Sunday, April 12, 2026
Sunday, April 12, 2026
Home Blog Page 689

International Yoga Day ಕೇಂದ್ರ ಕಾರಾಗೃಹದಲ್ಲಿ ಯೋಗಾಸನ ತರಬೇತಿ & ವ್ಯಕ್ತಿತ್ವ ವಿಕಸನ ಶಿಬಿರ

0

International Yoga Day ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಖೈದಿಗಳ ಮಾನಸಿಕ ಪರಿವರ್ತನೆಗಾಗಿ ವಿಶೇಷ ಯೋಗಾಸನ ತರಬೇತಿ ವ್ಯಕ್ತಿತ್ವ ವಿಕಸನ ಶಿಬಿರ ಯೋಗ ಗೀತಾಗಾಯನ ಕಾರ್ಯಕ್ರಮವನ್ನು ಜೂ: 17ರಿಂದ ಜೂ: 21ರವರೆಗೆ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಹೇಳಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಕೇಂದ್ರ ಕಾರಾಗೃಹ, ಶಿವಮೊಗ್ಗ, ಜೇಸಿಐ ಶಿವಮೊಗ್ಗ ಶಾಶ್ವತಿ ಘಟಕ, ಪತಂಜಲಿ ಯೋಗ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಜೂ: 17ರಂದು ಬೆಳಿಗ್ಗೆ 10:30 ಗಂಟೆಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ|| ಅನಿತಾ ಆರ್. ಉದ್ಘಾಟಿಸುವರು.

ಅಧ್ಯಕ್ಷತೆಯನ್ನು ಪತಂಜಲಿ ರಾಜ್ಯ ಸಮಿತಿ ಸದಸ್ಯ ಜೇಸಿಐ ಶಿವಮೊಗ್ಗ ಅಧ್ಯಕ್ಷ ಜೇಸಿ ನರಸಿಂಹಮೂರ್ತಿ ವಹಿಸುವರು ಎಂದರು.

ಪ್ರತಿ ವರ್ಷದಂತೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹೆಚ್ಚು ಅರ್ಥಬದ್ಧವಾಗಿ ಆಚರಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಕಾರಾಗೃಹದಲ್ಲಿ ಇರುವ ಖೈದಿಗಳ ಮಾನಸಿಕ ಪರಿವರ್ತನೆಗಾಗಿ ಯೋಗಾಸನ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ.ಳ
ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಕಾರಾಗೃಹ ಸುಧಾರಣಾ ಸಮಿತಿ ಹಾಗೂ ಬೆಂಗಳೂರಿನ ಕಾರಾಗೃಹಗಳ ಇಲಾಖೆಯ ಮುಖ್ಯಸ್ಥರು, ಕೇಂದ್ರ ಕಾರಾಗೃಹದ ಮುಖ್ಯಸ್ಥರು ತರಬೇತಿ ಶಿಬಿರ ಮಾಡಲು ಅನುಮತಿ ನೀಡಿದ್ದಾರೆ. ಜೂ: 17ರಿಂದ ಜೂ 21ರವರೆಗೆ ಪ್ರತಿ ದಿನ ಬೆಳಿಗ್ಗೆ 7:30ರಿಂದ 8:30ರವರೆಗೆ ಯೋಗಾಸನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ ಮಾತನಾಡಿ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಕಳೆದ 27 ವರ್ಷಗಳಿಂದ ನಿರಂತರವಾಗಿ ಯೋಗ, ಆರೋಗ್ಯ, ಜಾನಪದ ಕಲೆ, ಯುವಜನಮೇಳ, ಕೀರ್ತನೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ, ಸಮಾಜಸೇವೆಯನ್ನು ಸಲ್ಲಿಸುತ್ತಾ ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.

International Yoga Day ಜೇಸಿಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಜೇಸಿ ಸೆನೆಟರ್ ಶಾಸ್ತ್ರಿ ಕಲಾವಿದ ಮಾಧವಮೂರ್ತಿ, ಪತಂಜಲಿ ಸಂಸ್ಥೆ ಅಧ್ಯಕ್ಷೆ ಎ.ಹೆಚ್.ಶ್ಯಾಮಲಾ, ನಿರ್ದೇಶಕರಾದ ಸುಶೀಲಾ ಭವಾನಿಶಂಕರ್‌ರಾವ್, ಭವಾನಿಶಂಕರ್‌ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಿಸರ ಸಿ.ರಮೇಶ್, ಅನಿತಾ ಸಿರಿಲ್ ಉಪಸ್ಥಿತರಿದ್ದರು.

Karnataka Lokayukta Police ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಅಹವಾಲು ಅರ್ಜಿ ಸ್ವೀಕಾರ

0

Karnataka Lokayukta Police ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜೂನ್-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು.

ಜೂ- 19 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸೊರಬ ತಾಲೂಕು ಕಚೇರಿ ಸಭಾಂಗಣ, ಜೂ. 20 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿಕಾರಿಪುರ ತಾಲೂಕು ಕಚೇರಿ ಸಭಾಂಗಣ, ಜೂ-21 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸಾಗರ ತಾಲೂಕು ಪಂಚಾಯಿತಿ ಸಭಾಂಗಣ, ಜೂ. 24 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಹೊಸನಗರ ತಾಲೂಕು ಕಚೇರಿ ಸಭಾಂಗಣದಲ್ಲಿ, ಜೂ-25 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ, ಜೂ. 26 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣ.

ಜೂ-28 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿವಮೊಗ್ಗ ತಾಲೂಕು ಪಂಚಾಯಿತಿ ಸಭಾಂಗಣಗಳಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಲಿದೆ.

Karnataka Lokayukta Police ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ಧಾರಿತನ, ನಿರ್ಲಕ್ಷ್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Renukaswamy murder case ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದ ಆರೋಪಿ ಅನುಕುಮಾರ್ ತಂದೆಗೆ ಹೃದಯಾಘಾತ, ಸಾವು

0

Renukaswamy murder case ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ 7ನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಮಗನ ಬಂಧನದ ವಿಷಯ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಗನ ಬಂಧನದ ಸುದ್ದಿ ಕೇಳಿದ ಆಘಾತದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಗುರುವಾರ ಚಿತ್ರದುರ‍್ಗದ ಅನು ಅಲಿಯಾಸ್ ಅನುಕುಮಾರ್ ಗುರುವಾರ ಪೊಲೀಸರಿಗೆ ಶರಣಾಗಿದ್ದ. ಪ್ರೀತಿಯ ಮಗ ಅನುಕುಮಾರನನ್ನು ಪೋಲಿಸರು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋದ ವಿಷಯ ತಿಳಿಯುತ್ತಳೆ ತಂದೆ ಚಂದ್ರಪ್ಪ ವಿಚಲಿತರಾಗಿದ್ದರು.

ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ತಂದೆ ಚಂದ್ರಪ್ಪನ ಪ್ರಾಣಪಕ್ಷಿ ಹಾರಿ ಹೋಗಿದೆ ಹೃದಯಾಘಾತದಿಂದ ಸಾವಿನ ಮನೆಸೇರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಿತ್ರದರ‍್ಗದ ಸಿಹಿನೀರ ಹೊಂಡ ಏರಿಯಾದ ಅನುಕುಮಾರ್ 7ನೇ ಆರೋಪಿಯಾಗಿದ್ದ. ಮಗನ ಬಂಧನದ ಸುದ್ದಿ ಕೇಳುತ್ತಲೇ 60 ಚಂದ್ರಪ್ಪ ನವರಿಗೆ ಲೋ ಬಿಪಿ ಯಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು.ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ೭ನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಮಗನ ಬಂಧನದ ವಿಷಯ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದ ಸುದ್ದಿ ಕೇಳಿದ ಆಘಾತದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Renukaswamy murder case ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಗುರುವಾರ ಚಿತ್ರದುರ್ಗದ ಅನು ಅಲಿಯಾಸ್ ಅನುಕುಮಾರ್ ಗುರುವಾರ ಪೊಲೀಸರಿಗೆ ಶರಣಾಗಿದ್ದ. ಪ್ರೀತಿಯ ಮಗ ಅನುಕುಮಾರನನ್ನು ಪೋಲಿಸರು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋದ ವಿಷಯ ತಿಳಿಯುತ್ತಳೆ ತಂದೆ ಚಂದ್ರಪ್ಪ ವಿಚಲಿತರಾಗಿದ್ದಾರೆ. ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ತಂದೆ ಚಂದ್ರಪ್ಪನ ಪ್ರಾಣಪಕ್ಷಿ ಹಾರಿ ಹೋಗಿದೆ ಹೃದಯಾಘಾತದಿಂದ ಸಾವಿನ ಮನೆಸೇರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಿತ್ರದುರ್ಗದ ಸಿಹಿನೀರ ಹೊಂಡ ಏರಿಯಾದ ಅನುಕುಮಾರ್ ೭ನೇ ಆರೋಪಿಯಾಗಿದ್ದ. ಮಗನ ಬಂಧನದ ಸುದ್ದಿ ಕೇಳುತ್ತಲೇ ೬೦ ವರ್ಷದ ಚಂದ್ರಪ್ಪ ನವರಿಗೆ ಲೋ ಬಿಪಿ ಯಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು.

Bangalore Chamber of Industry and Commerce ವಿಕಲಚೇತರಿಗೆ ಜೂನ್ 22 ರಂದು ಬೆಂಗಳೂರಿನಲ್ಲಿ ವಿಶೇಷ ” ಉದ್ಯೋಗ ಮೇಳ”

0

Bangalore Chamber of Industry and Commerce ಶಿವಮೊಗ್ಗ, ಬೆಂಗಳೂರಿನ ದೈಹಿಕ ಅಂಗವಿಕಲರ ಸಂಸ್ಥೆಯು ವಿಕಲಚೇತನ ವ್ಯಕ್ತಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಚೇಂಬರ್ ಆಪ್ ಇಂಡಸ್ಟ್ರಿ ಆಂಡ್ ಕಾಮರ್ಸ್ (ಬಿಸಿಐಸಿ) ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಜೂನ್ 22 ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.00 ರವರೆಗೆ ಮಹಾರಾಣಿ ಅಮ್ಮಣ್ಣಿ ಲಕ್ಷ್ಮೀ ಕಾಲೇಜ್ ಆವರಣ ಮಲ್ಲೇಶ್ವರಂ, 18ನೇ ಅಡ್ಡ ರಸ್ತೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಈ ಉದ್ಯೋಗಮೇಳದಲ್ಲಿ ಜಿಲ್ಲೆಯ ಆಸಕ್ತ ವಿಕಲಚೇತನ ಆಭ್ಯರ್ಥಿಗಳು ಭಾಗವಹಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Bangalore Chamber of Industry and Commerce ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182 295234/ 251676 ಸಂಪರ್ಕಿಸಬಹುದು.

Department of Persons with Disabilities ವಿಕಲಚೇತರಿಗೆ ಅವಶ್ಯಕ ಸಾಧನ ಸಲಕರಣೆ ವಿತರಿಸಲು ಜಿಲ್ಲೆಯ ವಿವಿಧೆಡೆ ತಪಾಸಣಾ ಶಿಬಿರ

0

Department of Persons with Disabilities ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಆಲಿಂಕೋ ಸಂಸ್ಥೆಯ ವತಿಯಿಂದ ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಶಿಬಿರಗಳನ್ನು ನಿಗದಿತ ದಿನಾಂಕಗಳಂದು ಅಯೋಜಿಸಿದ್ದು, ಈ ಸಂಸ್ಥೆಯು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅವಶ್ಯಕ ಸಾಧನ ಸಲಕರಣೆಗಳನ್ನು ವಿತರಿಸಲು ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ.

ಜೂನ್ 21 ರಂದು ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ, ಜೂ. 22 ರಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆ, ಜೂ. 23 ಸಾಗರ ಸಾರ್ವಜನಿಕ ಆಸ್ಪತ್ರೆ, ಜೂ. 24 ಸೊರಬ ಸಾರ್ವಜನಿಕ ಆಸ್ಪತ್ರೆ, ಜೂ. 25 ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆ, ಜೂ. 26 ಹೊಸನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಜೂ. 27 ಮತ್ತು 28 ರಂದು ಶಿವಮೊಗ್ಗ ಜಿಲ್ಲಾ ಮೆಗ್ಗಾನ ಭೋದನಾ ಆಸ್ಪತ್ರೆಗಳಲ್ಲಿ ಶಿಬಿರಗಳು ನಡೆಯಲಿದೆ.

