Friday, April 10, 2026
Friday, April 10, 2026
Home Blog Page 660

Dr. K. Sudhakar ಸಂಸದ ಸುಧಾಕರ್ ಏರ್ಪಡಿಸಿದ್ದರೆಂದು ಹೇಳಲಾದ “ಎಣ್ಣೆ” ಬಾಟಲಿ ಸಮಾರಾಧನೆ ಬಗ್ಗೆ ಕಾಂಗ್ರೆಸ್ ಲೇವಡಿ

0

Dr. K. Sudhakar ನೂತನ ಬಿಜೆಪಿ ಸಂಸದ ಡಾ. ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಸಂಭ್ರಮಕ್ಕೆ ಭಾನುವಾರ (ಜು.07)ದಂದು ನೆಲಮಂಗಲದಲ್ಲಿ ‘ಬಿಜೆಪಿ-ಜೆಡಿಎಸ್’ ಬೆಂಬಲಿಗರಿಗೆ ಏರ್ಪಡಿಸಿದ್ದ ‘ಎಣ್ಣೆ ಪಾರ್ಟಿ’ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ. ‘ಸಾರ್ವಜನಿಕರಿಗೆ ಎಚ್ಚರಿಕೆ! ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಬಿಜೆಪಿ ದೇಶಕ್ಕೆ ಹಾನಿಕರ’ ಎಂದು ಕಾಲೆಳೆದಿದೆ.

Dr. K. Sudhakar ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್, “ಊಟನೂ ನಮ್ದು ಎಣ್ಣೆನೂ ನಮ್ದು ಎನ್ನುವ ಬಿಜೆಪಿ ಪಕ್ಷ
‘ಬಾರ್ ಜನತಾ ಪಾರ್ಟಿ’ ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ! ಜನಸಾಮಾನ್ಯರನ್ನು ಮದ್ಯದ ದಾಸರಾಗಲು ಪ್ರೋತ್ಸಾಹಿಸುವ ಬಿಜೆಪಿಯಿಂದ ಜನರ ಉದ್ದಾರವನ್ನು ಬಯಸುವುದು ಮೂರ್ಖತನವಾಗುತ್ತದೆ. ಧರ್ಮ, ಸಂಸ್ಕೃತಿಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿಯ ಅಸಲಿ ಸಂಸ್ಕೃತಿ ಮಹಿಳಾ ಪೀಡನೆ, ಹೆಂಡದ ಸೇವನೆ! ಸಂಸದ ಸುಧಾಕರ್ ಅವರು ಜನರಿಗೆ ಮದ್ಯದ ಬಾಟಲಿಗಳನ್ನು ಹಂಚುವ ಮೂಲಕ ಬಿಜೆಪಿಯ ನೈಜ ಸಂಸ್ಕೃತಿಯನ್ನು ಬಯಲು ಮಾಡಿದ್ದಾರೆ. ಸಾರ್ವಜನಿಕರಿಗೆ ಎಚ್ಚರಿಕೆ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಬಿಜೆಪಿ ದೇಶಕ್ಕೆ ಹಾನಿಕರ” ಎಂದು ಹೇಳಿದೆ.

Beautycare Assistant Training ಆರ್ಥಿಕವಾಗಿ ಸಬಲತೆ, ವೃತ್ತಿ ಕೌಶಲ ತರಬೇತಿಯಿಂದ ಸಾಧ್ಯ- ಡಾ.ವಾಣಿ ಕೋರಿ

