Friday, April 10, 2026
Friday, April 10, 2026
Home Blog Page 661

Rotary Club Malenadu ರೋಟರಿ ಸಂಸ್ಥೆಯು ಶಿಕ್ಷಣ & ಆರೋಗ್ಯ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದೆ- ಸಿ.ರಾಜು

0

Rotary Club Malenadu ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿದೆ ಎಂದು ರೋಟರಿ ಕ್ಲಬ್ ಮಲೆನಾಡು ಅಧ್ಯಕ್ಷ ಸಿ.ರಾಜು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಮಲೆನಾಡು ವತಿಯಿಂದ ಗೋಪಾಲಗೌಡ ಬಡಾವಣೆಯಲ್ಲಿ ಆಯೋಜಿಸಿದ್ದ 2ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದು, ಉತ್ತಮ ಕೆಲಸಗಳನ್ನು ಮಾಡಿದ ಸಾರ್ಥಕ ಭಾವವಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮಕ್ಕಳ ಶಿಕ್ಷಣಕ್ಕೆ ಅನುಕೂಲ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಮಲೆನಾಡು ಕ್ಲಬ್ ಶ್ರಮಿಸಿದೆ. ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸಿದೆ ಎಂದರು.
ರೋಟರಿ ಮಂಜುಳಾ ರಾಜು ಮಾತನಾಡಿ, ಸಂಸ್ಥಾಪನಾ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದು, ಎಲ್ಲರ ಸಹಕಾರದಿಂದ ಹೆಚ್ಚಿನ ಸೇವೆ ಮಾಡಲು ಸಾಧ್ಯವಾಯಿತು. ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
Rotary Club Malenadu ರಾಜು ಅವರ ಅಧ್ಯಕ್ಷ ಅವಧಿಯಲ್ಲಿ ಸಭೆಗಳನ್ನು ನಡೆಸಲು ಉತ್ತಮವಾದ ಹಾಲ್ ನಿರ್ಮಿಸಿಕೊಟ್ಟರು. ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಸ್ಥೆ ಬಲಪಡಿಸುವಲ್ಲಿ ರಾಜು ಅವರ ಕಾರ್ಯ ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಸಂಸ್ಥೆಯು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಹೇಳಿದರು.
ಸಂಸ್ಥಾಪನಾ ದಿನಾಚರಣೆ ಅಂಗವಾಗಿ 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸರ್ಕಾರಿ ಶಾಲೆಗಳಿಗೆ ಕೊಡುಗೆಯಾಗಿ ನೀಡಲಾಗುತ್ತದೆ. ಶೆಟ್ಟಿಕೆರೆ, ಆಯನೂರು, ವಿರೂಪಿನಕೊಪ್ಪ, ಸೋಮಿನಕೊಪ್ಪ ಹಾಗೂ ಮಲೆನಾಡು ಕ್ಲಬ್‌ಗೆ ಪ್ರೊಜೆಕ್ಟರ್, ಪ್ರಿಂಟರ್, ಟಿವಿ, ಕುಡಿಯುವ ನೀರಿನ ಘಟಕ, ಹೀಗೆ ಅವಶ್ಯವಿರುವ ವಸ್ತುಗಳನ್ನು ನೀಡಲಾಗುತ್ತದೆ ಎಂದರು. ರೋಟರಿ ಕ್ಲಬ್ ಮಲೆನಾಡು ಪದಾಧಿಕಾರಿಗಳು ಉಪಸ್ಥಿತರಿದ್ದರು.

