Friday, April 10, 2026
Friday, April 10, 2026
Home Blog Page 663

Forest Department ನಿಸರ್ಗ ಅಸಮತೋಲನ ,‌ವನ್ಯಜೀವಿಗಳು ನಾಡಿಗೆ ದಾಳಿ.ಈಗ ಮಾರ್ಗೋಪಾಯ ಬೇಕು- ಪಿ.ಅರವಿಂದ್

0

Forest Department ದಿನನಿತ್ಯ ಅರಣ್ಯಗಳು ಮಾನವನ ದುರಾಸೆಯಿಂದ, ಅತಿಕ್ರಮಣದಿಂದ ನಾಶವಾಗುತ್ತಿದೆ. ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಡೆಮೆಯಾಗಿ ಬರಡು ಭೂಮಿಯಾಗುತ್ತಿದೆ. ಎಲ್ಲಾ ಕಡೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದರ ಮುಖಾಂತರ ನೀರು ಇಂಗುವುದು ಕಡಿಮೆಯಾಗಿ ನೀರಿನ ಲಭ್ಯತೆ ಕ್ರಮೇಣ ಜನರಿಗೆ ದೂರವಾಗುತ್ತಿದೆ. ಕೆರೆಗಳು ಮಾಯವಾಗಿ ರಿಯಲ್ ಎಸ್ಟೇಟ್ ಗಳಾಗಿ ಪರಿವರ್ತನೆಗೊಳ್ಳುವುದರ ಮುಖಾಂತರ ಪ್ರಾಣಿ, ಪಶು-ಪಕ್ಷಿಗಳಿಗೆ ನೀರಿನ ಸಮಸ್ಯೆಯುಂಟಾಗಿ ಅರಣ್ಯದಲ್ಲಿ ಸಮತೋಲನ ತಪ್ಪಿ ವನ್ಯ ಮೃಗಗಳು ನಾಡಿಗೆ ಬಂದು ರೈತ ಮತ್ತು ವನ್ಯ ಮೃಗಗಳ ನಡುವೆ ಸಂಘರ್ಷ ಏರ್ಪಟ್ಟಿದೆ.

