೇಳೆ, ಗೋದಿ ಹಿಟ್ಟಿನ ಮಾರಾಟದ ಜವಾಬ್ದಾರಿ ಹೊತ್ತಿತ್ತು. ಈ ಜನಪ್ರಿಯ ಯೋಜನೆ ಅಡಿಯಲ್ಲಿ 29/- ರೂ.ಗೆ 1 ಕೆ.ಜಿ. ಅಕ್ಕಿಯನ್ನು, 27.50 ರೂ.ಗಳಿಗೆ 1 ಕೆಜಿ ಗೋಧಿ ಹಿಟ್ಟನ್ನು ಹಾಗೂ 60/ವಿತರಿಸಲಾಗುತ್ತಿತ್ತು. 1 ಕೆ.ಜಿ. ಕಡ್ಲೆಬೇಳೆಯನ್ನು ರೂ.ಗಳಿಗೆ ಬಿ.ಪಿ.ಎಲ್, ಎ.ಪಿ.ಎಲ್ ಇಲ್ಲದ ಶ್ರೀಸಾಮಾನ್ಯರಿಗೆ ಈ ಅಗ್ಗದ ಪಡಿತರ ಯೋಜನೆಗೆ ಕೇಂದ್ರ ಸರ್ಕಾರ ಸಂಚಕಾರ ತಂದಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪದ ನಾಫೆಡ್ ಕಛೇರಿ ಆವರಣ, ರಿಲಯನ್ಸ್ ಮಾರ್ಟ್, ಜಿಯೋ ಮಾರ್ಟ್ ಸೇರಿದಂತೆ, ಕೆಲವು ಮಾಲ್‌ಗಳು ಅಲ್ಲದೇ ಮೊಬೈಲ್ ವ್ಯಾನ್‌ಗಳ ಮೂಲಕ ದೇಶಾದ್ಯಂತ ಬಾರತ್ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರಾರಂಭದಲ್ಲಿ ರಾಜ್ಯದಲ್ಲಿ ಬಿ.ಪಿ.ಎಲ್. ಕಾರ್ಡ್ ಇರುವವರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿಯನ್ನು ಅಲ್ಲದೇ ಎ.ಪಿ.ಎಲ್ ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ಕೆ.ಜಿ.ಗೆ ರೂ.15/- ರಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಈ ಎರಡೂ ಬಗೆಯ ಪಡಿತರ ಚೀಟಿ ಇಲ್ಲದ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲದೆ, ಬಡತನದಿಂದ ಬಳಲುವವರು, ನಾನಾ ಕಾರಣಗಳಿಂದ ವಲಸೆ ಬಂದವರು, ಪಡಿತರ ಚೀಟಿ ಹೊಂದಿಲ್ಲದವರು ರೂ.29/- ಗಳಿಗೆ ಭಾರತ್ ಅಕ್ಕಿ ದೊರೆಯುತ್ತದೆ ಎಂದು ಖುಷಿ ಪಟ್ಟಿದ್ದರು ಎಂದರು.
BREAKING NEWS ಶಿವಮೊಗ್ಗ ಜಿ ಪಂ ಸಿಇಓ ವರ್ಗಾವಣೆ
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಪಂಚಾಯಿತಿ CEO ಲೋಖಂಡೆ ಸ್ನೇಹ ಸುಧಾಕರ್ ರವರನ್ನ ವರ್ಗಾವಣೆ ಮಾಡಲಾಗಿದೆ. ನೂತನ ಸಿಇಒ ಆಗಿ ಐಎಎಸ್ ಅಧಿಕಾರಿ ಹೇಮಂತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಲೋಖಂಡೆ ಸ್ನೇಹ ಸುಧಾಕರ್ ರವರನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬಳ್ಳಾರಿ ಉಪವಿಭಾಗಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಹೇಮಂತ್ ರವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಅಗಿ ನೇಮಕ ಮಾಡಲಾಗಿದೆ.