Beautycare Assistant Training ವೃತ್ತಿಕೌಶಲ್ಯ ತರಬೇತಿಯಿಂದ ಯಶಸ್ಸು ಸಾಧಿಸಿ ಆತ್ಮವಿಶ್ವಾಸದಿಂದ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಿ ಎಂದು ಜನ ಶಿಕ್ಷಣ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಛೇರ್ಮನ್ ಡಾ|| ವಾಣಿ ಕೋರಿಕರೆ ನೀಡಿದರು.
ಅವರು ಸೋಮವಾರ ಜನ ಶಿಕ್ಷಣ ಸಂಸ್ಥೆಯ ದುರ್ಗಿಗುಡಿ ತರಬೇತಿ ಕೇಂದ್ರದಲ್ಲಿ “ಬ್ಯುಟೀಕೇರ್ ಅಸಿಸ್ಟೆಂಟ್ ತರಬೇತಿಯ ಉದ್ಘಾಡಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮಾತನಾಡಿ, ಆರ್ಥಿಕ ಸಬಲೀಕರಣಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಅತ್ಯಂತ ಸುಲಭ ಸಾಧನವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸ್ವಂತ ಉದ್ಯಮದೆಡೆಗೆ ಗಮನಹರಿಸಿ ಎಂದರು. ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು 4 ತಿಂಗಳ ತರಬೇತಿಯ ಪ್ರಯೋಜನ ಪಡೆದುಕೊಳ್ಳಲು ಆಗಮಿಸಿದ್ದಾರೆ.
Beautycare Assistant Training ಸ್ವಾಗತ ಹಾಗೂ ಪ್ರಾಸ್ತಾವಿಕವನ್ನು ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಎಂ.ಸುಮನಾ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಶ್ವೇತಾ ಬಿ.ಎಂ ಮತ್ತು ಕಲಿಕಾರ್ಥಿಗಳು ಭಾಗವಹಿಸಿದ್ದರು.

Red Bus ಶಿವಮೊಗ್ಗದಲ್ಲಿ ರೆಡ್ ಬಸ್ ಸ್ಥಾಪಕ ಫಣೀಂದ್ರ ಸಮಾ ಅವರಿಂದ ಲೀಡರ್ಶಿಪ್ ಕ್ಯಾಂಪ್

0

Red Bus ಜುಲೈ 13 ರಂದು ಅನ್ವೇಷಣಾ ಟಿಬಿಐ ಪಿಇಎಸ್‌ಐಟಿಎಂ ಕ್ಯಾಂಪಸ್ನಲ್ಲಿ ರೆಡ್ ಬಸ್ ಸಂಸ್ಥಾಪಕ ಫಣೀಂದ್ರ ಸಮಾ ಅವರ ೩ ನೇ ಲೀಡರ್ಶಿಪ್ ಟಾಕ್ ಅನ್ನು ಹಮಿಕೊಳ್ಳಲಾಗಿದೆ.
ಈ ಅಧಿವೇಶನವು ಸಮಾ ಅವರ ಅಸಾಧಾರಣ ಪ್ರಯಾಣದಿಂದ ಕಲಿಯಲು ಉತ್ಸುಕರಾಗಿರುವ ಉದ್ಯಮಿಗಳಿಗೆ ಸ್ಫೂರ್ತಿ ನೀಡುವ ಭರವಸೆ ನೀಡುತ್ತದೆ. ವಿಶ್ವ ಆರ್ಥಿಕ ವೇದಿಕೆಯ ಯುವ ಜಾಗತಿಕ ನಾಯಕ (ವೈಜಿಎಲ್) ಶ್ರೀ ಸಮಾ ಅವರಿಗೆ ಫಾರ್ಚೂನ್ ೪೦ ಅಂಡರ್ ೪೦ ಪ್ರಶಸ್ತಿ ಮತ್ತು ಬಿಟ್ಸಾ ೩೦ ಅಂಡರ್ ೩೦ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
Red Bus ಸಮಾ ಆನ್ಲೈನ್ ಬಸ್ ಟಿಕೆಟಿಂಗ್ ದೃಷ್ಟಿಕೋನದೊಂದಿಗೆ ರೆಡ್ಬಸ್ ಅನ್ನು ಪ್ರಾರಂಭಿಸಿದರು, ಆದಾಯದಲ್ಲಿ ೫ ಲಕ್ಷದಿಂದ ೬೯೮೫ ಕೋಟಿ ರೂಪಾಯಿಗಳಿಗೆ ಅದ್ಭುತ ಬೆಳವಣಿಗೆಯನ್ನು ಸಾಧಿಸಿ, ಜೊತೆಗೆ ಅವರು ವೆಸ್ಟ್ಬ್ರಿಡ್ಜ್ ಕ್ಯಾಪಿಟಲ್ನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತೆಲಂಗಾಣ ಸರ್ಕಾರದ ಮುಖ್ಯ ಆವಿಷ್ಕಾರ ಅಧಿಕಾರಿಯಾಗಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ರೆಡ್ಬಸ್ ನಂತರ, ಅವರು ೨೫೦ಕ್ಕೂ ಹೆಚ್ಚು ಪೂರ್ಣಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಂಡು ನಿಜಾಮಾಬಾದ್ ಮೂಲದ ಸಾಮಾಜಿಕ ಪ್ರಭಾವದ ಉದ್ಯಮವಾದ ಕಾಕತೀಯ ಸ್ಯಾಂಡ್ಬಾಕ್ಸ್ ಅನ್ನು ಸಹ-ಸ್ಥಾಪಿಸಿದರು.