High Court of Gujarat ದೀರ್ಘ ಹೋರಾಟದ ಫಲ. ಅದಾನಿ ಸಮೂಹದ ವಶದಲ್ಲಿದ್ದ 108 ಹೆಕ್ಟೇರ್ ಗೋಮಾಳ ಪ್ರದೇಶ ಮತ್ತೆ ಮರಳಿ ಗ್ರಾಮಸ್ಥರ ವಶ

0

High Court of Gujarat ಗುಜರಾತ್‌ನ ಕಚ್‌ ಜಿಲ್ಲೆಯ ಮುಂದ್ರಾ ಗ್ರಾಮಸ್ಥರು 13 ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ 2005ರಲ್ಲಿ ಅದಾನಿ ಸಮೂಹಕ್ಕೆ ಮಂಜೂರು ಮಾಡಿದ್ದ 108 ಹೆಕ್ಟೇರ್‌ ಗೋಮಾಳದ ಜಾಗವನ್ನು ಮರಳಿ ಗ್ರಾಮಸ್ಥರಿಗೆ ನೀಡಲು ನಿರ್ಧಿರಿಸಿರುವುದಾಗಿ ಹೈಕೋರ್ಟ್‌ಗೆ ತಿಳಿಸಿದೆ.

ವಿಶೇಷ ಅರ್ಥಿಕ ವಲಯ (ಸೆಝ್) ಮತ್ತು ಅದಾನಿ ಬಂದರಿಗೆ 231 ಎಕರೆ ಗೋಮಾಳದ ಜಾಗವನ್ನು ಮಂಜೂರು ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.

ಸರ್ಕಾರ 2005ರಲ್ಲಿ ಜಮೀನು ಮಂಜೂರು ಮಾಡಿದ್ದರೂ ಈ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ. 2010ರಲ್ಲಿ ಅದಾನಿ ಬಂದರು ಮತ್ತು ಸೆಝ್ ಜಂಟಿಯಾಗಿ ತಮಗೆ ಮಂಜೂರಾದ ಜಮೀನಿಗೆ ಬೇಲಿ ಹಾಕಲು ಮುಂದಾಗಿತ್ತು. ಈ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಕಾನೂನು ಹೋರಾಟಕ್ಕೆ ಧುಮುಕಿದ್ದರು.

ಗ್ರಾಮಸ್ಥರ ಪ್ರಕಾರ, 279 ಎಕರೆ ಗೋಮಾಳದ ಜಾಗದಲ್ಲಿ 45 ಎಕರೆ ಬಿಟ್ಟು ಉಳಿದ 231 ಎಕರೆಯನ್ನು ಕಾರ್ಪೋರೇಟ್ ವಲಯಕ್ಕೆ ಮಂಜೂರು ಮಾಡಲಾಗಿತ್ತು. ಗೋಮಾಳದ ಕೊರತೆ ಎದುರಿಸುತ್ತಿದ್ದ ಗ್ರಾಮಸ್ಥರಿಗೆ ಇದರಿಂದ ಇನ್ನಷ್ಟು ಸಮಸ್ಯೆ ಆಗಿತ್ತು. ಗೋಮಾಳದ ಜಾಗ ಸಮುದಾಯದ ಸಂಪನ್ಮೂಲ ಎಂದು ಅವರು ಪ್ರತಿಪಾದಿಸಿದ್ದರು.

High Court of Gujarat 2014ರಲ್ಲಿ ಹೆಚ್ಚುವರಿ 387 ಎಕರೆ ಸರ್ಕಾರಿ ಭೂಮಿಯನ್ನು ಗೋಮಾಳಕ್ಕಾಗಿ ಮಂಜೂರು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ರಾಜ್ಯ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದ್ದ ಹಿನ್ನೆಲೆ ಹೈಕೋರ್ಟ್ ಪಿಐಎಲ್ ಇತ್ಯರ್ಥಪಡಿಸಿತ್ತು.

High Court ಆದರೆ, ಅದು ಸಾಧ್ಯವಾಗದಿದ್ದಾಗ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. 2015 ರಲ್ಲಿ, ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಪಂಚಾಯಿತಿಗೆ ಹಂಚಿಕೆ ಮಾಡಲು ಲಭ್ಯವಿರುವ ಭೂಮಿ ಕೇವಲ 17 ಹೆಕ್ಟೇರ್‌ ಎಂದು ತಿಳಿಸಿತ್ತು.