ನಾವು ಈಗಿನಿಂದಲೇ ಇದರ ಬಗ್ಗೆ ಮಾರ್ಗೋಪಾಯಗಳನ್ನು ಹುಡುಕದಿದ್ದರೆ ರಾಜ್ಯದಲ್ಲಿ ನೀರು ಮತ್ತು ವಾತಾವರಣ ಕಲುಷಿತಗೊಂಡು ಕೋವಿಡ್, ಡೆಂಗ್ಯೂ, ಮಲೇರಿಯಾದಂತಹ ಮರಣಾಂತಿಕ ಖಾಯಿಲೆಗೆ ತುತ್ತಾಗುತ್ತೇವೆ. ಕೋವಿಡ್ ಪೀಡಿತರಿಗೆ ಸಮಯದಲ್ಲಿ ಆಮ್ಲಜನಕ ಒದಗಿಸುವಲ್ಲಿ ವಿಫಲರಾಗಿ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಇಂತಹ ನೈಸರ್ಗಿಕವಾಗಿ ಆಮ್ಲಜನಕವನ್ನು ತಯಾರಿಸುವ ಮರ-ಗಿಡಗಳ ರಕ್ಷಣೆ ಈ ದಿನಗಳಲ್ಲಿ ಅತ್ಯವಶ್ಯಕತೆಯಿದೆ ಮತ್ತು ನಾವೆಲ್ಲರೂ ಕೂಡಿ ಸುಂದರ, ಪರಿಶುದ್ಧ ಭೂ-ಪುನಃಶ್ಚೇತನ, ಸಮರ್ಥವಾಗಿ ಬರ ನಿರ್ವಹಣೆ ಮತ್ತು ನರಡು ಭೂಮಿಯನ್ನು ಹಸಿರೀಕರಣ ಮಾಡಿ, ಸಂರಕ್ಷಿಸುವ ಪಣತೊಡೋಣ ಎಂದು ಅರವಿಂದ ಪಿ., ವಲಯ ಅರಣ್ಯಾಧಿಕಾರಿಗಳು, ಸಾಗರ. ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಡಾ.ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ, ಸಾಗರ, ಅರಣ್ಯ ಇಲಾಖೆ ಸಾಗರ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ.ಘಟಕಗಳು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾಲೇಜು ಆವರಣದಲ್ಲಿ ರಾಜ್ಯಕ್ಕೆ ಮಾದರಿಯಾಗುವ “ ಒನ್ ಸ್ಟೂಡೆಂಟ್, ಒನ್ ಪ್ಲಾನ್ಟ್” ಯೋಜನೆಯನ್ವಯ ಐದನೂರಕ್ಕೂ ಮಿಕ್ಕಿ ಕಾಡು ಜಾತಿಯ ಗಿಡಗಳನ್ನು ಕಾಲೇಜು ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಪಾಲ್ಗೊಂಡು ವನ-ಮಹೋತ್ಸವಕ್ಕೆ ಚಾಲನೆ ನೀಡಿದರು.
Forest Department ಮೊದಲು ಎನ್.ಎಸ್.ಎಸ್.ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಮಂತ್ ದ್ವಿತೀಯ ಬಿ.ಎ. ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ಹೆಚ್.ಎಂ.ಶಿವಕುಮಾರ್ ವಹಿಸಿದ್ದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಪ್ರತಿಜ್ಞೆಯನ್ನು ಕೋಶಾಧ್ಯಕ್ಷರಾದ ಕೆ.ವೆಂಕಟೇಶ್ ಬೋದಿಸಿದರು. ಮುಖ್ಯ ಅತಿಥಿಗಳಾಗಿ ಎಂ.ಆರ್.ಸತ್ಯನಾರಾಯಣ, ಸಹಕಾರ್ಯದರ್ಶಿಗಳು, ಡಾ. ಎ.ಎಸ್.ಲಕ್ಷ್ಮೀಶ್, ಪ್ರಾಂಶುಪಾಲರು, ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಡಾ.ಸುಮುಖ ಪಿ.ಸ್, ನಿರ್ದೇಶಕರು ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಡಾ. ಶಿಲ್ಪ ವಿ.ಎನ್, ಪ್ರಾಂಶುಪಾಲರು, ಡಾ. ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ ಇವರುಗಳು ಭಾಗವಹಿಸಿದ್ದರು. ಮಾನಸ ಆರ್, ದ್ವಿತೀಯ ಬಿ.ಸಿ.ಎ, ಇವರು ನಿರೂಪಿಸಿದರು, ಮಂಜುನಾಥ ಪ್ರಥಮ ಬಿ.ಎ. ಇವರು ವಂದಿಸಿದರು.

CM Siddaramaiah ಭಾರತ್ ಅಕ್ಕಿ, ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಸರಬರಾಜು. ಈಗ ಇಲ್ಲ- ಸಿದ್ಧರಾಮಯ್ಯ ಕಿಡಿ

