Bakrid festival ಪವಿತ್ರ ಕುರಾನ್ ಹೇಳಿರುವಂತೆ ಬಕ್ರೀದ್ ಹಬ್ಬದ ಸಂಕೇತವೇ ತ್ಯಾಗದ ಸಂದೇಶವಾಗಿದೆ. ಪರರಿಗೆ ತೊಂದರೆ ನೀಡದಂತೆ ಸಂಕಷ್ಟದಲ್ಲಿರುವ ಜನರಿಗೆ ದಾನ ಧರ್ಮ ಮಾಡಿ ಕುರ್ಬಾನ್ ಆಚರಿಸಬೇಕೆಂಬುದೇ ಆಗಿದೆ. ಇದನ್ನು ಪ್ರತಿಯೊಬ್ಬರು ಅನುಸರಿಸಿದಾಗ ಮಾತ್ರ ಮುಸ್ಲಿಂ ಧರ್ಮಕ್ಕೆ ಗೌರವ ಲಭಿಸುತ್ತದೆ ಎಂದು ಸಾದಾತ್ ಕಾಲೋನಿ ಮಸೀದಿ ಆಲ್ಹಾ ಹಜರತ್ ಮೌಲಾನಾ ಮಹಮ್ಮದ್ ನಿಜಾಮುದ್ದೀನ್ ರಜ್ವೀ ಹೇಳಿದರು.
ಅವರು ತರೀಕೆರೆ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಮೂಹ ಪ್ರಾರ್ಥನೆ ಸಂದರ್ಭದಲ್ಲಿ ಮೌಲಾನ ಸಂದೇಶ ನೀಡಿ ಎಲ್ಲಾ ಧರ್ಮಗಳ ಸಾರವೂ ಒಂದೇ ಶಾಂತಿ ನೆಮ್ಮದಿ ಪರಸ್ಪರ ಪ್ರೀತಿ ಪ್ರೇಮದಿಂದ ಬಾಳ್ವೆ ನಡೆಸುವುದೇ ಆಗಿದೆ. ಎಲ್ಲರೂ ಅದರ ತಳಹದಿಯಲ್ಲಿ ಸೋದರತೆ ಮೆರೆದು ಬಾಳೋಣವೆಂದರು.
ತಾಲೂಕು ಅಂಜಮಾನ್ ಕಮಿಟಿ ಅಧ್ಯಕ್ಷ ಮುರ್ತುಜಾಖಾನ್, ಕಾರ್ಯದರ್ಶಿ ಅಬ್ದುಲ್ ಖಾದರ್ ಮತ್ತು ಪದಾಧಿಕಾರಿಗಳು ಮುಸ್ಲಿಂ ಧರ್ಮದ ಅನೇಕ ಮುಖಂಡರು ಭಾಗವಹಿಸಿದ್ದರು.
Bakrid festival ಸಮೂಹ ಪ್ರಾರ್ಥನೆ ಮುಗಿದ ನಂತರ ಪರಸ್ಪರ ಆಲಿಂಗನ ಮಾಡಿಕೊಂಡರು ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಮಂತ್ರಿ ಸಿ.ಎಂ.ಇಬ್ರಾಹಿಂ, ಶಾಸಕ ಬಿ.ಕೆ.ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ಮಾಜಿ ಉಪ ಮೇಯರ್ ಮಹಮ್ಮದ್ ಸನಾವುಲ್ಲಾ ಮುಂತಾದವರು ಕಳಿಸಿಕೊಟ್ಟಿದ್ದ ಶುಭ ಸಂದೇಶವನ್ನು ಅಬ್ದುಲ್ ಖಾದರ್ ಓದಿದರು.