Dengue Fever ರಾಜ್ಯದಾದ್ಯಂತ ಸು. 7000 ಡೆಂಗ್ಯು ಪ್ರಕರಣಗಳ ವರದಿ ಅಗತ್ಯ ನಿಯಂತ್ರಣ ಕ್ರಮದ ಬಗ್ಗೆ ಸಚಿವರ ಮನವಿ

0

Dengue fever ದೇಶದ ಬಹುತೇಕ ಭಾಗಗಳಲ್ಲಿ ಮಳೆ ಬೀಳುತ್ತಿರುವುದರಿಂದ, ದಕ್ಷಿಣದ ಕೆಲವು ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ. ಇದರ ಪರಿಣಾಮವಾಗಿ, ಕರ್ನಾಟಕದಲ್ಲಿ ಡೆಂಗ್ಯೂ ಏಕಾಏಕಿ ಆತಂಕವನ್ನು ಹೆಚ್ಚಿಸಿದೆ. ಏಕೆಂದರೆ, ಈ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆಯ ಪ್ರಕಾರ ರಾಜ್ಯವು 7,000 ಪಾಸಿಟಿವ್ ಗಡಿಯನ್ನು ಮೀರಿದೆ.

ಜುಲೈ 6 ರ ಹೊತ್ತಿಗೆ, ಕರ್ನಾಟಕದಲ್ಲಿ 7,006 ಜನರಿಗೆ ವೈರಲ್ ಸೋಂಕು ಇರುವುದು ಪತ್ತೆಯಾಗಿದೆ, ಅವರಲ್ಲಿ ಆರು ಜನರು ಈ ಜ್ವರಕ್ಕೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ 1,908 ಡೆಂಗ್ಯೂ ಸೋಂಕಿನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ, ಇದು ರಾಜ್ಯದಲ್ಲಿ ಅತಿ ಹೆಚ್ಚು.

ಚಿಕ್ಕಮಗಳೂರು 521 ಪ್ರಕರಣಗಳು, ಮೈಸೂರು 496 ಪ್ರಕರಣಗಳು ಮತ್ತು 481 ಪ್ರಕರಣಗಳೊಂದಿಗೆ ಹಾವೇರಿ ಇತರ ಜಿಲ್ಲೆಗಳಲ್ಲಿ ಡೆಂಗ್ಯೂ ಸೋಂಕುಗಳು ಹೆಚ್ಚಾಗುತ್ತಿವೆ. ಧಾರವಾಡದಲ್ಲಿ 289 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಚಿತ್ರದುರ್ಗದಲ್ಲಿ ಇದುವರೆಗೆ 275 ಪ್ರಕರಣಗಳು ದಾಖಲಾಗಿವೆ.

ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಬಿಕ್ಕಟ್ಟಿನ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪ ಕೂಡ ಭುಗಿಲೆದ್ದಿದೆ, ಆಡಳಿತಾರೂಢ ಕಾಂಗ್ರೆಸ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ, ಸಿದ್ದರಾಮಯ್ಯ ಸರ್ಕಾರ ಕೇಸರಿ ಪಕ್ಷಕ್ಕೆ ತಿರುಗೇಟು ಕೊಟ್ಟಿದೆ.

