Friday, June 13, 2025
Friday, June 13, 2025

Klive Special Article ಮನಸೆಳೆದ “ಏಕಲವ್ಯ” ರಂಗ ಪ್ರಯೋಗ ಲೇ: ಮಂಜುನಾಥ ಸ್ವಾಮಿ.ಎಸ್.ರಂಗಕರ್ಮಿ.ಶಿವಮೊಗ್ಗ.

Date:

Klive Special Article ಇದು ಒಂದು ದಾಖಲಾಗದ ಕಥೆ ಎಂದು ಪ್ರಾರಂಭವಾಗುವ ನಾಟಕ ಹಲವು ಹೊಸ ವಿಷಯಗಳನ್ನು ಪ್ರೇಕ್ಷಕರ ಮನಪಟಲಕ್ಕೆ ದಾಖಲಿಸಿದ್ದಂತು ನಿಜ.

ನಮಗೆಲ್ಲ ತಿಳಿದಂತೆ ಏಕಲವ್ಯ ಒಬ್ಬ ಬೇಡರ ಹುಡುಗ, ಕಾಡು ಮೇಡು ಅಲೆದು ಜೀವನ ಸಾಗಿಸುವ ಒಂದು ಸಮುದಾಯದವನು, ಇಂತಹ ಏಕಲವ್ಯನಿಗೆ ದೊಡ್ಡ ಬಿಲ್ಲುಗಾರನಾಗಬೇಕು ಎಂಬ ಆಸೆ ಬಂದು ಗುರು ದ್ರೋಣಾಚಾರ್ಯ ಬಳಿ ಬಿಲ್ ವಿದ್ಯೆ ಕಲಿಸಲು ಕೇಳಿಕೊಳ್ಳುತ್ತಾನೆ. ಆದರೆ ಗುರು ದ್ರೋಣಾಚಾರ್ಯರು ನಾನು ಕೇವಲ ಕ್ಷತ್ರಿಯರಿಗೆ ಮಾತ್ರ ವಿದ್ಯೆಯನ್ನು ಕಲಿಸುವವನು ಎಂದು ಅವನನ್ನು ತಿರಸ್ಕರಿಸುತ್ತಾನೆ .ಇದನ್ನು ಮನಗಂಡ ಏಕಲವ್ಯ ದ್ರೋಣಾಚಾರ್ಯರ ವಿಗ್ರಹ ಮಾಡಿ ಸ್ವತಃ ತಾನೇ ವಿದ್ಯೆ ಕಲಿಯುತ್ತಾನೆ. ಇದನ್ನು ಅರಿತ ದ್ರೋಣಾಚಾರ್ಯ ಏಕಲವ್ಯನಿಗೆ ಗುರುದಕ್ಷಿಣೆಯಾಗಿ ಅವನ ಬಲಗೈ ಹೆಬ್ಬೆರಳನ್ನು ಕೇಳಿ ಪಡೆಯುತ್ತಾರೆ.ಇದು ಸಹಜವಾಗಿ ನಮಗೆ ಗೊತ್ತಿರುವ ಕಥೆ.ಇದಕ್ಕೆ ಒಂದಿಷ್ಟು ವಿಷಯಗಳನ್ನು ಸೇರಿಸಿ ಮೂಲ ಕಥೆಗೆ ಚ್ಯುತಿ ಬಾರದಂತೆ ನಿರ್ದೇಶಕ ಚಂದನ್ ಬಹಳ ಸೂಕ್ಷ್ಮವಾಗಿ ಮತ್ತು ಅರ್ಥಪೂರ್ಣವಾಗಿ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಏಕಲವ್ಯನ ಕಥೆ ಎಂದರೆ ಒಂದು ಸಮುದಾಯದ ತೆಗಳಿಕೆ ಎಂದು ಭಾವಿಸಿ ನಿರ್ದೇಶಿಸುವವರ ಮಧ್ಯೆ ಎಲ್ಲಿಯೂ ಕಥೆಗೆ ಮತ್ತು ಸಮುದಾಯಗಳಿಗೆ ಅಪಚಾರವಾಗದಂತೆ ನಾಟಕವನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಜೆ.ಎನ್.ಎನ್.ಸಿ ವಿದ್ಯಾರ್ಥಿಗಳಿಗಾಗಿ ರಚನೆ ಅದ ನಾಟಕ ಹಲವು ಪ್ರಶಸ್ತಿಗಳನ್ನು ಪಡೆದಿದೆ.ವಿದ್ಯಾರ್ಥಿಗಳ ಅಭಿನಯವಂತು ನಿಜಕ್ಕೂ ಅದ್ಬುತವಾಗಿತ್ತು, ದ್ರೋಣಾಚಾರ್ಯ, ಏಕಲವ್ಯ, ಅವನ ತಂದೆಯ ಪಾತ್ರಧಾರಿಗಳು ಮನೋಜ್ಞವಾಗಿ ಅಭಿನಯಿಸಿದ್ದರು. ಓದಿನ ಒತ್ತಡದಲ್ಲಿಯು ರಂಗಭೂಮಿ ಬಗ್ಗೆ ಆಸಕ್ತಿ ಬೆಳಸಿಕೊಂಡು ನಾಟಕದಲ್ಲಿ ಅಭಿನಯಿಸುತ್ತಿರು ವಿದ್ಯಾರ್ಥಿಗಳ ಶ್ರಮ ಇಡಿ ನಾಟಕದ ತುಂಬಾ ಎದ್ದುಕಾಣುತ್ತದೆ.ಶೈಲೇಶ್ ಅವರ ಯಕ್ಷ ನಡೆ ನಾಟಕಕ್ಕೆ ಹೊಸ ರೂಪವನ್ನು ಕೊಟ್ಟಿದೆ. ಅಚ್ಚುಕಟ್ಟಾದ ರಂಗ ಸಜ್ಜಿಕೆ, ನಾಟಕಕ್ಕೆ ಒಪ್ಪುವ ವಸ್ತ್ರವಿನ್ಯಾಸ,ಪ್ರಸಾಧನ ನೋಡಗರ ಮನಸ್ಸಿಗೆ ಮುದ ನೀಡಿತು.