Shivamogga News ಖಾಲಿಯಾಗಿದ್ದ ಅಬ್ಬೆ ಫಾಲ್ಸ್ ಗೆ ಮತ್ತೆ ಜೀವ ಕಳೆ
ಶಿವಮೊಗ್ಗ
ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಕೊಡೂರಿನ ಅಬ್ಬಿ ಫಾಲ್ಸ್ ಗೆ ಜೀವ ಕಳೆ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡೂರು ಸಮೀಪದ ಅಬ್ಬಿ ಜಲಪಾತ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಿಂದ ಮೈದುಂಬಿ ಹರಿಯುತ್ತಿರುವ ನದಿಗಳು.ಮೈದುಂಬಿದ ಹರಿಯುತ್ತಿರುವ ಕೋಡೂರು ಸಮೀಪದ ಅಬ್ಬಿ ಜಲಪಾತ ನೋಡಲು ಮನಮೋಹಕ.ಸದ್ಯ ಈ ಜಲಪಾತ ವೀಕ್ಷಣೆಗೆ ವನ್ಯ ಜೀವಿ ವಿಭಾಗದಿಂದ ನಿಷೇಧವಿದೆಮಳೆಗಾಲದಲ್ಲಿ ಸೃಷ್ಟಿಯಾಗುವ ಹಲವಾರು ಜಲಪಾತಗಳಲ್ಲಿ ಕೊಡೂರು ಅಬ್ಬಿ ಫಾಲ್ಸ್ ಕೂಡ ಒಂದು
RM Manjunatha Gowda ಡಿಸಿಸಿ ಬ್ಯಾಂಕ್ ಚುನಾವಣೆ ನಿರೀಕ್ಷಿತ ಗೆಲುವು ತಂದಿದೆ- ಆರ್.ಎಂ.ಮಂಜುನಾಥ ಗೌಡ
RM Manjunatha Gowda ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರಾಜ್ಯಕ್ಕೆ ಪುನರ್ಧನ ನೀಡುವಲ್ಲಿ ನಿರ್ಲಕ್ಷ್ಯ ಧೋರಣೆಯೊಂದಿಗೆ ತಾರತಮ್ಯ ಮಾಡುತ್ತಿದ್ದು,ಇದರಿಂದ ರಾಜ್ಯದ ಕೃಷಿ ವಲಯಕ್ಕೆ ಹೊಡೆತ ಬಿದ್ದಿದೆ ಎಂದು ಹಿರಿಯ ಸಹಕಾರಿ,ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ,ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನಬಾರ್ಡ್ ಮೂಲಕ ಕೊಡುವ ಪುನರ್ಧನವನ್ನು ೭೦% ನಿಂದ ೨೩% ಇಳಿಸಿದೆ,ಬೇರೆ ರಾಜ್ಯಗಳಿಗೆ ೧೦೦%ಪುನರ್ಧನ ನೀಡುವ ಕೇಂದ್ರ ಸರಕಾರ ಕರ್ನಾಟಕವನ್ನು ನಿರ್ಲಕ್ಷಿಸಿದೆ,ನಬಾರ್ಡ್ ಕೃಷಿ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದರು.
RM Manjunatha Gowda ಇತ್ತೀಚೆಗೆ ನಡೆದ ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಗೆಲುವು ಬಂದಿದೆ. ನನ್ನ ಸಹಕಾರಿ ಬದುಕಲ್ಲಿ ಇದೊಂದು ಸದಾ ನೆನಪಿಡುವ ಚುನಾವಣೆಯಾಗಿದೆ. ಜಾತಿ,ಪಕ್ಷ ಹೊರತುಪಡಿಸಿ ಸಹಕಾರಿ ವ್ಯವಸ್ಥೆ ಇರಬೇಕು ಎಂಬ ಸಿದ್ದಾಂತವನ್ನು ಗಾಳಿಗೆ ತೂರಿ ಕೆಲವರು ಸ್ಪರ್ಧಿಸಿದ್ದರು.
ಸಹಕಾರಿ ಕ್ಷೇತ್ರದ ಬಗ್ಗೆ ಅರಿವಿಲ್ಲದವರೂ ಕೂಡ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರಿಗೆ ಸಹಕಾರಿಗಳು ತಕ್ಕ ಉತ್ತರ ನೀಡಿದ್ದಾರೆ. ಆದರೆ ಪಕ್ಷಾತೀತವಾಗಿ ಕೆಲವು ಸಹಕಾರಿಗಳು ನಮಗೆ ಬೆಂಬಲಿಸಿ ಪ್ರಜಾಪ್ರಭುತ್ವ ಮಾದರಿಯ ಚುನಾವಣೆ ಎಂದು ಸಹಕರಿಸಿದರು ಎಂದರು.