Dengue fever ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, “ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣವನ್ನು ತಡೆಗಟ್ಟಲು ಈಗಾಗಲೇ ನಮ್ಮ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ನಿಮ್ಮ ಮನೆಯ ಹತ್ತಿರ ಬಂದು ಪರಿಶೀಲನೆ ನಡೆಸಿ ಅಗತ್ಯ ಬಿದ್ದಲ್ಲಿ ಈಡಿಸ್‌ ಸೊಳ್ಳೆಯ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುತ್ತಾರೆ. ಡೆಂಗ್ಯೂ ನಿಯಂತ್ರಿಸುವ ಕಾರ್ಯದಲ್ಲಿ ಆರೋಗ್ಯ ಇಲಾಖೆಯೊಂದಿಗೆ ನೀವೂ ಕೈಜೋಡಿಸಬೇಕಿದೆ. ಸ್ವಚ್ಛತೆಯಿಂದಲೇ ಸ್ವಸ್ಥತೆ ಎನ್ನುವಂತೆ ನಿಮ್ಮ ಮನೆಯ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗ್ಯ ಪ್ರಕರಣವನ್ನು ತಡೆಗಟ್ಟಬಹುದು. ಒಗ್ಗಟ್ಟಾಗಿ ಡೆಂಗ್ಯೂವನ್ನು ಹಿಮ್ಮೆಟ್ಟಿಸೋಣ, ಆರೋಗ್ಯಯುತ ಕರ್ನಾಟಕ ನಿರ್ಮಿಸೋಣ” ಎಂದು ಹೇಳಿದ್ದಾರೆ.

Klive news ಸುದ್ದಿ ಸಾಲು

0

Klive news ಅಭಿಷೇಕ್ ಶರ್ಮಾ ಚೊಚ್ಚಲ ಶತಕ, ಭಾರತಕ್ಕೆ ಎರಡನೆ ಟಿ-20 ಯಲ್ಲಿ ಜಿಂಬಾಬ್ವೆ ವಿರುದ್ಧ 100 ರನ್ನಿನಿಂದ ಜಯ.

ಹಿಂಸಾಪೀಡಿತ ಮಣಿಪುರಕ್ಕಿಂದು ರಾಹುಲ್ ಗಾಂಧಿ ಭೇಟಿ.

ಮೈದುಂಬಿದ ಜೋಗ, ಮನಸೆಳೆಯುತ್ತಿರುವ ಜಲಪಾತ.

ಕಾರವಾರ, ಹೊನ್ನಾವರದಲ್ಲಿ‌ ಮುಂದುವರೆದ ಮಳೆ: ಗುಡ್ಡ ಕುಸಿತ, ಸಂಚಾರ ವ್ಯತ್ಯಯ, ಶಾಲೆ- ಕಾಲೇಜಿಗೆ ರಜೆ.

ಇಂದಿನಿಂದ ಪ್ರಧಾನಿ‌ ಮೋದಿ ರಷ್ಯಾ, ಆಸ್ಟ್ರಿಯಾಕ್ಕೆ ತಲಾ 2 ದಿನದ ಭೇಟಿ

ಯಾದಗಿರಿ‌‌ ನಗರದಲ್ಲಿ ಪಕ್ಕದ ಮನೆಯ ಎರಡು ತಿಂಗಳ ಹಸುಳೆಯನ್ನು ಬಾವಿಗೆಸೆದು ಕೊಂದ ಅಪ್ರಾಪ್ರೆ.

ಮುಂಬೈನಲ್ಲಿ ರಣಚಂಡಿ‌ಮಳೆ: ಜನಜೀವನ‌ ಅಸ್ತವ್ಯಸ್ತ.

ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಜಿಲ್ಲೆಯಲ್ಲಿ ವರುಣಾರ್ಭಟ: ಅಪಾರ ಬೆಳೆ ಹಾನಿ.

ಉತ್ತರಾಖಂಡದಲ್ಲಿ ಬಿಡದ ಮಳೆ: ಗುಡ್ಡ ಕುಸಿತ, ಕೊಚ್ಚಿಹೋದ ಸೇತುವೆಗಳು.