Klive News ಸುದ್ದಿ ಸಾಲು

0

Klive News ವಿಶ್ವಕಪ್ ಟಿ-20 : 125 ಕೋಟಿ ರೂ ನೀಡಿದ ಬಿಸಿಸಿಐ. ಒಂದೂ ಪಂದ್ಯವಾಡದ ಮೂವರಿಗೆ ತಲಾ ೫ ಕೋಟಿ.

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ತಳ್ಳುಗಾಡಿಯವನ ಮೇಲೆ ಪೊಲೀಸ್ ಹಲ್ಲೆ ಆರೋಪ. ಕೆಲಹೊತ್ತು ಪೊಲೀಸರೊಂದಿಗೆ ವಾಗ್ವಾದ. ಎಸ್ ಪಿ ಭೇಟಿ. ಪರಿಶೀಲನೆ.

ಹಾವೇರಿಯಲ್ಲಿ ಡೆಂಗ್ಯು ಅಬ್ಬರ: ಸರಕಾರಿ ಆಸ್ಪತ್ರೆಯಲ್ಲಿ ಜಾಗ ಇಲ್ಲದೆ ಕಾರಿಡಾರ್ ನಲ್ಲಿ ಬೆಡ್ ಹಾಕಿ ಚಿಕಿತ್ಸೆ.

ಮುಂಬೈ ನಲ್ಲಿ ಮಳೆಯಿಂದ ಅಲ್ಲೋಲಕಲ್ಲೋಲ, ಅಂಡರ್ ಪಾಸ್, ರಸ್ತೆಗಳೆಲ್ಲ ನದಿ. ಅಂಧೇರಿ ಸಂಪೂರ್ಣ ಜಲಾವೃತ.

ಉತ್ತರ ಕನ್ನಡದಲ್ಲಿ ಮುಂದುವರೆದ ಮಳೆ: ಹೊನ್ನಾವರ ತಾಲೂಕಿನ ಉಕ್ಕೇರಿದ ನದಿಗಳು. ಅಡಿಕೆ ತೋಟಕ್ಕೆ ಭಾರೀ ಹಾನಿ

ಉತ್ತರ ಕನ್ನಡ ದಲ್ಲಿ ಇಂದೂ ಸಹ ಶಾಲೆ- ಕಾಲೇಜುಗಳಿಗೆ ರಜೆ .

Klive News ಮುದ್ದೇನಹಳ್ಳಿಯ ಸತ್ಯಸಾಯಿ ವಿವಿ ನೀಡಲುದ್ದೇಶಿಸಿದ್ದ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ!! ಪ್ರಭಾಕರ ಭಟ್ಟ.