0

CM Siddaramaiah ರಾಜ್ಯಕ್ಕೆ ಎಂಆರ್‌ಪಿ ದರದಲ್ಲಿ 29 ರೂ.ಗೆ ಕೆಜಿ ಭಾರತ್ ಅಕ್ಕಿ ಮಾರಾಟವನ್ನು ನಿಲ್ಲಿಸಿದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಭಾರತ್ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದರ ವಿರುದ್ಧ ನಾವು ಪ್ರತಿಭಟನೆ ಪ್ರಾರಂಭಿಸುತ್ತೇವೆ. ಅವರ ಬಳಿ ಅಕ್ಕಿ ದಾಸ್ತಾನು ಇದ್ದರೂ ಅಕ್ಕಿ ನೀಡುತ್ತಿಲ್ಲ ಎಂದರೆ ಅದು ರಾಜಕೀಯ ಎಂದು ತಿರುಗೇಟು ನೀಡಿದ್ದಾರೆ.
CM Siddaramaiah ಚುನಾವಣೆ ಉದ್ದೇಶದಿಂದ ಭಾರತ್ ಅಕ್ಕಿಯ ಮಾರಾಟ ಮಾಡಲಾಯಿತು. ಚುನಾವಣೆ ಮುಗಿದ ಮೇಲೆ ಅದನ್ನು ನಿಲ್ಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ. ಅಕ್ಕಿಯ ದಾಸ್ತಾನು ಇಲ್ಲದಿದ್ದರೆ ಅದು ಅರ್ಥವಾಗುವಂತಹದ್ದು. ಆದರೆ ಅವರ ಬಳಿ ಅಕ್ಕಿ ಇದ್ದರೂ ಅದನ್ನು ನೀಡುತ್ತಿಲ್ಲ. ‘ಅನ್ನ ಭಾಗ್ಯ’ದ ಉಚಿತ ಅಕ್ಕಿ ಅಕ್ಕಿ ನೀಡುವಂತೆ ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದಾಗ ಅವರು ಭಾರತೀಯ ಆಹಾರ ನಿಗಮದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ಅವರು ನೀಡಲು ನಿರಾಕರಿಸಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

”ಕೇಂದ್ರ ಸರ್ಕಾರ ದಲಿತರು, ಬಡವರು ಮತ್ತು ಹಿಂದುಳಿದವರ ಜೊತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ರಾಜ್ಯ ಸರ್ಕಾರವು ಸಮಾಜದ ಬಡವರಿಗೆ ಅನ್ನ ನೀಡಲು ಬಯಸಿದಾಗ ಅವರು ಅಕ್ಕಿ ನೀಡಲು ನಿರಾಕರಿಸಿದರು” ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ನಾವು ಅಕ್ಕಿ ಖರೀದಿಸಲು ಸಿದ್ಧರಿದ್ದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕರ್ನಾಟಕಕ್ಕೆ ಕೊಡುತ್ತಿಲ್ಲ ಎಂದರು.

Muncipal Corporation ಶಿವಮೊಗ್ಗ ಹೊರವಲಯದ ಶಕ್ತಿಧಾಮ ಬಡಾವಣೆಯನ್ನ ನಗರ ಪಾಲಿಕೆ ಆಡಳಿತಕ್ಕೊಳಪಡಿಸಲು ನಾಗರೀಕರ ಆಗ್ರಹ

0

Muncipal Corporation ಶಿವಮೊಗ್ಗ ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ತಮ್ಮ ಬಡಾವಣೆಯನ್ನು ನಿಯಮಾನುಸಾರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ, ನಗರದ ಹೊರವಲಯ ಸಾಗರ ರಸ್ತೆಯಲ್ಲಿರುವ ಶಕ್ತಿಧಾಮ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘವು ಮಹಾನಗರ ಪಾಲಿಕೆ ಆಡಳಿತಕ್ಕೆ ಮನವಿ ಪತ್ರ ಅರ್ಪಿಸಿದೆ.