Department of Persons with Disabilities ಈ ಶಿಬಿರದಲ್ಲಿ ಭಾಗವಹಿಸಲು ವಿಕಲಚೇತನರು ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ), ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್ ಅಥವಾ ವಾರ್ಷಿಕ ಆಧಾಯ ರೂ. 2.70 ಲಕ್ಷ ಮೀರದಿರುವ ಆದಾಯ ಪ್ರಮಾಣ ಪತ್ರ. ಹಿರಿಯ ನಾಗರಿಕರು ಗುರುತಿನ ಚೀಟಿ ಅಥವಾ ವಯೋಮಿ ಸೂಚಿಸು ದಾಖಲಾತಿ, ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್ ಅಥವಾ ವಾರ್ಷಿಕ ಆಧಾಯ ರೂ. 2.70 ಲಕ್ಷ ಮೀರದಿರುವ ಆದಾಯ ಪ್ರಮಾಣ ಪತ್ರ ಗಳನ್ನು ಹಾಜರುಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ – ಹುಚ್ಚುರಾಯಪ್ಪ- 9741161346, ಭದ್ರಾವತಿ-ದಿನೇಶ್-7899137243, ಸಾಗರ ಶ್ಯಾಮ್‍ಸುಂದರ್-9535247757, ಸೊರಬ- ಭರತ್‍ಕುಮಾರ್-9110493122, ತೀರ್ಥಹಳ್ಳಿ -ದಿವಾಕರ್ ಬಿ.ಆರ್.-9480767638, ಹೊಸನಗರ-ರವಿಕುಮಾರ್- 9731922693, ಮೆಗ್ಗಾನ್ ಆಸ್ಪತ್ರೆ – ಮಲ್ಲಿಕಾರ್ಜುನ-9980150110 ಗಳನ್ನು ಸಂಪರ್ಕಿಸುವುದು.

Joint Director of Agriculture ರೈತರಿಗೆ ಬಿತ್ತನೆಗೆ ಸಮಸ್ಯೆಯಾಗದಂತೆ ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ- ಜಂಟಿ‌ ಕೃಷಿನಿರ್ದೇಶಕರು

0

Joint Director of Agriculture 2024 ರ ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ಮುಸುಕಿನ ಜೋಳ ಹಾಗೂ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಈ ಸಮಯದಲ್ಲಿ ರೈತರಿಗೆ ಸಮಸ್ಯೆ ಆಗದಂತೆ ರಸಗೂಬ್ಬರ ಸಾಕಷ್ಟು ಪ್ರಾಮಾಣದಲ್ಲಿ ದಾಸ್ತಾನುಗೊಳಿಸಲಾಗಿದೆ ಎಂದು ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರ ತಿಳಿಸಿದ್ದಾರೆ.

ಜಿಲ್ಲೆಯ ರೈತರು ಬೆಳೆಗಳಿಗೆ ಸಮಾನ್ಯವಾಗಿ ಸಾರಜನಕ ಹಾಗೂ ರಂಜಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಹೆಚ್ಚಾಗಿದೆ, ಈ ರಸಗೂಬ್ಬರದಲ್ಲಿ ಪೊಟ್ಯಾಷ್ ಅಂಶ ಇರುವುದಿಲ್ಲ. ಪೊಟ್ಯಾಷ್ ಪೋಷಕಾಂಶಗಳು ಬೆಳೆಗಳ ಇಳುವರಿಯು ಹೆಚ್ಚಾಗುವಂತೆ ಮಾಡುತ್ತವೆ. ಈ ಕಾರಣಕ್ಕೆ ರೈತರು ಬಿತ್ತನೆ ಸಮಯದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳನ್ನು ಹೊಂದಿರುವ ರಸಗೂಬ್ಬರಗಳಾದ 10:26:26, 15:15:15, 12:36:16, 14:35:14, 17:17:17, 14:28:14, 19:19:19, 20:10:10 ಬಳಸುವುದು ಸೂಕ್ತ, ರೈತರು ಬೆಳೆಗಳಿಗೆ ಸಾರಜನಕ ಹೆಚ್ಚು ಬಳಕೆ ಮಾಡುತ್ತಿದ್ದು. ಇದು ಬೆಳೆಗಳಿಗೆ ರೋಗ ಮತ್ತು ಕೀಟ ಭಾದೆಗಳು ಹಚ್ಚು ಆಗುವ ಸಾಧ್ಯತೆ ಇರುವ ಕಾರಣ ಹವಾಮಾನ ಆಧರಿಸಿ ಶಫಾರಸ್ಸು ಪ್ರಾಮಾಣದಲ್ಲಿ ಸಾರಜನಕ ರಸಗೊಬ್ಬರ ಬಳಸಲು ತಿಳಿಸಿದ್ದಾರೆ.
ಅಧಿಕೃತ ಮಾರಾಟಗಾರರಿಂದ ಬಿಲ್ ಪಡೆದು ಕೃಷಿ ಪರಿಕರಗಳನ್ನು ಖರೀದಿಸುವುದು ಹಾಗೂ ನಕಲಿ ಬಿತ್ತನೆ ಬೀಜ, ರಸಗೂಬ್ಬರ ಹಾಗೂ ಕೀಟನಾಶಕಗಳ ಮಾರಾಟ ಕಂಡುಬಂದಲ್ಲಿ ಕೂಡಲೇ ಇಲಾಖೆಗೆ ದೂರು ಸಲ್ಲಿಸುವಂತೆ ಶಿವಮೊಗ್ಗ ಜಂಟಿ ಕೃಷಿ ನಿದೇಶಕರು ತಿಳಿಸಿದ್ದಾರೆ.

Joint Director of Agriculture ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವುದು.

Srivijaya Kalaniketana ಶಿವಮೊಗ್ಗದಲ್ಲಿ ಮೂರು ದಿನಗಳ‌ ಉಚಿತ ಭರತನಾಟ್ಯ ಕಾರ್ಯಾಗಾರ

0

Srivijaya Kalaniketana ಶಾಸ್ತ್ರೀಯ ಸಾಂಸ್ಕೃತಿಕ ಸಂಪನ್ಮೂಲ ಫೌಂಡೇಶನ್ ವತಿಯಿಂದ ಶ್ರೀವಿಜಯ ಕಲಾನಿಕೇತನದ ಪವಿತ್ರಾಂಗಣದಲ್ಲಿ 3 ದಿನಗಳ ಉಚಿತ ಭರತನಾಟ್ಯ ಕಾರ್ಯಾಗಾರ ನಡೆಯಲಿದೆ.