ಈ ಗೋಷ್ಠಿಯಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್ ಉಪಸ್ಥಿತರಿದ್ದರು.
BREAKING NEWS ಯುಪಿ ಹತ್ರಾಸ್ ಕಾಲ್ತುಳಿತ ದುರಂತ.120ಕ್ಕೂ ಅಧಿಕ ಸಾವು
Breaking News ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಭಾರಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 120 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
“ಇದುವರೆಗೆ 25 ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ 27 ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿವೆ. ಅನೇಕ ಗಾಯಾಳುಗಳನ್ನು ಸಹ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಇಟಾಹ್ ಸಿಎಂಒ ಉಮೇಶ್ ಕುಮಾರ್ ತ್ರಿಪಾಠಿ ಅವರು ತಿಳಿಸಿದ್ದಾರೆ.
ಪುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗದಲ್ಲಿ ಈ ಘಟನೆ ನಡೆದಿದೆ ಎಂದು ಇಟಾಹ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ
Breaking News ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರ ರಾವ್ ಪೊಲೀಸ್ ಠಾಣೆ ಎಸ್‌ಎಚ್‌ಒ ಆಶಿಶ್ ಕುಮಾರ್ ಅವರು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
Thirthahalli News ಹೊನ್ನತಾಳು ಗ್ರಾಮದಲ್ಲಿ ಸುರಿದ ಮಳೆಗೆ ಮನೆ ಕುಸಿತ
Thirthahalli News ತೀರ್ಥಹಳ್ಳಿಯಲ್ಲಿ ಬಿಡದೆ ಸುರಿಯುತ್ತರುವ ಮಳೆ ಕುಸಿದ ಮನೆ – ತಪ್ಪಿದ ಅನಾಹುತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಘಟನೆ. ಆರಿದ್ರಾ ಮಳೆಯು ಆಗುಂಬೆ ಭಾಗದಲ್ಲಿ ವಿಪರೀತ ಸುರಿಯುತ್ತಿರುವ ಮಳೆ ಹೋನ್ನೆತಾಳು ಗ್ರಾಮದ ಯಕ್ಷಗಾನ ಕಲಾವಿದನ ಮನೆ ಗಾಳಿ ಮಳೆಗೆ ತಡ ರಾತ್ರಿ ಕುಸಿತ ನಂದನ್ ಶೆಟ್ಟಿ ಎಂಬ ಯಕ್ಷಗಾನ ಕಲಾವಿದ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಕಲಾವಿದನಾಗಿ ಸೇವೆ. ನಿನ್ನೆ ಮಂದಾರ್ತಿಯಲ್ಲಿ ಮೇಳದ ಯಕ್ಷಗಾನದಲ್ಲಿ ಭಾಗಿಯಾಗಿದ್ದ ನಂದನ್ ಶೆಟ್ಟಿ. ನಂದನ್ ಶೆಟ್ಟಿಯ ತಾಯಿ ಭಾರತಿ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಈ ಸಂದರ್ಭದಲ್ಲಿ ರಾತ್ರಿ ಭಾರಿ ಮಳೆಗೆ ಮನೆ ಕುಸಿತ Thirthahalli News ಮನೆ ಕುಸಿಯುತ್ತಿದ್ದಂತೆ ಮನೆಯಿಂದ ಹೊರಬಂದ ತಾಯಿ ಭಾರತಿ. ಅದೃಷ್ಟವಶಾತ್ ಸಾವುನೋವು ಸಂಬಂವಿಸಿಲ್ಲ. ಮನೆಯ ಗೋಡೆ ಹಾಗೂ ಹಂಚು ಸೇರಿದಂತೆ ಮರದ ವಸ್ತುಗಳು ಕುಸಿತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ಹಾಗೂ ಸ್ಥಳೀಯ ಯುವಕರಿಂದ ನೆರವು
BREAKING NEWS ಆಗುಂಬೆ ಘಾಟಿನಲ್ಲಿ ಓಮಿನಿ ವ್ಯಾನ್ ಮೇಲೆ ಉರುಳಿದ ಬೃಹತ್ ಮರ
ಶಿವಮೊಗ್ಗಆಗುಂಬೆ ಘಾಟಿಯಲ್ಲಿ ಓಮಿನಿ ವ್ಯಾನ್ ಮೇಲೆ ಉರುಳಿದ ಬೃಹತ್ ಮರ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಘಟನೆಆಗುಂಬೆ ಘಾಟಿಯ ನಾಲ್ಕನೆ ತಿರುವಿನಲ್ಲಿ ಘಟನೆ ಮರ ಬಿದ್ದ ಪರಿಣಾಮ ಓಮಿನಿ ವ್ಯಾನ್ ಮುಂಭಾಗ ಸಂಪೂರ್ಣ ಜಖಂ.
