Friday, April 10, 2026
Friday, April 10, 2026
Home Blog Page 662

Forest Department ಚಿರತೆ ಕಾಟ ತಡೆಯಲಾರದೇ ಗ್ರಾಮಸ್ಥರೇ ಅದನ್ನ ಕೊಂದ ಘಟನೆ

0

Forest Department ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಬೆಟ್ಟದಲ್ಲಿ ಚಿರತೆಯನ್ನ ಪತ್ತೆ ಹಚ್ಚಿ ಹೊಡೆದು ಕೊಂದ ಘಟನೆ ನಡೆದಿದೆ.
ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು. ಆದರೆ ಬೆಟ್ಟದಲ್ಲಿ ಚಿರತೆ ಕಾಣಿಸಿರುವ ವಿಚಾರ ತಿಳಿದು ಕಮದಾಳ ಗ್ರಾಮಸ್ಥರು ನೆರೆಹೊರೆಯ ಸಾವಿರಾರು ಜನರು ಆಗಮಿಸಿದ್ದಾರೆ. ಬೆಟ್ಟದ ಮೇಲೆ ತಂಡೋಪತಂಡವಾಗಿ ನುಗ್ಗಿ ಚಿರತೆಗಾಗಿ ಹುಡುಕಾಟ ನಡೆಸಿದ್ದ ಜನರು.
ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಮೂವರು ರೈತರು. ಅರಣ್ಯ ಇಲಾಖೆ ಸಿಬ್ಬಂದಿಗೆ ಮೊದಲೇ ತಿಳಿಸಿದರೂ ಪ್ರಯೋಜನವಾಗಿ ಎಂದು ತಾವೇ ಚಿರತೆ ಹಿಡಿಯಲು ಮುಂದಾಗಿದ್ದ ಗ್ರಾಮಸ್ಥರು. ಚಿರತೆ ಕಾಣಿಸುತ್ತಿದ್ದಂತೆ ರೊಚ್ಚಿಗೆದ್ದ ನೂರಾರು ಜನರು ಕಟ್ಟಿಗೆ, ಕಲ್ಲು ಬಡಿಗೆಗಳೊಂದಿಗೆ ಏಕಕಾಲಕ್ಕೆ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದ ಗ್ರಾಮಸ್ಥರು. ಅರಣ್ಯ ಅಧಿಕಾರಿಗಳು ಇದ್ದರೂ ಚಿರತೆ ರಕ್ಷಣೆ ಮಾಡಲು ಆಗಲಿಲ್ಲ. ಅರಣ್ಯ ಸಿಬ್ಬಂದಿ, ಪೊಲೀಸರ ಎದುರಲ್ಲೇ ರೊಚ್ಚಿಗೆದ್ದ ನೂರಾರು ಜನರು ಚಿರತೆಯನ್ನ ಹೊಡೆದು ಕೊಂದಿದ್ದಾರೆ.
Forest Department ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಲಘು ಲಾಠಿಪ್ರಹಾರ ನಡೆಸಿದರು ಜನರು ಕದಲಿಲ್ಲ. ಚಿರತೆ ಕೊಂದ ಬಳಿಕ ಪಶು ಅಂಬುಲೆನ್ಸ್‌ನಲ್ಲಿ ಹಾಕಿದ ಗ್ರಾಮಸ್ಥರು.
ಚಿರತೆ ಹಿಡಿಯುವಲ್ಲಿ ಅಸಹಾಯಕರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಚಿರತೆ ಕಾಣಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮುಂಚಿತವಾಗಿಯೇ ತಿಳಿಸಿದ್ದರು ಅರಣ್ಯ್ ಇಲಾಖೆ ನಿರ್ಲಕ್ಷ್ಯ ಮಾಡಿದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದಿದ್ದಾರೆ.