ಗುರು ಡಾ.ಕೆ.ಎಸ್.ಪವಿತ್ರಾ ಅವರ ನಿರ್ದೇಶನದಲ್ಲಿ ಜೂನ್ 19 ರಿಂದ 21 ರ ವರೆಗೆ 3 ದಿನಗಳ ಕಾಲ ಸಂಜೆ 6 ರಿಂದ 8 ರ ವರಗೆ ಈ ಕಾರ್ಯಗಾರ ನಡೆಯಲಿದೆ, ಭರತನಾಟ್ಯ ಜ್ಯೂನಿಯರ್ ತೇರ್ಗಡೆ ಹೊಂದಿರುವ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.

Srivijaya Kalaniketana ಹೆಚ್ಚಿನ ಮಾಹಿತಿಗೆ ಡಾ.ಕೆ.ಎಸ್.ಪವಿತ್ರಾ 9845229499 ರಲ್ಲಿ ಸಂಪರ್ಕಿಸಬಹುದು.

District Congress Committee ಗ್ಯಾರಂಟಿಗಳಿಗಾಗಿ ಸಂಪನ್ಮೂಲ ಕ್ರೋಢಿಕರಿಸಲು ಪೆಟ್ರೋಲ್& ಡಿಸೆಲ್ ದರ ಏರಿಕೆ. ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದ- ಕಾಂಗ್ರೆಸ್ ವಕ್ತಾರ ಎಂ.ರಮೇಶ್

0

District Congress Committee ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿ ಪ್ರತಿಭಟನೆಗೆ ಇಳಿದಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ರಮೇಶ್ ಶೆಟ್ಟಿ ಇವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪೆಟ್ರೋಲ್/ಡೀಸೆಲ್ ಬೆಲೆ ಕ್ರಮವಾಗಿ ರೂ. 60 ಮತ್ತು ರೂ. 55 ಇತ್ತು. ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಪ್ರತಿ ದಿನ 25-30 ಪೈಸೆಯಂತೆ ಬೆಲೆ ಏರಿಕೆ ಮಾಡುವುದರ ಮೂಲಕ ಜನರ ಕಣ್ಣಿಗೆ ಮಣ್ಣೇರುಚಿ ಅಂತಿಮವಾಗಿ ಪೆಟ್ರೋಲ್ ಗೆ ರೂ.110 ಹಾಗೂ ಡೀಸೆಲ್ ಗೆ ರೂ.98ರವರೆಗೂ ಏರಿಸಿದ್ದ ಸಂದರ್ಭದಲ್ಲಿ ಕಣ್ಣು ಮುಚ್ಚಿ ಕುಳಿತ್ತಿದ್ದ ರಾಜ್ಯ ಬಿಜೆಪಿ ನಾಯಕರುಗಳು ಈಗ ಕೇವಲ ರೂ.3 ಏರಿಸಿದ್ದಕ್ಕೆ ಬೊಬ್ಬೆ ಹಾಕುತ್ತಿದ್ದಾರೆ.
ನಮ್ಮ ದೇಶದಲ್ಲಿ 2014ಕ್ಕಿಂತ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ಯಾರಲ್ ಒಂದಕ್ಕೆ 148 ಡಾಲರ್ ನ ದಾಖಲೆ ಬೆಲೆ ಆಗಿತ್ತು. ಆಗ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ ರೂ.60 ಮತ್ತು ರೂ.55 ಇತ್ತು. ಇಂದು ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲ 65 ಡಾಲರ್ ಕುಸಿದಿದ್ದರೂ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ರೂ.101 ಹಾಗೂ ರೂ.89 ಆಗಿದೆ. 2014ರಲ್ಲಿ ಡೀಸೆಲ್ ಗೆ ಅಡಿಷನಲ್ ಎಕ್ಸೈಸ್ ಡ್ಯೂಟಿ 3.46 ಇತ್ತು. ಈಗ ರೂ.31.84 ಪೈಸೆಗೆ ಏರಿಸಲಾಗಿದೆ ಹಾಗೂ ಡೀಸೆಲ್ ಮೇಲೆ ಎಕ್ಸೈಸ್ ಡ್ಯೂಟಿ ರೂ. 9.20 ಪೈಸೆ ಇದ್ದದ್ದನ್ನ ಈಗ ರೂ.32.98 ಪೈಸೆಗೆ ಏರಿಸಲಾಗಿದೆ. ಬಿಜೆಪಿಯವರಿಗೆ ಸಾಮಾನ್ಯ ಜನತೆಯ ಮೇಲೆ ನಿಜವಾದ ಕಾಳಜಿ ಇದ್ದರೆ ಮೊಸಳೆ ಕಣ್ಣೀರು ಸುರಿಸುವುದರ ಬದಲು ಪ್ರತಿಭಟನೆ ಕೈಬಿಟ್ಟು, ತಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿಸಿ ತೈಲ ಬೆಲೆ ಕಡಿತಕ್ಕೆ ಒತ್ತಾಯಿಸಿಲಿ ಎಂದು ರಮೇಶ್ ತಿಳಿಸಿದರು.
District Congress Committee ರಾಜ್ಯದ ಬಡಜನರಿಗೆ ಅನ್ನ,ಬೆಳಕು,ಮಹಿಳೆಯರಿಗೆ ಉಚಿತ ಪ್ರಯಾಣ, ತಿಂಗಳಿಗೆ ರೂ.2 ಸಾವಿರ ಹಾಗೂ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ರೂ.3000 ನೀಡುತ್ತಿರುವ ಹಿನ್ನಲೆಯಲ್ಲಿ ಸಂಪನ್ಮೂಲ ಸಂಗ್ರಹಣೆಗೆ ರೂ.3 ಏರಿಸಿದ್ದನ್ನು ಪ್ರತಿಭಟಿಸುತ್ತಿರುವುದು ಖಂಡನೀಯವೆಂದರು.