Forest Department ಚಿರತೆ ಕಾಟ ತಡೆಯಲಾರದೇ ಗ್ರಾಮಸ್ಥರೇ ಅದನ್ನ ಕೊಂದ ಘಟನೆ

0

Forest Department ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಬೆಟ್ಟದಲ್ಲಿ ಚಿರತೆಯನ್ನ ಪತ್ತೆ ಹಚ್ಚಿ ಹೊಡೆದು ಕೊಂದ ಘಟನೆ ನಡೆದಿದೆ.
ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು. ಆದರೆ ಬೆಟ್ಟದಲ್ಲಿ ಚಿರತೆ ಕಾಣಿಸಿರುವ ವಿಚಾರ ತಿಳಿದು ಕಮದಾಳ ಗ್ರಾಮಸ್ಥರು ನೆರೆಹೊರೆಯ ಸಾವಿರಾರು ಜನರು ಆಗಮಿಸಿದ್ದಾರೆ. ಬೆಟ್ಟದ ಮೇಲೆ ತಂಡೋಪತಂಡವಾಗಿ ನುಗ್ಗಿ ಚಿರತೆಗಾಗಿ ಹುಡುಕಾಟ ನಡೆಸಿದ್ದ ಜನರು.
ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಮೂವರು ರೈತರು. ಅರಣ್ಯ ಇಲಾಖೆ ಸಿಬ್ಬಂದಿಗೆ ಮೊದಲೇ ತಿಳಿಸಿದರೂ ಪ್ರಯೋಜನವಾಗಿ ಎಂದು ತಾವೇ ಚಿರತೆ ಹಿಡಿಯಲು ಮುಂದಾಗಿದ್ದ ಗ್ರಾಮಸ್ಥರು. ಚಿರತೆ ಕಾಣಿಸುತ್ತಿದ್ದಂತೆ ರೊಚ್ಚಿಗೆದ್ದ ನೂರಾರು ಜನರು ಕಟ್ಟಿಗೆ, ಕಲ್ಲು ಬಡಿಗೆಗಳೊಂದಿಗೆ ಏಕಕಾಲಕ್ಕೆ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದ ಗ್ರಾಮಸ್ಥರು. ಅರಣ್ಯ ಅಧಿಕಾರಿಗಳು ಇದ್ದರೂ ಚಿರತೆ ರಕ್ಷಣೆ ಮಾಡಲು ಆಗಲಿಲ್ಲ. ಅರಣ್ಯ ಸಿಬ್ಬಂದಿ, ಪೊಲೀಸರ ಎದುರಲ್ಲೇ ರೊಚ್ಚಿಗೆದ್ದ ನೂರಾರು ಜನರು ಚಿರತೆಯನ್ನ ಹೊಡೆದು ಕೊಂದಿದ್ದಾರೆ.
Forest Department ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಲಘು ಲಾಠಿಪ್ರಹಾರ ನಡೆಸಿದರು ಜನರು ಕದಲಿಲ್ಲ. ಚಿರತೆ ಕೊಂದ ಬಳಿಕ ಪಶು ಅಂಬುಲೆನ್ಸ್‌ನಲ್ಲಿ ಹಾಕಿದ ಗ್ರಾಮಸ್ಥರು.
ಚಿರತೆ ಹಿಡಿಯುವಲ್ಲಿ ಅಸಹಾಯಕರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಚಿರತೆ ಕಾಣಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮುಂಚಿತವಾಗಿಯೇ ತಿಳಿಸಿದ್ದರು ಅರಣ್ಯ್ ಇಲಾಖೆ ನಿರ್ಲಕ್ಷ್ಯ ಮಾಡಿದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದಿದ್ದಾರೆ.

Rain In Shivamogga ಸೊರಬ ತಾಲ್ಲೂಕಿನಲ್ಲೂ ಎರ್ರಾಬಿರ್ರಿ ಮಳೆಗೆ ಉರುಳಿದ ಮರಗಳಿಂದ ಸಂಚಾರ ಅಸ್ತವ್ಯಸ್ತ