Rain In Shivamogga ಸೊರಬ ತಾಲ್ಲೂಕಿನಲ್ಲೂ ಎರ್ರಾಬಿರ್ರಿ ಮಳೆಗೆ ಉರುಳಿದ ಮರಗಳಿಂದ ಸಂಚಾರ ಅಸ್ತವ್ಯಸ್ತ

0

Rain In Shivamogga ಸೊರಬ ತಾಲೂಕಿನ ವಿವಿಧೆಡೆ ಬೀಸಿದ ಗಾಳಿ ಮಳೆಗೆ ಹತ್ತಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ವಾಹನ ಸಂಚಾರ ಹಾಗೂ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ.
ಮುಂಜಾವಿಯಿಂದ ಆರಂಭವಾದ ಗಾಳಿ, ಮಳೆಗೆ ತಾಲೂಕಿನ ಹಾಲಗಳಲೆ, ಕಪ್ಪಗಳಲೆ, ಮಲಳಗದ್ದೆ, ಕುಳವಳ್ಳಿ, ಹರೂರು ಹಾಗೂ Rain In Shivamogga ಕಟ್ಟಿನಕಾರು ಮಾರ್ಗದ ರಸ್ತೆಗಳಲ್ಲಿ ಭೀಕರ ಗಾಳಿ, ಮಳೆಗೆ ಹತ್ತಾರು ಮರಗಳು ಧರೆಗುರುಳಿದ ಪರಿಣಾಮ 12 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಪರಿಣಾಮ, ಸಾಗರ ಸೊರಬ ರಸ್ತೆಯಲ್ಲಿ ಕೆಲ ಸಮಯ ಸಂಚಾರ ಸ್ಥಗಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

Flipkart Company ಆನ್ ಲೈನ್ ಕೊರಿಯರ್ ಸಂಸ್ಥೆಯ ಟೀಮ್ ಲೀಡರ್ ನಿಂದ ಲಕ್ಷಾಂತರ ರೂ. ವಂಚನೆ- ದೂರು ದಾಖಲು

0

Flipkart Company ಶಿವಮೊಗ್ಗದ ತಾವರೆಚಟ್ನಹಳ್ಳಿಯಲ್ಲಿರುವ ಇನ್‌ಸ್ಕಾರ್ಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಡೆಲಿವರಿ ಟೀಮ್ ನ ಲೀಡರ್ ಆಗಿದ್ದ ಯುವಕನಿಂದ ವಂಚನೆ ಆಗಿದೆ ಎಂದು ಆರೋಪಿಸಿ ಸಂಸ್ಥೆಯ ವ್ಯವಸ್ಥಾಪಕರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಸ್ಥೆಯು ಆನ್‌ಲೈನ್‌ನ ಫ್ಲಿಫ್‌ಕಾರ್ಟ್ ಸಂಸ್ಥೆಯಿಂದ ಗ್ರಾಹರ ಆರ್ಡರ್‌ನ್ನು ಡೆಲಿವರಿ ಮಾಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರಾಕೇಶ್ ಎಂಬ ಟೀಮ್ ಲೀಡರ್ ಸಂಸ್ಥೆಗೆ 08,81097 ರೂ. ಹಣ ವಂಚಿಸಿರುವ ಬಗ್ಗೆ ವ್ಯವಸ್ಥಾಪಕರು ಠಾಣೆಗೆ ದೂರು ನೀಡಿದ್ದಾರೆ.

Flipkart Company ರಾಕೇಶ್ ಸಂಸ್ಥೆಯ ವೇರ್ ಹೌಸ್ ನಲ್ಲಿದ್ದು ನಂತರ ಟೀಮ್ ಲೀಡರ್ ಆಗಿದ್ದ. ಈತನ ಕೈ ಅಡಿ ೯ ಜನ ಡೆಲಿವರಿ ಬಾಯ್ ಇದ್ದರು. ಮೇ ೩ ರಿಂದ ಮೇ ೩೦ ರವರೆಗೆ ನಿಯತ್ತಾಗಿ ಹಣ ಕಟ್ಟಿಕೊಂಡು ಬರುತ್ತಿದ್ದ ರಾಕೇಶ್ ನಂತರದ ದಿನಗಳಲ್ಲಿ ಡೆಲಿವರಿಯಿಂದ ಸಂಗ್ರಹವಾಗುತ್ತಿದ್ದ ಹಣವನ್ನ ಬ್ಯಾಂಕ್ ಗೆ ಕಟ್ಟದೆ ಇರುವಾಗ ಸಂಸ್ಥೆಯ ವ್ಯವಸ್ಥಾಪಕರಿಗೆ ಅನುಮಾನ ಬಂದಿದೆ. ನಂತರ ಬ್ಯಾಂಜ್ ನ ಬ್ಯಾಲೆನ್ಸ್ ಶೀಟ್ ನೋಡಿದಾಗ ರಾಕೇಶ್ ಸರಿಯಾಗಿ ಹಣಕಟ್ಟದೆ 0,81,097ರೂ ವಂಚಿಸಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.

