Sringeri Sharada Peetham ಇತಿಹಾಸ ಪ್ರಸಿದ್ದ ಶೃಂಗೇರಿ ತುಂಗಾ ತಟದಲ್ಲಿರುವ ಕಪ್ಪೆಶಂಕರ ನಗರದ ಕುರಬಗೇರಿ ಗಾಂಧಿ ಮೈದಾನ ಸಂಪರ್ಕಿಸುವ ಒನ್ -ವೇ ರಸ್ತೆ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ರಾತ್ರಿಯಿಡೀ ಎಡಬಿಡದೇ ಸುರಿದ ಭಾರೀ ಮಳೆಗೆ ಶಾರದಾ ಪೀಠ ಶೃಂಗೇರಿಯ ತುಂಗಾ ತಟದಲ್ಲಿರುವ ಕಪ್ಪೆ ಶಂಕರ ಸಂಪೂರ್ಣ ಮುಳುಗಡೆಯಾಗಿದೆ.
ಇಲ್ಲಿನ ಕುರುಬಗೇರಿಯಿಂದ ಗಾಂಧಿ ಮೈದಾನ, ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ಗೌರಿಶಂಕರ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಆ ಮೂಲಕ ಇದ್ದ ಸಂಚಾರ ಸ್ಥಗಿತಗೊಂಡಿದೆ. ಭಾರೀ ಮಳೆಯ ಮುನ್ಸೂಚನೆಯಿಂದ ಜಾಗೃತರಾಗಿದ್ದ ಶೃಂಗೇರಿ ಪೋಲೀಸರು ನದಿ Sringeri Sharada Peetham ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದರು ಹಾಗೂ ಅಪಾಯದ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಳಿಸಲಾಗಿತ್ತು
ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆ ತುಂಗೆಯ ನೀರಿನ ಮಟ್ಟ ಏರುತ್ತಿದೆ.
Sringeri Sharada Peetham ಶೃಂಗೇರಿ ಭಾರೀಮಳೆಗೆ ತುಂಗಾತಟದ ಕಪ್ಪೆ ಶಂಕರ ಸೋಪಾನ ಮುಳುಗಿದೆ
Date: