Friday, April 10, 2026
Friday, April 10, 2026
Home Blog Page 659

Bharat Scouts and Guides ವಿದ್ಯಾರ್ಥಿಗಳು ಶ್ರದ್ಧೆ& ಆಸಕ್ತಿಯಿಂದ‌ ಕಲಿತರೆ ರಾಜ್ಯ ಪುರಸ್ಕಾರ ಸಾರ್ಥಕ- ಕೆ.ಪಿ. ಬಿಂದು ಕುಮಾರ್

0

Bharat Scouts and Guides ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಸ್ಕೌಟ್ಸ್ ಭವನದಲ್ಲಿ ಆಯೋಜಿಸಲಾಗಿದ್ದ 3 ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ,ರೋವರ್ಸ್, ರೇಂಜರ್ ವಿಭಾಗದ ರಾಜ್ಯ ಪುರಸ್ಕಾರ ಪೂರ್ವಸಿದ್ಧತಾ ಶಿಬಿರ ಸಂಪನ್ನ ಗೊಂಡಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿ,ವಿದ್ಯಾರ್ತಿನಿಯರು ಈ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ತರಬೇತಿಯ ಜೊತೆಗೆ ಜೀವನದ ಕಲೆಗಳನ್ನು ಕಲಿತು, ಸಂತೋಷಗೊಂಡರು ಇದೆ ಸಂಧರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ. ಕೆ.ಪಿ.ಬಿಂದುಕುಮಾರ್ ಅವರು ಅಧ್ಯಕ್ಷತೆ ವಹಿಸಿಮಾತನಾಡುತ್ತಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ರಾಜ್ಯಪುರಸ್ಕಾರ ವು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಆಸಕ್ತಿಯಿಂದ ಕಲಿತರೆ ಸುಲಭವಾಗಿ ರಾಜ್ಯಪುರಸ್ಕಾರವು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶ್ರಧ್ಧೆಹಾಗೂ ಆಸಕ್ತಿಯಿಂದ ಕಲಿತರೆ ಸುಲಭವಾಗಿ ರಾಜ್ಯಪುರಸ್ಕಾರ ಪಡೆದು ಮುಂದೆ ರಾಷ್ಟ್ರಮಟ್ಟಕ್ಕೆ ತಲುಪಬಹುದು, ಇದು ಅವರ ಸಾಧನೆಯ ಪ್ರಾರಂಭ ಹಂತವಾಗಿದೆ ಎಂದು ನುಡಿದರು.

ಇದೆ ಸಂಧರ್ಭದಲ್ಲಿ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರ ಶೇಖರ್ ಅವರು ಮಾತನಾಡುತ್ತಾ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಶಿಬಿರಗಳು ಮಕ್ಕಳಲ್ಲಿ ಸ್ವಾವಲಂಬನೆಯನ್ನು ಬೆಳೆಸಿ ಸ್ವತಂತ್ರ ಜೀವನ ನಡೆಸಲು ಪ್ರೇರೇಪಿಸುತ್ತವೆ ಎಂದು ಹೇಳುತ್ತಾ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿದರು.

ಕೇಂದ್ರ ಸ್ಥಾನಿಕ ಆಯುಕ್ತರಾದ ಕೆ.ರವಿಯವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಈ ರಾಜ್ಯಪುರಸ್ಕಾರ ಉತ್ತಮ ಅವಕಾಶ ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನುಡಿದರು. ಮತ್ತೋರ್ವ ಕೇಂದ್ರ ಸ್ಥನಿಕ ಆಯುಕ್ತ ಶ್ರೀ.ವಿಜಯುಮಾರ್ ಅವರು ಮಾತನಾಡಿ ನಮ್ಮ ಜಿಲ್ಲಾ ಕೇಂದ್ರದಲ್ಲಿ ಉತ್ತಮ ತರಬೇತಿ ನೀಡುವ ತಂಡ ಇದ್ದು ಇಲ್ಲಿ ತರಬೇತಿ ಪಡೆದ ಮಕ್ಕಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಎಲ್ಲಾ ಮಕ್ಕಳಿಗೂ ಶುಭಾಷಯಗಳನ್ನು ತಿಳಿಸಿದರು.