ಶಕ್ತಿಧಾಮ ಲೇಔಟ್ ( ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಆಡಳಿತದ ಅಧೀನದಲ್ಲಿದೆ. ಸದರಿ ಬಡಾವಣೆಯಲ್ಲಿ ಈಗಾಗಲೇ 200 ಕ್ಕೂ ಅಧಿಕ ಮನೆಗಳ ನಿರ್ಮಾಣ ಮಾಡಲಾಗಿದೆ. ದಿನದಿಂದ ದಿನಕ್ಕೆ ಬಡಾವಣೆ ಅಭಿವೃದ್ದಿಯಾಗುತ್ತಿದೆ. ಹೊಸ ಹೊಸ ಮನೆಗಳ ನಿರ್ಮಾಣವಾಗುತ್ತಿದೆ.
ಈ ಕಾರಣದಿಂದ ಬಡಾವಣೆಗೆ ಸಮರ್ಪಕ ಮೂಲಸೌಕರ್ಯ ( ಲಭ್ಯತೆ ಹಾಗೂ ನಿವಾಸಿಗಳ ಅನುಕೂಲಕ್ಕಾಗಿ, ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ಬಡಾವಣೆಯನ್ನು ನಿಯಮಾನುಸಾರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ಮೂಲಕ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ನಿವಾಸಿಗಳು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಹೆಚ್ಚುತ್ತಿರುವ ಬೇಡಿಕೆ : ಸರಿಸುಮಾರು 27 ವರ್ಷಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಸದ್ಯ ನಗರದ ಹೊರವಲಯದ ಪ್ರದೇಶಗಳಲ್ಲಿ ಬೃಹತ್ ಬಡಾವಣೆಗಳು ಅಭಿವೃದ್ದಿಯಾಗಿವೆ. ಆದರೆ ಗ್ರಾಮ ಪಂಚಾಯ್ತಿ ಆಡಳಿತಗಳಿಂದ ಮೂಲಸೌಕರ್ಯ ಕಲ್ಪಿಸಲು ಆಗುತ್ತಿಲ್ಲ.
Muncipal Corporation ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಕಾರಣದಿಂದ ವೈಜ್ಞಾನಿಕ ರೀತಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಗಳು ಹೊರವಲಯದ ಪ್ರದೇಶದ ಬಡಾವಣೆಗಳ ನಾಗರೀಕರಿಂದ ಕೇಳಿಬರಲಾರಂಭಿಸಿದೆ.

Department of Sainik Welfare & Resettlement ಅಧಿಕಾರಿಯೇತರ ಮಿಲಿಟರಿ ಪಿಂಚಣಿದಾರ ಮಾಜಿ ಯೋಧರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

0

Department of Sainik Welfare & Resettlement ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು 2023-24ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ಪದವಿ/ಡಿಪ್ಲೊಮಾ ಮತ್ತು ವೃತ್ತಿಪರ ಪದವಿಯವರೆಗೆ ಕರ್ನಾಟಕದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಒಂದನೇ ತರಗತಿಯಿಂದ ಅಂತಿಮ ಪದವಿ/ಡಿಪ್ಲೊಮಾ, ವೃತ್ತಿಪರ ಪದವಿವರೆಗಿನ ವಿದ್ಯಾರ್ಥಿಗಳು ದಿ: 30/09/2024 ರೊಳಗಾಗಿ ಹಾಗೂ ವೃತ್ತಿಪರ ಪದವಿ ವಿದ್ಯಾರ್ಥಿಗಳು ದಿ: 31/10/2024ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠರವರು ತಿಳಿಸಿದ್ದಾರೆ.

Department of Sainik Welfare & Resettlement ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಇಲಾಖಾ ಕಚೇರಿ ದೂ.ಸಂ.: 08182-220925ನ್ನು ಸಂಪರ್ಕಿಸುವುದು.

Department of Labor ಕಾರ್ಮಿಕರ ನೇಮಾಕಾತಿ ಪ್ರಕ್ರಿಯೆ, ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಸಂಸ್ಥೆಗಳ‌ ಮಾಲೀಕರಿಗೆ”ಅರಿವು” ಕಾರ್ಯಕ್ರಮ