ವ್ಯಾನಿನಲ್ಲಿ ಇದ್ದ ಸವಾರಿಗೆ ಸಣ್ಣ ಪುಟ್ಟ ಗಾಯ.ಮರ ಬಿದ್ದ ಪರಿಣಾಮ ಘಾಟಿಯ ಸಂಚಾರ ಬಂದ್ ಮರ ತೆರವುಗೊಳಿಸುವ ತನಕ ಸಂಚಾರ ಅಸ್ತವ್ಯಸ್ತ.
Shivamogga News ಶಿವಮೊಗ್ಗದ ಹೊಸನಗರದಲ್ಲಿ ಗುಡ್ಡ ಕುಸಿತ ಸಂಚಾರ ಅಸ್ತವ್ಯಸ್ತ
ಗುಡ್ಡ ಕುಸಿತ ರಾಷ್ಟ್ರೀಯ ಹೆದ್ದಾರಿ ಬಂದ್ ವಾಹನ ಸಂಚಾರ ಅಸ್ತವ್ಯಸ್ತ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಸಮಗೋಡು ಸಮೀಪ ಭಾರೀ ಗುಡ್ಡ ಕುಸಿತಗುಡ್ಡ ಕುಸಿದ ಪರಿಣಾಮ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ-766c ಯಲ್ಲಿ ವಾಹನ ಸಂಚಾರ ಸ್ಥಗಿತ.
ಹೊಸನಗರ ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಹಲವು ಅವಘಡ ಸೃಷ್ಟಿ.
ಜೆಸಿಬಿ ಯಂತ್ರ ಬಳಸಿ ಮಣ್ಣು ತೆರೆಯುವ ಕಾರ್ಯ ಆರಂಭ
ಮಳೆಯಿಂದ ಮಣ್ಣು ತೆಗಿಯುವ ಕಾರ್ಯಕ್ಕೆ ಅಡ್ಡಿ
ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ಕಾರ್ಯಕ್ರಮ
ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದೆಲ್ಲೆಡೆ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಸಂತಾಹರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ಲಿಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ, ರೇಬಿಸ್ ವಿರುದ್ಧ ಲಸಿಕೆ ಹಾಕಿ ಕಿವಿಗೆ ಗುರುತು ಮಾಡಿ ಕಾರ್ಯಾಚರಣೆ ಪೂರ್ಣವಾದ ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲೇ ಬಿಡಲಾಗುವುದು. ಈ ಕಾರ್ಯಕ್ರಮದ ಉದ್ದೇಶವು ಮಾನವೀಯ ಹಾಗೂ ವೈಜ್ಞಾನಿಕ ರೀತಿಯಲ್ಲಿ ನಾಯಿಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು. ಪ್ರಾಣಿ ಜನ್ಯ ರೋಗಗಳಾದ ರೇಬಿಸ್, ಲೆಪ್ಟೋಸ್ಟೈರಾ ಇತ್ಯಾದಿ ರೋಗಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡುವುದು ಮತ್ತು ಬೀದಿನಾಯಿಗಳಿಂದ ಸಾರ್ವಜನಿಕರಿಗಾಗುವ ತೊಂದರೆಗಳನ್ನು ನಿವಾರಿಸುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಸ್ತ್ರಚಿಕಿತ್ಸೆಯು ರಾಜೀವಗಾಂಧಿ ಬಡಾವಣೆಯ ಮಹಾವೀರ್ ಗೋಶಾಲೆ ಪಕ್ಕದಲ್ಲಿ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ಸಹಾಯವಾಣಿ 18004257677 ನ್ನು ಸಂಪರ್ಕಿಸುವುದು.