Bharat Scouts and Guides ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ. ರಾಜೇಶ್ಅವಲಕ್ಕಿ, ನಿರೂಪಿಸಿದರು ಮಕ್ಕಳಿಗೆ ಅನೇಕ ಸ್ಕೌಟ್ಸ್ ಮತ್ತು ಗೈಡ್ಸ್ ನ ನೀತಿನಿಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಶ್ರೀ ಹೆಚ್.ಪರಮೇಶ್ವರ್ , ಖಜಾಂಚಿ ಶ್ರೀ. ಚೂಡಾಮಣಿಪವಾರ್, ಜಂಟಿಕಾರ್ಯದರ್ಶಿ ಶ್ರೀಮತಿ.ಲಕ್ಷ್ಮಿ ಕೆ ರವಿ,ತರಬೇತಿ ತಂಡದ ಆಯುಕ್ತರಾದ ಶ್ರೀ ಹೆಚ್. ಶಿವಶಂಕರ್ ಶ್ರೀ. ಚಂದ್ರ ಶೇಖರಯ್ಯ, ಶ್ರೀ.ಮಲ್ಲಿಕಾರ್ಜುನ ಕಾಣೂರ್, ಶ್ರೀ,ಪರಮೇಶ್ವರಯ್ಯ, ಶ್ರೀ. ಪುಟ್ಡಪ್ಪ ಗೌಳೇರ್ ಶ್ರೀ, ವಿನಯ ಭೂಷಣ್,ತರಬೇತಿ ತಂಡದ ನಾಯಕಿಯರಾದ ಶ್ರೀಮತಿ ಶಾಂತಮ್ಮ, ಶ್ರೀಮತಿ ಗೀತಾ ಚಿಕ್ಮಠ್, ಶ್ರೀಮತಿ ನಾಗಪ್ರಿಯ, ತರಬೇತಿ ತಂಡದ ಸಹನಾಯಕಿರು, ಮುಂತಾದ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕ,ಶಿಕ್ಷಕಿಯರಯ ಭಾಗವಹಿಸಿದ್ದರು.

Gopalakrishna Belur ಶರಾವತಿ ಹಿನ್ನೀರು ಪ್ರದೇಶದ ಜನತೆ ಆಶೋತ್ತರಗಳ ಬಗ್ಗೆ ಗಮನ ಹರಿಸಲು ಆಧಿಕಾರಿಗಳಿಗೆ ಆಗ್ರಹಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

0

Gopalakrishna Belur ಶರಾವತಿ ಹಿನ್ನೀರು ಪ್ರದೇಶದ ಜನರು ಕತ್ತಲಿನಲ್ಲಿ ಇರಬಾರದು. ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಹಿನ್ನೀರಿನ ಜನರಿಗೆ ದಿನದ ೨೪ ಗಂಟೆ ವಿದ್ಯುತ್ ಕೊಡುವುದು ನಮ್ಮ ಕರ್ತವ್ಯ. ಮೆಸ್ಕಾಂ ಅಧಿಕಾರಿಗಳು ತುಮರಿ ಸೇರಿದಂತೆ ಶರಾವತಿ ಹಿನ್ನೀರು ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಬೆಳಕಿನಲ್ಲಿದ್ದು ಹಿನ್ನೀರಿನ ಜನರು ಕತ್ತಲಿನಲ್ಲಿರುವುದು ಎಂತಹ ನ್ಯಾಯ. ಅವರ ಸಮಸ್ಯೆಗೆ ಸ್ಪಂದಿಸಿ ಎಂದು ಸೂಚನೆ ನೀಡಿದರು.
Gopalakrishna Belur ಮಳೆಗಾಲ ಪ್ರಾರಂಭವಾಗಿದ್ದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೆಚ್ಚು ಜಾಗೃತೆಯಿಂದ ಕೆಲಸ ಮಾಡಬೇಕು. ರೈತರ ಯಾವುದೇ ದೂರುಗಳು ನನ್ನತನಕ ಬರಬಾರದು. ಸೊಸೈಟಿ ಮೂಲಕ ಗೊಬ್ಬರವನ್ನು ರೈತರಿಗೆ ಕೊಡಲು ಈಗಾಗಲೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಬೆಳೆವಿಮೆ ಬಗ್ಗೆ ರೈತರಿಗೆ ಮಾಹಿತಿ ನೀಡಿ ಹೆಚ್ಚು ರೈತರು ವಿಮೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸಿ. ಮಣ್ಣು ಪರೀಕ್ಷೆಯನ್ನು ಕಾಲಕಾಲಕ್ಕೆ ನಡೆಸಿ ರೈತರು ಉತ್ತಮ ಫಸಲು ತೆಗೆಯಲು ನೆರವಾಗಿ ಎಂದು ಸೂಚಿಸಿದ ಬೇಳೂರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೂರಾರು ಕೋಟಿ ಖರ್ಚು ಮಾಡಿದೆ. ನಿಗಧಿತ ಅವಧಿಯಲ್ಲಿ ಗ್ರಾಮಗಳಿಗೆ ನೀರು ಹರಿಸಬೇಕು. ಮುಂದಿನ ಏಪ್ರಿಲ್‌ನೊಳಗೆ ಆವಿನಹಳ್ಳಿ, ಭಾರಂಗಿ ಮತ್ತು ಕಸಬಾ ಹೋಬಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ ಎಂದರು.