ಲೈಂಗಿಕ ಸೇವೆ ನೆಪದಲ್ಲಿ ಗ್ರಾಹಕರಿಂದ ಹಣ ಪಡೆದು ವಂಚನೆ: ಹಾಸನದ 8 ಜನರು ಸೆರೆ

Bus Accident ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಮಾರ್ಗ ಮಧ್ಯೆ ಸಾಗುತ್ತಿದ್ದ ವಾಹನ ಸವಾರರಿಂದ ನೆರವು-ರಕ್ಷಣೆ

0

Bus Accident ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕರೆಂಟ್‌ ವಯರ್‌ ಬಸ್‌ ಮೇಲೆ ಬಿದ್ದು, ಹಲವರಿಗೆ ಗಾಯಗಳಾದ ಘಟನೆ ಕಳೆದ ರಾತ್ರಿ ಇಲ್ಲಿ ಸಂಭವಿಸಿದೆ.

ತಕ್ಷಣವೇ ಅಲ್ಲಿದ್ದವರು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಕಟ್‌ ಮಾಡಿಸಿದ ಪರಿಣಾಮ ಯಾರಿಗೂ ಅಪಾಯವಾಗಿಲ್ಲ.
ಆಕಸ್ಮಾತ್‌ ಆಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಿಳ್ಳಂಗೆರೆ ಕ್ರಾಸ್‌ ಬಳಿಯಲ್ಲಿ ಒಮಿನಿ ಕಾರಿಗೆ ಡಿಕ್ಕಿಯಾಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ವಿದ್ಯುತ್‌ ವಯರ್‌ ಬಸ್‌ ಮೇಲೆ ಬಿದ್ದಿತ್ತು. ತಂತಿಯಲ್ಲಿ ಇನ್ನೂ ವಿದ್ಯುತ್‌ ಪ್ರವಹಿಸುತ್ತಿತ್ತು.
ಪ್ರಯಾಣಿಕರ ರಕ್ಷಣೆ :
ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ವೆಹಿಕಲ್‌ಗಳ ಸವಾರರು ತಮ್ಮ ವಾಹನ ನಿಲ್ಲಿಸಿ ರಕ್ಷಣೆಗೆ ದೌಡಾಯಿಸಿದ್ದಾರೆ.

Bus Accident ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಹರಿವಿಕೆಯನ್ನ ನಿಲ್ಲಿಸಿದ್ದಾರೆ. ಆ ಬಳಿಕ ಬಸ್‌ನಿಂದ ಪ್ರಯಾಣಿಕರನ್ನು ಹೊರಕ್ಕೆ ಕರೆತಂದಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯ ಗ್ರಾಮಸ್ಥರು ಪ್ರಯಾಣಿಕರಿಗೆ ಪ್ರಾಥಮಿಕ ಚಿಕಿತ್ಸೆ ನೆರವಾಗಿ ಆಂಬುಲೆನ್ಸ್‌ ಕರೆಸಿ, ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಚಾಲಕನಿಗೆ ಗಂಭಿರ ಗಾಯವಾಗಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.

Geeta Shivaraj Kumar ಎಮ್ಮೆಹಟ್ಟಿಯಲ್ಲಿನ ಮೃತರ ಕುಟುಂಬಕ್ಕೆ ಗೀತಾ ಶಿವರಾಜ್ ಕುಮಾರ್ ಸಾಂತ್ವನ ಹೇಳಿ, ₹ 13 ಲಕ್ಷ ನೆರವು

0

Geeta Shivaraj Kumar ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಜೂನ್ 28 ರಂದು ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ 13 ಜನರು ಮೃತಪಟ್ಟಿದ್ದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್

ಚಿತ್ರ ನಟ ಶಿವರಾಜ್ ಕುಮಾರ್ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದ ಜೊತೆ ಮಾತನಾಡಿದರು.

ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಗೀತಾ ಶಿವರಾಜ್ ಕುಮಾರ್ ಅವರು ಮೃತರ ಕುಟುಂಬಕ್ಕೆ 13 ಲಕ್ಷ ರೂಪಾಯಿ ‌ವೈಯಕ್ತಿಕ ನೆರವು ನೀಡಿದರು.

ಮೃತರ ‌ಕುಟುಂಬದವರಿಗೆ ತಲಾ 1 ಲಕ್ಷ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1.50 ಲಕ್ಷ ನೆರವು ನೀಡಿದರು.

Geeta Shivaraj Kumar ಘಟನೆಯಲ್ಲಿ ಗಾಯಗೊಂಡ ಅರ್ಪಿತಾಗೆ ನೆರವು ನೀಡುವುದಾಗಿ ಭರವಸೆ ನೀಡಿದ ರು.
ಈ ಸಂದರ್ಭದಲ್ಲಿ
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಸೇರಿದಂತೆ ಹಲವರ‌ ಉಪಸ್ಥಿತಿತರಿದ್ದರು.

Karnataka Sugama Sangeeta Parishad ಗಾಯನ ಕಲಾವಿದರಿಗೆ ಅಪೂರ್ವ ಅವಕಾಶ. “ಎಚ್ ಎಸ್ ವಿ ” ರಚಿತ ಗೀತಗಾಯನ ಸ್ಪರ್ಧೆ

0

Karnataka Sugam Sangeet Parishad ಕರ್ನಾಟಕ ಸುಗಮ ಸಂಗೀತ ಪರಿಷತ್ತು. ಜಿಲ್ಲಾ ಘಟಕ ಶಿವಮೊಗ್ಗ ಇವರ ವತಿಯಿಂದ ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶಮೂರ್ತಿಯವರ. ಗೀತೆಗಳ ಸ್ಪರ್ಧೆಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಗಾಯಕರಿಗಾಗಿ ಏರ್ಪಡಿಸಲಾಗಿದೆ ವಯೋಮಿತಿ 18 ವರ್ಷದ ಮೇಲ್ಪಟ್ಟವರಿಗೆ ಹಾಡಲಿಚ್ಚಿಸುವವರು ದಿನಾಂಕ 13 -7-2024 ರ ಸಂಜೆ ಒಳಗೆ ತಮ್ಮ ಹೆಸರನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ಹಾಗು ಗೀತೆ ಮತ್ತು ಪಲ್ಲವಿ.ತಿಳಿಸಿ ನೊಂದಾಯಿಸಲು ಕೋರಲಾಗಿದೆ ದೂರವಾಣಿ ಸಂಖ್ಯೆ9945150204/ 9972002280/7483514159. ಸ್ಪರ್ಧೆ ನಡೆಯುವ ದಿನಾಂಕ 14 7 2024 ಭಾನುವಾರ. ಮಧ್ಯಾಹ್ನ 3:00ಗೆ ಮಥುರಾ ಪ್ಯಾರಡೈಸ್ ನ ಸಭಾಂಗಣದಲ್ಲಿ. ಗಾಂಧಿ ಪಾರ್ಕ್ ಎದುರು ಶಿವಮೊಗ್ಗ

Keir Starmer  ಯುಕೆ ನಿಯೋಜಿತ ಪ್ರಧಾನಿ ಸ್ಟಾರ್ಮರ್ ಗೆ ರಾಹುಲ್ ಪತ್ರ ಮೂಲಕ ಅಭಿನಂದನೆ

0

Keir Starmer  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಪ್ರಚಂಡ ಗೆಲುವಿಗೆ ಅಭಿನಂದಿಸಿ ಪತ್ರ ಬರೆದಿದ್ದಾರೆ.

ಮತ್ತೊಂದು ಪತ್ರದಲ್ಲಿ, ಕಾಂಗ್ರೆಸ್ ಸಂಸದರು ಶನಿವಾರ ಯುಕೆಯ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರಿಗೆ ಪಕ್ಷದ ಚುನಾವಣಾ ಸೋಲಿನ ಬಗ್ಗೆ ವಿಶ್ಲೇಷಿಸಿದ್ದಾರೆ. “ಗೆಲುವುಗಳು ಮತ್ತು ಹಿನ್ನಡೆಗಳು ಪ್ರಜಾಪ್ರಭುತ್ವದ ಅನಿವಾರ್ಯ ಭಾಗವಾಗಿದೆ ಮತ್ತು “ನಾವು ಎರಡನ್ನೂ ನಮ್ಮ ಹೆಜ್ಜೆಯಲ್ಲಿ ತೆಗೆದುಕೊಳ್ಳಬೇಕು” ಎಂದು ತಿಳಿಸಿದ್ದಾರೆ.

Keir Starmer  ಕೀರ್ ಸ್ಟಾರ್ಮರ್‌ಗೆ ಬರೆದ ಪತ್ರದಲ್ಲಿ, ರಾಹುಲ್ ಗಾಂಧಿಯವರು ಲೇಬರ್ ಪಾರ್ಟಿಯು ಸಮಾನತೆಯೊಂದಿಗೆ ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವುದು, ಬಲವಾದ ಸಾಮಾಜಿಕ ಸೇವೆಗಳ ಮೂಲಕ ಎಲ್ಲರಿಗೂ ಉತ್ತಮ ಅವಕಾಶಗಳು ಮತ್ತು ಸಮುದಾಯದ ಸಬಲೀಕರಣವು ಯುಕೆ ಜನರೊಂದಿಗೆ ತಕ್ಕನಾಗಿ ಸ್ಪಂದಿಸಲಿ ಎಂದು ತಿಳಿಸಿದ್ದಾರೆ.

Rotary Organization ರೋಟರಿ ಸಂಸ್ಥೆಯ ಎಲ್ಲರೂ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು- ಕೆ.ಫಾಲಾಕ್ಷಪ್ಪ

0

Rotary Organization ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಪಲ್ಸ್ ಪೊಲಿಯೋ ನಿರ್ಮೂಲನೆಯಲ್ಲಿ ಮಹತ್ತರ ಪಾತ್ರ ವಹಿಸಿತ್ತು ಎಂದು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷಪ್ಪ ಹೇಳಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏರ್ಪಡಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ 2024-25ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆಯು ಪ್ರಸ್ತುತ ವರ್ಷದಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಪ್ರಮುಖವಾಗಿ ರಸ್ತೆ ಸುರಕ್ಷತೆ, ಆರೋಗ್ಯ ಸ್ವಚ್ಛತೆ, ಶಿಕ್ಷಣ, ಪರಿಸರ ಹಾಗೂ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿಶೇಷ ಅಭಿಯಾನಗಳನ್ನು ನಡೆಸಲಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಸಮಾಜಮುಖಿಯಾಗಿ ತೊಡಗಿಸಿಕೊಂಡು ಸೇವಾ ಕಾರ್ಯಗಳನ್ನು ನಡೆಸಬೇಕು. ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.
ವಲಯ 11ರ ರೋಟರಿ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್, ನೂತನ ಪದಾಧಿಕಾರಿಗಳು ವರ್ಷಪೂರ್ತಿ ರೋಟರಿ ಸೇವಾ ಆಶಯದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಬೇಕು. ರೋಟರಿ ಜಿಲ್ಲಾ ಗವರ್ನರ್ ದೇವಾನಂದ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಜೋನಲ್ ಲೆಫ್ಟಿನೆಂಟ್ ಮಂಜುನಾಥ್ ರಾವ್ ಕದಂ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಂಸ್ಥೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವಲ್ಲಿ ನಿಮ್ಮೆಲ್ಲರ ಜೊತೆ ಸದಾ ನಾವಿರುತ್ತೇವೆ ಎಂದು ತಿಳಿಸಿದರು.
2024-25ನೇ ಸಾಲಿನ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷರಾಗಿ ಅರುಣ್ ದೀಕ್ಷಿತ್ ಹಾಗೂ ಕಾರ್ಯದರ್ಶಿಯಾಗಿ ಶಶಿಕಾಂತ್ ನಾಡಿಗ್ ಅಧಿಕಾರ ವಹಿಸಿಕೊಂಡರು.
Rotary Organization 2023-24ನೇ ಸಾಲಿನ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಡಿ.ಕಿಶೋರ್‌ಕುಮಾರ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಎನ್.ಎಚ್.ಶ್ರೀಕಾಂತ್, ಕಡಿದಾಳ್ ಗೋಪಾಲ್, ಎ.ಒ.ಮಹೇಶ್, ಡಾ. ಗುಡದಪ್ಪ ಕಸಬಿ ಹಾಗೂ 2024-25ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರು ಮತ್ತು ರೋಟರಿ, ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.