0

Department of Labor ಕಾರ್ಮಿಕ ಇಲಾಖೆಯು ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-2024ರ ಅನುಷ್ಠಾನಗೊಳಿಸಲು 10 ಜನ ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಯ ಮಾಲೀಕರಿಗೆ ಜು-09 ರಂದು ಬೆಳಗ್ಗೆ 11.00 ಕ್ಕೆ ಛೇಂಬರ್ ಆಫ್ ಕಾಮರ್ಸ್, ಸಿಟಿಕ್ಲಬ್ ಹಿಂಭಾಗ, ಶಿವಮೊಗ್ಗ ಇಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ.
Department of Labor ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹೊಟೇಲ್ ಮಾಲೀಕರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಮುಖ್ಯಸ್ಥರು, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಬಾರ್ ಮತ್ತು ರೆಸ್ಟೋರಂಟ್ ಮಾಲೀಕರು, ಖಾಸಗಿ ಸಾರಿಗೆಗಳ ಮುಖ್ಯಸ್ಥರು ಹಾಗೂ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಗೆ ಹಾಜರಾಗುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿರುತ್ತಾರೆ.

KSRTC ಕೆಎಸ್ಆರ್‌ಟಿಸಿ ವಿಭಾಗೀಯ ಅಧಿಕಾರಿ ನವೀನ್ ಗೆ ಸನ್ಮಾನ

0

KSRTC ಕೆಎಸ್ಆರ್‌ಟಿಸಿ ಜಿಲ್ಲಾ ವಿಭಾಗಕ್ಕೆ ನೂತನ ವಿಭಾಗೀಯ ಅಧಿಕಾರಿಯಾಗಿ ಟಿ.ಆರ್. ನವೀನ್ ಅಧಿಕಾರ ವಹಿಸಿ ಕೊಂಡಿದ್ದಾರೆ. ಇವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘ (ಸಿಐಟಿಯು) ವತಿಯಿಂದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಂಘ ವತಿಯಿಂದ ಇಲ್ಲಿನ ವಿಭಾಗೀಯ ಕಚೇರಿ ಆವರಣದಲ್ಲಿ ಶುಕ್ರವಾರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇಲ್ಲಿ ಹೂ ಗುಚ್ಚ ನೀಡಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರನ್ನು ಸ್ವಾಗತಿಸಲಾಯಿತು.

KSRTC ಕಾರ್ಯಕ್ರಮದಲ್ಲಿ ಕೆಎಸ್ಆರ್ ಟಿಸಿ ಸಿಐಟಿಯು ಅಧ್ಯಕ್ಷ ರಾಜು ಚಿನ್ನಸ್ವಾಮಿ, ಕೆಎಸ್ಆರ್ಟಿಸಿ ಸಿಐಟಿಯು ಹಾಗೂ ಕೆ ಎಸ್ ಆರ್ ಟಿ ಸಿ ಪ. ಜಾ. ಪ. ಪಂ. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಹನುಮಂತಪ್ಪ, ಖಜಾಂಚಿ ಶಂಕರಮೂರ್ತಿ ಹಾಗೂ ಸಂಘದ ಇತರೆ ಮುಖಂಡರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

Rain in Shivamogga ಮಳೆಯಬ್ಬರಕ್ಕೆ ತುಂಬಿ ಹರಿದ ಹಳ್ಳಕೊಳ್ಳ. ಹೊಸನಗರ ತಾಲ್ಲೂಕಿನಲ್ಲಿ ದಾಖಲೆ ಮಳೆ

0

Rain in Shivamogga ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ದಾಖಲೆಯ ಮಳೆಯಾಗಿದೆ.
ಮಲೆನಾಡಿನ ಅತ್ಯಂತ ಅಣ್ಣನ ಮಳೆ ದೊಡ್ಡಪುಶ್ಯ ಎಂದು ಕರೆಯಲ್ಪಡುವ ಪುನರ್ವಸು ಮಳೆ ಅಬ್ಬರದಿಂದಲೇ ಪುನರ್ವಸು ಮಳೆಯಾಗಿದೆ.