Actor Darshan ಸೋಷಿಯಲ್ ಮೀಡಿಯಕ್ಕೆ “ಗುಡ್ ಬೈ”ಹೇಳಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ

0

Actor Darshan ಮದುವೆಯಾದಾಗಿನಿಂದ ತನ್ನದಲ್ಲದ ತಪ್ಪಿಗೆ ನೋವುಣ್ಣುತ್ತಲೇ ಬಂದ ನಟನ ಪತ್ನಿ ದರ್ಶನ್ ವಿಜಯಲಕ್ಷ್ಮೀ ಮದುವೆಯಾದಾಗ ದರ್ಶನ್‌ಗೆ ದುಡಿಮೆ ಇರಲಿಲ್ಲ. ಆಗ ತಾನೇ ಗಂಡನನ್ನು, ಕುಟುಂಬವನ್ನು ಪೊರೆದವರು ವಿಜಯಲಕ್ಷ್ಮೀ. ಆದರೆ ಇದಕ್ಕೆ ಅವರಿಗೆ ಸಿಕ್ಕಿದ ಪ್ರತಿಫಲವಾದರೂ ಏನು ಗೊತ್ತಾ?

ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ ನಟ ದರ್ಶನ್‌ದೇ ಸುದ್ದಿ. ತನ್ನ ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳಿಸಿದ ಕಾರಣಕ್ಕೆ ಅಭಿಮಾನಿಯನ್ನೇ ಕೊಲೆ ಮಾಡಿದ ಆರೋಪಕ್ಕೆ ತುತ್ತಾದ ದರ್ಶನ್ ಇದೀಗ ಬಂಧನಕ್ಕೊಳಗಾಗಿದ್ದಾರೆ. ಇತ್ತ ಅವರ ಪತ್ನೀ ವಿಜಯಲಕ್ಷ್ಮೀ ಈ ಸೋಷಿಯಲ್ ಮೀಡಿಯಾ ಸಹವಾಸವೇ ಬೇಡ ಅಂತ ಸೋಷಿಯಲ್ ಮೀಡಿಯಾಕ್ಕೆ ಗುಡ್‌ ಬೈ ಹೇಳಿದ್ದಾರೆ. ಇನ್‌ಸ್ಟಾಗ್ರಾಂ ಅಲ್ಲಿ ತನ್ನ ಪ್ರೊಫೈಲ್ ಫೋಟೋವನ್ನ ಡಿಲೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಸೇರಿ ಇತರರನ್ನು ಅನ್‌ಫಾಲೋ ಮಾಡಿದ್ದು, ಈಗ ಝೀರೋ ಫಾಲೋವಿಂಗ್‌ ಹೊಂದಿದ್ದಾರೆ. ಉಳಿದಂತೆ ಹಳೆಯ ಇನ್‌ಸ್ಟಾಗ್ರಾಂ ಸ್ಟೋರಿಗಳು ಹಾಗೆಯೇ ಇವೆ. ಆದರೆ, ಇನ್‌ಸ್ಟಾಗ್ರಾಂ ಹೈಲೈಟ್‌ ವಿಭಾಗವನ್ನು ಡಿಲೀಟ್‌ ಮಾಡಿದ್ದಾರೆ. ಯಾಕೋ ಸೋಷಿಯಲ್ ಮೀಡಿಯಾದಿಂದ ಇಷ್ಟೆಲ್ಲ ರಾದ್ಧಾಂತ ಆಗಿರೋದು ನಟನ ಪತ್ನಿಗೆ ರೇಜಿಗೆ ತರಿಸಿದಂತಿದೆ.

ಹಾಗೆ ನೋಡಿದರೆ ವಿಜಯಲಕ್ಷ್ಮೀ ತನ್ನ ವೈವಾಹಿಕ ಜೀವನದಲ್ಲಿ ಬಲಿಪಶು ಎಂದೇ ಹೇಳಬಹುದು. ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರದು ಲವ್‌ ಮ್ಯಾರೇಜ್. ಆಪ್ತರು ಹೇಳುವ ಪ್ರಕಾರ ಇವರಿಬ್ಬರ ಮದುವೆ ಆಗೋ ಹೊತ್ತಿಗೆ ದರ್ಶನ್‌ ಕೆಲಸ, ಸಂಪಾದನೆಯಿಲ್ಲದೇ ಕೂತಿದ್ದರು. ವಿಜಯಲಕ್ಷ್ಮೀ ಕೆಲಸಕ್ಕೆ ಹೋಗಿ ಕಷ್ಟಪಟ್ಟು ದುಡಿದು ಗಂಡನನ್ನು, ಸಂಸಾರವನ್ನು ಸಾಕುತ್ತಿದ್ದರು. ಗಂಡ ಆತನ ಇಷ್ಟದ ನಟನಾ ವೃತ್ತಿಯಲ್ಲಿ ಬಹಳ ಎತ್ತರಕ್ಕೆ ಏರಬೇಕು ಎಂದು ಹಾರೈಸಿದ್ದರು. ಗಂಡನ ಆಸಕ್ತಿಗೆ ತನ್ನಿಂದಾದ ಸಹಕಾರ ನೀಡುತ್ತ ಬಂದಿದ್ದರು. ದರ್ಶನ್ ಲೈಫು (Darshan Life), ವೈವಾಹಿಕ ಬದುಕು (Married Life) ಒಂದು ಹಂತದವರೆಗೆ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಹಣ, ಕೀರ್ತಿ (Money and Fame) ಎಲ್ಲ ಎತ್ತರೆತ್ತರಕ್ಕೆ ಕೊಂಡೊಯ್ಯಿತೋ ಆಗ ಬೇರೆ ಅಭ್ಯಾಸಗಳೂ ಸೇರಿಸಿಕೊಂಡವು. ಒಂದು ಹಂತದಲ್ಲಿ ಪವಿತ್ರಾ ಗೌಡ ಎಂಬ ಹೆಣ್ಣುಮಗಳು ಇವರ ಬದುಕಿನಲ್ಲಿ ಬಂದಳು. ಆಕೆಗೂ ಮದುವೆಯಾಗಿತ್ತು. ದರ್ಶನ್‌ಗೂ ಮದುವೆಯಾಗಿತ್ತು. ಆದರೂ ನಡುವೆ ಸಂಬಂಧ ಏರ್ಪಟ್ಟಿತು.
ದರ್ಶನ್​ ಬಂಧನ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!