National Commission for Women ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ದೂರು ದಾಖಲು

0

National Commission for Women ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೇಖಾ ಶರ್ಮಾ ಅವರ ದೂರಿನ ಆಧಾರದ ಮೇಲೆ, ಹೊಸ ಕ್ರಿಮಿನಲ್ ಕಾನೂನಿನ ‘ಭಾರತೀಯ ನ್ಯಾಯ ಸಂಹಿತೆ’ಯ ಸೆಕ್ಷನ್ 79 (ಪದ, ಹಾವಭಾವ ಅಥವಾ ಮಹಿಳೆಯ ನಮ್ರತೆಗೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಭಾನುವಾರ ದೆಹಲಿ ಪೊಲೀಸರ ವಿಶೇಷ ಕೋಶವು ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ದಾಖಲಿಸಿದೆ.
ಕಳೆದ ವರ್ಷ ‘ಪ್ರಶ್ನೆಗಾಗಿ ನಗದು’ ಗದ್ದಲದ ನಂತರ ಲೋಕಸಭೆಯಿಂದ ಅನರ್ಹಗೊಂಡಿದ್ದ ಮತ್ತು ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 56,000 ಮತಗಳ ಅಂತರದಿಂದ ಗೆದ್ದಿದ್ದ ಪಶ್ಚಿಮ ಬಂಗಾಳದ ಕೃಷ್ಣನಗರದ ಸಂಸದರು ಗುರುವಾರ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿದ್ದರು.

121 ಜನರು ಸಾವನ್ನಪ್ಪಿದ ಹತ್ರಾಸ್ ಕಾಲ್ತುಳಿತದಲ್ಲಿ ಗಾಯಗೊಂಡ ಮಹಿಳೆಯರನ್ನು ಮಹಿಳಾ ಆಯೋಗದ ಮುಖ್ಯಸ್ಥರು ಭೇಟಿಯಾದ ವೀಡಿಯೊಗಳ ಕುರಿತು ಕಮೆಂಟ್ ಮಾಡಿದ್ದರು.
ಶರ್ಮಾ ಅವರಿಗೆ ಒಬ್ಬರು ಛತ್ರಿ ಹಿಡಿದಿರುವ ವೀಡಿಯೊಗಳ ಕುರಿತು, ಮಹುವಾ ಅವರು ಎಕ್ಸ್‌ನಲ್ಲಿ “ಪೈಜಾಮಾ” ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದರು.

National Commission for Women ಇದು ವಿವಾದವನ್ನು ಹುಟ್ಟುಹಾಕಿತು; ನಂತರ ಅವರು ಪೋಸ್ಟ್ ಅನ್ನು ಅಳಿಸಿದ್ದಾರೆ ಮತ್ತು ಪೊಲೀಸರು ಅದರ ಬಗ್ಗೆ ಎಕ್ಸ್‌ನಿಂದ ವಿವರಗಳನ್ನು ಕೇಳಿದ್ದಾರೆ.

Bhadra Dam ಭದ್ರಾ ಡ್ಯಾಂ ನಿಂದ ಪೋಲಾಗುತ್ತಿದ್ದ ಅಪಾರ ಪ್ರಮಾಣದ ನೀರನ್ನ ತಡೆಗಟ್ಟಿದ ಅಧಿಕಾರಿಗಳ ಬಗ್ಗೆ ರೈತರ ಮೆಚ್ಚುಗೆ

0

Bhadra Dam ಮಧ್ಯ ಕರ್ನಾಟಕದ ಜೀವನಾಡಿಯಾದ ಭದ್ರಾ ಡ್ಯಾಮ್ ನಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಸೋರಿಕೆಯಾಗುತ್ತಿದ್ದನ್ನು ಸಂಪೂರ್ಣವಾಗಿ ತಡೆಗಟ್ಟಿದ್ದಾರೆ. ಭದ್ರ್ರಾ ಡ್ಯಾಮ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರಂತರ ಶ್ರಮದಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಐದು ದಿನಗಳಿಂದ ಬದ್ರ ಡ್ಯಾಮ್ ನ ರಿವರ್ ಸ್ಲೀವ್ಸ್ ಗೇಟ್ನಿಂದ ಸುಮಾರು ೨೫೦೦ ರಿಂದ ೩೦೦೦ ಕಿಸೆಕ್ಸ್ ನೀರು ನದಿಗೆ ಪೋಲಾಗುತ್ತಿತ್ತು. ಇದರಿಂದ ಆತಂಕಗೊಂಡ ಅಚ್ಚುಕಟ್ಟು ಪ್ರದೇಶದ ರೈತರು ಎರಡು ದಿನದ ಹಿಂದೆ ಕಾಡಾ ಅಧ್ಯಕ್ಷರ ಸಮ್ಮುಖದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಕ್ರೋಶ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದರು.

ಈ ಬಾರಿ ಕಳೆದ ವರ್ಷಕ್ಕಿಂತಲೂ ಕನಿಷ್ಠ ನೀರು ಸಂಗ್ರಹ ಇದ್ದುದರಿಂದ ರೈತರು ಪ್ರಶ್ನಿಸಿದ್ದರು ಇದಕ್ಕೆ ಉತ್ತರ ನೀಡಲಾಗದೆ ಡ್ಯಾಮ್ ನ ಇಂಜಿನಿಯರ್ ಗಳು ಅಧಿಕಾರಿಗಳು ಮಳೆಗಾಲದಲ್ಲಿ ಗೇಟ್‌ಗಳ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದರು.

ಸ್ಲೀವ್ಸ್ ಗೇಟ್ ರಿಪೇರಿ ಮಾಡುವಾಗ ಗೇಟ್ ಅನ್ನು ಮೇಲಕ್ಕೆ ಎತ್ತಿದ ಸಂದರ್ಭದಲ್ಲಿ ಮತ್ತೆ ಪುನ: ಅದನ್ನು ಸ್ಥಳಕ್ಕೆ ಸೇರಿಸಲು ಸಾಧ್ಯವಾಗದೆ ಅಧಿಕಾರಿಗಳು ಕೈ ಚೆಲ್ಲಿದ್ದರು.

Bhadra Dam ಹೀಗಾಗಿ ಡ್ಯಾಮಿನ ಹಿಂದಿನಲ್ಲಿ ಸಂಗ್ರಹವಾಗುತ್ತಿದ್ದ ನೀರು ಸಂಪೂರ್ಣವಾಗಿ ಸ್ಲೀವ್ಸ್ ಗೇಟ್ನಿಂದ ನದಿಗೆ ಸೋರಿಕೆಯಾಗುತ್ತಿತ್ತು. ಇದರಿಂದ ಆತಂಕಗೊಂಡಿದ್ದ ಅಧಿಕಾರಿಗಳು ಸ್ಲೀವ್ಸ್ ಗೇಟ್ ರಿಪೇರಿಗೆ ಮುಂದಾದರೂ ಕೂಡ ತಾಂತ್ರಿಕ ತಜ್ಞರ ಸಲಹೆ ಮತ್ತು ಕೊರತೆ ಎದ್ದು ಕಾಣುತ್ತಿತ್ತು ಇದಕ್ಕೆ ಪೂರಕ ಎಂಬಂತೆ ಅಚ್ಚುಕಟ್ಟು ಪ್ರದೇಶದ ರೈತರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

Tamilnadu Police ಮದುವೆ ವ್ಯವಹಾರವನ್ನ ಆನ್ ಲೈನ್ ಮೂಲಕ ಮಾಡಿ ಯುವಕರನ್ನ ವಂಚಿಸುತ್ತಿದ್ದ ಯುವತಿ ಬಂಧನ

0

Tamilnadu Police ಒಬ್ಬ ಯುವತಿ ಐವತ್ತು ಜನರೊಂದಿಗೆ ವಿವಾಹವಾದ ಘಟನೆ ಒಂದು ನಡೆದಿದ್ದು ನಿಜಕ್ಕೂ ಇದು ನಂಬಲು ಅಸಾಧ್ಯ ಆದರೆ ಸತ್ಯ ಸಾಮಾನ್ಯವಾಗಿ ಹುಡುಗಿಯರನ್ನು ವಂಚಿಸಿ ಹುಡುಗರು ಎರಡು-ಮೂರು ವಿವಾಹವಾಗುವುದನ್ನು ನಾವು ಕೇಳಿದ್ದೇವೆ ನೋಡಿದ್ದೇವೆ ಆದರೆ ಈ ಘಟನೆ ಭಿನ್ನವಾಗಿದೆ.

ಏನಿದು ಪ್ರಕರಣ ..?!

ತಮಿಳುನಾಡಿನ ತಿರುಪುರ್ ಜಿಲ್ಲೆಯ ತಾರಾಪುರಂನ ಯುವಕ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ 35 ವರ್ಷ ವಯಸ್ಸಾಗಿದ್ದರೂ, ಇನ್ನೂ ಮದುವೆಯಾಗಿರಲಿಲ್ಲ. ಆತ ಮದುವೆ ಕನಸು ಹೊತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ‘ಅಂಬಿ ಡೇಟ್ ದಿ ತಮಿಳು ವೇ’ ನಲ್ಲಿ ನೋಂದಾಯಿಸಿದ್ದಾನೆ.
ಈ ವೆಬ್ ಸೈಟ್ ನಲ್ಲಿ ಸಂಧ್ಯಾ (30) ವಯಸ್ಯು ಪರಿಚಯವಾಗಿತ್ತು.

ಈ ರೋಡ್ ಜಿಲ್ಲೆಯ ಕೊಡುಮುಡಿ ಮೂಲದ ಸಂಧ್ಯಾ ಆತನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ. ಇಬ್ಬರೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ದಿನ ಚಾಟ್ ಮಾಡುತ್ತಿದ್ದರು. ಆಕೆಗೆ ಬೇಕಾದಾಗಲೆಲ್ಲ ಯುವಕ ಹಣ ಕಳುಹಿಸುತ್ತಿದ್ದ. ಇವರ ಮದುವೆಗೆ ಹುಡುಗನ ತಂದೆ-ತಾಯಿಯೂ ಒಪ್ಪಿಗೆ ಸೂಚಿಸಿದ್ದರು.

ವಧುವಿಗೆ ಬೇಕಾದ ಎಲ್ಲಾ ಆಭರಣಗಳು ಮತ್ತು ರೇಷ್ಮೆ ಸೀರೆಗಳನ್ನು ವರನ ಮನೆಯವರು ಖರೀದಿಸಿದರು.ಕಡೆಗೆ ಒಂದು ದಿನ ಪಳನಿ ಬಳಿಯ ದೇವಸ್ಥಾನದಲ್ಲಿ ಸಂಧ್ಯಾ ಮತ್ತು ಯುವಕ ವಿವಾಹವಾದರು.
ವಿವಾಹವಾದ 3 ತಿಂಗಳು ಸಂತೋಷವಾಗಿದ್ದರು.ನಂತರ, ಅವಳ ನಡವಳಿಕೆಯು ಸ್ವಲ್ಪ ಬದಲಾಗಲಾರಂಭಿಸಿತು. ಸಂಧ್ಯಾ ಹೇಳಿದ ವಯಸ್ಸಿಗೆ ಅವಳ ಲಕ್ಷಣಗಳು ಕಾಣುತ್ತಿಲ್ಲ‌ ನಂತರ ಆಕೆಯ ಆಧಾರ್ ಕಾರ್ಡ್ ನೋಡಿದಾಗ ಶಾಕ್ ಆಗಿದ್ದರು..

Tamilnadu Police ಕಾರ್ಡ್‌ನಲ್ಲಿ ಪತಿ ಎಂದು ಚೆನ್ನೈ ಮೂಲದ ಮತ್ತೊಬ್ಬ ವ್ಯಕ್ತಿಯ ಹೆಸರಿತ್ತು. ಇದರಿಂದ ಗಾಬರಿಗೊಂಡ ಯುವಕ ಕೂಡಲೇ ಆಕೆಗೆ ಪ್ರಶ್ನಿಸಿದ್ದಾನೆ. ತಾನು ಸಿಕ್ಕಿಬಿದ್ದಿದ್ದೇನೆಂದು ತನ್ನ ಪತಿ ಹಾಗೂ ಆತನ ಕುಟುಂಬಸ್ಥರನ್ನು ಭಯಭೀತಗೊಳಿಸಿದ್ದಾಳೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಕೂಡಲೇ ಯುವಕ ತಾರಾಪುರಂ ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸರು ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು, ವಿಚಾರಣೆ ವೇಳೆ ಯುವತಿಯ ಕುರಿತಾದ ರೋಚಕ ಸಂಗತಿಗಳು ಬಯಲಾಗಿದೆ

ಹತ್ತು ವರ್ಷದ ಹಿಂದೇನೆ ಮದುವೆ..?!

ಹತ್ತು ವರ್ಷಗಳ ಹಿಂದೆ ಒಬ್ಬ ನೊಂದಿಗೆ ಮದುವೆಯಾಗಿ ಆತನನ್ನು ವಂಚಿಸಿ ಆತನಿಂದ ಹೊರಬಂದು ಬೇರೆ ಬೇರೆ ಉದ್ಯಮಿಗಳು , ಫೈನಾನ್ಸರ್ ಗಳ ಜೊತೆ ಮದುವೆಯಾಗಿ ಅವರನ್ನು ವಂಚಿಸಿ ಅವರಿಂದನು ಬೇರ್ಪಟ್ಟಿದ್ದಾಳೆ ಎಂದು ಈಗ ಬೆಳಕಿಗೆ ಬಂದಿದೆ.
ಮೊದಲು ಮದುವೆಯಾಗುವುದು ನಂತರ ಸ್ವಲ್ಪ ದಿನ ಜೊತೆಗಿದ್ದು ನಂತರ ಜಗಳವಾಡಿ, ಚಿನ್ನಾಭರಣದ ಜೊತೆ ಓಡಿ ಹೋಗುವುದು ಈಕೆಯ ಹವ್ಯಾಸವಾಗಿತ್ತು.
ಪೊಲೀಸ್ ಅಧಿಕಾರಿಗಳನ್ನು ಬಿಟ್ಟಿಲ್ಲ ಈಕೆ..!
ಈ ಯುವತಿ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಡಿಎಸ್ಪಿ, ಎಸ್‌ಐಗಳನ್ನು ಮದುವೆಯಾಗಿ ವಂಚಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿ ಕೆಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

Dr. C. N. Manjunath ಡೆಂಗ್ಯು ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ- ಸಂಸದ ಡಾ.ಸಿ.ಎನ್.ಮಂಜುನಾಥ್

0

Dr. C. N. Manjunath ರಾಜ್ಯಾದ್ಯಂತ ಡೆಂಗ್ಯೂ ಹರಡುತ್ತಿರುವ ಸಂಬಂಧ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದೆ.

ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಸೊಳ್ಳೆಗಳ ನಿಯಂತ್ರಣ ಬಹು ಮುಖ್ಯ. ಡೆಂಗ್ಯೂ ಜ್ವರ ನಿಯಂತ್ರಣ ಆಗದೆ ಇದ್ದಲ್ಲಿ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಕಾಯಿಲೆ ಬರುವ ಸಾಧ್ಯತೆಗಳಿವೆ.

ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಡೆಂಗ್ಯೂ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ.

ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಒಬ್ಬ ವೈದ್ಯರು ಸೇರಿ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲ ಶಾಲೆ- ಕಾಲೇಜುಗಳಿಗೆ ಸುತ್ತೋಲೆ ಕಳಿಸಿ, ಶಾಲಾ ಆಡಳಿತದ ಜೊತೆ ಸಭೆ ನಡೆಸಬೇಕು. ಡೆಂಗ್ಯೂ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆಯೇ ಇಲ್ಲ. ಹೀಗಾಗಿ ಈ ಬಗ್ಗೆ ಮುಂಜಾಗೃತಾ ಕ್ರಮ ವಹಿಸುವ ಜೊತೆಗೆ ಜನ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

Dr. C. N. Manjunath ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ ಕೆ, ಸಹ ಸಂಚಾಲಕ ಡಾ.ಯೋಗಾನಂದ, ರಾಜ್ಯ ವಕ್ತಾರ ಅಶೋಕ್ ಕೆ.ಎಂ. ಗೌಡ ಅವರು ಭಾಗವಹಿಸಿದ್ದರು.

Malnad Development Foundation ಸಾಗರದಲ್ಲಿ ಎಲ್ ಬಿ ಎಸ್ ಕಾಲೇಜು‌ ಸನಿಹದ ಹೆದ್ದಾರಿ ಬದಿ ಗಿಡ ನೆಡುವ ಚಟುವಟಿಕೆ

0

Malnad Development Foundation ಲಾಲ್ ಬಹದ್ದೂರ್ ಕಾಲೇಜಿನಿಂದ ಪ್ರಾರಂಭವಾಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅರವಿಂದ ಪಿ, ವಲಯ ಅರಣ್ಯಾಧಿಕಾರಿಗಳು, ಸಾಗರ, ಸ್ಥಳೀಯ ಜಾತಿಯ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

Malnad Development Foundation ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ಹೆಚ್.ಎಂ.ಶಿವಕುಮಾರ್, ಕೋಶಾಧ್ಯಕ್ಷರಾದ ಕೆ.ವೆಂಕಟೇಶ್, ಎಂ.ಆರ್.ಸತ್ಯನಾರಾಯಣ, ಸಹಕಾರ್ಯದರ್ಶಿಗಳು, ಡಾ. ಎ.ಎಸ್.ಲಕ್ಷ್ಮೀಶ್,ಪ್ರಾಂಶುಪಾಲರು, ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಉಪನ್ಯಾಸಕರುಗಳಾದ ನಾಗೇಶ್ ಚವ್ಹಾಣ್, ಗಜೇಂದ್ರ, ಮಹೇಶ್ ಮತ್ತು ವಿದ್ಯಾರ್ಥಿಗಳು ಇವರುಗಳು ಭಾಗವಹಿಸಿದ್ದರು.

Harish Poonja ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ

0

Harish Poonja ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಲ್ಲದೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ದ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ರದ್ದುಪಡಿಸುವಂತೆ ಕೋರಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ಪೀಠ, ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪೂಂಜಾ ವಿರುದ್ಧ ಪೊಲೀಸರು ಈಗಾಗಲೇ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪಗಳನ್ನು ಕೈ ಬಿಡುವಂತೆ ಕೋರಿ ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಬೇಕು. ನ್ಯಾಯಾಲಯ ಎಂಟು ವಾರಗಳಲ್ಲಿ ಆ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಮಾನ ಕೈಗೊಳ್ಳಬೇಕು. ಅಲ್ಲಿಯವರೆಗೆ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಬಾರದು ಎಂದು ಹೈಕೋರ್ಟ್ ಹೇಳಿದೆ.

Harish Poonja ಪ್ರಕರಣದ ಹಿನ್ನೆಲೆ : ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಆರೋಪದಡಿ ಶಶಿರಾಜ್ ಶೆಟ್ಟಿ ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿದ್ದ ಶಾಸಕ ಹರೀಶ್‌ ಪೂಂಜಾ, ಪೊಲೀಸ್ ಅಧಿಕಾರಿಗಳನ್ನು ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ.

ಇದನ್ನು ಪ್ರಶ್ನಿಸಿ ಹರೀಶ್ ಪೂಂಜಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಪೊಲೀಸರು ಹರೀಶ್‌ ಪೂಂಜಾ ಹಾಗೂ ಇತರ ಆರೋಪಿಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

Forest Department ನಿಸರ್ಗ ಅಸಮತೋಲನ ,‌ವನ್ಯಜೀವಿಗಳು ನಾಡಿಗೆ ದಾಳಿ.ಈಗ ಮಾರ್ಗೋಪಾಯ ಬೇಕು- ಪಿ.ಅರವಿಂದ್

0

Forest Department ದಿನನಿತ್ಯ ಅರಣ್ಯಗಳು ಮಾನವನ ದುರಾಸೆಯಿಂದ, ಅತಿಕ್ರಮಣದಿಂದ ನಾಶವಾಗುತ್ತಿದೆ. ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಡೆಮೆಯಾಗಿ ಬರಡು ಭೂಮಿಯಾಗುತ್ತಿದೆ. ಎಲ್ಲಾ ಕಡೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದರ ಮುಖಾಂತರ ನೀರು ಇಂಗುವುದು ಕಡಿಮೆಯಾಗಿ ನೀರಿನ ಲಭ್ಯತೆ ಕ್ರಮೇಣ ಜನರಿಗೆ ದೂರವಾಗುತ್ತಿದೆ. ಕೆರೆಗಳು ಮಾಯವಾಗಿ ರಿಯಲ್ ಎಸ್ಟೇಟ್ ಗಳಾಗಿ ಪರಿವರ್ತನೆಗೊಳ್ಳುವುದರ ಮುಖಾಂತರ ಪ್ರಾಣಿ, ಪಶು-ಪಕ್ಷಿಗಳಿಗೆ ನೀರಿನ ಸಮಸ್ಯೆಯುಂಟಾಗಿ ಅರಣ್ಯದಲ್ಲಿ ಸಮತೋಲನ ತಪ್ಪಿ ವನ್ಯ ಮೃಗಗಳು ನಾಡಿಗೆ ಬಂದು ರೈತ ಮತ್ತು ವನ್ಯ ಮೃಗಗಳ ನಡುವೆ ಸಂಘರ್ಷ ಏರ್ಪಟ್ಟಿದೆ.