ಶರಾವತಿ ಜಲಾನಯನ ಪ್ರದೇಶದ ಇಕ್ಕೆಲಗಳ ಹಳ್ಳ ಕೊಳ್ಳ ಉಪನದಿಗಳು ಮೈದುಂಬಿ ಹರಿಯುತ್ತಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲೂಕಿನ ಸಾವೇ ಹಕ್ಕಲಿನಲ್ಲಿ 138 ಮಿಲಿಮೀಟರ್ ಮಳೆಯಾಗಿದೆ.

Rain in Shivamogga ಚಕ್ರಾನಗರದಲ್ಲಿ 125 ಮಿಲಿ ಮಿಟರ್ ಮಳೆ, ಮಾಸ್ತಿ ಕಟ್ಟೆಯಲ್ಲಿ 116 ಮಿಲಿಮೀಟರ್, ಹುಲಿಕಲ್ಲಿನಲ್ಲಿ 115 ಮಿಲಿ ಮೀಟರ್, ಬಿದನೂರುನಲ್ಲಿ 104 ಮಿಲಿಮೀಟರ್, ಹೊಂಬುಜದಲ್ಲಿ 93.4 ಮಿಲಿಮಿಟರ್, ಮಾಣಿಯಲಿ 82 ಮಿಲಿ ಮೀಟರ್, ಹೊಸನಗರದಲ್ಲಿ 70 ಮಿಲಿಮೀಟರ್, ಕಾರ್ಗನ್ನಲ್ಲಿ 69.6 ಮಿಲಿ ಮೀಟರ್, ರಿಪ್ಪನ್ಪೇಟೆಯಲ್ಲಿ 28.2 ಮಿಲಿ ಮೀಟರ್, ಅರಸಾಳಿ ನಲ್ಲಿ 21.6 ಮಿಲಿ ಮೀಟರ್ ಮಳೆ ದಾಖಲಾಗಿದೆ.

Bhadravathi Urban Development Authority ನ್ಯಾಯಾಲಯದ ಆದೇಶದಂತೆ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಪ್ರಕ್ರಿಯೆ- ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್