0

Rain In Shivamogga ಸೊರಬ ತಾಲೂಕಿನ ವಿವಿಧೆಡೆ ಬೀಸಿದ ಗಾಳಿ ಮಳೆಗೆ ಹತ್ತಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ವಾಹನ ಸಂಚಾರ ಹಾಗೂ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ.
ಮುಂಜಾವಿಯಿಂದ ಆರಂಭವಾದ ಗಾಳಿ, ಮಳೆಗೆ ತಾಲೂಕಿನ ಹಾಲಗಳಲೆ, ಕಪ್ಪಗಳಲೆ, ಮಲಳಗದ್ದೆ, ಕುಳವಳ್ಳಿ, ಹರೂರು ಹಾಗೂ Rain In Shivamogga ಕಟ್ಟಿನಕಾರು ಮಾರ್ಗದ ರಸ್ತೆಗಳಲ್ಲಿ ಭೀಕರ ಗಾಳಿ, ಮಳೆಗೆ ಹತ್ತಾರು ಮರಗಳು ಧರೆಗುರುಳಿದ ಪರಿಣಾಮ 12 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಪರಿಣಾಮ, ಸಾಗರ ಸೊರಬ ರಸ್ತೆಯಲ್ಲಿ ಕೆಲ ಸಮಯ ಸಂಚಾರ ಸ್ಥಗಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

Flipkart Company ಆನ್ ಲೈನ್ ಕೊರಿಯರ್ ಸಂಸ್ಥೆಯ ಟೀಮ್ ಲೀಡರ್ ನಿಂದ ಲಕ್ಷಾಂತರ ರೂ. ವಂಚನೆ- ದೂರು ದಾಖಲು

0

Flipkart Company ಶಿವಮೊಗ್ಗದ ತಾವರೆಚಟ್ನಹಳ್ಳಿಯಲ್ಲಿರುವ ಇನ್‌ಸ್ಕಾರ್ಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಡೆಲಿವರಿ ಟೀಮ್ ನ ಲೀಡರ್ ಆಗಿದ್ದ ಯುವಕನಿಂದ ವಂಚನೆ ಆಗಿದೆ ಎಂದು ಆರೋಪಿಸಿ ಸಂಸ್ಥೆಯ ವ್ಯವಸ್ಥಾಪಕರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಸ್ಥೆಯು ಆನ್‌ಲೈನ್‌ನ ಫ್ಲಿಫ್‌ಕಾರ್ಟ್ ಸಂಸ್ಥೆಯಿಂದ ಗ್ರಾಹರ ಆರ್ಡರ್‌ನ್ನು ಡೆಲಿವರಿ ಮಾಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರಾಕೇಶ್ ಎಂಬ ಟೀಮ್ ಲೀಡರ್ ಸಂಸ್ಥೆಗೆ 08,81097 ರೂ. ಹಣ ವಂಚಿಸಿರುವ ಬಗ್ಗೆ ವ್ಯವಸ್ಥಾಪಕರು ಠಾಣೆಗೆ ದೂರು ನೀಡಿದ್ದಾರೆ.

Flipkart Company ರಾಕೇಶ್ ಸಂಸ್ಥೆಯ ವೇರ್ ಹೌಸ್ ನಲ್ಲಿದ್ದು ನಂತರ ಟೀಮ್ ಲೀಡರ್ ಆಗಿದ್ದ. ಈತನ ಕೈ ಅಡಿ ೯ ಜನ ಡೆಲಿವರಿ ಬಾಯ್ ಇದ್ದರು. ಮೇ ೩ ರಿಂದ ಮೇ ೩೦ ರವರೆಗೆ ನಿಯತ್ತಾಗಿ ಹಣ ಕಟ್ಟಿಕೊಂಡು ಬರುತ್ತಿದ್ದ ರಾಕೇಶ್ ನಂತರದ ದಿನಗಳಲ್ಲಿ ಡೆಲಿವರಿಯಿಂದ ಸಂಗ್ರಹವಾಗುತ್ತಿದ್ದ ಹಣವನ್ನ ಬ್ಯಾಂಕ್ ಗೆ ಕಟ್ಟದೆ ಇರುವಾಗ ಸಂಸ್ಥೆಯ ವ್ಯವಸ್ಥಾಪಕರಿಗೆ ಅನುಮಾನ ಬಂದಿದೆ. ನಂತರ ಬ್ಯಾಂಜ್ ನ ಬ್ಯಾಲೆನ್ಸ್ ಶೀಟ್ ನೋಡಿದಾಗ ರಾಕೇಶ್ ಸರಿಯಾಗಿ ಹಣಕಟ್ಟದೆ 0,81,097ರೂ ವಂಚಿಸಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.