B.Y.Raghavendra ಶಿವಮೊಗ್ಗದಲ್ಲಿ ಸ್ಕೇಟಿಂಗ್ ಕ್ರೀಡಾಂಗಣ ನಿರ್ಮಾಣಕ್ಕೆ ‘ಅಸ್ತು’ ಎಂದ ಸಂಸದ ರಾಘವೇಂದ್ರ

0

B.Y. Raghavendra ಶಿವಮೊಗ್ಗ ನಗರದಲ್ಲಿ ವ್ಯವಸ್ಥಿತವಾದ ಸ್ಕೇಟಿಂಗ್ ಕ್ರೀಡಾಂಗಣ ಇಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯನ್ನು ನಡೆಸಲು ಕನಿಷ್ಠ 200 ಮೀಟರ್ ವಿಸ್ತೀರ್ಣದ ಅತ್ಯಂತ ವ್ಯವಸ್ಥಿತ ಸ್ಕೇಟಿಂಗ್ ಕ್ರೀಡಾಂಗಣ ಅಗತ್ಯ ಎಂದು ಕೇಳಿದ ಬೇಡಿಕೆಗೆ ಆ ಕ್ಷಣದಲ್ಲೇ ಸಂಸದ ಬಿ.ವೈ. ರಾಘವೇಂದ್ರ ಅಸ್ತು ಎಂದರು.
ಇಂದು ಶಿವಮೊಗ್ಗ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಶಿವಮೊಗ್ಗದ ನಮ್ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ರೋಡ್ ರೇಸ್ ಸ್ಕೇಟಿಂಗ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ನಾಲ್ಕನೇ ಬಾರಿ ಶಿವಮೊಗ್ಗ ಜಿಲ್ಲೆಯ ಜನತೆ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶ. ನಾನು ನಾಲ್ಕನೇ ಬಾರಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದ ಈಗಾಗಲೇ ರಸ್ತೆ, ರೈಲು, ವಿಮಾನ, ಶಿಕ್ಷಣ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಈಗ ಕ್ರೀಡಾ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ಅತ್ಯಂತ ವ್ಯವಸ್ಥಿತವಾದ ಕ್ರೀಡಾಂಗಣವನ್ನು ಮಾಡಿಸಿ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಡಿಎಸ್ ಅರುಣ್ ಅವರು ಸದ್ಯದಲ್ಲೇ ನಡೆಯಲಿರುವ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಜಾಗದ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಚರ್ಚಿಸಲಿದ್ದಾರೆ. ನಾನು ಕೇಂದ್ರ ಸರ್ಕಾರದಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಅನುದಾನವನ್ನು ತರುತ್ತೇನೆ. ನನಗೆ ಈ ಬಗ್ಗೆ ವಿಶ್ವಾಸವಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ಬಗೆಯ ಅಭಿವೃದ್ಧಿಗಳಿಗೆ ನಾನು ಸದಾ ಸಕ್ರಿಯನಾಗಿರುತ್ತೇನೆ ಎಂದರು.