0

Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ೨೦೦೯-೧೦ನೇ ಸಾಲಿನಲ್ಲಿ ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ಸಾರ್ವಜನಿಕ ವಿತರಣೆಗಾಗಿ ಸುಮಾರು ೧೭೨ಎಕರೆ ಪ್ರದೇಶದಲ್ಲಿ ಸೃಜಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಆಗಿರಬಹುದಾದ ಸಮಸ್ಯೆಯ ಪರಿಹಾರಕ್ಕಾಗಿ ೨೦೨೩ರ ಆಗಸ್ಟ್ ಮಾಹೆಯಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮ ವಹಿಸಲಾಗುವುದು ಎಂದು ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ವಿವರ ನೀಡಿ ಮಾತನಾಡುತ್ತಿದ್ದರು. ನ್ಯಾಯಾಲಯದ ತೀರ್ಪಿನಂತೆ ಸೂಡಾದಲ್ಲಿ ಸೇವೆ ಸಲ್ಲಿಸುತ್ತಿರುವ ೧೭ ಸಿಬ್ಬಂಧಿಗಳು ಸೇರಿದಂತೆ ಅಧ್ಯಕ್ಷರ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ೧೪೨ ಜನರು ಮತ್ತು ಪತಿ-ಪತ್ನಿ ಪ್ರಕರಣಗಳಲ್ಲಿ ಆಯ್ಕೆಗೊಂಡಿದ್ದ ೧೬ಫಲಾನುಭವಿಗಳನ್ನು ಹೊರತುಪಡಿಸಿ, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈವರೆಗೆ ಪರಿಶೀಲಿಸಲಾಗಿರುವ ೩೧೮ ಅರ್ಜಿಗಳ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
Bhadravathi Urban Development Authority ನ್ಯಾಯಾಲಯದ ಈ ಆದೇಶಕ್ಕೆ ಮೊದಲು, ಲೋಕಾಯುಕ್ತರ ತನಿಖಾ ವರದಿಯ ನಂತರ, ಪ್ರಾಧಿಕಾರದ ಸಭೆಯ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ಸಮಿತಿಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಲಾಗಿತ್ತು. ಕೆಲವು ಸೌಲಭ್ಯ ವಂಚಿತ ಅರ್ಜಿದಾರರು ಹಲವು ನಿಯಮಗಳನ್ನು ಉಲ್ಲಂಘಿಸಲಾಗಿರುವ ಬಗ್ಗೆ ಉಚ್ಚ ನ್ಯಾಯಾಲದಯಲ್ಲಿ ಪ್ರಶ್ನಿಸಿದ್ದರು. ಸದರಿ ಪ್ರಕರಣದಲ್ಲಿ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರಸ್ತುತ ಕ್ರಮ ವಹಿಸಲಾಗುತ್ತಿದೆ ಎಂದರು.
ವಾಜಪೇಯಿ ಬಡಾವಣೆಯಲ್ಲಿ ೧೮೦೧ನಿವೇಶನಗಳನ್ನು ಸೃಜಿಸಲಾಗಿದೆ. ಈ ನಿವೇಶನಗಳಲ್ಲಿ ೨೧೭ನಿವೇಶನಗಳನ್ನು ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ. ೨೫೦ಮೂಲೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. ೧೯ನಿವೇಶನಗಳನ್ನು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸರ್ಕಾರದ ಆದೇಶದಂತೆ ವಿತರಿಸಲಾಗಿದೆ. ಭೂಮಾಲೀಕರಿಗೆ ನಿವೇಶನ ರೂಪದ ಪರಿಹಾರ ಪಡೆಯದೇ ನಗದು ರೂಪದ ಪರಿಹಾರ ಪಡೆದಾಗ ಉಳಿದ ೧೪೨ ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದೆ ಎಂದರು.
ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಭದ್ರಾವತಿಯಲ್ಲಿ ೩೪ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಊರುಗಡೂರು ಪ್ರದೇಶದಲ್ಲಿ ಈಗಾಗಲೇ ೮೫ಶೇ. ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು ೬೮೭ನಿವೇಶನಗಳ ಹಂಚಿಕೆ ಕಾರ್ಯ ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಇಂಜಿನಿಯರ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

Department Of Skill Development ಉಚಿತ ಕೌಶಲ್ಯಾಭವೃದ್ಧಿ ತರಬೇತಿಗಾಗಿ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

0

Department Of Skill Development ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಇಲ್ಲಿ ‘ಎಐಟಿಟಿ- ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನಿರುದ್ಯೋಗ ಯುವಕ/ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ಧಾರೆ.
ಐಟಿಐ ಆದವರಿಗೆ ಸಿಎನ್‍ಸಿ ಆಪರೇಟರ್-ವರ್ಟಿಕಲ್ ಮಷಿನ್ನಿಂಗ್ ಸೆಂಟರ್ 4 ತಿಂಗಳ ತರಬೇತಿ, ಡಿಪ್ಲೊಮ/ಬಿಇ ಆದವರಿಗೆ ಸಿಎನ್‍ಸಿ ಪ್ರೊಗ್ರಾಮರ್/ಪ್ರೊ-ಇ/ಆಟೋಕ್ಯಾಡ್ 4 ತಿಂಗಳ ತರಬೇತಿ, ಎಸ್‍ಎಸ್‍ಎಲ್‍ಸಿ ಆದವರಿಗೆ 4 ತಿಂಗಳ ಮಿಲ್ಲರ್/ಟರ್ನರ್ ಮತ್ತು 12 ತಿಂಗಳ ಅವಧಿಯ ಟೂಲ್ ರೂಂ ಮಷಿನಿಸ್ಟ್ ತರಬೇತಿಯನ್ನು ನೀಡಲಾಗುವುದು.
Department Of Skill Development ತರಬೇತಿ ಅವಧಿಯಲ್ಲಿ ರೂ.2500 ಪ್ರತಿ ತಿಂಗಳು ಶಿಷ್ಯವೇತನ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ವೈಯಕ್ತಿಕ ವಿವರಗಳೊಮದಿಗೆ ಜುಲೈ 27 ರೊಳಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ ಸಿಎ-38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-246054, ಮೊ.ಸಂ 9448307027, 9449286543 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಚಾರ್ಯರು ತಿಳಿಸಿದ್ದಾರೆ.