Actor Darshan ಅಲ್ಲಿಯವರೆಗೆ ಹೆಂಡತಿ ಪಟ್ಟ ಕಷ್ಟ, ಆಕೆ ತನ್ನ ಬೆಳವಣಿಗೆಗೆ ನೀಡಿದ ಸಹಕಾರ ಎಲ್ಲವನ್ನೂ ಕಡೆಗಣಿಸಿ ದರ್ಶನ್ ಪವಿತ್ರಾ ಗೌಡ ಸ್ನೇಹ ಮಾಡಿದರು. ಇದನ್ನು ಪ್ರಶ್ನಿಸಿದ್ದೇ ನೆವವಾಗಿ ಅಷ್ಟೆಲ್ಲ ಒತ್ತಾಸೆಯಾಗಿ ನಿಂತ ಪತ್ನಿಯ ಮೇಲೇ ಮಾರಣಾಂತಿಕವಾಗಿ ಹಲ್ಲೆ ಮಾಡಲೂ ಹೇಸಲಿಲ್ಲ ದರ್ಶನ್. ವಿಜಯಲಕ್ಷ್ಮೀ ಆಸ್ಪತ್ರೆ ಸೇರುವಂತಾಯ್ತು. ಇಲ್ಲೂ ಏನೇನೋ ಬೆಳವಣಿಗೆಗಳು ನಡೆದು ಡಿವೋರ್ಸ್ ನಿಂದ ಹಿಂತೆಗೆಯುವಂತಾಯ್ತು. ಹೀಗೇ ಒಂದಿಷ್ಟು ಕಾಲ ನಡೆದು ಆ ಬಳಿಕ ದರ್ಶನ್ ಪತ್ನಿ ಜೊತೆ ಕೊಂಚ ಉತ್ತಮ ಬಾಂಧವ್ಯಕ್ಕೆ ಮುಂದಾದರು ಎನ್ನಲಾದರೂ ಹೆಂಡತಿ ಮೇಲೆ ಹಲ್ಲೆ, ಕೆಟ್ಟ ಬೈಗುಳ ನಡೆದೇ ಇತ್ತು.

ಇದೀಗ ತನ್ನ ಅಭಿಮಾನಿಯದ್ದೇ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಕಾನೂನು ತಜ್ಞರು ಹೇಳುವ ಪ್ರಕಾರ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಇಲ್ಲೂ ಏನೂ ತಪ್ಪು ಮಾಡದ ವಿಜಯಲಕ್ಷ್ಮೀ ವಿನಾಕಾರಣ ಬಲಿಪಶುವಾದಂತಾಗಿದೆ. ಮೃತಪಟ್ಟ ರೇಣುಕಾಸ್ವಾಮಿಗೆ ತಾನು ಅಭಿಮಾನಿಸುವ ದರ್ಶನ್ ಫ್ಯಾಮಿಲಿ ಚೆನ್ನಾಗಿರಬೇಕು, ತನ್ನ ನೆಚ್ಚಿನ ನಟ ಆತನ ಪತ್ನಿಯ ಜೊತೆಗೆ ಚೆನ್ನಾಗಿ ಬದುಕಬೇಕು ಎಂಬ ತೀವ್ರ ಆಸೆ ಇತ್ತು, ಅದಕ್ಕಾಗಿ ಈತ ತನ್ನ ನೆಚ್ಚಿನ ನಟನ ಬದುಕನ್ನು ಹಾಳು ಮಾಡಿದಳು ಎಂದು ಪವಿತ್ರಾ ಗೌಡನಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎನ್ನಲಾಗಿದೆ.

ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್‌ ಸಿಟ್ಟಿಗೇಳಲು ಇದೇ ಕಾರಣವಂತೆ!
ಆದರೆ ಚಿತ್ರದುರ್ಗದ ಯಾವುದೋ ಮೂಲೆಯಲ್ಲಿ ಕೂತು ತಾನು ಮಾಡುವ ಮೆಸೇಜ್ ತನ್ನ ಬದುಕನ್ನೇ ಕೊನೆಗೊಳಿಸುತ್ತದೆ ಎಂಬ ಸಣ್ಣ ಕಲ್ಪನೆಯೂ ಆತನಿಗೆ ಇರಲಿಲ್ಲ ಎನ್ನಲಾಗಿದೆ. ಆದರೆ ಆತನ ಈ ದುಷ್ಕೃತ್ಯವೇ ನೆಪವಾಗಿ ಆತನ ಕೊಲೆಯಾಗಿದೆ. ಇತ್ತ ಕೊಲೆ ಮಾಡಿದವರು ಜೈಲುಪಾಲಾಗಿದ್ದಾರೆ. ತನ್ನ ಲೈಫು ಇಂದಲ್ಲ ನಾಳೆ ಚೆನ್ನಾಗಾಗಬಹುದು ಎಂಬ ಆಸೆಯಲ್ಲಿ ದಿನ ದೂಡುತ್ತಿದ್ದ ವಿಜಯಲಕ್ಷ್ಮೀ ಅಂಥವರಿಗೆ ಮತ್ತೆ ನೋವು ಮುಂದುವರಿಕೆಯಾಗಿದೆ.

Zilla Panchayat ಅಧಿಕಾರಿಗಳು ಕ್ಷೇತ್ರಗಳಲ್ಲಿ ಹಾಜರಿದ್ದು ಜನಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು- ಬಿ.ಬಿ.ಕಾವೇರಿ