ನಾವು ಈಗಿನಿಂದಲೇ ಇದರ ಬಗ್ಗೆ ಮಾರ್ಗೋಪಾಯಗಳನ್ನು ಹುಡುಕದಿದ್ದರೆ ರಾಜ್ಯದಲ್ಲಿ ನೀರು ಮತ್ತು ವಾತಾವರಣ ಕಲುಷಿತಗೊಂಡು ಕೋವಿಡ್, ಡೆಂಗ್ಯೂ, ಮಲೇರಿಯಾದಂತಹ ಮರಣಾಂತಿಕ ಖಾಯಿಲೆಗೆ ತುತ್ತಾಗುತ್ತೇವೆ. ಕೋವಿಡ್ ಪೀಡಿತರಿಗೆ ಸಮಯದಲ್ಲಿ ಆಮ್ಲಜನಕ ಒದಗಿಸುವಲ್ಲಿ ವಿಫಲರಾಗಿ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಇಂತಹ ನೈಸರ್ಗಿಕವಾಗಿ ಆಮ್ಲಜನಕವನ್ನು ತಯಾರಿಸುವ ಮರ-ಗಿಡಗಳ ರಕ್ಷಣೆ ಈ ದಿನಗಳಲ್ಲಿ ಅತ್ಯವಶ್ಯಕತೆಯಿದೆ ಮತ್ತು ನಾವೆಲ್ಲರೂ ಕೂಡಿ ಸುಂದರ, ಪರಿಶುದ್ಧ ಭೂ-ಪುನಃಶ್ಚೇತನ, ಸಮರ್ಥವಾಗಿ ಬರ ನಿರ್ವಹಣೆ ಮತ್ತು ನರಡು ಭೂಮಿಯನ್ನು ಹಸಿರೀಕರಣ ಮಾಡಿ, ಸಂರಕ್ಷಿಸುವ ಪಣತೊಡೋಣ ಎಂದು ಅರವಿಂದ ಪಿ., ವಲಯ ಅರಣ್ಯಾಧಿಕಾರಿಗಳು, ಸಾಗರ. ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಡಾ.ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ, ಸಾಗರ, ಅರಣ್ಯ ಇಲಾಖೆ ಸಾಗರ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ.ಘಟಕಗಳು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾಲೇಜು ಆವರಣದಲ್ಲಿ ರಾಜ್ಯಕ್ಕೆ ಮಾದರಿಯಾಗುವ “ ಒನ್ ಸ್ಟೂಡೆಂಟ್, ಒನ್ ಪ್ಲಾನ್ಟ್” ಯೋಜನೆಯನ್ವಯ ಐದನೂರಕ್ಕೂ ಮಿಕ್ಕಿ ಕಾಡು ಜಾತಿಯ ಗಿಡಗಳನ್ನು ಕಾಲೇಜು ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಪಾಲ್ಗೊಂಡು ವನ-ಮಹೋತ್ಸವಕ್ಕೆ ಚಾಲನೆ ನೀಡಿದರು.
Forest Department ಮೊದಲು ಎನ್.ಎಸ್.ಎಸ್.ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಮಂತ್ ದ್ವಿತೀಯ ಬಿ.ಎ. ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ಹೆಚ್.ಎಂ.ಶಿವಕುಮಾರ್ ವಹಿಸಿದ್ದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಪ್ರತಿಜ್ಞೆಯನ್ನು ಕೋಶಾಧ್ಯಕ್ಷರಾದ ಕೆ.ವೆಂಕಟೇಶ್ ಬೋದಿಸಿದರು. ಮುಖ್ಯ ಅತಿಥಿಗಳಾಗಿ ಎಂ.ಆರ್.ಸತ್ಯನಾರಾಯಣ, ಸಹಕಾರ್ಯದರ್ಶಿಗಳು, ಡಾ. ಎ.ಎಸ್.ಲಕ್ಷ್ಮೀಶ್, ಪ್ರಾಂಶುಪಾಲರು, ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಡಾ.ಸುಮುಖ ಪಿ.ಸ್, ನಿರ್ದೇಶಕರು ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಡಾ. ಶಿಲ್ಪ ವಿ.ಎನ್, ಪ್ರಾಂಶುಪಾಲರು, ಡಾ. ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ ಇವರುಗಳು ಭಾಗವಹಿಸಿದ್ದರು. ಮಾನಸ ಆರ್, ದ್ವಿತೀಯ ಬಿ.ಸಿ.ಎ, ಇವರು ನಿರೂಪಿಸಿದರು, ಮಂಜುನಾಥ ಪ್ರಥಮ ಬಿ.ಎ. ಇವರು ವಂದಿಸಿದರು.