Karnataka Land Reforms Act ಬರಗಾಲ ಬಂದರೂ ಈಗಿನ ಸರ್ಕಾರ ಪರಿಹಾರ ನೀಡಲಿಲ್ಲ- ಕೋಡಿಹಳ್ಳಿ ಚಂದ್ರಶೇಖರ್ ಆರೋಪ

0

Karnataka Land Reforms Act ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪತ್ರಿಕಾಭವನದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ವರ್ಷವಾಗಿದೆ. ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಗ್ಯಾರಂಟಿಗಳಲ್ಲಿ ಮುಳುಗಿ ಅಭಿವೃದ್ಧಿಯನ್ನೇ ಕಡೆಗಾಣಿಸಿದ್ದಾರೆ. ಬರಗಾಲ ಬಂದರೂ ಅದಕ್ಕೆ ಪರಿಹಾರ ನೀಡಲಿಲ್ಲ. ಅದರ ಬದಲು ಬರಗಾಲದ ಸಂದರ್ಭದಲ್ಲಿ ತೆಲಂಗಾಣಕ್ಕೆ ಹೋಗಿ ಚುನಾವಣಾ ಪ್ರಚಾರದಲ್ಲಿ ಮುಳುಗಿದರು. ಕೇಂದ್ರ ಸರ್ಕಾರಕ್ಕೆ 36 ಸಾವಿರ ಕೋಟಿ ಪರಿಹಾರ ಕೇಳಿದ್ದರೂ ಕೂಡ ಕೇಂದ್ರ ಸರ್ಕಾರ ಕೇವಲ 3 ಸಾವಿರ ಕೋಟಿ ರೂ. ನೀಡಿ ಕೈ ಚೆಲ್ಲಿದೆ. ರಾಜ್ಯ ಸರ್ಕಾರ ರೈತರಿಗೆ 200 ಕೋಟಿ ರೂ. ಮಾತ್ರ ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರನ್ನು ಕಡೆಗಾಣಿಸಿವೆ ಎಂದರು.
Karnataka Land Reforms Act ಕೇಂದ್ರ ಸರ್ಕಾರ ರೈತರ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ರದ್ದು ಮಾಡಿದರೂ ಕೂಡ ರಾಜ್ಯ ಸರ್ಕಾರ ಮಾತ್ರ ರೈತರಿಗೆ ಮಾರಕವಾಗಿರುವ ಈ ಕಾನೂನುಗಳನ್ನು ರದ್ದು ಮಾಡದೇ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಚುನಾವಣೆಗೂ ಮುನ್ನ ರದ್ದು ಮಾಡುವ ಭರವಸೆ ನೀಡಿತ್ತು. ಆದರೆ, ಅದು ರದ್ದಾಗಿಲ್ಲ. ಭೂ ಸುಧಾರಣೆ ಕಾಯ್ದೆ ಪರಿಣಾಮವಾಗಿ ಸುಮಾರು 10 ಲಕ್ಷ ರೈತರು ತಮ್ಮ ಭೂಮಿ ಮಾರಿದ್ದಾರೆ. ಹಾಗೆಯೇ ಎಪಿಎಂಸಿ ಕಾಯ್ದೆಯಿಂದ ಕೃಷಿ ಮಾರುಕಟ್ಟೆಗೆ ಕಾರ್ಪೊರೇಟ್ ಕಂಪನಿಗಳು ನುಸುಳಿದ್ದಾರೆ. ಕೂಡಲೇ ಈ ಎರಡೂ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.