0

Zilla Panchayat ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿಗಳಾದ ಬಿ.ಬಿ.ಕಾವೇರಿ ತಿಳಿಸಿದರು.
ಜೂನ್ 14 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ಕ್ಷೇತ್ರದಲ್ಲಿ ಜನರಿಗೆ ಲಭ್ಯವಿದ್ದು ಅವರಿಗೆ ಸ್ಪಂದಿಸಬೇಕು. ಜನರನ್ನು ಅಲೆದಾಡಿಸದೇ ಅವರ ಕೆಲಸಗಳನ್ನು ಮಾಡಿಕೊಡಬೇಕು. ಎಸ್‍ಸಿಪಿ/ಟಿಎಸ್‍ಪಿ ಕಾರ್ಯಕ್ರಮಗಳನ್ನು ಸುಗಮವಾಗಿ ನಿರ್ವಹಿಸಿ ಗುರಿ ಸಾಧಿಸಬೇಕು. ಹಾಗೂ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿ/ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1 ರಿಂದ ಮೇ 31 ರವರೆಗೆ ವಾಡಿಕೆ 129 ಮಿ.ಮೀ ಗೆ 201 ಮಿ.ಮೀ ವಾಸ್ತವ ಮಳೆಯಾಗಿದೆ. 2024 ರ ಮುಂಗಾರು ಹಂಗಾಮಿನಲ್ಲಿ ಒಟ್ಟು 123580 ಹೆ. ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಿದ್ದು 4500 ಹೆ. ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕಾರ್ಯ ನಡೆದಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 21198 ಮೆ.ಟನ್ ರಸಗೊಬ್ಬರ ವಿತರಣೆಯಾಗಿದ್ದು, 54084 ಮೆ.ಟನ್ ದಾಸ್ತಾನು ಇದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ.
ಉಸ್ತುವಾರಿ ಕಾರ್ಯಕದರ್ಶಿಗಳು, ಅಧಿಕಾರಿಗಳು ಕ್ಷೇತ್ರದಲ್ಲಿ ಲಭ್ಯವಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೆಳೆ ವಿಮೆ ಕುರಿತಂತೆ ವಿಮೆ ಕಂಪೆನಿಯೊಂದಿಗೆ ಸಭೆ ನಡೆಸಿ, ಸಕಾಲದಲ್ಲಿ ರೈತರಿಗೆ ವಿಮೆ ಲಭಿಸುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್, ಜಿಲ್ಲೆಯ ಮುಖ್ಯ ಬೆಳೆಯಾದ ಅಡಿಕೆಗೆ ಕಳೆದ 2 ವರ್ಷದಲ್ಲಿ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಬಂದು ಹಾನಿಗೊಳಗಾಗಿತ್ತು. ತೀರ್ಥಹಳ್ಳಿ, ಹೊಸನಗರ, ಸಾಗರದ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈ ರೋಗ ಹೆಚ್ಚು ಕಂಡುಬರುತ್ತದೆ. ಕಳೆದ ವರ್ಷ ಉಚಿತವಾಗಿ ಔಷಧಿಯನ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಮುಂಜಾಗೃತಾ ಕ್ರಮವಾಗಿ ರೋಗ ನಿರ್ವಹಣೆ ಬಗ್ಗೆ, ಔಷಧಿ ಸಿಂಪಡಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಹಾಗೂ ಕೃಷಿ ವಿಶ್ವವಿದ್ಯಾಲಯ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಇಲಾಖೆಯಿಂದ ರೂ.43 ಲಕ್ಷ ಬಿಡುಗಡೆಯಾಗಿದ್ದು ರೈತರ ತಾಕಿನಲ್ಲಿ ಪ್ರಾತ್ಯಕ್ಷಿಕೆ, ತರಬೇತಿಯಂತರ ಕಾರ್ಯಕ್ರಮ ವಿಶ್ವವಿದ್ಯಾಲಯದಿಂದ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 10 ಹೆ.ಬಾಳೆ ಹಾನಿಯಾಗಿದ್ದು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Zilla Panchayat ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಜಾನುವಾರುಗಳ ಕೃತಕ ಗರ್ಭಧಾರಣೆ ಹಾಗೂ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ನೀಡುವಲ್ಲಿ ಶೇ.90 ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ಕಾರಣಗಳಿಗಾಗಿ ಇದುವರೆಗೆ 247 ಜಾನುವಾರು(ದನ, ಕರು, ಎಮ್ಮೆ) ಮರಣ ಹೊಂದಿದ್ದು ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಶಿಕ್ಷಣಾಧಿಕಾರಿ ಲೋಕೇಶಪ್ಪ ಮಾತನಾಡಿ, ಶೇ.99.3 ಸಮವಸ್ತ್ರ ವಿತರಣೆಯಾಗಿದೆ. ಶೇ.78 ಉಚಿತ ಪುಸ್ತಕ ವಿತರಣೆ ಆಗಿದೆ. ತಾಲ್ಲೂಕುಗಳ ಬಿಇಓ ಗಳಿಂದ ಶಾಲೆಗಳ ದುರಸ್ತಿ ಮತ್ತು ಮಳೆಗಾಲದಲ್ಲಿ ಹಾನಿಗೊಳಗಾಗಬಹುದಾದ ಶಾಲೆಗಳ ಪಟ್ಟಿಯನ್ನು ಪಡೆದು ಕ್ರಿಯಾ ಯೋಜನೆ ಸಿದ್ದಪಡಿಸಿ ಇಲಾಖೆಗೆ ಕಳುಹಿಸಿ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲೆಯಲ್ಲಿ ಶಾಲಾ ದಾಖಲಾತಿ ಪ್ರಮಾಣ ಹೆಚ್ಚಬೇಕು. ಆ ನಿಟ್ಟಿನಲ್ಲಿ ಬಿಇಓ ಮತ್ತು ಇತರೆ ಅಧಿಕಾರಿಗಳು, ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಆಸಕ್ತಿ ವಹಿಸಿ ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಕ್ರಮಗಳನ್ನು ಕೈಗೊಳ್ಳಬೇಕು, ಶಿಕ್ಷಕರ ಹಾಜರಾತಿ ಬಗ್ಗೆಯೂ ನಿಗಾ ವಹಿಸಬೇಕು ಎಂದರು.
ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ಮಲೆನಾಡು ಭಾಗಗಳಲ್ಲಿ ಮಕ್ಕಳು ಶಾಲೆಗೆ ಬರುವುದು ಮತ್ತು ಮನೆಗೆ ತೆರಳುವುದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಡಿಹೆಚ್‍ಓ ಡಾ.ನಟರಾಜ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 10220 ಕೆಎಫ್‍ಡಿ ಪರೀಕ್ಷೆ ನಡೆಸಿದ್ದು, 63 ಪಾಸಿಟಿವ್ ಪ್ರಕರಣಗಳಿವೆ. ಹೊಸನಗರದಲ್ಲಿ 01 ಸಾವು ಸಂಭವಿಸಿದೆ. ಪ್ರಸ್ತುತ ಸಾಗರ ತಾಲ್ಲೂಕಿನ ತಾಳಗುಪ್ಪದ ಹಿರೇಮನೆ ಕೆಎಫ್‍ಡಿ ಹಾಟ್‍ಸ್ಪಾಟ್ ಆಗಿದ್ದು, ಕೆಎಫ್‍ಡಿ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನ ಇಲ್ಲಿಯವರೆಗೆ 221 ಡೆಂಗ್ಯು ಪ್ರಕರಣ ವರದಿಯಾಗಿದೆ. ಡೆಂಗ್ಯು ನಿಯಂತ್ರಣಕ್ಕೆ ಪ್ರತಿ ಮನೆ ಮನೆಗೆ ತೆರಳಿ ಲಾರ್ವಾ ಪರೀಕ್ಷೆ, ನಿಯಂತ್ರಣ ಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಸ್ಥಳೀಯ ಸಂಸ್ಥೆಗಳು ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯವರು ಪರೀಕ್ಷಿಸಬೇಕು. ಕುಡಿಯುವ ನೀರಿನ ಬಗ್ಗೆ ಯಾವುದೇ ರಾಜೀ ಮಾಡಿಕೊಳ್ಳದೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಬಿಸಿಎಂ, ಅಲ್ಪಸಂಖ್ಯಾತ ಹಾಗೂ ಪ,ಜಾ ಮತ್ತು ಪ,ವ ವರ್ಗಗಳ ಹಾಸ್ಟೆಲ್‍ಗಳಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು, ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಈ ಬಾರಿ ಎಸ್‍ಎಸ್‍ಎಲ್‍ಸಿ ಶೇ 97.23 ರಷ್ಟು ಫಲಿತಾಂಶ ಹಾಗೂ ಪಿಯುಸಿ ಶೇ 92 ರಷ್ಟು ಫಲಿತಾಂಶ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಶೇ. 94 ರಷ್ಟು ಹಾಗೂ ಪಿಯುಸಿಯಲ್ಲಿ ಶೇ 96 ರಷ್ಟು, ಪ,ವ ಮತ್ತು ಅಲ್ಪಸಂಖ್ಯಾತ ಹಾಸ್ಟೆಲ್‍ಗಳಲ್ಲಿ ಎಸ್ ಎಸ್ ಎಲ್ ಸಿ ಶೇ.98 ಮತ್ತು ಶೇ. 97 ಬಂದಿದೆ. ಎಲ್ಲಾ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ 8ನೇ ತರಗತಿಯಿಂದಲೇ ಉತ್ತಮ ಶಿಕ್ಷಣ ನೀಡಿ ಮತ್ತು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ 2.68 ಲಕ್ಷ ನೀರಿನ ಸಂಪರ್ಕ ನೀಡಲಾಗಿದ್ದು, ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ನಡೆಸುತ್ತಿದ್ದು ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಎಲ್ಲೆಡೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಗ್ರಾ.ಕು.ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ಗ್ರಾಮೀಣ ವಸತಿ ಯೋಜನೆಯ ಬಸವ ವಸತಿ ಶೇ. 81 ರಷ್ಟು, ಅಂಬೇಡ್ಕರ್ ವಸತಿ ಶೇ. 72 ರಷ್ಟು, ದೇವರಾಜ್ ಅರಸ್ ವಸತಿ ಶೇ. 51 ರಷ್ಟು ಹಾಗೂ ಪ್ರಧಾನ ಮಂತ್ರಿ ವಸತಿ ಶೇ. 54 ರಷ್ಟು ಪ್ರಗತಿ ಸಾಧಿಸಲಾಗಿದೆ. ಹಾಗೂ ನಗರ ವಸತಿ ಯೋಜನೆಯಲ್ಲಿ ಅಂಬೇಡ್ಕರ್ ಮತ್ತು ವಾಜಪೇಯಿ ಯೋಜನೆಯಡಿ ಶೇ. 92 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಡಿಯುಡಿಸಿ ಯೋಜನಾ ನಿರ್ದೇಶಕರು ತಿಳಿಸಿದರು.
ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಮಾತನಾಡಿ, ಗೋವಿಂದಾ ಪುರದಲ್ಲಿ 3000 ಮನೆಗಳ ನಿರ್ಮಾಣ ಯೋಜನೆಯಡಿ 620 ಮನೆಗಳು ಪೂರ್ಣಗೊಂಡು ಫಲಾನುಭವಿಗಳು ವಾಸಿಸುತ್ತಿದ್ದಾರೆ. 700 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು ಹಂಚಿಕೆ ಆಗಬೇಕಿದೆ. ಆದರೆ ಇಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಕೆಲವು ತೊಡಕುಗಳಿದ್ದು ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಗೋಪಿಶೆಟ್ಟಿಕೊಪ್ಪ ಆಶ್ರಯ ಯೋಜನೆಯು ವ್ಯಾಜ್ಯವೊಂದರ ಕಾರಣದಿಂದ ತೆಡೆಯಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಮಾತನಾಡಿ ಜನವರಿ ಯಿಂದ ಮೇ ವರೆಗೆ ವಾಡಿಕೆಗಿಂತ ಶೇ. 27 ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ತುಂಗಾ ಅಣೆಕಟ್ಟು ತುಂಬಲು 1 ಅಡಿ ಬಾಕಿ ಇದೆ. ಭದ್ರಾ ಜಲಾಶಯದಲ್ಲಿ 1395 ಕ್ಯೂ.ಒಳ ಹರಿವು ಇದೆ.
ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 4 ಜನರು ಮೃತಪಟ್ಟಿದ್ದು ಪರಿಹಾರ ತಲಾ ರೂ.5 ಲಕ್ಷ ಒದಗಿಸಲಾಗಿದೆ ಹಾಗೂ 14 ಪ್ರಾಣಿಗಳ ಮರಣವಾಗಿದ್ದು ಪರಿಹಾರ ಕ್ರಮ ವಹಿಸಲಾಗಿದೆ. ಮಳೆಯಿಂದ ಸುಮಾರು 24 ಮನೆಗಳಿಗೆ ಹಾನಿಯಾಗಿದ್ದು, ಸೂಕ್ತ ದಾಖಲೆಯನ್ನು ನೀಡಿದವರಿಗೆ ಪರಿಹಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಉಪವಿಭಾಗಾಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಿಗೆ, ಅಧಿಕಾರಿಕರಿಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಉಸ್ತುವಾರಿ ಕಾರ್ಯದರ್ಶಿಗಳು ಅಂಗನವಾಡಿಗಳು, ಶಾಲೆಗಳು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಸಿಬ್ಬಂದಿಗಳು ಹಾಜರಿದ್ದರು.