Klive Special Article ನಾಟಕದ ಪ್ಲಸ್ ಪಾಂಯಿಟ್ ಅಂದರೆ ಸಂಗೀತ. ನಾಟಕದ್ದುದ್ದಕ್ಕೂ ರಂಗಾಸಕ್ತರನ್ನು ಹಿಡಿದಿಟ್ಟ ಕೊಳ್ಳುವಲ್ಲಿ ಯಶಸ್ವಿಯಾಯಿತು. ಭರವಸೆಯ ಸಂಗೀತ ನಿರ್ದೇಶಕರಾದ ಶ್ರೀ ಪಾದ ತೀರ್ಥಹಳ್ಳಿ ಮತ್ತು ಶಿವಕುಮಾರ್ ತೀರ್ಥಹಳ್ಳಿ ಸಂಪೂರ್ಣ ನಾಟಕವನ್ನು ತಮ್ಮ ಸಂಗೀತದಿಂದ ಹಿಡಿದಿಟ್ಟಿದ್ದರು. ಇವರ ರಂಗ ಸಂಗೀತಕ್ಕೆ ಶಿವಮೊಗ್ಗದಲ್ಲಿ ಹೊಸದೊಂದು ಪ್ರೇಕ್ಷಕವರ್ಗ( FAN Base) ಸೃಷ್ಟಿ ಆಗಿದೆ ಅಂದರೆ ನಂಬಲೆಬೇಕು. ಒಂದು ಗಂಟೆಯಕಾಲ ರಂಗಾಸಕ್ತರುನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಸಾಮಥ್ರ್ಯ ನಾಟಕಕ್ಕೆ ಇದದ್ದು ನಾಟಕದ ಯಶಸ್ಸು ಎಂದು ಭಾವಿಸ ಬಹುದು.ರಂಗಕಾಶಿ ಎನಿಸಿಕೊಂಡ ಶಿವಮೊಗ್ಗದಲ್ಲಿ ಪ್ರತಿಭಾವಂತ ಯುವ ರಂಗ ನಿರ್ದೇಶಕರು ಹೊಸ ಹೊಸ ಪ್ರಯೋಗಗಳ ಮೂಲಕ ಶಿವಮೊಗ್ಗ ರಂಗಭೂಮಿಯನ್ನು ಶ್ರೀಮಂತ ಗೊಳಿಸುತ್ತಿದ್ದಾರೆ.ನಾನು ಗಮನಿಸಿದ್ದು ಪ್ರಸ್ತುತ ಶಿವಮೊಗ್ಗ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಎದ್ದುಕಾಣುತ್ತಿದೆ. ಉತ್ತಮ ನಾಟಕಗಳಿಗೂ ಪ್ರೇಕ್ಷಕರು ಸ್ಪಂದಿಸುತ್ತಿಲ್ಲ ಎಂಬುದನ್ನು ಮನಗಂಡು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚು ನಾಟಕಗಳು ರಂಗಾಸಕ್ತರನ್ನು ತಲುಪಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಎಲ್ಲಾ ರಂಗತಂಡಗಳು ಶ್ರಮಿಸಬೇಕಾಗಿದೆ.

ಬರಹ : ಮಂಜುನಾಥ ಸ್ವಾಮಿ.ಎಸ್, ರಂಗಕರ್ಮಿ, ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...