MESCOM ಮೆಸ್ಕಾಂ ನ ಗುಡ್ ಲಕ್ ಸರ್ಕಲ್ ಬಳಿಯ ಕಚೇರಿಯಲ್ಲಿ ಜುಲೈ11 ರಂದು ಜನ ಸಂಪರ್ಕ ಸಭೆ

0

MESCOM ಶಿವಮೊಗ್ಗ ನಗರ ಉಪವಿಭಾಗ -3, ಸಹಾಯಕ ಕಾರ್ಯನಿರ್ವಾಯಕ ಇಂಜಿನಿಯರ್ ಕಚೇರಿ, ಗುಡ್‍ಲಕ್ ಸರ್ಕಲ್ ಹತ್ತಿರ, ಎಸ್.ವಿ.ಬಡಾವಣೆ, ಮೆಸ್ಕಾಂ ಕಚೇರಿಯಲ್ಲಿ ದಿ: 11.07.2024ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದೆ.
MESCOM ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.;08182-251556 ನ್ನು ಸಂಪರ್ಕಿಸುವುದು.

Shikaripur Police ಅಪರಿಚಿತ ಮೃತ ವ್ಯಕ್ತಿಯ ಪತ್ತೆಗೆ ಶಿಕಾರಿಪುರ ಪೊಲೀಸ್ ಪ್ರಕಟಣೆ

0

Shikaripur Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಾಮಾ ಕ್ರಾಸ್‍ನಿಂದ ಸಾಲೂರು ಗ್ರಾಮದ ಮಧ್ಯದ ರಸ್ತೆಯಲ್ಲಿ ಅಪಘಾತದಲ್ಲಿ ಸುಮಾರು ಪರಮೇಶ್ವರಪ್ಪ ಎಂಬ ಸುಮಾರು 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಅಪಘಾತ ಮಾಡಿದ ವಾಹನವು ಪತ್ತೆಯಾಗಿರುವುದಿಲ್ಲ. ಈ ಮೃತ ವ್ಯಕ್ತಿಯ ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈತನ ಚಹರೆ ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ತ್ರಿಶೂಲದ ಚಿಹ್ನೆ ಇರುವ ಹಿತ್ತಾಳೆಯ ಖಡಗ ಇರುತ್ತದೆ. ಮೈಮೇಲೆ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಬಿಳಿ ಬಣ್ಣದ ಕಂದು ಗೆರೆಗಳಿರುವ ಶರ್ಟ್, ಬಿಳಿ ಪಂಚೆ ಧರಿಸಿರುತ್ತಾರೆ.
Shikaripur Police ಈ ಮೃತ ವ್ಯಕ್ತಿಯ ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ತಿಳಿದಲ್ಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ – 9480803366/ 08187-223430 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Power Outage ಜುಲೈ 10 ರಂದು ಆಲ್ಕೊಳ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Outage ಆಲ್ಕೋಳ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಎಎಫ್-12ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಆಲ್ಕೊಳ ನಂದಿನಿ ಬಡಾವಣೆ, ವಿಕಾಸ ಶಾಲೆಯ ಹತ್ತಿರ, ಕನಕ ಲೇಔಟ್, ಸಿದ್ಧಗಂಗಾ ಬಡಾವಣೆ, ಜೆ.ಹೆಚ್.ಪಟೇಲ್ ಬಡಾವಣೆ, ಎ ಹಿಂದ ಎಫ್ ಬ್ಲಾಕ್, ಸಹಕಾರಿ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿಕೊಪ್ಪ, ಆದರ್ಶನಗರ, ಭೋವಿ Power Outage ಕಾಲೋನಿ, ವಿಜಯಲಕ್ಷ್ಮಿ ಲೇಔಟ್, ಸಹ್ಯಾದ್ರಿನಗರ, ಕೊಪ್ಪ, ಪಶುವೈದ್ಯಕೀಯ ಕಾಲೇಜ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜು. 10 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