National Commission for Women ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ದೂರು ದಾಖಲು

0

National Commission for Women ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೇಖಾ ಶರ್ಮಾ ಅವರ ದೂರಿನ ಆಧಾರದ ಮೇಲೆ, ಹೊಸ ಕ್ರಿಮಿನಲ್ ಕಾನೂನಿನ ‘ಭಾರತೀಯ ನ್ಯಾಯ ಸಂಹಿತೆ’ಯ ಸೆಕ್ಷನ್ 79 (ಪದ, ಹಾವಭಾವ ಅಥವಾ ಮಹಿಳೆಯ ನಮ್ರತೆಗೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಭಾನುವಾರ ದೆಹಲಿ ಪೊಲೀಸರ ವಿಶೇಷ ಕೋಶವು ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ದಾಖಲಿಸಿದೆ.
ಕಳೆದ ವರ್ಷ ‘ಪ್ರಶ್ನೆಗಾಗಿ ನಗದು’ ಗದ್ದಲದ ನಂತರ ಲೋಕಸಭೆಯಿಂದ ಅನರ್ಹಗೊಂಡಿದ್ದ ಮತ್ತು ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 56,000 ಮತಗಳ ಅಂತರದಿಂದ ಗೆದ್ದಿದ್ದ ಪಶ್ಚಿಮ ಬಂಗಾಳದ ಕೃಷ್ಣನಗರದ ಸಂಸದರು ಗುರುವಾರ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿದ್ದರು.

121 ಜನರು ಸಾವನ್ನಪ್ಪಿದ ಹತ್ರಾಸ್ ಕಾಲ್ತುಳಿತದಲ್ಲಿ ಗಾಯಗೊಂಡ ಮಹಿಳೆಯರನ್ನು ಮಹಿಳಾ ಆಯೋಗದ ಮುಖ್ಯಸ್ಥರು ಭೇಟಿಯಾದ ವೀಡಿಯೊಗಳ ಕುರಿತು ಕಮೆಂಟ್ ಮಾಡಿದ್ದರು.
ಶರ್ಮಾ ಅವರಿಗೆ ಒಬ್ಬರು ಛತ್ರಿ ಹಿಡಿದಿರುವ ವೀಡಿಯೊಗಳ ಕುರಿತು, ಮಹುವಾ ಅವರು ಎಕ್ಸ್‌ನಲ್ಲಿ “ಪೈಜಾಮಾ” ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದರು.

National Commission for Women ಇದು ವಿವಾದವನ್ನು ಹುಟ್ಟುಹಾಕಿತು; ನಂತರ ಅವರು ಪೋಸ್ಟ್ ಅನ್ನು ಅಳಿಸಿದ್ದಾರೆ ಮತ್ತು ಪೊಲೀಸರು ಅದರ ಬಗ್ಗೆ ಎಕ್ಸ್‌ನಿಂದ ವಿವರಗಳನ್ನು ಕೇಳಿದ್ದಾರೆ.