ಕ್ರೀಡೆ ಅತ್ಯಂತ ಅಗತ್ಯದ ಚಟುವಟಿಕೆ. ಇದರಿಂದ ಮಾನಸಿಕ ನೆಮ್ಮದಿಯ ಜೊತೆ ಮಕ್ಕಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ ಇಂದಿನ ಪೋಷಕರು ಮಕ್ಕಳನ್ನು ಇಂತಹ ವಾತಾವರಣದಲ್ಲಿ ಕ್ರೀಡಾ ಆಸಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವುದು ಸಂತೋಷದ ವಿಷಯ ಎಂದರು ಈಗಾಗಲೇ ಭೂ ಸಾರಿಗೆ ರೈಲ್ವೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶಿವಮೊಗ್ಗಕ್ಕೆ ಅಗತ್ಯವಿರುವಂತಹ ಎಲ್ಲಾ ಸೌಕರ್ಯಗಳನ್ನು ಪಡೆಯಲು ಮಾತನಾಡಿದ್ದೇನೆ. ಇಂದಿನಿಂದಲೇ ಅತ್ಯಂತ ಸುಸಜ್ಜಿತವಾದ ಸ್ಕೇಟಿಂಗ್ ಅಂಕಣವನ್ನು ನಿರ್ಮಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಅವರು ಮಾತನಾಡುತ್ತಾ ಸಂಸದರು ತಮ್ಮ ಕೋರಿಕೆಯನ್ನು ಖಂಡಿತ ಈಡೇರಿಸುತ್ತಾರೆ. ಏನು ಇಲ್ಲದ ಶಿವಮೊಗ್ಗ ಇಂದು ಇಡೀ ದೇಶದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಮೊದಲು ಕೇವಲ ನಾಲ್ಕು ರೈಲುಗಳು ಶಿವಮೊಗ್ಗಕ್ಕೆ ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 38ಕ್ಕೆ ಏರಿದೆ. ವಿಮಾನ ನಿಲ್ದಾಣ ಆಗಿದೆ ಶಿವಮೊಗ್ಗಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
B.Y. Raghavendra ನಾನು ನಾಳೆ ನಡೆಯಲಿರುವ ಸೂಡ ಸಭೆಯಲ್ಲಿ ವಾಜಪೇಯಿ ಬಡಾವಣೆಯಲ್ಲಿನ ಅತ್ಯಂತ ವ್ಯವಸ್ಥಿತವಾದ 200 ಮೀ ಅಳತೆಯ ಸ್ಕೇಟಿಂಗ್ ಟ್ರ್ಯಾಕ್ ನಿರ್ಮಿಸಲು ಜಾಗವನ್ನು ಪಡೆಯುವ ಬಗ್ಗೆ ಮಾತನಾಡುತ್ತೇನೆ. ರಾಘಣ್ಣ ಕೇಂದ್ರ ಸರ್ಕಾರದಿಂದ ಸುಂದರ ಅಂಕಣವನ್ನು ನಿರ್ಮಿಸಲು ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಇಂದೂಧರ್ ಸೀತಾರಾಮ ಅವರು ಮಾತನಾಡುತ್ತಾ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಈಗಾಗಲೇ ಕ್ರೀಡಾಪಟುಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ರಾಜ್ಯಮಟ್ಟದ ಅತ್ಯಂತ ವ್ಯವಸ್ಥಿತವಾದ ಪಂದ್ಯಾವಳಿ ಇದಾಗಿದೆ. ಶಿವಮೊಗ್ಗದಲ್ಲಿ ವ್ಯವಸ್ಥಿತವಾದ ಕ್ರೀಡಾಂಗಣ ಒಂದನ್ನು ನಿರ್ಮಿಸಲು ಮಾನ್ಯ ಸಂಸದರು ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ನಮ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್ ಪ್ರಧಾನ ಕಾರ್ಯದರ್ಶಿ ಎಂ ರವಿ ಹಾಗೂ ಕರ್ನಾಟಕ ರಾಜ್ಯ ರೋರಲ್ ಕೇಟಿಂಗ್ ಅಸೋಸಿಯೇಷನ್ ಪ್ರಮುಖರು ಮತ್ತು ಅಂತರಾಷ್ಟ್ರೀಯ ಮಟ್ಟದ ತರಬೇತಿ ಪಡೆದ ಅಂಪೈರ್ ಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಸ್ಕೇಟಿಂಗ್ ಪಟುಗಳನ್ನು ಸನ್ಮಾನಿಸಲಾಯಿತು. ವಕೀಲ ಪ್ರವೀಣ್ ಅವರು ಸ್ವಾಗತಿಸಿದರು ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.