NRI Policy of – Karnataka ಜುಲೈ 12 ರಂದು ಶಿವಮೊಗ್ಗದಲ್ಲಿ ಅನಿವಾಸಿ ಕನ್ನಡಿಗರ ಕುಟುಂಬದ ಅಹವಾಲು & ದೂರು ಸ್ವೀಕಾರ ಸಭೆ

0

NRI Policy of – Karnataka ಜುಲೈ 12 ರಂದು ಮಧ್ಯಾಹ್ನ 12.00ಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರು ಜಿಲ್ಲೆಯ ಎಲ್ಲಾ ತಾಲೂಕುಗಳ ಅನಿವಾಸಿ ಕನ್ನಡಿಗರು ಹಾಗೂ ಕುಟುಂಬದವರ ಅಹವಾಲು ಹಾಗೂ ದೂರುಗಳನ್ನು ಸ್ವೀಕರಿಸಿ ಪರಿಶೀಲಿಸುತ್ತಿದ್ದು, ಜಿಲ್ಲೆಯ ಅನಿವಾಸಿ ಕನ್ನಡಿಗರು ಇದರ ಸದುಪಯೋಗ ಪಡೆದುಕೊಂಡು, ತಮ್ಮ ಅಹವಾಲು/ದೂರುಗಳನ್ನು ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Veterinary College Shivamogga ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿಗೆ ವಿವಿಧ ವಿಭಾಗಗಳಲ್ಲಿ ಗುತ್ತಿಗೆ ಆಧಾರದ‌ ಮೇಲೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಜಿ ಆಹ್ವಾನ

0

Veterinary College Shivamogga ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇಲ್ಲಿ ಜುಲೈ 15 ರಂದು ಬೆಳಗ್ಗೆ 11 ಗಂಟೆಯಿಂದ ನೇರ ಸಂದರ್ಶನ ನಡೆಸಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಖಾಲಿಯಿರುವ ಪ್ರಾಣಿ ಆಹಾರ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಔಷಧ ಹಾಗೂ ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗ (ಪ್ರಾಣಿ ಅನುವಂಶೀಯತೆ ಮತ್ತು ತಳಿಶಾಸ್ತ್ರ), ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
Veterinary College Shivamogga ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದ್ದು, ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ. 56,700/- ಮತ್ತು ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000/- ವೇತನ ಪಾವತಿಸಲಾಗುವುದು ಎಂದು ಡೀನ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-200872 ಅಥವಾ ವೆಬ್‍ಸೈಟ್ www.kvafsu.edu.in ನ್ನು ಸಂಪರ್ಕಿಸುವುದು.

Chamber Of Commerce Shivamogga “ಕಾಸಿಯ” ನಿರ್ದೇಶಕರಾಗಿ ಆಯ್ಕೆಯಾಗಿರುವ ಎಂ.ಎ.ರಮೇಶ್ ಹೆಗಡೆಗೆ ಸನ್ಮಾನ

0

Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ರಿ) ಬೆಂಗಳೂರು (ಕಾಸಿಯಾ) ನೂತನವಾಗಿ ಕಾಸಿಯಾ ಕೌನ್ಸಿಲ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಶ್ರೀ ಎಂ.ಎ ರಮೇಶ್ ಹೆಗಡೆಯವರಿಗೆ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಎನ್. ಗೋಪಿನಾಥ್‌ರವರು ಗೌರವ ಸನ್ಮಾನವನ್ನು ನೀಡಿದರು. ಇದೇ ಸಂಧರ್ಬದಲ್ಲಿ ಅಧ್ಯಕ್ಷರು ಮಾತನಾಡಿ ಶ್ರೀ ರಮೇಶ್ ಹೆಗಡೆಯವರು ಮುಂದಿನ ದಿನಗಳಲ್ಲಿ ಕಾಸಿಯಾ ಸಂಘದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸಲಿ ಎಂದು ಆಡಳಿತ ಮಂಡಳಿಯ ಪರವಾಗಿ ಶುಭ ಹಾರೈಸಿದರು.
Chamber Of Commerce Shivamogga ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ. ಗೋಪಿನಾಥ್, ಕಾಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಎಂ. ರಾಜು ನಿರ್ದೇಶಕರುಗಳಾದ ಯು. ಮಧುಸೂದನ ಐತಾಳ್, ಈ ಪರಮೇಶ್ವರ್, ಕೆ.ಎಸ್. ಸುಕುಮಾರ್, ಪ್ರದೀಪ್ ವಿ. ಎಲಿ, ಬಿ. ಮಂಜೇಗೌಡ, ಮರಿಸ್ವಾಮಿ, ಜಗದೀಶ್ ಮಾತನವರ್, ಗಣೇಶ್ ಎಂ. ಅಂಗಡಿ, ಪಿ.ಎಸ್ ಹಾಲಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

MESCOM ಜುಲೈ 10 ರಂದು ಮಂಡ್ಲಿ ವ್ಯಾಪ್ತಿಯ ಸುತ್ತಮುತ್ತ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗದ ನ.ಉ.ವಿ-2ರ ಮಂಡ್ಲಿ ಘ-6ರ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯ ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಅಮೀರ್ ಅಹ್ಮದ್ ವೃತ್ತ, ಕೃಷಿ ಕಚೇರಿ, ಮಾಕಮ್ಮ ಬೀದಿ, ಕೆರೆದುರ್ಗಮ್ಮನ ಕೇರಿ, ಪುಟ್ಟನಂಜಪ್ಪ ಕೇರಿ, ಆಜಾದ್‍ನಗರ, ಕಲಾರ್‍ಪೇಟೆ,

MESCOM ಸಿದ್ದಯ್ಯರಸ್ತೆ, ಇಮಾಮ್‍ಬಾಡಾ, ಮುರಾದ್‍ನಗರ,ಕ್ರೌನ್ ಪ್ಯಾಲೇಸ್ ಶಾದಿ ಮಹಲ್, ತಾಹಾ ಶಾದಿಮಹಲ್, ಮಂಡಕ್ಕಿಭಟ್ಟಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜು. 10 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನರಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Udda Langada College Dinagalu ಮಲೆನಾಡಿನ ಮಳೆ,ಗದ್ದೆ, ಕೊಯ್ಲು,ಅಡಿಕೆ, ಹಬ್ಬ ಹರಿದಿನಗಳ ನೆನಪು ಕಾಡುವ ಕೃತಿ” ಉದ್ದ ಲಂಗದ ಕಾಲೇಜು ದಿನಗಳು”-ಅಶ್ವಿನಿ ಹೊದಲ

0

Udda Langada College Dinagalu ಪ್ರತಿಯೊಬ್ಬರ ಬದುಕಲ್ಲೂ ಬಾಲ್ಯದ ನೆನಪುಗಳ ಆಪ್ತತೆ ನಮ್ಮನ್ನು ಕಾಡುತ್ತದೆ, ಬಾಲ್ಯದ ದಿನಗಳ ಕಳಕಳಿ ಅಂದಿನ ಜೀವನ ಮೌಲ್ಯಗಳಿಂದು ಮರೆಯಾಗುತ್ತಿದೆ. ಕಾಲಘಟ್ಟಕ್ಕೆ ತಕ್ಕಂತೆ ಮನಸ್ಥಿತಿ ಬದಲಾಗುತ್ತಿದೆ ಎಂದು ಬೆಂಗಳೂರಿನ ಸಾಹಿತ್ಯ ಸಂಸ್ಕೃತಿ ಚಿಂತಕಿ ಅಶ್ವಿನಿ ಹೊದಲ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಹೊದಲದ ಅಂಬಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಟಿ.ಜಿ.ಹರೀಶ್ ಒಡ್ಡಿನಬಯಲು ರವರ “ಉದ್ದ ಲಂಗದ ಕಾಲೇಜು ದಿನಗಳು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದರು.