Bhadra Dam ಭದ್ರಾ ಡ್ಯಾಂ ನಿಂದ ಪೋಲಾಗುತ್ತಿದ್ದ ಅಪಾರ ಪ್ರಮಾಣದ ನೀರನ್ನ ತಡೆಗಟ್ಟಿದ ಅಧಿಕಾರಿಗಳ ಬಗ್ಗೆ ರೈತರ ಮೆಚ್ಚುಗೆ

0

Bhadra Dam ಮಧ್ಯ ಕರ್ನಾಟಕದ ಜೀವನಾಡಿಯಾದ ಭದ್ರಾ ಡ್ಯಾಮ್ ನಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಸೋರಿಕೆಯಾಗುತ್ತಿದ್ದನ್ನು ಸಂಪೂರ್ಣವಾಗಿ ತಡೆಗಟ್ಟಿದ್ದಾರೆ. ಭದ್ರ್ರಾ ಡ್ಯಾಮ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರಂತರ ಶ್ರಮದಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಐದು ದಿನಗಳಿಂದ ಬದ್ರ ಡ್ಯಾಮ್ ನ ರಿವರ್ ಸ್ಲೀವ್ಸ್ ಗೇಟ್ನಿಂದ ಸುಮಾರು ೨೫೦೦ ರಿಂದ ೩೦೦೦ ಕಿಸೆಕ್ಸ್ ನೀರು ನದಿಗೆ ಪೋಲಾಗುತ್ತಿತ್ತು. ಇದರಿಂದ ಆತಂಕಗೊಂಡ ಅಚ್ಚುಕಟ್ಟು ಪ್ರದೇಶದ ರೈತರು ಎರಡು ದಿನದ ಹಿಂದೆ ಕಾಡಾ ಅಧ್ಯಕ್ಷರ ಸಮ್ಮುಖದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಕ್ರೋಶ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದರು.

ಈ ಬಾರಿ ಕಳೆದ ವರ್ಷಕ್ಕಿಂತಲೂ ಕನಿಷ್ಠ ನೀರು ಸಂಗ್ರಹ ಇದ್ದುದರಿಂದ ರೈತರು ಪ್ರಶ್ನಿಸಿದ್ದರು ಇದಕ್ಕೆ ಉತ್ತರ ನೀಡಲಾಗದೆ ಡ್ಯಾಮ್ ನ ಇಂಜಿನಿಯರ್ ಗಳು ಅಧಿಕಾರಿಗಳು ಮಳೆಗಾಲದಲ್ಲಿ ಗೇಟ್‌ಗಳ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದರು.

ಸ್ಲೀವ್ಸ್ ಗೇಟ್ ರಿಪೇರಿ ಮಾಡುವಾಗ ಗೇಟ್ ಅನ್ನು ಮೇಲಕ್ಕೆ ಎತ್ತಿದ ಸಂದರ್ಭದಲ್ಲಿ ಮತ್ತೆ ಪುನ: ಅದನ್ನು ಸ್ಥಳಕ್ಕೆ ಸೇರಿಸಲು ಸಾಧ್ಯವಾಗದೆ ಅಧಿಕಾರಿಗಳು ಕೈ ಚೆಲ್ಲಿದ್ದರು.

Bhadra Dam ಹೀಗಾಗಿ ಡ್ಯಾಮಿನ ಹಿಂದಿನಲ್ಲಿ ಸಂಗ್ರಹವಾಗುತ್ತಿದ್ದ ನೀರು ಸಂಪೂರ್ಣವಾಗಿ ಸ್ಲೀವ್ಸ್ ಗೇಟ್ನಿಂದ ನದಿಗೆ ಸೋರಿಕೆಯಾಗುತ್ತಿತ್ತು. ಇದರಿಂದ ಆತಂಕಗೊಂಡಿದ್ದ ಅಧಿಕಾರಿಗಳು ಸ್ಲೀವ್ಸ್ ಗೇಟ್ ರಿಪೇರಿಗೆ ಮುಂದಾದರೂ ಕೂಡ ತಾಂತ್ರಿಕ ತಜ್ಞರ ಸಲಹೆ ಮತ್ತು ಕೊರತೆ ಎದ್ದು ಕಾಣುತ್ತಿತ್ತು ಇದಕ್ಕೆ ಪೂರಕ ಎಂಬಂತೆ ಅಚ್ಚುಕಟ್ಟು ಪ್ರದೇಶದ ರೈತರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.