ಈ ಕೃತಿಯಲ್ಲಿ ಎಂಬತ್ತು- ತೊಂಭತ್ತರ ದಶಕದ ಮಲೆನಾಡ ಬದುಕಿನ ಚಿತ್ರಣದ ವಿಶಿಷ್ಠ ಪ್ರಬಂಧಗಳ ಸಂಕಲನವಾಗಿದೆ. ಹಳೆಯ ನೆನಪುಗಳನು ಹೊಸತನದಲ್ಲಿ ಅಕ್ಷರಗಳ ಮೂಲಕ ಚಿತ್ರಿಸಿದ್ದಾರೆ. ನೆನಪುಗಳು ನಮಗೆ ಖುಷಿಕೊಡುತ್ತದೆ,ನೆನಪುಗಳು ಸಂಪನ್ನವಾದರೆ ಸದಾ ಯೋಚಿಸುತ್ತೇವೆ. ಬಾಲ್ಯದ ದಿನಗಳ ಮಲೆನಾಡ ಮಳೆ,ಹಬ್ಬಹರಿದಿನ,ಗದ್ದೆ ಕೊಯ್ಲು,ಅಡಿಕೆ ಕೊಯ್ಲು,ಶಾಲೆಯ ಆಟಗಳು ಮುಂತಾದ ಬದುಕಿನ ಪಾತ್ರಗಳು ಓದುಗರನ್ನು ಕಾಡುವ ಕೃತಿಯಿದು.

ಇಂದಿನ ಮಕ್ಕಳು,ಯುವಪೀಳಿಗೆ ಪುಸ್ತಕ ಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕೃತಿಕಾರ ಟಿ.ಜಿ.ಹರೀಶ್ ಒಡ್ಡಿನಬಯಲು ಮಾತನಾಡಿ, ಕಲೆ,ಸಂಸ್ಕೃತಿಯ ಮರೆವು ಇಂದಿನ ಯುವ ಪೀಳಿಗೆಗೆ ಕಾಡುತಿದೆ,ಇಂದಿನ ಮಕ್ಕಳಿಗೆ ಜೀವನ ಅನುಭವಗಳು ಬೇಡವಾಗಿದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸಂಸ್ಕೃತಿ ಚಿಂತಕ ಸದ್ಯೋಜಾತ ಭಟ್ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರಳಿ , ಬಾಳೆಹೊನ್ನೂರಿನ ಬಿ.ಜಿ.ಎಸ್.ಪ.ಪೂ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ವೈ.ಎ, ಹಾಗೂ ಹೊದಲ ಬಸವರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಎ.ಆರ್.ಶ್ರೀಧರ್ ಅರಳಾಪುರ ವಹಿಸಿದ್ದರು.

Udda Langada College Dinagalu ವೇದಿಕೆಯಲ್ಲಿ ಹಿರಿಯ ರಂಗಕಲಾವಿದ ಟಿ.ಪಿ.ಸೀತಾರಾಮಯ್ಯ, ಟಿ.ಜಿ.ಜಗದೀಶ್ ಉಪಸ್ಥಿತರಿದ್ದರು. ಹೆಚ್.ಆರ್.ಭಾಸ್ಕರ್ ಶೆಟ್ಟಿ ಸ್ವಾಗತಿಸಿ,ವಿಶ್ವನಾಥ್ ಪ್ರಭು ಪ್ರಾಸ್ತಾವಿಸಿ,ಶ್ರೀ ಹರ್ಷ ಅರಳಾಪುರ ವಂದಿಸಿ,ಹೆಚ್.ಜಿ.ಪ್ರಕಾಶ್ ನಿರೂಪಿಸಿದರು.